For Quick Alerts
ALLOW NOTIFICATIONS  
For Daily Alerts

ಗುರಿ ಸಾಧನೆಯ ಛಲ ನಿಮ್ಮಲ್ಲಿದ್ದರೆ-ಯಶಸ್ಸು ಕಟ್ಟಿಟ್ಟ ಬುತ್ತಿ

By Super
|

ಹಲವಾರು ಬಾರಿ ನಮ್ಮ ಹಿರಿಯರು 'ಇವನ್ನೆಲ್ಲಾ ಪ್ರಾಯ ಇರುವಾಗಲೇ ಮುಗಿಸಿಬಿಡಬೇಕಿತ್ತು' ಎಂದು ನಿಟ್ಟುಸಿರುಡುವುದನ್ನು ಕಾಣಬಹುದು. ಏಕೆಂದರೆ ಸುಮಾರು ನಲವತ್ತು ಐವತ್ತು ವರ್ಷ ಹಿಂದೆ ಇದ್ದ ಭಾರತಕ್ಕೂ ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಇಲ್ಲದೇ ಇದ್ದ ಅನುಕೂಲಗಳು, ಸೌಲಭ್ಯಗಳು, ಅವಕಾಶಗಳು ಇಂದು ಸಾವಿರ ಬಿಡಿ, ಲಕ್ಷ ಪಟ್ಟು ಹೆಚ್ಚಿವೆ. ಅಂತೆಯೇ ಇಂದಿನ ಯುವಜನಾಂಗಕ್ಕೆ ತೆಗೆದುಕೊಳ್ಳಬೇಕಾದ ಆಯ್ಕೆಗಳೂ ಲಕ್ಷಾಂತರ ಇವೆ. ಪ್ರತಿ ಕ್ಷಣ ಕ್ಷಣವೂ ಸಂತೋಷವಾಗಿರಲು 15 ಸೂತ್ರಗಳು

ಜೀವನದಲ್ಲಿ ಹಲವು ವಿಷಯಗಳನ್ನು ನಾವು ನಾಳೆಗೆ ಧಾರಾಳವಾಗಿ ಮುಂದೂಡುತ್ತಾ ಬರುತ್ತೇವೆ. ಹೆಚ್ಚಿನ ಪಕ್ಷ ಈ ವಿಷಯವನ್ನು ಮತ್ತೊಮ್ಮೆ ಪರಿಗಣಿಸಲು ಕಾಲ ಕೂಡಿ ಬಂದಾಗ ವಯಸ್ಸು ಅಡ್ಡಿ ಬರುತ್ತದೆ. ಉದಾಹರಣೆಗೆ ಯಾಣ ಎಂಬ ಉತ್ತರ ಕರ್ನಾಟಕದ ಸ್ಥಳವೊಂದಕ್ಕೆ ಭೇಟಿ ನೀಡುವುದು. ಮೈಲಿ ಸೊಕ್ಕಿದ್ದರೆ ಯಾಣ ಒಂದು ಬಾರಿ ನೋಡು ಎಂದು ಕನ್ನಡದ ಗಾದೆಯೇ ಇದೆ. ಆದರೆ ಪ್ರಾಯವಿದ್ದಾಗ ಹೋಗಲಾರದೇ ಅವಕಾಶ ವಂಚಿತರಾದ ನಮ್ಮ ಹಿರಿಯರಿಂದು ಆಗ ಹೇಗಾದರೂ ಒಂದು ಬಾರಿ ಹೋಗಲೇಬೇಕಿತ್ತು ಎಂದು ಇಂದು ಕೈ ಕೈ ಹಿಸುಕಿಕೊಳ್ಳುವುದನ್ನು ಕಾಣಬಹುದು. ತಿ೦ಗಳ ಆಯವ್ಯಯವನ್ನು ನಿರ್ವಹಿಸಲು 5 ಪ್ರಯೋಜನಕಾರಿ ಸಲಹೆಗಳು

ಆದರೆ ಪ್ರಾಯವಿದ್ದಾಗ ಮುಗಿಸಿಬಿಡಬೇಕಾದುದು ಏನನ್ನು? ಹೆಚ್ಚಿನವರು ವೃತ್ತಿ, ಹಣ, ಪ್ರೇಮ ಮೊದಲಾದ ವಿಷಯಗಳನ್ನು ಹೆಸರಿಸಬಹುದು. ಇವೆಲ್ಲವೂ ಸರಿ, ಆದರೆ ಕೇವಲ ಹಣವಿದ್ದರೆ ಎಲ್ಲವನ್ನೂ ಗಳಿಸಿದಂತಾಗಲಿಲ್ಲ. ಜೀವನದಲ್ಲಿ ಒಂದು ಗುರಿ, ಸಾಧನೆ, ಉತ್ತಮ ಸ್ನೇಹಿತರು, ಹೊಸ ವಿಷಯವನ್ನು ಕಲಿಯುವುದು ಮೊದಲಾದ ಎಲ್ಲವೂ ಮುಖ್ಯ. ನಾಳೆ ನೀವೂ ಹಿರಿಯ ವಯಸ್ಸಿಗೆ ದಾಟಿದಾಗ ಪ್ರಾಯದಲ್ಲಿದ್ದಾಗ ಪೂರೈಸಿದ್ದರೆ ಚೆನ್ನಾಗಿತ್ತೆಂದು ಅನ್ನಿಸುವ ಕೆಲವು ಪ್ರಮುಖ ವಿಷಯಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಿ ಜೀವನ ಸುಂದರವಾಗಿಸಿ!

ಸಂತೋಷದಿಂದ ಜೀವನ ನಡೆಸಿ

ಸಂತೋಷದಿಂದ ಜೀವನ ನಡೆಸಿ

ಈ ಜಗತ್ತಿನ ಪ್ರತಿಯೊಬ್ಬರಿಗೂ ತಮ್ಮದೇ ಆದ ಕಷ್ಟಗಳಿವೆ. ನೀಮಗೆ ಯಾವ ಕೆಲಸ ಸಂತೋಷ ನೀಡುತ್ತದೆಯೋ ಆ ಕೆಲಸವನ್ನೇ ವೃತ್ತಿಯಾಗಿ ತೆಗೆದುಕೊಂಡರೆ ನಿಮ್ಮ ಜೀವನ ಸಂತೋಷಕರವಾಗುತ್ತದೆ. ಒಂದು ಸುಭಾಷಿತದಂತೆ ದಿನವಿಡೀ ನೀವು ಯಾವ ಬಗ್ಗೆ ಯೋಚಿಸುತ್ತಿರುತ್ತೀರೋ ಅದೇ ನೀವು! ಆದರೆ ನಿಮಗೆ ಯಾವ ಕೆಲಸ ಇಷ್ಟವಾಗುತ್ತದೆ ಎಂಬುದನ್ನು ಆ ಕೆಲಸ ಮಾಡದೇ ಗೊತ್ತಾಗುವುದಿಲ್ಲವಲ್ಲ? ಇದು ಚಿಕ್ಕ ಪ್ರಾಯದಲ್ಲಿ ಗೊತ್ತಾದಷ್ಟೂ ಉತ್ತಮ. ನಿಮ್ಮಲ್ಲಿ ಹುದುಗಿರುವ ಪ್ರತಿಭೆ ಎಷ್ಟು ಕಡಿಮೆ ವಯಸ್ಸಿಗೆ ಒರೆಹಚ್ಚಲು ಸಾಧ್ಯವೋ ಅಷ್ಟೂ ನೀವು ವೃತ್ತಿರಂಗದಲ್ಲಿ ಮೇಲೇರಲು ಸಾಧ್ಯ. ಹಿಂದಿ ಖಳನಟ ಅಮರೀಷ್ ಪುರಿ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ನಲವತ್ತರಲ್ಲಿ. ಅಲ್ಲಿಯವರೆಗೆ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಅವರಿಗೆ ತಮ್ಮಲ್ಲಿದ್ದ ಖಳ ಕಂಡಿರಲೇ ಇಲ್ಲ!

ಗಾಢಾನುರಕ್ತತೆಯ ವಿಷಯವನ್ನು ಚಿಕ್ಕವಯಸ್ಸಿನಲ್ಲಿಯೇ ಹಿಂಬಾಲಿಸಿ

ಗಾಢಾನುರಕ್ತತೆಯ ವಿಷಯವನ್ನು ಚಿಕ್ಕವಯಸ್ಸಿನಲ್ಲಿಯೇ ಹಿಂಬಾಲಿಸಿ

ಯಾವ ವಿಷಯದಲ್ಲಿ ಗಾಢಾನುರಕ್ತತೆ ಇದೆಯೋ ಚಿಕ್ಕವಯಸ್ಸಿನಲ್ಲಿಯೇ ಪ್ರಾರಂಭಿಸಿದರೆ ಅದನ್ನು ಪಡೆಯುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಅದನ್ನು ಪಡೆದ ಬಳಿಕ ಹೆಚ್ಚಿನದನ್ನು ಸಾಧಿಸಲು, ಜೀವನದಲ್ಲಿ ತೃಪ್ತಿಯನ್ನು ಹೊಂದಲು ಸಾಧ್ಯವಾಗುತ್ತದೆ.

ಸಂತೋಷ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಿರಿ

ಸಂತೋಷ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಿರಿ

ಚಿಕ್ಕವಯಸ್ಸಿನಲ್ಲಿ ಹೆಚ್ಚಿನ ಜವಾಬ್ದಾರಿಗಳಿಲ್ಲದೇ ಇರದಿರುವುದರಿಂದ (ಅಪವಾದಗಳಿರಬಹುದು) ನಿಮಗೆ ಸೂಕ್ತವಾದ ವೃತ್ತಿಯನ್ನು ಆರಿಸಲು ಹೆಚ್ಚಿನ ಸಮಯಾವಕಾಶ ಸಿಗುತ್ತದೆ. ನಿಮಗೆ ದಕ್ಕಿರುವ ವೃತ್ತಿ ನಿಮಗೆ ಸೂಕ್ತವೋ, ಇದರಲ್ಲಿಯೇ ಜೀವನ ಕಳೆಯಲು ಸಾಧ್ಯವೋ, ನಿಮಗೆ ಜೀವನದಲ್ಲಿ ಸಾಧಿಸಬೇಕಾದುದನ್ನು ಸಾಧಿಸಲು ಈ ವೃತ್ತಿ ಅನುಕೂಲಕರವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಅವಕಾಶಗಳಿವೆ. ಯಾವುದಕ್ಕೂ ಮೂವತ್ತಕ್ಕೂ ಮುನ್ನವೇ ಖಚಿತವಾದ ವೃತ್ತಿಯನ್ನು ಆಯ್ದುಕೊಂಡಿದ್ದರೆ ಅದೊಂದು ಅತ್ಯುತ್ತಮವಾದ ತೀರ್ಮಾನವಾಗುತ್ತದೆ.

ನಾಳೆಗಾಗಿ ಹಣ ಉಳಿಸಿ

ನಾಳೆಗಾಗಿ ಹಣ ಉಳಿಸಿ

ಯಾವುದೇ ಆರ್ಥಿಕ ತಜ್ಞರಲ್ಲಿ ಸಲಹೆ ಕೇಳಿದರೂ ಪ್ರತಿಯೊಬ್ಬರೂ ಚಿಕ್ಕವಯಸ್ಸಿನಿಂದಲೇ ಉಳಿತಾಯ ಮಾಡಿ ಎಂಬ ಸೂತ್ರವನ್ನು ನೀಡುತ್ತಾರೆ. ಇಂದಿನ ದಿನಗಳಲ್ಲಿ ಹಣವೇ ಸರ್ವಸ್ವ ಎಂದಿರುವಾಗ ನಿಮ್ಮ ವೃದ್ಧಾಪ್ಯದಲ್ಲಿ ನಿಮ್ಮದೇ ಸ್ವಂತ ಹಣವಿಲ್ಲದಿದ್ದಾಗ ಆಗುವ ತೊಂದರೆಗಳಿಗೆ ನೀವೇ ಪರೋಕ್ಷವಾಗಿ ಕಾರಣರಾಗುತ್ತೀರಿ. ಅದಕ್ಕಾಗಿ ಚಿಕ್ಕವಯಸ್ಸಿನಿಂದಲೇ ವೇತನದ ಒಂದು ಭಾಗವನ್ನು ವೃದ್ದಾಪ್ಯಕ್ಕಾಗಿ ಮೀಸಲಿಡಿ.ಇದಕ್ಕಾಗಿಯೇ ಇರುವ ಹಲವಾರು ಯೋಜನೆಗಳಲ್ಲೊಂದನ್ನು ಆರಿಸಿಕೊಂಡು ನಿಯಮಿತವಾದ ಉಳಿಸುವಿಕೆಗೆ ಬದ್ಧದರಾಗಿ.

ಪ್ರೇಮಕ್ಕಾಗಿ ಸಮಯ ಮೀಸಲಿಡಿ

ಪ್ರೇಮಕ್ಕಾಗಿ ಸಮಯ ಮೀಸಲಿಡಿ

ಜೀವನದಲ್ಲಿ ಬಾಲ್ಯ ಮತ್ತು ತಾರುಣ್ಯ ಮತ್ತೆಂದೂ ಬರದ ಸುಂದರ ದಿನಗಳು. ಬಾಲ್ಯದಲ್ಲಿ ಸ್ನೇಹಿತರ ಒಡನಾಟ ಅತಿಹೆಚ್ಚು ಕಾಡಿದರೆ ತಾರುಣ್ಯದಲ್ಲಿ ಪ್ರೇಮ ಅತಿಹೆಚ್ಚು ಕಾಡುತ್ತದೆ. ನಿಸರ್ಗದ ನಿಯಮಕ್ಕೆ ತಲೆಬಾಗಿ ಜೀವನಸಂಗಾತಿಯೊಂದಿಗೆ ನಿಜವಾದ ಪ್ರೇಮವನ್ನು ಅನುಭವಿಸಿ (ಅಥವಾ ನೀವು ಪ್ರೇಮಿಸಿದವರನ್ನೇ ಜೀವನಸಂಗಾತಿಯಾಗಿಸಿಕೊಳ್ಳಿ). ಒಂದು ವೇಳೆ ಪ್ರಾಯದಲ್ಲಿ ಪ್ರೇಮಕ್ಕೆ ಒಳಗಾಗದೇ ಇದ್ದರೆ ನಡುವಯಸ್ಸು ದಾಟಿದ ಬಳಿಕ ಪ್ರೇಮಕ್ಕೊಳಗಾಗುವುದು ಕಷ್ಟಕರವೂ ಹೌದು, ಸೂಕ್ತ ಸಂಗಾತಿ ಸಿಗುವ ಸಂಭವ ಕಡಿಮೆಯೂ ಹೌದು.

ಜಗತ್ತು ಸುತ್ತಿ ನೋಡಿ

ಜಗತ್ತು ಸುತ್ತಿ ನೋಡಿ

ದೇಶ ಸುತ್ತು, ಕೋಶ ಓದು ಎಂಬ ಗಾದೆಮಾತಿನಂತೆ ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸಿ ಕೆಲವಾದರೂ ಬೇರೆ ದೇಶಗಳಿಗೆ ಭೇಟಿ ನೀಡಿ. ಅದು ನಿಮ್ಮ ಸಾಮರ್ಥ್ಯಕ್ಕೆ ಮೀರಿದುದಾದರೆ ಕನಿಷ್ಠ ಪ್ರಾಯವಿದ್ದಾಗ ಭಾರತದ ಪರ್ಯಟನೆಯನ್ನಾದರೂ ಮಾಡಿ. ಇಡಿಯ ಭಾರತವನ್ನು ಒಮ್ಮೆ ಪರ್ಯಟನೆ ಮಾಡಿದ ಬಳಿಕ ವಿಶ್ವ ಪರ್ಯಟನೆ ಮಾಡುವ ಬಯಕೆ ತನ್ನಿಂತಾನೇ ಕಮರಿಹೋಗುತ್ತದೆ.

ಪುಸ್ತಕಗಳನ್ನು ಓದಿ

ಪುಸ್ತಕಗಳನ್ನು ಓದಿ

ಪುಸ್ತಕಗಳು ಜ್ಞಾನದ ಆಗರವಾಗಿವೆ. ನಿಮ್ಮ ಮನೆಯಲ್ಲಿಯೇ ಅಲಂಕಾರಕ್ಕೆಂದು ಇಟ್ಟಿರುವ ಪುಸ್ತಕಗಳನ್ನು ಚಿಕ್ಕವಯಸ್ಸಿನಲ್ಲಿದ್ದಾಗಲೇ ಓದಿಬಿಡಿ. ಏಕೆಂದರೆ ದಿನಗಳೆಯುತ್ತಿದ್ದಂತೆ ಜೀವನದ ಸತ್ಯಾಸತ್ಯತೆಗಳ ಬಗ್ಗೆ ತಿಳಿಯುತ್ತಾ ಹೋದಂತೆ ಪುಸ್ತಕ ಓದಿ ತಿಳಿದುಕೊಳ್ಳಬೇಕಾದ ವ್ಯವಧಾನ ಕಡಿಮೆಯಾಗುತ್ತಾ ಹೋಗುತ್ತದೆ. ಇನ್ನೊಂದರ್ಥದಲ್ಲಿ ಪುಸ್ತಕದ ಮೂಲಕ ಲಭಿಸುವ ಜ್ಞಾನದ ಬಗ್ಗೆ ಮೊದಲೇ ತಿಳಿದಿದ್ದರೆ ಮುಂದಿನ ವರ್ಷಗಳಲ್ಲಿ ಜೀವನದಲ್ಲಿ ಸಿಗುವ ಜ್ಞಾನ ಇನ್ನಷ್ಟು ಪರಿಪಕ್ವವಾಗುವ ಲಾಭವಿದೆ. ಉದಾಹರಣೆಗೆ ಜೈಲಿನಲ್ಲಿರುವವರೆಲ್ಲರೂ ಕಳ್ಳರೇ ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಜೈಲಿನಲ್ಲಿದ್ದವರ ಬಗ್ಗೆ ಇರುವ ಹಲವಾರು ಪುಸ್ತಕಗಳಲ್ಲಿ ಕೆಲವನ್ನಾದರೂ ಓದಿದ ಬಳಿಕ ಈ ನಂಬಿಕೆ ತಪ್ಪು ಎಂಬ ಜ್ಞಾನೋದಯವಾಗುತ್ತದೆ. ಪ್ಯಾಪಿಲಾನ್ ಎಂಬ ಖ್ಯಾತ ಆಂಗ್ಲ ಪುಸ್ತಕ ಕನ್ನಡಕ್ಕೆ ಅನುವಾದವಾಗಿದೆ. ಈ ಪುಸ್ತಕವನ್ನೇಕೆ ನೀವೀಗ ಓದಬಾರದು?

ಕೆಟ್ಟ ಅಭ್ಯಾಸಗಳನ್ನು ತೊರೆಯಿರಿ

ಕೆಟ್ಟ ಅಭ್ಯಾಸಗಳನ್ನು ತೊರೆಯಿರಿ

ಜಗತ್ತಿನ ಅತ್ಯಂತ ಅಪಾಯಕಾರಿಯಾದ ಪದಗಳು "ಒಮ್ಮೆ ಪ್ರಯತ್ನಿಸು ನಂತರ ಬಿಟ್ಟು ಬಿಡು" ಎಂಬ ಮಾತಿಗೆ ಮರುಳಾಗಿ ಯಾವುದಾದರೂ ಕೆಟ್ಟ ಚಟಕ್ಕೆ ಬಿದ್ದರೆ ಅದನ್ನು ಎಷ್ಟು ಚಿಕ್ಕ ವಯಸ್ಸಿನಲ್ಲಿ ಬಿಡುತ್ತೀರೋ ಅಷ್ಟೂ ಒಳ್ಳೆಯದು. ಏಕೆಂದರೆ ಒಮ್ಮೆ ಚಟ ವ್ಯಸನವಾಗಿ ಪರಿವರ್ತಿತವಾದರೆ ಜೀವಮಾನವಿಡೀ ತೊಲಗುವುದು ಕಷ್ಟ. ಧೂಮಪಾನ, ಮದ್ಯಪಾನ, ಪಾನ್ ಮಸಾಲ, ತಂಬಾಕು ಮೊದಲಾದ ಇನ್ಯಾವುದೇ ಚಟಕ್ಕೆ ಬಲಿಯಾಗಿದ್ದರೆ ತಕ್ಷಣವೇ ವೈದ್ಯರ ಸಲಹೆ ಪಡೆದು ಇದರಿಂದ ಹೊರಬನ್ನಿ. ಇಲ್ಲದಿದ್ದರೆ ಈ ಚಟಗಳ ಗುಣಗಾನ ಮಾಡುತ್ತಾ ಜೀವನವಿಡೀ ಇದಕ್ಕೆ ದಾಸರಾಗಬೇಕಾಗುತ್ತದೆ.

English summary

International Youth Day Special: Things To Do When You Are Young

Though age is just a number, it is a fact that life is going to be short. One day, you may grow old and might not be in a position to do things energetically.There are some things to do when you are young. Build a solid foundation with a good career. Is money everything? No, even love is important. So, what to do when you are young? Read on to know
X
Desktop Bottom Promotion