For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಹಾಸ್ಯ ದಿನ - ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಡಿ!

|

ನಕ್ಕರೆ ಅದುವೇ ಸ್ವರ್ಗ, ನಕ್ಕರೆ ಎಲ್ಲಾ ಕಾಯಿಲೆಗಳು ಮಾಯ. ನಗುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುವ ಮಾತಿದೆ. ಸುಮ್ಮನೆ ನಕ್ಕರೆ ಅದನ್ನು ಸುತ್ತಮುತ್ತಲಿನವರು ಬೇರೆಯೇ ರೀತಿಯಲ್ಲಿ ಪರಿಗಣಿಸಬಹುದು. ಇದಕ್ಕಾಗಿ ನಾವು ಗುಂಪಿನಲ್ಲಿರುವಾಗ ಜೋಕ್ಸ್ (ಹಾಸ್ಯ) ಸಿಡಿಸುವುದು ಸಹಜ. ಇದನ್ನು ಕೇಳಿ ನಕ್ಕರೆ ಜೋಕ್ಸ್ ಹೇಳಿದವನ ಮನಸ್ಸಿಗೂ ಖುಷಿ.

ಆದರೆ ಅಂತಾರಾಷ್ಟ್ರೀಯ ಜೋಕ್ಸ್ ಡೇ (ಅಂತಾರಾಷ್ಟ್ರೀಯ ಹಾಸ್ಯ ದಿನ) ಇದೆ ಎಂದರೆ ಕೆಲವರಿಗೆ ಇದುವೇ ಜೋಕ್ಸ್ ಆಗಬಹುದು. ಆದರೆ ಈ ದಿನ ಹಲವಾರು ವಿಷಯಗಳನ್ನು ಹೇಳುತ್ತದೆ. ಜೋಕ್ಸ್ ದಿನದಂದು ನೀವು ತುಂಬಾ ಹಾಸ್ಯದಿಂದ ವರ್ತಿಸಿ, ಮನಸ್ಸು ಬಿಚ್ಚಿ ನಗಬಹುದು. ಪ್ರತಿಯೊಬ್ಬರು ಏನಾದರೊಂದು ಸಮಸ್ಯೆಯಲ್ಲಿ ಸಿಲುಕಿರುತ್ತಾರೆ. ಆದರೆ ಇಂತಹ ಸಮಸ್ಯೆಗಳಿಂದ ದೂರ ಉಳಿದು ಸಂತೋಷ ಪಡುವುದೇ ಅಂತಾರಾಷ್ಟ್ರೀಯ ಜೋಕ್ಸ್ ದಿನದ ವಿಶೇಷತೆ.

ಜನರು ಈ ದಿನ ನಗೆಚಟಾಕಿಗಳನ್ನು ಹಾರಿಸುತ್ತಾರೆ, ಹಾಸ್ಯಮಯ ಮೆಸೇಜ್ ಮತ್ತು ಮೇಲ್‌ಗಳನ್ನು ಕಳುಹಿಸುತ್ತಾರೆ. ಈ ದಿನ ಜನರು ತಾವು ದ್ವೇಷ ಮಾಡುವ ವ್ಯಕ್ತಿಗಳಿಗೂ ಹತ್ತಿರವಾಗುತ್ತಾರೆ.

International Joke Day - So What's Your Joke For The Day?

ಈ ದಿನ ಯಾವ ದೇಶದಲ್ಲಿ ಹೇಗೆ ಹುಟ್ಟಿತು ಎನ್ನುವ ಬಗ್ಗೆ ಇದುವರೆಗೆ ಸ್ಪಷ್ಟತೆಯಿಲ್ಲ. ಆದರೆ ಪ್ರತಿ ಜುಲೈ1ರಂದು ಅಂತರಾಷ್ಟ್ರೀಯ ಹಾಸ್ಯ ದಿನವೆಂದು ಹೆಸರಿಸಲಾಗಿದೆ. ಅಷ್ಟೇ ಏಕೆ ಇದನ್ನು ರಜಾದಿನದ ಹಬ್ಬದಂತೆ ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತದೆ. ನಗು ಎಲ್ಲಾ ಕಾಯಿಲೆಗಳಿಗೂ ದಿವ್ಯೌಷಧ ಎನ್ನಲಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಜೋಕ್ಸ್ ಡೇಗಾಗಿಯೇ ಕಾಯಬೇಕೆಂದಿಲ್ಲ. 2000ರಲ್ಲಿ ಪ್ರಳಯವಾಗುತ್ತದೆ ಎಂದು ಕೇಳಿ ಪ್ರತಿಯೊಂದು ದಿನವನ್ನು ಸಂತೋಷದಿಂದ ಕಳೆಯಲು ಕಾದಂತೆ. ಜೀವನ ನಶ್ವರ ಎಂದು ತಿಳಿದಿದ್ದರೂ ಜನರು ಯಾಕೆ ನಗಲು ಕಷ್ಟಪಡುತ್ತಾರೆ ಎಂದು ಕೆಲವು ಧಾರ್ಮಿಕ ಗುರುಗಳು ಪ್ರಶ್ನಿಸುತ್ತಾರೆ.

ನಗುವಿನಿಂದ ಹಲವಾರು ರೀತಿಯ ಲಾಭಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶಕ್ತಿ ವರ್ಧಿಸುತ್ತದೆ, ಜೀವನದ ನೋವು ನಿವಾರಿಸುತ್ತದೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ನಗುವುದು ತುಂಬಾ ಸುಲಭ, ಇದಕ್ಕಾಗಿ ಹಣ ಖರ್ಚು ಮಾಡಬೇಕೆಂದಿಲ್ಲ ಮತ್ತು ಶಕ್ತಿಯೂ ವ್ಯಯವಾಗಲ್ಲ.

ನಮಗೆಲ್ಲಾ ಗೊತ್ತಿರುವಂತೆ ಸರ್ದಾರ್ ಜೋಕ್‌ಗಳು ಇಂದು ವಿಶ್ವದೆಲ್ಲೆಡೆ ಪ್ರತಿಯೊಬ್ಬರಿಗೂ ಫೇವರಿಟ್ ಆಗಿದೆ. 2015ರ ಜೋಕ್ಸ್ ಡೇ ಪ್ರಯುಕ್ತ ನಾವು ನಿಮಗೆ ಕೆಲವೊಂದು ಹೊಚ್ಚಹೊಸ ಮತ್ತು ಒಳ್ಳೆಯ ಸರ್ದಾರ್ ಜೋಕ್ಸ್‌ಗಳನ್ನು ನಿಮ್ಮ ಮುಂದಿಡಲಿದ್ದೇವೆ.

ಈ ಸಣ್ಣ ಮತ್ತು ಹಾಸ್ಯದಿಂದ ಕೂಡಿರುವ ಜೋಕ್ಸ್‌ಗಳು ಅವುಗಳನ್ನು ಬರೆದ ದಿನದಿಂದ ಜನಪ್ರಿಯತೆ ಉತ್ತುಂಗಕ್ಕೇರಿದೆ ಮತ್ತು ಈ ಜೋಕ್ಸ್‌ಗಳು ವಾರವಿಡೀ ನಿಮ್ಮನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಬಹುದು. 2015ರ ಅಂತಾರಾಷ್ಟ್ರೀಯ ಹಾಸ್ಯ ದಿನದ ಪ್ರಯುಕ್ತ ಬೋಲ್ಡ್ ಸ್ಕೈ ನಿಮ್ಮೊಂದಿಗೆ ಕೆಲವೊಂದು ಜೋಕ್ಸ್‌ಗಳನ್ನು ಹಂಚಿಕೊಳ್ಳುತ್ತಿದೆ. ನಗು ಒಳ್ಳೆಯ ಔಷಧಿ, ಇದನ್ನು ಓದುತ್ತಿರುವಂತೆ ನೀವು ನಕ್ಕುಬಿಡಿ.

ಜೋಕ್ಸ್1: ಗಾರ್ಡನ್ ನಲ್ಲಿ ಸರ್ದಾರ್
ಸರ್ದಾರ್ ಕೆಲಸದವನಿಗೆ: ಹೋಗು, ಗಿಡಗಳಿಗೆ ನೀರು ಹಾಕು
ಕೆಲಸದವ: ಮಳೆ ಬರುತ್ತಿದೆ.
ಸರ್ದಾರ್: ಮಳೆ ಬಂದರೆ ಏನಾಯಿತು? ಕೊಡೆ ಹಿಡಿದುಕೊಂಡು ಹೋಗು.

ಸರ್ದಾರ್ ಜಾಣ್ಮೆ ಪ್ರದರ್ಶಿಸುತ್ತಾ...
ಗೊಂದಲಕ್ಕೊಳಗಾದ ವ್ಯಕ್ತಿ: ಸರ್ದಾಜೀ ಅವರೇ, ಮನಮೋಹನ್ ಸಿಂಗ್ ಅವರು ದಿನಾಲೂ ಸಂಜೆ ಮಾತ್ರ ಯಾಕೆ ವಾಕಿಂಗ್‌ಗೆ ಹೋಗುತ್ತಾರೆ. ಬೆಳಿಗ್ಗೆ ಯಾಕೆ ಹೋಗಲ್ಲ?
ಸರ್ದಾರ್ ಆತ್ಮವಿಶ್ವಾಸದಿಂದ: ಮನಮೋಹನ್ ಪಿಎಂ.ಎಎಂ ಅಲ್ಲ!

ಶಾಲೆಯಲ್ಲಿ ಸರ್ದಾರ್ ನ ಮಗ
ನಿನಗೊಂದು ಪ್ರಶ್ನೆ: ಶಾಲೆಯಲ್ಲಿ ಒಬ್ಬ ಸರ್ದಾರ್‌ನನ್ನು ಹೇಗೆ ಪತ್ತೆ ಹಚ್ಚುವುದು?
ಉತ್ತರ: ಕರಿಹಲಗೆಯಲ್ಲಿ ಟೀಚರ್ ಬರೆದಿರುವುದನ್ನು ಉಜ್ಜುತ್ತಿರುವಾಗ ತನ್ನ ನೋಟ್ ಬುಕ್‌ನ್ನು ಉಜ್ಜುವವನೇ ಸರ್ದಾರ್!

ಸರ್ದಾರ್‌ನ ಕೆಲಸಕ್ಕೆ ಸಂದರ್ಶನ
ಸರ್ದಾರ್‌ಗೆ ಸಂದರ್ಶನ: ಎಲೆಕ್ಟ್ರಿಕ್ ಮೋಟಾರ್ ಹೇಗೆ ಓಡುತ್ತದೆ?
ಸರ್ದಾರ್: ಡುರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್.....
ಸಂದರ್ಶಕ ಕೋಪದಲ್ಲಿ: ನಿಲ್ಲಿಸಿ ಅದನ್ನು
ಸರ್ದಾರ್: ಡುರ್ರ್ ರ್ರ್ ರ್ರ್ ಡುಪ್ ಡುಪ್ ಡುಪ್...

English summary

International Joke Day - So What's Your Joke For The Day?

International Joke Day may look a joke to many but the day has a lot of things to say. Joke day can be a good opportunity to act funny and laugh your heart out. One may be in a soup of problems but taking a day's off from these unwanted stuffs and making merry is what the “International Joke Day" is all about.
Story first published: Tuesday, June 30, 2015, 19:40 [IST]
X
Desktop Bottom Promotion