For Quick Alerts
ALLOW NOTIFICATIONS  
For Daily Alerts

ನಮ್ಮ ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೇ ಮಾದರಿ

By Manu
|

ಭಾರತ ಎಂದ ಕೂಡಲೇ ವಿದೇಶೀಯರ ಮನದಲ್ಲಿ ಮೂಡುವುದು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ಬಣ್ಣಬಣ್ಣದ ಹಬ್ಬಗಳು, ಮನಸೆಳೆಯುವ ಮೆರವಣಿಗೆ ಇತ್ಯಾದಿ. ಪ್ರತಿ ಕಿಲೋಮೀಟರಿಗೆ ಬದಲಾಗುವ ಭಾಷೆ ಮತ್ತು ವೈವಿಧ್ಯತೆ ಅವರನ್ನು ಬೆಚ್ಚಬೆರಗಾಗಿಸುತ್ತವೆ. ಸಾವಿರಾರು ವರ್ಷಗಳಿಂದ ಭಾರತದಾದ್ಯಂತ ಸಾವಿರಾರು ಸಂಸ್ಕೃತಿ, ಲಿಪಿ ಇರುವ ಭಾಷೆ, ಲಿಪಿ ಇಲ್ಲದ ಭಾಷೆ ಜಾತಿ, ಉಪಜಾತಿಗಳ ಸಮನ್ವಯದಲ್ಲಿ ಜನರು ಬಾಳ್ವೆ ನಡೆಸುತ್ತಾ ಬಂದಿದ್ದಾರೆ.

ಇಷ್ಟೊಂದು ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವದ ಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಅದರಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪಟ್ಟ ಯಾರಿಗೂ ಸಮವಲ್ಲ. ಇಂದು ಹಲವು ಕುಂದು ಕೊರತೆಗಳ ನಡುವೆಯೂ ಆರ್ಥಿಕ ಸ್ಥಾನ ಉತ್ತಮ ಸ್ಥಾನದಲ್ಲಿಯೇ ಇದೆ. ವಿಶ್ವದ ಅತಿ ದೊಡ್ಡ ರೈಲು ಜಾಲ ಮತ್ತು ವಿಶ್ವದಲ್ಲಿಯೇ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಎಂಬ ಹೆಗ್ಗಳಿಗೆ ಭಾರತೀಯ ರೈಲ್ವೇಗಿದೆ.

ಆಹಾರ ಪದ್ಧತಿ, ಉಳಿಸಿಕೊಂಡು ಬಂದಿರುವ ಸಂಪ್ರದಾಯಗಳು, ಹಿರಿಯರಿಗೆ ನೀಡುವ ಆದರ ಗೌರವ, ವಿದೇಶಗಳಲ್ಲಿರುವ ಭಾರತೀಯರು ತಮ್ಮ ಜಾಣ್ಮೆಯಿಂದ ಪಡೆದ ಹುದ್ದೆ ಮತ್ತು ತೋರಿದ ಫಲಗಳು ಮೊದಲಾದವು ವಿದೇಶೀಯರನ್ನು ಅಪಾರವಾಗಿ ಭಾರತದತ್ತ ಆಕರ್ಷಿಸುತ್ತಿದೆ. ಆದರೆ ಈ ಸಂಪ್ರದಾಯ ಆಚಾರ ವಿಚಾರಗಳ ನಡುವೆಯೇ ಕೆಲವು ಅಚ್ಚರಿಯ ಸಂಗತಿಗಳೂ ಇವೆ. ಅದರಲ್ಲಿ ಭಾರತೀಯ ಸಂಸ್ಕೃತಿಯ ಕೆಲವು ವಿಧಾನಗಳು ವಿದೇಶೀಯರನ್ನು ಅಚ್ಚರಿಯ ಕೂಪಕ್ಕೆ ತಳ್ಳುತ್ತವೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ ಮುಂದೆ ಓದಿ...

ನಮಸ್ತೆ ಅಥವಾ ನಮಸ್ಕಾರದ

ನಮಸ್ತೆ ಅಥವಾ ನಮಸ್ಕಾರದ

ಭಾರತೀಯರು ತಮ್ಮ ಎರಡೂ ಕೈಗಳನ್ನು ಎದೆಮಟ್ಟದಲ್ಲಿ ಜೋಡಿಸಿ ಮುಗಿದು ನೀಡುವ ನಮಸ್ತೆ ಅಥವಾ ನಮಸ್ಕಾರದ ಮೂಲಕ ಒಬ್ಬರಿಗೊಬ್ಬರು ಶುಭಾಶಯ ಕೋರುತ್ತಾರೆ.

ಅತಿಥಿ ದೇವೋಭವ

ಅತಿಥಿ ದೇವೋಭವ

ಅತಿಥಿ ದೇವೋಭವ ಎಂಬ ಉಕ್ತಿಯನ್ನು ಬಲವಾಗಿ ನಂಬುವ ಭಾರತೀಯರು ಅತಿಥಿಗಳನ್ನು ದೇವರಂತೆ ಕಾಣುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಉಪಚಾರ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನು ನೀಡುವ ಮೂಲಕ ನೀಡುವ ಸೇವೆ ವಿಶ್ವದಲ್ಲಿ ಇನ್ನೊಂದೆಡೆ ಇರಲಾರದು.

ಹಿರಿಯರ ಆಶೀರ್ವಾದ

ಹಿರಿಯರ ಆಶೀರ್ವಾದ

ಹಿರಿಯರ ಆಶೀರ್ವಾದ ದೇವರ ವರಕ್ಕೆ ಸಮಾನ. ಯಾವುದೇ ಶುಭಕಾರ್ಯ ಪ್ರಾರಂಭಗೊಳ್ಳುವ ಮೊದಲು ದೇವರ ಬಳಿಕ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಹಿರಿಯರು ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಮನೆಯ ಎಲ್ಲಾ ಸದಸ್ಯರು ಅವರನ್ನು ಗೌರವಿಸುತ್ತಾರೆ.

ಪರರನ್ನೂ ಗೌರವಿಸುವ ಗುಣ

ಪರರನ್ನೂ ಗೌರವಿಸುವ ಗುಣ

ಪರರನ್ನೂ ತನ್ನಂತೆಯೇ ಗೌರವಿಸು ಎಂಬುದು ಪ್ರತಿ ಭಾರತೀಯನಿಗೆ ಹುಟ್ಟಿನಿಂದಲೇ ಹಿರಿಯರು ಕಲಿಸಿಕೊಟ್ಟಿರುವ ಸಂಸ್ಕಾರವಾಗಿದೆ. ಅಕ್ಕ ಪಕ್ಕದ ಎಲ್ಲರನ್ನೂ ಅವರ ಜಾತಿ, ಮತ, ಲಿಂಗಬೇಧವಿಲ್ಲದೇ ಸಮಾನವಾಗಿ ಗೌರವಿಸುವುದು ಎಲ್ಲರಿಗೆ ಹುಟ್ಟಿನಿಂದ ಬಂದ ಗುಣವಾಗಿದೆ.

ಪರರಿಗೆ ಸಹಾಯಮಾಡುವ ಗುಣ

ಪರರಿಗೆ ಸಹಾಯಮಾಡುವ ಗುಣ

ಮಕ್ಕಳಿದ್ದಾಗಿನಿಂದಲೇ ಪರರಿಗೆ ಸಹಾಯಮಾಡುವ ಪರಿಯನ್ನು ಕಲಿಸಿಕೊಡಲಾಗುತ್ತದೆ. ತಮ್ಮ ಸುತ್ತ ಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯವಿರಿಸಿಕೊಳ್ಳಲು, ಸುಖದಲ್ಲಿ ಭಾಗಿಯಾಗಿ ದುಃಖವನ್ನು ಹಂಚಿಕೊಂಡು ಸೌಹಾರ್ದಯುತ ಬಾಳ್ವೆ ಬಾಳಲು ಕಲಿಸಲಾಗುತ್ತದೆ.

ಹಬ್ಬದ ರಜೆ

ಹಬ್ಬದ ರಜೆ

ಭಾರತದಲ್ಲಿ ಎಲ್ಲಾ ಪ್ರಮುಖ ಧರ್ಮಗಳ ಪ್ರಮುಖ ಹಬ್ಬಗಳು ರಜಾದಿನವಾಗಿದ್ದು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ದೀಪಾವಳಿ, ಗಣೇಶ ಚತುರ್ಥಿ, ಯುಗಾದಿ, ಪೊಂಗಲ್, ಓಣಂ, ವಿಜಯದಶಮಿ, ದುರ್ಗಾ ಪೂಜೆ, ಈದ್ ಉಲ್ ಫಿತ್ರ್, ಬಕ್ರೀದ್, ಕ್ರಿಸ್ಮಸ್, ಬುದ್ಧ ಜಯಂತಿ ಮತ್ತು ಬೈಸಾಖಿ ಹಬ್ಬಗಳಿಗೆ ರಜೆ ಸಾರಲಾಗುತ್ತದೆ. ಅಲ್ಲದೇ ಮೂರು ರಾಷ್ಟ್ರೀಯ ಹಬ್ಬಗಳಿವೆ. ಸ್ವತಂತ್ರ ದಿನಾಚರಣೆ, ಗಾಂಧಿ ಜಯಂತಿ ಮತ್ತು ಗಣತಂತ್ರ ದಿನಾಚರಣೆ.

ಹನ್ನೊಂದು ಪ್ರಮುಖ ಜಾತಿ

ಹನ್ನೊಂದು ಪ್ರಮುಖ ಜಾತಿ

ಭಾರತದಲ್ಲಿ ಒಟ್ಟು ಹನ್ನೊಂದು ಪ್ರಮುಖ ಜಾತಿಗಳಿವೆ. ಅದರಲ್ಲಿ ಹಿಂದೂ, ಬುದ್ಧ, ಜೈನ ಮತ್ತು ಸಿಖ್ಖ್ ಸಂಸ್ಕೃತಿಗಳು ಭಾರತದಲ್ಲಿಯೇ ಹುಟ್ಟಿದ್ದರೂ ಈ ಸಹಸ್ರಮಾನದ ಆದಿಯಲ್ಲಿ ಜ಼ೋರೋಆಸ್ಟ್ರಿಯನ್, ಜುದೈ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳೂ ಭಾರತಕ್ಕೆ ಆಗಮಿಸಿದವು.

ಅಡುಗೆಗಳಲ್ಲಿ ಮಸಾಲೆ ಪದಾರ್ಥ

ಅಡುಗೆಗಳಲ್ಲಿ ಮಸಾಲೆ ಪದಾರ್ಥ

ಭಾರತೀಯ ಅಡುಗೆಗಳಲ್ಲಿ ಮಸಾಲೆ ವಸ್ತುಗಳು ಅನಿವಾರ್ಯವಾಗಿವೆ. ಈ ಮಸಾಲೆಗಳೇ ಬ್ರಿಟಿಷರನ್ನು ಭಾರತಕ್ಕೆ ಸೆಳೆಯಲು ಪ್ರಮುಖ ಕಾರಣವಾಗಿವೆ. ಭಾರತೀಯ ಅಡುಗೆಗಳು ಶಾಕಾಹಾರಿಯಾಗಿದ್ದರೂ ಮಾಂಸಾಹಾರವೂ ಸಾಮಾನ್ಯವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಡುಗೆಗಳಲ್ಲಿ ಮಸಾಲೆ ಪದಾರ್ಥ

ಅಡುಗೆಗಳಲ್ಲಿ ಮಸಾಲೆ ಪದಾರ್ಥ

ಕೋಳಿ, ಕುರಿ, ಮೀನು ಮತ್ತು ಇತರ ಮಾಂಸಗಳನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇವಿಸುತ್ತಾರೆ. ಕೆಲವು ಪಂಗಡದ ಜನರು ಅಪ್ಪಟ ಸಸ್ಯಾಹಾರಿಗಳಾಗಿದ್ದಾರೆ.

ಸಾಂಪ್ರಾದಾಯಿಕ ಉಡುಗೆ

ಸಾಂಪ್ರಾದಾಯಿಕ ಉಡುಗೆ

ಭಾರತದ ಸಾಂಪ್ರಾದಾಯಿಕ ಉಡುಗೆಗಳಲ್ಲಿ ಪ್ರಮುಖವಾಗಿ ಸೀರೆ, ಘಾಘ್ರಾ ಚೋಲಿ, ಸಲ್ವಾರ್ ಕಮೀಜ್, ದಾವಣಿ, ಧೋತಿ, ಪೈಜಾಮಾ ಮತ್ತು ಕುರ್ತಾ ಪ್ರಮುಖವಾಗಿವೆ. ಬ್ರಿಟಿಷರ ಆಗಮನದ ಬಳಿಕ ಉಡುಗೆಗಳಲ್ಲಿ ಪ್ರಮುಖ ಬದಲಾವಣೆ ಕಂಡಿತು. ಪರಿಣಾಮವಾಗಿ ಇಂದು ಪಾಶ್ಚಾತ್ಯ ಮತ್ತು ಭಾರತೀಯ ಶೈಲಿಯ ಮಿಶ್ರಣದ ಉಡುಗೆ ಯುವಜನತೆಯ ಅಚ್ಚುಮೆಚ್ಚಿನದ್ದಾಗಿದೆ.

ಸಾಂಪ್ರಾದಾಯಿಕ ವಾದ್ಯಗಳು

ಸಾಂಪ್ರಾದಾಯಿಕ ವಾದ್ಯಗಳು

ಭಾರತೀಯ ಸಂಗೀತದಲ್ಲಿ ಸ್ವರಗಳ ಜೊತೆಗೇ ಸಾಂಪ್ರಾದಾಯಿಕ ವಾದ್ಯಗಳನ್ನೂ ಬಳಸಲಾಗುತ್ತದೆ. ಎಷ್ಟೋ ಪಂಗಡಗಳಲ್ಲಿ ಹಾಡಿನ ಜೊತೆಗೆ ನರ್ತನವೂ ಸಂಪ್ರದಾಯದ ಒಂದು ಭಾಗವಾಗಿದೆ. ಇಂದು ಪಾಶ್ಚಾತ್ಯ ಸಂಗೀತವಾದ ರಾಕ್, ಪಾಪ್ ಸಹಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಭಾರತೀಯ ವಾಸ್ತುಶಿಲ್ಪ

ಭಾರತೀಯ ವಾಸ್ತುಶಿಲ್ಪ

ಭಾರತೀಯ ವಾಸ್ತುಶಿಲ್ಪವೂ ವಿಶ್ವದ ಅಗ್ರಗಣ್ಯ ವಾಸ್ತುಶಿಲ್ಪಗಳಲ್ಲಿ ಪರಿಗಣಿಸಲ್ಪಡುತ್ತದೆ. ತಾಜ್ ಮಹಲ್, ಕುತುಬ್ ಮಿನಾರ್, ಫತೆಹಪುರ್ ಸಿಕ್ರಿ, ಕೆಂಪು ಕೋಟೆ ಮೊದಲಾದವು ಭಾರತೀಯ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿವೆ. ಅದರಲ್ಲೂ ಮುಂಬೈಯ ನಾರಿಮನ್ ಪಾಯಿಂಟ್‌‌ನಲ್ಲಿರುವ ಅದ್ಭುತ ವಾಸ್ತುಶಿಲ್ಪದ ಕಟ್ಟಡಗಳು ಮನಸೆಳೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಭಾರತೀಯ ವಾಸ್ತುಶಿಲ್ಪ

ಭಾರತೀಯ ವಾಸ್ತುಶಿಲ್ಪ

ದಕ್ಷಿಣ ಭಾರತದಲ್ಲಂತೂ ಸಾವಿರಾರು ಸುಂದರ ಮಂದಿರಗಳಿವೆ. ಚನ್ನಕೇಶ್ವರ, ಹೊಯ್ಸಳೇಶ್ವರ, ಕೇಶವ, ಬೃಹದೀಶ್ವರ, ಕೋಣಾರ್ಕ್‌ನ ಸೂರ್ಯ ದೇವಸ್ಥಾನ, ರಂಗನಾಥಸ್ವಾಮಿ ದೇವಾಲಯಗಳು ಹಾಗೂ ಬುದ್ಧ ಸ್ತೂಪ ಪ್ರಮುಖವಾಗಿವೆ.

ಚಲನಚಿತ್ರಗಳಲ್ಲಿ ಅಗ್ರಸ್ಥಾನ

ಚಲನಚಿತ್ರಗಳಲ್ಲಿ ಅಗ್ರಸ್ಥಾನ

ವಿವಿಧ ಭಾಷೆಗಳ ಎಲ್ಲಾ ಚಲನಚಿತ್ರಗಳನ್ನು ಪರಿಗಣಿಸಿದರೆ ವಿಶ್ವದಲ್ಲಿ ಅತಿ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಭಾರತ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಹಿಂದಿ ಚಿತ್ರಗಳ ಬಾಲಿವುಡ್ ಮುಖ್ಯ ಸ್ಥಾನದಲ್ಲಿದ್ದು ಇತರ ಭಾಷೆಗಳಾದ ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು, ಭೋಜ್ಪುರಿ, ಪಂಜಾಬಿ ಮೊದಲಾದ ಭಾಷೆಗಳ ಚಲನಚಿತ್ರಗಳೂ ಹಿಂದಿ ಚಿತ್ರಗಳಿಗೆ ಪೈಪೋಟಿ ನೀಡುತ್ತವೆ.


English summary

interesting facts about indian culture in Kannada

A land of traditional rituals, fascinating festivals and mesmerizing ceremonies, India flaunts a rich and diverse culture to the world. In fact, variety is the hallmark of Indian culture. The Indian culture is the combination of diverse sub-cultures, spread across the country and traditions that are several millennia old.
X
Desktop Bottom Promotion