For Quick Alerts
ALLOW NOTIFICATIONS  
For Daily Alerts

ಆನ್‌ಲೈನ್ ಶಾಪಿಂಗ್: ಮೈಮರೆತರೆ ಪಂಗನಾಮ ಗ್ಯಾರಂಟಿ!

By manu
|

ಆನ್‌ಲೈನ್ ಶಾಪಿಂಗ್ ನಮ್ಮ ಜೀವನದಲ್ಲಿ ಒಂದು ಪ್ರಮುಖ ಟ್ರೆಂಡ್ ಆಗಿ ಈಗ ಗುರುತಿಸಲ್ಪಟ್ಟಿದೆ. ಅದರಲ್ಲೂ ಮಹಿಳೆಯರು ವಿಶೇಷವಾಗಿ ಶಾಪಿಂಗ್ ಇಲ್ಲದೆ ಇರಲಾರರು. ಆನ್‌ಲೈನ್ ಶಾಪಿಂಗ್‌ನ ಪರಿಚಯದ ಕಾರಣವಾಗಿ, ಈಗ ಶಾಪಿಂಗ್ ಎನ್ನುವುದು ಈ ವೇಗದಿಂದ ಕೂಡಿದ ಪ್ರಪಂಚದಲ್ಲಿ, ಅತ್ಯಂತ ಚೇತೋಹಾರಿ ಮತ್ತು ಆನಂದಕರ ಪ್ರಕ್ರಿಯೆಯಾಗಿ ಗುರುತಿಸಲ್ಪಟ್ಟಿದೆ. ಈ ಶಾಪಿಂಗ್‌ನಿಂದ ಸಹ ಅನಾನುಕೂಲಗಳು ತಪ್ಪಿದ್ದಲ್ಲ.

ಇವುಗಳನ್ನು ಕೊಳ್ಳುವ ಮುನ್ನ ಕೆಲವೊಂದು ನಿರ್ದಿಷ್ಟ ವಿಚಾರಗಳನ್ನು ಗಮನಿಸುವುದು ಒಳ್ಳೆಯದು. ಯಾವ ಬ್ರ್ಯಾಂಡ್, ಅದರ ಬೆಲೆ, ಕೊಡುಗೆಗಳು ಮತ್ತು ಬಗೆಗಳನ್ನು ಇತ್ಯಾದಿಗಳನ್ನು ಗಮನಿಸಿ. ಶಾಪಿಂಗ್ ಮಾಡುವುದು ಚಟವಿದ್ದಂತೆ, ಇದರಲ್ಲಿ ಹೆಚ್ಚು ಸಮಯ ಬ್ರೌಸ್ ಮಾಡುವುದರಿಂದ ನಿಮ್ಮ ಸಮಯ ಮತ್ತು ಹಣ ಎರಡೂ ಹಾಳಾಗುತ್ತದೆ.

ಅದರಲ್ಲೂ ಅಪ್ಲಿಕೇಶನ್‌ಗಳು ಬಂದ ಮೇಲೆ, ಶಾಪಿಂಗ್ ಕುರಿತಾದ ಸುದ್ದಿಗಳೇ ನಿಮ್ಮ ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತವೆ. ಈ ಆನ್‌ಲೈನ್ ಶಾಪಿಂಗ್‌ನ ಕೊಡುಗೆಗಳು, ವಿನಾಯಿತಿಗಳು ನಿಮ್ಮನ್ನು ದಿಕ್ಕು ತಪ್ಪಿಸುತ್ತವೆ ಎಂಬುದನ್ನು ನೆನಪಿಡಿ. ಬನ್ನಿ ನಿಮ್ಮ ಕಣ್ಣಿಗೆ ಮಣ್ಣೆರೆಚುವ ಈ ಶಾಪಿಂಗ್ ಮಾಡುವ ಮುನ್ನ, ನಾವು ನೀಡುವ ಗೋಲ್ಡನ್ ರೂಲ್‌ಗಳನ್ನು ಒಮ್ಮೆ ತಿಳಿದುಕೊಳ್ಳಿ. ಆನ್‍ಲೈನ್‍ನಲ್ಲಿ ನೀವು ಖರೀದಿಸಬಹುದಾದ 20 ವಸ್ತುಗಳು

Golden Rules For Online Shopping

ಆಕರ್ಷಿಸುವ ಉತ್ಪನ್ನಗಳು
ಒಂದು ವೇಳೆ ನೀವು ಒಳ ಉಡುಪುಗಳನ್ನು ಕೊಳ್ಳುವಂತಿದ್ದರೆ, ಒಳ ಉಡುಪುಗಳನ್ನು ಮಾತ್ರ ಮಾರುವ ಆನ್‍ಲೈನ್ ಮಳಿಗೆಗೆ ಭೇಟಿ ನೀಡಿ. ಚಿನ್ನ ಮತ್ತು ಇನ್ನಿತರ ದುಬಾರಿ ಆಭರಣಗಳನ್ನು ಆನ್‌ಲೈನ್‍ನಲ್ಲಿ ಖರೀದಿಸುವುದು ಒಳ್ಳೆಯದಲ್ಲ.

ಉತ್ಪನ್ನಗಳ ಕೆಳಗೆ ಇರುವ ಗ್ರಾಹಕರ ಅಭಿಪ್ರಾಯಗಳನ್ನು ಓದಿ
ಖರೀದಿಸುವ ಮುನ್ನ ಉತ್ಪನ್ನಗಳ ಕೆಳಗೆ ಇರುವ ಗ್ರಾಹಕರ ಅಭಿಪ್ರಾಯಗಳನ್ನು (ರಿವ್ಯೂ) ಓದಿ. ಬೈ ಅಥವಾ ಖರೀದಿಸು ಬಟನ್ ಒತ್ತವ ಮುನ್ನ ಇದನ್ನು ತಪ್ಪದೆ ಓದಿ. ಇದನ್ನು ಈಗಾಗಲೇ ಖರೀದಿಸಿ ಸಂತೋಷ ಪಟ್ಟಿರುವವರು ಮತ್ತು ಮೋಸ ಹೋದವರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿರುತ್ತಾರೆ. ಕನಿಷ್ಠ 12 ಮಂದಿಯ ಅಭಿಪ್ರಾಯವನ್ನು ಓದಿ, ನಂತರ ಖರೀದಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಿ.

ಬೆಲೆಗಳನ್ನು ಹೋಲಿಕೆ ಮಾಡಿ
ರಿಯಾಯಿತಿಗಳು ಮತ್ತು ಕೊಡುಗೆಗಳು ಕೊಳ್ಳುವವರ ಕಣ್ಣನ್ನು ಕಟ್ಟಿ ಬಿಡುತ್ತದೆ. ಒಂದು ವೇಳೆ ನಿಮಗೆ ಒಂದು ಒಳ್ಳೆಯ ವಸ್ತು ಕಂಡು ಬಂದಲ್ಲಿ, ಬೆಲೆಯನ್ನು ನೋಡದೆ, ಅದನ್ನು ವಿಶ್ವಸನೀಯವಾದ ಆನ್‌ಲೈನ್ ಸೈಟ್‌ನಲ್ಲಿ ಕೊಂಡುಕೊಳ್ಳಿ. ಅದರ ಬೆಲೆಯನ್ನು ಶೋರೂಮಿನ ಬೆಲೆಯ ಜೊತೆಗೆ ಹೋಲಿಕೆ ಮಾಡಿ. ಇದು ಆನ್‍ಲೈನ್ ಶಾಪಿಂಗ್ ಮಾಡುವವರಿಗೆ ಒಂದು ಗೋಲ್ಡನ್ ರೂಲ್ ಆಗಿರುತ್ತದೆ.

ನಂಬಿಕೆಗೆ ಅರ್ಹವಾಗಿರುವ ಸೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ
ಇದು ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ಒಂದು ಒಳ್ಳೆಯ ಸಲಹೆಯಾಗಿರುತ್ತದೆ. ಕಂಡ ಕಂಡ ಸೈಟ್‌ಗಳಲ್ಲಿ ಕೊಳ್ಳಲು ಹೋಗದೆ, ನಂಬಿಕೆ ಇರುವ ಮತ್ತು ವಿಶ್ವಸನೀಯವಾದ ಸೈಟ್‌ಗಳಲ್ಲಿ ಮಾತ್ರ ವಸ್ತುಗಳನ್ನು ಕೊಳ್ಳಿ. ಏಕೆಂದರೆ ಈ ಸೈಟ್‌ಗಳಲ್ಲಿ ನಿಮ್ಮ ಬ್ಯಾಂಕಿನ ಮತ್ತು ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತೀರಿ.

English summary

Golden Rules For Online Shopping

Online shopping has become a major trend in our life. Women, especially cannot do a day without shopping. With the introduction of online shopping and its fast pace trend in our world, there are certain golden rules to follow before you add things into your cart.
Story first published: Tuesday, June 2, 2015, 19:54 [IST]
X
Desktop Bottom Promotion