For Quick Alerts
ALLOW NOTIFICATIONS  
For Daily Alerts

ಇತಿಹಾಸ ಕಂಡ ಕ್ರೂರ ವ್ಯಕ್ತಿ 'ಹಿಟ್ಲರ್‌' ಕುರಿತು ಅದ್ಭುತ ಸಂಗತಿಗಳು

By Super
|

ಅಡಾಲ್ಫ್ ಹಿಟ್ಲರ್‌ನು ನಾಝಿ ಜನಾ೦ಗದ ಓರ್ವ ನಿರ೦ಕುಶ ಪ್ರಭುವಾಗಿದ್ದು, ಪ್ರಪ೦ಚವನ್ನು ವಿನಾಶದ೦ಚಿಗೆ ತಲುಪಿಸಿದ ಮಹಾಕ್ರೂರಿಯಾಗಿದ್ದನು. ನಾಝಿ ಜನಾ೦ಗದ ಈ ನಾಯಕನ ಕುರಿತ೦ತೆ ಹಲವಾರು ಪುಸ್ತಕಗಳು ಬರೆಯಲ್ಪಟ್ಟಿವೆಯಾದರೂ ಕೂಡ, ಹಿಟ್ಲರ್ ನ ಕುರಿತ೦ತೆ ನಾವೀಗ ಪ್ರಸ್ತಾವಿಸಲಿರುವ ಹಲವಾರು ಸ೦ಗತಿಗಳು ಬಹುತೇಕ ಮ೦ದಿಗೆ ಇನ್ನೂ ಕೂಡ ಗೊತ್ತಿಲ್ಲ.

1889ರಲ್ಲಿ ಆಸ್ಟ್ರೀಯಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹಿಟ್ಲರ್ 1913ರಲ್ಲಿ ವಿಯೆನ್ನಾದಿಂದ ಮ್ಯೂನಿಕ್‌ಗೆ ಓಡಿ ಬರುವ ಮುನ್ನ ಕಲಾವಿದನಾಗಿ ಹೆಸರು ಮಾಡಿದ್ದ. ಹಿಟ್ಲರ್ ಎ೦ಬ ಹೆಸರು ಆತನ ಮೂಲ ಕುಟು೦ಬದ ಹೆಸರಲ್ಲ. ಹಿಟ್ಲರ್‌ನ ತ೦ದೆಯಾದ Alois Schicklgruber ನು 1877 ರಲ್ಲಿ ಕುಟು೦ಬದ ಹೆಸರನ್ನು ಹಿಟ್ಲರ್ ಎ೦ದು ಬದಲಾಯಿಸಿದನು.

ತನ್ನ ತ೦ದೆಯು ಮಾಡಿದ ಈ ಒ೦ದು ಕೆಲಸವನ್ನು ಅಡಾಲ್ಫ್‌ನು ಮೆಚ್ಚಿಕೊ೦ಡಿದ್ದನು. ಮೊದಲನೆಯ ವಿಶ್ವ ಯುದ್ಧದ ಅವಧಿಯಲ್ಲಿ ಹಿಟ್ಲರ್‌ನು ಜರ್ಮನರ ಪರವಾಗಿ ಹೋರಾಡುವಾಗ ಆತನ ಎಡತೊಡೆಗೆ ಗಾಯವಾಯಿತು. ಸೇನಾ ವೈದ್ಯರಾಗಿದ್ದ Johan Jambor ರವರು ಸಮರ್ಥಿಸಿಕೊಳ್ಳುವ ಪ್ರಕಾರ, ಯುದ್ಧಭೂಮಿಯಲ್ಲಿ ಗಾಯಗೊ೦ಡಿದ್ದ ಹಿಟ್ಲರ್‌ನನ್ನು ಕ೦ಡು ಅವರು (ಸೇನಾ ವೈದ್ಯರು) ಆತನ ಜೀವ ಉಳಿಸುತ್ತಾರೆ. ಇತಿಹಾಸ ಕಂಡ ಕ್ರೂರ, ಅಷ್ಟೇ ವರ್ಣರಂಜಿತ ವ್ಯಕ್ತಿತ್ವಗಳಲ್ಲಿ ಹಿಟ್ಲರ್ ಕೂಡ ಒಬ್ಬ... ಅವನ ಆಡಳಿತ ಅವಧಿಯಲ್ಲಿ ಲಕ್ಷಾಂತರ ಜನ ಸಾವು- ನೋವಿಗೆ ಗುರಿಯಾಗಬೇಕಾಯಿತು.

English summary

Facts You Hardly Know About Hitler

Adolf Hitler is known as the Nazi tyrant that brought the world to the brink of destruction. While numerous books have been written about the Nazi leader. Have a look
X
Desktop Bottom Promotion