For Quick Alerts
ALLOW NOTIFICATIONS  
For Daily Alerts

ಅಮೃತಸರದ ಸ್ವರ್ಣಮಂದಿರ - ಸಿಖ್ಖರ ಪಾಲಿನ ಆರಾಧ್ಯ ದೇಗುಲ

By Super
|

ಧಾರ್ಮಿಕ ಕಟ್ಟುಪಾಡುಗಳನ್ನು ಜೀವಮಾನವಿಡೀ ಪಾಲಿಸಿಕೊಂಡು ಬರಲು ಕೊಂಚ ಕಷ್ಟಕರವಾಗಿ ಕಾಣುವ ಸಿಖ್ಖರ ಅತಿ ಪವಿತ್ರವಾದ ಮಂದಿರವೆಂದರೆ ಪಂಜಾಬ್ ರಾಜ್ಯದಲ್ಲಿರುವ ಅಮೃತಸರದ ಸ್ವರ್ಣಮಂದಿರ. ಇದು ಇಡಿಯ ವಿಶ್ವದಲ್ಲಿರುವ ಸಿಖ್ಖರ ಪಾಲಿನ ಆರಾಧ್ಯ ದೈವ ಮತ್ತು ಪ್ರಾರ್ಥನಾ ಕೇಂದ್ರವಾಗಿದೆ. ಈ ಮಂದಿರಕ್ಕೆ ಶ್ರೀ ಹರ್ಮಿಂದರ್ ಸಾಹಿಬ್ ಎಂಬ ಹೆಸರೂ ಇದೆ. ಇದರ ಅರ್ಥ 'ದೇವರ ಗುಡಿ', ಹೆಸರಿಗೆ ತಕ್ಕಂತೆ ಈ ಮಂದಿರ ಏಕದೇವನ ಪ್ರಸ್ತುತಿಯನ್ನು ಎತ್ತಿಹಿಡಿಯುತ್ತದೆ. ಯಕ್ಷ ಪ್ರಶ್ನೆಯಂತೆ ಕಾಡುವ ಸೂರ್ಯನ ಕುರಿತಾದ ಅಚ್ಚರಿಯ ಸಂಗತಿಗಳು!

ಈ ಮಂದಿರಕ್ಕೆ ಆಗಮಿಸುವ ಭಕ್ತರಲ್ಲಿ ಯಾವುದೇ ಬೇಧಭಾವ ಮಾಡುವಂತಿಲ್ಲ. ದೇವರಲ್ಲಿ ವಿಶ್ವಾಸವಿಟ್ಟು ಭಕ್ತಿಯಿಂದ ಆಗಮಿಸುವ ಶ್ರೀಮಂತ, ಬಡವ, ಬಲ್ಲಿದ, ಪುರುಷ, ಮಹಿಳೆ, ಮಕ್ಕಳು, ವೃದ್ದರು, ಜಾತಿ ಮತ ಬೇಧವಿಲ್ಲದೇ ಎಲ್ಲರಿಗೂ ಮಂದಿರ ಬಾಗಿಲು ತೆರೆದಿದೆ. ಇದಕ್ಕಾಗಿಯೇ ಮಂದಿರದ ನಾಲ್ಕೂ ಪಾರ್ಶ್ವಗಳಲ್ಲಿ ನಾಲ್ಕು ಹೆಬ್ಬಾಗಿಲುಗಳಿದ್ದು ಭಕ್ತರು ಯಾವುದೇ ಬಾಗಿಲಿನಿಂದಲೂ ಮಂದಿರವನ್ನು ಪ್ರವೇಶಿಸಬಹುದಾಗಿದೆ.

ಕೊಳದ ನಡುವೆ ನಿಂತಿರುವ ಭವ್ಯ ಮಂದಿರ

ಕೊಳದ ನಡುವೆ ನಿಂತಿರುವ ಭವ್ಯ ಮಂದಿರ

ಭಾರತದಲ್ಲಿ ಹಲವು ಮಂದಿರಗಳು ನೀರ ನಡುವೆ ನಿಂತಿವೆ. ಮುಂಬೈನಗರದಲ್ಲಿರುವ ಹಾಜಿ ಅಲಿ ದರ್ಗಾ ಸಮುದ್ರದ ನಡುವೆ ಇದ್ದು ಕಿರುದಾರಿಯಿಂದ ಅಲ್ಲಿ ತಲುಪಬಹುದು.ಅಮೃತಸರದ ಸ್ವರ್ಣಮಂದಿರವೂ ವಿಶಾಲವಾದ ಸಿಹಿನೀರಿನ ಕೊಳದ ನಟ್ಟ ನಡುವೆ ಇದ್ದು ಕಿರಿದಾದ ದಾರಿ ದಡಕ್ಕೆ ಸಂಪರ್ಕ ನೀಡಿದೆ. ಅತ್ಯಂತ ಸ್ವಚ್ಛ ಮತ್ತು ಕುಡಿಯಬಹುದಾದ ಈ ನೀರನ್ನು ಸಿಖ್ಖರು ಅತಿ ಪವಿತ್ರವೆಂದು ಭಾವಿಸುವುದರಿಂದಲೇ ಈ ಸರೋವರಕ್ಕೆ ಅಮೃತ ಸರೋವರ ಎಂಬ ಹೆಸರಿದೆ. ಆದರೆ ಈ ಸರೋವರ ನೈಸರ್ಗಿಕವಲ್ಲ, ಇದನ್ನು ಮಂದಿರದ ನಿರ್ಮಾಣಕ್ಕೂ ಮೊದಲೇ ಭಕ್ತರ ದೈಹಿಹ ಶ್ರಮದಿಂದ ನಿರ್ಮಿಸಲಾಗಿತ್ತು. ಅಮೃತ ಸರೋವರ ಇರುವ ನಗರ ಎಂಬ ಕಾರಣದಿಂದಲೇ ಈ ನಗರಕ್ಕೆ 'ಅಮೃತಸರ' ಎಂಬ ಹೆಸರು ಬಂದಿದೆ.

ಸ್ವರ್ಣಮಂದಿರದ ಬಗ್ಗೆ ಇರುವ ಆಚ್ಚರಿಯ ಮಾಹಿತಿಗಳು

ಸ್ವರ್ಣಮಂದಿರದ ಬಗ್ಗೆ ಇರುವ ಆಚ್ಚರಿಯ ಮಾಹಿತಿಗಳು

ಶ್ರೀ ಹರ್ಮಿಂದರ್ ಸಾಹಿಬ್ ಕಟ್ಟಡಕ್ಕೆ ಸ್ವರ್ಣಮಂದಿರ ಎಂಬ ಹೆಸರು ಬರಲು ಸ್ವರ್ಣ ಅಥವಾ ಬಂಗಾರವೇ ಕಾರಣ. ಏಕೆಂದರೆ ಈ ಮಂದಿರದ ಹೊರ ಆವರಣವನ್ನು ಚಿನ್ನದ ತಗಡಿನಿಂದ ಆವರಿಸಲಾಗಿದೆ. ಕಟ್ಟಡದ ವಾಸ್ತುಶಿಲ್ಪ ಹಿಂದೂ ಮತ್ತು ಮುಸಲ್ಮಾನ ಶೈಲಿಯ ಸಂಗಮವಾಗಿದೆ. ಇತಿಹಾಸದ ಪುಟಗಳನ್ನು ಕೆದಕಿದರೆ ಇದರ ಕುರಿತು ಹಲವು ಅಚ್ಚರಿಯ ಮಾಹಿತಿಗಳು ದೊರಕುತ್ತವೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಈಗಿನ ಲಾಹೋರ್ ನಗರದ ಬಳಿ ಇರುವ ಹಜರತ್ ಮಿಯಾಂ ಮೀರ್ ಎಂಬ ಸೂಫಿ ಸಂತರ ದರ್ಗಾದ ವಾಸ್ತುಶಿಲ್ಪವನ್ನು ಹೋಲುವಂತೆ ಈ ಸ್ವರ್ಣಮಂದಿರವನ್ನು ನಿರ್ಮಿಸಲಾಗಿದೆ. ಇದೇ ಕಾರಣದಿಂದ ಪ್ರಾರಂಭದಲ್ಲಿ ಸ್ವರ್ಣಮಂದಿರಕ್ಕೆ (ಆಗಿನ್ನೂ ಸ್ವರ್ಣಮಂದಿರ ಎಂಬ ಹೆಸರು ಬಂದಿರಲಿಲ್ಲ) ಶ್ರೀ ದರ್ಬಾರ್ ಸಾಹಿಬ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಆಚ್ಚರಿಯ ಮಾಹಿತಿಗಳು

ಆಚ್ಚರಿಯ ಮಾಹಿತಿಗಳು

ಈ ಮಂದಿರದ ವಿಶೇಷತೆ ಎಂದರೆ ಹಿಂದೂ ಮಂದಿರಗಳು ಸಾಮಾನ್ಯವಾಗಿ ನೆಲದಿಂದ ಮೇಲ್ಮಟ್ಟದಲ್ಲಿದ್ದರೆ, ಅಂದರೆ ಗರ್ಭಗುಡಿಯನ್ನು ಪ್ರವೇಶಿಸಲು ಮೆಟ್ಟಿಲೇರಬೇಕಾಗಿದ್ದರೆ (ಹಲವೆಡೆ ಮಂದಿರಗಳು ಬೆಟ್ಟದ ತುದಿಯಲ್ಲಿದ್ದು ಬುಡದಿಂದ ತುದಿಯವರೆಗೂ ಮೆಟ್ಟಿಲುಗಳಿರುತ್ತವೆ), ಸ್ವರ್ಣಮಂದಿರ ನೆಲಮಟ್ಟಕ್ಕಿಂತಲೂ ಕೆಳಗಿದೆ. ಅಂದರೆ ದಡದಿಂದ ಗುಡಿಗೆ ಮೆಟ್ಟಲಿಳಿದು ಹೋಗಬೇಕು. ಈ ಮಂದಿರದ ನಿರ್ಮಾಣವನ್ನು 1574ರಲ್ಲಿ ನಾಲ್ಕನೆಯ ಸಿಖ್ ಗುರು ಗುರು ರಾಮ್ ದಾಸ್ ಎಂಬುವರು ಪ್ರಾರಂಭಿಸಿದರು ಎಂದು ದಾಖಲೆಗಳಲ್ಲಿದೆ. ಇವರೇ ಮೊದಲಿಗೆ ಅಮೃತ ಸರೋರವನ್ನು ವಿಸ್ತರಿಸಿದವರೂ ಆಗಿದ್ದಾರೆ. ಬಳಿಕ ಅವರ ಅಳಿಯ ಐದನೆಯ ಸಿಖ್ ಗುರು, ಗುರು ಅರ್ಜಾನ್ ದೇವ್ ರವರು ಇಸವಿ 1601 ರಲ್ಲಿ ಈ ಮಂದಿರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದರು. ಇವರೇ ದಡದಿಂದ ಮಂದಿರದೆಡೆಗೆ ಇಳಿಯುವಂತೆ ಸುತ್ತಲೂ ಮೆಟ್ಟಿಲುಗಳನ್ನೂ

ಕಟ್ಟಿಸಿದರು.

ಸ್ವರ್ಣಮಂದಿರಕ್ಕೂ ತಟ್ಟಿದ ರಕ್ತಸಿಕ್ತ ಇತಿಹಾಸ

ಸ್ವರ್ಣಮಂದಿರಕ್ಕೂ ತಟ್ಟಿದ ರಕ್ತಸಿಕ್ತ ಇತಿಹಾಸ

ಭಾರತದ ಇತಿಹಾಸವೂ ರಕ್ತಸಿಕ್ತವಾಗಿರುವಂತೆಯೇ ಸ್ವರ್ಣಮಂದಿರವೂ ಹಲವು ಬಾರಿ ವಿದೇಶೀಯರಿಂದ ಧಾಳಿಗೊಳಪಟ್ಟಿತ್ತು. ಮಂದಿರವನ್ನು ಕಟ್ಟಿದಾಗ ಅದರ ಹೊರ ಆವರಣದಲ್ಲಿ ಚಿನ್ನದ ಕವಚ ಇರಲೇ ಇಲ್ಲ. ಆಗ ಶ್ರೀ ಹರ್ಮಂದಿರ್ ಸಾಹಿಬ್ ಎಂಬ ಹೆಸರೇ ಪ್ರಚಲಿತದಲ್ಲಿತ್ತು. ಬಳಿಕ ಭಾರತವನ್ನು ಆಳಲು ಆಗಮಿಸಿದ ಮುಘಲರು, ಅಫ್ಘನ್ನರು ಮಂದಿರದ ಮೇಲೆ ಧಾಳಿಯಿಟ್ಟಿದ್ದರು. ಅಷ್ಟೇ ಏಕೆ, 1980ರಲ್ಲಿ ಆಪರೇಶನ್ ಬ್ಲೂ ಸ್ಟಾರ್ ಎಂಬ ಹೆಸರಿನಲ್ಲಿ ಭಾರತೀಯ ಸೇನೆಯೇ ಧಾಳಿ ನಡೆಸಿತ್ತು. (ಈ ಧಾಳಿಗೆ ಪ್ರತೀಕಾರವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು 1984ರಲ್ಲಿ ಹತ್ಯೆ ಮಾಡಲಾಗಿತ್ತು).

ಸ್ವರ್ಣಮಂದಿರಕ್ಕೂ ತಟ್ಟಿದ ರಕ್ತಸಿಕ್ತ ಇತಿಹಾಸ

ಸ್ವರ್ಣಮಂದಿರಕ್ಕೂ ತಟ್ಟಿದ ರಕ್ತಸಿಕ್ತ ಇತಿಹಾಸ

19ನೆಯ ಶತಮಾನದಲ್ಲಿ ಪಂಜಾಬಿನ ಮಹಾರಾಜರಾಗಿದ್ದ ರಂಜೀತ್ ಸಿಂಗ್ ರವರು ಧಾಳಿಯಿಂದ ಕಳೆಗುಂದಿದ್ದ ಮಂದಿರಕ್ಕೆ ಕಳೆ ನೀಡಲು ಹಲವು ಕ್ರಮಗಳನ್ನು ಕೈಗೊಂಡರು. ಮಂದಿರದ ಆವರಣದಲ್ಲಿ ನಡೆದಾಡುವ ಸ್ಥಳದಲ್ಲಿ ಅಮೃತಶಿಲೆಯನ್ನು ಹಾಸಲಾಯಿತು. ಧಾಳಿಯಲ್ಲಿ ಒಡೆದಿದ್ದ, ತುಂಡಾಗಿದ್ದ ಗೋಡೆ, ಇಟ್ಟಿಗೆಗಳನ್ನೂ ಸರಿಪಡಿಸಲಾಯಿತು. ಮುಂದೆಂದಾದರೂ ಧಾಳಿಯಾದರೆ ತಾಳಿಕೊಳ್ಳಲೆಂಬಂತೆ ಕಬ್ಬಿಣದ ಗಟ್ಟಿಮುಟ್ಟಾದ ಸರಳುಗಳನ್ನೂ ಕಟಕಟೆಗಳನ್ನೂ ಅಳವಡಿಸಲಾಯಿತು. ಮಂದಿರದ ಸೇವೆಯ ಮಹಾತ್ಮೆಯೋ ಏನೋ ಈ ಅವಧಿಯಲ್ಲಿ ರಾಜ್ಯ ಸುಭಿಕ್ಷತೆಯಿಂದ ತುಂಬಿತು. ರಾಜರ ಬೊಕ್ಕಸ ತುಂಬಿ ತುಳುಕಲು ಪ್ರಾರಂಭವಾಯಿತು. ಪ್ರಗತಿಗೆ ಕಾರಣವಾದ ದೇವರನ್ನು ಮರೆಯದ ಮಹಾರಾಜರು ಈ ಮಂದಿರದ ಮೇಲಿನ ಮತ್ತು ಹೊರ ಆವರಣವನ್ನು ಚಿನ್ನದ ತಗಡುಗಳಿಂದ ಸುತ್ತುವರೆಯಲು ಬೊಕ್ಕಸವನ್ನು ಬಳಸಿದರು.

ಸಿಖ್ಖರ ಕೇಂದ್ರ ಸಂಗ್ರಹಾಲಯ

ಸಿಖ್ಖರ ಕೇಂದ್ರ ಸಂಗ್ರಹಾಲಯ

ಸ್ವರ್ಣಮಂದಿರದೊಳಗೇ ಒಂದು ವಿಶಾಲವಾದ ಗ್ರಂಥಾಲಯವಿದೆ. ಇದರ ಗೋಡೆಗಳಲ್ಲಿ ಇತಿಹಾಸವನ್ನು ಬಿಂಬಿಸುವ ವರ್ಣಚಿತ್ರಗಳೂ, ನೂರಾರು ಕಲಾಕೃತಿಗಳೂ, ಐತಿಹಾಸಿಕ ದಾಖಲೆಗಳನ್ನೂ ಸಂಗ್ರಹಿಸಿಡಲಾಗಿದ್ದು ನೋಡಲೇಬೇಕಾದ ಸ್ಥಳವಾಗಿದೆ. ಇದರ ಹಿಂದೆ ಹಲವು ಪ್ರಮುಖ ಸಿಖ್ ವ್ಯಕ್ತಿಗಳ, ಸಂತರ, ಸೈನಿಕರ ಮತ್ತು ನಾಯಕರ ಶ್ರಮವಿದೆ.

ಸಿಖ್ಖರ ಪವಿತ್ರ ಗ್ರಂಥ-ಗುರು ಗ್ರಂಥ್ ಸಾಹಿಬ್

ಸಿಖ್ಖರ ಪವಿತ್ರ ಗ್ರಂಥ-ಗುರು ಗ್ರಂಥ್ ಸಾಹಿಬ್

ಹಿಂದೂಗಳಿಗೆ ಭಗವತ್ಗೀತೆ ಇದ್ದಂತೆ ಸಿಖ್ಖರಿಗೆ ಗುರು ಗ್ರಂಥ್ ಸಾಹಿಬ್ ಪವಿತ್ರ ಗ್ರಂಥವಾಗಿದೆ. ಇದರ ಪ್ರಾರಂಭದಲ್ಲಿ ಹದಿನಾಲ್ಕು ಮತ್ತು ಹದಿನೈದನೇ ಶತಮಾನದ ಸಂತ ಕಬೀರ್ ಮತ್ತು ಸಂತ ಸೂರದಾಸ್ ರವರ ಪಂಕ್ತಿಗಳನ್ನು ಅಳವಡಿಸಿ ಕೊಳ್ಳಲಾಗಿದೆ. ಬಳಿಕ ಸಿಖ್ಖರ ಸಂಸ್ಥಾಪಕರಾದ ಹತ್ತು ಗುರುಗಳು ನೀಡಿದ ಆಶೀರ್ವಚನ ಮತ್ತು ಪವಿತ್ರ ವಾಕ್ಯಗಳನ್ನು ಗ್ರಂಥದಲ್ಲಿ ಅಳವಡಿಸಿಕೊಳ್ಳಲಾಯಿತು. ಈ ಗ್ರಂಥವನ್ನು ಗುರು ಅರ್ಜಾನ್ ದೇವ್ ರವರು ಸ್ವರ್ಣಮಂದಿರಕ್ಕೆ ಮೊತ್ತ ಮೊದಲ ಬಾರಿ ತಂದು ಸ್ಥಾಪಿಸಿದರು. ಅಂದಿನಿಂದ ಈ ಗ್ರಂಥ ಶಾಶ್ವತವಾಗಿ ಈ ಮಂದಿರದಲ್ಲಿಯೇ ಇದೆ. ಇಂದು ಸ್ವರ್ಣಮಂದಿರದೊಳಗಿನ ಪ್ರಮುಖ ಭಾಗದಲ್ಲಿ ರತ್ನಖಚಿತ ಪೀಠದ ಮೇಲೆ ಈ ಗ್ರಂಥವನ್ನು ಸುರಕ್ಷಿತವಾಗಿ ಇಡಲಾಗಿದೆ. ಈ ಗ್ರಂಥದಲ್ಲಿ ಒಟ್ಟು 1430 ದೊಡ್ಡ ಗಾತ್ರದ ಪುಟಗಳಿವೆ.

ಸ್ವರ್ಣಮಂದಿರವನ್ನು ಸಂದರ್ಶಿಸುವವರು ಪಾಲಿಸಬೇಕಾದ ನಿಯಮಗಳು

ಸ್ವರ್ಣಮಂದಿರವನ್ನು ಸಂದರ್ಶಿಸುವವರು ಪಾಲಿಸಬೇಕಾದ ನಿಯಮಗಳು

ವಿಶ್ವದ ಯಾವುದೇ ಗುರುದ್ವಾರವನ್ನು ಸಂದರ್ಶಿಸಬೇಕಾದ ನಿಯಮಗಳಂತೆಯೇ ಹರ್ಮಂದಿನ ಸಾಹಿಬ್ ಗುರುದ್ವಾರಕ್ಕೂ ನಿಯಮಗಳಿವೆ. ಇವುಗಳಲ್ಲಿ ಯಾವುದೇ ಉಲ್ಲಂಘನೆಯಾದರೂ ಸಂಘಟಕರು ಸಂದರ್ಶಕನನ್ನು ಹೊರಕಳಿಸುವ ಪರವಾನಗಿಯನ್ನು ಹೊಂದಿದ್ದಾರೆ.

* ಮಂದಿರದ ಒಳ ಹೋಗಬೇಕಾದರೆ ಪಾದರಕ್ಷೆಗಳನ್ನು ಕಡ್ಡಾಯವಾಗಿ ಹೊರಗೇ ಬಿಡಬೇಕು

* ಪಾದರಕ್ಷೆ ಕಳಚಿದ ಬಳಿಕ ಪಾದಗಳನ್ನು ಕಡ್ಡಾಯವಾಗಿ ತೊಳೆದೇ ಒಳಗಡಿಯಿಡಬೇಕು

* ಮದ್ಯಪಾನ, ಮಾಂಸಾಹಾರ, ಧೂಮಪಾನ, ಮಾದಕ ಪದಾರ್ಥ ಸೇವನೆ ನಿಷಿದ್ಧವಾಗಿದೆ.

* ತಲೆಗೂದಲನ್ನು ಕಡ್ಡಾಯವಾಗಿ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು (ವಸ್ತ್ರವನ್ನು ತರದಿದ್ದವರಿಗೆ ವಸ್ತ್ರವನ್ನು ಪೂರೈಸುವ ವ್ಯವಸ್ಥೆಯನ್ನ್ ಗುರುದ್ವಾರದ ಆಡಳಿತ ಮಂಡಳಿ ಮಾಡಿದೆ)

* ಮಂದಿರದೊಳಗೆ ಭಕ್ತರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದ್ದು ಸಂಪೂರ್ಣವಾಗಿ ಉಚಿತವಾಗಿದೆ

* ಮಂದಿರದೊಳಗೆ ಹಾಡಲಾಗುವ ಗುರ್ಬಾನಿ (ಸಿಖ್ ಭಜನೆ)ಯನ್ನು ಕೇಳಬಯಸಿದರೆ ಕಡ್ಡಾಯವಾಗಿ ಕುಳಿತುಕೊಳ್ಳಬೇಕು. ನಿಂತು ಆಲಿಸುವುದು ನಿಷಿದ್ಧ. ಕುಳುತು ಕೇಳುವುದು ಸಿಖ್ ಗುರುಗಳಿಗೆ ಮತ್ತು ದೇವರಿಗೆ ನೀಡುವ ಗೌರವವಾಗಿದೆ.

* ಸ್ವರ್ಣಮಂದಿರದ ಕೊಳದಲ್ಲಿರುವ ಮೀನುಗಳೂ ಚಿನ್ನದ ಬಣ್ಣದ್ದೇ ಆಗಿವೆ. ಇವುಗಳನ್ನು ಹಿಡಿಯುವುದು ಇಲ್ಲಿ ನಿಷಿದ್ಧವಾಗಿದೆ.

English summary

Facts about the Golden Temple of Amritsar

The Golden Temple is a religious shrine that symbolizes the historical traditions and spirituality of the Punjabis and Sikhs living all over the world. Located in Amritsar in Punjab in the northern part of India, The Golden Temple stands amidst a large holy water tank. This man-made tank is popularly known as Amrit Sarovar. have a look
X
Desktop Bottom Promotion