For Quick Alerts
ALLOW NOTIFICATIONS  
For Daily Alerts

ನವನವೀನ ಪಾನಿಪುರಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

By Deepu
|

ಪಾನಿಪುರಿ ಹೆಸರು ಕೇಳಿದರೆ ಯಾರಿಗೆ ತಾನೇ ಬಾಯಲ್ಲಿ ನೀರೂರಿವುದಿಲ್ಲ ಹೇಳಿ! ಎಷ್ಟೇ ದೊಡ್ಡ ಶ್ರೀಮಂತ ವ್ಯಕ್ತಿ ಕೂಡ ತನ್ನ ವೈಭವೋಪೇತ ಊಟಕ್ಕಿಂತಲೂ ಮಿಗಿಲಾದ ರಸಗವಳದ ರುಚಿಯನ್ನು ಈ ಪುಟ್ಟ ಪೂರಿಯಲ್ಲಿ ಕಾಣುವುದೇ ಇದರ ಶ್ರೇಷ್ಠತೆಯಾಗಿದೆ. ಬೀದಿಬದಿಯ ಮಹಾರಾಜ ಎಂದೇ ಕರೆಯಿಸಿಕೊಳ್ಳುವ ಪಾನಿಪುರಿ ತನ್ನ ಅನೂಹ್ಯವಾದ ರುಚಿಗೆ ಹೆಸರುವಾಸಿಯಾಗಿದೆ.

ಭಾರತದಲ್ಲಿ ನೀವು ಎಲ್ಲೇ ಹೋಗಿ ಪಾನಿಪೂರಿ ಇಲ್ಲದಿರುವ ಜಾಗ ನಿಮಗೆ ಕಂಡುಬರಲು ಸಾಧ್ಯವೇ ಇಲ್ಲ..! ಅಷ್ಟೊಂದು ಕುಖ್ಯಾತಿಯನ್ನು ಗಳಿಸಿರುವ ಚಾಟ್ ಐಟಮ್ ಎಂದೆನಿಸಿದೆ. ಆಲೂಗಡ್ಡೆ ಮತ್ತು ಕಡಲೆ ಮಸಾಲೆಯೊಂದಿಗೆ, ಕೊತ್ತಂಬರಿ ಸೊಪ್ಪು, ಹುಳಿ, ಪುದೀನಾದೊಂದಿಗೆ ಮಸಾಲೆ ಬೆರೆಸಿ ಸಿದ್ಧಪಡಿಸಿರುವ ಪಾಕದೊಂದಿಗೆ ಪೂರಿಯನ್ನು ಅದ್ದಿ ಕೊಡುವಾಗ ತಿನ್ನುವ ಮೊದಲೇ ಬಾಯಲ್ಲಿ ನೀರೂರಿಸಿಬಿಡುತ್ತದೆ, ಅದರಲ್ಲೂ ಬೀದಿ ಬದಿಯಲ್ಲಿ ಪಾನಿಪೂರಿವಾಲಾ ಹುಡುಗ ಬರೇ ಹದಿನೈದು ರೂಪಾಯಿಗೆ ನೀಡುವ ಏಳೆಂಟು ಪೂರಿಗಳನ್ನು ಒಮ್ಮೆಲೆ ಗುಳಂ ಮಾಡಿ ಕೊನೆಯಲ್ಲಿ ಆತ ಕೊಡುವ ಸುಕ್ಕ ಸೇವಿಸುವಾಗ ರಾತ್ರಿಯೂಟದ ನೆನಪೇ ಕಾಡದಷ್ಟು ಪಾನಿಪೂರಿಯ ಸ್ವಾದ ಬಾಯಲ್ಲಿ ಶಾಶ್ವತವಾಗಿರುತ್ತದೆ. ನಿಮ್ಮ ಬಾಯಲ್ಲಿ ಇನ್ನಷ್ಟು ನೀರೂರಿಸುವಂತೆ ಮಾಡುವ ಬಗೆ ಬಗೆಯ ಸ್ವಾದದ ಸವಿಯನ್ನು ನಿಮಗುಣಿಸುವ ತರೇಹವಾರಿ ಪಾನಿಪೂರಿ ವಿಧಗಳೊಂದಿಗೆ ನಾವು ಬಂದಿರುವೆವು, ಮುಂದೆ ಓದಿ...

ಪಾನಿಪುರಿ

ಪಾನಿಪುರಿ

ಇದು ಭಾರತದಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಹೆಸರು, ಮುಖ್ಯವಾಗಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ್, ಕರ್ನಾಟಕ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾಯಲ್ಲಿ ನೀರೂರಿಸುವ ಪಾನಿಪುರಿ

ಬಾಯಲ್ಲಿ ನೀರೂರಿಸುವ ಪಾನಿಪುರಿ

ಪೂರ್ತಿಯಾಗಿ ಉಬ್ಬಿದ್ದ ಪುಟ್ಟ ಪೂರಿಯನ್ನು ಮಸಾಲೆ ಮತ್ತು ಪಾನಿಯೊಡನೆ ಇಡಿಯಾಗಿ ಬಾಯಿಯೊಳಗಿಟ್ಟು ಜಗಿದಾಗ ಕುರುಕು ಸ್ವರದಲ್ಲಿ ಪುಡಿಯಾಗುವ ಪೂರಿ, ಅದರೊಂದಿಗೆ ಒಸರುವ ರಸ ಒಂದು ಧಾರೆಯಾಗಿ ನಿಮ್ಮ ನಾಲಿಗೆಯ ಅಷ್ಟೂ ರುಚಿಸಂವೇದಕಗಳನ್ನು ಆವರಿಸಿ ಬಿಡುತ್ತದೆ. ಇದು ಎಲ್ಲರಿಗೂ ಇಷ್ಟವಾಗುವ ರುಚಿಯಾಗಿದೆ. ಹೆಚ್ಚು ಖಾರ ಬೇಕೇ, ಬೇಡವೇ ಕೊಂಚ ಸಿಹಿಯಾಗಿದ್ದರೆ ಒಳಿತೇ, ಹುಳಿ ಹೆಚ್ಚು ಬೇಕೇ, ಬೇಡವೇ ಪಾನಿಪೂರಿ ತುಂಬಿಸುವ ಮುನ್ನ ಅಂಗಡಿಯಾತನಿಗೆ ಹೇಳಿದರೆ ಸಾಕು, ಅದೇ ಕ್ಷಣದಲ್ಲಿ ನಿಮಗೆ ಸೂಕ್ತವಾದ ಖಾರ ಅಥವಾ ಸಿಹಿಯ ಪ್ರಮಾಣವನ್ನು ಬದಲಿಸಲು ಸಾಧ್ಯ. ಎಲ್ಲರ ಮೆಚ್ಚುಗೆಗೆ ಪಾತ್ರನಾಗಲು ಪಾನಿಪೂರಿಯ ಈ ವೈಶಿಷ್ಟ್ಯವೇ ಕಾರಣ.

ಪಾನಿಪುರಿಗೆ ಬಳಸುವ ಮಸಾಲೆ

ಪಾನಿಪುರಿಗೆ ಬಳಸುವ ಮಸಾಲೆ

ಮಹಾರಾಷ್ಟ್ರದಲ್ಲಿ ಪಾನಿಪುರಿಗೆ ಭರ್ತಿ ಮಾಡಲು ಕಡಲೆ ಕಾಳುಗಳನ್ನು ಹಾಕಿರುವ ರಗಡ ಕರಿ, ಹುಣಸೆ ಹಣ್ಣನ್ನು ಹಾಕಿರುವ ಮೀಥಿ ಇಮ್ಲಿ, ಅದರ ಜೊತೆಗೆ ಚಟ್ನಿ ಮತ್ತು ಹುಣಸೆಹಣ್ಣಿನ ನೀರನ್ನು ಬಳಸಿದರೆ ಅದೇ, ಗುಜರಾತಿನಲ್ಲಿ ನುಣ್ಣಗೆ ಕತ್ತರಿಸಿದ ಆಲೂಗಡ್ಡೆ, ಬೇಯಿಸಿದ ಹೆಸರು ಕಾಳು, ಅದರ ಜೊತೆಗೆ ಸ್ಟಫ್ ಆದ ಮಿಶ್ರಣ. ಮಧ್ಯ ಪ್ರದೇಶದಲ್ಲಿ ಆಲೂಗಡ್ಡೆಯನ್ನು ರುಬ್ಬಿ ಹಾಕಿರುತ್ತಾರೆ, ಆದರೆ ನೀರಿಗೆ ಬೂಂದಿಯನ್ನು ಹಾಕಿರುವುದಿಲ್ಲ. ಕರ್ನಾಟಕದಲ್ಲಿ ಬಂಗಾರಪೇಟೆ ಪಾನಿಪುರಿ ಎಂಬ ವಿಶೇಷ ಬಗೆಯಿದೆ. ಅದು ಬೆಳ್ಳಗೆ ಇರುವ ನೀರನ್ನು ಹೊಂದಿರುತ್ತದೆ. ಅದನ್ನು ಹೊರತುಪಡಿಸಿದರೆ ನಮ್ಮಲ್ಲೂ ಮತ್ತು ತಮಿಳುನಾಡಿನಲ್ಲಿ ಈರುಳ್ಳಿಯನ್ನು ಸಹ ಬೆರೆಸಿ ಪಾನಿಪುರಿಯನ್ನು ತಯಾರಿಸುತ್ತಾರೆ.

ಪುಚ್ಕ

ಪುಚ್ಕ

ಪೂರ್ವ ಭಾರತದಲ್ಲಿ ಅಂದರೆ ಬಂಗಾಳ ಮತ್ತು ಅಸ್ಸಾಂನಲ್ಲಿ ಇದು ಭಾರೀ ಜನಪ್ರಿಯ. ಪುಚ್ಕಗಳು ಪಾನಿಪೂರಿಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಅದರಲ್ಲಿ ಬಳಸುವ ಪದಾರ್ಥ ಮತ್ತು ರುಚಿ ಎರಡೂ ಬೇರೆ ಬೇರೆಯಾಗಿರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುಚ್ಕ

ಪುಚ್ಕ

ಪುಚ್ಕಾಗಳು ಬೇಯಿಸಿದ ಕಡಲೆ ಕಾಳು ಮತ್ತು ರುಬ್ಬಿದ ಆಲೂಗಡ್ಡೆಗಳನ್ನು ಇದರಲ್ಲಿ ಭರ್ತಿ ಮಾಡಲು ಬಳಸುತ್ತಾರೆ. ಚಟ್ನಿಯು ಸಿಹಿಗೆ ಬದಲು ಹುಳಿಯಿಂದ ಕೂಡಿರುತ್ತದೆ. ನೀರು ಮಸಾಲೆಯಾಗಿರುತ್ತದೆ. ಈ ಪೂರಿಗಳು ಗಾಢಬಣ್ಣದಿಂದ ಕೂಡಿದ್ದು, ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಜನಪ್ರಿಯವಾಗಿದೆ.

ಗೋಲ್ ಗಪ್ಪ

ಗೋಲ್ ಗಪ್ಪ

ಇದೊಂದು ಸ್ವಾದಿಷ್ಟವಾದ ತಿಂಡಿಯಾಗಿದ್ದು, ಉತ್ತರ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದೆ. ಈ ಪೂರಿಯನ್ನು ಹುಳಿ ನೀರಿನಲ್ಲಿ ಅದ್ದಿ ನೀಡಲಾಗುತ್ತದೆ. ಹರಿಯಾಣ ಹೊರತು ಪಡಿಸಿ, ಇಡೀ ಉತ್ತರ ಭಾರತದಲ್ಲಿ ಇದನ್ನು ಗೋಲ್ ಗಪ್ಪ ಎಂದುಕರೆಯುತ್ತಾರೆ. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ, ಹಾಗಾಗಿ ಮಹಾರಾಷ್ಟ್ರದಲ್ಲಿ ವಡಾಪಾವ್ ಹೇಗೆ ಸಿಕ್ಕುತ್ತದೆ, ಉತ್ತರ ಭಾರತದಲ್ಲಿ ಹಾಗೆ ಗೋಲ್ ಗಪ್ಪ ಅಂಗಡಿಗಳು ಸಿಕ್ಕುತ್ತವೆ. ಪ್ರತಿ ಬೀದಿಯಲ್ಲಿ ನಾವು ಈ ಗೋಲ್ ಗಪ್ಪಗಳ ಅಂಗಡಿಯನ್ನು ಕಾಣಬಹುದು.

ಗೋಲ್ ಗಪ್ಪ

ಗೋಲ್ ಗಪ್ಪ

ಗೋಲ್ ಗಪ್ಪಯನ್ನು ಆಲೂಗಡ್ಡೆ ಮತ್ತು ಕಡಲೆ ಕಾಳು ಹೂರಣದಿಂದ ತಯಾರಿಸಲಾಗುತ್ತದೆ. ಚಟ್ನಿ ಮತ್ತು ತುಂಬಾ ಹುಳಿಯಿರುವ ನೀರನ್ನು ಇದಕ್ಕೆ ನೀಡಲಾಗುತ್ತದೆ. ಈ ನೀರಿಗೆ ಪುದಿನಾ ಮತ್ತು ಹಲವಾರು ಮಸಾಲೆಗಳನ್ನು ಸೇರಿಸಲಾಗಿರುತ್ತದೆ. ಉತ್ತರ ಭಾರತದ ಹಲವೆಡೆ ಗೋಲ್ ಗಪ್ಪೆಯು ಗುಂಡಗೆ ಇರುವುದಿಲ್ಲ, ಆದರೆ ಸ್ವಲ್ಪ ಉದ್ದವಾಗಿರುತ್ತದೆ.

ಪಕೋಡಿ

ಪಕೋಡಿ

ಇದನ್ನು ಪಕೋಡಾಗಳೆಂದು ಭಾವಿಸಬೇಡಿ, ಗುಜರಾತಿನಲ್ಲಿ ಪಾನಿಪೂರಿಯನ್ನು ಪಕೋಡಿಗಳೆಂದು ಕರೆಯುತ್ತಾರೆ. ಇದರ ರುಚಿ ಮತ್ತು ತಯಾರಿಸುವ ವಿಧಾನ ಒಂದೇ ರೀತಿ ಇರುತ್ತದೆ. ಆದರೆ ಸ್ವಲ್ಪ ವ್ಯತ್ಯಾಸಗಳು ಸಹ ಇರುತ್ತವೆ. ಕೆಲವೆಡೆ ಸೇವ್ ಅನ್ನು ಪಕೋಡಿಗಳಿಗೆ ಸೇರಿಸುತ್ತರೆ. ಪಕೋಡಿಗಳು ಸಾಮಾನ್ಯವಾಗಿ ಸಿಹಿ ಚಟ್ನಿಗಳನ್ನು ಹೊಂದಿರುತ್ತದೆ. ಅದಕ್ಕೆ ಈರುಳ್ಳಿಗಳನ್ನು ಹಾಕಿರುತ್ತಾರೆ. ಇದರ ಜೊತೆಗೆ ನೀಡುವ ನೀರಿಗೆ ಪುದಿನಾ ಮತ್ತು ಹಸಿ ಮೆಣಸಿನ ಕಾಯಿಯನ್ನು ಹಾಕಲಾಗಿರುತ್ತದೆ. ಇದು ಒಂದು ಬಗೆಯ ಸಿಹಿ ಮತ್ತು ಖಾರ ಸೇರಿರುವ ಸ್ನ್ಯಾಕ್ಸ್ ಆಗಿರುತ್ತದೆ. ಜೊತೆಗೆ ಮಸಾಲೆಗಳು ಅಧಿಕವಾಗಿರುತ್ತದೆ.

ಗಪ್‌ಚುಪ್

ಗಪ್‌ಚುಪ್

ಇದೊಂದು ಕುತೂಹಲಕಾರಿಯಾದ ಹೆಸರಾಗಿದ್ದು, ಒಡಿಶಾ, ದಕ್ಷಿಣ ಜಾರ್ಖಂಡ್, ಛತ್ತೀಸ್ ಗಢ್, ಹೈದರಾಬಾದ್ ಮತ್ತು ತೆಲಂಗಾಣಗಳಲ್ಲಿ ಪ್ರಚಲಿತದಲ್ಲಿದೆ. ಇದಕ್ಕೆ ಈ ಹೆಸರು ಬರಲು ಕಾರಣ, ಇದನ್ನು ಬಾಯಿಯಲ್ಲಿ ಇರಿಸಿದ ತಕ್ಷಣ, ಒಂದು ಬಗೆಯ ಸದ್ದಿನೊಂದಿಗೆ ಇವು ಒಡೆಯುತ್ತವೆ. ಹಾಗಾಗಿ ಇದಕ್ಕೆ ಈ ಹೆಸರು ನೀಡಿದ್ದಾರೆ. ಗಪ್‌ ಚುಪ್‌ಗಳಲ್ಲಿ ಕಡಲೆ ಕಾಳು ಅಥವಾ ಅಲಸಂದೆಯನ್ನು ಹಾಕಿರುತ್ತಾರೆ ಮತ್ತು ಇದಕ್ಕೆ ಮಸಾಲೆ ಭರಿತ ನೀರನ್ನು ನೀಡುತ್ತಾರೆ, ಆದರೆ ಆಲೂಗಡ್ಡೆಗಳನ್ನು ಇದರಲ್ಲಿ ಇರಿಸಿರುವುದಿಲ್ಲ. ಹೀಗಾಗಿ ಇದರಲ್ಲಿ ಕಡಿಮೆ ವಸ್ತುಗಳಿದ್ದು, ತಿನ್ನಲು ತುಂಬಾ ಚೆನ್ನಾಗಿ ಇರುತ್ತದೆ. ಗ್ರಾಹಕರ ಒತ್ತಾಯದ ಮೇರೆಗೆ ಈರುಳ್ಳಿಯನ್ನು ಸೇರಿಸಿರುತ್ತಾರೆ.

ಟಿಕ್ಕಿಗಳು

ಟಿಕ್ಕಿಗಳು

ಆಲೂ ಟಿಕ್ಕಿಯಲ್ಲ, ಆದರೆ ಇದು ಮಧ್ಯಪ್ರದೇಶದಲ್ಲಿ ದೊರೆಯುವ ಒಂದು ಬಗೆಯ ತಿಂಡಿ. ಟಿಕ್ಕಿಗಳು ಸಹ ಪೂರಿಗಳಂತೆ ಇರುತ್ತವೆ ಮತ್ತು ಆಲೂಗಡ್ಡೆ ಹಾಗು ಕಡಲೆಕಾಳುಗಳನ್ನು ಹೊಂದಿರುತ್ತದೆ. ಗೊತ್ತಾಯಿತಲ್ಲ, ಯಾವ ಬಗೆಯದು ಹೇಗೆ ಇರುತ್ತದೆ ಎಂದು, ಇಂದು ಸಂಜೆಗೆ ಒಂದು ರೌಂಡ್ ಜಮಾಯಿಸಿ ಬಿಡಿ.

English summary

Different Names For Your Favourite Pani Puri

Gulping one paani puri, waiting for another round I savoured them. it has differnt names in different places. panipuri golgappa phuchka and gupchup. offer a wide range of delicious North and South Indian vegetarian dishes.
X
Desktop Bottom Promotion