For Quick Alerts
ALLOW NOTIFICATIONS  
For Daily Alerts

ದ್ವೀಪಗಳ ಹಿಂದಿನ ನಿಗೂಢ ರಹಸ್ಯ-ಅನುಭವ ಮಾತ್ರ ಭಯಾನಕ!

By Arshad
|

ಕಡಲತೀರದ ಮುರ್ಡೇಶ್ವರದಿಂದ ಸಮುದ್ರದ ನಡುವೆ ನೇತ್ರಾಣಿ ಗುಡ್ಡವೆಂಬ ದ್ವೀಪವಿದೆ. ಇಂದು ಪ್ರವಾಸಿತಾಣಕ್ಕೆ ಉತ್ತಮವೆಂದು ಗುರುತಿಸಲ್ಪಟ್ಟಿರುವ ಈ ದ್ವೀಪಕ್ಕೆ ಹಿಂದೆ ಜನರು ಹೋಗಲು ಹೆದರುತ್ತಿದ್ದರು. ಏಕೆಂದರೆ ಇದು ಭೂತಗಳ ಆವಾಸಸ್ಥಾನ ಎಂಬು ನಂಬಿದ್ದು ದೈವಗಳಿಗಾಗಿ ಕುರಿ ಕೋಳಿಗಳನ್ನು ಅಲ್ಲಿಯೇ ಬಿಟ್ಟು ಬರುವ ಪರಿಪಾಠವಿತ್ತು.

ಇಂತಹದ್ದೇ ಹತ್ತು ಹಲವು ದ್ವೀಪಗಳು ಈ ಜಗತ್ತಿನಾದ್ಯಂತ ಇದ್ದು ಇಲ್ಲಿ ಭೇಟಿ ನೀಡುವುದು ಸಾವಿಗೆ ಆಹ್ವಾನ ಎಂಬ ನಂಬಿಕೆ ಇರುವುದರಿಂದ ಯಾರೂ ಈ ದ್ವೀಪಗಳತ್ತ ಹೋಗದೇ ಇರುವುದು ಇವುಗಳ ನಿಗೂಢತೆಯನ್ನು ಹೆಚ್ಚಿಸಿದೆ. ಇಂತಹ ಕೆಲವು ದ್ವೀಪಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪರಿಚಯಿಸಲಾಗುತ್ತಿದೆ..

ಬ್ರೆಜಿಲ್‌ನಲ್ಲಿರುವ ಇಲ್ಹಾ ಡೆ ಕ್ವೆಮಾಡಾ (Ilha De Queimada) ದ್ವೀಪ

ಬ್ರೆಜಿಲ್‌ನಲ್ಲಿರುವ ಇಲ್ಹಾ ಡೆ ಕ್ವೆಮಾಡಾ (Ilha De Queimada) ದ್ವೀಪ

ಬ್ರೆಜಿಲ್ ತೀರದಿಂದ ಕೊಂಚ ದೂರ ಇರುವ ಈ ದ್ವೀಪವನ್ನು ಸ್ಥಳೀಯರು ಹಾವುಗಳ ದ್ವೀಪವೆಂದೇ ಕರೆಯುತ್ತಾರೆ. ಏಕೆಂದರೆ ಈ ದ್ವೀಪದಲ್ಲಿ ಚಿನ್ನದ ಬಣ್ಣದ ಬೋತ್ರೋಪ್ಸ್ ಎಂಬ ವಿಷದ ಹಾವುಗಳು (golden lancehead vipers)(ವೈಜ್ಞಾನಿಕ ಹೆಸರು Bothrops insularis) ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಎಷ್ಟು ಎಂದರೆ ಇತ್ತೀಚಿನ ಗಣತಿಯ ಪ್ರಕಾರ ಪ್ರತಿ ಐದು ಚದರ ಮೀಟರಿಗೆ ಒಂದು ಹಾವಿದೆ.

Photo courtesy - dailybhaskar

ಬ್ರೆಜಿಲ್‌ನಲ್ಲಿರುವ ಇಲ್ಹಾ ಡೆ ಕ್ವೆಮಾಡಾ (Ilha De Queimada) ದ್ವೀಪ

ಬ್ರೆಜಿಲ್‌ನಲ್ಲಿರುವ ಇಲ್ಹಾ ಡೆ ಕ್ವೆಮಾಡಾ (Ilha De Queimada) ದ್ವೀಪ

ದ್ವೀಪಕ್ಕೆ ಭೀಟಿ ನೀಡುವವರಿಗೆ ಯಾವುದೇ ಸಮಯದಲ್ಲಿ ಕಚ್ಚುವ ಸಂಭವವಿದೆ. ಅಲ್ಲದೇ ಇದರ ವಿಷವೂ ಅತ್ಯಂತ ತೀಕ್ಷ್ಣವಾಗಿದ್ದು ಕೆಲವೇ ನಿಮಿಷದಲ್ಲಿ ಸಾವು ಸಂಭವಿಸುವ ಅಪಾಯವಿದೆ. ಈ ದ್ವೀಪದಲ್ಲಿ ಕಾಲಿಟ್ಟವರು ಹಾವಿನ ಕಡಿತಕ್ಕೊಳಗಾಗಿ ಯಾರೂ ಹಿಂದೆ ಬರದೇ ಇರುವ ಕಾರಣ ಬ್ರೆಜಿಲ್ ದೇಶದ ನೌಕಾಪಡೆ ಈ ದ್ವೀಪಕ್ಕೆ ಯಾರೂ ಕಾಲಿಡದಂತೆ ನಿಷೇಧ ಹೇರಿದೆ.

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಪೆಸಿಫಿಕ್ ಮಹಾಸಾಗರದಲ್ಲಿರುವ ಸಾವಿರಾರು ದ್ವೀಪಗಳು ವಾಸ್ತವವಾಗಿ ಸಮುದ್ರತಳದಿಂದ ಮೇಲೆದ್ದಿರುವ ಜ್ವಾಲಾಮುಖಿ ಪರ್ವತ ಶೃಂಖಲೆಯ ಎತ್ತರದ ಬೆಟ್ಟಗಳ ತುದಿಭಾಗಗಳಾಗಿವೆ ಸುಮಾರು ಮುನ್ನೂರು ಕಿಮೀ ಉದ್ದ ಇರುವ ಈ ಬೆಟ್ಟಗಳಲ್ಲಿ ಬಹುತೇಕ ನೀರಿನಡಿಯಲ್ಲಿ ಮುಳುಗಿದ್ದು ಉಳಿದವು ದ್ವೀಪಗಳಾಗಿ ಕಂಡುಬರುತ್ತವೆ. ಜಪಾನ್ ಬಳಿ ಇರುವ ಮಿಯಾಕೆಜಿಮಾ ಸಹಾ ಇಂತಹದ್ದೇ ಒಂದು ದ್ವೀಪವಾಗಿದೆ.

Image courtesy-www.weltrekordreise.ch

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಆದರೆ ಇದು ಒಂದು ಸಕ್ರಿಯವಾದ ಜ್ವಾಲಾಮುಖಿಯಾಗಿದ್ದು ಸತತವಾಗಿ ನೆಲದೊಡಲಿನಿಂದ ಜ್ವಾಲೆಯನ್ನು ಉಗುಳುತ್ತದೆ. ಕಳೆದ ಶತಮಾನದಲ್ಲಿ ಇದು ಆರು ಬಾರಿ ಉಗ್ರರೂಪ ಪಡೆದಿದೆ. ಬರೆಯ ಜ್ವಾಲಾಮುಖಿಯ ದ್ರವ ಹೊರಬಂದರೆ ತೊಂದರೆಯಿರಲಿಲ್ಲ.

Image courtesy- www.weltrekordreise.ch

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಆದರೆ ಇದರೊಂದಿಗೆ ನೆಲದಿಂದ ಗಂಧಕವೇ ಹೆಚ್ಚಿರುವ ವಿಷಾನಿಲ ಹೊರಸೂಸುತ್ತಾ ದ್ವೀಪವನ್ನು ಆವರಿಸುತ್ತದೆ. ಈ ವಿಷಾನಿಲವನ್ನು ಸೇವಿಸಿದವರಲ್ಲಿ ಹೊಟ್ಟೆಯಲ್ಲಿ ಅತೀವವಾದ ಆಮ್ಲೀಯತೆ, ಹೊಟ್ಟೆಯುರಿ, ಚರ್ಮದಲ್ಲಿ ತುರಿಕೆ, ಬೊಕ್ಕೆಗಳೇಳುವುದು ಮೊದಲಾದ ತೊಂದರೆ ಉಂಟಾಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಸಾವು ಸಹಾ ಸಂಭವಿಸಬಹುದು. 2000ನೇ ಇಸವಿಯಲ್ಲಿ ಈ ವಾಯು ಅತ್ಯಂತ ವಿಷಯುಕ್ತವಾದುದರ ಕಾರಣ ಅಲ್ಲಿನ ನಿವಾಸಿಗಳನ್ನೆಲ್ಲಾ ಗುಳೆ ಎಬ್ಬಿಸಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

Image courtesy- www.weltrekordreise.ch

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಜಪಾನ್‌ನಲ್ಲಿರುವ ಮಿಯಾಕೆಜಿಮಾ ದ್ವೀಪ

ಐದು ವರ್ಷದ ಬಳಿಕ ಅವರಲ್ಲಿ ಕೆಲವರು ಹಿಂದಿರುಗಿದರೂ ಇವರೆಲ್ಲಾ ಕಡ್ಡಾಯವಾಗಿ ಗ್ಯಾಸ್ ಮುಖವಾಡಗಳನ್ನು ಹೊತ್ತುಕೊಂಡೇ ತಿರುಗಬೇಕಾಗುತ್ತದೆ. ಏಕೆಂದರೆ ಅನಿರೀಕ್ಷಿತವಾಗಿ ಯಾವಾಗ ವಿಷಾನಿಲ ಹೆಚ್ಚುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಆದ್ದರಿಂದ ಇಲ್ಲಿ ಭೇಟಿ ಕೊಡಲು ಜನರು ಹೆದರುತ್ತಾರೆ.

Image courtesy- daily bhaskar

ಸಾಬಾ ನೆದರ್ಲ್ಯಾಂಡ್ಸ್ ಅಂಟಿಲೆಸ್

ಸಾಬಾ ನೆದರ್ಲ್ಯಾಂಡ್ಸ್ ಅಂಟಿಲೆಸ್

ನೆದರ್ಲ್ಯಾಂಡ್ ದೇಶದ ಸಾಗರದಲ್ಲಿರುವ ಸಾಬಾ ದ್ವೀಪ ವಾಸ್ತವವಾಗಿ ಸಮುದ್ರದಾಳದಿಂದ ಮೇಲೆದ್ದ ಮೌಂಟ್ ಸೀನರಿ ಎಂಬ ಜ್ವಾಲಾಮುಖಿಯ ತುದಿಯಭಾಗವಾಗಿದೆ. ಕೇವಲ ಹದಿಮೂರು ಚದರ ಕಿ.ಮೀ ವಿಸ್ತಾರವಿರುವ ಈ ಪುಟ್ಟ ದ್ವೀಪಕ್ಕೆ ಸತತವಾಗಿ ಚಂಡಮಾರುತಗಳು ಅಪ್ಪಳಿಸುತ್ತಿರುತ್ತವೆ.

Image courtesy

ಸಾಬಾ ನೆದರ್ಲ್ಯಾಂಡ್ಸ್ ಅಂಟಿಲೆಸ್

ಸಾಬಾ ನೆದರ್ಲ್ಯಾಂಡ್ಸ್ ಅಂಟಿಲೆಸ್

ಕೇವಲ ಎರಡು ಸಾವಿರದಷ್ಟಿರುವ ಈ ದ್ವೀಪದಲ್ಲಿ Saba University School of Medicine ಎಂಬ ವೈದ್ಯಕೀಯ ಕಾಲೇಜು ಬಿಟ್ಟರೆ ಪ್ರವಾಸೋದ್ಯಮವೇ ಆದಾಯಮೂಲ. ಇಲ್ಲಿ ಅಪ್ಪಳಿಸುವ ಚಂಡಮಾರುಗಳನ್ನು ಅನುಭವಿಸಲೆಂದೇ ಪ್ರವಾಸಿಗರನ್ನು ಆಕರ್ಷಿಸಲು ರಾಜಧಾನಿ 'ದ ಬಾಟಂ' ಸಜ್ಜಾಗಿದೆ. ಉಳಿದಂತೆ ಚಂಡಮಾರುತದಿಂದ ದೂರ ಉಳಿಯಬಯಸುವ ಸಾಮಾನ್ಯ ಜನರು ಈ ದ್ವೀಪದಿಂದಲೂ ದೂರವೇ ಉಳಿಯುತ್ತಾರೆ.

Image courtesy- Daily bhaskar

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

19854ರಲ್ಲಿ ಅಮೇರಿಕಾ ಸರ್ಕಾರ ಬಿಕಿನಿ ಎಂಬ ದ್ವೀಪದ ಮೇಲೆ ಪರೀಕ್ಷಾರ್ಥವಾಗಿ ಅಣುಬಾಂಬನ್ನು ಹಾಕಿ ಸುಂದರವಾಗಿದ್ದ ದ್ವೀಪವನ್ನು ಧ್ವಂಸಗೊಳಿಸಿತ್ತು. ಈ ಘಟನೆಗೆ ಅರವತ್ತು ವರ್ಷಗಳೇ ಕಳೆದರೂ ಜನರು ಇನ್ನೂ ಅಲ್ಲಿ ಅಣುವಿಕಿರಣವಿರಬಹುದೆಂಬ ಭಯದಿಂದ ಹತ್ತಿರ ಹೋಗಲೂ ನಿರಾಕರಿಸುತ್ತಾರೆ.

Image courtesy- guardianlv.com

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

ಆದರೆ ಅಣುಬಾಂಬಿನ ಧಾಳಿಯ ಬಳಿಕ ಭೇಟಿ ನೀಡಿದವರಿಗೆ ಇಲಿಯ ಹೆಜ್ಜೆಗಳು ಧೂಳಿನಲ್ಲಿ ಮೂಡಿದ್ದುದು ಅಚ್ಚರಿ ಮೂಡಿಸಿದೆ. 1946 ರಿಂದ 1954ರವರೆಗೆ ಈ ಪುಟ್ಟ ದ್ವೀಪದ ನಿವಾಸಿಗಳನ್ನು ಬೇರೊಂದು ದ್ವೀಪಕ್ಕೆ (ರಾಂಗೆರಿಕ್ ಅಟಾಲ್) ಸ್ಥಳಾಂತರಿಸಿದ ಬಳಿಕ ಹಲವು ಅಣುಬಾಂಬುಗಳನ್ನು ಪರೀಕ್ಷಿಸಿದೆ.

Image courtesy- myinterestingfacts.com

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

1946ರ ಜುಲೈ 1 ಮತ್ತು ಜುಲೈ 25ರಂದು ಆಪರೇಶನ್ ಕ್ರಾಸ್ ರೋಡ್ಸ್ ಎಂಬ ರಣತಂತ್ರದ ಮೂಲಕ ಈ ದ್ವೀಪದ ಮೇಲೆ ಧಾಳಿ ನಡೆಸಿ ಪಡೆದ ಬಳಿಕ 1946 ರ ಆಗಸ್ಟ್ 6 ರಂದು ಜಪಾನಿನ ಹಿರೋಷಿಮಾ ನಗರದ ಮೇಲೆ ಪ್ರಥಮ ಅಣುಬಾಂಬ್ ಹಾಕಲಾಯಿತು.

Image courtesy- traveltoanewcountry.com

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

ಮಾರ್ಷಲ್ ದ್ವೀಪಗಳಲ್ಲಿರುವ ಬಿಕಿನಿ ಅಟಾಲ್

ಇತಿಹಾಸದ ಅತ್ಯಂತ ಭಯಾನಕ ಧಾಳಿಗೆ ಬಿಕಿನಿ ದ್ವೀಪದ ಧಾಳಿಯೇ ಮೂಲ ಎಂಬ ನಂಬಿಕೆಯಿಂದ ಈ ದ್ವೀಪವನ್ನು ಶಾಪಗ್ರಸ್ಥವೆಂದೂ ಸ್ಥಳೀಯರು ನಂಬುತ್ತಾರೆ.

Image courtesy- myinterestingfacts.com

English summary

Deadly islands people are always scared to visit

There are some places on earth from where it is impossible for humans to go. One such place is an island where no one dares to go, because going there means inviting death.
X
Desktop Bottom Promotion