For Quick Alerts
ALLOW NOTIFICATIONS  
For Daily Alerts

ಪತ್ನಿಯರಿಗಿಂತಲೂ ವಯಸ್ಸಿನಲ್ಲಿ ಕಿರಿಯರಾಗಿರುವ ಸೆಲೆಬ್ರಿಟಿಗಳು

By Super
|

ವಯಸ್ಸೆಂಬುದು ಶರೀರಕ್ಕಿಂತ ಹೆಚ್ಚು ಮಾನಸಿಕವಾಗಿದೆ ಎಂದು ಮಾರ್ಕ್ ಟ್ವೈನ್ ಹೇಳಿದ್ದಾನೆ. ಆದ್ದರಿಂದ ಮಾನಸಿಕವಾಗಿ ಚುರುಕಾಗಿರುವವರು ಯಾವುದೇ ವಯಸ್ಸಿನಲ್ಲಿ, ಯಾವುದೇ ಶಾರೀರಿಕ ತೊಂದರೆಗಳಿದ್ದರ ತಮ್ಮ ವಿಚಾರಗಳಿಂದ ತರುಣರಾಗಿಯೇ ಇರುತ್ತಾರೆ. ಇದಕ್ಕೆ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಂಕಿಂಗ್‌ಗಿಂತ ಇನ್ನೊಂದು ಉದಾಹರಣೆ ಇನ್ನೊಂದಿರಲಿಕ್ಕಿಲ್ಲ.

ಸಾಮಾನ್ಯವಾಗಿ ವಿವಾಹಗಳಲ್ಲಿ ಪತಿಯ ವಯಸ್ಸು ಪತ್ನಿಗಿಂತ ಕೊಂಚ ಹೆಚ್ಚಿರುತ್ತದೆ. ಸಂಸಾರದ ನೊಗವನ್ನು ಸಮರ್ಥವಾಗಿ ಹೊರಲು ಇದು ಸಮರ್ಪಕವೆಂದು ಸಮಾಜವೇ ನಿರ್ಮಿಸಿಕೊಂಡ ವ್ಯವಸ್ಥೆ ಶತಮಾನಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ವಯಸ್ಸಾದರೂ ಲವಲವಿಕೆ ಕಳೆದುಕೊಳ್ಳದ ಸೆಲೆಬ್ರಿಟಿಗಳು

ಖ್ಯಾತನಾಮರೂ ಇದಕ್ಕೆ ಹೊರತಲ್ಲ. ಅದರಲ್ಲೂ ಕೆಲವು ಹಿರಿಯ ನಟರು ತಮ್ಮ ಅರ್ಧವಯಸ್ಸಿನ ತರುಣಿಯರೊಂದಿಗೆ ಲಲ್ಲೆ ಹೊಡೆಯುತ್ತಿರುತ್ತಾರೆ. ಆದರೆ ಕೆಲವರು ನಿಜವಾದ ಪ್ರೀತಿಗೆ ಶರಣಾಗಿ ವಯಸ್ಸಿನ ಅಂತರವನ್ನೂ ಲೆಕ್ಕಿಸದೇ ಮನಮೆಚ್ಚಿದವರನ್ನೇ ಮಡದಿಯಾಗಿಸಿಕೊಂಡಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು ಪ್ರೀತಿಸಲು ವಯಸ್ಸಿನ ಮಿತಿಗಳು ಅಗತ್ಯವಿರುವ ಕಟ್ಟೆಯನ್ನು ಒಡೆದಿದೆ. ಇಂದು ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಖ್ಯಾತರು ತಮಗಿಂತಲೂ ಹಿರಿಯ ವಯಸ್ಸಿನವರನ್ನು ಜೀವನಸಂಗಾತಿಯಾಗಿ ಆಯ್ದುಕೊಂಡು ಸುಖದಾಂಪತ್ಯ ನಡೆಸುತ್ತಿದ್ದಾರೆ. ಇಂದು ಇಂತಹ ಕೆಲವು ಜೋಡಿಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಮಾಹಿತಿಗಳನ್ನು ನೋಡೋಣ: ವಿಚ್ಛೇದನ ಪಡೆದ ಪುರುಷರನ್ನು ವರಿಸಿದ ಖ್ಯಾತ ತಾರೆಯರು

ಅಭಿಶೇಖ್ ಬಚ್ಚನ್

ಅಭಿಶೇಖ್ ಬಚ್ಚನ್

ಈ ನಿಟ್ಟಿನಲ್ಲಿ ಖ್ಯಾತ ನಟ ಅಮಿತಾಭ್ ಬಚ್ಚನ್ ರವರ ಪುತ್ರ ಅಭಿಶೇಖ್ ಬಚ್ಚನ್ ಮತ್ತು ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ರವರದ್ದು ಉತ್ತಮ ಉದಾಹರಣೆಯಾಗಿದೆ. ಐಶ್ವರ್ಯಾರಿಗಿಂತಲೂ ಎರಡು ವರ್ಷ ಕಿರಿಯರಾಗಿರುವ ಅಭಿಶೇಖ್ 2007ರಲ್ಲಿ ವಿವಾಹವಾಗಿದ್ದು ಇಂದು ಈ ದಂಪತಿಗೆ ಒಂದು ಹೆಣ್ಣು ಮಗುವಿದೆ. (ಆರಾಧ್ಯ ಬಚ್ಚನ್)

ಫರ್ಹಾನ್ ಅಖ್ತರ್

ಫರ್ಹಾನ್ ಅಖ್ತರ್

ಪ್ರತಿಭಾನ್ವಿತ ಯುವ ನಿರ್ದೇಶಕ, ಗಾಯಕ ಮತ್ತು ನಟ ಫರ್ಹಾನ್ ಅಖ್ತರ್ ರವರೂ ತಮಗಿಂತ ಆರು ವರ್ಷ ಹಿರಿಯರಾದ ಅಧೂನಾ ಭಬಾನಿಯವರನ್ನು ವಿವಾಹವಾಗಿದ್ದಾರೆ. 2000 ಇಸವಿಯಲ್ಲಿ ದಿಲ್ ಚಾಹ್ತಾ ಹೈ ಎಂಬ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಚಿತ್ರಕಥೆ ಬರೆಯುವ ಸಮಯದಲ್ಲಿ ಆದ ಪರಿಚಯ ಪ್ರಣಯಕ್ಕೆ ತಿರುಗಿ ಬಳಿಕ ಇದೇ ವರ್ಷ ವಿವಾಹವಾದರು. ಇಂದು ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. (ಅಕಿಯಾ ಅಖ್ತರ್, ಶಾಕ್ಯಾ ಅಖ್ತರ್)

ಆದಿತ್ಯ ಪಂಚೋಲಿ

ಆದಿತ್ಯ ಪಂಚೋಲಿ

ಹಿಂದಿ ಚಿತ್ರನಟ ಆದಿತ್ಯ ಪಂಚೋಲಿಯವರೂ ತಮಗಿಂತ ಆರು ವರ್ಷ ಹಿರಿಯರಾದ ಜ಼ರೀನಾರನ್ನು ವರಿಸಿದ್ದು ಈ ವಿವಾಹಕ್ಕೆ ತಮ್ಮ ಕುಟುಂಬಗಳು ಸಹಕರಿಸಿವೆ ಎಂದು ತಿಳಿಸಿದ್ದಾರೆ. ತಮ್ಮಿಬ್ಬರನ್ನು ವಿಧಿಯೇ ಒಂದುಗೂಡಿಸಿದ್ದು ಎಂದು ಅವರ ಪತ್ನಿ ನಂಬುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆದಿತ್ಯ ಪಂಚೋಲಿ

ಆದಿತ್ಯ ಪಂಚೋಲಿ

ಸಾಮಾನ್ಯವಾಗಿ ಎಲ್ಲಾ ಪತಿ ಪತ್ನಿಯರ ನಡುವೆ ಇರುವ ಜಗಳವನ್ನೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ಮಾಧ್ಯಮಗಳ ಕುಹಕ ವರದಿಗಳ ಹೊರತಾಗಿಯೂ ಕಳೆದ ಇಪ್ಪತ್ತೇಳು ವರ್ಷಗಳಿಂದ ಸುಖದಾಂಪತ್ಯ ನಡೆಸುತ್ತಿದ್ದಾರೆ.

ರಾಜ್ ಕುಂದ್ರಾ

ರಾಜ್ ಕುಂದ್ರಾ

ಐಪಿಎಲ್ ಕ್ರಿಕೆಟ್‌ನ ಸಹ ಪ್ರಾಯೋಜಕರಾದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯವರ ವಿವಾಹ 2009 ರಲ್ಲಿ ಆಗಿತ್ತು. ಅಂದು ಎಸ್ ಟೂ (S2) ಎಂಬ ಸುಗಂಧದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. ಶೀಘ್ರದಲ್ಲಿಯೇ ತಮಗಿಂತಲೂ ಮೂರು ತಿಂಗಳು ಹಿರಿಯರಾದ ಶಿಲ್ಪಾರನ್ನು ವರಿಸಿದರು. ಇಂದು ಈ ದಂಪತಿಗೆ ವಿಯಾನ್ ರಾಜ್ ಕುಂದ್ರಾ ಎಂಬ ಪುತ್ರನಿದ್ದಾನೆ.(ಜನನ ಮೇ 21, 2012)

ಸೈಫ್ ಆಲಿ ಖಾನ್

ಸೈಫ್ ಆಲಿ ಖಾನ್

ಸೈಫ್ ಆಲಿ ಖಾನ್ ರವರ ಪ್ರಥಮ ಪತ್ನಿ ಅಮೃತಾ ಸಿಂಗ್ ರವರು ಸೈಫ್ ರಿಂಗಿಂತಲೂ ಹನ್ನೆರಡು ವರ್ಷ ಹಿರಿಯರಾಗಿದ್ದರು. 2004ರಲ್ಲಿ ಆದ ವಿಚ್ಛೇದನಕ್ಕೂ ಮುನ್ನ ಅವರು ಹದಿಮೂರು ವರ್ಷಗಳನ್ನು ಜೊತೆಯಾಗಿ ಕಳೆದಿದ್ದರು. ಈ ಅವಧಿಯಲ್ಲಿ ಇವರಿಗೆ ಇಬ್ಬರು ಮಕ್ಕಳಾಗಿವೆ. (ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್)

ಶಿರೀಶ್ ಕುಂದರ್

ಶಿರೀಶ್ ಕುಂದರ್

ಕುಛ್ ತೋ ಹೋತಾ ಹೈ, ತೇಜಾಬ್ ಮೊದಲಾದ ಚಿತ್ರಗಳಲ್ಲಿ ನಾಯಕಿಯನ್ನು ಕುಣಿಸಿದ ಖ್ಯಾತ ನೃತ್ಯ ನಿರ್ದೇಶಕಿ ಫರ್ಹಾ ಖಾನ್ ರವರು ತಮ್ಮ ಪತಿ ಶಿರೀಶ್ ಕುಂದರ್ ರವರಿಗಿಂತ ಎಂಟು ವರ್ಷ ಹಿರಿಯರಾಗಿದ್ದಾರೆ. ಶಿರೀಶ್ ರವರು ಚಿತ್ರ ನಿರ್ದೇಶಕ ಮತ್ತು ಸಂಕಲನಕಾರರಾಗಿದ್ದರೂ ಅವರ ಚಿತ್ರಗಳು ಹೆಚ್ಚೇನೂ ನಡೆಯಲಿಲ್ಲ. ಅದರಲ್ಲೂ ಅವರ ಮಹತ್ವಾಕಾಂಕ್ಷೆಯ ಜೋಕರ್ ಚಿತ್ರ ಇನ್ನಿಲ್ಲದಂತೆ ನೆಲಕಚ್ಚಿದೆ.

ಫರ್ಹಾ ಖಾನ್

ಫರ್ಹಾ ಖಾನ್

ಆದರೆ ಫರ್ಹಾ ಖಾನ್ ರವರೇ ನಿರ್ದೇಶಿಸಿದ ಮೈ ಹೂಂ ನಾ ಎಂಬ ಚಿತ್ರದಲ್ಲಿ ಶಿರೀಶ್ ಸಂಕಲನಕಾರರಾಗಿದ್ದರು. ಈ ಸಮಯದಲ್ಲಿ ಆದ ಸ್ನೇಹ ಪ್ರಣಯಕ್ಕೆ ತಿರುಗಿ ಸಮಾಜದ ವಿರೋಧವನ್ನೂ ಲೆಕ್ಕಿಸದೆ ಬಳಿಕ 9ನೇ ಡಿಸೆಂಬರ್ 2004ರಂದು ವಿವಾಹವಾದರು.

ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸ್ಸಿಯಾ

ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸ್ಸಿಯಾ

ತಮಗಿಂತಲೂ ಎರಡು ವರ್ಷ ಹಿರಿಯರಾದ ಸುಪರ್ ಮಾಡೆಲ್ ಮೆಹರ್ ಜೆಸ್ಸಿಯಾರವರನ್ನು 1998ರಲ್ಲಿ ವಿವಾಹವಾದ ಇಷ್ಟು ವರ್ಷಗಳ ಬಳಿಕವೂ ಇಬ್ಬರೂ ಈಗ ತಾನೇ ಮದುವೆಯಾದ ಜೋಡಿಯಂತಿದ್ದಾರೆ. ಈ ದಂಪತಿಗಳಿಗೆ ಮೈರಾ ರಾಂಪಾಲ್, ಮಾಹಿಕಾ ರಾಂಪಾಲ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಕುನಾಲ್ ಖೇಮು ಮತ್ತು ಸೋಹಾ ಅಲಿ ಖಾನ್

ಕುನಾಲ್ ಖೇಮು ಮತ್ತು ಸೋಹಾ ಅಲಿ ಖಾನ್

ಗೋ, ಗೋವಾ, ಗಾನ್ ಎಂಬ ಚಿತ್ರದ ನಿರ್ದೇಶಕರಾದ ಕುನಾಲ್ ಖೇಮುರವರು ತಮಗಿಂತ ಐದು ವರ್ಷ ಹಿರಿಯರಾದ ಸೋಹಾ ಅಲಿ ಖಾನ್ ರವನ್ನು ವಿವಾಹವಾಗಿದ್ದಾರೆ. 2009ರಲ್ಲಿ ಧೂಂಡ್ತೇ ರೆಹ್ ಜಾವೋಗೇ ಎಂಬ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ದಾಗ ಪ್ರೇಮಾಂಕುರವಾಗಿತ್ತು. ಅಂದಿನ ಬಳಿಕ 2013ರ ವರೆಗೂ ಪ್ರೀತಿಯ ವಿನಿಮಯದಲ್ಲಿಯೇ ಸಮಯ ಕಡೆದು ಬಳಿಕ ಎರಡು ವರ್ಷಗಳ ವರೆಗೆ ವಿವಾಹದ ಹೊರತಾದ ಲಿವ್ ಇನ್ ರಿಲೇಶನ್ ಎಂಬ ಸಂಬಂಧದಲ್ಲಿದ್ದರು. ಬಳಿಕ ಕುಣಾಲ್‌ರವರು ಸೋಹಾರವರನ್ನು 2014ರಲ್ಲಿ ಪ್ಯಾರಿಸ್‌ನಲ್ಲಿ ವಿವಾಹಕ್ಕೆ ಆಮಂತ್ರಣ ನೀಡಿದರು. ಇದನ್ನು ಸ್ವೀಕರಿಸಿ ತಮ್ಮ ಸಮ್ಮತಿಯನ್ನು ಸೂಚಿಸಿದರು. ಬಳಿಕ ಅವರು 2015ರ ಜನವರಿ 25ರಂದು ವಿವಾಹವಾದರು.



English summary

Celebrities Who Are Younger Than Their Wives

Bollywood celebs are setting the right example in this context. Be it huge or little, age difference has never come in the way of romance of these Bollywood couples. Here is a look at some of the most successful couples, who took the plunge and got married despite their age differences:
X
Desktop Bottom Promotion