For Quick Alerts
ALLOW NOTIFICATIONS  
For Daily Alerts

ಹುಬ್ಬೇರಿಸುವಂತೆ ಮಾಡುವ ವಿಶ್ವದ ಆಸಕ್ತಿಕರ ಸಂಗತಿಗಳು

By Deepu
|

ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳು ಈ ಜಗತ್ತಿನಲ್ಲಿದೆ. ಹೆಚ್ಚಿನ ಪ್ರಯಾಣ, ಓದು, ಹುಡುಕಾಡುವಿಕೆ ಮತ್ತು ಆಲಿಸುವಿಕೆಯಿಂದ ಈ ಅಂಶಗಳು ನಮಗೆ ತಿಳಿದು ಬರುತ್ತದೆ. ನಾವು ಎಷ್ಟೇ ಬುದ್ಧಿವಂತರಾಗಿದ್ದರೂ ಕೂಡ ನಮ್ಮನ್ನು ಸೋಜಿಗಪಡಿಸುವ ಹಲವಾರು ಅಂಶಗಳು ನಮ್ಮ ಪರಿಸರದಲ್ಲಿ ಇದೆ ಎಂಬುದನ್ನು ನೀವು ಮನಗಾಣಬೇಕು. ವೇದಶಾಸ್ತ್ರಗಳು, ಇತಿಹಾಸಗಳು, ಹಿರಿಯರ ಅನುಭದ ಮಾತುಗಳು ಹೀಗೆ ಎಷ್ಟೆಷ್ಟೋ ಜೀವನ ಮೌಲ್ಯಗಳನ್ನು ನಮಗೆ ಅಗಾಧವಾಗಿ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದಲೇ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ನಾಣ್ಣುಡಿ ಇರುವುದು.

ಇಂದಿನ ಲೇಖನದಲ್ಲಿ ನಿಮ್ಮನ್ನು ಸೋಜಿಗಪಡಿಸುವ ಕೆಲವೊಂದು ವಿಶ್ವದ ಆಸಕ್ತಿಕರ ಅಂಶಗಳನ್ನು ತಿಳಿಯಪಡಿಸುತ್ತಿದ್ದು ಈ ಸೋಜಿಗ ನಿಮ್ಮನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಈ ಅಂಶಗಳನ್ನು ನಾವು ಏಕೆ ತಿಳಿದುಕೊಂಡಿರಬೇಕು ಎಂಬುದೂ ಇದರಿಂದ ನಿಮಗೆ ತಿಳಿದುಕೊಳ್ಳಬಹುದಾಗಿದೆ. ಹಾಗಿದ್ದರೆ ತಡಮಾಡದೇ ಕೆಳಗಿನ ಸ್ಲೈಡರ್‏ಗಳಲ್ಲಿ ನಾವು ನೀಡುತ್ತಿರುವ ವಿಶ್ವದ ಅತ್ಯದ್ಭುತ ಅಂಶಗಳನ್ನು ಅರಿತುಕೊಳ್ಳಿ...

ಮರಗೆಣಸು

ಮರಗೆಣಸು

ಕೇರಳದವರಿಗೆ ಅತ್ಯಂತ ಪ್ರಿಯವಾದ ಈ ಗೆಣಸಿಗೆ ಬೇರುಗೆಣಸು ಎಂದೂ ಕರೆಯುತ್ತಾರೆ. ಇದನ್ನು ಬೇಯಿಸಿ ತಿಂದರೆ ಏನೂ ಅಪಾಯವಿಲ್ಲ, ಆದರೆ ಹಸಿಯಾಗಿ ತಿಂದರೆ ಇದರ ಒಂದು ಕಿಣ್ವ ಸಯನೈಡ್ ನಂತೆ ಪರಿವರ್ತಿತವಾಗಿ ಆರೋಗ್ಯಕ್ಕೆ ಮಾರಕವಾಗುತ್ತದೆ.

ದೇಹದ ಬಲವಾದ ಸ್ನಾಯು ನಾಲಗೆ

ದೇಹದ ಬಲವಾದ ಸ್ನಾಯು ನಾಲಗೆ

ನಾಲಗೆಯ ಗಾತ್ರವನ್ನು ಅಂದಾಜಿಸಿ ದೇಹದ ಬಲವಾದ ಸ್ನಾಯುವೆಂದು ವಿಕಿಪೀಡಿಯಾ ನಾಲಗೆಯನ್ನು ಕರೆದಿದೆ. ಕೆಲವೊಮ್ಮೆ ಹೃದಯವು ಬಲವಾದ ಭಾಗವೆಂದು ಪರಿಗಣಿತವಾದರೂ ಗಾತ್ರ ಮತ್ತು ಸ್ನಾಯು ಸಾಂದ್ರತೆಗೆ ಹೋಲಿಸಿದಾಗ ಬಲಹೀನ ಎಂದೆನಿಸಿದೆ.

ಜಪಾನ್ ದೇಶದಲ್ಲಿ ಮಂಗಗಳೇ ಸಪ್ಲೈರ್

ಜಪಾನ್ ದೇಶದಲ್ಲಿ ಮಂಗಗಳೇ ಸಪ್ಲೈರ್

ಜಪಾನ್ ನಾಗರಿಕರು ಬುದ್ಧಿವಂತಿಕೆಗೆ ಹೆಸರುವಾಸಿ. ಆದರೆ ಜಪಾನ್ ದೇಶದ ಪ್ರಾಣಿಗಳು? ಈ ಹೋಟೆಲಿಗೆ ಬಂದರೆ ಈ ವಿಷಯವೂ ಕೊಂಚ ಮಟ್ಟಿಗೆ ನಿಜ ಎಂದು ಕಂಡುಬರುತ್ತದೆ. ಏಕೆಂದರೆ ಈ ಹೋಟೆಲಿನಲ್ಲಿ ಅಡುಗೆ ಬಡಿಸುವವರು ಮಾನವರಲ್ಲ, ಮಂಗಗಳು. ಉಟ್ಸೋನೊಮಿಯಾ ಎಂಬ ನಗರದಲ್ಲಿರುವ ಈ ಹೋಟೆಲಿನಲ್ಲಿ ಮಂಗಗಳು ಗ್ರಾಹಕರಿಗೆ ಅಡುಗೆಯನ್ನು ಬಡಿಸುತ್ತವೆ. ಕಾವೋರು ಒಟ್ಸುಕಾ (Kaoru Otsuka) ಎಂಬುವರಿಗೆ ಸೇರಿದ ಈ ಹೋಟೆಲಿನಲ್ಲಿ ಅವರು ತರಬೇತಿ ನೀಡಿದ ಎರಡು ಮಕಾವ್ ಮಂಗಗಳಲ್ಲಿ ಮೊದಲನೆಯದು ಗ್ರಾಹಕರು ಆರ್ಡರ್ ನೀಡಿದ ಪಾನೀಯ ಮತ್ತು ಆಹಾರವನ್ನು ಅಡುಗೆ ಕೋಣೆಯಿಂದ ಮೇಜಿನವರೆಗೆ ತಂದು ಇರಿಸಿದರೆ ಎರಡನೆಯ ಮಂಗ ಗ್ರಾಹಕರಿಗೆ ಊಟಕ್ಕೂ ಮೊದಲು ಕೈ ಒರೆಸಿಕೊಳ್ಳಲು ಬಿಸಿನೀರಿನಲ್ಲಿ ಅದ್ದಿದ ಬಟ್ಟೆಯನ್ನು ನೀಡುವ ಮತ್ತು ಬಳಿಕ ಹಿಂದೆ ಪಡೆದುಕೊಳ್ಳುವ ಕೆಲಸವನ್ನು ನಿರ್ವಹಿಸುತ್ತದೆ. ಈ ಸೇವೆಯನ್ನು ಪಡೆಯಲೆಂದೇ ಗ್ರಾಹಕರು ಈ ಹೋಟೆಲಿಗೆ ಮುಗಿಬೀಳುತ್ತಾರೆ.

ಮೊಳಕೆ ಬರಿಸಿದ ಕಾಳುಗಳು

ಮೊಳಕೆ ಬರಿಸಿದ ಕಾಳುಗಳು

ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕರ ಎಂದು ನಂಬಿದ್ದ ನಮಗೆ ಆಘಾತಕಾರಿ ಸುದ್ದಿ ಬಂದಿದೆ. ಜರ್ಮನಿಯಲ್ಲಿ ಮೊಳಕೆ ಬರಿಸಿದ ಬೀನ್ಸ್ ಕಾಳುಗಳ ಮೂಲಕ ಮಾರಕವಾದ ಈ ಕೊಲೈ ( E coli) ಎಂಬ ಬ್ಯಾಕ್ಟೀರಿಯಾ ಸಾಂಕ್ರಾಮಿಕವಾಗಿ ಹರಡಿದ ಘಟನೆ ವರದಿಯಾಗಿದೆ. ಆ ಪ್ರಾಂತ್ಯದಲ್ಲಿ ಹಲವು ಸಾವು ಮತ್ತು ಕಾಯಿಲೆಗಳಿಗೆ ಈ ಬ್ಯಾಕ್ಟೀರಿಯಾ ಕಾರಣವಾಯಿತು. ಕೂಲಂಕುಶ ತನಿಖೆಯಿಂದ ಬೀನ್ಸ್ ಕಾಳುಗಳ ಮೊಳಕೆಯಲ್ಲಿ ಇದರ ಮೂಲ ಪತ್ತೆಯಾಯಿತು.

ಚೀರುವ ಶಕ್ತಿಯಲ್ಲಿ ಕಾಫಿ ತಯಾರಿ..!

ಚೀರುವ ಶಕ್ತಿಯಲ್ಲಿ ಕಾಫಿ ತಯಾರಿ..!

ನಿಮ್ಮ ಚೀರುವಿಕೆಯ ಶಕ್ತಿಯನ್ನು ಬಳಸಿ ಒಂದು ಕಪ್ ಕಾಫಿಯನ್ನು ತಯಾರಿಸಿಕೊಳ್ಳಬಹುದಂತೆ. ಅಂದರೆ ಅಷ್ಟು ಶಕ್ತಿ ವಿನಿಯೋಗಿಸಿ ನೀವು ಚೀರಾಡುತ್ತೀರಿ...!

ಹಲ್ಲುಜ್ಜುವ ಬ್ರಶ್ ಅನ್ನು ಟಾಯ್ಲೆಟ್‎ನಿಂದ ದೂರವಿರಿಸಿ

ಹಲ್ಲುಜ್ಜುವ ಬ್ರಶ್ ಅನ್ನು ಟಾಯ್ಲೆಟ್‎ನಿಂದ ದೂರವಿರಿಸಿ

ನಿಮ್ಮ ಆರೋಗ್ಯವನ್ನು ಅತ್ಯುತ್ತಮವಾಗಿರಿಸಲು ಮತ್ತು ಕೆಟ್ಟ ಕೀಟಾಣುಗಳಿಂದ ರಕ್ಷಣೆ ಪಡೆಯಲು ಟಾಯ್ಲೆಟ್‌‎ನಿಂದ ನಿಮ್ಮ ಬ್ರಶ್ ಅನ್ನು 6 ಫೀಟ್ ಅಂತರದಲ್ಲಿ ಇರಿಸಿಕೊಳ್ಳಿ ಎಂಬುದು ದಂತ ವೈದ್ಯರ ಸಲಹೆಯಾಗಿದೆ. ಹಾಗಾಗಿ ಪ್ರತಿಬಾರಿ ಹಲ್ಲುಜ್ಜಿದ ಬಳಿಕ ಕೂದಲುಗಳನ್ನು ಕೊಂಚ ಬಿಸಿನೀರಿನಿಂದ ತೊಳೆದು ನೀರಿನ ಪಸೆ ಹಾರಿಹೋಗುವಂತೆ ಬೆರಳುಗಳಿಂದ ನಾಲ್ಕಾರು ಬಾರಿ ಮೀಟಬೇಕು. ಬಳಿಕ ತೇವಾಂಶವಿರದ ಸ್ಥಳದಲ್ಲಿ ಇರಿಸಬೇಕು. ಶೌಚಾಲಯದಲ್ಲಿ ಇರಿಸದೇ ಇದ್ದಷ್ಟೂ ಉತ್ತಮ.

ಜೀವನದ ವ್ಯಾಖ್ಯಾನ

ಜೀವನದ ವ್ಯಾಖ್ಯಾನ

ಭವಿಷ್ಯದಲ್ಲಿ ಮುಂದೇನಾಗಬಹುದು ಎಂಬ ಕಲ್ಪನೆ ಯಾರಿಗೂ ಇರುವುದಿಲ್ಲ. ನೀವು ಯಾವುದಾದರೂ ಹೊಸ ಯೋಜನೆಯನ್ನು ಯೋಜಿಸುತ್ತಿರುವ ಸಂದರ್ಭದಲ್ಲಿ ಅಂದರೆ ಹೊಸದೊಂದು ನಿಮ್ಮ ಜೀವನದಲ್ಲಿ ಘಟಿಸುತ್ತದೆ ಎಂಬುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯೋಜನೆಗಳು ಪ್ರೌಢ ಮತ್ತು ಉತ್ತಮ ಭವಿಷ್ಯವನ್ನು ನೀಡುವುದಿಲ್ಲ. ಅದೃಷ್ಟವನ್ನು ಅವಲಂಬಿಸಿರುವುದು ಮತ್ತು ಆರನೇ ಇಂದ್ರಿಯ ನಿಮಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ.

ಕಾಫಿಗಿಂತಲೂ ಸೇಬಿನ ಹಣ್ಣು ಅತ್ಯುತ್ತಮ

ಕಾಫಿಗಿಂತಲೂ ಸೇಬಿನ ಹಣ್ಣು ಅತ್ಯುತ್ತಮ

ಸೇಬಿನ ಹಣ್ಣು ನೈಸರ್ಗಿಕ ಮತ್ತು ಶುದ್ಧ ಸಕ್ಕರೆಯನ್ನು ಹೊಂದಿದ್ದು ನಮಗೆ ಪ್ರಾಕೃತಿಕ ಶಕ್ತಿಯನ್ನು ನೀಡುತ್ತದೆ ಹಾಗೂ ಒಂದು ಕಪ್ ಕಾಫಿಗಿಂತ ದಿನಕ್ಕೊಂದು ಸೇಬು ಹಣ್ಣು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಸೇಬು ಹಣ್ಣುಗಳಲ್ಲಿರುವ ಫ್ರುಕ್ಟೋಸ್ ಹೆಚ್ಚುವರಿ ಶಕ್ತಿಯನ್ನು ನೀಡುತ್ತದೆ.

ಅಪಾಯಕಾರಿ ಮೀನು

ಅಪಾಯಕಾರಿ ಮೀನು

ಜಪಾನ್ ದೇಶದಲ್ಲಿ ಈ ಮೀನಿನ್ನು ತಿನ್ನುವ ಮುನ್ನ ಹೋಟೆಲಿನವರಿಗೆ ಕರಾರು ಬರೆದು ಸಹಿ ಹಾಕಿಕೊಡಬೇಕು. ಏನೆಂದರೆ ಈ ಮೀನು ತಿಂದು ನಾನು ಸತ್ತರೆ ಈ ಹೋಟೆಲಿನವರು ಜವಾಬ್ದಾರರಲ್ಲ ಎಂದು. ಅಪಾಯ ಕಂಡೊಡನೆ ನೀರನ್ನು ಒಳಗೆಳೆದುಕೊಂಡು ಪುಗ್ಗದಂತೆ ಊದಿಕೊಂಡು ಮೈಮೇಲಿನ ಹುರುಪೆಗಳನ್ನು ಮುಳ್ಳುಗಳಂತೆ ಸೆಟೆಸಿ ವೈರಿಯಿಂದ ಪಾರಾಗುವ ಈ ಮೀನಿಗೆ ಫುಗು ಎಂದೂ ಕರೆಯುತ್ತಾರೆ. ಈ ಮೀನಿನಲ್ಲಿ ಒಂದೇ ಒಂದು ಚಿಕ್ಕ ಅಂಗವಿದ್ದು ಅದನ್ನು ನಿವಾರಿಸಿದರೆ ವಿಷವಿಲ್ಲದಂತಾಗುತ್ತದೆ. ಆದರೆ ಎಚ್ಚರ ತಪ್ಪಿ ಈ ಅಂಗ ಒಡೆದರೆ ಇದರ ವಿಷ ಸಯನೈಡ್ ಗಿಂತಲೂ ಭೀಕರವಾಗಿದ್ದು ಇದನ್ನು ಸೇವಿಸಿದವರು ಬಿಲ್ ಕೊಡಲು ಉಳಿದಿರುವುದಿಲ್ಲ! ಇದೇ ಕಾರಣಕ್ಕೆ ಹೋಟೆಲಿನಲ್ಲಿ ಮುಂಗಡ ಹಣ ಪಡೆದುಕೊಳ್ಳಲಾಗುತ್ತದೆ.

ಸಮಯ ಒಬ್ಬ ಒಳ್ಳೆಯ ಗುರು

ಸಮಯ ಒಬ್ಬ ಒಳ್ಳೆಯ ಗುರು

ಸಮಯವೆಂಬುದು ಒಬ್ಬ ಒಳ್ಳೆಯ ಗುರುವಿದ್ದಂತೆ. ಜೀವನದಲ್ಲಿ ಸಮಯವು ಕಲಿಸುವ ಪಾಠ ಮಹತ್ತರವಾದುದು. ಆದ್ದರಿಂದ ಜೀವನದಲ್ಲಿ ಸಮಯದ ಬೆಲೆಯನ್ನು ಅರಿತುಕೊಂಡು ಮುಂದುವರಿಯಬೇಕು. ಇದುವೇ ಯಶಸ್ಸಿನ ಪಾಠ.

English summary

Amazing Facts From Around the World and Life

Facts always play an important role in your life and in your decisions. But exception is also a world which has its own meaning since there are most of the happenings in the world which are taken as the exception from the normal routine. These facts are not mere speculations but are infact real facts. Enjoy these facts and don’t forget to pin them on your pinterest boards.
Story first published: Wednesday, December 16, 2015, 12:22 [IST]
X
Desktop Bottom Promotion