For Quick Alerts
ALLOW NOTIFICATIONS  
For Daily Alerts

ಇದು ಕಥೆಯಲ್ಲ ನಮ್ಮ 'ವೀರ ಯೋಧರ' ನಿಜ ಸಂಗತಿ!

|

ಅವಿಭಜಿತ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂತಸ ಒಂದೆಡೆಯಾದರೆ ನಮ್ಮ ಜೊತೆಯನ್ನು ಹಂಚಿಕೊಂಡಿದ್ದ ನೆರೆಹೊರೆಯ ನಡುವೆ ಗಡಿಯೆಂಬ ಗರೆಯೆಳೆದು ಭಾರತ ಪಾಕಿಸ್ತಾನಗಳನ್ನಾಗಿಸಿದ ನೋವು ಇನ್ನೊಂದೆಡೆ. ಎಷ್ಟೇ ಸಮಂಜಸವಾಗಿ ಪಾಲು ಮಾಡಿದರೂ ಪಾಕಿಸ್ತಾನದವರು ಸರಿಯಾಗಿಲ್ಲವೆಂದು ಗೊಣಗುತ್ತಲೇ ಇರುತ್ತಾರೆ. ಭಾರತದ ವಿಷಯದಲ್ಲಿಯೂ ಅಷ್ಟೇ, ವಿಭಜನೆ ಸರಿಯಾಗಿಲ್ಲವೆಂದೂ ತಮಗೆ ಇನ್ನಷ್ಟು ಪಾಲು ಬರಬೇಕಿತ್ತೆಂದೂ ಗೊಣಗುವವರ ತರ್ಕ ಉಭಯ ದೇಶಗಳ ನಡುವೆ ಬಾಂಧವ್ಯಕ್ಕಿಂತ ವೈರತ್ವವೇ ಹೆಚ್ಚಾಯಿತು. ಪ್ರಪಂಚದಲ್ಲಿನ 8 ಅತ್ಯಂತ ಅಪಾಯಕಾರಿ ನಗರಗಳು

ಇದನ್ನೇ ಬಂಡವಾಳವನ್ನಾಗಿಸಿದ ಹಲವು ಶಕ್ತಿಗಳು ಈ ದ್ವೇಷವನ್ನು ಅಳಿಯಲು ಬಿಡದೇ, ತಮ್ಮ ಸ್ವಾರ್ಥವನ್ನೇ ಬಯಸತೊಡಗಿದವು. ಪರಿಣಾಮವಾಗಿ ಉಭಯ ದೇಶಗಳು ಹಲವು ಬಾರಿ ಕಾದಾಡಿವೆ. ಕಾಶ್ಮೀರದ ವಿಷಯವನ್ನೇ ಪ್ರಮುಖವನ್ನಾಗಿಸಿ ನೆಲದ ಪ್ರಭುತ್ವಕ್ಕಾಗಿ ಯುದ್ಧಗಳು ನಡೆದಿವೆ. ಈ ಯುದ್ಧದಲ್ಲಿ ಪ್ರತಿಬಾರಿಯೂ ಭಾರತ ಎದುರಾಳಿಯನ್ನು ಸಮರ್ಥವಾಗಿ ಎದುರಿಸಿದೆ ಹಾಗೂ ದೇಶದ ಭಾಗ ಕೈತಪ್ಪಿ ಹೋಗದಂತೆ ತಡೆದಿದೆ. ಈ ಯುದ್ಧಗಳಲ್ಲಿ ಭಾರತದ ಹಲವು ಸೈನಿಕರು ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ. ಎರಡನೇ ಮಹಾಯುದ್ಧದ ಬಗ್ಗೆ ಕುತೂಹಲ ಕೆರಳಿಸುವ 12 ಸತ್ಯಗಳು

ಭಾರತದ ಭೂಸೇನೆ ಗಡಿಪ್ರದೇಶವನ್ನು ಕಟ್ಟೆಚ್ಚರದಿಂದ ಕಾಯುತ್ತಿದೆ. ಪರಿಣಾಮವಾಗಿ ಭಾರತದ ಪ್ರತಿಯೊಂದೂ ಮನೆಯಲ್ಲಿ ಜನರು ನೆಮ್ಮದಿಯ ನಿದ್ದೆ ಮಾಡಲು ಸಾಧ್ಯವಾಗಿದೆ. ಸೇನೆಯ ಬಗ್ಗೆ ಪ್ರತಿ ಭಾರತೀಯನೂ ಹೆಮ್ಮೆ ಪಡಬೇಕಾದ ಹದಿನೈದು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಸಿಯಾಚಿನ್ ಪ್ರದೇಶದಲ್ಲಿ ಪ್ರತಿಕ್ಷಣವೂ ಗಡಿಕಾಯುವ ಸೇನೆ

ಸಿಯಾಚಿನ್ ಪ್ರದೇಶದಲ್ಲಿ ಪ್ರತಿಕ್ಷಣವೂ ಗಡಿಕಾಯುವ ಸೇನೆ

1984ರ ಏಪ್ರಿಲ್ 13 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ (ಸಿಯಾಚಿನ್ ಯುದ್ದ) ಹಲವು ಸೈನಿಕರು ಬಲಿಯಾಗಿದ್ದಾರೆ. ಸಮುದ್ರಮಟ್ಟಕ್ಕಿಂತ ಆರು ಸಾವಿರ ಮೀಟರುಗಳಿಗೂ ಎತ್ತರವಿರುವ ಈ ಪ್ರದೇಶ ವಿಶ್ವದ ಅತ್ಯಂತ ಎತ್ತರದ ರಣರಂಗವಾಗಿದೆ. ವಾಸ್ತವವಾಗಿ ಯುದ್ದದ ನೇರ ಪ್ರಹಾರಗಳಿಗಿಂತಲೂ ಹವಾಮಾನ ವೈಪರೀತ್ಯದಿಂದಲೇ ಹೆಚ್ಚಿನ ಸೈನಿಕರು, ಅಂದರೆ ಸರಿಸುಮಾರು 97ಶೇಖಡಾ ಸೈನಿಕರು ಪ್ರಾಣತೆತ್ತಿದ್ದಾರೆ. ಸೂಕ್ಷ್ಮಪ್ರದೇಶವೆಂದು ಗುರುತಿಸಲ್ಪಟ್ಟು ಎರಡೂ ದೇಶಗಳು ಈ ಭಾಗದಲ್ಲಿ ತಮ್ಮ ತಮ್ಮ ಸೇನಾನೆಲೆಯನ್ನು ಸ್ಥಾಪಿಸಿವೆ. ಅಂದಿನಿಂದ ಪ್ರತಿಕ್ಷಣವೂ ಗಡಿಯಿಂದ ಶತ್ರುಗಳು ದೇಶದೊಳಕ್ಕೆ ನುಸುಳದಿರುವಂತೆ ನಮ್ಮ ಸೈನಿಕರು ಕಾವಲು ಕಾಯುತ್ತಿದ್ದಾರೆ. 2003ರಿಂದ ಯುದ್ಧ ವಿರಾಮ ಘೋಷಿಸಲಾಗಿದ್ದರೂ ಕಾವಲು ಕೆಲಸ ಮಾತ್ರ ಹಿಂದಿನಂತೆಯೇ ಮುಂದುವರೆದಿದೆ.

ಯಾವುದೇ ಸೈನಿಕನಿಗೆ ಸೇನಾ ಕರ್ತವ್ಯ ಕಡ್ಡಾಯವಲ್ಲ

ಯಾವುದೇ ಸೈನಿಕನಿಗೆ ಸೇನಾ ಕರ್ತವ್ಯ ಕಡ್ಡಾಯವಲ್ಲ

ಕೆಲವು ದೇಶಗಳಲ್ಲಿ ಇಷ್ಟು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಲೇಬೇಕೆಂಬ ನಿಯಮವಿದೆ. (ಉದಾಹರಣೆಗೆ ಗ್ರೀಸ್ ದೇಶದಲ್ಲಿ ನೆಲೆಸಿರುವ ನಾಗರಿಕರು ಮತ್ತು ಅನಿವಾಸಿಗಳು ಕನಿಷ್ಟ ಒಂಭತ್ತು ತಿಂಗಳು ಭೂಸೇನೆಯಲ್ಲಿ, ಅಥವಾ ಒಂದು ವರ್ಷ ನೌಕಾಸೇನೆಯಲ್ಲಿ ಅಥವಾ ಹದಿನೇಳು ತಿಂಗಳು ಭೂ,ನೌಕಾ, ವಾಯುಸೇನೆಗಳಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಲೇ ಬೇಕು). ಆದರೆ ಭಾರತದ ಸಂವಿಧಾನದಲ್ಲಿ ಯಾವುದೇ ನಾಗರಿಕನಿಗೆ ಕಡ್ಡಾಯವಾಗಿ ಸೇನೆ ಸೇರಬೇಕೆಂದು ಆಗ್ರಹವಿಲ್ಲ. ಅಷ್ಟೇ ಏಕೆ, ಸೇವೆಯಲ್ಲಿರುವ ಸೈನಿಕರು ಮತ್ತು ಅಧಿಕಾರಿಗಳಿಗೂ ಸೇವೆ ಕಡ್ಡಾಯವಲ್ಲ. ಮಿಲಿಟರಿ ನಿಯಮದಲ್ಲಿ ಕಡ್ಡಾಯಸೇವೆಯ ಕುರಿತು ಕಟ್ಟು ಪಾಡುಗಳಿವೆಯಾದರೂ ಇದುವರೆಗೆ ಯಾರ ಮೇಲೂ ಬಲವಂತವಾಗಿ ಹೇರಿಲ್ಲ. ಆದರೆ ನಮ್ಮ ಸೈನಿಕರೇ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುತ್ತಾ ದೇಶಭಕ್ತಿಯನ್ನು ಮೆರೆಯುತ್ತಿದ್ದಾರೆ.

High Altitude Warfare School

High Altitude Warfare School

ಭಾರತೀಯ ಭೂಸೇನೆ ನಡೆಸುತ್ತಿರುವ ಹಾವ್ಸ್ ಶಾಲೆ High Altitude Warfare School (HAWS) ವಿಶ್ವದಲ್ಲಿಯೇ ಒಂದು ವಿಶಿಷ್ಟ ಶಿಕ್ಷಣಾ ಸಂಸ್ಥೆಯಾಗಿದ್ದು ರಕ್ಷಣಾ ವ್ಯವಸ್ಥೆಯ ಬಗ್ಗೆ ವಿಶೇಷ ತರಬೇತಿಯನ್ನು ನೀಡುತ್ತದೆ.ಇಲ್ಲಿ ಶಿಕ್ಷಣ ಪಡೆಯಲು ಭಾರತದ ಸೈನಿಕರ ಹೊರತಾಗಿ ಅಮೇರಿಕಾ, ಇಂಗ್ಲೆಂಡ್ ಮತ್ತು ರಷಿಯಾದ ಸೈನಿಕರೂ, ವಿಶೇಷ ರಕ್ಷಣಾ ಪಡೆಗಳೂ ಆಗಮಿಸುತ್ತವೆ. 9/11 ಧಾಳಿಯಾದ ಬಳಿಕ ಅಫ್ಘಾನಿಸ್ತಾನದ ಮೇಲೆ ಧಾಳಿ ಮಾಡುವ ಮೊದಲು ಅಮೇರಿಕಾದ ಸೈನಿಕರು ಈ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.

1971ರ ಯುದ್ಧದಲ್ಲಿ

1971ರ ಯುದ್ಧದಲ್ಲಿ

ಭಾರತ ಪಾಕಿಸ್ತಾನಗಳ ನಡುವಣ ಯುದ್ಧಗಳಲ್ಲಿ ಪ್ರಮುಖವಾದುದು 1971ರ ಡಿಸೆಂಬರ್ ನಲ್ಲಿ ನಡೆದ ಲಾಂಗೆವಾಲಾ ಯುದ್ಧ. ಅತಿಚಳಿಯ ಆ ದಿನಗಳಲ್ಲಿ ಭಾರತದ ವಿರುದ್ಧ ಹೋರಾಡಲು ಆಗಮಿಸಿದ್ದ ಸೈನಿಕರ ಸಂಖ್ಯೆ ಎರಡು ಸಾವಿರ!, ನಲವತ್ತೈದು ಟ್ಯಾಂಕುಗಳು, ಮತ್ತು ಒಂದು ಪದಾತಿದಳ. ಅವರನ್ನೆದುರಿಸಲು ಆ ಸಮಯದಲ್ಲಿ ಉಪಸ್ಥಿತರಿದ್ದ ಭಾರತೀಯ ಸೈನಿಕರ ಸಂಖ್ಯೆ ಕೇವಲ ನೂರಿಪ್ಪತ್ತು. ಇವರಲ್ಲಿದ್ದುದು ಕೇವಲ ಒಂದು ಜೀಪು ಮತ್ತು ಅದರಲ್ಲಿ ಪ್ರತಿಬಾರಿಯೂ ಗುಂಡುಗಳನ್ನು ಹಾಕಬೇಕಾದ M40 ರೈಫಲ್ ಮಾತ್ರ. ಆದರೆ ಪ್ರತಿ ಸೈನಿಕನೂ ಭಾರತದ ಲಕ್ಷಪ್ರಜೆಗಳ ಪ್ರತಿನಿಧಿಯಾಗಿ ಹೋರಾಡಿ ಅಷ್ಟೂ ಸೈನಿಕರನ್ನು ಹಿಮ್ಮೆಟ್ಟಿಸಿದರು. ಬಳಿಕ ನೆರವಿಗೆ ಬಂದ ಭಾರತೀಯ ವಾಯುಸೇನೆಯ ಮೂಲಕ ಎದುರಾಳಿಯನ್ನು ಸಂಪೂರ್ಣವಾಗಿ ಸೋಲಿಸಲು ಸಾಧ್ಯವಾಯಿತು.

ಜಲಾವೃತ ಪ್ರದೇಶದಿಂದ ಜನರನ್ನು ಸಾಗಿಸಲು ಸೇನೆಯ ಬಳಕೆ

ಜಲಾವೃತ ಪ್ರದೇಶದಿಂದ ಜನರನ್ನು ಸಾಗಿಸಲು ಸೇನೆಯ ಬಳಕೆ

ಹವಾಮಾನ ವೈಪರೀತ್ಯದಲ್ಲಿ ಅತ್ಯಂತ ಅಪರೂಪವಾದ, ಆದರೆ ಜಲಪ್ರಳಯದ ಪ್ರತೀಕವಾದ ಮೇಘಸ್ಫೋಟ 2013ರಲ್ಲಿ ಸಂಭವಿಸಿತ್ತು. ಕ್ಷಣಮಾತ್ರದಲ್ಲಿ ಪ್ರವಾಹ ಏರಿ ಸಾವಿರಾರು ಜನರನ್ನು ಕೊಚ್ಚಿಕೊಂಡು ಹೋಗಿ, ಇನ್ನುಳಿದವರು ಕೊಂಚ ಎತ್ತರದ ಸ್ಥಳಗಳಲ್ಲಿ ನೆರವಿಗಾಗಿ ಬೊಬ್ಬೆ ಹೊಡೆಯುವಂತಾಗಿತ್ತು. ಈ ಸಮಯದಲ್ಲಿ ನೆರವಿಗೆ ಬಂದ ಭಾರತೀಯ ಭೂಸೇನೆ ಮತ್ತು ವಾಯುಸೇನೆ ಹೆಲಿಕಾಪ್ಟರುಗಳ ಬಳಕೆಯಿಂದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಸಂತ್ರಸ್ತರಿಗಾಗಿ ಆಹಾರ, ಔಷಧಿ, ಸುರಕ್ಷಾ ಸಾಧನಗಳು, ಆತ್ಮೀಯರಿಗೆ ಸಂದೇಶ ಕಳುಹಿಸಲು ವೈರ್ ಲೆಸ್ ಮತ್ತು ಇತರ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೆರವು ಮೊದಲಾದ ಸೇವೆಗಳನ್ನು ನೀಡಲಾಯಿತು. ಭಾರತೀಯ ಸೇನೆಯ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ರಕ್ಷಣಾ ಕಾರ್ಯವಾದ ಈ ಕಾರ್ಯದ ಮೂಲಕ ಇಪ್ಪತ್ತು ಸಾವಿರಕ್ಕೂ ಹೆಚ್ಚು ಯಾತ್ರಿಗಳನ್ನು ಸುರಕ್ಷಿತ ಸ್ಥಾನಕ್ಕೆ ಸಾಗಿಸಲಾಯಿತು. ಇದಕ್ಕಾಗಿ 2,140 ಹಾರಾಟ (ಒಂದು ಸ್ಥಾನದಿಂದ ಹೊರಟು ಮತ್ತೆ ಅದೇ ಸ್ಥಾನಕ್ಕೆ ಹಿಂದಿರುಗುವ ಪಯಣ) ಗಳನ್ನೂ, 3,82,400 ಕೇಜಿಗಳಷ್ಟು ಪರಿಹಾರ ಸಾಮಾಗ್ರಿಗಳನ್ನೂ ವಿತರಿಸಲಾಯಿತು.

721 ಕೋಟಿ ರೂಪಾಯಿ ವ್ಯಯಿಸಿ ಪ್ರಾರಂಭವಾದ ಭಾರತೀಯ ನೌಸೇನಾ ಅಕ್ಯಾಡೆಮಿ

721 ಕೋಟಿ ರೂಪಾಯಿ ವ್ಯಯಿಸಿ ಪ್ರಾರಂಭವಾದ ಭಾರತೀಯ ನೌಸೇನಾ ಅಕ್ಯಾಡೆಮಿ

1987ರಲ್ಲಿ ಪ್ರಾರಂಭವಾದ ಭಾರತೀಯ ನೌಸೇನಾ ವಿದ್ಯಾಸಂಸ್ಥೆ (Indian Naval Academy)ಯನ್ನು ಪ್ರಾರಂಭಿಸುವ ಮೊದಲು 166ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ 2009ರಲ್ಲಿ ಪೂರ್ವ ಪ್ರಧಾನಿಗಳಾದ ಮನಮೋಹನ ಸಿಂಗ್ ರವರಿಂದ ಉದ್ಘಾಟನೆಗೊಂಡಾಗ ಇದರ ಖರ್ಚು 721 ಕೋಟಿ ರೂಪಾಯಿ ದಾಟಿದೆ.

ಸೇನೆಯಲ್ಲಿ ಅಶ್ವಗಳ ಬಳಕೆಯಾಗುತ್ತಿರುವ ಕೆಲವೇ ದಳಗಳಲ್ಲಿ ಭಾರತೀಯ ಭೂಸೇನೆ ಒಂದು

ಸೇನೆಯಲ್ಲಿ ಅಶ್ವಗಳ ಬಳಕೆಯಾಗುತ್ತಿರುವ ಕೆಲವೇ ದಳಗಳಲ್ಲಿ ಭಾರತೀಯ ಭೂಸೇನೆ ಒಂದು

ಇತಿಹಾಸದ ಯುದ್ದಗಳಲ್ಲಿ ಕುದುರೆಗಳು ಅತಿಹೆಚ್ಚಾಗಿ ಬಳಕೆಯಾಗಿದೆ. ಇಂದು ಕುದುರೆಗಳನ್ನು ಯುದ್ದಕ್ಕೆ ಬಿಡಿ, ಸವಾರಿಗೂ, ಗಾಡಿ ಎಳೆಯಲೂ ಯಾರೂ ಬಳಸುತ್ತಿಲ್ಲ. ಬಳಕೆಯಾಗುತ್ತಿದ್ದರೆ ಅದು ಕೇವಲ ಕುದುರೆ ಜೂಜಿಗಾಗಿ ಮಾತ್ರ. ಆದರೆ ಇಂದಿಗೂ ವಿಶ್ವದಲ್ಲಿ ಕೆಲವೇ ಸೇನೆಗಳು ಕುದುರೆಗಳನ್ನು ಬಳಸುತ್ತಿವೆ. ಇಂಗ್ಲೆಂಡ್, ರಷಿಯಾ, ಬಲ್ಗೇರಿಯಾ ರಾಷ್ಟ್ರಗಳಲ್ಲಿ ಇಂದಿಗೂ ಕುದುರೆಗಳು ಬಳಸಲ್ಪಡುತ್ತಿವೆ. ಭಾರತೀಯ ಸೇನೆಯ 61ನೇ ಅಶ್ವದಳ ಇಂದು ಅಸ್ತಿತ್ವದಲ್ಲಿರುವ ಅಶ್ವದಳಗಳಲ್ಲಿಯೇ ಅತ್ಯಂತ ದೊಡ್ಡದಾಗಿದ್ದು ಒಂದು ವಿಶ್ವದಾಖಲೆಯಾಗಿದೆ.

ವಿಶ್ವದಲ್ಲಿಯೇ ಅತ್ಯಂತ ಎತ್ತರದಲ್ಲಿರುವ ಬೈಲೀ ಸೇತುವೆ

ವಿಶ್ವದಲ್ಲಿಯೇ ಅತ್ಯಂತ ಎತ್ತರದಲ್ಲಿರುವ ಬೈಲೀ ಸೇತುವೆ

ಹಿಮಾಲಯದ ಪರ್ವತಪ್ರದೇಶದಲ್ಲಿರುವ ಲಡಾಖ್ ಕಣಿವೆಯಲ್ಲಿ ದ್ರಾಸ್ ಮತ್ತು ಸುರು ನದಿಗಳ ಕಣಿವೆಯ ಮೂಲಕ ಹಾದು ಹೋಗುವ ರಸ್ತೆಗೆ ಆಗಸ್ಟ್ 1982ರಲ್ಲಿ ಭಾರತೀಯ ಭೂಸೇನೆ ಒಂದು ಸೇತುವೆಯನ್ನು ನಿರ್ಮಿಸಿದ್ದು ಇದು ವಿಶ್ವದಲ್ಲಿಯೇ ಅತ್ಯಂತ ಎತ್ತರದಲ್ಲಿರುವ ಸೇತುವೆ ಎಂಬ ದಾಖಲೆ ಪಡೆದಿದೆ. ಮೂವತ್ತು ಮೀಟರ್ ಉದ್ದವಿರುವ ಈ ಸೇತುವೆ ಸಮುದ್ರಮಟ್ಟದಿಂದ 5,602 ಮೀ (18,379 ಅಡಿ) ಎತ್ತರದಲ್ಲಿದೆ.

ಎರಡನೇ ಮಹಾಯುದ್ಧ

ಎರಡನೇ ಮಹಾಯುದ್ಧ

ಈಸ್ಟ್ ಪಾಕಿಸ್ತಾನ್ ಎಂಬ ಹೆಸರಿನಲ್ಲಿದ್ದ ಪ್ರದೇಶ ಬಾಂಗ್ಲಾದೇಶವಾಗಿ ರೂಪುಗೊಳ್ಳಲು ಯುದ್ಧವೊಂದು ಕಾರಣವಾಯಿತು. 1971ರ ಯುದ್ಧದಲ್ಲಿ ಗೆರಿಲ್ಲಾ ತಂತ್ರವನ್ನು ಅನುಸರಿಸಿದ ಭಾರತೀಯ ಭೂಸೇನೆಯನ್ನು ಎದುರಿಸಲಾಗದೇ ದೊಡ್ಡಸಂಖ್ಯೆಯ ಪಾಕಿಸ್ತಾನದ ಸೇನೆ ಶರಣಾಯಿತು. ಶರಣಾಗತರಾಗಿ ವಶಕ್ಕೆ ಪಡೆದುಕೊಂಡ ಸೈನಿಕರ ಸಂಖ್ಯೆ 93,000! ಎರಡನೇ ಮಹಾಯುದ್ಧದ ಬಳಿಕ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶರಣಾಗತರಾದ ದಾಖಲೆ. ಪರಿಣಾಮವಾಗಿ ಮಾರ್ಚ್ 26, 1971ರಂದು ಬಾಂಗ್ಲಾದೇಶ ಎಂಬ ಸ್ವತಂತ್ರ ರಾಷ್ಟ್ರದ ಉಗಮವಾಯಿತು.

ಸೇನೆಯಲ್ಲಿ ಕಾರ್ಯನಿರತರಾಗಿರುವವರ ಸಂಖ್ಯೆ-22,85,00

ಸೇನೆಯಲ್ಲಿ ಕಾರ್ಯನಿರತರಾಗಿರುವವರ ಸಂಖ್ಯೆ-22,85,00

ವಿಶ್ವದಲ್ಲಿಯೇ ಅತಿಹೆಚ್ಚು ಜನರಿಗೆ ಉದ್ಯೋಗ ನೀಡಿದ ಸಂಸ್ಥೆಯೆಂದರೆ ಭಾರತೀಯ ರೈಲ್ವೇ. ಅಂತೆಯೇ ದೊಡ್ಡ ಸಂಖ್ಯೆಯಲ್ಲಿ ಭೂಸೇನೆಯೂ ಉದ್ಯೋಗಗಳನ್ನು ನೀಡಿದೆ. ಇವರಲ್ಲಿ 40,000 ಜನರು ನಿತ್ಯ ಒಂದೇ ಸ್ಥಳದಲ್ಲಿರುವ ಉದ್ಯೋಗಿಗಳು. 1,325,000 ಸೈನಿಕರು ವಿವಿಧ ಸ್ಥಳಗಳಲ್ಲಿ ನೇಮಕಗೊಂಡಿದ್ದು ಅಗತ್ಯಕ್ಕೆ ತಕ್ಕಂತೆ ಇವರ ಸ್ಥಳ ಬದಲಾಗುತ್ತಾ ಇರುತ್ತಾರೆ. ಮೀಸಲು ಪಡೆಯಲ್ಲಿ 960,000 ಸೈನಿಕರಿದ್ದಾರೆ. ಇವರು ತುರ್ತು ಪರಿಸ್ಥಿತಿಗಳಲ್ಲಿ ಹೆಚ್ಚುವರಿ ಸಹಾಯವನ್ನು ಅಪೇಕ್ಷಿಸಿದಲ್ಲಿ ನೆರವು ನೀಡಲು ಧಾವಿಸುತ್ತಾರೆ. ಉಳಿದಂತೆ ಇವರು ವಿವಿಧ ತರಬೇತಿಗಳನ್ನು ಪಡೆಯುತ್ತಾ ಇರುತ್ತಾರೆ.

ಅಗ್ನಿ-1 ಕ್ಷಿಪಣಿಗೆ ಈಗ ವಿಶ್ವದ ಅತ್ಯುತ್ತಮ ಕ್ಷಿಪಣಿ ಎಂಬ ಹೆಗ್ಗಳಿಕೆ

ಅಗ್ನಿ-1 ಕ್ಷಿಪಣಿಗೆ ಈಗ ವಿಶ್ವದ ಅತ್ಯುತ್ತಮ ಕ್ಷಿಪಣಿ ಎಂಬ ಹೆಗ್ಗಳಿಕೆ

ಭಾರತದ ಹನ್ನೊಂದನೇ ರಾಷ್ಟ್ರಾಧ್ಯಕ್ಷ ಅಬ್ದುಲ್ ಕಲಾಂ ರವರ ಮಹತ್ವಾಕಾಂಕ್ಷೆಯ ರಕ್ಷಣಾ ಕ್ಷಿಪಣಿ ಪ್ರಥವ ಎರಡು ಪ್ರಯೋಗಗಳಲ್ಲಿ ವೈಫಲ್ಯ ಕಂಡಿತ್ತು. ಈ ವೈಫಲ್ಯಗಳ ಬಗ್ಗೆ ಅಮೇರಿಕಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಅಧಿಕಾರಿಗಳು ಕುಹಕವಾಡಿ ಇದು ಯಾವುದೇ ಕೆಲಸಕ್ಕೆ ಬಾರದು ಎಂದು ಉಪೇಕ್ಷಿಸಿದ್ದರು. ಆದರೆ ಮೂರನೆಯ ಪ್ರಯತ್ನ ಅತ್ಯಂತ ಯಶಸ್ವಿಯಾಗಿ ನಡೆದು ಪ್ರಸ್ತುತ ಇದು ವಿಶ್ವದಲ್ಲಿಯೇ ಅತ್ಯಂತ ಸಮರ್ಥ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಎದುರಾಳಿಯಾಗಿ ಪಾಕಿಸ್ತಾನವೂ ಘೋರಿ (Ghauri [Hatf-5])ಎಂಬ ಕ್ಷಿಪಣಿಯನ್ನು ತಯಾರಿಸಿದರೂ ಅಗ್ನಿಗೆ ಯಾವುದೇ ರೀತಿಯಲ್ಲಿ ಸರಿಸಾಟಿಯಲ್ಲ.

ನಿಖರತೆ ಸಾಧಿಸಬಲ್ಲ ಪೃಥ್ವಿ

ನಿಖರತೆ ಸಾಧಿಸಬಲ್ಲ ಪೃಥ್ವಿ

ನೆಲದಿಂದ ನೆಲಕ್ಕೆ ಧಾಳಿಮಾಡಲಾಗುವ ಕ್ಷಿಪಣಿಯ ಪೈಕಿ ಸುಮಾರು ಮುನ್ನೂರೈವತ್ತು ಕಿ.ಮೀ ದೂರದಲ್ಲಿ ನಿಗದಿತ ಗುರಿಯಲ್ಲಿ ಕೇವಲ ಐವತ್ತು ಮೀಟರುಗಳಷ್ಟು ಗರಿಷ್ಟ ವ್ಯತ್ಯಾಸವಿರುವ ಕ್ಷಮತೆಯ ಪ್ರಥ್ವಿ ಭಾರತೀಯ ಸೇನೆಯ ಒಂದು ಅಂಗವಾಗಿದೆ. ಇದಕ್ಕೆ ತಗಲುವ ಸ್ಪೋಟಕಗಳ ಅಗತ್ಯ ಕೇವಲ ಒಂದು ಸಾವಿರ ಕೇಜಿ ಮಾತ್ರ.

ಪ್ರಸ್ತುತ ಅಭಿವೃದ್ದಿ ಹಂತದಲ್ಲಿರುವ ಕ್ಷಿಪಣಿಯ ಸಾಮರ್ಥ್ಯ ಹತ್ತು ಸಾವಿರ ಕಿ.ಮೀ

ಪ್ರಸ್ತುತ ಅಭಿವೃದ್ದಿ ಹಂತದಲ್ಲಿರುವ ಕ್ಷಿಪಣಿಯ ಸಾಮರ್ಥ್ಯ ಹತ್ತು ಸಾವಿರ ಕಿ.ಮೀ

ಪ್ರಸ್ತುತ ಭಾರತೀಯ ಭೂಸೇನೆಯ ಅಧಿಕಾರಿಗಳು ಹತ್ತು ಸಾವಿರ ಕಿ.ಮೀ ಯಷ್ಟು ದೂರದ ಗುರಿಯನ್ನು ಸಾಧಿಸಬಲ್ಲ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಯೋಜನೆ ಫಲಕಾರಿಯಾದರೆ ಭಾರತ ವಿಶ್ವಮಟ್ಟದಲ್ಲಿ ಬಲಾಢ್ಯ ರಾಷ್ಟ್ರಗಳಿಗೆ ಸರಿಸಾಟಿಯಾಗಲಿದೆ. ಭಾರತದಿಂದ ದಕ್ಷಿಣ ಅಮೇರಿಕಾ ಅಥವಾ ಉತ್ತರ ಅಮೇರಿಕಾದ ಕೆಲವು ಸ್ಥಳಗಳಿಗೂ ಧಾಳಿ ಮಾಡಬಲ್ಲ ಸಾಮಥ್ಯ ಹೊಂದಿರುತ್ತದೆ.

ಶಬ್ಬಕ್ಕಿಂತಲೂ ಏಳುಪಟ್ಟು ಹೆಚ್ಚು ವೇಗದಲ್ಲಿ ಚಲಿಸಬಲ್ಲ ಬ್ರಹ್ಮೋಸ್ ಕ್ಷಿಪಣಿ

ಶಬ್ಬಕ್ಕಿಂತಲೂ ಏಳುಪಟ್ಟು ಹೆಚ್ಚು ವೇಗದಲ್ಲಿ ಚಲಿಸಬಲ್ಲ ಬ್ರಹ್ಮೋಸ್ ಕ್ಷಿಪಣಿ

ರಷ್ಯಾದೊಂದಿಗೆ ಜಂಟಿಯಾಗಿ ನಿರ್ಮಿಸಲಾಗುತ್ತಿರುವ ಬ್ರಹ್ಮೋಸ್ (Brahmaputra + Moscow=BrahMos) ಎಂಬ ಹೆಸರಿನ ಕ್ಷಿಪಣಿ ಈಗ ಅಭಿವೃದ್ದಿಗೊಳ್ಳುತ್ತಿದೆ. ಒಮ್ಮೆ ಕಾರ್ಯಾರಂಭಿಸಿದರೆ ಇದು ಶಬ್ಧಕ್ಕಿಂತಲೂ ಏಳು ಪಟ್ಟು ಹೆಚ್ಚು ವೇಗದಲ್ಲಿ (Mach-7) ಚಲಿಸುವ, ಅಂದರೆ ವಿಶ್ವದಲ್ಲಿಯೇ ಅತ್ಯಂದ ವೇಗದ ಹೈಪರ್ ಸೋನಿಕ್ ಕ್ಷಿಪಣಿಯಾಗಲಿದೆ.

ಉಭಯ ರಾಷ್ಟ್ರಗಳ ನಡುವಣ ದ್ವೇಷ ಕೇವಲ ರಾಜಕೀಯ ಉದ್ದೇಶ

ಉಭಯ ರಾಷ್ಟ್ರಗಳ ನಡುವಣ ದ್ವೇಷ ಕೇವಲ ರಾಜಕೀಯ ಉದ್ದೇಶ

ಇಂದು ಭಾರತದ ಮೇಲೆ ಉಗ್ರರ ಧಾಳಿಯಾಗುವುದು, ಈ ಉಗ್ರರು ಪಾಕಿಸ್ತಾನದಲ್ಲಿ ತರಬೇತಿ ಪಡೆಯುವುದು ಮೊದಲಾದವು ರಾಜಕೀಯ ಪ್ರೇರಿತ ಕಾರ್ಯಗಳಾಗಿವೆಯೇ ಹೊರತು ಜನಸಾಮಾನ್ಯರ ಬದುಕಿನಲ್ಲಿ ಈಗಲೂ ಪರಸ್ಪರ ಅಣ್ಣತಮ್ಮಂದಿರಾಗಿದ್ದಾರೆ. ಎರಡೂ ರಾಷ್ಟ್ರಗಳ ಇತಿಹಾಸ ಮತ್ತು ಸಂಸ್ಕೃತಿ ಒಂದೇ ಆಗಿವೆ. ರಾಜಸ್ತಾನದ ವಾಘಾ ಗಡಿಯಲ್ಲಿ ಇಂದಿಗೂ ಎರಡೂ ದೇಶಗಳಿಂದ ಸೇನಾ ಕವಾಯತು ನಡೆಯುತ್ತದೆ. ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಗುರುದ್ವಾರಕ್ಕೆ ಭಾರತೀಯರು ಈಗಲೂ ಹೋಗುತ್ತಾರೆ. ಗಡಿ ದಾಟುವಲ್ಲಿ ಜನಜಂಗುಳಿಯ ಮೂಲಕ ನುಗ್ಗುವ ಉಗ್ರರನ್ನು ತಡೆಯಲು ಭಾರತೀಯ ನೌಸೇನೆ ಪ್ರತಿದಿನ ತಪಾಸಣೆ ಮತ್ತು ರಕ್ಷಣೆಯ ಸೇವೆಯನ್ನು ನೀಡುತ್ತಿದೆ.

English summary

Amazing Facts About The Indian Army

With sponsored terrorism from some neighboring countries and incursion threats from others, problems of illegal immigration and so many other internal conflicts and disasters - it is thanks to the Indian Army that India still maintains its status quo loud and proud. and these facts will earn your respect for them further.
X
Desktop Bottom Promotion