For Quick Alerts
ALLOW NOTIFICATIONS  
For Daily Alerts

ಶೌಚಾಲಯಕ್ಕಿಂತಲೂ ಹೆಚ್ಚಿನ ಕ್ರಿಮಿಗಳು ಇವುಗಳಲ್ಲಿವೆ ಕಣ್ರೀ!

By Arshadh
|

ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವುದು ಅತಿ ಅಗತ್ಯವಾಗಿದೆ, ಏಕೆ? ಇದಕ್ಕೆ ಉತ್ತರ ಕ್ರಿಮಿಗಳು. ಶೌಚಾಲಯದಲ್ಲಿರುವ ಕ್ರಿಮಿಗಳನ್ನು ಈ ಮೂಲಕ ನಿವಾರಿಸುವುದು ಎನ್ನುವುದು ಸುಲಭ ಉತ್ತರ. ಅಂದರೆ ಕ್ರಿಮಿಗಳಿರುವ ಸ್ಥಳ ಅಥವಾ ವಸ್ತುಗಳು ಕೊಳಕು ಎಂದಾಯ್ತು. ವಾಸ್ತವವಾಗಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದ ಶೌಚಾಲಯದಲ್ಲಿ ನಾವು ಹೆದರುವಷ್ಟು ಕ್ರಿಮಿಗಳೇನೂ ಇರುವುದಿಲ್ಲ. ಇದ್ದರೂ ನಮ್ಮ ಮನೆಯ ಇತರ ಕೋಣೆಗಳಲ್ಲಿರುವುದಕ್ಕಿಂತ ಹೆಚ್ಚೇನೂ ಇರುವುದಿಲ್ಲ. ಆದರೆ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಶೌಚಾಲಯದ ಸಹಿತ ಇತರ ಕೋಣೆಗಳಲ್ಲಿಯೂ ಕ್ರಿಮಿಗಳು ಸೇರಿಕೊಂಡು ಮಲಿನವಾಗುತ್ತವೆ. ಬಾನಂಗಳದಲ್ಲಿ ಮಿಂಚುತ್ತಿರುವ ಕರಾವಳಿ ನಕ್ಷತ್ರಗಳು

ಈ ಭೂಮಿಯ ಮೇಲೆ ಕ್ರಿಮಿಗಳೇ ಇರದ ಅತ್ಯಂತ ಪವಿತ್ರ ವಸ್ತುವಿದ್ದರೆ ಅದು ಈಗತಾನೇ ಹುಟ್ಟಿದ ಮಗು. ತಾಯಿಗರ್ಭದಿಂದ ಹೊರಬಂದಾಗ ಅದರ ಮೈಮೇಲೆ ಯಾವ ಕ್ರಿಮಿಯೂ ಇರುವುದಿಲ್ಲ. ಇದು ನಿಸರ್ಗ ನೀಡಿದ ಕೊಡುಗೆ. ಆ ಕ್ಷಣದಿಂದ ಗಾಳಿಯ, ನೀರಿನ, ಆರೈಕೆ ನೀಡುವ ಕೈಗಳ ಮೂಲಕ ಕ್ರಿಮಿಗಳು ಮಗುವನ್ನು ಬಾಧಿಸುತ್ತವೆ. ಆ ಕ್ಷಣದಿಂದಲೇ ಮಗುವಿನ ರೋಗ ನಿರೋಧಕ ಶಕ್ತಿಯೂ ಹೆಚ್ಚು ಸಕ್ಷಮವಾಗುತ್ತಾ ಹೋಗುತ್ತದೆ. ಮಗುವನ್ನು ನೋಡಲು ಎಷ್ಟು ಜನರು ಬರುತ್ತಾರೆಯೋ ಅಷ್ಟೂ ಮಟ್ಟಿಗೆ ವಿವಿಧ ಕ್ರಿಮಿಗಳು ಮಗುವನ್ನು ಬಾಧಿಸುವ ಸಂಭವ ಹೆಚ್ಚಾಗುತ್ತದೆ.

ಇದೇ ಕಾರಣದಿಂದ ಮಗುವಿನ ಜನನದ ಬಳಿಕ ವೈದ್ಯರು ಆದಷ್ಟೂ ಕಡಿಮೆ ಜನರಿಗೆ ಮಗುವನ್ನು ನೋಡಲು ಅನುಮತಿ ನೀಡುತ್ತಾರೆ. ನಮ್ಮ ದಿನನಿತ್ಯದ ಬಳಕೆಯ ಎಷ್ಟೋ ವಸ್ತುಗಳಲ್ಲಿ ಶೌಚಾಲಯದಲ್ಲಿ ಕಂಡುಬರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮತ್ತು ವಿವಿಧ ಪ್ರಕಾರದ ಸೋಂಕು ಹರಡುವ ಕ್ರಿಮಿಗಳಿರುತ್ತವೆ. ಹೌದು, ಇದು ವಾಸ್ತವ. ನೀವು ಊಹಿಸಲಾರದ ಇಂತಹ ಹದಿನೈದು ಅತಿ ಹೆಚ್ಚು ಕ್ರಿಮಿಗಳಿರುವ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ನಿಬ್ಬೆರಗಾಗಿಸುವ ದೇಹದಲ್ಲಿ ನಡೆಯುವ ವಿಲಕ್ಷಣ ಸಂಗತಿಗಳು!

ಐಸ್

ಐಸ್

ಅಮೇರಿಕಾದಲ್ಲಿ ನಡೆಸಿದ ಒಂದು ಪರೀಕ್ಷೆಯ ಮೂಲಕ ಎಪ್ಪತ್ತು ಶೇಖಡಾದಷ್ಟು ಸಿದ್ದ ಆಹಾರಗಳ ಮಳಿಗೆಗಳಲ್ಲಿ ಪಾನೀಯಗಳನ್ನು ತಂಪು ಮಾಡಲು ನೀಡಲಾಗುವ ಐಸ್ ತುಂಡುಗಳಲ್ಲಿ ಶೌಚಾಲಯದ ನೀರಿಗಿಂತಲೂ ಹೆಚ್ಚು ಬ್ಯಾಕ್ಟೀರಿಯಾಗಳಿದ್ದುದು ಪತ್ತೆಯಾಗಿದೆ.

ಸಾರ್ವಜನಿಕ ಶೌಚಾಲಯದ ನೆಲ

ಸಾರ್ವಜನಿಕ ಶೌಚಾಲಯದ ನೆಲ

ಕಡಿಮೆ ನಿರ್ವಹಣೆ ಅಥವಾ ನಿರ್ವಹಣೆಯೇ ಇಲ್ಲದ ಸಾರ್ವಜನಿಕ ಶೌಚಾಲಯದ ನೆಲವನ್ನು ಪರೀಕ್ಷಿಸಿದಾಗ ಪ್ರತಿ ಚದರ ಇಂಚಿನಷ್ಟು ಜಾಗದಲ್ಲಿ ಎರಡು ಮಿಲಿಯನ್ (ಇಪ್ಪತ್ತು ಲಕ್ಷ) ನಷ್ಟು ಆರೋಗ್ಯವನ್ನು ಕೆಡಿಸುವ ಬ್ಯಾಕ್ಟೀರಿಯಾಗಳಿರುವುದು ಪತ್ತೆಯಾಗಿದೆ. ಅದೇ ನಿಮ್ಮ ಶೌಚಾಲಯದ ಕಮೋಡ್ ಮುಚ್ಚಳದ ಒಳಭಾಗದಲ್ಲಿ ಅತಿಹೆಚ್ಚೆಂದರೆ ಪ್ರತಿ ಚದರ ಅಡಿಗೆ ಐವತ್ತು ಬ್ಯಾಕ್ಟೀರಿಯಾಗಳಿರಬಹುದಷ್ಟೇ.

ನಿಮ್ಮ ಕಛೇರಿಯ ಮೇಜು

ನಿಮ್ಮ ಕಛೇರಿಯ ಮೇಜು

ಇನ್ನೊಂದು ಪರೀಕ್ಷೆಯ ಪ್ರಕಾರ ನಾವು ನಿತ್ಯ ಉಪಯೋಗಿಸುವ ಮೇಜಿನ ಮೇಲೆ ಶೌಚಾಲಯದಲ್ಲಿರುವುದಕ್ಕಿಂತಲೂ ನಾನ್ನೂರು ಪಟ್ಟುಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ.

ಕಂಪ್ಯೂಟರ್ ಕೀಬೋರ್ಡ್

ಕಂಪ್ಯೂಟರ್ ಕೀಬೋರ್ಡ್

ಇನ್ನೊಂದು ಪರೀಕ್ಷೆಯ ಪ್ರಕಾರ ನಾವು ನಿತ್ಯ ಉಪಯೋಗಿಸುವ ಕಂಪ್ಯೂಟರ್ ಕೀ ಬೋರ್ಡ್ ನಲ್ಲಿ ಶೌಚಾಲಯದಲ್ಲಿರುವುದಕ್ಕಿಂತಲೂ ಇನ್ನೂರು ಪಟ್ಟುಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ

ನಿಮ್ಮ ಸೆಲ್ ಫೋನ್

ನಿಮ್ಮ ಸೆಲ್ ಫೋನ್

ಇಂದು ನಮ್ಮ ಬೆರಳುಗಳು ಸದಾ ಸವರುತ್ತಲೇ ಇರುವ ಸ್ಮಾರ್ಟ್ ಫೋನ್ ಗಳಲ್ಲಿಯೂ ಶೌಚಾಲಯದಲ್ಲಿರುವುದಕ್ಕಿಂತ ಹತ್ತು ಪಟ್ಟುಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ. ಈಗ ಹೇಳಿ, ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಬಂದ ಕರೆಯನ್ನು ಉತ್ತರಿಸುವಾಗ ಇದರಿಂದ ಕೆನ್ನೆ ಸವರುವಿರಾ?

ಉಪಾಹಾರ ಗೃಹದ ಮೆನುಪಟ್ಟಿ

ಉಪಾಹಾರ ಗೃಹದ ಮೆನುಪಟ್ಟಿ

ನೂರಾರು ಜನರು ಪದೇ ಪದೇ ಮುಟ್ಟುತ್ತಲೇ ಇರುವ ಉಪಾಹಾರ ಗೃಹದ ಮೆನುಪಟ್ಟಿಯಲ್ಲಿ ಶೌಚಾಲಯದಲ್ಲಿರುವುದಕ್ಕಿಂತ ನೂರು ಪಟ್ಟುಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ.

ನಿಮ್ಮ ಹಲ್ಲುಜ್ಜುವ ಬ್ರಶ್

ನಿಮ್ಮ ಹಲ್ಲುಜ್ಜುವ ಬ್ರಶ್

ಹಲ್ಲುಜ್ಜುವ ಬ್ರಶ್ ಅನ್ನು ನಾವೆಲ್ಲಾ ಸಾಮಾನ್ಯವಾಗಿ ಶೌಚಾಲಯದಲ್ಲಿಯೇ ಇಡುತ್ತೇವೆ. ಶೌಚಾಲಯದ ಕಮೋಡ್ ನಲ್ಲಿ ನೀರು ಹರಿಸಿದ ಬಳಿಕ ಏಳುವ ನೀರಿನ ಪಸೆಯಲ್ಲಿಯೂ ಬ್ಯಾಕ್ಟೀರಿಯಾಗಳಿರುತ್ತವೆ. ಇವು ಸುಮಾರು ಆರು ಅಡಿ ಮೇಲೇರಿ ಕೋಣೆಯ ಅತ್ತಿತ್ತ ಸುಮಾರು ಎರಡು ಘಂಟೆಗಳ ಕಾಲ ಹಾರಾಡುತ್ತಲೇ ಇರುತ್ತವೆ. ಬಿರುಸುಗಳಿರುವ ಬ್ರಶ್ ಇವುಗಳಿಗೆ ಅತಿ ಸೂಕ್ತವಾದ ಅಡಗುತಾಣವಾಗಿದೆ. ಪರಿಣಾಮವಾಗಿ ಬಳಿಕ ಉಪಯೋಗಿಸುವ ಬ್ರಶ್ ನಲ್ಲಿಯೂ ಧಾರಾಳವಾದ ಪ್ರಮಾಣದಲ್ಲಿ ಕ್ರಿಮಿಗಳಿರುತ್ತವೆ. ಇದಕ್ಕಾಗಿ ಪ್ರತಿ ಬಾರಿ ಪೇಸ್ಟ್ ಹಚ್ಚಿಕೊಳ್ಳುವ ಮುನ್ನ ಬಿಸಿನೀರಿನಲ್ಲಿ ಬಿರುಸುಗಳನ್ನು ಮುಳುಗಿಸಿ ಒರೆಸಿ ಉಪಯೋಗಿಸಿ.

ನೆಲದ ಮೇಲೆ ಹಾಸಿರುವ ಹಾಸು

ನೆಲದ ಮೇಲೆ ಹಾಸಿರುವ ಹಾಸು

ನೆಲದ ಮೇಲಿನ ಹಾಸು ಅಥವಾ ರತ್ನಗಂಬಳಿ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ತೇಲಿ ಬಂದು ನೆಲೆಯೂರಲು ಅತ್ಯಂತ ಸೂಕ್ತವಾದ ತಾಣವಾಗಿದೆ. ರತ್ನಗಂಬಳಿಯನ್ನು ನಾವು ಬಿಸಿನೀರಿನಿಂದ ತೊಳೆಯದೇ ಇರುವ ಕಾರಣ ಇವು ಪುಂಖಾನುಪುಂಖವಾಗಿ ಬೆಳೆಯುತ್ತವೆ. ಮಾನವರ ಚರ್ಮದಿಂದ ಪ್ರತಿ ಗಂಟೆಗೂ ಸುಮಾರು ಹದಿನೈದು ಲಕ್ಷ ಜೀವಕೋಶಗಳು ಒಣಗಿ ಪಕಳೆಯಂತೆ ಉದುರುತ್ತವೆ. ಕಣ್ಣಿಗೆ ಕಾಣದ ಈ ಕಣಗಳು ಬ್ಯಾಕ್ಟೀರಿಯಾಗಳಿಗೆ ಬಿರಿಯಾನಿ ಇದ್ದಂತೆ. ಇವನ್ನು ತಿಂದು ಪೊಗದಸ್ತಾಗಿ ವಂಶಾಭಿವೃದ್ಧಿ ಮಾಡಿಕೊಂಡ ಬಳಿಕ ಇವುಗಳ ಸಂಖ್ಯೆ ಎಣಿಸಿದರೆ ಪ್ರತಿ ಇಂಚಿಗೆ ಎರಡು ಲಕ್ಷ! ಅಂದರೆ ಶೌಚಾಲಯದಲ್ಲಿನ ಕಮೋಡ್ ಮುಚ್ಚಳದ ನಾಲ್ಕು ಸಾವಿರ ಪಟ್ಟು ಹೆಚ್ಚು!

ಫ್ರಿಜ್

ಫ್ರಿಜ್

ಫ್ರಿಜ್ ನೊಳಕ್ಕೂ ಹಲವು ವಿಧದ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇತ್ತೀಚೆಗೆ ಹಲವು ಫ್ರಿಜ್ ಗಳನ್ನು ಪರೀಕ್ಷಿಸಿದ ತಜ್ಞರಿಗೆ ಇದರಲ್ಲಿ E coli (Escherichia coli) ಎಂಬ ಹೆಸರಿನ ಬ್ಯಾಕ್ಟೀರಿಯಾ ಜೀವಂತವಾಗಿದ್ದುದು ಕಂಡುಬಂದಿದೆ. ಇದು ಆಹಾರದ

ಮರುಬಳಸಬಹುದಾದ ಪ್ಲಾಸ್ಟಿಕ್ ಕೈಚೀಲಗಳು

ಮರುಬಳಸಬಹುದಾದ ಪ್ಲಾಸ್ಟಿಕ್ ಕೈಚೀಲಗಳು

ಮೊದಲ ಬಾರಿಗೆ ಬಳಸುವ ಕೈಚೀಲದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ. ಕೈ ಬದಲಾದಂತೆ ಬ್ಯಾಕ್ಟೀರಿಯಾಗಳು ಆವರಿಸುತ್ತಾ ಕಾಲಕ್ರಮೇಣ ಸಂಖ್ಯೆಯಲ್ಲಿ ಬೆಳೆಯುತ್ತಾ ಹೋಗುತ್ತವೆ. ಏಕೆಂದರೆ ಸಾಮಾನ್ಯವಾಗಿ ನಾವು ಮರು ಉಪಯೋಗಿಸುವ ಮೊದಲು ಈ ಚೀಲಗಳನ್ನು ತೊಳೆಯುವುದೇ ಇಲ್ಲ.

ಟೀವಿಯ ರಿಮೋಟ್ ಕಂಟ್ರೋಲ್

ಟೀವಿಯ ರಿಮೋಟ್ ಕಂಟ್ರೋಲ್

ಮನೆಯಲ್ಲಿನ ದಿನಬಳಕೆಯ ವಸ್ತುಗಳಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯಾಗಳನ್ನು ಟೀವಿ ರಿಮೋಟ್ ನಲ್ಲಿ ಕಾಣಬಹುದು. ಇದನ್ನು ತಪ್ಪಿಸಲು ರಿಮೋಟ್ ಕಂಟ್ರೋಲ್ ಅನ್ನು ಪ್ಲಾಸ್ಟಿಕ್ಕಿನ ಹಾಳೆಯಿಂದ ಆವರಿಸುವಂತೆ ಸುತ್ತಿ. ಪ್ರತಿಬಾರಿ ಉಪಯೋಗಿಸುವ ಮೊದಲು ಮತ್ತು ಬಳಿಕ ಬಿಸಿನೀರು ಅದ್ದಿದ ಕಾಗದದ ಬಳಸಿ ಸ್ವಚ್ಛಗೊಳಿಸಿ. ಆಗಾಗ್ಗೆ ಹೊರಕವಚವನ್ನು ಬದಲಿಸುತ್ತಿರಿ.

ಬಾಗಿಲ ಹಿಡಿಕೆಗಳು

ಬಾಗಿಲ ಹಿಡಿಕೆಗಳು

ನಿತ್ಯ ವಿವಿಧ ಜನರು ಹಿಡಿಯುವ ಬಾಗಿಲ ಹಿಡಿಕೆ, ಚಿಲಕ, ಬೀಗ ಮೊದಲಾದ ವಸ್ತುಗಳ ಮೇಲೆಯೂ ಭಾರೀ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಏಕೆಂದರೆ ನಮ್ಮ ಹಸ್ತದಲ್ಲಿ ಹಲವು ಪ್ರಕಾರದ ಬ್ಯಾಕ್ಟೀರಿಯಾಗಳು ದೇಹದ ಇತರ ಭಾಗದಲ್ಲಿರುವುದಕ್ಕಿಂತ ಹೆಚ್ಚಿರುತ್ತವೆ.

ವಿದ್ಯುದ್ದೀಪದ ಸ್ವಿಚ್

ವಿದ್ಯುದ್ದೀಪದ ಸ್ವಿಚ್

ವಿದ್ಯುತ್ ದೀಪಗಳನ್ನು ಆರಿಸಲು ಮತ್ತು ಬೆಳಗಿಸಲು ಸ್ವಿಚ್ ಒತ್ತುವ ಕಡೆ ಪ್ರತಿ ಚದರ ಇಂಚಿನಲ್ಲಿ 217ರಷ್ಟು ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.

ಅಡುಗೆ ಮನೆಯ ಪಾತ್ರೆ ತೊಳೆಯುವ ಬೋಗುಣಿ (Kitchen sink)

ಅಡುಗೆ ಮನೆಯ ಪಾತ್ರೆ ತೊಳೆಯುವ ಬೋಗುಣಿ (Kitchen sink)

ಅಮೇರಿಕಾದ ಪ್ರಸಿದ್ಧ ಪತ್ರಿಕೆಯಾದ ಟುಡೇ ಪ್ರಕಾರ ಶೌಚಾಲಯಕ್ಕಿಂತಲೂ ಹೆಚ್ಚಿನ ಕ್ರಿಮಿಗಳು ಅಡುಗೆ ಮನೆಯ ಪಾತ್ರೆ ತೊಳೆಯುವ ಬೋಗುಣಿಯ ಮೇಲಿರುತ್ತವೆ. ಇದರ ಪ್ರಮಾಣ ಇಡಿಯ ಶೌಚಾಲಯದಲ್ಲಿ ಕಂಡುಬರುವುದಕ್ಕಿಂತ ಹೆಚ್ಚು! ಇದನ್ನು ತಡೆಯಲು ಪ್ರತಿಬಾರಿ ಅಡುಗೆ ಮುಗಿದ ತಕ್ಷಣವೇ ಉತ್ತಮ ಗುಣಮಟ್ಟದ ಸ್ವಚ್ಛಗೊಳಿಸುವ ಸೋಪಿನಿಂದ ಬೋಗುಣಿಯನ್ನು ತೊಳೆಯಿರಿ.

ನಿತ್ಯದ ಕರೆನ್ಸಿ ನೋಟುಗಳು

ನಿತ್ಯದ ಕರೆನ್ಸಿ ನೋಟುಗಳು

ದಿನ ನಿತ್ಯ ಚಲಾವಣೆಯಾಗುವ ಕರೆನ್ಸಿ ನೋಟೊಂದರ ಮೇಲೆ ಎರಡು ಲಕ್ಷಕ್ಕೂ ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ. ಇದರಿಂದ ಪಾರಾಗಲು ಪ್ರತಿಬಾರಿ ಹಣದ ಲೇವಾದೇವಿಯಾದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿರಿ.

English summary

15 Unexpected Things That Are Dirtier Than Your Toilet

The prevailing thought is that the loo has to be one of the dirtiest places in the house, for obvious reasons. But out of everything you come in contact with on a regularly basis, your toilet surprisingly isn't the germiest.
X
Desktop Bottom Promotion