For Quick Alerts
ALLOW NOTIFICATIONS  
For Daily Alerts

ಕುಡಿತದ ಮತ್ತಿನಲ್ಲಿ ತೇಲಾಡುವ ಹುಡುಗರು ಬಿಚ್ಚಿಡುವ ಸತ್ಯಾಸತ್ಯತೆ ಏನು?

|

ಭಾರತದಲ್ಲಿರುವ ಗಂಡಸರಿಗು ಮತ್ತು ಆಲ್ಕೋಹಾಲ್‍ಗೂ ಒಂದು ಅವಿನಾಭಾವ ಸಂಬಂಧ ಇರುತ್ತದೆ. ಇನ್ನು ಇವರೆಲ್ಲರ ಆರಾಧ್ಯ ದೈವ ಅದು "ದೇವದಾಸ್" ಸಿನಿಮಾದ ಹೀರೋ. ಎಲ್ಲರಿಗು ತಿಳಿದಿರುವಂತೆ ಇವನೊಬ್ಬ ತನ್ನ ಪ್ರೇಯಸಿಯನ್ನು ಕಳೆದುಕೊಂಡು ಪ್ರಚಂಡ ಭಗ್ನಪ್ರೇಮಿಯಾದವನು. ಇವನ ಜೀವನದಲ್ಲಿ ನಡೆದ ದುರಂತ ಇವನನ್ನು ಕುಡಿತದ ದಾಸನಾಗಿ ಮಾಡಿಬಿಟ್ಟಿತು.

ಈ ಕುಡಿತವನ್ನು ಬಹುತೇಕ ಭಾಷೆಗಳಲ್ಲಿ ನೇರವಾಗಿ ಮಧ್ಯಪಾನ ಅಥವಾ ಆಲ್ಕೋಹಾಲ್ ಎಂದು ಕರೆಯುವುದಿಲ್ಲ. ಉದಾಹರಣೆಗೆ ಕನ್ನಡದಲ್ಲಿ "ಎಣ್ಣೆ", ತಮಿಳಿನಲ್ಲಿ "ತಣ್ಣಿ" (ನೀರು), ತೆಲುಗಿನಲ್ಲಿ "ಮಂದು"( ಔಷಧಿ) ಮತ್ತು ಮಲೆಯಾಳಿಯಲ್ಲಿ "ನಾರಂಗ ವೆಲ್ಲಂ" (ನಿಂಬೆ ಪಾನಕ) ಎಂಬ ಕೋಡ್ ವರ್ಡ್‌ಗಳಲ್ಲಿ ಕರೆಯುತ್ತಾರೆ. ಇದು ಎಲ್ಲರಿಗು ಸಾಮಾನ್ಯವಾಗಿ ಗೊತ್ತಿರುತ್ತದೆ. ಇನ್ನು ನಮ್ಮ ಅಂಕಣದಲ್ಲಿ ಎಣ್ಣೆ ಎನ್ನುವ ಅಧಿಕೃತ! ಪದವನ್ನು ಬಳಸೋಣ.

ದೇವದಾಸ್‌ನಂತಹ ಸಿನಿಮಾದ ಡೈಲಾಗ್‌ಗಳು ಕುಡುಕರ ಪಾಲಿಗೆ ವೇದವಾಕ್ಯಗಳಾಗಿರುತ್ತವೆ. ಬಹುತೇಕ ಮಂದಿಗೆ ತಮ್ಮ ದುಃಖವನ್ನು ತೋಡಿಕೊಳ್ಳಲು ಮತ್ತು ಮರೆಯಲು ಎಣ್ಣೆ ಬೇಕಾಗುತ್ತದೆ. ಆದರೆ ಕೆಲವರಿಗೆ ಮಾತ್ರ ಸ್ಫೂರ್ತಿ ಬೇಕಾದರೆ ಈ ಎಣ್ಣೆ ಬೇಕೆ ಬೇಕು. ಆಗಲೆ ಅವರ ಸೃಜನಶೀಲತೆಯ ದೀಪ ಹೊತ್ತಿಕೊಳ್ಳುವುದು. "ಅಮರ್, ಅಕ್ಬರ್, ಆಂಟೋನಿ" ಚಿತ್ರದ ಅಮಿತಾಬ್, ಅಕ್ಕಿನೇನಿ ನಾಗೇಶ್ವರ್ ರಾವ್( ತೆಲುಗು) ಮತ್ತು ಶಾರೂಕ್ ಖಾನ್ (ಹಿಂದಿ) ಅಭಿನಯದ "ದೇವದಾಸ್" ಚಿತ್ರಗಳು ಮತ್ತು ನಮ್ಮ ಉಪೇಂದ್ರ ಅಭಿನಯದ "ಎ" ಮತ್ತು "ಉಪೇಂದ್ರ" ಚಿತ್ರಗಳು ಕುಡುಕರಿಗೆ ಹಲವಾರು ವೇದ ವಾಕ್ಯಗಳನ್ನು ನೀಡಿವೆ. ಮದ್ಯಪಾನ ಸೇವಿಸುವವರ ಅತಿ ವಿಶಿಷ್ಟ ರಹಸ್ಯಗಳು!

ಇನ್ನು ಸಾಹಿತ್ಯ ಓದಿಕೊಂಡವರಿಗೆ ನಮ್ಮ "ಹೆಂಡ್ಕುಡ್ಕ ರತ್ನ"ನ ಪದಗಳು ಸಹ ಕೆಲವೊಂದು ಪದ ಪುಂಜಗಳನ್ನು ಒದಗಿಸುತ್ತದೆ. ಇವು ಕುಡಿದವರ ಬಾಯಿಯಲ್ಲಿ ಆಗಾಗ ಉದುರುತ್ತ ಇರುತ್ತವೆ. ನೋಡುವವರಿಗೆ ಮತ್ತು ಕೇಳುವವರಿಗೆ ಸ್ವಲ್ಪ ಮನೋರಂಜನೆಯನ್ನು ಒದಗಿಸುತ್ತ ಇರುತ್ತವೆ.

ಭಾರತೀಯ ಗಂಡಸರು ಸಿನಿಮಾ ಪ್ರಿಯರು ಅವರು ಸಿನಿಮಾದ ಒಂದು ಡೈಲಾಗ್, ಹಾಡು ಮತ್ತು ದೃಶ್ಯವನ್ನು ವಿವರಿಸುವಂತಹ ಒಂದು ಸಂದರ್ಭವನ್ನು ಸಹ ಮಿಸ್ ಮಾಡಿಕೊಳ್ಳುವುದಿಲ್ಲ. ಎಣ್ಣೆ ಹೊಡೆದಾಗ ಪ್ರತಿಯೊಬ್ಬರು ತಮ್ಮ ಹೃದಯಾಂತರಾಳದಿಂದ ಮಾತನಾಡುತ್ತಾರೆ ಎಂದು ಇಡೀ ಪ್ರಪಂಚವೇ ನಂಬುತ್ತದೆ. ಆದರೆ ಇದೇ ಪ್ರಪಂಚ ಕುಡಿತಕ್ಕೆ ಪುರಸ್ಕಾರವನ್ನು ನೀಡುವುದಿಲ್ಲ. ಕುಡುಕರನ್ನು ಕೇವಲವಾಗಿ ಕಾಣುತ್ತದೆ.

ವ್ಯಕ್ತಿಯಿಂದ ವ್ಯಕ್ತಿಗೆ ಕುಡಿತದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಇರಬಹುದು. ಕುಡಿದಾಗ ಜನ ಹೇಗೆ ಆಡುತ್ತಾರೆ ಎಂಬುದರ ಬಗ್ಗೆ ಅವರನ್ನು ಜನ ಪರಿಗಣಿಸುತ್ತಾರೆ. ಈ ಅಂಕಣದಲ್ಲಿ ಜನ ಕುಡಿದಾಗ ಹೇಗೆ ಮಾತನಾಡುತ್ತಾರೆ ಎಂಬುದರ ಟಾಪ್ 10 ವಾಕ್ಯಗಳನ್ನು ನೀಡಲಾಗಿದೆ. ಓದಿಕೊಳ್ಳಿ!

ಹಾಡು ಹಾಕ್ರೋ!

ಹಾಡು ಹಾಕ್ರೋ!

ಕುಡಿದ ಗಂಡಸರು ಸ್ವಭಾವದಲ್ಲಿ ಗೂಳಿಗಳಾದರು, ಮನಸ್ಸಿನಲ್ಲಿ ಮಗುವಿನಂತಾಗಿ ಬಿಡುತ್ತಾರೆ. ಅವರ ಇಷ್ಟದ ಹಾಡನ್ನು ಆಫ್ ಮಾಡಿದಿರೋ ಆಗ ಅವರ ಬಾಯಲ್ಲಿ ಒಳ್ಳೆಯ ಪದಗಳು ಬರುತ್ತವೆ. ಆ ಹಾಡಿಗು ಅವರ ಫ್ಲ್ಯಾಶ್‌ಬ್ಯಾಕ್‍ಗು ಇರುವ ಸಂಬಂಧ ಅವರಿಗೆ ನೆನಪಿಗೆ ಬರುತ್ತ ಇರುವಾಗ ಯಾವುದೇ ಕಾರಣಕ್ಕು ಆಫ್ ಮಾಡಬೇಡಿ. ಅವರು ಕೇಳಿದ ಹಾಡನ್ನೆ ಮತ್ತೆ ಮತ್ತೆ ಕೇಳುತ್ತ ಇರುತ್ತಾರೆ.

ಯಾರ್ ಮುಜೇ ಚಡ್ತಿ ಕ್ಯು ನಹಿ ಹೈ? (ಅರೆ ನನಗೆ ನಶೆ ಎರುತ್ತಿಲ್ಲ ಏಕೆ?)

ಯಾರ್ ಮುಜೇ ಚಡ್ತಿ ಕ್ಯು ನಹಿ ಹೈ? (ಅರೆ ನನಗೆ ನಶೆ ಎರುತ್ತಿಲ್ಲ ಏಕೆ?)

ಬಹುಶಃ ನೀವು ಹುಟ್ಟಿನಿಂದಲೆ ಪ್ರತಿಭಟಿಸುವ ಗುಣವನ್ನು ಹೊಂದಿರಬೇಕು! ಈ ಹಿಂದಿ ಡೈಲಾಗ್ ಅಜರಾಮರವಾಗಿ ಇಂದಿಗು ಉಳಿದುಕೊಂಡಿದೆ. ಹಿಂದಿ ಮಾತನಾಡುವ ಪ್ರತಿಯೊಬ್ಬ ಕುಡುಕನು ಈ ಡೈಲಾಗನ್ನು ಜೀವನದಲ್ಲಿ ಒಮ್ಮೆಯಾದರು ಹೇಳಿರುತ್ತಾನೆ. ದುರಂತವೆಂದರೆ, ನೀವು ಸ್ವಲ್ಪ ಮೃದುವಾಗಿರುತ್ತೀರಿ, ಆದರೆ ನಿಮ್ಮ ಸ್ನೇಹಿತರು ತಮಗೆ ತಿಳಿಯದೆ ಅಧಿಕವಾಗಿ ಕುಡಿದಿರುತ್ತಾರೆ.

ನನ್ ಮಾತ್ ಕೇಳೋ!

ನನ್ ಮಾತ್ ಕೇಳೋ!

ಕುಡಿದಾಗ ಪ್ರತಿಯೊಬ್ಬನು ವೇದಾಂತಿ ಆಗುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ. ಕುಡಿದವರು ನಿಮ್ಮ ಮಾತು ಕೇಳುವ ತಾಳ್ಮೆಯನ್ನು ಕಳೆದುಕೊಂಡು ಬಿಡುತ್ತಾರೆ. ಆಗ ಅವರು ಬಲವಂತವಾಗಿ ತಮ್ಮ ಒಂದು ಅಭಿಪ್ರಾಯವನ್ನು ಕೇಳುವಂತೆ ನಿಮಗೆ ತಿಳಿಸುತ್ತಾರೆ. ಇದು ಕೇಳುವವರಿಗೆ ತಮಾಷೆಯಾಗಿರುತ್ತದೆ, ಆದರೆ ಅವರು ಹೇಳುವುದರಲ್ಲಿ ಅರ್ಥವು ಸಹ ಇರಬಹುದು ಒಮ್ಮೆ ಕೇಳಿ!

ಈ ಪ್ರಪಂಚ ತುಂಬಾ ಕೆಟ್ಟದ್ದು!

ಈ ಪ್ರಪಂಚ ತುಂಬಾ ಕೆಟ್ಟದ್ದು!

ಜೀವನಾನುಭವ ಎಂಬುದು ಪಾಪ ಅವರನ್ನು ಕುಡುಕರನ್ನಾಗಿ ಬಡ್ತಿ ನೀಡಿದೆ. ಹಾಗಾಗಿ ನಮ್ಮ ಭಾರತೀಯ ಕುಡುಕರು ಎಲ್ಲರೂ ಸೇರಿಕೊಂಡು ಪ್ರಪಂಚಕ್ಕೆ ಕೆಟ್ಟದ್ದು ಎಂಬ ಜಾಗತಿಕ ಸ್ಥಾನಮಾನ ನೀಡಿರುತ್ತಾರೆ. " ಇಷ್ಟು ದೊಡ್ಡ ಕೆಟ್ಟ ಪ್ರಪಂಚದಲ್ಲಿ,,,,," ಎನ್ನುವ ಡೈಲಾಗ್ ನೆನಪಿಗೆ ಬಂದಿರಬೇಕಲ್ಲವೇ!. ಕೇಳುವವರಿದ್ದರೆ, ಎಳೆ ಎಳೆಯಾಗಿ ಕೆಟ್ಟ ಪ್ರಪಂಚದ ಪೋಸ್ಟ್ ಮಾರ್ಟಂ ರಿಪೋರ್ಟ್ ನಿಮ್ಮ ಮುಂದೆ ಇಡುತ್ತಾರೆ.

ಹುಡ್ಗೀರನ್ನ ನಂಬೇಡ!

ಹುಡ್ಗೀರನ್ನ ನಂಬೇಡ!

ಇದು ಮತ್ತೊಂದು ಮುತ್ತಿನಂತಹ ಮಾತು. ಕುಡಿದವರು ಯಾವತ್ತಿಗು ಹುಡುಗಿಯರನ್ನು ನಂಬುವುದಿಲ್ಲ. ನಂಬಲೇ ಬಾರದು ಎಂಬುದು ಅವರ ವೇದಾಂತ. ನಿಮ್ಮ ಜೀವನಾನುಭವವು ಅದಕ್ಕೆ ಪೂರಕವಾಗಿರಬಹುದು. ಆದರೆ ಕುಡುಕರು ಮಾತ್ರ ಈ ಬುದ್ಧಿವಾದವನ್ನು ತಮ್ಮ ಸ್ನೇಹಿತರಿಗೆ ಹೇಳುತ್ತಿರುತ್ತಾರೆ. ಇದು ಸ್ವಲ್ಪ ಅತಿಯಾದರು ಅವರ ಅಭಿಪ್ರಾಯ ಬಿಡಿ. ಎಲ್ಲಾ ಕುಡುಕರ ಗುಂಪಿನಲ್ಲಿ ಕೇಳಿ ಬರುವ ಮಾತಿದು.

ನೆನಪುಗಳ ಮಾತು ಮಧುರ..

ನೆನಪುಗಳ ಮಾತು ಮಧುರ..

ಪ್ರತಿ ಬಾರಿ ಕುಡಿದಾಗಲು ಕುಡುಕರು ನೆನಪಿನ ದೋಣಿಯಲ್ಲಿ ಪ್ರಯಾಣಕ್ಕೆ ಹೋಗುತ್ತಾರೆ. ಅವರು ಕಿಲ ಕಿಲ ಎಂದು ನಗುತ್ತಾರೆ, ಅಳುತ್ತಾರೆ, ಭಿಕ್ಷೆ ಬೇಡುತ್ತಾರೆ. ಹಾಡು ಸಹ ಹಾಡಬಹುದು. ಅವರ ಹಿಂದಿನ ಸಂಬಂಧ,ಜೀವನ, ಸ್ಥಾನಮಾನದ ಕುರಿತು ಹೇಳುತ್ತಾರೆ. ಒಮ್ಮೆ ಇದು ಶುರುವಾದರೆ, ಕೇಳುವವರಿದ್ದರೆ ಸವಿವರವಾದ ಸಂಭಾಷಣೆಗಳಿಂದ ಕೂಡಿದ ಮತ್ತು ಭಾವಾಭಿನಯವು ಸಹ ಇರುವ ನಾಟಕವನ್ನು ನೀವು ಲೈವ್ ನೋಡಬಹುದು. ಇನ್ನೂ ಮುಂದುವರಿದರೆ ಅವರ ಹುಡುಗಿಗೆ ನಿಮ್ಮ ಮುಂದೆಯೇ ಫೋನ್ ಮಾಡಿ, ಕಡಿದು ಹೋದ ಸಂಬಂಧವನ್ನು ಮುಂದುವರಿಸುವ ಅಥವಾ ನಿಂತು ಹೋಗಿರುವ ಜಗಳ ಮುಂದುವರಿಸುವ ಪ್ರಸ್ತಾಪ ಇಡಬಹುದು!

ಎರಡೇ ಎರಡು ಪೆಗ್ ಹಾಕೋಣ, ಆಮೇಲೆ ಊಟ ಮಾಡೋಣ

ಎರಡೇ ಎರಡು ಪೆಗ್ ಹಾಕೋಣ, ಆಮೇಲೆ ಊಟ ಮಾಡೋಣ

ಇದು ನಿರ್ಧಾರ, ಆದರೆ ಇದೆಂದಿಗು ಜಾರಿಗೆ ಬಂದಿಲ್ಲ. ಪ್ರತಿಯೊಬ್ಬ ಕುಡುಕರು ಕುಡಿಯುವ ಮೊದಲು ಮಾಡಿಕೊಳ್ಳುವ ಕಮಿಟ್‌ಮೆಂಟ್ ಆದರೆ ಕುಡಿದ ಮೇಲೆ ಪಾಪ ಅವರು ಈ ನಿರ್ಧಾರವನ್ನು ಪಕ್ಕಕ್ಕಿಡುತ್ತಾರೆ. ಊಟ ಅಲ್ಲಿಯೇ ಇರುತ್ತದೆ, ಬಾಟಲ್ ಖಾಲಿಯಾಗಿರುತ್ತದೆ. ಇದಂತು ಕುಡಿಯುವ ಮೊದಲು ಮಾಡಿಕೊಳ್ಳುವ ಪ್ರಮಾಣ ವಚನದಷ್ಟೇ ಪ್ರಸಿದ್ಧ ಡೈಲಾಗ್ ಆಗಿ ಹೋಗಿದೆ.

ನೀನು ನನ್ನ ಅಣ್ತಮ್ಮ ಕಣೋ

ನೀನು ನನ್ನ ಅಣ್ತಮ್ಮ ಕಣೋ

"ನೀನು ನನ್ನ ಅಣ್ತಮ್ಮ ಕಣೋ", ಇದು ಹೊಸ ಆವೃತ್ತಿ. ಹಳೆ ಆವೃತ್ತಿ " ನೋಡೋ, ನೀನು ನಾನು ಒಂದ್ ತಾಯಿ ಹೊಟ್ಟೇಲ್ ಹುಟ್ಲಿಲ್ಲ ಅಷ್ಟೇ" ಆ ಮಟ್ಟಿಗೆ ಕುಡಿದವರು ರಕ್ತ ಸಂಬಂಧಿಗಳಿಗಿಂತ ಅಧಿಕ. ಕುಡಿದಾಗ ಅಪ್ಪಿ ಕೊಳ್ಳುತ್ತಾರೆ, ಮುತ್ತು ಕೊಡುತ್ತಾರೆ, ಪ್ರಮಾಣ ಮಾಡುತ್ತಾರೆ. ಕೆಲವರು ಕುಡಿದಾಗ ಮತ್ತೊಬ್ಬನಿಗಾಗಿ ಏನು ಬೇಕಾದರು ಮಾಡಲು ಸಿದ್ಧವಾಗಿರುತ್ತಾರೆ.

ಧಮ್ ಹೊಡೆಯೊಲ್ಲ, ಎಣ್ಣೆ ಮಾತ್ರ ಹೊಡೆತಿನಿ!

ಧಮ್ ಹೊಡೆಯೊಲ್ಲ, ಎಣ್ಣೆ ಮಾತ್ರ ಹೊಡೆತಿನಿ!

ಭಾರತೀಯರು ಹೀಗೆ ಧೂಮಪಾನ ಮಾಡುವುದಿಲ್ಲ ಎನ್ನುತ್ತಾರೆ, ಆದರೆ ಎಣ್ಣೆ ಬಿಡಲ್ಲ ಎನ್ನುತ್ತಾರೆ! ಧಮ್ ಹೊಡೆಯೋದು ಎಣ್ಣೆಗಿಂತ ಡೇಂಜರ್ ಮಗ! ಎಣ್ಣೆ ಹೊಡಿ ಆದ್ರೆ ಧಮ್ ಹೊಡಿಬೇಡ! ಎಂಬ ಬೋಧನೆಗಳು ಸಹ ಬಿಟ್ಟಿಯಾಗಿ ನಮ್ಮಲ್ಲಿ ಸಿಗುತ್ತವೆ, ಬಾರುಗಳಲ್ಲಿ, ಕಾರುಬಾರುಗಳಲ್ಲಿ!

ಇವತ್ತೆ ಲಾಸ್ಟ್, ಲಾಸ್ಟ್ ಅಂದ್ರೇ ಲಾಸ್ಟ್ ಇನ್ಮೇಲೆ ಎಣ್ಣೆ ಮುಟ್ಟಲ್ಲ!

ಇವತ್ತೆ ಲಾಸ್ಟ್, ಲಾಸ್ಟ್ ಅಂದ್ರೇ ಲಾಸ್ಟ್ ಇನ್ಮೇಲೆ ಎಣ್ಣೆ ಮುಟ್ಟಲ್ಲ!

ಇದನ್ನು ಪ್ರತಿಯೊಬ್ಬ ಕುಡುಕನು ಒಮ್ಮೆ ಹೇಳುತ್ತಾನೆ. ಅಂತ ಬರೆಯೋಕೆ ಆಗಲ್ಲ ಬಿಡಿ. ಎಲ್ರೂ ಹೇಳುತ್ತಾರೆ. ಆಮೇಲೆ ಸಹ ಹೇಳುತ್ತಲೆ ಇರುತ್ತಾರೆ. ಕಿಡ್ನಿಯಲ್ಲಿ ಕಲ್ಲು ಬಂದಾಗ, ವಾರ ಪೂರ್ತಿ ಜ್ವರ ಬಂದಾಗ, ಅಯ್ಯಪ್ಪ ಮಾಲೆ ಹಾಕಿದಾಗ, ಕಾಯಿಲೆ ಬಂದು ಒಂದು ಹದಿನೈದು ದಿನ ಮಲಗಿದಾಗ, ಮದುವೆ ಆದಾಗ, ಮಗು ಆದ ಮೇಲೆ, ಹೀಗೆ ಅನೇಕ ಸಂದರ್ಭಗಳಲ್ಲಿ ನಮ್ಮ ಗಂಡಸರು ಈ ಮೇಲಿನ ಮಾತನ್ನು ಹೇಳುತ್ತಾರೆ. ಬಿಡಿ, ವಾರ ಬಿಟ್ಟು ಆಮೇಲೆ ಅವರ ಅಡ್ಡಾಗೆ ಹೋಗಿ ನೋಡಿ, ಬಾ ಮಗಾ! ಒಂದ್ ಪೆಗ್ ಹಾಕು ಎನ್ನುತ್ತಾರೆ.

English summary

10 Things Indians Say After Getting Drunk

It seems Indian men and alcohol have a gehra rishta (deep relationship). They go way back to the movie 'Devdas' [1955] where the main protagonist perishes of alcohol after he loses his childhood sweetheart to another guy in a tragic twist of fate. Read on and find out if you do this. Enjoy!
X
Desktop Bottom Promotion