For Quick Alerts
ALLOW NOTIFICATIONS  
For Daily Alerts

ಮಳೆಗಾಲವನ್ನು ದ್ವೇಷಿಸಲು ಕಾರಣಗಳೇನು?

By Super
|

ಮಳೆಗಾಗಿ ಇಳೆಯ ಸಕಲ ಜೀವಸಂಕುಲ ಹಂಬಲಿಸುತ್ತದೆ. ಮಳೆನ ನೀರಿನಲ್ಲಿ ನೆಂದು ಮಿಂದು ಪುಳಕಗೊಳ್ಳುತ್ತವೆ. ಬರಡಾಗಿದ್ದ ಭೂಮಿ ಹಸಿರುತೊಟ್ಟು ಕಂಗೊಳಿಸುತ್ತಾಳೆ. ಕೃಷಿಕರ ಮೊಗದಲ್ಲಿ ನಗು ಮೂಡುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಳೆಯಾಗುವ ನಿರೀಕ್ಷೆಯಿಂದ ಹಿರಿಯರು ದೇವರಿಗೆ ನಮಿಸುತ್ತಾರೆ. ಭೂಮಿಯಾಳದಲ್ಲಿ ಎಲ್ಲೋ ಕಾದಿದ್ದ ಇರುವೆಗಳು ಹೊರಬಂದು ರೆಕ್ಕೆ ಮೂಡಿಸಿಕೊಂಡು ತಮ್ಮ ಒಂದು ದಿನದ ಆಯುಶ್ಯವನ್ನು ಕಳೆಯಲು ಬೆಳಕಿನೆಡೆಗೆ ಹಾರುತ್ತವೆ.

ಪಟ್ಟಿ ಮಾಡಹೊರಟರೆ ಸಾವಿರಾರು ಸಂತೋಷದ ಸಂಗತಿಗಳನ್ನು ಸಂಗ್ರಹಿಸಬಹುದಾದ ವರುಣನ ಆಗಮನ ಕೆಲವರಿಗೆ ಮಾತ್ರ ಕಿರಿಕಿರಿಯುಂಟುಮಾಡುತ್ತದೆ. ಮಳೆಯೆಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಉಲ್ಲಾಸ, ಸಂತೋಷ ಅನುಭಸಿದರೆ ಕೆಲವರು ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ. ವರ್ಷಾಧಾರೆಯ ಆಗಮನದೊಂದಿಗೇ ಆಗಮನವಾಗುವ ತೊಂದರೆಗಳಿಂದ ಅವರ ಅಸಹನೆ, ಅಸಡ್ಡೆಯೂ ಪ್ರಕಟವಾಗುತ್ತದೆ. ಒದ್ದೆಯಾಗುವ ಬಟ್ಟೆ, ಹಿಡಿಯುವ ಚಳಿ, ಇಲ್ಲವಾಗುವ ವಿದ್ಯುತ್, ಕಾಲಕ್ಕೆ ಸರಿಯಾಗಿ ಆಗಮಿಸದ ಸೌಕರ್ಯಗಳು ಮಳೆಯನ್ನು ಇನ್ನಷ್ಟು ದ್ವೇಷಿಸಲು ಕಾರಣವಾಗುತ್ತವೆ.

ಎರಡನೇ ಮಹಾಯುದ್ಧದ ಬಗ್ಗೆ ಕುತೂಹಲ ಕೆರಳಿಸುವ 12 ಸತ್ಯಗಳು

ಮಳೆಗಾಲದ ಪ್ರಥಮ ಮಳೆ ಬರುತ್ತಿದ್ದಂತೆ ಪ್ರಕಟವಾಗುವ ಸಂತೋಷದಲ್ಲಿ ತೋಯುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅಗತ್ಯ. ಮೊದಲ ಮಳೆ ಮೋಡದಿಂದ ಭೂಮಿಗೆ ಬರುವ ಮೊದಲು ವಾತಾವರಣದಲ್ಲಿರುವ ಹಲವು ಕಣಗಳನ್ನು ತನ್ನಲ್ಲಿ ಕರಗಿಸಿಕೊಂಡಿರುವುದರಿಂದ ಆ ನೀರು ಹೆಚ್ಚು ಆಮ್ಲೀಯವಾಗಿರುತ್ತದೆ. ಆದುದರಿಂದ ಪ್ರಥಮ ಸುಮಾರು ಎಂಟು ನಿಮಿಷಗಳ ಮಳೆನೀರಿನಿಂದ ದೂರವಿರುವುದು ಒಳಿತು.

ಈ ನೀರಿನಿಂದ ಚರ್ಮ ಹಾಗೂ ಕೂದಲಿಗೆ ಹಾನಿಯುಂಟಾಗಬಹುದು. ಇನ್ನು ಮಳೆಯ ಕಾರಣದಿಂದ ಉದ್ಭವವಾಗುವ ಹಲವು ಪರೋಕ್ಷ ಕಾರಣಗಳಿಗೂ ಎಚ್ಚರ ವಹಿಸುವುದು ಅಗತ್ಯ. ಉದಾಹರಣೆಗೆ ನೀರಿನಲ್ಲಿ ತುಂಡಾಗಿ ಬಿದ್ದಿರುವ ಆದರೆ ಕಾಣದಿರುವ ವಿದ್ಯುತ್ ತಂತಿ, ನೀರು ತುಂಬಿರುವ ಮ್ಯಾನ್ ಹೋಲ್, ಗುಂಡಿ, ನೀರು ತುಂಬಿದ ಪರಿಣಾಮವಾಗಿ ಹುತ್ತದಿಂದ ಹೊರಬರುವ ಹಾವು, ಇಲಿ ಹೆಗ್ಗಣಗಳು, ಇತ್ಯಾದಿ ಇತ್ಯಾದಿ.
ಮಳೆಯನ್ನು ದ್ವೇಷಿಸುವವರು ಮಳೆಗಾಲದ ಅಷ್ಟೂ ದಿನಗಳನ್ನು ಮೂಲೆಗುಂಪಾಗಿ ಕಳೆಯುವ ಪ್ರಮುಖ ಕಾರಣಗಳ ಸಂಗ್ರಹವನ್ನು ಈ ಕೆಳಗೆ ನೀಡಲಾಗಿದೆ.

ಪರಿಣಾಮಕಾರಿ ಸಂವಹನ ಕಲೆಗೆ ಈ ಏಳು ಸೂತ್ರಗಳು ರಹದಾರಿ

ಮಳೆಯಿಂದಾಗಿ ವ್ಯತ್ಯಯಗೊಳ್ಳುವ ಯೋಜನೆಗಳು

ಮಳೆಯಿಂದಾಗಿ ವ್ಯತ್ಯಯಗೊಳ್ಳುವ ಯೋಜನೆಗಳು

ಆರಾಮವಾಗಿ ಮನೆಯಿಂದ ಹೊರಗೆ ಹೋಗಿ ಊಟ ಮಾಡಿ ಬರುವ ಯೋಜನೆಯಲ್ಲಿದ್ದವರು ಮಳೆ ಬಂದರೆ ಹೊರಹೋಗುವ ಯೋಜನೆಯನ್ನೇ ರದ್ದು ಮಾಡಿ ಮನೆಯಲ್ಲಿಯೇ ಕುಳಿತುಕೊಳ್ಳುತ್ತಾರೆ. ಅದೇ ಪ್ರಕಾರ ಯಾವುದೇ ಕೆಲಸಕ್ಕೂ ಹೊರಹೋಗಬೇಕಾದರೆ ಬೀಳುತ್ತಿರುವ ಜಡಿಮಳೆ ಕೆಲಸದ ಹುಮ್ಮಸ್ಸನ್ನೇ ಇಲ್ಲವಾಗಿಸಿಬಿಡುತ್ತದೆ.

ಶೂ, ಪಾದರಕ್ಷೆ ತೊಡುವಂತಿಲ್ಲ

ಶೂ, ಪಾದರಕ್ಷೆ ತೊಡುವಂತಿಲ್ಲ

ಮಳೆಯಿಂದ ದಾರಿಯುದ್ದಕ್ಕೂ ನೀರು ನಿಂತಿರುವಾಗ ಅಥವಾ ಹರಿಯುತ್ತಿರುವಾಗ ಇವರ ದುಬಾರಿ ಪಾದರಕ್ಷೆಗಳು ಹಾಳಾಗುವ ಸಂಭವವಿರುವುದರಿಂದ ಮಳೆಗಾಲ ಕಳೆಯುವವರೆಗೆ ಹೊರತೆಗೆಯುವಂತಿಲ್ಲ. ಚರ್ಮದ ಶೂ ಗಳಂತೂ ಹೊರಗೆ ತೆಗೆಯದೆ ಹೆಚ್ಚಿನ ಆರೈಕೆ ಮಾಡುತ್ತಾರೆ. ಮಳೆಗಾಲದ ಪಾದರಕ್ಷೆ ತೊಟ್ಟೇ ಹೊರಹೋದರೂ ರಸ್ತೆಯಲ್ಲಿ ಹಾದು ಹೋಗುವ ವಾಹನಗಳಿಂದ ಎರಚಲ್ಪಡುವ ಕೆಸರಿನಿಂದ ದುಬಾರಿ ಬಟ್ಟೆಗಳೂ ಹಾಳಾಗುವ ಸಂಭವವಿರುತ್ತದೆ.

ಕಗ್ಗಂಟಾಗುವ ಕೂದಲು

ಕಗ್ಗಂಟಾಗುವ ಕೂದಲು

ಮಳೆಗಾಲದಲ್ಲಿ ಕೂದಲ ಆರೈಕೆ ತುಸು ಕಷ್ಟ. ಗಾಳಿಯಲ್ಲಿರುವ ತೇವಾಂಶ ಕೂದಲನ್ನು ಒಣಗಲು ಬಿಡದ ಕಾರಣ ಕೂದಲು ಬಿಗುವಾಗಿದ್ದು ಒಪ್ಪವಾಗಿಡಲು ಕಷ್ಟವಾಗುತ್ತದೆ. ಆ ದಿನ ಸಂದರ್ಶನದಂತಹ ಯಾವುದೋ ಮುಖ್ಯ ಕೆಲಸಕ್ಕೆ ಹೋಗಬೇಕಾಗಿದ್ದರಂತೂ ಕಗ್ಗಂಟಾಗಿರುವ ಕೂದಲ ಮೇಲೆ ಭಾರೀ ಕೋಪ ಬರುತ್ತದೆ.

ಮನೆಯಲ್ಲಿಯೇ ಠಿಕಾಣಿ ಹೂಡುವ ಅನಿವಾರ್ಯತೆ

ಮನೆಯಲ್ಲಿಯೇ ಠಿಕಾಣಿ ಹೂಡುವ ಅನಿವಾರ್ಯತೆ

ಮಳೆಯಿಂದಾಗಿ ಹೊರಹೋಗುವ ಎಲ್ಲಾ ಕಾರ್ಯಕ್ರಮಗಳಿಗೆ ತಿಲಾಂಜಲಿ ಇತ್ತ ಬಳಿಕ ಉಳಿಯುವುದೆಂದರೆ ಮನೆಯಲ್ಲಿಯೇ ಠಿಕಾಣಿ. ಹೊರ ಜಗತ್ತಿನಲ್ಲಿ ಕ್ಷಣದಲ್ಲಿ ಹಾರಿ ಹೋಗುತ್ತಿದ್ದ ನಿಮಿಷಗಳು ಇಲ್ಲಿ ಘಂಟೆಗಳಂತೆ ಭಾಸವಾಗತೊಡಗುತ್ತವೆ. ಬಾರದ ಸ್ನೇಹಿತರು/ಸ್ನೇಹಿತೆಯರು, ಸಿಗದ ಮನರಂಜನೆ ದಿನವನ್ನು ಕಠಿಣವಾಗಿಸುತ್ತವೆ.

ಕೋಪವುಕ್ಕಿಸುವ ಟ್ರಾಫಿಕ್ ಜಾಂ

ಕೋಪವುಕ್ಕಿಸುವ ಟ್ರಾಫಿಕ್ ಜಾಂ

ಮಳೆಯ ಕಾರಣದಿಂದ ಮುಂದೆಲ್ಲೋ ವಾಹನವೊಂದು ಕೆಟ್ಟು ನಿಂತಿರುವ ಕಾರಣ ದಾರಿಯಲ್ಲಿ ಯಾವುದೇ ವಾಹನ ಹೋಗದೇ ನಿಂತಲ್ಲೇ ಹಾರನ್ನು ಆರ್ಭಟಿಸುತ್ತಾ ಕೋಪವುಕ್ಕಿಸುತ್ತವೆ. ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಅಥವಾ ಮನೆಯಿಂದ ಕೆಲಸಕ್ಕೆ ಹೋಗುತ್ತಿರುವಾಗ ಅನಿರೀಕ್ಷಿತವಾಗಿ ಎದುರಾಗುವ ಟ್ರಾಫಿಕ್ ಜಾಂ ವೇಳೆಯನ್ನು ಹಾಳು ಮಾಡುವುದು ಮಾತ್ರವಲ್ಲದೇ ಮುಂದಿನ ಕಾರ್ಯಕ್ರಮಗಳಿಗೂ ಸಮಯಕ್ಕೆ ಸರಿಯಾಗಿ ತಲುಪಲಾರದೇ ಹಲುಬುವಂತಾಗುತ್ತದೆ.

ದೂರವಾಗುವ ದೂರದರ್ಶನ

ದೂರವಾಗುವ ದೂರದರ್ಶನ

ಇಂದು ಟೀವಿ ಧಾರಾವಾಹಿಗಳು ನಮ್ಮ ದಿನಚರಿಯ ಒಂದು ಅಂಗವೇ ಆಗಿಹೋಗಿವೆ. ಧಾರಾವಾಹಿಯ ನಟನಟಿಯರು ನಮ್ಮ ಕುಟುಂಬವೇ ಆಗಿದ್ದಾರೆ. ವಿದ್ಯುತ್ ವೈಫಲ್ಯ ಅಥವಾ ಮೋಡದ ಕಾರಣ ಸಿಗದ ಸಿಗ್ನಲ್ ಕಾರಣದಿಂದ ದೂರವಾಗುವ ದೂರದರ್ಶನದೊಂದಿಗೇ ನಮ್ಮ ಕುಟುಂಬ ಮಿತ್ರರೂ ದೂರವಾಗುವುದರಿಂದ ಆ ದಿನದ ಸಂಚಿಕೆಯಲ್ಲಿ ಏನೇನು ಘಟಿಸಿತು ಎಂಬ ಮಾಹಿತಿಯಿಂದ ವಂಚಿತರಾಗಬೇಕಾಗುತ್ತದೆ. ಮಹಿಳೆಯರಾದರೆ ತಮ್ಮ ಸ್ನೇಹಿತೆಯರೊಂದಿಗೆ ಫೋನ್ ಮೂಲಕ ವಿಚಾರಿಸಿ ಮಾಹಿತಿ ಪಡೆದುಕೊಂಡರೆ ಪುರುಷರಿಗೆ ತಮ್ಮ ಅಹಮ್ಮಿಕೆ ಅಡ್ಡಬರುತ್ತದೆ. ವಿದ್ಯುತ್ ವೈಫಲ್ಯದೊಂದಿಗೇ ಆಗಮಿಸುವ ಸೊಳ್ಳೆಗಳು ಈ ಕಿರಿಕಿರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಕಪಾಟು ಸೇರುವ ಬಿಳಿಬಟ್ಟೆಗಳು

ಕಪಾಟು ಸೇರುವ ಬಿಳಿಬಟ್ಟೆಗಳು

ಮಳೆಗಾಲದ ಅಷ್ಟೂ ದಿನಗಳಲ್ಲಿ ಬಿಳಿಬಟ್ಟೆಗಳನ್ನು ತೊಡುವಂತಿಲ್ಲ. ಒಂದು ವೇಳೆ ತೊಟ್ಟರೂ ಯಾವುದೋ ಮಾಯೆಯಿಂದ ಸಿಡಿದು ಬಂದ ಕೆಸರಿನ ಬಿಂದುವೊಂದು ಬಿಳಿಬಟ್ಟೆಯ ಮೇಲೆ ಮೂಡಿಸಿದ ಕಲೆ ಸಂತೋಷವನ್ನು ಕೊಲೆ ಮಾಡುವ ಅಪಾಯವಿರುತ್ತದೆ. ಒಂದು ವೇಳೆ ಆ ಬಿಂದುವಿನಲ್ಲಿ ಆಯಿಲ್ಲು, ಗ್ರೀಸು ಮೊದಲಾದ ಅಂಶವೇನಾದರೂ ಇದ್ದರೆ ಕಲೆ ಶಾಶ್ವತವಾಗಿ ಉಳಿಯುವ ಸಂಭವವಿರುವುದರಿಂದ ಮಳೆಗಾಲ ಕಳೆಯುವವರೆಗೂ ಬಿಳಿಬಟ್ಟೆಗಳು ಕಪಾಟಿನಲ್ಲಿರುವುದೇ ಕ್ಷೇಮ.

ಎಲ್ಲೆಲ್ಲೂ ತೇವ, ಸೋಮಾರಿ ಭಾವ

ಎಲ್ಲೆಲ್ಲೂ ತೇವ, ಸೋಮಾರಿ ಭಾವ

ಮಳೆ ಹಿಡಿಯುತ್ತಿದ್ದಂತೆ ಎಲ್ಲೆಲ್ಲೂ ಆವರಿಸುವ ತೇವದ ಕಾರಣ ಏನು ಮುಟ್ಟಲೂ ಮುಜುಗರವಾಗುತ್ತದೆ. ಗೋಡೆಗಳಲ್ಲಿ ಬೆಳೆಯುವ ಹಾವಸೆ, ಕಪಾಟುಗಳ ಒಳಭಾಗದಲ್ಲಿ ಬರುವ ಬೂಸು, ನೆಲದಲ್ಲಿ ಹಬ್ಬುವ ಪಾಚಿ, ಹೆಂಚಿನ, ಉಪ್ಪರಿಗೆಯ ಮೇಲೆ ಬೆಳೆಯುವ ಹುಲ್ಲು ಏನನ್ನೂ ಮುಟ್ಟಲು ಮನ ಹಿಂಜರಿಯುತ್ತದೆ. ಕುಳಿತಲ್ಲೇ ಕುಳಿತುಕೊಳ್ಳುವ, ಮಲಗಿದಲ್ಲಿಯೇ ಮಲಗಿಕೊಳ್ಳಲು ಮನ ಹವಣಿಸಿ ಸೋಮಾರಿತನ ಮನೆಮಾಡುತ್ತದೆ.

ತೂಕ ಕಳೆದುಕೊಳ್ಳಲು ಅಡ್ಡಿಯಾಗುವ ಮಳೆ

ತೂಕ ಕಳೆದುಕೊಳ್ಳಲು ಅಡ್ಡಿಯಾಗುವ ಮಳೆ

ತೂಕ ಕಳೆದುಕೊಳ್ಳಲು ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳಿಗೆ ಅನಿವಾರ್ಯವಾಗಿ ವಿದಾಯ ನೀಡಬೇಕಾಗುವ ಕಾರಣ ಕಡಿಮೆಯಾಗಬಹುದಿದ್ದ ತೂಕ ಕಡಿಮೆಯಾಗದೇ ಚಿಂತೆ ಹೆಚ್ಚಿಸುತ್ತದೆ. ಬದಲಿಗೆ ಈಗಾಗಲೇ ಕಳೆದುಕೊಂಡಿದ್ದ ಕೆಲವು ಕೇಜಿಗಳು ಕೆಲವೇ ದಿನಗಳಲ್ಲಿ ಮತ್ತೆ ಹಾಜರಾಗಿ "ನಾವು ಬಂದೆವು" ಎಂದು ಅಟ್ಟಹಾಸ ಬೀರುವ ಅಪಾಯವೂ ಇರುತ್ತದೆ.

ಕೆಸರಾಗುವ ಮನೆ - ಕೊಸರಾಡುವ ಮನ

ಕೆಸರಾಗುವ ಮನೆ - ಕೊಸರಾಡುವ ಮನ

ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಯಾವುದೋ ಘಳಿಗೆಯಲ್ಲಿ ಕೆಸರಿನ ಕಾಲಿನಿಂದ ಒಳಬಂದ ಮನೆಯ ಸದಸ್ಯರ ಮೂಲಕ ಒಳಾಂಗಣವೂ ಕೆಸರಾಗಿ ಮತ್ತೆ ಶುಚಿಮಾಡುವತ್ತ ಮನ ಕೊಸರಾಡುತ್ತದೆ. ಒದ್ದೆಯಾದ ಗೋಡೆಯಲ್ಲಿ ಮೂಡುವ ಹಾವಸೆಯನ್ನು ಸ್ವಚ್ಛಗೊಳಿಸಲು ಹೋದರೆ ಅದು ಇನ್ನಷ್ಟು ಅಗಲಕ್ಕೆ ಹರಡಿ ಮನಸ್ಸಿಗೆ ಇನ್ನಷ್ಟು ಘಾಸಿ ಮಾಡುತ್ತದೆ. ಯಾವುದೋ ಮೂಲೆಯಿಂದ ಹರಿದುಬಂದ ನೀರ ಹನಿಗಳು ನೆಲದಲ್ಲಿ ಹರಡಿ ಜಾರುವ ಸಂಭವವಿರುತ್ತದೆ.

ಒಣಗದ ಬಟ್ಟೆಗಳು

ಒಣಗದ ಬಟ್ಟೆಗಳು

ಮಳೆಗಾಲದಲ್ಲಿ ಬಟ್ಟೆಗಳು ಗಲೀಜಾಗುವುದು ಎಷ್ಟು ಸುಲಭವೋ ಆ ಬಟ್ಟೆಗಳನ್ನು ಒಗೆಯುವುದು ಅಷ್ಟೇ ಕಷ್ಟ, ಆದರೆ ಒಗೆದ ಬಟ್ಟೆಗಳು ಒಣಗುವುದು ಇನ್ನೂ ಕಷ್ಟ. ಬಿಸಿಲ್ಲಿಲ್ಲದ ಕಾರಣ ಮನೆಯ ಹೊರಗೆ ಒಣಗಲು ಹಾಕುವಂತಿಲ್ಲ, ಮನೆಯೊಳಗೇ ಹಾಕಬೇಕು, ಆ ಬಟ್ಟೆಗಳಿಂದ ತೊಟ್ಟಿಕ್ಕುವ ನೀರು ನಿಂತು ಜಾರುವ ಸಂಭವವಿರುತ್ತದೆ. ಆ ಬಟ್ಟೆಗಳೇನು ಕೂಡಲೇ ಒಣಗುತ್ತವೆಯೇ? ಮೂರು ನಾಲ್ಕು ದಿನಗಳನ್ನಾದರೂ ತೆಗೆದುಕೊಳ್ಳುತ್ತವೆ. ಆಷ್ಟೂ ಹೊತ್ತು ಒಂದು ರೀತಿಯ ಕಮಟುವಾಸನೆ ಮನೆಯನ್ನು ಆವರಿಸಿಕೊಂಡಿರುತ್ತವೆ. ಮಳೆಯ ಇರಿಚಲಿನ ಕಾರಣ ಕಿಟಕಿ ತೆರೆಯುವಂತೆಯೂ ಇಲ್ಲ, ಅನಿವಾರ್ಯವಾಗಿ ಈ ವಾಸನೆಯನ್ನು ಸಹಿಸಬೇಕಾಗಿ ಬರುತ್ತದೆ.

ಅಸಹ್ಯವಾಗುವ ಕೆಸರು

ಅಸಹ್ಯವಾಗುವ ಕೆಸರು

ಮಳೆಯಿಲ್ಲದ ದಿನಗಳಲ್ಲಿ ಏನೂ ತೋರದ ರಸ್ತೆಗಳು ಮಳೆಯಾದ ತಕ್ಷಣ ಕೆಸರುಗುಂಡಿಯಾಗಿರುವ ತಮ್ಮ ಒಡಲನ್ನು ಪ್ರತ್ಯಕ್ಷಗೊಳಿಸುತ್ತವೆ. ಚಿಕ್ಕ ಚಿಕ್ಕ ಗುಂಡಿಗಳಲ್ಲಿ ಕೆಸರು ತುಂಬಿ ಯಾವುದೇ ಕ್ಷಣದಲ್ಲಿ ಮೈಮೇಲೆ ಎರಚಲು ಸಿದ್ಧರಾಗಿರುತ್ತವೆ. ಎಷ್ಟೇ ಜಾಗರೂಕತೆಯಿಂದ ಈ ಕೆಸರುಗುಂಡಿಗಳಿಂದ ದೂರವಾಗಿ ನಡೆದರೂ ಯಾವುದೋ ಕ್ಷಣದಲ್ಲಿ ಇನ್ನಾವುದೋ ಕೆಸರುಗುಂಡಿಯ ಮೇಲೆ ವೇಗವಾಗಿ ಹರಿಹಾಯುವ ವಾಹನದ ಟೈರು ನಿರ್ದಾಕ್ಷಿಣ್ಯವಾಗಿ ಕೆಸರಿನ ಕಣಗಳನ್ನು ಪ್ರೋಕ್ಷಿಸುತ್ತದೆ.

ಉಕ್ಕುವ ದುರ್ವಾಸನೆ

ಉಕ್ಕುವ ದುರ್ವಾಸನೆ

ಮೊದಲ ಮಳೆಯಾಗುತ್ತಿದ್ದಂತೆಯೇ ನೆಲದಿಂದ ಮಣ್ಣಿನ ವಾಸನೆ ಹೊರಡುತ್ತದೆ. ಅಪ್ಯಾಯಮಾನವಾಗಿರುವ ಈ ವಾಸನೆ ಕೆಲಕಾಲ ಮಾತ್ರ ಗಾಳಿಯಲ್ಲಿರುತ್ತದೆ. ಮಳೆ ಮುಂದುವರೆದಂತೆ ಗಾಳಿಯಲ್ಲಿ ಬೇರೆ ವಾಸನೆಗಳು ಪಸರತೊಡಗುತ್ತವೆ. ಭೂಮಿಯಲ್ಲಿ ಇಲಿಗಳು ಕೊರೆದಿರುವ ಬಿಲಗಳಲ್ಲಿ ನೀರು ನುಗ್ಗಿ ಸತ್ತಿರುವ ಇಲಿ ಹೆಗ್ಗಣಗಳು ಶೀಘ್ರವಾಗಿ ಕೊಳೆಯಲಾರಂಭಿಸುತ್ತವೆ. ಆ ದುರ್ವಾಸನೆ ಗಾಳಿಯಲ್ಲಿ ಹರಡತೊಡಗುತ್ತದೆ. ಸಾರ್ವಜನಿಕರು ಅಭ್ಯಾಸಬಲದಿಂದ ಅಕ್ಕಪಕ್ಕ ಎಸೆದಿರುವ ತ್ಯಾಜ್ಯದಲ್ಲಿರುವ ಕೊಳೆಯುವ ವಸ್ತುಗಳೂ ಕೊಳೆಯಲಾರಂಭಿಸಿ ಈ ದುರ್ವಾಸನೆಗೆ ತಮ್ಮ ಪಾಲಿನ ದೇಣಿಗೆ ನೀಡುತ್ತವೆ. ತ್ಯಾಜ್ಯ ಸಂಗ್ರಹವಿರುವ ಸ್ಥಳದ ಅಕ್ಕಪಕ್ಕದ ಮನೆಗಳಿದ್ದಂತೂ ಆ ಮನೆಯವರು ಮಳೆಗಾಲವನ್ನೇ ದ್ವೇಶಿಸುವಂತೆ ಮಾಡುತ್ತದೆ.

ಬೈಕ್ ಸವಾರಿಗೆ ಬೈ ಬೈ

ಬೈಕ್ ಸವಾರಿಗೆ ಬೈ ಬೈ

ದ್ವಿಚಕ್ರ ವಾಹನದಲ್ಲಿ ಎಲ್ಲಿಯಾದರೂ ಹೋಗಬೇಕಾದರೆ ರೈನ್ ಕೋಟು ತೊಟ್ಟೇ ಹೋಗಬೇಕು. ಬೈಕಿನಲ್ಲಿ ಪ್ರೇಮಿಗಳು ಒಬ್ಬರ ಹಿಂದೊಬ್ಬರು ಕುಳಿತು ಹೋಗಲು ರೈನ್ ಕೋಟು ಸವಾರಿ ಅಷ್ಟೊಂದು ಸಮಂಜಸವಲ್ಲದ ಕಾರಣ ಬೈಕ್ ಸವಾರಿಗೆ ಬೈ ಬೈ ಹೇಳಬೇಕಾಗುತ್ತದೆ.

ಮಂಜಾಗುವ ಕನ್ನಡಕ

ಮಂಜಾಗುವ ಕನ್ನಡಕ

ಕನ್ನಡಕ ಧರಿಸುವವರಿಗೆ ಮಳೆಯ ಇರಿಚಲು ಭಾರೀ ತ್ರಾಸು ನೀಡುತ್ತದೆ. ಗಾಜಿನ ಮೇಲೆ ಸಂಗ್ರಹವಾಗುವ ಮಳೆಯ ಹನಿಗಳು ದೃಷ್ಟಿಯನ್ನು ಮಂಜಾಗಿಸುವುದು ಮಾತ್ರವಲ್ಲದೇ ಪದೇ ಪದೇ ಸ್ವಚ್ಛಗೊಳಿಸುತ್ತಾ ಇರುವ ಕಿರಿಕಿರಿಯನ್ನೂ ಒದಗಿಸುತ್ತವೆ.

English summary

Why Some People Hate The Rain?

There are tons of people who resent the monsoon season. It is characterised by wet, muddy roads and reckless driving as everyone is in a hurry to get to a dry place. However, there are a set of people, for example farmers who wait patiently for this delightful weather.
Story first published: Tuesday, August 19, 2014, 15:09 [IST]
X
Desktop Bottom Promotion