For Quick Alerts
ALLOW NOTIFICATIONS  
For Daily Alerts

ಪಂಚಭೂತಗಳ ಸಿದ್ಧಿ ನಿಮ್ಮ ಕೈಗಳಲ್ಲಿವೆ ನಿಮಗಿದು ಗೊತ್ತೇ?

|

ಜನರು ಏಕೆ ತಮ್ಮ ಕೈಗಳಿಂದ ಊಟ ಮಾಡುತ್ತಾರೆ? ಏಕೆಂದರೆ ಅವರಿಗೆ ಸಂಸ್ಕೃತಿ ಇರುವುದಿಲ್ಲ ಇದು ತಮ್ಮ ಕೈಗಳಿಂದ ಊಟ ಮಾಡುವವರನ್ನು ನೋಡಿ ವಿದೇಶಿಯರು ಆಡುವ ಮಾತು! ಕೈಗಳಿಂದ ಊಟ ಮಾಡುವುದು ಅದರದ್ದೇ ಆದ ವಿಶೇಷತೆಗಳನ್ನು ಹೊಂದಿದೆ.

ಇಲ್ಲಿ ನಾವು ಮಾತನಾಡುತ್ತಿರುವುದು ಕೇವಲ ಆರೋಗ್ಯ ಪ್ರಯೋಜನಗಳನ್ನು ಮಾತ್ರವಲ್ಲ. ನಿಮ್ಮ ಕೈಗಳಿಂದ ಊಟ ಮಾಡುವುದರಿಂದ ಆಹಾರದ ಅನುಭವ ಭಿನ್ನವಾಗಿರುತ್ತದೆ. ಭಾರತದಲ್ಲಿ ಕೈಗಳಿಂದ ಊಟ ಮಾಡುವುದು ಸಂಪ್ರದಾಯವಾಗಿದೆ. ಎಷ್ಟೇ ಆಧುನಿಕ ಮನೋಭಾವದವರೂ ಕೂಡ ಕೈಗಳಿಂದ ಊಟ ಮಾಡುವುದಕ್ಕೆ ಪ್ರಾಶಸ್ತ್ಯವನ್ನು ನೀಡುತ್ತಾರೆ.

Why People Eat With Hands In Kerala?

ಕೈಗಳಿಂದ ಊಟ ಮಾಡುವುದರ ಹಿಂದೆ ಎರಡು ಸಿದ್ಧಾಂತಗಳಿವೆ ಒಂದು ಆಹಾರವೆನ್ನುವುದು ವಿಷಯವಲ್ಲ, ಇದೊಂದು ಅನುಭವ. ನಿಮ್ಮ ಬಾಯಿಗೆ ಆಹಾರವನ್ನು ಹಾಕಬಹುದು ಎಂದಾದಲ್ಲಿ, ಇದನ್ನು ಬೆರಳುಗಳಿಂದ ಸ್ಪರ್ಶಿಸುವುದರಲ್ಲಿ ಏಕೆ ಹಿಂಜರಿಕೆ.

ಬರೇ ಕೈಗಳಿಂದ ಆಹಾರವನ್ನು ಸೇವಿಸುವುದರಿಂದ ಸೇವಿಸುವ ಅನುಭವ ವರ್ಧಿಸುತ್ತದೆ. ನಿಮ್ಮ ಮೂಗು ಆಹಾರವನ್ನು ಆಘ್ರಾಣಿಸುವುದರಿಂದ ಇದಕ್ಕೆ ಮೊದಲ ಆದ್ಯತೆ ಮತ್ತು ಮೊದಲ ಸಂಪರ್ಕ. ನಂತರದ್ದು ಆಹಾರವನ್ನು ಸ್ಪರ್ಶಿಸುವ ನಿಮ್ಮ ಬೆರಳುಗಳದ್ದಾಗಿದೆ. ನಂತರದ ಸ್ಥಾನ ರುಚಿಗೆ. ಭಾರತೀಯ ಸಿದ್ಧಾಂತದ ಪ್ರಕಾರ, ನಿಮ್ಮ ಬೆರಳುಗಳನ್ನು ಬಳಸಿ ಆಹಾರವನ್ನು ಸೇವಿಸುವುದು ನಿಮ್ಮ ಊಟದ ಅನುಭವವನ್ನು ಹೆಚ್ಚಿಸುತ್ತದೆ ಎಂದಾಗಿದೆ.

ಇನ್ನೊಂದು ಸಿದ್ಧಾಂತ ದೇವರ ಸ್ವಂತ ನಾಡು ಎಂದೇ ಪ್ರಸಿದ್ಧಿ ಹೊಂದಿರುವ ಕೇರಳದಿಂದ ಬಂದಿರುವಂಥದ್ದಾಗಿದೆ. ಕೈಗಳಿಂದ ಊಟ ಮಾಡುವುದು ಮತ್ತು ಬಾಳೆ ಎಲೆಯಲ್ಲಿ ಊಟ ಮಾಡುವುದು ಕೇರಳದಲ್ಲಿ ಸಂಪ್ರದಾಯವಾಗಿದೆ ಮತ್ತು ಕಟ್ಟುನಿಟ್ಟಾದ ಆಚರಣೆಯಾಗಿದೆ. ಕೇರಳದ ನಂಬಿಕೆಯಂತೆ ಪ್ರಕೃತಿಯ ಐದು ಮುಖ್ಯ ಅಂಶಗಳಲ್ಲಿ ನಮ್ಮ ಹಸ್ತಗಳೂ ಸೇರಿವೆ ಎಂದಾಗಿದೆ. ನಮ್ಮ ಕೈಗಳ ಐದು ಬೆರಳುಗಳು ಐದು ಪ್ರಕೃತಿಯ ಮೂಲ ಅಂಶಗಳಾಗಿವೆ.

ಹೆಬ್ಬೆರಳು ಅಗ್ನಿಯನ್ನು ಪ್ರನಿಧಿಸಿದರೆ, ತೋರು ಬೆರಳು ವಾಯುವನ್ನು, ಮಧ್ಯಬೆರಳು ಆಕಾಶವನ್ನು, ಉಂಗುರ ಬೆರಳು ಭೂಮಿಯನ್ನೂ, ಕಿರು ಬೆರಳು ನೀರನ್ನು ಪ್ರತಿನಿಧಿಸುತ್ತದೆ. ಇವೆಲ್ಲವೂ ಪ್ರಕೃತಿಯ ಮುಖ್ಯ ಪಂಚಭೂತಗಳಾಗಿವೆ.

ನಮ್ಮ ಕೈಗಳಿಂದ ಊಟ ಮಾಡಿದರೆ ನಮ್ಮ ದೇಹದೊಳಗೆ ಪ್ರಕೃತಿಯ ಎಲ್ಲಾ ಈ ಅಂಶಗಳೂ ಲೀನವಾಗುತ್ತವೆ ಎಂಬುದು ನಂಬಿಕೆಯಾಗಿದೆ. ಆದ್ದರಿಂದಲೇ ಭಾರತೀಯರು ಅದರಲ್ಲೂ ಕೇರಳೀಯರು ಕೈಯಲ್ಲಿ ಊಟ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇದರಿಂದ ಆಹಾರದ ಮೇಲೆ ನಂಬಿಕೆ ಮತ್ತು ಶ್ರದ್ಧೆ ಇರಿಸಲು ಅವರಿಗೆ ಇದು ಸಹಾಯಕವಾಗುತ್ತದೆ.

English summary

Why People Eat With Hands In Kerala?

Eating with hands has its own benefits. It is not just the health benefits we are talking about. The experience of food is changed when you eat with your hands. Eating with hands is a tradition in India. No matter how sophisticated one is, Indians always prefer to eat with their hands.
X
Desktop Bottom Promotion