For Quick Alerts
ALLOW NOTIFICATIONS  
For Daily Alerts

ನಾವು ಸ್ನಾನ ಮಾಡುತ್ತಿರುವಾಗಲೇ ಏಕೆ ಒಳ್ಳೆಯ ಐಡಿಯಾಗಳು ಬರುತ್ತವೆ?

By Viswanath S
|

ನಮಗೆ ಯಾವಾಗ ಬೇಕಾದರೂ ಬರಬಹುದಾದ ಒಳ್ಳೆಯ ಐಡಿಯಾಸ್, ಅಂದರೆ ಕಾಡಿನಲ್ಲಿ ತಿರುಗಾಡುವುದು, ನಮ್ಮ ಸಾಕುಪ್ರಾಣಿಗಳ ಜೊತೆ ಆಡುವುದು, ಮಲಗುವ ಮುನ್ನ ಅಥವಾ ಏಳುತ್ತಿದ್ದಂತೆಯೇ ನಮ್ಮ ಆತ್ಮೀಯ ಸ್ನೇಹಿತರ ಜೊತೆ ಮಾತನಾಡಬೇಕೆಂಬುದು ಹೀಗೆ ಎಷ್ಟೋ ಕಲ್ಪನೆಗಳು ಉಂಟಾಗುತ್ತಿರುತ್ತವೆ.

ಇಂತಹ ಕಲ್ಪನೆಗಳು ಅಥವಾ ಐಡಿಯಾಗಳು ಹೇಗೆ ತಲೆಯಲ್ಲಿ ಉದ್ಭವಿಸುತ್ತುದೆಯೋ ಎಂಬುದಕ್ಕೆ ಸರಿಯಾದ ಕಾರಣಗಳಿಲ್ಲವಾದರೂ ಸಹ ಸುಮ್ಮನೆ ಅಸಮಾನ್ಯವಾದ ಮತ್ತು ಸ್ಪೂರ್ತಿದಾಯಕ ಕಲ್ಪನೆಗಳಿಗೆ ಸದಾ ಸ್ವಾಗತವನ್ನು ಬಯಸುತ್ತೇವೆ.

ಇತ್ತೀಚೆಗೆ ಇಂತಹ ಒಳ್ಳೆಯ ಐಡಿಯಾಗಳು ಮತ್ತು ಯೋಚನೆಗಳು ನಾವು ಸ್ನಾನ ಮಾಡುತ್ತಿರುವಾಗಲೇ ಏಕೆ ಬರುತ್ತವೆಯೆಂದು ಮೆಂಟಲ್ ಪ್ಲಾಸ್ ಒಂದು ಚಿಂತನೆಯನ್ನು ನಡೆಸಿತು.

Why Good Ideas Come to Us While Showering

ಬ್ಯಾಚುಲರ್ ಪಾರ್ಟಿಯಿಂದ ನಿಮಗುಂಟಾಗುವ ಹಾನಿಗಳು

ಇದು ದೊಡ್ಡದಾಗಿರಲೀ ಸಣ್ಣದಾಗಿರಲಿ ಇಂತಹ ಕಲ್ಪನೆಗಳು ನಾವು ಸ್ನಾನಮಾಡುತ್ತಿರುವಾಗಲೇ ಬರುವುದು ಸಮಂಜಸವೇ ಸರಿ. ಶವರ್ ಸ್ನಾನದ ಗಳಿಗೆಯೇ ದೊಡ್ಡ ಕಲ್ಪನೆಗಳನ್ನು ಮಾನಸಿಕವಾಗಿ ಚಿತ್ರಣೆ ಮಾಡಿಕೊಳ್ಳುವುದಕ್ಕೆ ಸರಿಯಾದ ಸ್ಥಳ.

ಸಂಶೋಧನೆಗಳ ಪ್ರಕಾರ ವ್ಯಾಯಾಮ ಮಾಡುವಾಗ ಅಥವ ಶವರ್ ತೆಗೆದುಕೊಳ್ಳುವಾಗ ನಮಗೆ ಹೆಚ್ಚಾಗಿ ಕ್ರಿಯಾತ್ಮಕ ಯೋಚನೆಗಳು ತಲೆಯಲ್ಲಿ ಬರುತ್ತವೆ. ಏಕೆಂದರೆ ನಾವು ದೈನಂದಿನ ಕೆಲಸಗಳಲ್ಲಿ ತೊಡಗಿರುವಾಗ ಅಥವ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುವಾಗ ನಮ್ಮ ಮೆದುಳು ಹೆಚ್ಚು ಕಾರ್ಯನಿರತವಾಗಿರುತ್ತದೆ ಮತ್ತು ಇತರೆ ಯೋಚನೆ ಮಾಡಲು ಬಿಡುವುದಿಲ್ಲ.

ಹಗಲುಗನಸು ಅಥವ ನಿಮ್ಮ ಜೀವನದ ಮತ್ತು ಆಲೋಚನೆಗಳ ಜೊತೆಗೂಡಿ ನಿಮ್ಮ ಮೆದುಳಿನ ಮುಂಭಾಗದ ಹೊರಪದರ -- ಅಂದರೆ ನಿಮ್ಮ ಗುರಿಗಳು, ನಿರ್ಧಾರಗಳು ಮತ್ತು ವರ್ತನೆಗಳನ್ನು ನಿರ್ದೇಶಿಸುವ

ಮೆದುಳಿನ ಪ್ರಮುಖ ಭಾಗ--ವನ್ನು ಆರಾಮಗೊಳಿಸುತ್ತವೆ. ಅದು ನಿಮ್ಮ ಮೆದುಳಿನ ಉಳಿದ ಭಾಗ - 'ಪೂರ್ವ ನಿಯೋಜಿತ ಭಾಗ' (DMN - Default Mode Network)- ವನ್ನು ಸಕ್ರಿಯೆಗೊಳಿಸಿ ನಿಮ್ಮ ತಲೆಬುರುಡೆಯ ವಿವಿಧ ಭಾಗಗಳನ್ನು ತೆರವುಗೊಳಿಸುತ್ತದೆ.

ನಿಮ್ಮ ಮೆದುಳಿನ ಹೊರಪದರವು ಸಡಿಲಿಸಿದಂತೆ ಮತ್ತು ನಿಮ್ಮ ಡಿ.ಎಮ್.ಎನ್. ಕಾರ್ಯನಿರತಗೊಳಿಸಿ ನಿಮ್ಮ ಜಾಗ್ರುತ ಮನಸ್ಸು ತಳ್ಳಿಹಾಕಿರಬಹುದಾದ ಸಂಪರ್ಕಗಳನ್ನು ನಿಮ್ಮ ಹೊಸ ಕ್ರಿಯಾತ್ಮಕತೆಯಿಂದ ಸಂಪರ್ಕಗೊಳಿಸಬಹುದು

ನೀವು ಹೆಚ್ಚು ಕಠಿಣ ಚಿಂತನೆಯಲ್ಲಿ ತೊಡಗಿರುವಾಗ -- ಅಂದರೆ ನೀವು ಒಂದು ಪ್ರಮುಖ ಕೆಲಸಮಾಡುತ್ತಿರುವಾಗ -- ನಿಮ್ಮ ಪೂರ್ವ ನಿಯೋಜಿತ ಜಾಲವು ನಿಷ್ಕ್ರಿಯೆಗೊಳಿಸಿದಾಗ ನಿಮ್ಮ ಮೆದುಳಿನ ಮುಂಭಾಗದ ಹೊರಪದರದ ನಿಯಂತ್ರಣವು ಉತ್ತೇಜನಗೊಳ್ಳುತ್ತದೆ.

ಈ ರೀತಿ ಆಗುವುದು ಸಾಮಾನ್ಯ ಮತ್ತು ಕೆಟ್ಟದಂತೂ ಅಲ್ಲ. ಹೀಗಿರುವಾಗ ಅದು ನಿಮ್ಮ ಮನಸ್ಸನ್ನು ಒಂದು ಕಾರ್ಯದಮೇಲೆ ಗಮನವಿಡಲು ಒತ್ತಾಯಿಸುತ್ತದೆ ಮತ್ತು ಒಂದು ಪ್ರಮುಖ ಸಮಸ್ಯೆ ಮತ್ತು ಹೊಸ ವಿವಿಧ ಪರಿಹಾರಗಳ ಅಥವ ಚಿಂತನೆಗಳ ಮೇಲೆ ಕಾಲಿಡುವಂತೆ ಮಾಡುವುದಿಲ್ಲ.

ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

ಸಂಶೋಧನೆಯ ಪ್ರಕಾರ ನೀವು ಸ್ನಾನ ಮಾಡುತ್ತಿರುವಾಗಲೀ ಅಥವ ಬೆಳಗಿನ ಜಾಗ್ಗಿಂಗ್ ಮಾಡುತ್ತಿರುವಾಗಲೀ ನಿಮ್ಮ ಮೆದುಳು ಅತ್ಯಂತ ಸಕ್ರಿಯವಾಗಿರುತ್ತದೆ. ಹಾರ್ವರ್ಡಿನ ಶೆಲ್ಲಿ ಕಾರ್ಸನ್ 'ಅತ್ಯಂತ ಕ್ರಿಯಾತ್ಮಕ ಜನರು ಒಂದು ಅದ್ಭುತ ವಿಶಿಷ್ಟ ಸ್ವಭಾವನ್ನು ಹೊಂದಿದ್ದು' ಅವರನ್ನು ಸುಲಭವಾಗಿ ಬೇರೆಡೆಗೆ ತಿರುಗಿಸಬಹುದು ಎಂದು ಕಂಡುಹಿಡಿದಿದ್ದಾರೆ. ಮತ್ತು ಬಿಸಿನೀರಿನ ಶೊವರ್ ಸ್ನಾನದಲ್ಲಿದೆ ಅದರ ತಿರುಳು.

ಅದು ನಿಮ್ಮನ್ನು ಬೇರೆಡೆಗೆ ತಿರುಗಿಸಬಹುದು. ಅದು ನಿಮ್ಮ ಗಮನದ ದಿಕ್ಕು ಬದಲಾಯಿಸಬಹುದು. ಅಲ್ಲದೆ ಅದು ನಿಮ್ಮ ಮೆದುಳಿಗೆ ವಿವಿಧ ಕಾರ್ಯಗಳಲ್ಲಿ ತೊಡಗಿಸಲು ಉತ್ತೇಜನಕೊಡುತ್ತದೆ. ಅದು ನಿಮ್ಮ ಡಿ.ಎಮ್.ಎನ್ ಅನ್ನು ಸಕ್ರಿಯೆಗೊಳಿಸಿ ಐಲುಪೈಲಾದ ಕಲ್ಪನೆಗಳಿಗೆ ಉತ್ತೇಜಿಸುತ್ತದೆ.

ಹಾಗೆಯೇ ಸ್ನಾನಮಾಡುತ್ತಿರುವಾಗ ಸೋಪಿನ ನೊರೆ ಕರಗಿ ನಿಮ್ಮ ಮೆದುಳಿನ ಸ್ವಿಚ್ಚನ್ನು ಹಾಕುತ್ತದೆ. ಕೇವಲ ಕೆಲಸಗಳಿಂದ ಬೇಸರಗೊಂಡು, ಬೇರೆ ಏನೂ ನಿರ್ದಿಷ್ಟ ಯೋಚನೆ ಇಲ್ಲದಿದ್ದಾಗ, ಸ್ನಾನದ ಶೊವರ್ ನಿಮಗೆ ವಿಶ್ರಾಂತಿ ಕೊಟ್ಟು ಅಪರೂಪವಾಗಿಯೂ ಸಹ ನಿಮ್ಮ ಗಮನವನ್ನು ಬೇರೆಡೆಗೆ ಹರಿಸುವುದಿಲ್ಲ. ಇದಕ್ಕೆಲ್ಲ ಮಿಗಿಲಾಗೆ ನೀವು ಸ್ನಾನ ಮಾಡುವಾಗ ಒಬ್ಬರೇ ಇರುತ್ತೀರಿ!

ನೀವು ಸ್ನಾನದಲ್ಲಿ ತೊಡಗಿ ಶುಚಿಯಾಗುತ್ತಿರುವಾಗ ನಿಮ್ಮ ದೇಹವು ನಿಜವಾಗಿಯೂ ನಿಮ್ಮ ನರಪ್ರೇಕ್ಷಕ, ಜೀವಶಾಸ್ತ್ರ ನಿಮ್ಮಲ್ಲಿ ಸೃಜನಶೀಲ ಶಕ್ತಿಗಳಿಗೆ ಉತ್ತೇಜನ ಕೊಡುತ್ತದೆ. ಆಲ್ಫಾ

ಅಲೆಗಳು ನಿಮ್ಮ ಮೆದುಳಿನ ಮೂಲಕ ನಿಮ್ಮ ಪೂರ್ವ ನಿಯೋಜಿತ ವ್ಯವಸ್ಥೆ ಜೊತೆಯಲ್ಲಿ ಹಾದುಹೋಗುತ್ತದೆ. ಸಾಧಾರಣವಾಗಿ ನಾವು ದಣಿದಿರುವಾಗ (ಬೆಳಗ್ಗೆ ಅಥವ ರಾತ್ರಿ) ಶೊವರ್ ಸ್ನಾನ ಮಾಡುವ ಸಮಯದಲ್ಲಿ ನಾವು ಉತ್ತಮ ಚಿಂತನೆ ಮಾಡಲು ಸಾಧ್ಯವಾಗುತ್ತದೆ ಏಕೆಂದರೆ, ‘Thinking and Reasoning' ಜರ್ನಲ್ ಪ್ರಕಾರ ಆ ಸಮಯ ಅತ್ಯುಚ್ಚ ಕ್ರಿಯಾತ್ಮಕ ಮಟ್ಟದಲ್ಲಿರುತ್ತದೆ.

ಇಷ್ಟು ಓದಿದಮೇಲೆ ಏತಕ್ಕಾಗಿ ಸ್ನಾನಮಾಡುವಾಗ ನಮಗೆ ಅತ್ಯುತ್ತಮ ಐಡಿಯಾಗಳು ಬರುತ್ತವೆ ಎಂದು ತಿಳದಿರಬೇಕು. ಹಾಗೆಯೇ ಇನ್ನು ಮುಂದೆ ಸ್ನಾನ ಮಾಡುವ ಸ್ಥಳದ ಹತ್ತಿರ ಇನ್ನು ಮುಂದೆ ನಿಮ್ಮ ಪೆನ್ನು ಮತ್ತು ಪೇಪರ್ ಇಟ್ಟುಕೊಳ್ಳುವುದನ್ನು ಪರಿಗಣಿಸಿ.

English summary

Why Good Ideas Come to Us While Showering

Our best ideas can come to us at anytime — hiking in the woods, playing with our pets, talking with our best friend or just seconds before falling asleep or waking up. We don’t always know where (or why) they come from,
X
Desktop Bottom Promotion