For Quick Alerts
ALLOW NOTIFICATIONS  
For Daily Alerts

ದಕ್ಷಿಣ ಭಾರತೀಯರ ಕುರಿತಾಗಿ ಹೇಳಲಾಗುವ ವಿಲಕ್ಷಣ ಸಂಗತಿಗಳು!

By Deepak
|

ಮೊದಲೇ ತೀರ್ಮಾನ ಮಾಡಿ ಬಿಡುವುದು ಮನುಷ್ಯರ ಸ್ವಭಾವ. ನಾವೆಲ್ಲರು ಕೆಲವರನ್ನು ಮುಖ ನೋಡಿ ಮೊಳ ಹಾಕುವ ಮನೋಭಾವವನ್ನು ರೂಢಿಸಿಕೊಂಡಿರುತ್ತೇವೆ. ಅವರ ವೇಷ-ಭೂಷಣ,ನೋಟ ನೋಡಿಯೇ ಅವರ ಬಗ್ಗೆ ಸಂಪುಟಗಳಷ್ಟು ಹೇಳಬಲ್ಲೆವು ಮತ್ತು ಬರೆಯಬಲ್ಲೆವು. ಸತ್ಯಾಂಶವೇನೆಂದರೆ ಈ ಪೂರ್ವಾಗ್ರಹ ಪೀಡಿತ ಸ್ವಭಾವವನ್ನು ನಾವು ಬದಲಾಯಿಸಿಕೊಳ್ಳಲು ಹೋಗುವುದಿಲ್ಲ. ಇದನ್ನು ನೀವು ಒಪ್ಪುವಿರೆ?
ಭಾರತದಲ್ಲಿ ಮುಖ್ಯವಾಗಿ ಎರಡು ಬಗೆಯ ಭಾರತೀಯರನ್ನು ನಾವು ಗುರುತಿಸುತ್ತೇವೆ.

ಒಬ್ಬರು ಉತ್ತರ ಭಾರತದವರಾದರೆ ಮತ್ತೊಬ್ಬರು ದಕ್ಷಿಣ ಭಾರತದವರು. ಈ ಎರಡೂ ಬಗೆಯ ಭಾರತೀಯರು ಭಾರತದ ಎಲ್ಲಾ ರಾಜ್ಯಗಳನ್ನು ಪ್ರತಿನಿಧಿಸುತ್ತಾರೆ. ಆದರೆ ವಿಷಯ ಏನಪ್ಪ ಎಂದರೆ ಇವರಿಬ್ಬರು ಒಬ್ಬರನ್ನೊಬ್ಬರು ಅಪಹಾಸ್ಯ ಮಾಡುವ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಈ ಎರಡೂ ಬಗೆಯ ಭಾರತೀಯರು ಶ್ರೀಮಂತವಾದ ಪರಂಪರೆಯ ಮತ್ತು ಸಂಪ್ರದಾಯಗಳ ಹಿನ್ನಲೆಯಿಂದ ಬಂದಿದ್ದರು, ಒಟ್ಟಿಗೆ ನಾವೆಲ್ಲರು ಒಂದೇ ಎನ್ನುವುದು ತುಂಬಾ ಅಪರೂಪವಾದ ಸನ್ನಿವೇಶಗಳಲ್ಲಿ ಮಾತ್ರ.

ಹಾಗಾದರೆ ಉತ್ತರ ಭಾರತದಲ್ಲಿ ನಮ್ಮ ದಕ್ಷಿಣ ಭಾರತೀಯರ ಬಗ್ಗೆ ಯಾವ ಅಭಿಪ್ರಾಯ ಇದೆಯೆಂದು ನಾವು ನಿಮಗೆ ಹೇಗೆ ತಿಳಿಸಬಹುದು. ಇಲ್ಲಿರುವ ವಿಚಾರಗಳನ್ನು ಓದಿಕೊಳ್ಳಿ, ಅದನ್ನು ಓದಿ ನೀವು ನಗದಿದ್ದರೆ ಆಗ ಕೇಳೀ. ಕೆಲವೊಂದು ನಿಮಗೆ ಶಾಕ್ ಸಹ ನೀಡಬಹುದು! ಭಾರತದಲ್ಲಿರುವ ಕೆಲವೊಂದು ವಿಲಕ್ಷಣ ಆಚರಣೆಗಳು

ಉದ್ದವಾದ ಹೆಸರುಗಳು

Weird Things Said About South Indians!

ದಕ್ಷಿಣ ಭಾರತೀಯರ ಹೆಸರುಗಳು ಉದ್ದವಾಗಿರುತ್ತವೆ. ಇವೆ, ಹಾಗೆಂದು ಎಲ್ಲರು ಉದ್ದವಾದ ಹೆಸರುಗಳನ್ನು ಹೊಂದಿಲ್ಲ. ಕೆಲವರಿಗೆ ಮಾತ್ರ ಉದ್ದವಾದ ಹೆಸರುಗಳು ಇವೆ, ಅದು ಅವರ ಸಂಪ್ರದಾಯಕ್ಕೆ ಅನುಗುಣವಾಗಿ.

ಅವರು ಅವರ ಆಹಾರಕ್ಕೆ ಅಂಟಿಕೊಂಡಿರುತ್ತಾರೆ

ಇದು ಮತ್ತೊಂದು ವಿಲಕ್ಷಣವಾದ ನಂಬಿಕೆ. ದಕ್ಷಿಣ ಭಾರತೀಯರು ಅವರ ಆಹಾರ ಪದ್ಧತಿಗೆ ಅಂಟಿಕೊಂಡಿರುತ್ತಾರೆ. ದಕ್ಷಿಣ ಭಾರತೀಯರು ಅವರ ಇಡ್ಲಿ ಮತ್ತು ದೋಸೆಗಳನ್ನು ಬಿಟ್ಟು ಬದುಕಲಾರರು ಎಂಬುದು ಅವರ ನಂಬಿಕೆ. ಸಾಮಾಜಿಕ ಜಾಲತಾಣಗಳಿ೦ದ 5 ಜೀವನ ಮೌಲ್ಯದ ಕಲಿಕೆ

ಬಣ್ಣದ ಬಗ್ಗೆ ಮಾತು

ನೀವು ಒಂದು ವೇಳೆ ಕಪ್ಪಗಿದ್ದರೆ, ನೀವು ದಕ್ಷಿಣ ಭಾರತೀಯರು! ಹಾಗಾದರೆ ಬೆಳ್ಳಗಿರುವವರು ದಕ್ಷಿಣ ಭಾರತೀಯರಲ್ಲ! ಹೋಗ್ಲಿ ಬಿಡಿ, ಅವರ ಅಙ್ಞನಕ್ಕೆ ನಾವೇನು ಮಾಡೋಕಾಗುತ್ತೆ.

ದಕ್ಷಿಣ ಭಾರತೀಯರು ಸಂಪ್ರದಾಯವಾದಿಗಳಂತೆ?

ಇದು ಸಹ ಮತ್ತೊಂದು ಪೂರ್ವಾಗ್ರಹ, ದಕ್ಷಿಣ ಭಾರತೀಯರೆಲ್ಲರು ಸಾಂಪ್ರದಾಯಿಕವಾದ ಹಿನ್ನಲೆಯಿಂದ ಬಂದಿರುತ್ತಾರೆ. ಹಾಗಾಗಿ ಅವರು ಸಮಾಜದಲ್ಲಿ ಯಾವುದೇ ಹೊಸದು ಬಂದರು ಅದಕ್ಕೆ ನೋ,,,,, ಎನ್ನುತ್ತಾರಂತೆ!

ಅವರೆಲ್ಲರು ಒಳ್ಳೆಯ ನೃತ್ಯಪಟುಗಳು

ಇದನ್ನು ಕೇಳಿ ನೀವು ನಗದಿದ್ದರೆ ಆಗ ಹೇಳಿ!ಕರ್ನಾಟಕ ಶಾಸ್ತ್ರೀಯ ಸಂಗೀತ, ಕುಚುಪುಡಿ, ಯಕ್ಷಗಾನ, ನಯ್ಯಂಡಿ, ಕಥಕ್ಕಳಿ ಬಹುಶಃ ಇತ್ಯಾದಿ ಪ್ರಕಾರಗಳು ಅವರ ಮನಸ್ಸಿನಲ್ಲಿ ಹಾದು ಹೋಗಿರಬೇಕು, ಇಲ್ಲವಾದಲ್ಲಿ ಚಿರಂಜೀವಿ, ಪ್ರಭುದೇವ ಇಂತಹವರಿಂದ ನಮ್ಮನ್ನು ಸಹ ಡಾನ್ಸರ್‌ಗಳು ಎಂದು ಭಾವಿಸಿದ್ದಾರೆ.

ಬಾಳೆ ಎಲೆಯಲ್ಲಿಯೇ ಊಟ ಮಾಡುವುದು

ಹೌದು, ಹಬ್ಬ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ದಕ್ಷಿಣ ಭಾರತೀಯರು ಬಾಳೆ ಎಲೆಯಲ್ಲಿ ಊಟವನ್ನು ಮಾಡುತ್ತಾರೆ. ಹೋಟೆಲ್‍ನವರು ತಟ್ಟೆಯಲ್ಲಿ ಬಾಳೆ ಎಲೆ ಹಾಕಿ ಗ್ರಾಹಕರನ್ನು ಸೆಳೆಯಲು ನೋಡಿದಾಕ್ಷಣ, ನಾವೆಲ್ಲರು ಬಾಳೆಯೆಲೆ ಇಲ್ಲದೆ ಊಟ ಮಾಡುವುದಿಲ್ಲ ಎಂದು ಕೊಂಡರೆ ಹೇಗೆ.

ಲುಂಗಿ

ಸಂಶಯವೇ ಬೇಡ, ಇಲ್ಲಿನ ಉಷ್ಣ ಹವಾಮಾನಕ್ಕೆ ಲುಂಗಿ ಮತ್ತು ಪಂಚೆಗಳು ಹೇಳಿ ಮಾಡಿಸಿದ ದಿರಿಸಾಗಿರುತ್ತವೆ. ಹಾಗೆಂದು ಲುಂಗಿಯೇ ನಮ್ಮ ಉಡುಗೆ ಎಂದು ಕೊಳ್ಳುವುದು ತಪ್ಪು. ಇದು ಸಹ ದಕ್ಷಿಣ ಭಾರತೀಯರು ಎಂದು ತಕ್ಷಣ ಅವರ ಮನಸ್ಸಿಗೆ ಬರುವ ವಿಚಿತ್ರ ಸಂಗತಿ, ಒಪ್ಪುವಿರಾ?

English summary

Weird Things Said About South Indians!

Being judgemental is the very nature of human beings. We tend to create opinions on anyone on the basis of their looks and appearances. We can speak or write volumes on this but the truth is that we cannot change our primordial nature. Do you agree with me? In India,
Story first published: Wednesday, November 12, 2014, 18:05 [IST]
X
Desktop Bottom Promotion