For Quick Alerts
ALLOW NOTIFICATIONS  
For Daily Alerts

ಹೊಸ ಭಾಷೆಯನ್ನು ಕಲಿತರೆ ಉಂಟಾಗುವ 8 ಪ್ರಯೋಜನಗಳು

|

ಭಾಷೆಯು ಸಂವಹನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೊಸ ಭಾಷೆಯನ್ನು ಕಲಿಯುವುದು ಎಂದಿಗೂ ಸುಲಭದ ವಿಚಾರವಲ್ಲ. ನೀವು ಇದರಲ್ಲಿ ವಿಜಯಿಗಳಾದಿರಿ ಎಂದಲ್ಲಿ ಅದರಿಂದ ಸಾಕಷ್ಟು ಪ್ರಯೋಜನಗಳಿವೆ. ಹೊಸ ಭಾಷೆಯನ್ನು ಕಲಿಸುವ ಸಂಸ್ಥೆಗಳು ಇದ್ದು ನಿಮಗೆ ಇವು ಹೊಸ ಲೋಕದ ಅನುಭವವನ್ನು ಮಾಡಿಕೊಡುತ್ತವೆ. ಆದರೆ ಇನ್ನೊಂದು ಭಾಷೆಯನ್ನು ಏಕೆ ಕಲಿಯಬೇಕು ಎಂಬುದನ್ನು ಕಂಡುಕೊಂಡಿದ್ದೀರಾ? ಬರಿಯ ಹವ್ಯಾಸಕ್ಕೆ ಮಾತ್ರವೇ ಹೊಸ ಭಾಷೆಯನ್ನು ಕಲಿತುಕೊಳ್ಳದೆ ಅದರಿಂದ ಉಂಟಾಗುವ ಪ್ರಯೋಜನಗಳನ್ನು ಕೂಡ ಅರಿತುಕೊಳ್ಳಿ.

ಹೊಸ ಭಾಷೆಯನ್ನು ಓದುವುದು ಬರೆಯುವುದು ಮತ್ತು ಮಾತನಾಡುವುದನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಎಲ್ಲಾ ಭಾಷೆಗಳಲ್ಲೂ ನೀವು ತಜ್ಞರಾಗಬೇಕೆಂದೇನಿಲ್ಲ. ಆದರೆ ಹೆಚ್ಚಿನ ಭಾಷೆಗಳನ್ನು ಮಾತನಾಡುವುದು ಹೇಗೆ ಎಂಬುದನ್ನು ನೀವು ತಿಳಿದಿರಬೇಕು.

ಭಾಷೆಯನ್ನು ಕಲಿಯುವ ಪ್ರಕಾರಗಳು ಹಲವಾರು ಇರಬಹುದು. ಕೆಲವು ನೈಜ ರೂಪದಲ್ಲಿದ್ದರೆ, ಇನ್ನು ಕೆಲವು ಶೈಕ್ಷಣಿಕವಾಗಿರುತ್ತದೆ ಮತ್ತೆ ಕೆಲವು ಭಾವನಾತ್ಮಕವಾಗಿರುತ್ತದೆ ಹೀಗೆ ಭಾಷೆಯನ್ನು ಕಲಿಯುವ ಕಾರಣಗಳು ಹಲವಾರು ಇರಬಹುದು. ಆದರೆ ಹೊಸ ಭಾಷೆಯನ್ನು ಕಲಿಯುವುದು ಹೊಸ ವಿಚಾತವಾಗಿದೆ.

ಹೊಸ ಭಾಷೆಯನ್ನು ಕಲಿಯುವುದು ಏಕೆ ಅಷ್ಟು ಮಹತ್ವಪೂರ್ಣ ಎಂಬುದಕ್ಕೆ ಎಂಟು ಕಾರಣಗಳನ್ನು ನಾವಿಲ್ಲಿ ವಿಮರ್ಶಿಸೋಣ. ಇದು ನಿಮಗೆ ಸರಿಯಾದ ಮಾರ್ಗದರ್ಶನವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ, ಮತ್ತು ಇದೇ ಸಮಯದಲ್ಲಿ ಹೊಸ ಭಾಷೆಯನ್ನು ಕಲಿತುಕೊಳ್ಳುವುದು ಏಕೆ ಮಹತ್ವಪೂರ್ಣ ಎಂಬುದನ್ನು ಕೂಡ ತಿಳಿಸಿಕೊಡುತ್ತದೆ.

ಪರಿಣಾಮಕಾರಿ ಸಂವಹನ ಕಲೆಗೆ ಈ ಏಳು ಸೂತ್ರಗಳು ರಹದಾರಿ

ಹೊಸ ಹೊಸ ಸಂಸ್ಕೃತಿಗಳನ್ನು ಅರಿತುಕೊಳ್ಳುವುದು

ಹೊಸ ಹೊಸ ಸಂಸ್ಕೃತಿಗಳನ್ನು ಅರಿತುಕೊಳ್ಳುವುದು

ಹೊಸ ಭಾಷೆಯನ್ನು ಕಲಿಯುವುದು ನಿಮಗೆ ಹೊಸ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುತ್ತದೆ. ನಿರ್ದಿಷ್ಟ ಭಾಷೆಯ ಇತಿಹಾಸ ಮತ್ತು ಅಲ್ಲಿನ ಸಾಹಿತ್ಯದ ಬಗೆಗೆ ಹೆಚ್ಚು ತಿಳಿದುಕೊಳ್ಳುವಂತೆ ಮಾಡುತ್ತದೆ.

ನಿಮ್ಮ ಆಯ್ಕೆಯನ್ನು ಹೆಚ್ಚಿಸುತ್ತದೆ

ನಿಮ್ಮ ಆಯ್ಕೆಯನ್ನು ಹೆಚ್ಚಿಸುತ್ತದೆ

ಹೊಸ ದೇಶಕ್ಕೆ ಹೋಗಿ ಅಲ್ಲಿನ ಭಾಷೆ ನಿಮಗೆ ಬರುತ್ತದೆ ಎಂದಾದಲ್ಲಿ ನಿಮ್ಮಲ್ಲಿನ ಆಯ್ಕೆ ಅವಕಾಶ ಬಲಗೊಳ್ಳುತ್ತದೆ. ನಿಮ್ಮ ಸ್ಥಳೀಯ ಭಾಷೆ ಅಲ್ಲದೆ ಹೊಸದೊಂದು ಭಾಷೆಯನ್ನು ಅರಿತುಕೊಳ್ಳುವುದು ಅಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಇತರ ಭಾಷೆಗಳನ್ನು ತಿಳಿದಿರುವಂತಹ ಜನರಿಗೆ ಕೆಲವು ಕಂಪೆನಿಗಳು ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತವೆ.

ವೃತ್ತಿ ಬೆಳವಣಿಗೆ

ವೃತ್ತಿ ಬೆಳವಣಿಗೆ

ಕೆಲವೊಂದು ಉನ್ನತ ಕಂಪೆನಿಗಳಲ್ಲಿ ಭಾಷೆಯ ನಿರರ್ಗಳತೆ ಅತೀ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ನೀವು ಹೊಸ ಭಾಷೆಯನ್ನು ಕಲಿತಿರೆಂದರೆ, ನಿಮ್ಮ ವೃತ್ತಿ ಜೀವನಕ್ಕೆ ಇದೊಂದು ಧನಾತ್ಮಕ ಅಂಶವಾಗಿ ಪರಿಗಣಿತವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಸ್ವಯಂ ಬೆಳವಣಿಗೆ

ಸ್ವಯಂ ಬೆಳವಣಿಗೆ

ಹೊಸ ಭಾಷೆಯನ್ನು ಕಲಿಯುವುದು ನಿಮ್ಮನ್ನು ಬೆಳೆಸುತ್ತದೆ. ಮಾತೃ ಭಾಷೆಯನ್ನಲ್ಲದೆ ಹೊಸದೊಂದು ಭಾಷೆಯನ್ನು ಮಾತನಾಡುವ ನಿಮ್ಮ ಗೌರವ ಹೆಚ್ಚುತ್ತದೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿ ಮತ್ತೊಬ್ಬರನ್ನು ಎದುರಿಸುವ ಛಲವನ್ನು ನಿಮ್ಮಲ್ಲಿ ಹುಟ್ಟುಹಾಕುತ್ತದೆ.

ನಿಮ್ಮಷ್ಟಕ್ಕೆ ಚಾಲೆಂಜಿಂಗ್ ಮಾಡಿಕೊಳ್ಳುವುದು

ನಿಮ್ಮಷ್ಟಕ್ಕೆ ಚಾಲೆಂಜಿಂಗ್ ಮಾಡಿಕೊಳ್ಳುವುದು

ಇನ್ನೊಂದು ಭಾಷೆಯನ್ನು ಏಕೆ ಕಲಿಯಬೇಕು ಎಂಬುದು ನಿಮ್ಮಲ್ಲಿ ಸಂದೇಹವನ್ನುಂಟು ಮಾಡಿದ್ದರೆ, ನಿಮಗಾಗಿ ಸರಿಯಾದ ಉತ್ತರ ಇಲ್ಲಿದೆ. ನಿಮ್ಮಷ್ಟಕ್ಕೆ ನಿಮಗೇ ಚಾಲೆಂಜ್ ಮಾಡಿಕೊಳ್ಳುವ ಸರಿಯಾದ ವಿಧಾನವಾಗಿದೆ ಇದು. ನಿಮ್ಮನ್ನು ಸದಾ ಕಾರ್ಯಪ್ರವೃತ್ತರಾಗಿ ಇದು ಮಾಡುವುದಲ್ಲದೆ, ನೀವು ತುಂಬಾ ಬುದ್ಧಿವಂತರು ಮತ್ತು ಮತ್ತೊಂದನ್ನು ಕಲಿಯುವ ಹುರುಪುಳ್ಳವರು ಎಂಬುದನ್ನು ಎತ್ತಿ ತೋರಿಸುತ್ತದೆ.

ನಿಮ್ಮದೇ ಭಾಷೆ ಮತ್ತು ಸಂಸ್ಕೃತಿಯನ್ನು ಅರಿತುಕೊಳ್ಳುವುದು

ನಿಮ್ಮದೇ ಭಾಷೆ ಮತ್ತು ಸಂಸ್ಕೃತಿಯನ್ನು ಅರಿತುಕೊಳ್ಳುವುದು

ಇನ್ನೊಂದು ಭಾಷೆಯನ್ನು ಕಲಿತುಕೊಳ್ಳುವುದು ನಿಮ್ಮದೇ ಭಾಷೆಯ ಬಗೆಗೆ ಒಳ್ಳೆಯ ಗೌರವವನ್ನು ಇತರರಲ್ಲಿ ಮೂಡಿಸುತ್ತದೆ. ನಿಮ್ಮ ಭಾಷೆ ಮತ್ತು ಇತರ ಜನರ ಸಂಸಕೃತಿಗಳ ಬಗೆಗೆ ನಿಮಗೆ ಹೋಲಿಕೆಯನ್ನು ಮಾಡಲು ಇದು ಸಹಾಯ ಮಾಡುತ್ತದೆ.

ನಿಮ್ಮ ಬುದ್ಧಿಯನ್ನು ಚುರುಕಾಗಿಸುತ್ತದೆ

ನಿಮ್ಮ ಬುದ್ಧಿಯನ್ನು ಚುರುಕಾಗಿಸುತ್ತದೆ

ಕಲಿಯುವುದು ನಿಮ್ಮ ಬುದ್ಧಿಯನ್ನು ಎಂದಿಗೂ ಚುರುಕಾಗಿಸುತ್ತದೆ. ಹೊಸ ಭಾಷೆಯನ್ನು ಕಲಿಯುವುದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಕ್ರಿಯಾತ್ಮಕಗೊಳಿಸುತ್ತದೆ ಮತ್ತು ಇನ್ನಷ್ಟನ್ನು ತಿಳಿದುಕೊಳ್ಳಬೇಕೆಂಬ ನಿಮ್ಮೊಳಗಿನ ಛಲವನ್ನು ಇದು ವೃದ್ಧಿಸುತ್ತದೆ.

English summary

Top 8 Reasons To Learn A New Language

Language is the medium of communication and it differs depending on various factors. Here we may discuss top 8 reasons why you should consider learning a new language.
Story first published: Thursday, July 31, 2014, 14:31 [IST]
X
Desktop Bottom Promotion