For Quick Alerts
ALLOW NOTIFICATIONS  
For Daily Alerts

ಭಾರತೀಯರು ವಧುವಿನಲ್ಲಿ ಕನ್ಯತ್ವ ಬಯಸಲು ಕಾರಣಗಳೇನು?

By Super Admin
|

ಮದುವೆಯ ವಿಷಯ ಬಂದಾಗ ಭಾರತದ ಯುವಕರು ತಾವು ವರಿಸುವ ಯುವತಿ ಕನ್ಯೆಯಾಗಿರಬೇಕೆಂದು ಬಯಸುತ್ತಾರೆ. ವಿವಾಹದ ಸಂದರ್ಭವನ್ನೂ ಕನ್ಯಾದಾನ ಎಂದೇ ನಮ್ಮ ಸಂಸ್ಕೃತಿಯಲ್ಲಿ ಕರೆಯಲಾಗುತ್ತದೆ. ಇದಕ್ಕೆ ನಮ್ಮ ಪುರಾಣಗಳೂ ಕಾರಣವಾಗಿವೆ. ಮಹಾಭಾರತದಲ್ಲಿ ದ್ರೌಪದಿಗೆ ಐವರು ಪತಿಯರಿದ್ದರೂ ಅತ್ಯಂತ ಪುನೀತ ಮಹಿಳೆಯೆಂದು ಭಾವಿಸಲಾಗಿತ್ತು. ಏಕೆಂದರೆ ದ್ರೌಪದಿಗೆ ಒಂದು ವಿಶೇಷವಾದ ವರದಾನ ಲಭ್ಯವಾಗಿತ್ತು.

ಆ ಪ್ರಕಾರ ಆಕೆ ಪ್ರತಿ ಪತಿಯೊಡನೆ ಒಂದು ವರ್ಷ ಕಳೆಯಬೇಕಿತ್ತು. ಒಂದು ವರ್ಷದ ಬಳಿಕ ಆಕೆ ಪುನಃ ಕನ್ಯೆಯಾಗಿ ಮಾರ್ಪಾಡಾಗುತ್ತಿದ್ದಳು. ಇದೇ ರೀತಿ ಉಳಿದ ಪತಿಯರಿಗೂ ಕನ್ಯೆಯ ಸೇವೆ ಲಭ್ಯವಾಗುತ್ತಿತ್ತು. ಇಂದಿಗೂ ಈ ಕಥೆ ಕನ್ಯತ್ವವನ್ನು ಕುರಿತ ಭಾರತೀಯ ನಂಬಿಕೆಗಳಿಗೆ ಅಡಿಪಾಯವಾಗಿದೆ. ಸಮಯ ಬದಲಾದಂತೆ ಇಂದಿನ ಯುವಕರು ಮುಂದುವರೆದ ಯುವತಿಯರನ್ನು ಬಯಸುತ್ತಾರಾದರೂ ವಿವಾಹದ ಸಮಯ ಬಂದಾಗ ಮಾತ್ರ ಆಕೆ ಕನ್ಯೆಯೇ ಆಗಿರಬೇಕೆಂದು ಬಯಸುತ್ತಾರೆ.
ಇಂದು ಮಾನವನ ಸೂಕ್ಷ್ಮಾತಿಸೂಕ್ಷ್ಮ ಅಂಗಗಳನ್ನು ವಿವರವಾಗಿ ಪರಿಶೀಲಿಸುವ ಪರಿಕರಗಳು ಲಭ್ಯವಿವೆ. ವಿಜ್ಞಾನ ತುಂಬಾ ಮುಂದುವರೆದಿದೆ. ಕೆಲವು ಪರೀಕ್ಷೆಗಳಲ್ಲಿಯೇ ಯುವತಿ ಕನ್ಯೆ ಹೌದೇ ಅಲ್ಲವೇ ಎಂದು ಹೇಳಬಲ್ಲ ವಿಧಾನಗಳಿವೆ. ಆದರೆ ಹಿಂದಿನ ದಿನಗಳಲ್ಲಿ ಯುವತಿಯ ಕನ್ಯಾಪೊರೆಯೇ ಕನ್ಯತ್ವದ ಪ್ರತೀಕವಾಗಿತ್ತು. ಇದೇ ಮಾದರಿಯನ್ನು ಇಡಿಯ ಭಾರತದ ಎಷ್ಟೋ ಪರಿವಾರಗಳಲ್ಲಿ ಅನುಸರಿಸುವುದು ಕಂಡುಬರುತ್ತಿದೆ. ಹಿಂದಿನಿಂದಲೂ ನಡೆದುಬಂದ ಸಂಪ್ರದಾಯಗಳನ್ನು ಬದಲಾಯಿಸುವುದು ಕಷ್ಟಸಾಧ್ಯ.

ಇದೇ ರೀತಿ ಪುರುಷರು ಕನ್ಯೆಯನ್ನೇ ಬಯಸುವುದು ಹಿಂದಿನಿಂದಲೂ ನಡೆದುಬಂದ ಪದ್ಧತಿಯಾಗಿದೆ. ಭಾರತೀಯ ಸಂಪ್ರದಾಯದಂತೆ ಒಂದು ಗಂಡಿಗೆ ಒಂದು ಹೆಣ್ಣು ಎಂದು ಬ್ರಹ್ಮ ಬರೆದಿರುವ ರೇಖೆಯಾಗಿದ್ದು ಇಬ್ಬರೂ ಇನ್ನೊಬ್ಬರಿಗಾಗಿಯೇ ಇದ್ದಾರೆಯೇ ಹೊರತು ಇದರಲ್ಲಿ ಹಂಚಿಕೊಳ್ಳುವ ಪ್ರಶ್ನೆ ಇಲ್ಲ. ಯುವಕರು ತಾವು ವಿವಾಹವಾಗುವ ಯುವತಿ ಕನ್ಯೆಯಾಗಿದ್ದರೆ ಆಕೆ ಜೀವನವಿಡೀ ತಮಗೆ ಮುಡಿಪಾಗಿರುವ ಹೆಣ್ಣು ಎಂದು ಭಾವಿಸುತ್ತಾರೆ.

ಆದರೆ ಇಂದಿನ ದಿನಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಹೆಜ್ಜೆ ಹಾಕುವ ಯುವತಿಯರಿಗೆ ನೈಸರ್ಗಿಕ ಕಾರಣಗಳಿಂದ ಕನ್ಯಾಪೊರೆ ಕಳೆದುಕೊಳ್ಳುವ ಸಂಭವವಿರುತ್ತದೆ. ಈ ವಿಷಯಗಳನ್ನು ಪರಿಗಣಿಸದೇ ಯುವಕರು ಕನ್ಯೆಯನ್ನೇ ಬಯಸುವುದು ಆಧುನಿಕ ಶತಮಾನದ ವ್ಯಂಗ್ಯವಾಗಿದೆ. ಆದರೂ ಕನ್ಯೆಯನ್ನೇ ಬಯಸುವ ನಿರ್ಧಾರಕ್ಕೆ ಹಲವು ಕಾರಣಗಳಿದ್ದು ಅದರಲ್ಲಿ ಪ್ರಮುಖವಾದ ಹತ್ತು ಕಾರಣಗಳನ್ನು ಕೆಳಗೆ ನೀಡಲಾಗಿದೆ. ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು

ಸಾಂಪ್ರದಾಯಿಕ ಮೌಲ್ಯಗಳು

ಸಾಂಪ್ರದಾಯಿಕ ಮೌಲ್ಯಗಳು

ವಿವಾಹದ ಸಂದರ್ಭದಲ್ಲಿ ವಧುವಿನ ತಂದೆ ವರನಿಗೆ 'ಕನ್ಯೆ'ಯನ್ನು ದಾನ ಮಾಡುತ್ತಾನೆ. ವಿವಾಹ ಸಮಾರಂಭಕ್ಕೆ ಇನ್ನೊಂದು ಹೆಸರೇ ಕನ್ಯಾದಾನ. ಅಂತೆಯೇ ಹಸೆಮಣೆ ಏರಲಿರುವ ವಧು ಕನ್ಯೆಯೇ ಆಗಿರಬೇಕೆಂಬ ಪ್ರಾಚೀನ ನಂಬಿಕೆಗೆ ಇಂದಿನ ಯುವಕರೂ ಜೋತು ಬೀಳುತ್ತಾರೆ.

ಮಕ್ಕಳಿಗೆ ತಿಳಿಸಿಕೊಡುವ ಸಂಪ್ರದಾಯ

ಮಕ್ಕಳಿಗೆ ತಿಳಿಸಿಕೊಡುವ ಸಂಪ್ರದಾಯ

ಮಕ್ಕಳಿಗೆ ಅವರ ಪಾಲಕರು ದೊಡ್ಡವರಾದ ಬಳಿಕ ವಿವಾಹ ಬಂಧನಕ್ಕೆ ಒಳಪಡುವ ವಿಷಯದಲ್ಲಿ ಹೆಣ್ಣುಮಕ್ಕಳಿಗೆ ಕನ್ಯತ್ವ ಅತ್ಯಂತ ಪವಿತ್ರವಾದುದು, ಅದನ್ನು ತನ್ನ ಜೀವನಸಂಗಾತಿಗೆ ಮಾತ್ರ ನೀಡಬೇಕು ಎಂದು ತಿಳಿಸಿಕೊಡುತ್ತಾರೆ. ಗಂಡುಮಕ್ಕಳಿಗೆ ಈ ಕೊಡುಗೆಯನ್ನು ಸ್ವೀಕರಿಸುವ ಮೂಲಕ ಆಕೆಯ ಜೀವನಸಂಗಾತಿಯಾಗುವೆ, ಆಕೆಯ ಜೀವನ ನಿನ್ನ ಹೆಗಲ ಮೇಲೆ ಎಂದು ತಿಳಿಸಿಕೊಟ್ಟಿರುತ್ತಾರೆ. ಚಿಕ್ಕಂದಿನಿಂದಲೇ ಮನೆಮಾಡಿದ ಈ ವಿಷಯವನ್ನು ಬದಲಿಸುವುದು ಅಷ್ಟು ಸುಲಭವಲ್ಲ.

ಕನ್ಯತ್ವದ ಬಗ್ಗೆ ಮಿಥ್ಯಾಚಾರ

ಕನ್ಯತ್ವದ ಬಗ್ಗೆ ಮಿಥ್ಯಾಚಾರ

ವಧು ಕನ್ಯೆ ಹೌದೇ ಅಲ್ಲವೇ ಎಂದು ತಿಳಿಸಲು ಕನ್ಯಾಪೊರೆಯ ಕಾರಣವಿದೆ. ಆದರೆ ವರ ಅಪ್ಪಟ ಹೌದೋ ಅಲ್ಲವೋ ಎಂದು ತಿಳಿಸುವ ಯಾವುದೇ ವಿಧಾನವಿಲ್ಲ. ಮೇಲಾಗಿ ವರ ಅಪ್ಪಟನೇ ಎಂದು ಕೇಳುವ ಪ್ರಮೇಯವೂ ಇಲ್ಲ. ವಿವಾಹ ಬಂಧನದಲ್ಲಿ ವರ ವಧು ಇಬ್ಬರೂ ಸಮಾನವಾಗಿ ಭಾಗಿಯಾಗುವಾಗ ಕೇವಲ ವಧುವಿನ ಬಗ್ಗೆ ಮಾತ್ರ ಪಶ್ನಿಸುವುದು ಮಿಥ್ಯಾಚಾರವಲ್ಲದೆ ಇನ್ನೇನು?

ಧರ್ಮ ಪರಿಪಾಲನೆ

ಧರ್ಮ ಪರಿಪಾಲನೆ

ಪ್ರತಿ ಧರ್ಮವೂ ಮದುವೆಗೂ ಮುಂಚಿನ ಸಂಬಂಧವನ್ನು ತಿರಸ್ಕರಿಸುತ್ತದೆ. ಗಂಡು ಹೆಣ್ಣಿನ ಶಾರೀರಿಕ ಸಂಬಂಧಕ್ಕೆ ವಿವಾಹದ ಮೂಲಕ ಸಮಾಜದ ಸಮ್ಮತಿಯನ್ನು ನೀಡುತ್ತದೆ. ಈ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಡುವ ದಂಪತಿ ಧರ್ಮವನ್ನು ಪರಿಪಾಲಿಸಿದ್ದಾರೆ ಎಂದು ಭಾವಿಸಲಾಗುತ್ತದೆ. ಪುರಾಣದಲ್ಲಿಯೂ ಸೀತೆ ಮತ್ತು ದ್ರೌಪದಿಯರಿಗೆ ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸಬೇಕಾಗಿ ಬಂದಿತ್ತು.

ಪತ್ನಿಯ ಮೇಲೆ ಸಾಧಿಸುವ ಮಾಲಿಕತ್ವ

ಪತ್ನಿಯ ಮೇಲೆ ಸಾಧಿಸುವ ಮಾಲಿಕತ್ವ

ಮದುವೆಯಾದ ಬಳಿಕ ಪತ್ನಿಯಿಂದ ಕೊಡುಗೆಯಾಗಿ ಪಡೆದ ಕನ್ಯತ್ವ ಆಕೆಯ ಮೇಲಿನ ಪ್ರಭುತ್ವ ಸಾಧಿಸಿದಂತೆ ಎಂದು ಪತಿ ಭಾವಿಸುತ್ತಾನೆ. ಆಕೆಯ ಶರೀರ ಹಾಗೂ ಆತ್ಮ ಎರಡೂ ತನಗೆ ಅಡಿಯಾಳು ಎಂದು ಭಾವಿಸುತ್ತಾನೆ.

ಕನ್ಯೆ ಅತ್ಯಂತ ಪವಿತ್ರಳು

ಕನ್ಯೆ ಅತ್ಯಂತ ಪವಿತ್ರಳು

ವಿವಾಹಕ್ಕೂ ಮೊದಲು ಒಂದು ವೇಳೆ ಯಾವುದೇ ತಪ್ಪು ನಿರ್ಧಾರ ಕೈಗೊಂಡರೆ ಕಳೆದುಕೊಳ್ಳುವ ಕನ್ಯತ್ವ ಆಕೆಯ ಪಾವಿತ್ರತೆಯನ್ನೂ ಕಳೆದುಕೊಳ್ಳಲು ಕಾರಣವಾಗುತ್ತದೆ. ಆದರೆ ಶಾರೀರಿಕವಾಗಿ ಪರಿಶುದ್ಧಳಾಗುವ ಜೊತೆಗೆ ಮಾನಸಿಕವಾಗಿ ಪರಿಶುದ್ಧಳಾಗಿರುವುದೂ ಅಷ್ಟೇ ಮುಖ್ಯವಾಗಿದೆ. ವ್ಯಭಿಚಾರದ ಇರಾದೆಯುಳ್ಳ ಮಹಿಳೆ ಮದುವೆಯವರೆಗೂ ಪವಿತ್ರಳಾಗಿದ್ದು ಒಮ್ಮೆ ಕನ್ಯತ್ವ ಕಳೆದುಕೊಂಡ ಬಳಿಕ ಮನಸ್ಸು ಬದಲಾಯಿಸುವುದನ್ನು ಈ ಕನ್ಯತ್ವ ಸಾಬೀತುಪಡಿಸುವುದಿಲ್ಲ.

ಕನ್ಯೆಯಲ್ಲಿ ಯಾವುದೇ ಲೈಂಗಿಕ ರೋಗಗಳಿರುವುದಿಲ್ಲ

ಕನ್ಯೆಯಲ್ಲಿ ಯಾವುದೇ ಲೈಂಗಿಕ ರೋಗಗಳಿರುವುದಿಲ್ಲ

ಕನ್ಯೆಯಲ್ಲಿ ಯಾವುದೇ ಲೈಂಗಿಕ ರೋಗಗಳಿರುವುದಿಲ್ಲ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಹಲವು ರೋಗಗಳು ಲೈಂಗಿಕ ಸಂಬಂಧಗಳ ಹೊರತಾಗಿಯೂ ಹರಡಬಹುದು. ಉದಾಹರಣೆಗೆ ಸೋಂಕು ತಗುಲಿದ ರಕ್ತ, ಶುಚಿಗೊಳಿಸದ ಚುಚ್ಚುಮದ್ದು ಇತ್ಯಾದಿ. ಆದರೆ ವಿವಾಹ ಸಂಬಂಧಕ್ಕೆ ಇಬ್ಬರ ವೈದ್ಯಕೀಯ ತಪಾಸಣೆ ನಡೆಸುವುದು ಇಂದು ಅತಿ ಅಗತ್ಯವಾಗಿದೆ.

ಪುರುಷರ ಅಹಂ

ಪುರುಷರ ಅಹಂ

ಪುರಾತನ ಕಾಲದಿಂದಲೂ ಪುರುಷ ಮಹಿಳೆಗಿಂತ ಶ್ರೇಷ್ಠ ಎಂಬ ನಂಬಿಕ ಬಲವಾಗಿ ನಡೆದುಕೊಂಡು ಬಂದಿದೆ. ಈ ನಂಬಿಕೆಯೇ ತನ್ನ ವಧುವಿಗೆ ತಾನೊಬ್ಬನೇ ಮಾಲಿಕ ಎಂಬ ಭಾವನೆಗೆ ಇಂಬು ನೀಡಿದೆ. ತನಗೆ ವಧುವಾಗುವವಳು ತನಗೇ ಪ್ರಥಮಳಾಗಿರಬೇಕು ಎಂಬ ಅಹಂ ಕನ್ಯೆಯನ್ನೇ ಬಯಸುತ್ತದೆ.

ಕನ್ಯೆ ಎಂದೆಂದಿಗೂ ತನ್ನವಳಾಗಿರುತ್ತಾಳೆ

ಕನ್ಯೆ ಎಂದೆಂದಿಗೂ ತನ್ನವಳಾಗಿರುತ್ತಾಳೆ

ಕನ್ಯೆಯನ್ನು ವಿವಾಹವಾಗುವ ಮೂಲಕ ಆಕೆ ಜೀವಮಾನವಿಡೀ ತನಗೆ ಮುಡಿಪಾಗಿರುತ್ತಾಳೆ ಎಂದು ಭಾರತೀಯ ಪುರುಷರು ಭಾವಿಸಿದ್ದಾರೆ. ಆದರೆ ಯಾವ ಮಹಿಳೆ ಹೇಗೆ ಯೋಚಿಸುತ್ತಾಳೆ ಎಂಬುದನ್ನು ಕನ್ಯತ್ವ ಸಾಬೀತುಪಡಿಸುವುದಿಲ್ಲ. ದ್ರೌಪದಿಗೆ ಐವರು ಗಂಡಂದರಿದ್ದೂ ಆರನೆಯವನಾಗಿ ಕರ್ಣನನ್ನು ಬಯಸಿದ್ದಳಂತೆ. ಅಪ್ಪಟ ಪ್ರೇಮಕ್ಕಿಂತಲೂ ಹಣ, ಆಸ್ತಿಗೆ ಹೆಚ್ಚು ಬೆಲೆ ನೀಡುವ ಹಲವು ಮಹಿಳೆಯರ ಕಥೆಗಳು ಮಾಧ್ಯಮದಲ್ಲಿ ಕಾಣಸಿಗುತ್ತವೆ. ತದ್ವಿರುದ್ದವಾಗಿ ಅಪಘಾತ ಮೊದಲಾದ ಕಾರಣದಿಂದ ಅಕಾಲ ಮರಣಕ್ಕೆ ಈಡಾದವರ ವಿಧವೆಯರು ಎರಡನೇ ಮದುವೆಯಾಗಿ ಸುಖಜೀವನವನ್ನು ನಡೆಸುತ್ತಿದ್ದಾರೆ.

ಕನ್ಯೆಯಾದವಳು ಮೋಸ ಮಾಡುವುದಿಲ್ಲ

ಕನ್ಯೆಯಾದವಳು ಮೋಸ ಮಾಡುವುದಿಲ್ಲ

ವಿಹಾಹಕ್ಕೆ ಮುನ್ನವೇ ಕನ್ಯತ್ಯ ಕಳೆದುಕೊಳ್ಳುವ ವನಿತೆ ನಂಬಿಕೆಗೆ ಅನರ್ಹರು, ಮದುವೆಯ ಬಳಿಕ ಎರಡೂ ಮನೆಗಳಿಗೆ ದ್ರೋಹ ಬಗೆಯುವಂತಹವಾಗಿರುತ್ತಾರೆ ಎಂದು ಹಲವು ಪುರುಷರು ಇಂದಿಗೂ ನಂಬಿದ್ದಾರೆ.

English summary

Top 10 Reasons Why Indian Men Want Virgin Brides

In the Indian epic Mahabharata, Draupadi had five husbands. However, she was considered the purest woman in the world. This story shows the obsession of Indian men with virgins. They are happy to have casual flings with 'racy' women, but when it comes to marriage, Indian men want virgin brides.
X
Desktop Bottom Promotion