For Quick Alerts
ALLOW NOTIFICATIONS  
For Daily Alerts

ವಿಶ್ವದ ಅಗ್ರ 10 ಅತ್ಯಂತ ಶಕ್ತಿಶಾಲಿ ಸೇನಾಪಡೆಗಳು

|

ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳು ಎಂದ ಕೂಡಲೆ ನಾವು ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶದ ಹೆಸರುಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈ ರಾಷ್ಟ್ರಗಳ ಜೊತೆಗೆ ಹಲವಾರು ದೇಶಗಳು ಸಹ ತಮ್ಮ ರಕ್ಷಣೆಯ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವ ಸಲುವಾಗಿ ಸೈನ್ಯಗಳನ್ನು ಸುಸಜ್ಜಿತಗೊಳಿಸುತ್ತಿದ್ದಾವೆ. ಈ ಪಟ್ಟಿಯಲ್ಲಿ ಕೆಲವೊಂದು ದೇಶಗಳ ಹೆಸರು ನಿಮಗೆ ಅಚ್ಚರಿ ಪಡಿಸಬಹುದು.

ಒಂದು ಕಾಲದಲ್ಲಿ ಪಾಶ್ಚಿಮಾತ್ಯ ದೇಶಗಳ ಮಿಲಿಟರಿಯನ್ನು ಅಳೆಯುವ ಮಾಪಕಗಳಾಗಿದ್ದ ಅಂಶಗಳು ಈಗ ಇತರೆ ದೇಶಗಳನ್ನು ಅಳೆಯುವ ಮಾನದಂಡಗಳಾಗಿವೆ. ಉದಾಹರಣೆಗೆ ಭಾರತ ಮತ್ತು ಚೀನಾ ದೇಶಗಳನ್ನು ಒಳಗೊಂಡಂತೆ ಹಲವು ದೇಶಗಳು ಸಹ ಸೈನ್ಯಕ್ಕೆ ತಮ್ಮ ದೇಶದ ಬಜೆಟ್ ನಲ್ಲಿ ಅತ್ಯಧಿಕ ಪ್ರಮಾಣದ ಹಣವನ್ನು ವಿನಿಯೋಗಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಖಚಿತಪಡಿಸುತ್ತಿವೆ. ಅದರಲ್ಲೂ ಭಾರತ ಮತ್ತು ಚೀನಾಗಳಂತು ಜಿದ್ದಿಗೆ ಬಿದ್ದವರಂತೆ ತಮ್ಮ ಸೈನ್ಯವನ್ನು ಬಲಪಡಿಸುತ್ತಿದ್ದಾರೆ.

ಈ ಲೇಖನದಲ್ಲಿ ನಾವು ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳ ಕುರಿತಾಗಿ ತಿಳಿದುಕೊಳ್ಳೋಣ. ಈ ಸೈನ್ಯಗಳನ್ನು ಮಿಲಿಟರಿ ತಂತ್ರಜ್ಞಾನದ ಆಧುನಿಕತೆಯ ನೆಲೆಗಟ್ಟಿನ ಮೇಲೆ, ಉತ್ತಮ ಸೈನಿಕರನ್ನು ನಿರ್ಮಿಸಲು ನೀಡಲಾಗುವ ತರಬೇತಿ ಮತ್ತು ಕಾರ್ಯಾಚರಣೆಯಲ್ಲಿ ಬಳಸಲಾಗುವ ಆಧುನಿಕ ವಿಧಿ ವಿಧಾನಗಳ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ. ಇವುಗಳಲ್ಲಿ ಕೆಲವೊಂದು ಮಿಲಿಟರಿಗಳು ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾಗಿವೆ. ಅವುಗಳ ಕುರಿತಾಗಿ ತಿಳಿದುಕೊಳ್ಳಬೇಕೆಂಬ ಕುತೂಹಲ ನಿಮಗಿದೆಯೇ ಮುಂದೆ ಓದಿ, ಏರಿಕೆಯ ಕ್ರಮದಲ್ಲಿ ಅವುಗಳ ವಿವರಗಳನ್ನು ನೀಡಿದ್ದೇವೆ.

ಯುಎಸ್‍ಎ

ಯುಎಸ್‍ಎ

ವಿಶ್ವದಲ್ಲಿಯೇ ಸರಿಸಾಟಿಯಿಲ್ಲದ ಮಟ್ಟದ ರಕ್ಷಣಾ ಬಜೆಟ್ ಅಂದರೆ 612 ಬಿಲಿಯನ್ ಯುಎಸ್ ಡಾಲರ್‌ಗಳನ್ನು ವಿನಿಯೋಗಿಸುವ ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವದಲ್ಲಿಯೇ ಅತ್ಯಂತ ಸದೃಢ ಮತ್ತು ಆಧುನಿಕ ಸೈನ್ಯವನ್ನು ಹೊಂದಿದೆ. ಈ ರಾಷ್ಟವು ಊಹೆಗೂ ನಿಲುಕದ ಸಂಪನ್ಮೂಲಗಳನ್ನು ತನ್ನಲ್ಲಿ ಹೊಂದಿದೆ. ಇದು 19 ‍ಏರ್‌ಕ್ರಾಫ್ಟ್ ಕ್ಯಾರಿಯರ್‌ಗಳನ್ನು ಹೊಂದಿದೆ. ಇದು ವಿಶ್ವದಲ್ಲಿರುವ ಇನ್ನಿತರ ದೇಶಗಳ ಏರ್‌ಕ್ರಾಫ್ಟ್‌ ಕ್ಯಾರಿಯರ್‌ಗಳ ಒಟ್ಟು ಮೊತ್ತಕ್ಕಿಂತ ಹೆಚ್ಚು ಎಂಬುದು ವಿಶೇಷ. ಇನ್ನೂ ವಿಶೇಷವೆಂದರೆ ಅಮೆರಿಕವು ತನ್ನ ನಂತರದ ಹತ್ತು ಮುಂಚೂಣಿ ದೇಶಗಳು ಸೈನ್ಯಕ್ಕಾಗಿ ಖರ್ಚು ಮಾಡುವ ಹಣಕ್ಕಿಂತ ಹೆಚ್ಚಿನ ಹಣವನ್ನು ಸೈನ್ಯಕ್ಕಾಗಿ ವಿನಿಯೋಗಿಸುತ್ತದೆ ಎಂದರೆ ಆಶ್ಚರ್ಯವಲ್ಲವೇ.

ರಷ್ಯಾ

ರಷ್ಯಾ

ರಷ್ಯಾದ ಮಿಲಿಟರಿಯು ಈ ಹಿಂದೆ ಅಸ್ತಿತ್ವದಲ್ಲಿದ್ದ ಯುಎಸ್‍ಎಸ್‍ಆರ್‌ಗಿಂತ ಅತ್ಯಂತ ಶಕ್ತಿಶಾಲಿಯಾಗಿದೆ. ರಷ್ಯಾವು ವರ್ಷದಿಂದ ವರ್ಷಕ್ಕೆ ತನ್ನ ಮಿಲಿಟರಿಯನ್ನು ಸುಧಾರಿಸುತ್ತಲೆ ಬರುತ್ತಿದೆ. ಇದು ಮುಖ್ಯವಾಗಿ ಮಿಲಿಟರಿ ತಾಂತ್ರಿಕತೆಯಲ್ಲಿ ಹೆಚ್ಚಿನ ಸಂಶೋಧನೆಗಳನ್ನು ನಡೆಸುತ್ತಿದೆ. ಈ ದೇಶವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಆಯುಧ ರಫ್ತು ಮಾಡುವ ದೇಶವಾಗಿ ಗುರುತಿಸಲ್ಪಟ್ಟಿದೆ. ಇದರ ಬಳಿ ವಿಶ್ವದ ಅತ್ಯಂತ ದೊಡ್ಡ ಟ್ಯಾಂಕ್ ಸೇನೆಯಿದೆ. ಇದರಲ್ಲಿ ಅಂದಾಜು ೧೫,೫೦೦ ಟ್ಯಾಂಕರ್‌ಗಳಿವೆ. ಇಡೀ ರಷ್ಯಾದಲ್ಲಿರುವ ಮಿಲಿಟರಿಯವರ ಸಂಖ್ಯೆ 7,60,000 ಕ್ಕಿಂತ ಹೆಚ್ಚು.

ಚೀನಾ

ಚೀನಾ

ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸೈನ್ಯವನ್ನು ಹೊಂದಿರುವ ದೇಶ ಹಾಗು ಮಿಲಿಟರಿಗಾಗಿ ಹಾಗು ರಕ್ಷಣೆಗಾಗಿ ಅತಿ ಹೆಚ್ಚು ಹಣವನ್ನು ವಿನಿಯೋಗಿಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ದೇಶ ಚೀನಾ. ಚೀನಾ ದೇಶವು ಮಿಲಿಟರಿಗಾಗಿ ವಿನಿಯೋಗಿಸುವ ಹಣವು ಸ್ಫೋಟಕ ಪ್ರಮಾಣದಲ್ಲಿ ಹೆಚ್ಚುತ್ತಲೆ ಬರುತ್ತಿದೆ. ಈಗ ಈ ದೇಶವು ಆಯುಧಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಈಗ ಇದು ತನ್ನದೇ ಆದ ದೇಶೀಯ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸುವತ್ತ ದಾಪುಗಾಲು ಇರಿಸಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಕೆಲವೊಂದು ಮುಖಾ ಮುಖಿಗಳಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸಿವೆ. ಚೀನಾದ ಸೈನ್ಯವು ಊಹೆಗೂ ನಿಲುಕದಷ್ಟು ಸಿಬ್ಬಂದಿಯನ್ನು ಹೊಂದಿದೆ. ಇದರಲ್ಲಿ 2.5 ಮಿಲಿಯನ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಯುನೈಟೆಡ್ ಕಿಂಗ್‍ಡಮ್

ಯುನೈಟೆಡ್ ಕಿಂಗ್‍ಡಮ್

ಯುನೈಟೆಡ್ ಕಿಂಗ್‍ಡಮ್‍ನ ರಕ್ಷಣಾ ಬಜೆಟ್‍ನ ಮೊತ್ತವು ಕಳೆದ ಐದು ವರ್ಷಗಳಲ್ಲಿ ಶೇ.20 ರಷ್ಟು ಕಡಿಮೆಯಾಗಿದೆ. ಇದರ ಜೊತೆಗೆ ಈ ದೇಶವು ತನ್ನ ರಕ್ಷಣಾ ಸಿಬ್ಬಂದಿಯಲ್ಲಿ ಶೇ.20ರಷ್ಟು ಜನರನ್ನು ಕಡಿತಗೊಳಿಸಲು ನಿರ್ಧರಿಸಿದೆ. ಈ ದೇಶವು ಮುಖ್ಯವಾಗಿ ತಾಂತ್ರಿಕತೆ ಮತ್ತು ಮುಂದುವರಿದ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅತ್ಯಂತ ಶಕ್ತಿಶಾಲಿಯಾದ ಆಯುಧಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಯುಕೆಗೆ ನಾಲ್ಕನೆ ಸ್ಥಾನವು ದೊರೆತಿದೆ.

ಭಾರತ

ಭಾರತ

ಭಾರತವು ತನ್ನ ಸೈನ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ತೊಡಗಿಸಿಕೊಂಡಿದೆ. ಇದು ತನ್ನ ಮಿಲಿಟರಿ ವೆಚ್ಚಗಳನ್ನು ಸಹ ಗಣನೀಯವಾಗಿ ಹೆಚ್ಚಿಸುತ್ತಿದೆ. 11 ಮಿಲಿಯನ್ ಸೈನಿಕರನ್ನು ಹೊಂದಿರುವ ಭಾರತವು ವಿಶ್ವದಲ್ಲಿಯೇ ಎರಡನೆ ಅತಿದೊಡ್ಡ ಸೈನ್ಯವಾಗಿದೆ. ನಮ್ಮ ದೇಶವು ರಕ್ಷಣೆಗಾಗಿ 46 ಬಿಲಿಯನ್ ಯುಎಸ್ ಡಾಲರ್‌ಗಳನ್ನು ವಿನಿಯೋಗಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಇದು ಹೆಚ್ಚಾಗುವ ನಿರೀಕ್ಷೆ ಇದೆ. ಇದರ ಜೊತೆಗೆ ಆಯುಧಗಳನ್ನು ಆಮದು ಮಾಡಿಕೊಳ್ಳುವ ಅತಿ ದೊಡ್ಡ ಆಮದುಗಾರ ದೇಶ ಎಂಬ ಖ್ಯಾತಿಯು ಸಹ ಭಾರತಕ್ಕೆ ಇದೆ.

ಫ್ರಾನ್ಸ್

ಫ್ರಾನ್ಸ್

2013ರಲ್ಲಿ ಜಪಾನ್ ದೇಶವು ತನ್ನ ಮಿಲಿಟರಿ ವೆಚ್ಚಗಳನ್ನು ತೀವ್ರ ಪ್ರಮಾಣದಲ್ಲಿ ಕಡಿತ ಮಾಡಿತು. ಅದು ಸಂಶೋಧನೆ ಮತ್ತು ತಂತ್ರಜ್ಞಾನದ ಕೊಳ್ಳುವಿಕೆಯ ಮೇಲೆ ಗಮನಹರಿಸುವ ಮನಸ್ಸು ಮಾಡಿತು. ಪ್ರಾನ್ಸ್ ತನ್ನ ಮಿಲಿಟರಿಯ ಮೇಲೆ ಸುಮಾರು 40 ಬಿಲಿಯನ್ ಹಣವನ್ನು ವಿನಿಯೋಗಿಸುತ್ತದೆ. ಆದಾಗಿಯೂ ಫ್ರೆಂಚರ ಸೈನ್ಯವು ಆಪ್ಘಾನಿಸ್ತಾನ್ ಮತ್ತು ಆಫ್ರಿಕಾ ದೇಶಗಳಲ್ಲಿ ಸಕ್ರಿಯವಾಗಿದೆ. ಫೆಂಚರ ಹೆಗಲ ಮೇಲೆ ಅನುಭವವು ಸಾಕಷ್ಟು ಪ್ರಮಾಣದಲ್ಲಿದೆ.

ಜರ್ಮನಿ

ಜರ್ಮನಿ

ಯೂರೋಪಿಯನ್ ಯೂನಿಯನ್‍ನಲ್ಲಿ ಜರ್ಮನಿಯು ಆರ್ಥಿಕವಾಗಿ ಮತ್ತು ಮಿಲಿಟರಿ ಪರವಾಗಿ ಹೋಲಿಕೆಗೆ ನಿಲುಕದ ದೇಶವಾಗಿ ಗುರುತಿಸಲ್ಪಟ್ಟಿದೆ. ಇದು ನ್ಯಾಟೊದ ಸಕ್ರಿಯ ಸದಸ್ಯ ರಾಷ್ಟ್ರ. ಜರ್ಮನಿಯು ತಾಂತ್ರಿಕತೆ ಮತ್ತು ಮಿಲಿಟರಿಗೆ ಸಂಬಂಧಿಸಿದಂತೆ ಅತ್ಯುತ್ತಮ ಬೆಳವಣಿಗೆಗಳನ್ನು ಹೊಂದಿದೆ. ಈ ದೇಶವು ತನ್ನ ಮಿಲಿಟರಿಗಿಂತ ಹೆಚ್ಚಾಗಿ ಆರ್ಥಿಕತೆಯ ಬಗ್ಗೆ ಗಮನ ಕೇಂದ್ರೀಕರಿಸಿದೆ. ಇದರಿಂದಾಗಿಯೇ ಈ ದೇಶವು ಇತರ ಶಕ್ತಿ ಶಾಲಿ ದೇಶಗಳ ಮುಂದೆ ಗಣನೆಗೆ ಬಾರದೆ ಹಿಂದೆ ಉಳಿದಿರುವುದು.

ಜಪಾನ್

ಜಪಾನ್

ಈ ಪಟ್ಟಿಯಲ್ಲಿ ಮುಂದೆ ಬರುವ ದೇಶ ಜಪಾನ್. ಎರಡನೆ ವಿಶ್ವ ಯುದ್ಧದ ಸಂದರ್ಭದಲ್ಲಿ ತನ್ನ ಆಕ್ರಮಣಕಾರಿ ಮನೋಭಾವದಿಂದ ಹೆಸರುವಾಸಿಯಾದ ಜಪಾನ್ ದೇಶವು, ಎರಡನೆ ಮಹಾಯುದ್ಧದಲ್ಲಿ ನಡೆದ ವಿನಾಶದ ನಂತರ ಜಪಾನ್‍ನ ಮಿಲಿಟರಿಯನ್ನು ಬಲವಂತವಾಗಿ ತಗ್ಗಿಸಲು ಸೂಚಿಸಲಾಯಿತು. ಮೂರನೆ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಈ ದೇಶವು ಮಿಲಿಟರಿಗೆ ಅಸಾಧಾರಣ ಮಟ್ಟದಲ್ಲಿ ವೆಚ್ಚವನ್ನು ಮಾಡುತ್ತಿದೆ. ಮುಖ್ಯವಾಗಿ ಪ್ರಕ್ಕದಲ್ಲಿ ತಲೆನೋವನ್ನು ಉಂಟುಮಾಡುವ ರಾಷ್ಟ್ರಗಳಾದ ಚೀನಾ ಮತ್ತು ರಷ್ಯಾಗಳನ್ನು ಹತೋಟಿಯಲ್ಲಿಡಲು ಹೀಗೆ ಮಾಡಲಾಗುತ್ತಿದೆ.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ

ಚೀನಾ ಮತ್ತು ಉತ್ತರ ಕೊರಿಯಾದಿಂದ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಯಾವುದೇ ಮುನ್ಸೂಚನೆಯಿಲ್ಲದೆ ಬರುವ ಬೆದರಿಕೆಗಳನ್ನು ಹತ್ತಿಕ್ಕಲು ದಕ್ಷಿಣ ಕೊರಿಯಾವು ತನ್ನ ಮಿಲಿಟರಿ ವೆಚ್ಚಗಳನ್ನು ಗಣನೀಯವಾಗಿ ಹೆಚ್ಚಿಸುತ್ತಲೆ ಬರುತ್ತಿದೆ. 1950ರಲ್ಲಿ ಜರುಗಿದ ಕೊರಿಯಾ ಯುದ್ಧದಿಂದ ಹಿಡಿದು ಇಂದಿನವರೆಗೆ ಉತ್ತರ-ದಕ್ಷಿಣ ಕೊರಿಯಾಗಳ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಲೆ ಇದೆ. ಆಧುನಿಕವಾದ ಕ್ಷಿಪಣಿಗಳನ್ನು ಆಗಾಗ್ಗೆ ಪರೀಕ್ಷೆಗೆ ಒಳಪಡಿಸುತ್ತಲೆ ಬರುತ್ತಿರುವ ದಕ್ಷಿಣ ಕೊರಿಯಾವು ತನ್ನ ಮಿಲಿಟರಿಗಾಗಿ 40 ಬಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ.

ಇಸ್ರೇಲ್

ಇಸ್ರೇಲ್

ಇಡೀ ವಿಶ್ವದಲ್ಲಿಯೇ ತನ್ನ ಶಕ್ತಿಯನ್ನು ನಿರಂತರವಾಗಿ ಪ್ರದರ್ಶಿಸುತ್ತಿರುವ ದೇಶವೆಂದರೆ ಅದು ಇಸ್ರೇಲ್. ಇಸ್ರೇಲ್ ಐದು ದಶಕಗಳ ಕಾಲದಿಂದಲ್ಲೂ ಹಲವಾರು ಯುದ್ಧಗಳ ಸರಣಿಯಲ್ಲಿ ಮುಳುಗಿ ಹೋಗಿರುವದೇಶವಾಗಿದೆ. ಇಸ್ರೇಲಿ ಮಿಲಿಟರಿಯು ತನ್ನ ತರಬೇತಿ ಮತ್ತು ಕಾರ್ಯಾಚರಣೆಯಲ್ಲಿ ಆಧುನಿಕತೆಗಾಗಿ ಖ್ಯಾತಿಯನ್ನು ಪಡೆದಿದೆ. ಇತರೆ ಸೈನ್ಯಗಳಿಗೆ ಹೋಲಿಸಿದರೆ ಸಂಖ್ಯೆಯಲ್ಲಿ ಕಡಿಮೆಯಿರುವ ಇಸ್ರೇಲಿ ಸೈನ್ಯವುವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳಲ್ಲಿ ಒಂದಾಗಿದೆ. ಸರಿಸಾಟಿಯಿಲ್ಲದ ಮಿಲಿಟರಿ ಶಕ್ತಿಯನ್ನು ಹೊಂದಿರುವ ಇಸ್ರೇಲ್, ತನ್ನ ಬಜೆಟಿನ ಶೇ.20ರಷ್ಟು ಭಾಗವನ್ನು ಮಿಲಿಟರಿಗಾಗಿ ವಿನಿಯೋಗಿಸುತ್ತದೆ.

English summary

Top 10 Most Powerful Armies In The World

As far as the list of most powerful armies in the world is concerned. With several countries splurging on strengthening their defences in order to defend themselves and project military might, it comes as no surprise that there are quite a few new entrants to this list of most powerful armies in the world.
Story first published: Saturday, September 27, 2014, 11:32 [IST]
X
Desktop Bottom Promotion