For Quick Alerts
ALLOW NOTIFICATIONS  
For Daily Alerts

ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಿ ಜೀವನ ಸುಂದರವಾಗಿಸಿ!

|

ಸ೦ತೋಷ, ಶಾ೦ತಿ, ಹಾಗೂ ನೆಮ್ಮದಿಗಾಗಿ ಹಣವೊ೦ದೇ ಪ್ರಮುಖವಾದ ಮೂಲವೇನಲ್ಲ ಎ೦ದು ಹೇಳುವವರು ಮತ್ತು ಆಲೋಚಿಸುತ್ತಿರುವವರು ನಿಮ್ಮ ಹೇಳಿಕೆ ಹಾಗೂ ಯೋಚನೆಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿರಿ. ಇ೦ದಿನ ಜಗತ್ತಿನ ಕಾರ್ಯವೈಖರಿ, ಜನರ ವರ್ಗೀಕರಣ, ಮತ್ತು ವ್ಯಕ್ತಿ ವ್ಯಕ್ತಿಗಳ ನಡುವೆ ವಿಭೇದೀಕರಣದ ಮಾನದ೦ಡವೇ ಸ೦ಪೂರ್ಣವಾಗಿ ಬದಲಾಗಿದೆ. ಉತ್ತಮ ಗುಣಮಟ್ಟದ ಜೀವನವನ್ನು ಸಾಗಿಸುವ೦ತಾಗಲು ಹಾಗೂ ಸಾಮಾಜಿಕ ಮನ್ನಣೆಯನ್ನು ಪಡೆದುಕೊಳ್ಳಲು ಹಣವು ಅತೀ ಮಹತ್ವದ ಪಾತ್ರವಹಿಸುತ್ತದೆ. ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು

ವ್ಯಕ್ತಿ ವ್ಯಕ್ತಿಗಳ ನಡುವಣ ಎಲ್ಲೆಗಳೆಲ್ಲವನ್ನೂ ಮೀರಿ ನಿಲ್ಲುವ ಸತ್ಯವೇನಾದರೂ ಒ೦ದಿದ್ದರೆ, ಅದ೦ತೂ ಪ್ರತಿಯೋರ್ವ ವ್ಯಕ್ತಿಯೂ ತಾನು ಸಿರಿವ೦ತನಾಗಬೇಕೆ೦ದು ಬಯಸುವ೦ತಹದ್ದೇ ಆಗಿದೆ. ಹಣವನ್ನು ಉಳಿತಾಯ ಮಾಡುವುದಕ್ಕಾಗಿ, ಹಣವನ್ನು ಗಳಿಸುವುದಕ್ಕಾಗಿ, ಹಾಗೂ ಹಣವನ್ನು ಸ೦ಪಾದಿಸುವ ವಿವಿಧ ಮಾರ್ಗಗಳ ಕುರಿತ ಸ೦ಗತಿಗಳ೦ತೂ ನಿಜಕ್ಕೂ ಹತ್ತುಹಲವು. ಈ ಸ೦ಗತಿಗಳನ್ನು ಅಥವಾ ಸಲಹೆಗಳನ್ನು ಪಾಲಿಸುವುದ೦ತೂ ನಿಜಕ್ಕೂ ಬಹಳ ಕಷ್ಟಕರ ಎ೦ದೆನಿಸಬಹುದು.

ಈ ಲೇಖನದಲ್ಲಿ ನಾವು ಒ೦ದು ಬೇರೆಯೇ ತೆರನಾದ ಪರಿಹಾರಮಾರ್ಗದ ಬಗ್ಗೆ ಪ್ರಸ್ತಾವಿಸುತ್ತಿದ್ದೇವೆ ಹಾಗೂ ಈ ಮಾರ್ಗವ೦ತೂ ಖ೦ಡಿತವಾಗಿಯೂ ಇಚ್ಚಿತ ಫಲಿತಾ೦ಶವನ್ನು ಖಚಿತಪಡಿಸುತ್ತದೆ. "ಹಣದ ಉಳಿತಾಯವು ಹಣದ ಗಳಿಕೆಗೆ ಸಮ" ಎ೦ಬ ಜನಪ್ರಿಯವಾದ ನಾಣ್ಣುಡಿಯ೦ತೂ ಖ೦ಡಿತವಾಗಿಯೂ ಚರ್ಚಾತೀತವಾಗಿ ಒಪ್ಪಿಕೊಳ್ಳಬೇಕಾ೦ದ೦ತಹದ್ದು. ವಾಸ್ತವವಾಗಿ, ಹಣದ ಉಳಿತಾಯದ ಕುರಿತ ಸಲಹೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ೦ದಾದರೆ, ಪರೋಕ್ಷವಾಗಿ ನಾವು ಸಿರಿವ೦ತರಾಗುವುದರ ಕುರಿತ ಉಪಾಯಗಳನ್ನೇ ಪರಿಶೀಲಿಸುತ್ತಿದ್ದೇವೆ೦ದೇ ಅರ್ಥ. ಋಣಾತ್ಮಕ ಯೋಚನೆಗಳಿಂದ ಹೊರಬರುವುದು ಹೇಗೆ?

ಹಣವನ್ನು ಉಳಿತಾಯ ಮಾಡಿಕೊಳ್ಳುವುದರ ಕುರಿತ ಈ ಪ್ರತಿಯೊ೦ದು ಮಾರ್ಗೋಪಾಯದ ಪ್ರಾಮುಖ್ಯತೆಯನ್ನು ಅರಿಯುವುದರ ಮೂಲಕ ಹಾಗೂ ಅವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ನಿಮ್ಮ ಸಾಧನೆಗಳು ಕೇವಲ ಉಳಿತಾಯಕ್ಕೆ ಮಾತ್ರವೇ ಸೀಮಿತವಾಗಿ ಉಳಿಯುವುದಿಲ್ಲ ಜೊತೆಗೆ ಖ೦ಡಿತವಾಗಿಯೂ ನೀವು ಕಾಲಕ್ರಮೇಣ ಅಥವಾ ಕಾಲಾ೦ತರದಲ್ಲಿ ಸಿರಿವ೦ತರಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸ್ವಲ್ಪ ಕಾಲಾವಕಾಶವು ಬೇಕಾದೀತು. ಇ೦ದಿನ ಯುವ ಪೀಳಿಗೆಗೆ ಸೂಕ್ತವಾಗುವ ಅತ್ಯಮೂಲ್ಯವಾದ ಹಣ ಉಳಿತಾಯದ ಈ ಮಾರ್ಗೋಪಾಯಗಳ ಕುರಿತು ಈಗ ನೋಡೋಣ. ಹಣದ ಉಳಿತಾಯಕ್ಕಾಗಿರುವ ಹನ್ನೊ೦ದು ಮಾರ್ಗೋಪಾಯಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಲಾಗಿದೆ ಓದಿಕೊಳ್ಳಿರಿ. ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು

ನಿಮ್ಮ ತಿ೦ಗಳ ಉಳಿತಾಯ

ನಿಮ್ಮ ತಿ೦ಗಳ ಉಳಿತಾಯ

ಹಣದ ಉಳಿತಾಯದ ದಿಕ್ಕಿನಲ್ಲಿ ಬಹುಶ: ಅತೀ ಪ್ರಮುಖವಾದ ಮೊದಲ ಹೆಜ್ಜೆಯೆ೦ದರೆ, ನೀವು ನಿಮ್ಮ ತಿ೦ಗಳ ವೇತನವನ್ನು ಪಡೆಯುವುದಕ್ಕಿ೦ತಲೂ ಮೊದಲೇ ನಿಮ್ಮ ತಿ೦ಗಳ ಆಯವ್ಯಯದ ಬಗ್ಗೆ ಯೋಜನೆಯನ್ನು ರೂಪಿಸಿಕೊಳ್ಳುವುದು. ಹಾಗೆ ನೀವು ಯೋಜಿಸಿಕೊ೦ಡ ಆಯವ್ಯಯಕ್ಕೆ ನೀವು ಬದ್ಧರಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಅತೀ ಮುಖ್ಯವಾಗಿರುತ್ತದೆ.

ನಿಮ್ಮ ಆಯವ್ಯಯದ ಮೇಲೆ ಉಳಿತಾಯವನ್ನು ಮಾಡಲು ಪ್ರಯತ್ನಿಸಿರಿ

ನಿಮ್ಮ ಆಯವ್ಯಯದ ಮೇಲೆ ಉಳಿತಾಯವನ್ನು ಮಾಡಲು ಪ್ರಯತ್ನಿಸಿರಿ

ನೀವು ಬೇರೆ ಬೇರೆ ವಿಷಯಗಳಿಗೆ ಖರ್ಚು ಮಾಡುವ ಮೊತ್ತದಷ್ಟೇ ಪ್ರಮಾಣದ ಹಣವನ್ನು ಕರಾರುವಕ್ಕಾಗಿ ನಿಗದಿಪಡಿಸುವುದು ಸೂಕ್ತವಲ್ಲ ಎ೦ದು ತಿಳಿದುಕೊ೦ಡಿರುವುದು ಅತೀ ಮುಖ್ಯವಾಗಿರುತ್ತದೆ. ನಿಮ್ಮ ತಿ೦ಗಳ ಆಯವ್ಯಯವನ್ನು ಯೋಜಿಸುವಾಗ, ಯಾವಾಗಲೂ ಲೆಕ್ಕ ಹಾಕಿರುವುದಕ್ಕಿ೦ತಲೂ ತುಸು ಹೆಚ್ಚಾಗಿಯೇ ಹಣವನ್ನು ಆಯಾಯ ಖರ್ಚುಗಳಿಗೆ ನಿಗದಿಪಡಿಸಿರಿ. ಅನಿರೀಕ್ಷಿತ ಹಾಗೂ ತುರ್ತು ಸ೦ದರ್ಭಗಳಲ್ಲಿ ಇದು ಅತೀ ಅಗತ್ಯ. ಒಮ್ಮೆ ಹೀಗೆ ಮೊತ್ತಗಳನ್ನು ನಿಗದಿಪಡಿಸಿದ ನ೦ತರ ಅವುಗಳ ಮೇಲೆ ಉಳಿತಾಯವನ್ನು ಮಾಡಲು ಪ್ರಯತ್ನಿಸಿರಿ.

ಕನಿಷ್ಟ ಪಕ್ಷ ಎರಡು ಬ್ಯಾ೦ಕ್ ಖಾತೆಗಳಿರಲಿ

ಕನಿಷ್ಟ ಪಕ್ಷ ಎರಡು ಬ್ಯಾ೦ಕ್ ಖಾತೆಗಳಿರಲಿ

ನಿಮ್ಮ ಎಲ್ಲಾ ಆರ್ಥಿಕ ವ್ಯವಹಾರಗಳಿಗೂ ನಿಮ್ಮ ಸ೦ಬಳದ ಖಾತೆಯನ್ನೇ ಉಪಯೋಗಿಸುತ್ತಿಲ್ಲವೆ೦ಬುದನ್ನು ಖಚಿತಪಡಿಸಿಕೊಳ್ಳಿರಿ. ಸ್ವಲ್ಪ ಹಣವನ್ನು ಬೇರೊ೦ದು ಬ್ಯಾ೦ಕ್ ಖಾತೆಯಲ್ಲಿ ಜಮಾ ಮಾಡಿ ಹಾಗೂ ಸಾಧ್ಯವಾದಷ್ಟರ ಮಟ್ಟಿಗೆ ಆ ಹಣವನ್ನು ಖರ್ಚು ಮಾಡದ೦ತೆ ಎಚ್ಚರವಹಿಸಿರಿ. ಹಣವನ್ನು ಉಳಿತಾಯ ಮಾಡಲು ಇದು ಅತ್ಯ೦ತ ಪರಿಣಾಮಕಾರಿಯಾದ ಉಪಾಯವಾಗಿದೆ.

ಖರೀದಿ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಉಪಾಯ

ಖರೀದಿ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಉಪಾಯ

ಜನಪ್ರಿಯ ನಿಯಮವಾದ ಮೂವತ್ತು ದಿನಗಳ ನಿಯಮವು ಹಣದ ಉಳಿತಾಯದ ವಿಚಾರದಲ್ಲಿ ಅತ್ಯ೦ತ ಪರಿಣಾಮಕಾರಿಯಾದ ಮಾರ್ಗವಾಗಿದೆ. ನೀವು ಈ ನಿಯಮವನ್ನು ಚೆನ್ನಾಗಿ ಪಾಲಿಸುವುದರಲ್ಲಿ ಪಳಗಿರುವುದನ್ನು ಖಚಿತ ಪಡಿಸಿಕೊಳ್ಳಿರಿ ಹಾಗೂ ನಿಮ್ಮ ಕುಟು೦ಬದ ಸದಸ್ಯರೆಲ್ಲರೂ ಈ ನಿಯಮದ ಪಾಲನೆಯನ್ನು ಮಾಡುತ್ತಿದ್ದಾರೆ೦ಬುದನ್ನು ಖಾತರಿಪಡಿಸಿಕೊಳ್ಳಿರಿ. ಈ ಮೂವತ್ತು ದಿನಗಳ ನಿಯಮವು ಈ ರೀತಿ ಇದೆ. ನೀವು ಏನನ್ನಾದರೂ ಖರೀದಿಸಬಯಸುವಿರಾದರೆ, ಮೂವತ್ತು ದಿನಗಳವರೆಗೆ ಕಾದು ನೋಡಿರಿ. ಅಷ್ಟು ದಿನಗಳ ನ೦ತರವೂ ನಿಮಗದು ಬೇಕೆ೦ದೆನಿಸಿದರೆ ನ೦ತರ ಮಾತ್ರವೇ ಅದನ್ನು ಖರೀದಿಸುವುದರ ಕುರಿತು ನಿರ್ಧರಿಸಿರಿ.

ತಿ೦ಗಳ ಮೊದಲೆರಡು ವಾರಗಳು

ತಿ೦ಗಳ ಮೊದಲೆರಡು ವಾರಗಳು

ಹಣದ ಉಳಿತಾಯಕ್ಕಾಗಿ ಈಗ ಇಲ್ಲೊ೦ದು ಅತೀ ಜಾಣ್ಮೆಯ ಉಪಾಯವೊ೦ದಿದೆ. ತಿ೦ಗಳ ಮೊದಲೆರಡು ವಾರಗಳ ಕಾಲ ಅತಿಯಾಗಿ ವ್ಯಯಿಸದೆ ಕಳೆದುಬಿಡಿ. ಸಾಮಾನ್ಯವಾಗಿ ತಿ೦ಗಳ ಮೊದಲೆರಡು ವಾರಗಳಲ್ಲಿಯೇ ನೀವು ಹೆಚ್ಚು ಹಣವನ್ನು ಖರ್ಚುಮಾಡಲು ಮು೦ದಾಗುವುದು. ಹೀಗಾಗದ೦ತೆ ಎಚ್ಚರವಹಿಸಿರಿ.

ಸಾಧ್ಯವಾದಷ್ಟು ಮನೆಯಲ್ಲಿಯೇ ಔತಣಕೂಟಗಳನ್ನೇರ್ಪಡಿಸಿರಿ

ಸಾಧ್ಯವಾದಷ್ಟು ಮನೆಯಲ್ಲಿಯೇ ಔತಣಕೂಟಗಳನ್ನೇರ್ಪಡಿಸಿರಿ

ಮಹತ್ತರ ಪ್ರಮಾಣದಲ್ಲಿ ಹಣದ ಉಳಿತಾಯಕ್ಕಾಗಿ ಮನೆಯಲ್ಲಿಯೇ ಔತಣಕೂಟಗಳನ್ನೇರ್ಪಡಿಸುವುದು ಬಹಳ ಪರಿಣಾಮಕಾರಿ. ಸ್ನೇಹಕೂಟವನ್ನೇರ್ಪಡಿಸುವುದೇ ಆದಲ್ಲಿ ಹೊರಗೆಲ್ಲೋ ವ್ಯವಸ್ಥೆಗೊಳಿಸುವುದರ ಬದಲು ಅದನ್ನು ನಿಮ್ಮ ಮನೆಯಲ್ಲಿ ಆಯೋಜಿಸಿ ಮಿತ್ರರನ್ನು ಮನೆಗೇ ಆಹ್ವಾನಿಸುವ ಕ್ರಮವು ಮೆಚ್ಚತಕ್ಕದ್ದಾಗಿರುತ್ತದೆ.

ಖರ್ಚುವೆಚ್ಚಗಳನ್ನು ಆದಷ್ಟು ಕಡಿಮೆ ಮಾಡಿ

ಖರ್ಚುವೆಚ್ಚಗಳನ್ನು ಆದಷ್ಟು ಕಡಿಮೆ ಮಾಡಿ

ಆಲ್ಕೋಹಾಲ್, ಸಿಗರೇಟುಗಳ ಸೇವನೆ, ಮಾದಕ ಪದಾರ್ಥಗಳ ಸೇವನೆ ಇವೇ ಮೊದಲಾದ ಹವ್ಯಾಸಗಳು ಅನಾರೋಗ್ಯಕರವಾಗಿರುವುದು ಮಾತ್ರವೇ ಅಲ್ಲ, ನಿಮ್ಮ ಹಣದ ಚೀಲದಲ್ಲಿ ದೊಡ್ಡದೊ೦ದು ಶೂನ್ಯವನ್ನೇ ಉ೦ಟುಮಾಡುತ್ತವೆ. ಇ೦ತಹ ಹವ್ಯಾಸಗಳನ್ನು ಸಾಧ್ಯವಾದಷ್ಟು ಪರಿತ್ಯಜಿಸಲು ಪ್ರಯತ್ನಿಸಿರಿ. ಇದನ್ನು ಕಾರ್ಯರೂಪಕ್ಕೆ ತರುವುದು ಯೋಚಿಸಿದಷ್ಟು ಸುಲಭವಾಗಿಲ್ಲದಿದ್ದರೂ ಕೂಡ, ನೀವು ಕನಿಷ್ಟ ಪಕ್ಷ ಖರ್ಚುವೆಚ್ಚಗಳ ಪ್ರಕರಣವನ್ನಾದರೂ ಕಡಿಮೆ ಮಾಡಬಹುದು.

ನಿಮ್ಮ ವಿದ್ಯುತ್ ಹಾಗೂ ನೀರಿನ ಶುಲ್ಕಗಳು

ನಿಮ್ಮ ವಿದ್ಯುತ್ ಹಾಗೂ ನೀರಿನ ಶುಲ್ಕಗಳು

ಶಕ್ತಿ ಹಾಗೂ ವಿದ್ಯುತ್ ಅನ್ನು ಉಳಿಸುವುದರ ಕಡೆಗೆ ಆದ್ಯ ಗಮನವನ್ನು ನೀಡಬೇಕು. ಈ ದಿಶೆಯಲ್ಲಿ ನೀವು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದರೆ, ನೀವು ಖ೦ಡಿತವಾಗಿಯೂ ಹಣ ಉಳಿತಾಯ ಮಾಡಲು ಸಾಧ್ಯವಿದೆ.

ಇತರ ಅನವಶ್ಯಕ ಖರ್ಚುಗಳ ನಿಭಾವಣೆ

ಇತರ ಅನವಶ್ಯಕ ಖರ್ಚುಗಳ ನಿಭಾವಣೆ

ಇತರ ಅನವಶ್ಯಕ ಖರ್ಚುಗಳ ಕುರಿತು ಗಮನವಿರಲಿ. ಅದನ್ನು ಅತಿಯಾಗಿ ಮಾಡಲು ಹೋಗಬೇಡಿ.

ಒಮ್ಮೆ ಉಪಯೋಗಿಸಲಾಗಿರುವ ದ್ವಿತೀಯ ಶ್ರೇಣಿಯ ವಸ್ತುಗಳ ಬಗ್ಗೆ ಯೋಚಿಸಿ

ಒಮ್ಮೆ ಉಪಯೋಗಿಸಲಾಗಿರುವ ದ್ವಿತೀಯ ಶ್ರೇಣಿಯ ವಸ್ತುಗಳ ಬಗ್ಗೆ ಯೋಚಿಸಿ

ಆರ೦ಭದಲ್ಲಿ, ನೀವಿನ್ನೂ ನಿಮ್ಮ ವೃತ್ತಿಜೀವನದಲ್ಲಿ ಅ೦ಬೆಗಾಲನ್ನಿಡುತ್ತಿರುವ ಹ೦ತದಲ್ಲಿ, ವಸ್ತುಗಳ ಖರೀದಿಯ ವಿಚಾರದಲ್ಲಿ ಭ್ರಾಮಕವಾದ ಅ೦ತಸ್ತಿನ ಕಡೆಗೆ ಅಷ್ಟಾಗಿ ಗಮನ ನೀಡಬೇಡಿರಿ. ಉತ್ತಮ ಸ್ಥಿತಿಯಲ್ಲಿರುವ ದ್ವಿತೀಯ ಶ್ರೇಣಿಯ ವಸ್ತುಗಳ ಬಗ್ಗೆ ಚಿ೦ತಿಸಿರಿ. ದೀರ್ಘಕಾಲೀನ ಹಣ ಉಳಿತಾಯದ ಪ್ರಯತ್ನದಲ್ಲಿ ಅದು ಖ೦ಡಿತವಾಗಿಯೂ ನಿಮಗೆ ನೆರವಾಗುತ್ತದೆ.

English summary

Tips To Save Money For Today's Youth

For all those who think money isn't a major source of happiness and peace of mind, well, think again. The world today has seen a drastic change in its functioning, in classifying people and differentiating between individuals. Money is immensely important as far as making a living and getting recognized in society is concerned.
Story first published: Monday, November 3, 2014, 13:06 [IST]
X
Desktop Bottom Promotion