For Quick Alerts
ALLOW NOTIFICATIONS  
For Daily Alerts

ವಿದೇಶದಲ್ಲಿದ್ದರೆ ನೀವಿದನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದ್ದೀರಿ!

By Arpitha Rao
|

ಬೇರೆ ಭಾಷೆ, ಪರಿಚಯವಿಲ್ಲದ ಸಾಮಾಜಿಕ ನಂಬಿಕೆಗಳು ಮತ್ತು ನಿಯಮಗಳು, ಬೇರೆ ಸಂಸ್ಕೃತಿ ಇವುಗಳ ಜೊತೆಗೆ ಹೊರ ದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಅಂತಹ ಸಮಯದಲ್ಲಿ ನೀವು ಮನೆಯನ್ನು ಮಿಸ್ ಮಾಡಿಕೊಳ್ಳುತ್ತೀರಿ. ನಿಮಗೆ ಗೊತ್ತಿರುವ ರಸ್ತೆಗಳು, ಪರಿಚಯದ ನಗು, ಎಲ್ಲವನ್ನು ನೀವು ಮಿಸ್ ಮಾಡಿಕೊಳ್ಳುತ್ತೀರಿ.

ನೀವು ಭಾರತೀಯರಾಗಿದ್ದು ಹೊರ ದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆಗುವ ಯೋಚನೆಯಿದ್ದರೆ ಸಾಕಷ್ಟು ವಿಷಯಗಳನ್ನು ಮಿಸ್ ಮಾಡಿಕೊಳ್ಳುವ ಕಾರಣ ಹೊರದೇಶದಲ್ಲಿ ಜೀವಿಸುವುದು ಬಹಳ ಕಷ್ಟದ ಕೆಲಸ. ನೀವು ನಿಮ್ಮ ದೇಶ ಬಿಟ್ಟು ಹೊರದೇಶಕ್ಕೆ ಹೋದಾಗ ಈ ಕೆಳಗೆ ನೀಡಿರುವ 15 ಅಂಶಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ.

ಬದಲಾಗದ ದೇಶ; ನೋಡಿ ಸ್ವಾಮಿ ನಾವ್ ಇರೋದೇ ಹೀಗೆ!

ಜನರು

ಜನರು

ಹೌದು ಜನಜಂಗುಳಿಯ ಮಧ್ಯ ಬೆಳೆದ ನಿಮಗೆ ಆಶ್ಚರ್ಯವಾಗುವುದು ಸಹಜ. ಅದರಲ್ಲೂ ನೀವೇನಾದರೂ ಯುರೋಪ್ ರಾಷ್ಟ್ರಗಳಿಗೆ ಹೋದರೆ ಬಹುಶಃ ಕರ್ಫ್ಯೂ ವಿಧಿಸಿರಬಹುದು ಎಂದು ಮೊದಲ ಸ್ವಲ್ಪ ದಿನ ಅನ್ನಿಸಿಬಿಡುತ್ತದೆ. ಆದರೆ ಸ್ವಲ್ಪ ದಿನಗಳ ನಂತರ ನಿಮಗೆ ಇದು ಅಲ್ಲಿಯ ಸಹಜ ಸ್ಥಿತಿ ಎಂಬುದು ತಿಳಿದಾಗ ಜೋರಾಗಿ ಓಡಾಡುವ ಕಾರುಗಳನ್ನು ನೋಡಿ ಬೇಸತ್ತು ನಿಜವಾದ ಜನರನ್ನು ನೋಡುವ ತವಕ ಉಂಟಾಗುವುದು ಖಂಡಿತ.

ಮನೆಯ ವಾತಾವರಣ (ಅಥವಾ ಜೀವನ)

ಮನೆಯ ವಾತಾವರಣ (ಅಥವಾ ಜೀವನ)

ಭಾರತದಲ್ಲಿದ್ದರೆ ತರಕಾರಿ ಮಾರುವವರು, ಕಸ ತೆಗೆದುಕೊಂಡು ಹೋಗುವವರು ಹಾಗೆಯೇ ಆಗಾಗ ಮಧ್ಯಾಹ್ನ ಮಲಗುವ ಸಮಯದಲ್ಲೇ ಬರುವ ಹಳೆ ಕಬ್ಬಿಣ ತೆಗೆದುಕೊಳ್ಳುವವರು, ಹಾಗೆಯೇ ಮನೆ ಕೆಲಸದವರು ಒಳಹೊರಗೆ ಓಡಾಡುವುದು, ವಾಹನಗಳ ಓಡಾಟ, ಶಬ್ಧ, ಓಡಾಡುವ ಕಾರುಗಳಲ್ಲಿ ಪ್ರಸ್ತುತ ಪ್ರಚಲಿತದಲ್ಲಿರುವ ಹಾಡುಗಳು, ದೂರದಲ್ಲೆಲ್ಲೋ ಇರುವ ದೇವಸ್ಥಾನದ ಗಂಟೆಯ ನಿನಾದ ಇವುಗಳನ್ನೆಲ್ಲ ನೀವು ಹೊರದೇಶದಲ್ಲಿ ಪಡೆಯಲು ಸಾಧ್ಯವಿಲ್ಲ. ಹೌದು ನೀವು ಬಹುಶಃ ಭಾರತದಲ್ಲಿದ್ದಾಗ ಇವುಗಳೆಲ್ಲ ಕಿರಿಕಿರಿ ಎನಿಸಿರಬಹುದು ಆದರೆ ಹೊರದೇಶಕ್ಕೆ ಹೋದರೆ ಇವುಗಳಿಲ್ಲದ ಜೀವನ ಬಿಗೋ ಎನಿಸಬಹುದು .

ಸುಲಭವಾಗಿ ಗಳಿಸಬಹುದಾದ ಗೆಳೆತನ

ಸುಲಭವಾಗಿ ಗಳಿಸಬಹುದಾದ ಗೆಳೆತನ

ನಿಮಗೆ ಅಪರಿಚಿತರಾಗಿರುವವರೊಂದಿಗೆ ಸುಲಭವಾಗಿ ಗೆಳೆತನ ಬೆಳೆಸಿರಬಹುದು. ಅದೆಲ್ಲೋ ದಾರಿ ಬದಿಯಲ್ಲಿರುವ ಅಂಗಡಿಯಲ್ಲಿ ನಿಮಗಾಗಿ ರಿಯಾಯಿತಿ ಕೊಡುವಷ್ಟು ಸಲುಗೆ ಬೆಳೆದಿರಬಹುದು.ಅಥವಾ ಯಾವುದೋ ಹಬ್ಬದ ಸಂದರ್ಭದಲ್ಲಿ ಸಿಹಿ ತಿನಿಸುಗಳು ರಿಯಾಯಿತಿಯಲ್ಲಿ ಸಿಕ್ಕಿರಬಹುದು, ಪ್ರತಿಬಾರಿ ಹೋಗುವ ಚೌರದ ಅಂಗಡಿಯವನು ನಿಮಗೆ ಯಾವ ರೀತಿ ಹೇರ್ ಕಟ್ ಮಾಡಬೇಕು ಎಂಬುದನ್ನು ನಿಮ್ಮನ್ನು ಕೇಳದೇ ತಿಳಿದುಕೊಳ್ಳಬಹುದು. ಹೀಗೆ ಭಾರತದಲ್ಲಿ ಗೆಳೆತನ ಮಾಡಿಕೊಳ್ಳುವುದು ಬಹಳ ಸುಲಭ.

ಹಬ್ಬಗಳು

ಹಬ್ಬಗಳು

ಭಾರತದಲ್ಲಿ ಸಿಗುವ ಆ ಹಬ್ಬದ ಮಜಾ, ಹೂವುಗಳ ಮಾರುಕಟ್ಟೆ, ಆಫೀಸಿಗೆ ಸಿಗುವ ರಜೆ, ಮನೆಯಲ್ಲಿ ಹಬ್ಬಕ್ಕೆ ಮಾಡುವ ಅಲಂಕಾರ, ಬಗೆಬಗೆಯ ಖಾದ್ಯಗಳು, ಸಿಹಿ ತಿನಿಸುಗಳು ಇವುಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ. ನೀವು ಹೋಳಿ ಅಥವಾ ಇತರ ಹಬ್ಬಗಳನ್ನು ಹೊರದೇಶಗಳಲ್ಲಿ ವಾರಾಂತ್ಯದಲ್ಲಿ ಮಾಡಿದರೂ ಕೂಡ ಆ ದಿನ ಮಾಡುವ ಸಂತೋಷ ಸಿಗಲಾರದು.

ತಪ್ಪುಗಳು ಮಾಡಿ ಸಿಕ್ಕಿ ಹಾಕಿಕೊಳ್ಳುವುದು

ತಪ್ಪುಗಳು ಮಾಡಿ ಸಿಕ್ಕಿ ಹಾಕಿಕೊಳ್ಳುವುದು

ಹೊರದೇಶಗಳಲ್ಲಿ ನೀವು ತಪ್ಪು ಮಾಡಿ ಸಿಕ್ಕಿಹಾಕಿಕೊಂಡರೆ ಅದು ಸಣ್ಣದೇ ಆದರೂ, ಯಾರಿಗೂ ಅಪಾಯ ಆಗದಿದ್ದುದಾದರೂ ಕೂಡ ಪೆನಾಲ್ಟಿ ಕಟ್ಟಲೇ ಬೇಕು. ಮೊದಲ ಸಲವಾದರೂ ಕೂಡ ಯಾವುದೇ ರಿಯಾಯಿತಿ ದೊರಕುವುದಿಲ್ಲ.

ಮನೆಕೆಲಸದವಳು

ಮನೆಕೆಲಸದವಳು

ನೀವು ಆಕೆ ರಜಾ ತೆಗೆದುಕೊಂಡಳು,ಅಥವಾ ಯಾವುದೋ ಕೆಲಸ ಸರಿಯಾಗಿ ಮಾಡಿಲ್ಲ ಎಂದು ಎಷ್ಟು ಬೈದುಕೊಂಡರೂ ಹೊರದೇಶಕ್ಕೆ ಹೋದ ಮೇಲೆ ನೀವೇ ಮನೆಕೆಲಸ, ಅಡುಗೆ, ಪಾತ್ರೆ ತೊಳೆಯುವುದು ಎಲ್ಲವನ್ನೂ ಮಾಡುವುದರಿಂದ ಮನೆಕೆಲಸದವಳನ್ನು ಮಿಸ್ ಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ.

ಆಟೋ ರಿಕ್ಷಾಗಳು

ಆಟೋ ರಿಕ್ಷಾಗಳು

ಮಧ್ಯದಲ್ಲೆಲ್ಲೋ ಕೈಕೊಡುವ ಮತ್ತು ಮೀಟರ್ ಮೇಲೆ ಹತ್ತು ರೂಪಾಯಿ ಹೆಚ್ಚು ಕೇಳುವ ಆಟೋಗಳನ್ನು ನೀವೆಷ್ಟು ಬೈದುಕೊಂಡಿದ್ದಿರೇನೋ ಆದರೆ ಹೊರದೇಶಕ್ಕೆ ಹೋದಾಗ ಅವುಗಳನ್ನು ನೋಡ ಬಯಸುತ್ತೀರಿ. ಹೊರ ದೇಶಗಳಲ್ಲಿ ಮೆಟ್ರೋ ಇರಬಹುದು, ಬಸ್ಸುಗಳು ಇರಬಹುದು ಆದರೆ ಕೆಲವೊಮ್ಮೆ ನಡೆದುಕೊಂಡು ಹೋಗಿಯೇ ಬಸ್ಸು ಹಿಡಿಯಬೇಕಾಗುತ್ತದೆ. ನೀವು ಕ್ರೀಡಾಪಟುವಾಗಿದ್ದು ಅಥವಾ ನಡೆದು ಅಭ್ಯಾಸವಿದ್ದರೆ ತೊಂದರೆಯಿಲ್ಲ ಇಲ್ಲದಿದ್ದಲ್ಲಿ ಸುಸ್ತಾಗುವುದು ಖಂಡಿತ.

ನೆರೆಹೊರೆಯವರ ಸಹಾಯ

ನೆರೆಹೊರೆಯವರ ಸಹಾಯ

ನೀವು ಭಾರತದಲ್ಲಿದ್ದಾಗ ನೆರೆಹೊರೆಯವರಿಂದ ಸಕ್ಕರೆ, ಕಾಫಿಪುಡಿ, ಹಾಲು, ಉಪ್ಪು, ತರಕಾರಿ ಹೀಗೆ ಏನಾದರೂ ತಕ್ಷಣಕ್ಕೆ ಬೇಕಾದಾಗ ಕಡ ತೆಗೆದುಕೊಳ್ಳಬಹುದು. ಜೊತೆಗೆ ಗ್ಯಾಸ್ ಖಾಲಿಯಾದಾಗ ಕೇಳಿ ಪಡೆದುಕೊಳ್ಳಬಹುದು, ಊಟಕ್ಕೆ ಕರೆಯಬಹುದು ಅಥವಾ ಫೋನ್ ಮಾಡಲು ಬೇಕಾದಲ್ಲಿ ಕೇಳಿ ಪಡೆಯಬಹುದು ಇವುಗಳೆಲ್ಲ ಹೊರದೇಶದಲ್ಲಿ ಅಸಾಧ್ಯ.

ಮನೆ ಅಡುಗೆ

ಮನೆ ಅಡುಗೆ

ನೀವು ದಾಲ್ ತಡಕಾ ಮಾಡುವುದನ್ನು ರೆಸಿಪಿ ಬರೆದಿಟ್ಟುಕೊಂಡು ಅದೇ ಅಳತೆಯ ಮೇರೆಗೆ ಮಾಡಬಹುದು ಆದರೆ ಅಮ್ಮ ಮಾಡುವ ಅಡುಗೆಯ ರುಚಿ ಅದರಲ್ಲಿ ಸಿಗಲಾರದು.ಯಾವುದೇ ಫೈವ್ ಸ್ಟಾರ್ ಹೋಟೆಲ್ ಅಥವಾ ರೆಸಿಪಿಯಿಂದ ಆ ಪರಿಮಳ,ಸ್ವಾದವನ್ನು ನೀವು ಅನುಭವಿಸಲು ಸಾಧ್ಯವಿಲ್ಲ.

ಆರೋಗ್ಯ ಸಮಸ್ಯೆ ಕಂಡುಬಂದರೆ

ಆರೋಗ್ಯ ಸಮಸ್ಯೆ ಕಂಡುಬಂದರೆ

ನೀವು ಮನೆಯನ್ನು ಮಿಸ್ ಮಾಡಿಕೊಳ್ಳಲು ಪ್ರಾರಂಭಿಸಿದ ತಕ್ಷಣ ಒಂದು ರೀತಿ ಒಂಟಿ ಎನಿಸಲು ಪ್ರಾರಂಭವಾಗುತ್ತದೆ. ಅದರಲ್ಲೂ ನಿಮಗೆ ಹುಷಾರಿಲ್ಲದಿದ್ದಾಗ ಅಮ್ಮನ ತೊಡೆಯ ಮೇಲೆ ಮಲಗುವ,ಆಕೆ ಮಾಡಿದ ಅಡುಗೆ ತಿನ್ನುವ ಆಸೆ ಆಗುತ್ತದೆ.

ಯೋಜಿತವಲ್ಲದ ದಿನಗಳು

ಯೋಜಿತವಲ್ಲದ ದಿನಗಳು

ಭಾರತದಲ್ಲಿ ಯೋಜಿತವಲ್ಲದ ದಿನಗಳನ್ನು ನೀವು ಕಳೆದುಕೊಳ್ಳುತ್ತೀರಿ. ನೀವು ಹೊರದೇಶಗಳಿಗೆ ಹೋದಾಗ ತರಕಾರಿ ತರುವುದು, ಕೆಲಸ, ರಜಾದಿನಗಳು, ಮನೆಕೆಲಸ ಎಲ್ಲವನ್ನೂ ಯೋಜಿಸಿ ಅದರಂತೆ ನಡೆದುಕೊಳ್ಳಲು ಪ್ರಾರಂಭಿಸುತ್ತೀರಿ ಇದರಿಂದ ಜೀವನವೇ ಒಂದು ಯೋಜಿತ ಕೆಲಸ ಎನಿಸಲು ಪ್ರಾರಂಭಿಸುತ್ತದೆ.

ಮೋಜಿನ ಚೌಕಾಸಿ

ಮೋಜಿನ ಚೌಕಾಸಿ

ಹೊರದೇಶಗಳಲ್ಲಿ ಕಾರು ಅಥವಾ ತರಕಾರಿ ಯಾವುದನ್ನೇ ಕೊಂಡುಕೊಳ್ಳಿ ಅದಕ್ಕೆ ರಿಯಾಯಿತಿ ಇರುವುದಿಲ್ಲ..ನೀವು ಭಾರತದಲ್ಲಿ ಮಾಡಿದಂತೆ ಚೌಕಾಶಿ ಮಾಡಲು ಪ್ರಾರಂಭಿಸಿದರೆ ಒಂದು ಮುಗುಳ್ನಗು ಅಥವಾ ಓರೆ ನೋಟ ಸಿಗಬಹುದಷ್ಟೆ. ಆದರೆ ಭಾರತದಲ್ಲಿ ನಿಮಗೆ ಬಾರ್ಗೈನ್ ಮಾಡುವುದು ತಿಳಿದಿದ್ದರೆ ಸ್ವಲ್ಪವಾದರೂ ರಿಯಾಯಿತಿ ಸಿಗುವುದು ಖಂಡಿತ.

 ಅನುಭವ

ಅನುಭವ

ಭಾರತದಲ್ಲಿ ಜೀವನ ಬೇರೆಬೇರೆ ರೀತಿಯ ಅನುಭವಗಳಿಂದ ಅಸ್ತವ್ಯಸ್ತತೆಯಿಂದ ಕೂಡಿರುತ್ತದೆ. ಆದರೂ ಕೂಡ ಯಾವುದೇ ಅಡತಡೆಯಿಲ್ಲದ ಮಜದಿಂದ ಕೂಡಿದ ಜೀವನ ಭಾರತದಲ್ಲಿರುತ್ತದೆ ಎಂಬುದು ಮಾತ್ರ ಸತ್ಯ

ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯ

ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯ

ನೀವು ಭಾರತದಲ್ಲಿದ್ದಾಗ ಕ್ರಿಕೆಟ್ ಮ್ಯಾಚಿನ ಮಜಾ ತೆಗೆದುಕೊಳ್ಳಲು ಸ್ಟೇಡಿಯಂಗೆ ಹೋಗಬೇಕೆಂದೇನಿಲ್ಲ. ನಿಮಗೆ ಭಾರತದ ಸ್ವಾತಂತ್ರದ ದಿನ ಇದ್ದ ದೇಶ ಭಕ್ತಿಗಿಂತ ಮ್ಯಾಚ್ ನೋಡುವಾಗ ಹೆಚ್ಚಿರುತ್ತದೆ ಎಂಬುದನ್ನು ಪ್ರತಿಭಾರಿ ಮ್ಯಾಚ್ ಗೆಲ್ಲಲು ಪ್ರತಿಯೊಬ್ಬರೂ ಮಾಡುವ ಪ್ರಾರ್ಥನೆಯೇ ತೋರಿಸುತ್ತದೆ.

ವೈದ್ಯಕೀಯ ಪದ್ಧತಿ

ವೈದ್ಯಕೀಯ ಪದ್ಧತಿ

ಕೆಲವೊಂದು ಯುರೋಪಿಯನ್ ದೇಶಗಳಲ್ಲಿ ವೈದ್ಯರ ಬಳಿ ಹೋಗಲು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ. ಅಪಾಯಿಂಟ್ಮೆಂಟ್ ಸಿಗುವುದು ಸುಲಭವೂ ಅಲ್ಲ. ಸ್ವೀಡನ್ ನಲ್ಲಿ ಗರ್ಭಿಣಿ ಮಹಿಳೆಯು ತನ್ನ ಒಂಬತ್ತು ತಿಂಗಳು ವೈದ್ಯರನ್ನು ಕಾಣಲು ಸಾಧ್ಯವಾಗುವುದಿಲ್ಲ ಮತ್ತು ನರ್ಸ್ ಆಕೆಯ ಡೆಲಿವರಿ ಮಾಡಿಸುತ್ತಾಳೆ. ನಾವು ಭಾರತೀಯರು ಎರಡು ಮೂರು ಭಾರಿ ಕೆಮ್ಮಿದರೂ ವೈದ್ಯರನ್ನು ಹುಡುಕಿಕೊಂಡು ಹೋಗುವವರು,ಹಾಗಿದ್ದಾಗ ಇಂತಹ ಸ್ಥಿತಿ ಇದ್ದರೆ ಬಹಳ ಕಷ್ಟವಾಗುತ್ತದೆ.


English summary

Things You Will Miss In A Foreign Country

It's hard to adjust to a foreign land and start a new life amidst different culture, new language and unfamiliar rules and social norms. You often miss the convenience and warmth of home
X
Desktop Bottom Promotion