For Quick Alerts
ALLOW NOTIFICATIONS  
For Daily Alerts

ಹೊಸ ಬಟ್ಟೆ ಧರಿಸುವ ಮೊದಲು ಸ್ವಲ್ಪ ಆಲೋಚನೆ ಮಾಡಿ!

By Super
|

ಹೊಸ ಬಟ್ಟೆಗಳು ನಮ್ಮ ಜೀವನದಲ್ಲಿ ಅತ್ಯಂತ ಮಹತ್ವವನ್ನು ಪಡೆದಿರುವ ವಿಚಾರಗಳಾಗಿವೆ. ಬಹಳಷ್ಟು ಜನರು ಹೊಸ ಬಟ್ಟೆಗಳನ್ನು ವಿಶೇಷ ಸಂದರ್ಭದಲ್ಲಿ ಮಾತ್ರ ಧರಿಸುತ್ತಾರೆ. ಇನ್ನೂ ಕೆಲವು ಜನರು ತಾವು ಮತ್ತಷ್ಟು ಆಕರ್ಷಕವಾಗಿ ಕಾಣಲು ಹೊಸ ಬಟ್ಟೆಗಳನ್ನು ಧರಿಸುತ್ತಾರೆ.

ಆದರೆ ಒಂದು ವಿಚಾರವನ್ನು ನೆನಪಿನಲ್ಲಿಡಬೇಕು, ಹೊಸ ಬಟ್ಟೆಗಳನ್ನು ಧರಿಸಿದಾಗ ಅವುಗಳು ಕಾಯಿಲೆಗಳ ವಿರುದ್ಧ, ನಕಾರಾತ್ಮಕ ಶಕ್ತಿಗಳ ಮತ್ತು ಕೆಟ್ಟ ಆಲೋಚನೆಗಳ ವಿರುದ್ಧ ನಮಗೆ ರಕ್ಷಣೆಯನ್ನು ಒದಗಿಸುತ್ತವೆ. ಬನ್ನಿ ನೀವು ಹೊಸ ಬಟ್ಟೆಗಳನ್ನು ಧರಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ ಓದಿಕೊಳ್ಳಿ. ನಾವು ಜೀವನದಲ್ಲಿ ಮಾಡುವ ಅತಿ ದೊಡ್ಡ 10 ತಪ್ಪುಗಳು!

Things to remember every time you wear new clothes

* ಕೆಲವರು ಹೊಸ ಬಟ್ಟೆಗಳನ್ನು ಧರಿಸಿದಾಗ ಇದ್ದಕ್ಕಿದ್ದಂತೆ ಕಾಯಿಲೆಗೆ ತುತ್ತಾಗುತ್ತಾರೆ. ಇದಕ್ಕೆ ಅವರು ನೀಡುವ ಕಾರಣ ನಕಾರಾತ್ಮಕ ಶಕ್ತಿಯಿಂದಲೆ ತಾವು ಕಾಯಿಲೆಗೆ ಬಿದ್ದೆವು ಎಂದು ಭಾವಿಸುತ್ತಾರೆ. ಈ ನಕಾರಾತ್ಮಕ ಶಕ್ತಿಯಿಂದ ನೀವು ತಪ್ಪಿಸಿಕೊಳ್ಳಬೇಕೆಂದರೆ, ಪ್ರತಿಯೊಬ್ಬರು ಹೊಸ ಬಟ್ಟೆ ಧರಿಸುವಾಗ ಒಂದು ಸಣ್ಣ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಹೊಸ ಬಟ್ಟೆಯನ್ನು ಧರಿಸುವ ಮೊದಲು ಒಗೆದು ಧರಿಸಬೇಕು.
ಹೀಗೆ ಮಾಡುವುದರಿಂದ ಆ ಹೊಸ ಬಟ್ಟೆಯಲ್ಲಿರುವ ಕೊಳೆಯು ತೊಲಗುತ್ತದೆ. ಬಹಳಷ್ಟು ಜನ ರೆಡಿಮೇಡ್ ಬಟ್ಟೆಗಳನ್ನು ಕೊಳ್ಳುವ ಮೊದಲು ಅದನ್ನು ಧರಿಸಿ, ಚೆನ್ನಾಗಿ ಕಾಣುತ್ತೇವೆಯೇ? ಎಂದು ಪರೀಕ್ಷಿಸಿರುತ್ತಾರೆ. ನೀವು ಅದನ್ನು ಮನೆಗೆ ತಂದು ಹೊಸದು ಎಂದು ಹೇಳಿದರು, ಅದನ್ನು ಈಗಾಗಲೇ ಯಾರೋ ತೊಟ್ಟು ಬಿಟ್ಟಿರುತ್ತಾರೆ. ಆದ್ದರಿಂದ ಅದನ್ನು ಧರಿಸುವ ಮೊದಲು ಒಗೆದು ಧರಿಸುವುದು ಉತ್ತಮ.

* ನೀವು ಧರಿಸುತ್ತಿರುವ ಹೊಸ ಬಟ್ಟೆಯನ್ನು ಇದಕ್ಕೆ ಮೊದಲು ಯಾರು ಪ್ರಯತ್ನಿಸಿ ನೋಡಿದ್ದರು ಎಂಬ ವಿಚಾರ ನಿಮಗೆ ತಿಳಿದಿರುವುದಿಲ್ಲ. ಅವರಿಗೆ ಅದು ಯಾವ ಬಗೆಯ ತ್ವಚೆಯ ಸಮಸ್ಯೆಗಳು ಇದ್ದವು ಎಂಬುದು ಸಹ ನಿಮಗೆ ತಿಳಿದಿರುವುದಿಲ್ಲ. ಇಂತಹ ಬಟ್ಟೆಗಳನ್ನು ನೀವು ಒಗೆಯದೆ ಧರಿಸಿದಲ್ಲಿ, ನೀವು ಸಹ ಆ ಕಾಯಿಲೆಗೆ ತುತ್ತಾಗಬಹುದು. ಒಂದು ವೇಳೆ ನಿಮಗೆ ಆ ಹೊಸ ಬಟ್ಟೆಯನ್ನು ಒಗೆಯಲು ಇಷ್ಟವಿಲ್ಲದಿದ್ದಲ್ಲಿ, ಒಮ್ಮೆ ಸೂರ್ಯನ ಬೆಳಕಿನಲ್ಲಾದರು ಒಣಗಿಸಿ.

* ಒಂದು ವೇಳೆ ನೀವು ನಿಮ್ಮ ಹಳೆಯ ಬಟ್ಟೆಗಳನ್ನು ಬಿಸಾಕಬೇಕು ಎಂದು ಬಯಸಿದಲ್ಲಿ, ಸುಮ್ಮನೆ ಅವುಗಳನ್ನು ಎಸೆಯಬೇಡಿ. ಅದನ್ನು ಸ್ವಲ್ಪ ಮಾತ್ರವಾದರು ಹರಿದು ನಂತರ ಅದನ್ನು ಎಸೆಯಿರಿ. ಇದರಿಂದ ನಿಮ್ಮ ಕುಂಡಲಿಯಲ್ಲಿರುವ ಕೆಲವೊಂದು ಗೃಹ ದೋಷಗಳನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ನೀವು ನಿಮ್ಮ ಬಟ್ಟೆಗಳನ್ನು ದಾನ ಮಾಡಬೇಕಾದಲ್ಲಿ, ಆ ವ್ಯಕ್ತಿಗೆ ನಿಮ್ಮ ಬಟ್ಟೆಗಳನ್ನು ಸರಿಯಾಗಿ ಧರಿಸುವಂತೆ ಹೇಳಿ. ಇದರಿಂದ ನಿಮಗೆ ಸಹಾಯವಾಗುತ್ತದೆ. ಬೆಲೆ ಕಟ್ಟಲಾಗದ ಅಮೂಲ್ಯ ಸಂಗೀತ ಉಪಕರಣಗಳು

* ಹೊಸ ಬಟ್ಟೆಗಳ ಜೊತೆಗೆ ಕೆಲವೊಂದು ಒಳ್ಳೆಯ ಮತ್ತು ಕೆಟ್ಟ ಶಕುನಗಳು ತಳುಕು ಹಾಕಿಕೊಂಡಿರುತ್ತವೆ. ಒಂದು ವೇಳೆ ಒಬ್ಬ ವ್ಯಕ್ತಿಯು ಹೊಸ ಬಟ್ಟೆಗಳನ್ನು ಧರಿಸಿದಾಗ ಅದು ಹರಿದಿದ್ದರೆ ಅಥವಾ ಸುಟ್ಟಿದ್ದರೆ, ಅದು ಅಪಶಕುನವಂತೆ. ಇದು ಆ ವ್ಯಕ್ತಿ ಕೈಗೆತ್ತಿಕೊಳ್ಳುವ ಕಾರ್ಯದಲ್ಲಿ ಅಡಚಣೆಗಳನ್ನು ಸೂಚಿಸುತ್ತದೆ.

* ಶುಕ್ರವಾರವು ಹೊಸ ಬಟ್ಟೆಗಳನ್ನು ಧರಿಸಲು ಹೇಳಿ ಮಾಡಿಸಿದ ದಿನವಾಗಿರುತ್ತದೆ. ಹೊಸ ಬಟ್ಟೆಗಳನ್ನು ಆದಷ್ಟು ಶನಿವಾರಗಳಂದು ಕೊಳ್ಳಬೇಡಿ. ಯಾವುದೇ ಕಾರಣಕ್ಕು ಹೊಸ ಬಟ್ಟೆಗಳನ್ನು ಭಾನುವಾರಗಳಂದು ಧರಿಸಬೇಡಿ.

English summary

Things to remember every time you wear new clothes

New clothes have a great importance in our lives. Most people wear new clothes only on special occasions. However, some people wear new clothes to look more attractive. But one thing has to be remembered while wearing new clothes
Story first published: Friday, October 31, 2014, 15:14 [IST]
X
Desktop Bottom Promotion