For Quick Alerts
ALLOW NOTIFICATIONS  
For Daily Alerts

ಹಾಸ್ಟೆಲ್ ಜೀವನ ಸುಖದ ಸುಪ್ಪತ್ತಿಗೆಯೇ, ಮುಳ್ಳಿನ ಹಾಸಿಗೆಯೇ?

|

ಮನುಷ್ಯನ ಮನಸ್ಸೇ ವಿಚಿತ್ರ, ಅದು ನಿಜವಾದ ವಿಚಾರಗಳಿಗಿಂತ ಊಹೆಗೆ ಅಧಿಕವಾದ ಮಹತ್ವವನ್ನು ನೀಡುತ್ತದೆ. ಕೆಲವರು ಹಾಗೆಯೇ ಹಳೆಯ ಕಾಲದವರ ತರಹ ಯೋಚನೆ ಮಾಡುತ್ತ ಇರುತ್ತಾರೆ. ಅದನ್ನು ಅವರು ಎಂದಿಗೂ ಬದಲಾಯಿಸಿಕೊಳ್ಳುವುದಿಲ್ಲ.

ಈ ರೀತಿಯ ಕೆಲವೊಂದು ಆಲೋಚನೆಗಳು ಸುಖಾಸುಮ್ಮನೆ ಇರುತ್ತವೆ, ಇನ್ನೂ ಕೆಲವೊಂದು ಅಸಹ್ಯಕರವಾಗಿರುತ್ತವೆ ಮತ್ತು ಇನ್ನೂ ಕೆಲವೊಂದು ತಮಾಷೆಯಾಗಿರುತ್ತವೆ! ಉದಾಹರಣೆಗೆ, ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳುವ ವ್ಯಕ್ತಿಗಳು ಸುಮಾರು ವಿಚಾರಗಳನ್ನು ಕೇಳಬೇಕಾಗಿ ಬರುತ್ತವೆ. ಯಾರು ಸಹ ಹಾಸ್ಟೆಲ್‍ನಲ್ಲಿಯೇ ಜೀವನ ಪೂರ್ತಿ ಇರುವುದಿಲ್ಲ. ಅದು ಅನಿವಾರ್ಯವಾಗಿ ಓದುವಾಗ ಕೆಲವರು ಉಳಿದುಕೊಳ್ಳುವ ಸ್ಥಳ.

ಇಂತಹ ಅನಿವಾರ್ಯತೆ ಬಹುತೇಕರಿಗೆ ಜೀವನದಲ್ಲಿ ಒಮ್ಮೆಯಾದರು ಬರುತ್ತದೆ. ನಾವು ಹಾಸ್ಟೆಲ್‍ನಲ್ಲಿರುವಾಗ ಜವಾಬ್ದಾರಿಗಳನ್ನು ಕಲಿಯುತ್ತೇವೆ, ಇದರ ಜೊತೆಗೆ ಜೀವನದ ಇನ್ನಿತರ ಒತ್ತಡಗಳನ್ನು ನಿಭಾಯಿಸುವುದನ್ನು ಸಹ ನಾವು ಕಲಿಯುತ್ತೇವೆ.

ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳುವುದು ಖುಷಿಯ ವಿಚಾರವು ಸಹ ಹೌದು. ಇಲ್ಲಿ ಸಾಕಷ್ಟು ತಮಾಷೆ, ತರ್ಲೆ ಇತ್ಯಾದಿಗಳು ಇರುತ್ತವೆ. ಇಲ್ಲಿ ನೀವು ಮುಂದೆ ಸಂಸಾರಿಗಳಾಗಿ ಬದಲಾಗುವ ಜನರನ್ನು ಸಹ ಭೇಟಿಯಾಗುತ್ತೀರಿ. ಪಿಜಿ ಜೀವನದಲ್ಲಿ ಮಹಿಳೆಯರು ಅನುಭವಿಸುವ ಸವಾಲುಗಳು

ಹೀಗೆ ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳುವುದರಿಂದ ಹಲವಾರು ಪ್ರಯೋಜನಗಳು ಇರುತ್ತವೆ. ಬನ್ನಿ ಜನ ಹಾಸ್ಟೆಲ್‍ನಲ್ಲಿ ಇರುವವರ ಕುರಿತು ಹೇಗೆ ಆಲೋಚಿಸುತ್ತರೆ ಮತ್ತು ಅವರ ಅನಿಸಿಕೆಗಳು ಏನು ಎಂಬುದನ್ನು ತಿಳಿದುಕೊಳ್ಳೋಣ. ನೀವು ಹಾಸ್ಟೆಲ್‍ನಲ್ಲಿರುವವರಾಗಿದ್ದಲ್ಲಿ, ಇದನ್ನು ಕೇಳಿ ನಕ್ಕು ಬಿಡಿ. ಇಲ್ಲವಾದಲ್ಲಿ, ಹಾಸ್ಟೆಲ್‍ನಲ್ಲಿರುವವರ ಕುರಿತು ನಿಮಗಿರುವ ಪೂರ್ವಾಗ್ರಹಗಳನ್ನು ಬದಲಿಸಿಕೊಳ್ಳಿ.

"ನೀವು ಇಡೀ ದಿನ ಮ್ಯಾಗಿ ತಿನ್ನುತ್ತಿರುತ್ತೀರಿ"

ಪ್ರತಿಯೊಬ್ಬರೂ ಅಂದುಕೊಳ್ಳುವುದೇನೆಂದರೆ, ಹಾಸ್ಟೆಲ್‍ನಲ್ಲಿರುವವರು ತಮಗಾಗಿ ಯಾವುದನ್ನು ಅಡುಗೆ ಮಾಡಿಕೊಳ್ಳುವುದಿಲ್ಲ. ಅದಕ್ಕೂ ಮೇಲಾಗಿ ಅಲ್ಲಿ ನಿಮಗೆ ಏನೂ ಸಿಗುವುದಿಲ್ಲ. ಹಾಗಾಗಿ ನೀವು ಪ್ರತಿ ದಿನ 2-ಮಿನಟ್ ನೂಡಲ್‍ಗಳನ್ನು ಮಾತ್ರ ಸೇವಿಸುತ್ತೀರಿ. ಮ್ಯಾಗಿ ತಯಾರಿಸುವುದು ಸುಲಭವಾದರು, ಪ್ರತಿದಿನ ಇದನ್ನು ಯಾರು ತಾನೇ ತಿನ್ನುತ್ತಾರೆ.

"ನೀವು ಕುಡಿಯಲು ಶುರುಮಾಡಿದ್ದೀರಾ?"

ಇದೊಂದು ತುಂಬಾ ಹಳೆಯ ವಿಚಾರ. ನಿಮ್ಮ ಮನೆಯಲ್ಲಿರುವ ಪ್ರತಿಯೊಬ್ಬ ಹಿರಿಯರು ಈ ವಿಚಾರವನ್ನು ನಿಮ್ಮ ಕುರಿತಾಗಿ ಕೇಳುತ್ತಾರೆ. ಹಾಸ್ಟೆಲ್‍ನಲ್ಲಿರುವವರು ಸಹವಾಸ ದೋಷದಿಂದ ಕುಡಿಯಲು ಆರಂಭಿಸುತ್ತಾರೆ, ಮಜಾ ಮಾಡುತ್ತಾರೆ ಎಂಬುದು ಅವರ ಅನಿಸಿಕೆ. ಹಾಸ್ಟೆಲ್‍ನಲ್ಲಿರುವ ಹುಡುಗ/ಹುಡುಗಿ ಅದರ ಪಕ್ಕಕ್ಕು ಸಹ ಹೋಗದೆ ಇದ್ದರು ಅವರು ಹೀಗೆ ಭಾವಿಸುತ್ತಾರೆ.

"ನೀವು ಖಂಡಿತ ಗರ್ಲ್‌ಫ್ರೆಂಡ್/ಬಾಯ್‍ಫ್ರೆಂಡ್ ಹೊಂದಿರುತ್ತೀರಿ"

ಹಾಸ್ಟೆಲ್‍ನಲ್ಲಿರುವ ಹುಡುಗ ಮತ್ತು ಹುಡುಗಿಯರ ಕುರಿತು ಜನ ಭಾವಿಸುವುದೇನೆಂದರೆ, ಇವರಿಗೆ ಗರ್ಲ್‍ಫ್ರೆಂಡ್/ಬಾಯ್‍ಫ್ರೆಂಡ್ ಖಂಡಿತ ಇರುತ್ತಾರೆ. ಹಾಗೆಂದು ನಾವು ಈ ಕಾರಣಕ್ಕಾಗಿಯೇ ಹಾಸ್ಟೆಲ್‍ಗೆ ಬರುತ್ತೇವೆಯೇ?. ಆದರೆ ಒಂದು ವಿಚಾರ ಏನಪ್ಪಾ ಎಂದರೆ, ಹಾಸ್ಟೆಲ್‍ನಲ್ಲಿರುವಾಗ ಇಂತಹ ಅವಕಾಶ ಸಿಕ್ಕರೆ, ಅದು ಕೈತಪ್ಪಿ ಹೋಗದಂತೆ ಹಿಡಿದುಕೊಳ್ಳುತ್ತೇವೆ!

"ನಿಮ್ಮ ರೂಮ್ ಖಂಡಿತ ಕಸದ ತೊಟ್ಟಿಯಾಗಿರುತ್ತೆ!"

ಮೊದಲಿಗೆ ನಾವೇನು ನಮ್ಮ ಹಾಸ್ಟೆಲ್ ಕೋಣೆಯನ್ನು ಯಾವತ್ತಿಗೂ ಕಸದ ತೊಟ್ಟಿ ಮಾಡಿಕೊಂಡಿರುವುದಿಲ್ಲ. ನಮಗೆ ಯಾವ ಯಾವ ವಸ್ತುವು ಎಲ್ಲೆಲ್ಲಿ ಇರಬೇಕೋ, ಅಲ್ಲಲ್ಲಿ ಇಟ್ಟಿರುತ್ತೇವೆ. ಸಮಸ್ಯೆ ಏನಪ್ಪ ಎಂದರೆ,ನಮ್ಮ ಕೋಣೆಯಲ್ಲಿ ನಾವೊಬ್ಬರೇ ಇರುವುದಿಲ್ಲ. ಹಾಗಾಗಿ ನಿಮಗೆ ಒಂದೇ ವಸ್ತುಗಳು ಅಲ್ಲಲಿ ಕಂಡು ಬಂದು ಕಸದ ತೊಟ್ಟಿಯಂತೆ ಕಾಣಬಹುದು. ಇದು ನಮ್ಮ ತಪ್ಪಲ್ಲ, ಈ ರೀತಿ ಆಲೋಚಿಸಬೇಡಿ.

"ನೀವು ಪ್ರತಿ ರಾತ್ರಿ ಹುಡುಗಿಯರ ಹಾಸ್ಟೆಲ್ ಸುತ್ತ-ಮುತ್ತ ಅಲೆದಾಡುತ್ತಿರುತ್ತೀರಿ"

ಕಾಲೇಜು ವಿದ್ಯಾರ್ಥಿಯಿಂದ ಹಿಡಿದು ಹುಡುಗಿಯರ ಹಾಸ್ಟೆಲ್‍ನ ವಾಚ್‍ಮೆನ್‍ವರೆಗು ನಮಗೆ ಹಲವಾರು ಹುದ್ದೆಗಳನ್ನು ಜನರು ನೀಡುತ್ತಾರೆ. ಇರಲಿ ಬಿಡಿ, ಹುಡುಗಿಯರ ಹಾಸ್ಟೆಲ್ ಕಡೆ ನಾವು ಹೋಗುವುದು ನಿಜ. ಅಲ್ಲಿ ನಮ್ಮ ಸ್ನೇಹಿತೆಯರಿರುತ್ತಾರೆ, ಅವರು ಹುಷಾರಾಗಿ ಹೋಗಿ ತಲುಪಿದರೋ, ಇಲ್ಲವೋ ಎಂಬ ಕಾರಣಕ್ಕೆ ಹೋಗುತ್ತೇವೆ.

"ನೀವು ತರಗತಿಗೆ ಹೋಗುತ್ತೀರೋ ಅಥವಾ ರೂಮಿನಲ್ಲಿ ಮಲಗಿ ಇಡೀ ದಿನ ನಿದ್ದೆ ಮಾಡುತ್ತೀರೋ?"

ಒಂದು ಸಣ್ಣ ವಿಚಾರ "ಹಾಜರಾತಿ" ಅಥವಾ ಅಟೆಂಡೆನ್ಸ್ ಎಂಬುದು ಒಂದು ಇಲ್ಲವಾದಲ್ಲಿ, ನೀವು ನಮ್ಮನ್ನು ಗೊರಕೆ ಹೊಡೆಯುತ್ತ ರೂಮಿನಲ್ಲಿ ಮಲಗಿರುವುದನ್ನು ನೋಡಬಹುದು!. ನಾವು ಆಗಾಗ ತರಗತಿಗೆ ಚಕ್ಕರ್ ಹೊಡೆಯುತ್ತೇವೆ, ಹಾಗೆಂದು ನಮ್ಮ ಭವಿಷ್ಯವನ್ನು ಹಾಳು ಮಾಡುವಷ್ಟರ ಮಟ್ಟಿಗೆ ಚಕ್ಕರ್ ಹೊಡೆಯುವುದಿಲ್ಲ.

"ನೀವು ಬಿಡುಗಡೆಯಾಗುವ ಹೊಸ ಚಲನಚಿತ್ರಗಳನ್ನು ನೋಡುತ್ತಿರುತ್ತೀರಿ?"

ವಾಸ್ತವವಾಗಿ, ಈ ವಿಚಾರ ಸ್ವಲ್ಪ ಮಟ್ಟಿಗೆ ಒಪ್ಪಬೇಕಾದುದೆ!. ಪ್ರತಿಯೊಬ್ಬರಿಗು ಸಿನಿಮಾಗೆ ಹೋಗುವ ಹುಚ್ಚು ಇರುತ್ತದೆ. ಹಾಗೆಂದು ದಿನಾ ನಾವು ಥಿಯೇಟರಿನಲ್ಲಿ ಕೂರುವುದಿಲ್ಲ. ಏಕೆಂದರೆ ನಮ್ಮ ರೂಮಿನಲ್ಲಿಯೇ ನಾವು 5.1 ಸ್ಪೀಕರ್ ಇಟ್ಟುಕೊಂಡು ಆರಾಮವಾಗಿ ಕಂಪ್ಯೂಟರಿನಲ್ಲಿ ಸಿನಿಮಾ ನೋಡುತ್ತೇವೆ.

"ನೀವು ಎಲ್ಲಾ ಶಿಷ್ಟಾಚಾರಗಳನ್ನು ಮರೆತಿರುತ್ತೀರಿ"

ಛೇ, ಇಲ್ಲ. ನಾವು ಯಾವ ಶಿಷ್ಟಾಚಾರಗಳನ್ನು ಮರೆತಿರುವುದಿಲ್ಲ. ಬದಲಿಗೆ ನಾವು ಅದನ್ನು ಮಿಸ್ ಮಾಡಿಕೊಳ್ಳುತ್ತಿರುತ್ತೇವೆ. ಹಬ್ಬಗಳು, ಸಿಹಿ ತಿನಿಸುಗಳು, ಒಟ್ಟಿಗೆ ಇರುವ ಖುಷಿ, ಎಲ್ಲವನ್ನು ದೂರ ಮಾಡಿಕೊಂಡಿರುತ್ತೇವೆ. ನಾವು ಆಗಾಗ ಹಿರಿಯರ ಬಳಿ ಆಶೀರ್ವಾದವನ್ನು ಸಹ ತೆಗೆದುಕೊಳ್ಳುತ್ತಿರುತ್ತೇವೆ. ಇದರ ಮೂಲಕವೇ ನಾವು ಅವರ ಪ್ರೀತಿಯನ್ನು ಸಹ ಪಡೆಯುತ್ತಿರುತ್ತೇವೆ.

ದಿನಾ ರಾತ್ರಿ ಪಾರ್ಟಿ ಮಾಡುತ್ತಿರುತ್ತೀರಿ

ದಿನಾ ರಾತ್ರಿ ಪಾರ್ಟಿ ಮಾಡುತ್ತಿರುತ್ತೀರಿ

ಆಗಿದ್ದರೆ ಚೆನ್ನಾಗಿರುತ್ತಿತ್ತು! ಆದರೆ ನಮಗೂ ತರಗತಿಗಳು ಇರುತ್ತವೆ ಅಲ್ಲವೆ. ಎಲ್ಲದಕ್ಕೂ ಮಿತಿಗಳು ಸಹ ಇರುತ್ತವೆ. ಆಗಾಗ ರಾತ್ರಿಯಿಡೀ ಪಾರ್ಟಿ ಆಗುತ್ತಿರುತ್ತದೆಯೇ ಹೊರತು ಪ್ರತಿ ರಾತ್ರಿ ಪಾರ್ಟಿಯಾಗುವುದಿಲ್ಲ. ನಮಗೂ ಮೋಜು ಬೇಕು, ಆದರೆ ಅದು ಪ್ರತಿ ರಾತ್ರಿ ಅಲ್ಲ.

English summary

Things People Think About Guys Who Stay In Hostel

Stereotyping is very common in our country. People have a specific set of ideas and they won't change it ever. While some of these thoughts are crude and disgusting, others are 
 just plainly funny! please read the following, have a good laugh and if possible change your views about guys/girls who stay in a hostel.
X
Desktop Bottom Promotion