For Quick Alerts
ALLOW NOTIFICATIONS  
For Daily Alerts

ಗಮನ ಸೆಳೆಯಲು ಜನರು ಮಾಡುವ ವಿಲಕ್ಷಣ ವಿಷಯಗಳು

By Hemanth P
|

ಜಗತ್ತಿನಲ್ಲಿ ಮೂರು ವಿಧದ ಜನರಿರುತ್ತಾರೆ. ಮೊದಲನೆಯವರಿಗೆ ಯಾರದ್ದೇ ಗಮನಕ್ಕೆ ಬರುವುದು ಇಷ್ಟವಿರುವುದಿಲ್ಲ, ಎರಡನೇಯವರಿಗೆ ಗಮನಕ್ಕೆ ಬರುವುದು ಬೇಕು ಮತ್ತು ಅದಕ್ಕಾಗಿ ಅವರು ಹೆಚ್ಚಿನ ಶ್ರಮ ವಹಿಸುತ್ತಾರೆ. ಮೂರನೇಯವರಿಗೆ ಎಲ್ಲರ ಗಮನಕ್ಕೆ ಬರಬೇಕಾಗಿರುತ್ತದೆ. ಆದರೆ ಅವರು ಬಯಸಿದಷ್ಟು ಸಿಗುವುದಿಲ್ಲ. ಇದರಿಂದ ಮೂರನೇ ವಿಭಾಗದವರು ಜನರ ಗಮನ ಸೆಳೆಯಲು ಹೆಚ್ಚಿನ ಶ್ರಮ ಹಾಕುತ್ತಾರೆ. ಗಮನ ಸೆಳೆಯಬೇಕೆಂಬ ಕಾರಣಕ್ಕಾಗಿ ಅವರು ಎಲ್ಲಾ ಮಿತಿ ದಾಟುತ್ತಾರೆ ಮತ್ತು ತಮ್ಮನ್ನು ಆಕರ್ಷಣೆಯ ಕೇಂದ್ರವಾಗಿ ಮಾಡುತ್ತಾರೆ. ಈ ವಿಭಾಗದ ಜನರನ್ನು ಸಾಮಾನ್ಯವಾಗಿ ಗಮನ ಹುಡುಕುವವರು ಎಂದು ಕರೆಯಲಾಗುತ್ತದೆ.

ಗಮನ ಹುಡುಕುವವರಿಗೆ ಜೀವನದಲ್ಲಿ ಕೇವಲ ಒಂದೇ ಉದ್ದೇಶವಿರುತ್ತದೆ. ಆಸಕ್ತಿ ಆಕ್ರಮಿಸಿ ಗಮನ ಸೆಳೆಯುವುದು. ತಮ್ಮನ್ನು ಪ್ರತಿಯೊಬ್ಬರು ನೋಡಬೇಕು ಎಂದು ಅವರು ಕೆಲವೊಂದು ಅವಿವೇಕದ ಕೆಲಸಗಳನ್ನು ಮಾಡುತ್ತಾರೆ. ಕೆಲವೊಂದು ಸಲ ಇಂತಹ ವ್ಯಕ್ತಿಗಳು ವಿಲಕ್ಷಣ ಮತ್ತು ಅವಿವೇಕದ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ.

Things People Do To Be An Attention Seeker

ಇದು ಕೆಲವೊಮ್ಮೆ ಅವರನ್ನು ಗಮನಿಸುವಂತೆ ಮಾಡಿ ಅವರ ಬಗ್ಗೆ ಮಾತನಾಡುವಂತೆ ಮಾಡುತ್ತದೆ. ಆದರೆ ಇದರ ಪರಿಣಾಮ ಭವಿಷ್ಯದಲ್ಲಿ ಇವರು ಮತ್ತಷ್ಟು ಇಂತಹ ವಿಲಕ್ಷಣ ಕೆಲಸಗಳನ್ನು ಮಾಡುತ್ತಾರೆ. ಗಮನ ಸೆಳೆಯಲು ಕೆಲವರು ಅತ್ಯಂತ ಅವಿವೇಕದ ಮತ್ತು ವಿಲಕ್ಷಣ ಕೆಲಸಗಳನ್ನು ಮಾಡುತ್ತಾರೆ. ಇದರಲ್ಲಿ ಕೆಲವೊಂದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಅಪರಾಧಿಗಳಾಗುವುದು
ಪಿಕ್ ಪಾಕೆಟ್, ಅತಿ ವೇಗವಾಗಿ ಚಾಲನೆ ಮಾಡುವುದು ಅಥವಾ ಅಂಗಡಿಗೆ ನುಗ್ಗಿ ಕಳ್ಳತನ ಮಾಡುವುದು ಗಮನ ಸೆಳೆಯಲು ಮಾಡುವಂತಹ ವಿಲಕ್ಷಣ, ಸರಳ ಅಪರಾಧಿ ಕೆಲಸಗಳು. ಕೆಲವು ಸಲ ಗಮನ ಸೆಳೆಯುವ ಸಲುವಾಗಿ ನೆರೆಮನೆಗೆ ಕನ್ನ ಹಾಕುತ್ತಾರೆ. ಆದರೆ ಏನು ಕದಿಯುವುದಿಲ್ಲ. ಇದರ ಮೂಲಕ ಅವರು ಕುಟುಂಬದವರು ಮತ್ತು ಸ್ನೇಹಿತರ ಗಮನ ಸೆಳೆಯುತ್ತಾರೆ. ಇಂತಹ ಸಣ್ಣ ಅಪರಾಧಗಳು ಗಮನ ಸೆಳೆಯಲು ಬಯಸುವವರ ಪಟ್ಟಿಯಲ್ಲಿ ಸಾಮಾನ್ಯವಾಗಿರುತ್ತದೆ.

ಬಿಯರ್‌ನಿ೦ದ ಆಗುವ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿದಿವೆಯೇ?

ಫ್ಯಾಷನ್ ಅನಾಹುತಗಳು
ಫ್ಯಾಶನ್ ಫ್ರೀಕ್ ಗಳಿಗೆ ಹೃದಯಾಘಾತ ಉಂಟು ಮಾಡಬಹುದಾದ ಬಟ್ಟೆಗಳನ್ನು ಧರಿಸುವ ವ್ಯಕ್ತಿಗಳನ್ನು ನಾವು ನೋಡುತ್ತೇವೆ. ಜಗಮಗಿಸುವ ದೀಪಾವಳಿ ದೀಪಗಳಿರುವ ಕ್ಯಾಪ್ ಮತ್ತು ದೊಡ್ಡ ಮೂಗುಬೊಟ್ಟನ್ನು ಧರಿಸುವುದು ಜನರು ಗಮನಸೆಳೆಯಲು ಮಾಡುವ ಫ್ಯಾಶನ್. ಸಾಮಾನ್ಯ ದಿನಗಳಲ್ಲಿ ಹ್ಯಾಲೋವೀನ್ ಬಟ್ಟೆಗಳನ್ನು ಧರಿಸುವುದು ಇತರ ವಿಲಕ್ಷಣ ಫ್ಯಾಶನ್ ಅನಾಹುತಗಳು, ಜೀನ್ಸ್ ಜೋಡಿ ಮತ್ತು ಕೆಂಪು ಬಾಟಮ್ ಗೆ ಹಳದಿ ಟಾಪ್ ಧರಿಸುವುದು ಇತ್ಯಾದಿ.

ಅನುಕಂಪದ ಟ್ರಿಕ್
ಕೆಲವೊಂದು ಸಲ ಗಮನ ಸೆಳೆಯಲು ಬಯಸುವವರು ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತಾರೆ. ಇಂತಹ ವಿಚಿತ್ರ ಕೆಲಸಗಳನ್ನು ಗಮನ ಸೆಳೆಯಲು ಬಯಸುವವರು ಮಾಡುತ್ತಾರೆ ಮತ್ತು ಕೈಗೆ ಗಾಯ, ಆತ್ಮಹತ್ಯೆಗೆ ಪ್ರಯತ್ನ ಇತ್ಯಾದಿಗಳಿಂದ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಕೆಲವೊಂದು ಸಲ ಮಿತಿಮೀರಿ ವರ್ತಿಸಿ ತಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸುತ್ತಾರೆ. ತಮ್ಮದೇ ಅಶ್ಲೀಲ ವೀಡಿಯೋ ತಯಾರಿಸುತ್ತಾರೆ ಮತ್ತು ಇದನ್ನು ಎಲ್ಲರಿಗೂ ಹಂಚುತ್ತಾರೆ ಅಥವಾ ಯಾರಾದರೂ ಜನಪ್ರಿಯ ವ್ಯಕ್ತಿಯೊಂದಿಗೆ ಇರುತ್ತಾರೆ.

ಪರಿಣಾಮಕಾರಿ ಸಂವಹನ ಕಲೆಗೆ ಈ ಏಳು ಸೂತ್ರಗಳು ರಹದಾರಿ

ದ್ವೇಷ ಮತ್ತು ಪ್ರೀತಿ
ಕೆಲವೊಂದು ಸಲ ಗಮನ ಸೆಳೆಯಲು ಬಯಸುವ ವ್ಯಕ್ತಿಗಳು ಬೀದಿ, ಅಂಗಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಯಾರೊಂದಿಗೂ ಕಾರಣವಿಲ್ಲದೆ ಜಗಳಕ್ಕಿಳಿಯುತ್ತಾರೆ. ಅವರು ಸುತ್ತಮುತ್ತಲಿನವರ ಗಮನ ಸೆಳೆಯಲು ತುಂಬಾ ವಿಚಿತ್ರ ಮತ್ತು ಮನೋವಿಕಾರಿಗಳಂತೆ ವರ್ತಿಸುತ್ತಾರೆ. ಕೆಲವೊಂದು ಸಲ ಗಮನ ಸೆಳೆಯುವ ಸಲುವಾಗಿ ದಂಪತಿ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ಪ್ರೀತಿ ತೋರಿಸುತ್ತಾರೆ. ಜನರ ಗಮನ ಸೆಳೆಯುವ ಸಲುವಾಗಿ ಅವರು ಅಪ್ಪಿಕೊಂಡು ಮುತ್ತಿಕ್ಕುತ್ತಾರೆ. ತಮ್ಮ ಜತೆಗಾರರು ಸಮಾಜದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರೆ ಆಗ ಸಾರ್ವಜನಿಕವಾಗಿ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ ಎನ್ನುವುದು ಅಧ್ಯಯನಗಳು ಹೇಳಿವೆ. ಒಬ್ಬರ ಗಮನಸೆಳೆಯಲು ಕೆಲವೊಂದು ವ್ಯಕ್ತಿಗಳು ವಿಚಿತ್ರ ಮತ್ತು ವಿಲಕ್ಷಣವಾಗಿ ವರ್ತಿಸಿ ಯಾವುದೇ ಮಟ್ಟಕ್ಕೂ ಇಳಿಯಬಹುದು.

ನಗ್ನತೆ
ಗಮನಸೆಳೆಯಲು ಮಾಡುವಂತಹ ಅತ್ಯಂತ ವಿಲಕ್ಷಣ ಮತ್ತು ಹುಚ್ಚಿನ ಕೆಲಸವೆಂದರೆ ಅದು ಚರ್ಮ ಪ್ರದರ್ಶನ. ಸಿನೆಮಾ ರಂಗದಲ್ಲಿ ಹೆಣಗಾಡುವ ಹೆಚ್ಚಿನ ನಟ, ನಟಿಯರು ಫೋಟೋಶೂಟ್, ಜಾಗೃತಿ ಅಭಿಯಾನ ಮತ್ತು ಇತರ ಕೆಲವೊಂದು ಕಡೆ ನಗ್ನವಾಗಿ ಭಂಗಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಇದನ್ನು ಅನುಸರಿಸುತ್ತಾರೆ. ಕೆಲವೊಂದು ಸಲ ಹುಡುಗಿಯರು ಅತಿಯಾದ ದೇಹಪ್ರದರ್ಶಿಸಿ ಗಮನಸೆಳೆಯುತ್ತಾರೆ.

English summary

Things People Do To Be An Attention Seeker

There are three types of people in this world, one who do not need attention, second who need attention and manage to get it all with no extra efforts and third who need attention but are never given enough. Though there might be many crazy things people do to grab attention, I would like to mention just a few of them.
Story first published: Monday, July 28, 2014, 12:35 [IST]
X
Desktop Bottom Promotion