For Quick Alerts
ALLOW NOTIFICATIONS  
For Daily Alerts

ಭ್ರಷ್ಟ ಪೊಲೀಸ್ ಪಡೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

By Super
|

ಜನಸಾಮಾನ್ಯನ ನೆಮ್ಮದಿಯ ನಿದ್ದೆಗೆ ಆ ದೇಶದ ರಕ್ಷಣಾ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ರಕ್ಷಣಾ ಪಡೆಗಳ ಕಾವಲಿನಲ್ಲಿ ಯಾರೂ ತನ್ನ ಮೇಲೆ ಆಕ್ರಮಣ ಮಾಡಲಾರರು ಎಂಬ ನಂಬಿಕೆ ಜನತೆಯಲ್ಲಿ ಸುರಕ್ಷತಾ ಭಾವನೆಯನ್ನು ಹುಟ್ಟಿಸುತ್ತದೆ. ಆದರೆ ಎಲ್ಲೆಡೆ ಹರಡಿರುವ ಭ್ರಷ್ಟಾಚಾರ ನಮ್ಮ ರಕ್ಷಣಾ ವ್ಯವಸ್ಥೆಯನ್ನೂ ಬಿಟ್ಟಿಲ್ಲ. ಬೇಲಿಯೇ ಎದ್ದು ಹೊಲ ಮೇದಂತೆ ರಕ್ಷಣಾ ಪಡೆಗಳಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳಿಂದ ಇಡಿಯ ಇಲಾಖೆಗೇ ಕೆಟ್ಟ ಹೆಸರು ಬರುತ್ತದೆ.

ಕೇವಲ ಒಂದು ಪೊಲೀಸ್ ಇಲಾಖೆ ಭ್ರಷ್ಟರಾಗಲು ಮೇಲಿನವರ ಕೃಪೆಯಿಲ್ಲದೇ ಸಾಧ್ಯವಿಲ್ಲ. ಇದಕ್ಕೆ ಆಯಾ ರಾಷ್ಟ್ರದ ಆಡಳಿತ ಪಕ್ಷಗಳ ಭ್ರಷ್ಟತೆಯೂ ಕುಮ್ಮಕ್ಕು ನೀಡುತ್ತದೆ. ಆಯಾ ರಾಷ್ಟ್ರದ ಭ್ರಷ್ಟ ರಕ್ಷಣಾ ವ್ಯವಸ್ಥೆಗೆ ಆಡಳಿತ ವ್ಯವಸ್ಥೆಯೇ ನೇರವಾಗಿ ಕಾರಣವಾಗುತ್ತದೆ.

ಒಂದು ವೇಳೆ ಇಲಾಖೆಯೇ ಸರಿಪಡಿಸಲಾರದಷ್ಟು ಭ್ರಷ್ಟತೆಯಿಂದ ಕೂಡಿದ್ದರೆ? ಆ ದೇಶ ಅಭಿವೃದ್ಧಿಯಿಂದ ವಂಚಿತವಾಗುತ್ತದೆ, ಜನತೆಯ ನೆಮ್ಮದಿ ಹಾರಿಹೋಗುತ್ತದೆ. ಅತಿಥಿಗಳು ದೂರಾಗುತ್ತಾರೆ. ಅಂತಹ ಭ್ರಷ್ಟ ಪೊಲೀಸ್ ಪಡೆಗಳಿರುವ ವಿಶ್ವದ ವಿವಿಧ ಎಂಟು ದೇಶಗಳನ್ನು ಕೆಳಗೆ ವಿವರಿಸಲಾಗಿದೆ.

ಬೀದಿ ಬದಿಯ ತಿಂಡಿಗಳ ಸ್ವರ್ಗ, ನಮ್ಮ ಭಾರತ!

ಮೆಕ್ಸಿಕೋ

ಮೆಕ್ಸಿಕೋ

ಅಮೇರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಮೆಕ್ಸಿಕೋ ದೇಶದ ಪೊಲೀಸರು ತಮ್ಮ ಕರ್ತವ್ಯಭ್ರಷ್ಟತೆಗಾಗಿ ಹೆಸರುವಾಸಿಯಾಗಿದ್ದಾರೆ. ಯುವಜನಾಂಗವನ್ನು ಹಿಂಡಿ ಹಿಪ್ಪೆ ಮಾಡುವ ಮಾದಕ ಪದಾರ್ಥಗಳ ಕಳ್ಳಸಾಗಣೆದಾರರನ್ನು ಹಿಡಿದು ಜೈಲಿಗೆ ಕಳುಹಿಸುವ ಬದಲು ಅವರಿಂದಲೇ ಲಂಚ ಪಡೆದು ಸ್ವತಃ ಪೊಲೀಸರೇ ಮಾದಕಪದಾರ್ಥಗಳನ್ನು ಗಡಿದಾಟಿಸಿ ಕೊಡುವುದು ಈ ಭ್ರಷ್ಟತೆಯ ಪರಮಾವಧಿಯಾಗಿದೆ.

ಭಾರತ

ಭಾರತ

ರಾಜಕೀಯ ಶಕ್ತಿಗಳ ಅಡಿಯಲ್ಲಿ ಅಸಹಾಯಕರಾಗಿ ಬಿಡುವ ಭಾರತೀಯ ಪೊಲೀಸ್ ಇಲಾಖೆ ಪರೋಕ್ಷವಾಗಿ ಭ್ರಷ್ಟತೆಗೆ ಕುಮ್ಮಕ್ಕು ನೀಡುತ್ತಾರೆ. ಪೊಲೀಸರಿಗೆ ಇರಬೇಕಾದ ಸೂಕ್ಷ್ಮ ಸಂವೇದನೆ, ನಾಗರಿಕ ಸುರಕ್ಷಾ ಆಸಕ್ತಿ, ಸಮಾಜದ ಸುಧಾರಣೆಗೆ ಪ್ರೇರಣೆ, ಸ್ಪರ್ಧಾತ್ಮಕತೆ ಮೊದಲಾದವು ರಾಜಕೀಯ ಶಕ್ತಿಗಳ ಕೈ ಅಡಿಯಲ್ಲಿ ಸಮಾಧಿಯಾಗಿಬಿಡುತ್ತಿವೆ. ಅದಕ್ಕೆ ತಕ್ಕನಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ತೀರಾ ನಿಧಾನವಾಗಿ ತೀರ್ಪು ನೀಡುವ ಪ್ರವೃತ್ತಿ. ಯಥಾರಾಜ ತಥಾ ಪ್ರಜಾ ಎಂಬಂತೆ ಪೊಲೀಸರೂ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಲು ಅತಿ ಹೆಚ್ಚಿನ ಉದಾಸೀನತೆ ತೋರುತ್ತಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನೇ ತಪ್ಪಿತಸ್ಥರನ್ನಾಗಿಸುವ ಭಾರತೀಯ ಪೊಲೀಸರು ಜಗತ್ತಿನ ದೃಷ್ಟಿಯಲ್ಲಿ ಹಿಂದುಳಿದಿದ್ದಾರೆ.

ಸೂಡಾನ್

ಸೂಡಾನ್

ಇತ್ತೀಚೆಗೆ ದಕ್ಷಿಣ ಸೂಡಾನ್ ಸ್ವತಂತ್ರವಾಗಿ ವಿಶ್ವಸಂಸ್ಥೆಯ ಮಾನ್ಯತೆ ಪಡೆಯುವವವರೆಗೂ ಅಂತರ್ಯುದ್ಧದಲ್ಲಿ ನಲುಗಿದ ಸೂಡಾನ್‌ನ ಪೊಲೀಸ್ ಇಲಾಖೆಯೂ ಅತಿ ಭ್ರಷ್ಟ ಇಲಾಖೆಯಾಗಿದೆ. ಬಡವ ಬಲ್ಲಿದ ಎಂಬ ಬೇಧಭಾವವಿಲ್ಲದೇ ಲಂಚಕ್ಕಾಗಿ ಏನೂ ಮಾಡಲು ಹೇಸದ ಪೊಲೀಸರಿಗೆ ಹೆದರಿ ಅಪರಾಧಕ್ಕೊಳಗಾದ ಜನತೆ ಪೊಲೀಸರಲ್ಲಿ ದೂರು ನೀಡಲು ಹೋಗುವುದೇ ಇಲ್ಲ.

ಸೋಮಾಲಿಯಾ

ಸೋಮಾಲಿಯಾ

ಸೋಮಾಲಿಯಾದ ಸರ್ಕಾರದ ಬಳಿ ಇರುವ ಹಣಕ್ಕಿಂತ ಅಲ್ಲಿನ ಮಾದಕ ದ್ರವ್ಯ ವಾಪಾರಿಗಳ ಬಳಿ ಹೆಚ್ಚು ಹಣ ಇದೆ. ಕಡಲಿನಲ್ಲಿ ಚಲಿಸುವ ಹಡಗುಗಳನ್ನೇ ಬಂಧಿಸಿ ವಿಮೋಚನೆಗಾಗಿ ದೊಡ್ಡ ಮೊತ್ತದ ಹಣವನ್ನು ಬೇಡುವ ಕಡಲುಗಳ್ಳರಲ್ಲಿ ಹೆಚ್ಚಿನವರು ಪೊಲೀಸರೇ ಆಗಿರುತ್ತಾರೆ.

ಕೀನ್ಯಾ

ಕೀನ್ಯಾ

ಲಂಚ ಪಡೆಯುವಲ್ಲಿ ಕೀನ್ಯಾ ಪೊಲೀಸರು ಎಷ್ಟು ಕೀಳು ಮಟ್ಟಕ್ಕಿಳಿಯುತ್ತಾರೆಂದರೆ ಎಂತಹ ಅಪರಾಧ ಎಸಗಿದವರೂ ಸುಲಭವಾಗಿ ಪಾರಾಗಬಹುದು. ಶೇಖಡಾ ತೊಂಭತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳು ಪೊಲೀಸರಿಗೆ ಲಂಚಕೊಟ್ಟು ಪಾರಾಗುತ್ತಾರೆ. ಇದು ಇನ್ನಷ್ಟು ಅಪರಾಧಗಳಿಗೆ ಕುಮ್ಮಕ್ಕು ನೀಡುತ್ತಾ ಜೀವನವನ್ನೇ ಬರ್ಬರವಾಗಿಸಿದೆ.

ಪಾಕಿಸ್ತಾನ

ಪಾಕಿಸ್ತಾನ

ಅತ್ಯಂತ ಜಡತ್ವ ತೋರಿಸುವ ಇಲಾಖೆ ಎಂದರೆ ಪಾಕಿಸ್ತಾನದ ಪೊಲೀಸ್ ಇಲಾಖೆ. ಲಂಚ ಪಡೆದೂ ಕೆಲಸ ಮಾಡದ ಇಲಾಖೆ ಇನ್ನೊಂದಿರಲಾರದು. ಜನತೆಗೆ ರಕ್ಷಣೆ ನೀಡುವ ಪರಿಯಲ್ಲಿ ಅತಿ ಕಡಿಮೆ ಕಾರ್ಯಕ್ಷಮತೆ, ಅಸಮರ್ಥತೆ ಮತ್ತು ಪರಿಣಾಮ ಬೀರುವಲ್ಲಿ ತೀರಾ ಕೊರತೆಯನ್ನು ಇಲಾಖೆ ಪ್ರಸ್ತುತಪಡಿಸಿದೆ.

ಇರಾಕ್

ಇರಾಕ್

ಇತ್ತೀಚಿನ ಅಂತರ್ಯುದ್ಧದ ಬಳಿಕ ಜನಜೀವನ ಇನ್ನಷ್ಟು ಬಿಗಡಾಯಿಸಿದೆ. ಇರಾಕಿನಲ್ಲಿ ನ್ಯಾಯವನ್ನು ಅಪೇಕ್ಷಿಸುವುದೇ ಒಂದು ಹಾಸ್ಯಾಸ್ಪದ ವಿಷಯವಾಗಿದೆ. ವಾಸ್ತವವಾಗಿ ಇರಾಖಿನ ದೊಡ್ಡ ದೊಡ್ಡ ಖೇಡಿಗಳೇ ಪೊಲೀಸರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿರಿಯಾ

ಸಿರಿಯಾ

ಸಿರಿಯಾದ ಸಾವಿರಾರು ಜನತೆಯ ಮಾರಣಹೋಮದಲ್ಲಿ ಸಿರಿಯಾದ ಸೈನ್ಯದೊಂದಿಗೆ ಸಿರಿಯಾದ ಪೊಲೀಸ್ ಇಲಾಖೆಯೂ ಕೈಜೋಡಿಸಿದೆ. ಮಹಿಳೆಯರ ವಿರುದ್ಧ ನಡೆಸುವ ಅತ್ಯಾಚಾರದಲ್ಲಿ ಪೊಲೀಸರೇ ಮೊದಲಿಗರಾಗಿರುತ್ತಾರೆ. ನಾಗರಿಕ ಸುರಕ್ಷತೆ, ರಕ್ಷಣೆ ಮೊದಲಾದ ಪದಗಳು ಸಿರಿಯಾದ ಪೊಲೀಸರ ಪಾಲಿಗೆ ಅಪರಿಚಿತ ಪದಗಳಾಗಿವೆ.

English summary

The Most Corrupt Police Forces In The World

It is quite a well known fact that a country can only be recognized as peaceful if its police force is effective. Unfortunately,in many countries across the world, police forces are incompetent, understaffed, under-trained, demotivated and most importantly, corrupt.
X
Desktop Bottom Promotion