For Quick Alerts
ALLOW NOTIFICATIONS  
For Daily Alerts

ವಿಶ್ವದ ಅತ್ಯಂತ ಅಪಾಯಕಾರಿಯಾದ ಉಗ್ರಗಾಮಿ ಸಂಘಟನೆಗಳು

By Super
|

ಉಗ್ರವಾದವು ತನ್ನದೇ ಆದ ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಇದು ತನ್ನದೇ ಆದ ನೀತಿ ನಿಯಮಗಳನ್ನು ಹೊಂದಿರುವುದರ ಜೊತೆಗೆ ವಿಶ್ವದಾದ್ಯಂತ ಹಲವಾರು ದೇಶಗಳ ರಾಜಕೀಯ ಚಿತ್ರಣವನ್ನು ಬದಲಾಯಿಸಿದ ಖ್ಯಾತಿಗಿಂತ, ಕುಖ್ಯಾತಿಯನ್ನು ಹೆಚ್ಚಾಗಿ ಸಂಪಾದಿಸಿದೆ. ಉಗ್ರವಾದ ಎಂಬ ಪದಕ್ಕೆ ಸಂವಾದಿಯಾದ ಟೆರರಿಸ್ಟ್ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಎಡ್ಮಂಡ್ ಬರ್ಕ್ ಅವರು ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬಳಸಿದರು.

ಭೀಭತ್ಸಕರವಾದ ಈ ಪರಿಕಲ್ಪನೆಯು ಈಗ ಇಡೀ ವಿಶ್ವದಲ್ಲಿ ಹಲವಾರು ದುರಂತಗಳಿಗೆ ಮತ್ತು ಹತಾಶೆಗಳಿಗೆ ಕಾರಣವಾಗಿ ನಿಂತಿದೆ. ಈ ಲೇಖನದಲ್ಲಿ ನಾವು ವಿಶ್ವದ ಅತ್ಯಂತ ಅಪಾಯಕಾರಿಯಾದ ಉಗ್ರಗಾಮಿ ಸಂಘಟನೆಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಇಲ್ಲಿ ಚರ್ಚಿಸಲಾಗಿರುವ ಎಲ್ಲಾ ಉಗ್ರಗಾಮಿ ಸಂಘಟನೆಗಳು ಇಂದು ಅಸ್ತಿತ್ವದಲ್ಲಿರುವುದಷ್ಟೇ ಅಲ್ಲ, ತಮ್ಮ ಪ್ರಭಾವ, ಶಕ್ತಿ ಮತ್ತು ಹಾನಿಗಳಿಂದ ಹೆಸರುವಾಸಿಯಾಗಿವೆ.

ಇವರುಗಳ ರಕ್ತದಾಹಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಶತ್ರು ಸೈನಿಕರ ಶಿರಚ್ಛೇಧ ಮಾಡುವುದರಿಂದ ಹಿಡಿದು, ಲೈಂಗಿಕ ಗುಲಾಮಗಿರಿಯವರೆಗೆ ಮತ್ತು ಎಳೆಯ ಮಕ್ಕಳನ್ನು ಸೈನಿಕರಾಗಿ ಪರಿವರ್ತಿಸುವವರೆಗೆ ಇವರ ಆಟಾಟೋಪ ಬಿಡುವಿಲ್ಲದಂತೆ ವಿಸ್ತರಿಸಿದೆ. ಬನ್ನಿ ಹಾಗಾದರೆ ಆ ಭಯಾನಕ ಉಗ್ರಗಾಮಿ ಸಂಘಟನೆಗಳ ಕುರಿತು ತಿಳಿದುಕೊಳ್ಳೋಣ. ಮುಂದೆ ಓದಿ.... ವಿಶ್ವದ ಅಗ್ರ 10 ಅತ್ಯಂತ ಶಕ್ತಿಶಾಲಿ ಸೇನಾಪಡೆಗಳು

The Deadliest Terrorist Groups In The World

ಹಮಾಸ್
ಹಮಾಸ್ ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಇಸ್ರೇಲಿನಲ್ಲಿ ಗುರುತಿಸಲ್ಪಡುವ ಅತ್ಯಂತ ದೊಡ್ಡ ಉಗ್ರಗಾಮಿ ಸಂಘಟನೆಯಾಗಿದೆ. ಇದೊಂದು ಪ್ಯಾಲೇಸ್ಟೇನಿಯಾದ ಸಂಘಟನೆಯಗಿದ್ದು, ಸ್ವತಂತ್ರ ಪ್ಯಾಲೇಸ್ಟೇನಿಗಾಗಿ ಹೋರಾಟ ನಡೆಸುತ್ತಿದೆ. ಹಮಾಸ್ ತನ್ನಲ್ಲಿರುವ ಆತ್ಮಹತ್ಯಾ ಬಾಂಬರ್‌ಗಳಿಗಾಗಿ ಕುಖ್ಯಾತಿ ಪಡೆದಿದೆ. 1987ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಯು ಇಸ್ರೇಲ್ ವಿರುದ್ಧ ನಿರಂತರವಾಗಿ ಯುದ್ಧ ಸಾರಿದೆ. ಇದರ ಉದ್ದೇಶ ಇಸ್ರೇಲ್‍ನ ಆಕ್ರಮಣದಿಂದ ಪ್ಯಾಲೇಸ್ಟೇನಿಯನ್ನರನ್ನು ಕಾಪಾಡುವುದು. ಇದಕ್ಕಾಗಿ ಇದು ಇಸ್ರೇಲ್ ವಿರುದ್ಧ ಉಗ್ರ ಹೋರಾಟಕ್ಕೆ ಇಳಿದಿದೆ.

ಹಿಝ್ಬುಲ್ಲಾ
ಹಿಝ್ಬುಲ್ಲಾ ಎಂಬುದು ಪಾಶ್ಚಿಮಾತ್ಯರ ಮತ್ತು ಇಸ್ರೇಲಿಗಳ ವಿರುದ್ಧ ಸಮರ ಸಾರಿರುವ ಒಂದು ರಾಜಕೀಯ ಬಣ. ಇದು ಮಧ್ಯ ಪ್ರಾಚ್ಯದಲ್ಲಿ ಅತ್ಯಂತ ಭೀತಿಯನ್ನು ಹುಟ್ಟು ಹಾಕಿರುವ ಸಂಘಟನೆಯಾಗಿದೆ. ಸಿರಿಯಾ, ಲೆಬನಾನ್ ಮತ್ತು ಇರಾನ್ ದೇಶಗಳಿಂದ ಆರ್ಥಿಕ ಸಹಾಯವನ್ನು ಪಡೆಯುವ ಈ ಉಗ್ರಗಾಮಿ ಸಂಘಟನೆಯು ಮಧ್ಯ ಪ್ರಾಚ್ಯದ ಹಲವಾರು ದೇಶಗಳ ಗಡಿಗಳಲ್ಲಿ ಆಯುಧಗಳ ಮಾರಾಟವನ್ನು ಮಾಡುತ್ತದೆ.

ತಾಲಿಬಾನ್
ತಾಲಿಬಾನ್ ಕೇವಲ ಪಾಶ್ಚಿಮಾತ್ಯ ದೇಶಗಳಿಂದ ಮಾತ್ರವಲ್ಲದೆ, ವಿಶ್ವ ಸಂಸ್ಥೆಯಿಂದಲೂ ಸಹ ಉಗ್ರಗಾಮಿ ಸಂಘಟನೆ ಎಂಬ ಹಣೆಪಟ್ಟಿಯನ್ನು ಹೊತ್ತ ಸಂಘಟನೆಯಾಗಿದೆ. ಅಪ್ಘಾನಿಸ್ತಾನದಲ್ಲಿ ಅಮೆರಿಕಾ ದೇಶವು ತಾಲಿಬಾನ್ ವಿರುದ್ಧ ಎಂದೆಂದಿಗು ಮುಗಿಯದ ಯುದ್ಧವನ್ನು ಸಾರಿದೆ. ತಾಲಿಬಾನಿಗಳ ಉದ್ದೇಶವು ಅಪ್ಘಾನಿಸ್ತಾನದಲ್ಲಿ ಹಿಂಸೆ ಮತ್ತು ಭೀತಿಯನ್ನು ಹರಡುವುದಾಗಿದೆ. ತಾಲಿಬಾನಿಗಳ ಮುಖ್ಯಸ್ಥ ಮುಲ್ಲಾ ಓಮರ್, ಈತನು ಹಲವಾರು ದೇಶಗಳಿಗೆ ಬೇಕಾದ ಅತ್ಯಂತ ಕುಖ್ಯಾತ ಭಯೋತ್ಪಾದಕನಾಗಿದ್ದಾನೆ. ನೀವು ತಿಳಿದಿರದ ಫೇಸ್‌ಬುಕ್‌ನ 10 ಆಶ್ಚರ್ಯಕರ ಸಂಗತಿಗಳಿವು

ಅಲ್-ಖೈದಾ
ಅಲ್-ಖೈದಾವು ವಿಶ್ವದ ಅತ್ಯಂತ ದೊಡ್ಡ ಉಗ್ರಗಾಮಿ ಸಂಘಟನೆಯಾಗಿದೆ. ಇದರ ಮುಂದಾಳತ್ವವನ್ನು ವಹಿಸಿರುವವನು ಈಜಿಪ್ಟಿನ ಐಮನ್ ಅಲ್-ಜವಾಹಿರಿ. ಈ ಸಂಘಟನೆಯ ಶಾಖೆಗಳು ವಿಶ್ವದ ಬಹುತೇಕ ಭಾಗದಲ್ಲಿ ಸಕ್ರಿಯಗೊಂಡಿವೆ. ಮುಖ್ಯವಾಗಿ ಮಧ್ಯ ಪ್ರಾಚ್ಯದಲ್ಲಿ ಇವು ಹೆಚ್ಚಾಗಿ ಸಕ್ರಿಯಗೊಂಡಿವೆ. ಅಲ್-ಖೈದಾವು ಸ್ವತಂತ್ರ ಸಂಘಟನೆಯಾಗಿದ್ದರು, ಇದು ಆಫ್ರಿಕಾದ ಹಲವಾರು ಉಗ್ರಗಾಮಿ ಸಂಘಟನೆಗಳಿಗೆ ಧನ ಸಹಾಯವನ್ನು ಸಹ ಮಾಡುತ್ತದೆ. ಇದರ ಮುಖ್ಯಸ್ಥನಾಗಿದ್ದ ಒಸಮಾ ಬಿನ್ ಲಾಡೆನ್‍ ಅನ್ನು 2011ರಲ್ಲಿ ಕೊಲ್ಲಲಾಯಿತಾದರು, ಅಲ್-ಖೈದಾವನ್ನು ತಡೆಯುವವರು ಯಾರೂ ಇಲ್ಲದಂತಾಗಿದೆ.

English summary

The Deadliest Terrorist Groups In The World

Terrorism has a long history and has influenced policy in several vulnerable countries across the globe. The word was used for the first time by Edmund Burke during the French Revolution. In this article, we look at the deadliest terror groups in the world.
X
Desktop Bottom Promotion