For Quick Alerts
ALLOW NOTIFICATIONS  
For Daily Alerts

2014ನೇ ಸಾಲಿನ ಜಗತ್ತಿನ ಅತ್ಯಂತ 10 ಪ್ರಭಾವಶಾಲಿ ವ್ಯಕ್ತಿಗಳು

|

ಒಬ್ಬ ನಿಜವಾದ ನಾಯಕನಾಗಲು ಹಿರಿಮೆ, ಜವಾಬ್ದಾರಿ, ನಡವಳಿಕೆ, ನಾಯಕತ್ವದ ನಿದರ್ಶನ ಮತ್ತು ಪ್ರಭಾವ ಮುಂತಾದ ಗುಣಗಳು ಪರಿಗಣಿಸಲ್ಪಡುತ್ತವೆ. ವಿಶ್ವದಲ್ಲಿ ಹಲವಾರು ಜನ ನಾಯಕರು ಬಂದಿದ್ದಾರೆ, ಇದ್ದಾರೆ ಮತ್ತು ಹೋಗಿದ್ದಾರೆ. ಇವರು ಜನರನ್ನು ತಮ್ಮ ಸುತ್ತಲಿನ ಜನರನ್ನಷ್ಟೇ ಅಲ್ಲದೆ, ಕುಟುಂಬ, ಸ್ನೇಹಿತರು, ಕೆಲವೊಂದು ಸಂದರ್ಭದಲ್ಲಿ ಇಡೀ ದೇಶವನ್ನೆ ಮುನ್ನಡೆಸಿದ್ದಾರೆ. ಈ ಅಂಕಣದಲ್ಲಿ ನಾವು ಅಂತಹ ಪ್ರಭಾವಶಾಲಿ ಪುರುಷ ಮತ್ತು ಮಹಿಳೆಯರ ಬಗೆಗೆ ತಿಳಿದುಕೊಳ್ಳೋಣ.

ಇದರಲ್ಲಿ ರಾಜಕೀಯ, ಬ್ಯಾಂಕಿಂಗ್ ಮತ್ತು ಕೈಗಾರಿಕಾ ರಂಗದಲ್ಲಿ ತಮ್ಮ ಪ್ರಭಾವ ಮತ್ತು ಅಪರಿಮಿತ ಸಾಮರ್ಥ್ಯಗಳನ್ನು ಹೊಂದಿರುವ ಜನರ ಬಗೆಗೆ ತಿಳಿದುಕೊಳ್ಳೋಣ. ಇವರು ತಮ್ಮ ಸಿದ್ದಾಂತಗಳ ಹಾದಿಯಲ್ಲಿ ಸಾಗುವ ಮೂಲಕ ಹೇಗೆ ವಿಶ್ವದ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ಗಮನಿಸೋಣ.

ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ತ್ರೀ ಮತ್ತು ಪುರುಷರಿಬ್ಬರು ಇದ್ದಾರೆ. ಆರ್ಥಿಕತೆಯನ್ನು, ಸೈನ್ಯವನ್ನು ಮತ್ತು ಪ್ರಮುಖ ಉದ್ಯಮಗಳನ್ನು ಪ್ರಗತಿಯ ದಾರಿಯಲ್ಲಿ ತರುವ ನಿಟ್ಟಿನಲ್ಲಿ ಅತ್ಯಂತ ಪ್ರಭಾವ ಬೀರುವ ನಾಯಕರ ಜೊತೆಯಲ್ಲಿ ನಾರಿಮಣಿಗಳು ಸಹ ಹಿಂದೆ ಬಿದ್ದಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಅವರು ಸಹ ಸಮೂಹದ ಮುಂಚೂಣಿ ನಾಯಕತ್ವವನ್ನು ವಹಿಸುವ ಛಲವನ್ನು ಮತ್ತು ಸಾಮರ್ಥ್ಯವನ್ನು ಪ್ರದರ್ಶನ ಮಾಡಿದ್ದಾರೆ.

ಬೀದಿ ಬದಿಯ ತಿಂಡಿಗಳ ಸ್ವರ್ಗ, ನಮ್ಮ ಭಾರತ!

ಈ ಪಟ್ಟಿಯು ಸದ್ಯ ವಿಶ್ವದಲ್ಲಿ ಅತ್ಯಂತ ಪ್ರಭಾವವನ್ನು ಬೀರುವ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳ ಕುರಿತು ಕಿರು ವಿವರಣೆಯನ್ನು ನೀಡುತ್ತದೆ. ಅದರಲ್ಲೂ 2014ರ ಸಾಲಿನಲ್ಲಿ ಪ್ರಭಾವಶಾಲಿ ವ್ಯಕ್ತಿಗಳನ್ನು ನಾವು ಇಲ್ಲಿ ನಿಮ್ಮ ಮುಂದೆ ವಿವರಿಸುತ್ತಿದ್ದೇವೆ. ಬನ್ನಿ ಈ ಪಟ್ಟಿಯಲ್ಲಿ ಏರಿಕೆಯ ಕ್ರಮದಲ್ಲಿ ವ್ಯಕ್ತಿಗಳ ರ‍್ಯಾಂಕ್‍ಗಳನ್ನು ನೀಡಿದ್ದೇವೆ. ಮುಂದೆ ಓದಿ....

ವ್ಲಾಡಿಮಿರ್ ಪುಟಿನ್

ವ್ಲಾಡಿಮಿರ್ ಪುಟಿನ್

ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಮೊದಲನೆಯ ಸ್ಥಾನದಲ್ಲಿರುವವರು ವ್ಲಾಡಿಮಿರ್ ಪುಟಿನ್. ಇವರು ರಷ್ಯಾ ದೇಶದ ಅಧ್ಯಕ್ಷರಾಗಿ 15 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಧ್ಯಕ್ಷತೆಯ ಮೇಲೆ ಇವರ ಹಿಡಿತವು ವರ್ಷದಿಂದ ವರ್ಷಕ್ಕೆ ಮತ್ತಷ್ತು ಹೆಚ್ಚಾಗುತ್ತಿದೆ. ಫೋರ್ಬ್ಸ್ ವ್ಲಾಡಿಮಿರ್ ಪುಟಿನ್‍ರವರನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯನ್ನಾಗಿ ಗುರುತಿಸಿ ಮೊದಲನೆಯ ಸ್ಥಾನವನ್ನು ನೀಡಿದೆ. ಇವರು ಅಮೇರಿಕದ ಬರಾಕ್ ಒಬಾಮರನ್ನು ಹಿಂದಿಕ್ಕಿದ್ದಾರೆ. ರಷ್ಯಾ ದೇಶವು ನಿಸ್ಸಂಶಯವಾಗಿ ವಿಶ್ವದಲ್ಲಿಯೇ ಅತ್ಯಂತ ಸಮರ್ಥ ಮತ್ತು ಶಕ್ತಿಶಾಲಿ ಮಿಲಿಟರಿಯನ್ನು ಹೊಂದಿದೆ. ಜೊತೆಗೆ ಪುಟಿನ್‍ರವರ ಆಡಳಿತಾವಧಿಯಲ್ಲಿ ರಷ್ಯಾವು ಮಿಲಿಟರಿ ಮತ್ತು ಆರ್ಥಿಕತೆಯ ರಂಗದಲ್ಲಿ ಗಣನೀಯವಾಗಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ.

ಬರಾಕ್ ಒಬಾಮ

ಬರಾಕ್ ಒಬಾಮ

ವಿಶ್ವದ ಅತ್ಯಂತ ಪ್ರಭಾವಶಾಲಿ ರಾಷ್ಟ್ರವೆಂಬ ಕೀರ್ತಿಗೆ ಪಾತ್ರರಾಗಿರುವ, ಬಲಿಷ್ಠ ಮಿಲಿಟರಿ ಮತ್ತು ಸದೃಢವಾದ ಆರ್ಥಿಕತೆಯನ್ನು ಹೊಂದಿರುವ ಅಮೇರಿಕ ದೇಶದ ಅಧ್ಯಕರಾಗಿರುವ ಬರಾಕ್ ಒಬಾಮ ಈ ಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಒಬಾಮರ ಹೆಲ್ತ್ ಕೇರ್ ಕಾರ್ಯಕ್ರಮವು ಸೆನೆಟರ್‌ಗಳಿಂದ ವ್ಯಾಪಕ ವಿರೋಧಕ್ಕೆ ಗುರಿಯಾಗಿದೆ. ಇದರಿಂದಾಗಿ ಅವರು ಈ ಪಟ್ಟಿಯಲ್ಲಿ ಸ್ವಲ್ಪ ಕೆಳಗೆ ಜಾರಿದ್ದಾರೆ. ಆದರೆ ಇದರಿಂದ ಅವರ ಅಧಿಕಾರ ಮಾತ್ರ ಯಾವುದೇ ತೆರನಾಗಿ ಭಾದಿತವಾಗಿಲ್ಲ. ಇದಕ್ಕೂ ಮೇಲಾಗಿ ಅವರು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕುಳಿತಿದ್ದಾರೆ. ಮೊದಲ ಮತ್ತು ಎರಡನೆಯ ಸ್ಥಾನದ ನಡುವೆ ಕೇವಲ ಒಂದು ಸಣ್ಣ ವ್ಯತ್ಯಾಸ ಮಾತ್ರವಿರುತ್ತದೆ.

ಕ್ಸಿ ಜಿನ್‍ಪಿಂಗ್

ಕ್ಸಿ ಜಿನ್‍ಪಿಂಗ್

ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿರುವವರು ಕ್ಸಿ ಜಿನ್‍ಪಿಂಗ್. ಪ್ರಸ್ತುತ ವಿಶ್ವದ ಮೂರನೆ ಅತ್ಯಂತ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಚೀನಾ ದೇಶವು 2022ಕ್ಕೆ ಒಂದನೆ ಸ್ಥಾನಕ್ಕೆ ಬರುವ ಗುರಿಯನ್ನು ಹೊಂದಿದೆ. ಕ್ಸಿಯವರು ಪ್ರಸ್ತುತ ಚೀನಾ ಗಣರಾಜ್ಯದ ಅಧ್ಯಕ್ಷನಾಗಿ ಮೊದಲ ಬಾರಿ ಅಧಿಕಾರವನ್ನು ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ಸಿಯವರು ಕಮ್ಯೂನಿಸ್ಟ್ ಪಕ್ಷದ ಜೆನೆರಲ್ ಸೆಕ್ರೆಟರಿ ಸಹ ಆಗಿದ್ದಾರೆ.

ಎಂಜೆಲ ಮೆರ್ಕೆಲ್

ಎಂಜೆಲ ಮೆರ್ಕೆಲ್

ಜರ್ಮನ್ ಚಾನ್ಸೆಲರ್ ಆದ ಎಂಜೆಲ ಮೆರ್ಕೆಲ್‍ರವರು ಇತ್ತೀಚೆಗಷ್ಟೆ ಮೂರನೆ ಬಾರಿಗೆ ಆಯ್ಕೆಯಾಗಿದ್ದಾರೆ. ಈಕೆಯು ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಭಾವಶಾಲಿ ಮಹಿಳೆಯಾಗಿದ್ದಾಳೆ. 27 ಸದಸ್ಯರಿರುವ ಯೂರೋಪಿಯನ್ ಯೂನಿಯನ್‍ನಲ್ಲಿ ಜರ್ಮನಿಯು ಅತ್ಯಂತ ಸದೃಢ ಆರ್ಥಿಕತೆಯನ್ನು ಹೊಂದಿದೆ.

ಡೇವಿಡ್ ಕ್ಯಾಮೆರನ್

ಡೇವಿಡ್ ಕ್ಯಾಮೆರನ್

ಬ್ರಿಟನ್‍ನ ಪ್ರಧಾನಿ ಡೇವಿಡ್ ಕ್ಯಾಮೆರನ್ ವಿಶ್ವದ ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಯುಕೆಯು ಸಂಯುಕ್ತ ಸಂಸ್ಥಾನದ ಅತ್ಯಂತ ನಿಕಟ ಮಿತ್ರದೇಶವಾಗಿ ಗುರುತಿಸಲ್ಪಟ್ಟಿದೆ. ಇದು ತನ್ನಲ್ಲಿರುವ ಅತ್ಯಂತ ಸುಸುಜ್ಜಿತ ಮತ್ತು ಶಕ್ತಿಶಾಲಿ ನೌಕಾದಳಕ್ಕೆ ವಿಶ್ವದಲ್ಲಿಯೇ ಹೆಸರಾಗಿದೆ.

ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್

ವ್ಯಾಟಿಕನ್‍ನ ಪೋಪ್‍ರವರು ವಿಶ್ವದ ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಜನೆಟ್ ಯೆಲ್ಲೆನ್

ಜನೆಟ್ ಯೆಲ್ಲೆನ್

ಜನೆಟ್ ಯೆಲ್ಲೆನ್‍ರವರು 2014ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಗವರ್ನರ್ಸ್‌ನ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದರು. ಫೆಡೆರಲ್ ರಿಸರ್ವ್ ವಿಶ್ವದಲ್ಲಿಯೇ ಅತ್ಯಂತ ಪ್ರಭಾವ ಬೀರುವ ಹಣಕಾಸು ಸಂಸ್ಥೆಯಾಗಿದೆ. ಒಬ್ಬ ಸ್ತ್ರೀಯಾಗಿ ಫೆಡೆರಲ್ ರಿಸರ್ವ್‌ನಂತಹ ದೊಡ್ಡ ಸ್ಥಾನಮಾನವನ್ನು ನಿರ್ವಹಿಸುವುದು ನಿಜಕ್ಕು ದೊಡ್ಡ ಮಾತೇ. ಇದಕ್ಕಾಗಿ ಜನೆಟ್ ಯೆಲ್ಲೆನ್‍ರವರಿಗೆ 2014ರ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 7ನೇ ಸ್ಥಾನ ಲಭಿಸಿದೆ.

ಮರಿಯೊ ಡ್ರಾಘಿ

ಮರಿಯೊ ಡ್ರಾಘಿ

ಪ್ರಸ್ತುತ ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್‍ನ ಅಧ್ಯಕ್ಷರಾಗಿರುವ ಮರಿಯೊ ಡ್ರಾಘಿಯವರು ಈ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಡ್ರಾಘಿಯವರು 2011ರ ಅಂತ್ಯದಲ್ಲಿ ಇಸಿಬಿಯ ಅಧ್ಯಕ್ಷರಾಗುವ ಮುನ್ನ ಯೂರೋಪಿಯನ್ ಸ್ಟ್ಯಾಬಿಲಿಟಿ ಬೋರ್ಡ್‌ನ ಅಧ್ಯಕ್ಷ ಮತ್ತು ಇಟಾಲಿಯನ್ ಸೆಂಟ್ರಲ್ ಬ್ಯಾಂಕ್‍ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಕಾರ್ಲೋಸ್ ಸ್ಲಿಮ್ ಹೆಲು

ಕಾರ್ಲೋಸ್ ಸ್ಲಿಮ್ ಹೆಲು

2014 ಫೋರ್ಬ್ಸ್ ಪಟ್ಟಿಯ ಪ್ರಕಾರ ಕಾರ್ಲೋಸ್ ಸ್ಲಿಮ್ ಹೆಲು ಬಿಲ್‍ಗೇಟ್ಸ್‌ರಿಂದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯೆಂಬ ಅಗ್ರಪಟ್ಟವನ್ನು ಕಸಿದು ಕೊಂಡಿದ್ದಾರೆ. ಮೆಕ್ಸಿಕೊ ದೇಶದ ಈ ಉದ್ಯಮಿಯು ತನ್ನ ಕಾಂಗ್ಲೋಮೆರೇಟ್ ಗ್ರುಪೊ ಕಾರ್ಸೊ ಮೂಲಕ ಹಲವಾರು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇವರನ್ನು ಮೆಕ್ಸಿಕೊದ ವಾರೆನ್ ಬಫೆಟ್ ಎಂದು ಕರೆಯುತ್ತಾರೆ.

ಬಿಲ್ ಗೇಟ್ಸ್

ಬಿಲ್ ಗೇಟ್ಸ್

ಪ್ರಸ್ತುತ ವಿಶ್ವದ ಎರಡನೆಯ ಅತ್ಯಂತ ಶ್ರೀಮಂತ ವ್ಯಕ್ತಿ, ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಪಡೆದಿದ್ದಾರೆ. ಮೈಕ್ರೋಸಾಫ್ಟ್‌ನ ಸಂಸ್ಥಾಪಕ ಫೋರ್ಬ್ಸ್ ಪಟ್ಟಿಯ ಪ್ರಕಾರ 2014ನೇ ಸಾಲಿನಲ್ಲಿ 80 ಬಿಲಿಯನ್ ಡಾಲರ್ ಮೌಲ್ಯವನ್ನು ಪಡೆದು ಅತ್ಯಂತ ಪ್ರಭಾವಶಾಲಿಗಳಲ್ಲಿ ತಾವು ಒಬ್ಬರಾಗಿದ್ದಾರೆ.

English summary

The 10 Most Powerful People In The World 2014

In this article, we look at the world's most powerful people- both male and female. We look at certain people who command incalculable power and influence in the field of politics,banking and industry- leaders who, in a way, shape the progress of world affairs through their position and influence.
X
Desktop Bottom Promotion