For Quick Alerts
ALLOW NOTIFICATIONS  
For Daily Alerts

ಕ್ಷಮೆಯಾಚಿಸಲು ಅತಿ ಸುಲಭವಾದ 10 ವಿಧಾನಗಳು

By Super
|

ಜಗತ್ತಿನಲ್ಲಿ ಯಾರು ಸಹ ಪರಿಪೂರ್ಣರಲ್ಲ, ಅದಕ್ಕೆ ಹೇಳುವುದು "ತಪ್ಪು ಮಾಡದವ್ರು ಯಾರಾವ್ರೇ, ತಪ್ಪೇ ಮಾಡದವ್ರು ಎಲ್ಲವ್ರೇ" ಎಂದು. ಆಯಿತು ಬಿಡಿ, ತಪ್ಪಾಗಿ ಹೋಯಿತು, ಸರಿಪಡಿಸಿಕೊಳ್ಳುವ ಮಾರ್ಗಗಳನ್ನು ನೋಡೋಣ. ಎಷ್ಟಾದರು ನಮ್ಮ ನೀತಿ" ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋದು ಮನುಜ ಕಣೋ" ಅಲ್ಲವೇನು! ಸಹಜವಾಗಿ ನಾವು ನಮ್ಮ ಸ್ನೇಹಿತರ, ಪೋಷಕರ, ಪ್ರೇಮಿಯ! ಮತ್ತು ಸಂಗಾತಿಯ ಜೊತೆಗೆ ತಪ್ಪಾಗಿ ನಡೆದುಕೊಳ್ಳುತ್ತಿರುತ್ತೇವೆ.

ಕ್ಷಮಿಸಿ ಎಂದು ಕೇಳಿ ಕೊಳ್ಳುವ ದೊಡ್ಡ ಗುಣ ನಿಮ್ಮಲ್ಲಿ ಇದ್ದಲ್ಲಿ, ಓದಿ, ಕ್ಷಮಿಸಿ ಎಂದು ಹೇಗೆಲ್ಲ ಕೇಳಬಹುದು ಎಂಬುದನ್ನು ನಾವು ಇಲ್ಲಿ ಕೆಲವೊಂದು ನಿದರ್ಶನಗಳನ್ನು ನೀಡಿದ್ದೇವೆ. ಇವು ಖಂಡಿತ ಇದು ಸಹ ನಿಮ್ಮ ಸಹಾಯಕ್ಕೆ ಬರದಿದ್ದಲ್ಲಿ, ದಯವಿಟ್ಟು ನಮ್ಮನ್ನು ಕ್ಷಮಿಸಿ!!!

ಹಾಸಿಗೆಯಲ್ಲಿಯೇ ಉಪಾಹಾರ
ಬಹುತೇಕ ಸಂದರ್ಭದಲ್ಲಿ ಇದು ಸರಿ ಎಂದೆನಿಸಿವುದಿಲ್ಲ. ಆದರೆ ಸಾರ್ರಿ ಕೇಳುವ ವಿಚಾರಕ್ಕೆ ಬಂದರೆ, ಇದು ತಪ್ಪಲ್ಲ. ನಿಮ್ಮ ಸಂಗಾತಿ ಹಾಸಿಗೆಯಲ್ಲಿರುವಾಗ ಅವರಿಗೆ ಉಪಾಹಾರವನ್ನು ತೆಗೆದುಕೊಂಡು ಹೋಗಿ ಸಾರ್ರಿ ಕೇಳುವುದರಿಂದ, ನಿಮ್ಮ ಕ್ಷಮಾಪಣೆಗೆ ಮನ್ನಣೆ ದೊರೆಯುತ್ತದೆ. ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿವು!

Ten Cute Ways to Say Sorry

ಶಾಪಿಂಗ್
ಕ್ಷಮಾಪಣೆ ಕೇಳಲು ಇರುವ ಅತ್ಯಂತ ಸುಲಭವಾದ ಮಾರ್ಗ, ನಿಮ್ಮ ಜೇಬಿನಲ್ಲಿ ದುಡ್ಡಿದ್ದರೆ, ನಿಮ್ಮ ಸಂಗಾತಿಯನ್ನು ಹೊರಗೆ ಶಾಪಿಂಗಿಗೆ ಎಂದು ಕರೆದುಕೊಂಡು ಹೋಗಿ. ಅವರಿಗೆ ಇಷ್ಟವಾದುದನ್ನು ಕೊಡಿಸಿ. ಅದು ಚಿಕ್ಕದಾಗಿದ್ದರು ಪರವಾಗಿಲ್ಲ, ಅವರ ಅಭಿರುಚಿಗೆ ತಕ್ಕಂತಹದನ್ನು ಕೊಡಿಸಿ. ಇದರಿಂದ ಅವರ ಮನಃಸಂತೋಷವಾಗಿ ಖಂಡಿತ ನಿಮ್ಮನ್ನು ಕ್ಷಮಿಸುತ್ತಾರೆ.

ಹೂವುಗಳು
ಹೆಣ್ಣಿಗೆ ಹೂವುಗಳೆಂದರೆ ಇಷ್ಟ, ಇದನ್ನು ಅವರಿಗೆ ನೀಡುವುದರಿಂದ ಅವರ ಕೋಪವನ್ನು ಕಡಿಮೆ ಮಾಡಬಹುದು ಹಾಗು ಸುಲಭವಾಗಿ ಸಾರಿ ಸಹ ಕೇಳಬಹುದು. ಆದರೆ ಇದು ನೀವು ಎದುರಿಸುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಎಂಬುದನ್ನು ಮಾತ್ರ ಮರೆಯಬೇಡಿ. ಆದಷ್ಟು ಹಲವಾರು ಬಣ್ಣದ ಹೂಗಳಿಂದ ಕೂಡಿದ ಬೊಕೆಯನ್ನು ತೆಗೆದುಕೊಂಡು ಹೋಗಿ ಕೊಡಿ. ಸುವಾಸನೆ ಬೀರುತ್ತಿರುವ ಹೂವುಗಳು ಮತ್ತಷ್ಟು ಮಧುರ ಭಾವನೆಯನ್ನು ಹೊರಡಿಸುತ್ತವೆ. ತಾಜಾ ಹೂಗಳಿದ್ದರೆ ಇನ್ನೂ ಉತ್ತಮ. ನಿಮ್ಮ ಕೆಲಸ ಬೇಗ ಆಯಿತು ಎಂದುಕೊಳ್ಳಿ.

ಚಿತ್ರಗಳು
ಇದು ನೀವಿಬ್ಬರು ಒಂದೇ ಕೊಠಡಿಯಲ್ಲಿಲ್ಲದಿದ್ದಾಗ ಕೆಲಸಕ್ಕೆ ಬರುತ್ತದೆ. ಒಂದು ಒಳ್ಳೆಯ ಬಟ್ಟೆಯನ್ನು ಧರಿಸಿ, ಕಾರ್ಡ್‍ಬೋರ್ಡಿನಲ್ಲಿ ಸಾರ್ರಿ ಎಂದು ಬರೆದುಕೊಂಡು ಫೋಟೊ ತೆಗೆಸಿಕೊಳ್ಳಿ. ಇದನ್ನು ಮತ್ತೊಬ್ಬ ವ್ಯಕ್ತಿಯ ಕೈಯಲ್ಲಿ ಕೊಟ್ಟು ಕಳುಹಿಸಿ. ಇದು ಕ್ಷಮಾಪಣೆ ಕೇಳುವಾಗ ಖಂಡಿತವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಮೂಲಕ ನೀವು ಅವರನ್ನು ಕ್ಷಮಿಸಿ ಎಂದು ಕೇಳುವುದರ ಜೊತೆಗೆ, ತಪ್ಪು ಮಾಡಿದ್ದಕ್ಕೆ ನಿಮಗೆ ಆಗುತ್ತಿರುವ ಕೀಳರಿಮೆಯನ್ನು ಪ್ರಾಮಾಣಿಕವಾಗಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದೀರಿ ಎಂದು ತೋರಿಸಬಹುದು. ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು

ವೇಷಭೂಷಣಗಳು
ನೀವು ಯಾರನ್ನು ಕ್ಷಮಾಪಣೆ ಕೇಳಲು ಬಯಸುತ್ತಿರುವಿರೋ, ಅವರು ಇಷ್ಟಪಡುವ ಪಾತ್ರದ ವೇಷ ಭೂಷಣವನ್ನು ತೊಟ್ಟುಕೊಳ್ಳಿ. ನಿಮ್ಮನ್ನು ಕ್ಷಮಿಸಬೇಕಾದ ವ್ಯಕ್ತಿಯ ಮುಂದೆ ಕಾಣಿಸಿಕೊಳ್ಳಿ. ಅವರು ಕಂಡಾಕ್ಷಣ, ಆ ಪಾತ್ರ ಹೇಗೆ ನಟಿಸುತ್ತದೆಯೋ, ಹಾಗೆಯೇ ನಟಿಸುವ ಮೂಲಕ ಕ್ಷಮಿಸಿ ಎಂದು ಕೇಳಿ. ಈ ಒಂದು ನಾಟಕೀಯ ಬೆಳವಣಿಗೆಯು ನಿಮ್ಮ ಜೀವನದಲ್ಲಿ ತುಂಬಾ ದೂರದವರೆಗೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಪಪ್ಪಿ ಐಯ್ಸ್
ಹೌದು ಇದೊಂದು ಪಾರಿಭಾಷಿಕ ಪದ. ಕನ್ನಡದಲ್ಲಿ ಇದನ್ನು ಜೋಲುಮುಖ ಅಥವಾ ಜೋತು ಬಿದ್ದ ಕಣ್ಣುಗಳು ಎಂದು ಕರೆಯಬಹುದು. ನಿಮ್ಮ ಮುದ್ದಿನ ಪಪ್ಪಿಯನ್ನು ನೀವು ರೇಗಿ ಅಥವಾ ಬೈದಾಗ ಅದು ಮುಖ ಬಿಳಿಚುಕೊಂಡು ನಿಮ್ಮನ್ನು ನೋಡುತ್ತದೆಯಲ್ಲವೇ, ಅದನ್ನೆ ಪಪ್ಪಿ ಐಯ್ಸ್ ಎಂದು ಕರೆಯುವುದು. ಇದು ಮನುಷ್ಯರಿಗೆ ಅದರಲ್ಲೂ, ಮಹಿಳೆಯರಿಗೆ ಈ ಪದ್ಧತಿ ತುಂಬಾ ಹೊಂದಿಕೊಳ್ಳುತ್ತದೆ. ನೀವು ಕ್ಷಮಿಸಿ ಎಂದು ಕೇಳುವಾಗ ಮುಖ ಕೆಳಗೆ ಮಾಡಿಕೊಂಡು, ಸಪ್ಪೆ ಕಣ್ಣುಗಳಿಂದ ನೋಡಿದರೆ ಸಾಕು. ಎಂತಹವರು ನಿಮ್ಮನ್ನು ಕ್ಷಮಿಸುತ್ತಾರೆ. ಛೇ, ಪಾಪ ಗಂಡಸರಿಗೆ ಇದು ಲಾಯಕ್ಕಲ್ಲ ಬಿಡಿ.

ತಮಾಷೆ ಮಾಡಿ
ಯಾರ ಬಳಿಯಾದರು ಕ್ಷಮಿಸಿ ಎಂದು ಕೇಳಬೇಕಾದಾಗ, ಅವರನ್ನು ನೇರವಾಗಿ ಕ್ಷಮಿಸಿ ಎಂದು ಕೇಳುವ ಬದಲು, ಅವರ ಬಳಿ ಸ್ವಲ್ಪ ತಮಾಷೆ ಮಾಡಿ. ಕಾಲೆಳೆಯಿರಿ, ಹೊಡೆಯಿರಿ ( ಮೆತ್ತಗೆ, ಆತ್ಮೀಯತೆಯಿರಲಿ), ತಿವಿಯಿರಿ, ಗೇಲಿ ಮಾಡಿ ಪರಿಸ್ಥಿತಿ ತಿಳಿಯಾದ ಮೇಲೆ ಸಾರ್ರಿ ಕೇಳಿ. ಒಂದು ವೇಳೆ ಪರಿಸ್ಥಿತಿ ತಿಳಿಯಾಗಲಿಲ್ಲವಾದಲ್ಲಿ, ಬೇರೆ ಮಾರ್ಗವನ್ನು ಹಿಡಿಯಿರಿ. ನಿಮ್ಮ ಆತ್ಮೀಯರು ನಿಮ್ಮ ತಮಾಷೆಗೆ ಖಂಡಿತ ಸೋತು ನಿಮ್ಮನ್ನು ಕ್ಷಮಿಸಿರುತ್ತಾರೆ ಎಂದು ಭಾವಿಸೋಣ.

ಕವಿತೆ
ಕ್ಷಮಾಪಣೆಯನ್ನು ಕೇಳಲು ಒಂದು ಕವಿತೆ ಬರೆಯಬಹುದು. ಇದಕ್ಕೇನು ನೀವು ದೊಡ್ಡ ಕವಿಯೇ ಆಗಿರಬೇಕೆಂದೇನಿಲ್ಲ. ಸುಮ್ಮನೆ ನಿಮ್ಮ ಮನಸ್ಸಿನಲ್ಲಿ ಬಂದ ಸಾಲುಗಳನ್ನು ಪ್ರಾಸಕ್ಕೆ ಅನುಗುಣವಾಗಿ ಜೋಡಿಸಿ, ಅದನ್ನು ನೀವು ಕ್ಷಮಾಪಣೆ ಕೇಳಬೇಕೆಂದಿರುವ ವ್ಯಕ್ತಿಗೆ ತಲುಪಿಸಿ. ನಿಮ್ಮ ಸಾಹಸವನ್ನು ನೋಡಿದ ಅವರು ನಗುಮುಖದಿಂದ ನಿಮ್ಮನ್ನು ಕ್ಷಮಿಸುತ್ತಾರೆ.

ವಿನೋದದಲ್ಲಿ ತೊಡಗಿ
ನೀವು ಬೇಕಾದರೆ ಕ್ಷಮಾಪಣೆಯ ಸುತ್ತ ಮುತ್ತ ಆಟವಾಡಬಹುದು. ಹೌದು, ಅದು ನೀವು ಮಾಡಿರುವ ತಪ್ಪು ಮತ್ತು ಅದಕ್ಕೆ ಪರಿಹಾರವಾಗಿ ಇರಬಹುದಾದ ಶಿಕ್ಷೆಯನ್ನು ನಿರ್ಧರಿಸುತ್ತದೆ. ನಿಮ್ಮ ತಪ್ಪಿಗೆ ನೀವೇ ಶಿಕ್ಷೆಯನ್ನು ವಿಧಿಸಿಕೊಳ್ಳಿ. ಅದು ತಮಾಷೆಯಾಗಿ ಕೂಡಿರಬೇಕು. ಅದನ್ನು ನಿಮ್ಮನ್ನು ಕ್ಷಮಿಸಬೇಕಾದ ವ್ಯಕ್ತಿಯ ಮುಂದೆ ಅನುಭವಿಸಿ. ಉದಾಹರಣೆಗೆ ನಿಮ್ಮನ್ನು ಕ್ಷಮಿಸಬೇಕಾದ ವ್ಯಕ್ತಿಗೆ ಒಂದು ವಾಟರ್ ಗನ್ ನೀಡಿ, ನೀವು ಮಾಡಿದ ತಪ್ಪಿಗೆ ನಿಮ್ಮನ್ನು ಸುಟ್ಟು ಬಿಡುವಂತೆ ಕೇಳಿಕೊಳ್ಳಿ. ಹೀಗೆ ಆಟವಾಡುತ್ತ ಸಾರ್ರಿ ಕೇಳಬಹುದು.

ಆಹಾರ
ಈ ಮಾರ್ಗವು ನಿಮ್ಮನ್ನು ಕ್ಷಮಿಸಬೇಕಾದ ವ್ಯಕ್ತಿ ಗಂಡಸಾಗಿದ್ದರೆ ಮಾತ್ರ ಕೆಲಸಕ್ಕೆ ಬರುತ್ತದೆ. ಊಟ-ತಿಂಡಿ ನೀಡಿ ಕ್ಷಮಿಸಿ ಎಂದು ಕೇಳುವುದು ಒಂದು ಒಳ್ಳೆಯ ಮಾರ್ಗ. ಒಂದು ರೊಮ್ಯಾಂಟಿಕ್ ಆಗಿರುವ ಡಿನ್ನರ್ ಪಾರ್ಟಿ ನೀಡಿ ಕ್ಷಮಿಸಿ ಎಂದು ಕೇಳುವುದು ಎಷ್ಟು ಚೆನ್ನಾಗಿರುತ್ತದೆ. ಆದರೂ ನೀವು ಕ್ಷಮಿಸಿ ಎಂದು ಮಾಮೂಲಿನಂತೆಯೇ ಕೇಳಬೇಕಾಗುತ್ತದೆ ಎಂಬುದು ಎಷ್ಟು ಸತ್ಯವೋ, ಅದನ್ನು ಸ್ವಲ್ಪ ತಿಂಡಿ ತಿನಿಸುಗಳ ಜೊತೆಯಲ್ಲಿ ಮಸಾಲೆ ಬೆರೆಸಿ ಹೇಳುವುದು ಒಂದು ತರಹ ಚೆನ್ನಾಗಿರುತ್ತದೆ ಎಂಬುದನ್ನು ಮರೆಯಬಾರದು.

English summary

Ten Cute Ways to Say Sorry

Nobody is perfect and the first downside to this is that you will end up making mistakes no matter what you do. Now, as long as these mistakes are not frequent and a one-time occurrence, you are good to go but otherwise you will need to work on more than just cute ways to say sorry.
Story first published: Friday, November 28, 2014, 15:45 [IST]
X
Desktop Bottom Promotion