For Quick Alerts
ALLOW NOTIFICATIONS  
For Daily Alerts

ರೂಮ್‌ಮೇಟ್‌‌ ಜೊತೆ ಹೊಂದಾಣಿಕೆಯ ಸಮಸ್ಯೆ ಎದುರಿಸುತ್ತಿದ್ದೀರಾ?

|

ಇತ್ತೀಚಿನ ದಿನಗಳಲ್ಲಿ, ಯುವಕರು/ ಯುವತಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಜೊತೆವಾಸಿನೊಂದಿಗೆ (ರೂಮ್‌ಮೇಟ್‌) ಹೊಂದಾಣಿಕೆಯ ಸಮಸ್ಯೆ. ಹೌದು ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುವುದು ಯುವಜನರು ವಾಸಿಸುವ ಹಾಸ್ಟೇಲ್ ಅಥವಾ ಮೆಸ್‌ಗಳಲ್ಲಿ.

ಇಂದಿನ ದಿನಗಳಲ್ಲಿ ಅನೇಕ ಯುವಜನರು ತಮ್ಮ ಕುಟುಂಬದವರನ್ನು ಬಿಟ್ಟು ಕೆಲಸ ಅಥವಾ ವಿದ್ಯಾಭ್ಯಾಸಕ್ಕೆಂದು ಸಿಟಿ ಕಡೆ ಮುಖ ಮಾಡುವುದು ಸರ್ವೇ ಸಮಾಮಾನ್ಯ. ತಮ್ಮ ವೃತ್ತಿ ಜೀವನವನ್ನು ನಿರ್ಮಿಸಲು ಯುವಜನರು ದೇಶದ ವಿವಿಧ ಮೂಲೆಗಳಿಗೆ ಪ್ರಯಾಣಿಸುವುದು ಸಾಮಾನ್ಯವಾಗಿದೆ.

ಇದರಲ್ಲಿ ಕೆಲವೊಂದು ಜನರು ಮಾತ್ರ ತುಂಬಾ ಅದೃಷ್ಟವಂತರು, ಒಬ್ಬಂಟಿಯಾಗಿ ಸಿಂಗಲ್ (ಒಂದೇ ಕೋಣೆ ಇರುವ ಮನೆ) ರೂಮ್ ಅಥವಾ ಫ್ಲ್ಯಾಟ್‌ನಲ್ಲಿ ವಾಸಿಸುತ್ತಾರೆ. ಅದಾಗಿಯೂ, ಹೆಚ್ಚಿನವರು ತಮ್ಮ ವೆಚ್ಚವನ್ನು ಸ್ವಲ್ಪ ಮಟ್ಟಕ್ಕೆ ಕಡಿಮೆಗೊಳಿಸುವುದಕ್ಕೆ ಇತರರನ್ನು ರೂಮ್‌ಗೆ ಸೇರಿಸಿಕೊಳ್ಳುತ್ತಾರೆ. ಇದರಿಂದ ಅನೇಕ ಸಮಸ್ಯೆಗಳು ತಲೆದೂರುತ್ತವೆ.

Such kind of Problems Of Staying With A Roommate

ನಾಲ್ಕು ಗೋಡೆಗಳ ನಡುವೆ ವಾಸಿಸುವಾಗ ಎಲ್ಲರ ಮನೋಭಾವ ಕೂಡ ಒಂದೇ ರೀತಿಯಾಗಿರುವುದಿಲ್ಲ! ಒಬ್ಬೊಬ್ಬರು ಒಂದು ಒಂದು ಅಭಿಪ್ರಾಯಗಳನ್ನು ನೀಡುವಾಗ, ಸಹಜವಾಗಿ ಸಮಸ್ಯೆಗಳು ಕಂಡುಬರುತ್ತದೆ. ಬೆಳೆಯುತ್ತಿರುವ ನಗರಗಳಲ್ಲಿ ಜೀವನ ಮಟ್ಟವನ್ನು ಸುಧಾರಿಸುವುದು ಇತ್ತೀಚಿನ ದಿನಗಳಲ್ಲಿ ಬಹಳ ಕಷ್ಟಕರವಾದ ಕೆಲಸ, ಹಾಗಾಗಿ ಯುವಜನರು ಜೊತೆಯಾಗಿ ವಾಸಿಸಲು ಮನಸ್ಸು ಮಾಡುವುದು ಸಾಮಾನ್ಯ.

ಜೊತೆಯಾಗಿ ವಾಸಿಸುವ ರೂಮ್‌ಮೇಟ್‌‌ನಲ್ಲಿ ಖಣಾತ್ಮಕ ಹಾಗೂ ಧನಾತ್ಮಕ ಎರಡೂ ಗುಣಗಳನ್ನು ನಾವು ಕಾಣಬಹುದು, ಇವುಗಳೆರಡು ಒಂದೇ ನಾಣ್ಯದ ಮುಖಗಳಿದ್ದಂತೆ. ರೂಮ್‌ಮೇಟ್‌‌ನಿಂದ ಕೆಲವೊಂದು ಅನುಕೂಲತೆ ಹಾಗೂ ಅನನುಕೂಲತೆಗಳೆರಡನ್ನು ಕೂಡ ನಾವು ಕಂಡುಕೊಳ್ಳಬಹುದು. ಇಲ್ಲಿ ಕೆಲವೊಂದು ಸಾಮಾನ್ಯ ಸಮಸ್ಯೆಗಳನ್ನು ಈ ಕೆಳಗೆ ನೀಡಲಾಗಿದೆ.

ಖರ್ಚು ಅಥವಾ ವೆಚ್ಚಗಳು
ಪ್ರತಿಯೊಂದು ಸಮಸ್ಯೆಯ ಹಿಂದೆ ಕೂಡ ಹಣ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ರೂಮ್‌ಮೇಟ್‌ ಜೊತೆ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ನೀವು ಎಲ್ಲಾ ಖರ್ಚು ವೆಚ್ಚಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ. ಅದಾಗಿಯೂ, ಕೆಲವೊಮ್ಮೆ ನಿಮ್ಮ ರೂಮ್‌ಮೇಟ್‌ ಖರ್ಚು ವೆಚ್ಚಗಳನ್ನು ಸಮಾನವಾಗಿ ಹಂಚಿಕೊಳ್ಳದಿದ್ದರೆ ಅಥವಾ ಕೊಡುವುದಕ್ಕೆ ತಡಮಾಡಿದರೆ, ಅದು ನಿಮ್ಮ ಪಾಕೆಟ್ ಹಣಕ್ಕೆ ಸಮಸ್ಯೆ ತಂದೊಡ್ಡುತ್ತದೆ!. ಸಾಧ್ಯವಾದಷ್ಟು ಇಂತಹ ಸಮಸ್ಯೆಯನ್ನು ವಿಶ್ವಾಸದಿಂದ ಬಗೆಹರಿಸಿಕೊಳ್ಳುವುದು ಅತ್ಯವಶ್ಯಕ.

ಸೋಮಾರಿತನ
ನಿಮ್ಮ ರೂಮ್‌ಮೇಟ್‌ ಅವನು/ ಅವಳು ತಮ್ಮ ಬಟ್ಟೆಗಳನ್ನು ಬೆಡ್ ಮೇಲೆ ಅಥವಾ ಹಾಲ್‌ನಲ್ಲಿ ಅಜಾಗರೂಕತೆಯಾಗಿ ಇಟ್ಟುಕೊಂಡಿದ್ದರೆ ಅಥವಾ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಂಡಿಲ್ಲದಿದ್ದರೆ, ಖಂಡಿತವಾಗಿಯೂ ನಿಮ್ಮಲ್ಲಿ ಹೊಂದಾಣಿಕೆಯ ಸಮಸ್ಯೆ ಎದುರಾಗುತ್ತದೆ. ಕೆಲವೊಮ್ಮೆ ನಿಮ್ಮ ರೂಮ್‌ಮೇಟ್‌‌ನ ಸಾಕ್ಸ್ ಅಥವಾ ಬೆವರಿನ ಬಟ್ಟೆಯಿಂದ ರೂಮ್‌ನಲ್ಲಿ ಕೆಟ್ಟ ವಾಸನೆ ಬರಬಹುದು. ಸಾಧ್ಯವಾದಷ್ಟು ಇಂತಹ ಸಮಸ್ಯೆಯನ್ನು ಅವನು/ ಅವಳಿಗೆ ಪ್ರೀತಿಯಿಂದ ತಿಳಿಸಿ.

ಆನ್‍ಲೈನ್‍ನಲ್ಲಿ ನೀವು ಖರೀದಿಸಬಹುದಾದ 20 ವಸ್ತುಗಳು

ಕಳ್ಳತನ ಮಾಡುವಿಕೆ
ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಹೆಚ್ಚಾಗಿ ರೂಮ್‌ಮೇಟ್‌‌ನಲ್ಲಿ ಕಂಡುಬರುತ್ತದೆ. ನಿಮ್ಮ ಅರಿವಿಗೆ ಬಾರದೇ ನಿಮ್ಮ ರೂಮ್‌ಮೇಟ್‌ ಅವನು/ ಅವಳು ನಿಮಗೆ ಮೋಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅವರ ನಿಜ ಬಣ್ಣ ತಿಳಿಯುವಾಗ ಸಮಯ ಮೀರಿಹೋಗಿರುತ್ತದೆ. ನಿಮ್ಮ ಸ್ವತ್ತು ಅಂದರೆ ಬಟ್ಟೆ, ಹಣ, ವಾಚ್ ಇತ್ಯಾದಿ ಐಟಂಗಳು ಕಳವಾಗುತ್ತಿದ್ದರೆ, ನಿಮ್ಮ ರೂಮ್‌ಮೇಟ್‌‌ ಕುರಿತು ನಿಮಗೆ ಸ್ಪಷ್ಟ ಚಿತ್ರ ಸಿಗುತ್ತದೆ. ಇಂತಹ ಸಮಸ್ಯೆಯನ್ನು ಎಚ್ಚರಿಕೆಯಿಂದ ಎದುರಿಸುವುದು ಅತ್ಯಗತ್ಯ.

ಹಂಚಿಕೊಳ್ಳುವಿಕೆ
ಸಾಮಾನ್ಯವಾಗಿ ಇಂತಹ ಕೆಟ್ಟ ಅಭ್ಯಾಸವು ಹೆಚ್ಚಿನ ರೂಮ್‌ಮೇಟ್‌‌ನಲ್ಲಿ ಕಂಡುಬರುತ್ತದೆ. ನಿಮ್ಮ ಅನುಮತಿಯಿಲ್ಲದೆ ನಿಮ್ಮ ಸ್ವತ್ತುಗಳನ್ನು ಬಳಸುವುದು. ಇದು ಇನ್ನೊಂದು ರೀತಿಯ ಸಮಸ್ಯೆ. ಇದರಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ಸಾಮಾನ್ಯವಾಗಿ ಜನರು ಹಂಚಿಕೊಳ್ಳುವುದನ್ನು ಇಷ್ಟಪಡುವುದಿಲ್ಲ, ಆದರೆ ರೂಮ್‌ಮೇಟ್‌‌ಗಳು ಇದನ್ನು ಯಾವುದೇ ರೀತಿಯ ಸಂಕೋಚ ಇಲ್ಲದೆ ಬಳಸಿಕೊಳ್ಳುತ್ತಾರೆ. ಇಂತಹ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳಲು ನೀವು ಅವನು/ಅವಳಿಗೆ ತಮ್ಮ ಸ್ವತ್ತುಗಳನ್ನು ನಾನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ವಿನಿಯದಿಂದ ಹೇಳಲು ಪ್ರಯತ್ನಿಸಿ. ಹೀಗೆ ಕೆಲವೊಂದು ಸಮಸ್ಯೆಗಳು ನಾವು ರೂಮ್‌ಮೇಟ್‌‌ನಲ್ಲಿ ಕಂಡುಕೊಳ್ಳಬಹುದು.

English summary

Such kind of Problems while Staying With A Roommate

These days, the most common problem arising among youngsters is, the roommate. Well, I am not talking about the movie but the actual problem which is creating a lot of mess in the lives of many people.
X
Desktop Bottom Promotion