For Quick Alerts
ALLOW NOTIFICATIONS  
For Daily Alerts

ಫೇಸ್ ಬುಕ್‌ನಲ್ಲಿ ಮಕ್ಕಳ ಮೇಲೆ ಹೆತ್ತವರ ಹದ್ದಿನ ಕಣ್ಣು!

By Hemanth P
|

ಇಂದಿನ ದಿನಗಳಲ್ಲಿ ನಿಮಗೆ ಒಬ್ಬ ವ್ಯಕ್ತಿಯ ಬಗ್ಗೆ ಸ್ವಲ್ಪ ಮಾಹಿತಿಯಿದ್ದು, ಹೆಚ್ಚಿನದ್ದನ್ನು ತಿಳಿದುಕೊಳ್ಳಲು ಬಯಸುತ್ತಿದ್ದರೆ ಆಗ ನಿಮ್ಮ ತಲೆಗೆ ಹೊಳೆಯುವ ಮೊದಲ ವಿಚಾರವೆಂದರೆ ಫೇಸ್ ಬುಕ್. ಫೇಸ್ ಬುಕ್ ಗೆ ಪ್ರತೀ ದಿನ ಸಾವಿರಾರು ಮಂದಿ ಸೇರ್ಪಡೆಯಾಗುತ್ತಿದ್ದಾರೆ. ಒಂದು ವಯಸ್ಸಿನ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಫೇಸ್ ಬುಕ್ ನ ಕಾಲ ಹೋಗಿದೆ. ಇಂದು ಫೇಸ್ ಬುಕ್ ಬಳಕೆದಾರರಿಗೆ ವಯಸ್ಸಿನ ಮಿತಿಯಿಲ್ಲ. ತಮ್ಮ ಮಕ್ಕಳ ಬಗ್ಗೆ ನಿಗಾ ಇರಿಸಿಕೊಳ್ಳಲು ಪೋಷಕರು ಕೂಡ ಫೇಸ್ ಬುಕ್ ನಲ್ಲಿ ಖಾತೆ ತೆರೆಯುತ್ತಿದ್ದಾರೆ.

ಫೇಸ್ ಬುಕ್ ನಲ್ಲಿ ನಿಮ್ಮ ಪೋಷಕರು ಇರುವ ಬಗ್ಗೆ ನಿಮಗೆ ತಿಳಿದಿದೆಯಾ? ಒಂದು ದಿನ ನಿಮಗೆ ಪೋಷಕರಿಂದ ಫ್ರೆಂಡ್ಸ್ ರಿಕ್ವೆಸ್ಟ್ ಬಂದರೆ ಆಗ ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ? ಹೌದು, ಇದಕ್ಕಾಗಿ ತಯಾರಾಗಿರಿ. ಇಂತಹ ಪರಿಸ್ಥಿತಿ ನಿಮಗೆ ಬಹುಬೇಗನೆ ಬರಬಹುದು. ಇದರ ಹಿಂದಿನ ಕಾರಣವೇನೆಂದು ನೀವು ತಿಳಿದುಕೊಂಡಿದ್ದೀರಾ? ಪೋಷಕರು ಸಮಾಜಮುಖಿಯಾಗಲು, ತಮ್ಮ ಸ್ಟೇಟಸ್ ಹಾಕಿ ಅಥವಾ ಫೋಟೊ ಹಾಕಿ ಆನಂದಿಸಲು ಫೇಸ್ ಬುಕ್ ಗೆ ಬಂದಿಲ್ಲ. ಮಕ್ಕಳ ಮೇಲೆ ಹದ್ದಿನ ಕಣ್ಣಿಡುವುದೇ ಪೋಷಕರು ಫೇಸ್ ಬುಕ್ ಗೆ ಬರಲು ಕಾರಣವಾಗಿದೆ.

Parents Switching To Facebook To Keep Track Of Their Children

25 ವರ್ಷ ವಯಸ್ಸಿನ ಯುವಕರು ಮಾಡುವ 15 ಮುಜುಗರಗೊಳಿಸುವ ಸಂಗತಿಗಳು

* ಫೇಸ್ ಬುಕ್ ನಲ್ಲಿರುವ ಹೆಚ್ಚಿನ ಪೋಷಕರು ತಮ್ಮ ಮಕ್ಕಳೊಂದಿಗೆ ಫ್ರೆಂಡ್ಸ್ ಆಗಿದ್ದಾರೆ.

* ಅವರು ತಮ್ಮ ಮಕ್ಕಳ ಪ್ರೊಫೈಲ್ ನ್ನು ವಾರದಲ್ಲಿ ಒಂದು ಸಲವಾದರೂ ವೀಕ್ಷಿಸುತ್ತಾರೆ.

* ತಮ್ಮ ಮಕ್ಕಳು ಹಾಕಿರುವ ಸ್ಟೇಟಸ್ ನ್ನು ಪರೀಕ್ಷಿಸುತ್ತಾರೆ. ಅವರ ಜೀವನದಲ್ಲಿ ಏನಾಗುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ.

* ಮಕ್ಕಳು ಟ್ಯಾಗ್ ಮಾಡಿರುವ ಫೋಟೊಗಳನ್ನು ನೋಡಲು ಪೋಷಕರು ಆಸಕ್ತಿ ವಹಿಸುತ್ತಾರೆ.

* ಕೆಲವರು ಇದನ್ನು ತುಂಬಾ ಮುಜುಗರ ಮತ್ತು ವಿಲಕ್ಷಣವೆಂದು ಭಾವಿಸಿದರೂ ತಮ್ಮ ಮಕ್ಕಳ ಫೋಟೊಗಳಿಗೆ ಕಮೆಂಟ್ ಮಾಡುತ್ತಾರೆ.

ಕೇವಲ ಭಾರತೀಯರು ಮಾಡುವ ಹೊಂದಾಣಿಕೆಯಿಲ್ಲದ ಕೆಲಸಗಳು

ತಮ್ಮ ಮಕ್ಕಳ ಬಗ್ಗೆ ಚಿಂತೆಗೀಡಾಗಿರುವ ಕಾರಣ ಪೋಷಕರು ಈ ರೀತಿ ಮಾಡುತ್ತಾರೆ. ಅವರು ಏನಾದರೂ ಪೋಸ್ಟ್ ಮಾಡುತ್ತಿದ್ದಾರೆ ಎಂದಾದರೆ ಅದರರ್ಥ ನಿಜವಾಗಿಯೂ ಏನೋ ತಪ್ಪಾಗಿದೆ ಎಂದಲ್ಲ. ಮಕ್ಕಳಿಗೆ ನೀಡಿರುವಂತಹ ಸ್ವಾತಂತ್ರ್ಯದ ಬಗ್ಗೆ ನಿಗಾ ಇಡುವುದು ಸರಿಯಾದ ನಿರ್ಧಾರ. ಆದರೆ ಇದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬಾರದು. ಯಾಕೆಂದರೆ ಇದು ಮಕ್ಕಳು-ಪೋಷಕರ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಇದರ ಬಗ್ಗೆ ಏನಾದರೂ ಹೇಳಬೇಕೆಂದಿದ್ದರೆ ನಿಮ್ಮ ಪ್ರತಿಕ್ರಿಯೆಗಳಿಗೆ ಕೆಳಗಡೆಯಿರುವ ಕಮೆಂಟ್ ಬಾಕ್ಸ್ ಯಾವಾಗಲೂ ಸ್ವಾಗತಿಸುತ್ತಿರುತ್ತದೆ.

English summary

Parents Switching To Facebook To Keep Track Of Their Children

Parents join Facebook not to socialize or have fun by posting status and photos. Instead, they are there to keep an eye on their children.
Story first published: Monday, July 28, 2014, 17:50 [IST]
X
Desktop Bottom Promotion