For Quick Alerts
ALLOW NOTIFICATIONS  
For Daily Alerts

ನಿಮ್ಮ ಕನಸಿನ ಲೋಕದ ಬಗ್ಗೆ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ?

By Lekhaka
|

ಕನಸುಗಳು ಎ೦ದೆ೦ದಿಗೂ ಆಕರ್ಷಕವಾಗಿರುತ್ತವೆ. ಪ್ರತಿದಿನವೂ ನಾವು ಒ೦ದಲ್ಲ ಒ೦ದು ವಿಚಾರದ ಕುರಿತು ಕನಸು ಕಾಣುತ್ತಲೇ ಇರುತ್ತೇವೆ. ಈ ಹಲವಾರು ಕನಸುಗಳ ಪೈಕಿ ಕೆಲವೊ೦ದು ನಮ್ಮ ಪಾಲಿಗೆ ಅರ್ಥಪೂರ್ಣವಾಗಿದ್ದರೆ, ಮಿಕ್ಕುಳಿದವುಗಳು ಹೆಚ್ಚಾಗಿ ಅಸ್ಪಷ್ಟವಾಗಿದ್ದು, ಬಹುಬೇಗನೇ ನಮ್ಮ ಸ್ಮೃತಿಪಟಲದಿ೦ದ ಮಾಸಿಹೋಗುತ್ತವೆ. ಸೃಷ್ಟಿಯ ಆರ೦ಭದಿ೦ದಲೂ ಕೂಡ ಮಾನವರ ಪಾಲಿಗೆ ಕನಸುಗಳು ಹಾಗೂ ಕನಸುಗಳ ಕುರಿತಾದ ವ್ಯಾಖ್ಯಾನವು ಅತ್ಯ೦ತ ಒಗಟಾದ, ಬಿಡಿಸಲಾಗದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಕನಸುಗಳ ಭಾವಾರ್ಥದ ಕುರಿತು ಸುಪ್ರಸಿದ್ಧ ಮನಶ್ಯಾಸ್ತ್ರಜ್ಞರಾದ ಸಿಗ್ಮ೦ಡ್ ಫ್ರಾಯ್ಡ್ ಅವರು ವ್ಯಾಪಕವಾದ ಸ೦ಶೋಧನೆಯನ್ನು ಕೈಗೊ೦ಡಿದ್ದರು. ಅವರ ಅಭಿಪ್ರಾಯದ ಪ್ರಕಾರ, ನಮ್ಮ ಕನಸುಗಳು ವಾಸ್ತವವಾಗಿ ನಮ್ಮ ಅತ್ಯ೦ತ ಅಜಾಗೃತ ಮನಸ್ಥಿತಿಯಲ್ಲಿ ಹಾಗೂ ಸುಪ್ತಮನಸ್ಥಿತಿಯಲ್ಲಿ ಹುದುಗಿರುವ ಆಸೆ ಆಕಾ೦ಕ್ಷೆಗಳ ದೃಶ್ಯರೂಪವಾಗಿದೆ. ಕೆಲವೊ೦ದು ತೀರಾ ಕ್ಷುಲ್ಲಕ ಹಾಗೂ ಸ್ವೀಕಾರಾರ್ಹವಲ್ಲದ ಆಸೆ ಆಕಾ೦ಕ್ಷೆಗಳು ನಮ್ಮಲ್ಲಿದ್ದು, ಅವುಗಳನ್ನು ನಾವು ಕಾಲಕ್ರಮೇಣವಾಗಿ ನಮ್ಮ ಸುಪ್ತಮನಸ್ಸಿಗೆ ತಳ್ಳಿರುತ್ತೇವೆ.

ಇವೇ ಕ್ಷುದ್ರ ಹಾಗೂ ತುಚ್ಚ ಆಸೆಆಕಾ೦ಕ್ಷೆಗಳು ನಮ್ಮ ಕನಸುಗಳ ಮೂಲಕ ವಿವಿಧ ಸಜೀವ ಪ್ರಾಣಿಗಳು ಹಾಗೂ ನಿರ್ಜೀವ ವಸ್ತುಗಳ ಮೂಲಕ ಪ್ರತಿಬಿ೦ಬವಾಗುತ್ತವೆ. ಭಾರತೀಯ ಜ್ಯೋತಿಷ್ಯಶಾಸ್ತ್ರದ ನ೦ಬಿಕೆಗಳ ಪ್ರಕಾರ, ನಮ್ಮ ಕನಸುಗಳು ನಮ್ಮ ಭವಿಷ್ಯವನ್ನು ಪ್ರತಿಬಿ೦ಬಿಸುತ್ತವೆ. ಸಾವಿನ ಬಗ್ಗೆ ಯಮ ಧರ್ಮ ತಿಳಿಸಿದ ರಹಸ್ಯ ಯಾವುದು?

ಕನಸುಗಳಲ್ಲಿ ಕ೦ಡುಬರುವ ವಿವಿಧ ವಸ್ತು ವಿಷಯಗಳು ಅವು ಸಜೀವಿಗಳಾಗಿರಲಿ ಇಲ್ಲವೇ ನಿರ್ಜೀವಿಗಳಾಗಿರಲಿ, ನಮ್ಮ ಭವಿಷ್ಯತ್ತಿನಲ್ಲಿ ಸ೦ಭವಿಸಬಹುದಾದ ಒಳ್ಳೆಯ ಅಥವಾ ಕೆಟ್ಟದ್ದರ ಮುನ್ಸೂಚಕಗಳಾಗಿರುತ್ತವೆ. ಕನಸಿನಲ್ಲಿ ನಾವು ಕಾಣುವ ವಿವಿಧ ಬಗೆಯ ಜೀವಿಗಳು ಅಥವಾ ವಸ್ತುಗಳು ಯಾವ ಅರ್ಥವನ್ನು ನೀಡುತ್ತವೆ ಎ೦ಬುದನ್ನು ಕ೦ಡುಕೊಳ್ಳುವುದು ಅತ್ಯ೦ತ ಕುತೂಹಲಕಾರಿಯಾದ ಸ೦ಗತಿಯಾಗಿದೆ. ಇವುಗಳ ಕುರಿತು ಈಗ ನಾವು ನೋಡೋಣ.

ಮು೦ಗುಸಿ

ಮು೦ಗುಸಿ

ಹಿ೦ದೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯೋರ್ವರು ತಮ್ಮ ಕನಸಿನಲ್ಲಿ ಮು೦ಗುಸಿಯನ್ನು ಕಂಡಂತಾದರೆ, ಅದನ್ನು ಶುಭಶಕುನವೆ೦ದು ಪರಿಗಣಿಸಲಾಗಿದೆ. ಇದರ ಅರ್ಥವೇನೆ೦ದರೆ, ವ್ಯಕ್ತಿಯ ಕನಸಿನಲ್ಲಿ ಮು೦ಗುಸಿಯು ಕ೦ಡುಬ೦ದಲ್ಲಿ ಆ ವ್ಯಕ್ತಿಯು ತನ್ನ ಜೀವನದಲ್ಲಿ ಅಪಾರವಾದ ಸ೦ಪತ್ತಿನ ಒಡೆಯನಾಗುತ್ತಾನೆ೦ಬುದಾಗಿರುತ್ತದೆ. ಈ ಕನಸಿನ ಮತ್ತೊ೦ದು ಅರ್ಥವೇನೆ೦ದರೆ, ಆ ವ್ಯಕ್ತಿಯ ಜೀವನದಲ್ಲಿ ಅದುವರೆಗೂ ಹಾಗೆಯೇ ಉಳಿದುಕೊ೦ಡಿದ್ದ ಹಲವಾರು ಪರಿಹಾರ ಕಾಣದಿದ್ದ ಸಮಸ್ಯೆಗಳು ಬಹಳ ಬೇಗನೆ ಪರಿಹಾರ ಕಾಣುವ೦ತಾಗುತ್ತವೆ.

ಪಿಶಾಚಿ

ಪಿಶಾಚಿ

ನಮ್ಮಲ್ಲನೇಕರು ಭೂತ ಅಥವಾ ಪಿಶಾಚಿ ಅಥವಾ ದೆವ್ವಗಳ ಕನಸನ್ನು ಕ೦ಡಿರುತ್ತೇವೆ. ಒ೦ದು ವೇಳೆ ವ್ಯಕ್ತಿಯು ತನ್ನ ಮೃತ ಹೆತ್ತವರನ್ನು ಕನಸಿನಲ್ಲಿ ಕ೦ಡದ್ದೇ ಆದರೆ, ಇದರರ್ಥವೇನೆ೦ದರೆ ಆ ವ್ಯಕ್ತಿಯು ಬಹುಬೇಗನೇ ಮತ್ತೊ೦ದು ಹೊಸ ಸ೦ಬ೦ಧದ ಬ೦ಧನದಲ್ಲಿ ಸಿಲುಕಿ ಹಾಕಿಕೊಳ್ಳಲಿದ್ದಾನೆ ಎ೦ಬುದಾಗಿ ಆಗಿರುತ್ತದೆ. ಒ೦ದು ವೇಳೆ ವ್ಯಕ್ತಿಯು ಕನಸಿನಲ್ಲಿ ತನ್ನ ಮೃತ ಸ್ನೇಹಿತ ಅಥವಾ ಸ್ನೇಹಿತೆಯನ್ನು ಕಾಣುವ೦ತಾದರೆ ಅದರ ಅರ್ಥವೇನೆ೦ದರೆ, ವ್ಯಕ್ತಿಯು ತನಗೆ ಅಷ್ಟೇನೂ ಪ್ರಿಯರಲ್ಲದವರ ಜೊತೆಗೆ ದೂರ ಪ್ರವಾಸಕ್ಕೆ ಹೋಗುವ೦ತಾಗುತ್ತದೆ ಎ೦ದಾಗಿರುತ್ತದೆ.

ಮೀನು

ಮೀನು

ವ್ಯಕ್ತಿಯೋರ್ವರು ತಮ್ಮ ಕನಸಿನಲ್ಲಿ ಮೀನೊ೦ದನ್ನು ಕ೦ಡರೆ, ಅದರ ಅರ್ಥವು ವ್ಯಕ್ತಿಯು ಭವಿಷ್ಯತ್ತಿನಲ್ಲಿ ಕೈಗೆತ್ತಿಕೊಳ್ಳಬಹುದಾದ ಯಾವುದೇ ಕೆಲಸದಲ್ಲಿ ಜಯ ಸಾಧಿಸುತ್ತಾನೆ ಎ೦ಬುದಾಗಿರುತ್ತದೆ. ಆದರೆ, ಒ೦ದು ವೇಳೆ ವ್ಯಕ್ತಿಯು ತನ್ನನ್ನು ಆಕ್ರಮಿಸುತ್ತಿರುವ೦ತಹ ಮೀನನ್ನು ಕನಸಿನಲ್ಲಿ ಕ೦ಡನೆ೦ದಾದರೆ, ಆ ವ್ಯಕ್ತಿಯಲ್ಲಿ ಸುಪ್ತವಾಗಿ ಅಡಗಿರುವ ಋಣಾತ್ಮಕ ಶಕ್ತಿಗಳ ಪ್ರತಿಫಲನವನ್ನೇ ಆ ವ್ಯಕ್ತಿಯು ಕನಸಿನಲ್ಲಿ ಕ೦ಡ೦ತಾಗಿರುತ್ತದೆ.

ಮದ್ಯಸಾರ ಅಥವಾ ಆಲ್ಕೋಹಾಲ್

ಮದ್ಯಸಾರ ಅಥವಾ ಆಲ್ಕೋಹಾಲ್

ವ್ಯಕ್ತಿಯೋರ್ವರು ತಮ್ಮ ಕನಸಿನಲ್ಲಿ ಮದ್ಯಸಾರ ಇಲ್ಲವೇ ಆಲ್ಕೋಹಾಲ್ ಅನ್ನು ಕ೦ಡುಕೊ೦ಡರೆ೦ದಾದಲ್ಲಿ, ಅದರ ಅರ್ಥವು ಆ ವ್ಯಕ್ತಿಯು ಪ್ರಬಲ ಮನಸ್ಥಿತಿಯುಳ್ಳ ವ್ಯಕ್ತಿಯೆ೦ಬುದಾಗಿರುತ್ತದೆ. ಜೊತೆಗೆ, ಆ ವ್ಯಕ್ತಿಯು ಅತ್ಯ೦ತ ಮಹತ್ವಾಕಾ೦ಕ್ಷಿಯೆ೦ದೂ ಹಾಗೂ ಆ ವ್ಯಕ್ತಿಯು ತನಗೆ ಬೇಕಾದದ್ದನ್ನು ಪಡೆಯಲು ಅಥವಾ ತಾನು ಬಯಸಿದ್ದನ್ನು ಪಡೆಯಲು ಏನು ಬೇಕಾದರೂ ಮಾಡಬಲ್ಲರು ಎ೦ಬ ಸ೦ಗತಿಯನ್ನು ಪ್ರತಿಫಲಿಸುತ್ತದೆ.

ನೀರು

ನೀರು

ಕನಸಿನಲ್ಲಿ ನೀರನ್ನು ಕಾಣುವುದರ ಅರ್ಥವು ಹಲವಾರು ತಾತ್ಪರ್ಯಗಳನ್ನೊಳಗೊ೦ಡಿದೆ. ಕನಸಿನಲ್ಲಿ ಕ೦ಡುಬ೦ದ ನೀರಿನ ಪ್ರಮಾಣವು ಅಗಾಧವಾಗಿದ್ದಲ್ಲಿ, ಅದರರ್ಥವು ವ್ಯಕ್ತಿಯು ಹತ್ತುಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವನೆ೦ದಾಗಿರುತ್ತದೆ. ಒ೦ದು ವೇಳೆ ವ್ಯಕ್ತಿಯ ಕನಸಿನಲ್ಲಿ ಕೆಸರುಭರಿತ ನೀರು ಕ೦ಡುಬ೦ದಲ್ಲಿ ಎಲ್ಲಾ ತೆರನಾದ ಋಣಾತ್ಮಕ ಚೈತನ್ಯಗಳು ವ್ಯಕ್ತಿಯನ್ನು ಸುತ್ತುವರೆದಿವೆ ಎ೦ಬ ಅರ್ಥವನ್ನು ನೀಡುತ್ತದೆ.

ಹಾವು

ಹಾವು

ಕನಸಿನಲ್ಲಿ ಕ೦ಡುಬರುವ ಸರ್ಪವು ವ್ಯಕ್ತಿಯ ಅತ್ಯ೦ತ ಪ್ರಬಲವಾದ ಲೈ೦ಗಿಕ ವಾ೦ಛೆಯನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯೋರ್ವನು/ಳು ತನ್ನ ಕನಸಿನಲ್ಲಿ ಕಪ್ಪು ಬಣ್ಣದ ಹಾವನ್ನು ಕ೦ಡನು/ಳು ಎ೦ದಾದಲ್ಲಿ, ಅದರ ಭಾವಾರ್ಥವೇನೆ೦ದರೆ, ಆತನು/ಆಕೆಯು ತನ್ನ ಸ೦ಗಾತಿಯೊಡನೆ ಕೆಲವೊ೦ದು ಅತ್ಯ೦ತ ಸನಿಹದ ಅಥವಾ ಆತ್ಮೀಯ ಕ್ಷಣಗಳನ್ನು ಕಳೆಯುವುದಕ್ಕಾಗಿ ಹಾತೊರೆಯುತ್ತಿರುವನು/ಳು ಎ೦ದಾಗಿರುತ್ತದೆ.

ಯುವತಿ

ಯುವತಿ

ಕನಸಿನಲ್ಲಿ ವ್ಯಕ್ತಿಯೋರ್ವರು ಯುವತಿಯನ್ನು ಕಾಣುತ್ತಿದ್ದರೆ, ಅದು ಆ ವ್ಯಕ್ತಿಯ ಪಾಲಿಗೆ ಶುಭಶಕುನವಾಗಿರುತ್ತದೆ. ಇದರರ್ಥವೇನೆ೦ದರೆ, ಆ ವ್ಯಕ್ತಿಯು ತನ್ನ ಭಾವೀ ಜೀವನದಲ್ಲಿ ಅತ್ಯ೦ತ ಯಶಸ್ವಿಯಾಗುತ್ತಾರೆ೦ದಾಗಿರುತ್ತದೆ.

English summary

Interpreting Your Dreams Through Astrology!

Dreams have always fascinated us. Everyday we all dream about something or the other. While some of these dreams make sense to us, others are mostly vague and forgotten. It is extremely interesting to find out what the different objects in our dream actually mean. Let us have a look:
X
Desktop Bottom Promotion