For Quick Alerts
ALLOW NOTIFICATIONS  
For Daily Alerts

ಆರೋಗ್ಯಯುತ ದಿನದ ಪ್ರಾರಂಭ ನಿಮ್ಮದಾಗಬೇಕಿದ್ದಲ್ಲಿ ಹೀಗೆ ಮಾಡಿ

By Super
|

ಬೆಳಿಗ್ಗೆ ಏಳುವುದು ಸ್ವಲ್ಪ ತಡವಾಗಿಬಿಟ್ಟಿತು,ತಿಂಡಿ ತಿನ್ನಲಾಗಲಿಲ್ಲ,ಕೆಲಸಕ್ಕೆ ಎಂದಿನಂತೆ ತಡವಾಯಿತು ಎಂಬುದು ನಿಮ್ಮ ದಿನಚರಿಯೇ?ಇದರ ಜೊತೆಗೆ ನಿಮ್ಮ ಸಹೋದ್ಯೋಗಿ ಉತ್ಸಾಹಿಯಾಗಿ ಬೆಳಗ್ಗೆ ಬೇಗ ಎದ್ದು ದಿನದ ಆರಂಭವನ್ನು ನಗುನಗುತ್ತಾ ಪ್ರಾರಂಭಿಸಿ,ಸರಿಯಾದ ಸಮಯಕ್ಕೆ ಆಫೀಸ್ ಗೆ ಬಂದು ತನ್ನ ದಿನದ ಬಗ್ಗೆ ಹೇಳುತ್ತಿದ್ದರೆ ನಿಮಗೆ ಅವರ ಬಗ್ಗೆ ಅಸೂಯೆ ಹುಟ್ಟುವುದರ ಜೊತೆಗೆ ನಾನೂ ಅವರಂತೆ ಇದ್ದಿದ್ದರೆ ಎನಿಸಬಹುದಲ್ಲವೇ?

ಇದಕ್ಕೆ ನಮ್ಮ ಸಂಪೂರ್ಣ ಸಮರ್ಪಣೆ ಅಗತ್ಯ.ನಿಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ಬೇಗ ಏಳುವಂತೆ ತರಭೇತಿ ನೀಡಬೇಕು, ಹೀಗೆ ಮಾಡಿದಲ್ಲಿ ಬೇಗ ಏಳಲು ಸಾಧ್ಯ.ಈ ಕೆಳಗೆ ನಾವು ಆರು ಸಲಹೆಗಳನ್ನು ನೀಡಿದ್ದೇವೆ.ಇದನ್ನು ಅನುಸರಿಸಿದಲ್ಲಿ ಮುಂಜಾನೆ ಏಳುವುದು ನಿಮಗೆ ಕಷ್ಟವಾಗಲಿಕ್ಕಿಲ್ಲ.

ಸೋನಾಕ್ಷಿ ಸಿನ್ಹಾರ ತೂಕ ಇಳಿಸುವ ರಹಸ್ಯಗಳನ್ನು ನೀವೂ ತಿಳಿಯಿರಿ!

ಮಧ್ಯರಾತ್ರಿಯವರೆಗೆ ಎಚ್ಚರಿರುವುದಕ್ಕೆ ನೋ ಹೇಳಿಬಿಡಿ:

ಮಧ್ಯರಾತ್ರಿಯವರೆಗೆ ಎಚ್ಚರಿರುವುದಕ್ಕೆ ನೋ ಹೇಳಿಬಿಡಿ:

ಹೌದು ನಿಮಗೆ ಇದು ಗೊತ್ತೇ ಇದೆ.ನಿಮ್ಮ ದೇಹ ಮತ್ತು ಮನಸ್ಸನ್ನು ರಾತ್ರಿ ಬೇಗ ಮಲಗಲು ಒತ್ತಾಯಿಸಿ.ಬೇಗ ನಿದ್ದೆ ಮಾಡಿದಲ್ಲಿ ಬೆಳಿಗ್ಗೆ ಬೇಗ ಏಳುವುದು ಕಷ್ಟವಲ್ಲ.ರಾತ್ರಿ ದಿನಕ್ಕಿಂತ ಒಂದು ಗಂಟೆ ಮೊದಲೇ ನಿದ್ರಿಸುವುದು ರೂಡಿ ಮಾಡಿಕೊಳ್ಳಿ.

ಬೆಳಗಿನ ತಿಂಡಿ ಮರೆಯಬೇಡಿ:

ಬೆಳಗಿನ ತಿಂಡಿ ಮರೆಯಬೇಡಿ:

ಬೆಳಗಿನ ತಿಂಡಿಯನ್ನು ತಿನ್ನದೇ ಇರಬೇಡಿ.ಬೆಳಗಿನ ತಿಂಡಿ ನಿಮ್ಮ ದಿನವನ್ನು ಉತ್ಸಾಹಯುತವಾಗಿ ಪ್ರಾರಂಭಿಸಲು ಅವಕಾಶ ಮಾಡಿಕೊಡುತ್ತದೆ.ಸ್ವಲ್ಪವಾದರೂ ತಿಂಡಿ ತಿನ್ನುವುದನ್ನು ರೂಡಿಸಿಕೊಳ್ಳಿ.

ಧನಾತ್ಮಕ ಯೋಚನೆ ಇರಲಿ:

ಧನಾತ್ಮಕ ಯೋಚನೆ ಇರಲಿ:

ಮಲಗುವ ಮೊದಲು ನಾನು ಬೆಳಿಗ್ಗೆ ಬೇಗ ಏಳಬೇಕು ಎಂಬುದಕ್ಕಿಂತ ಬೆಳಿಗ್ಗೆ ಬೇಗ ಏಳುತ್ತೇನೆ ಎಂದು ಮೊದಲೇ ನಿರ್ಧರಿಸಿಕೊಳ್ಳಿ.ನೀವು ಮೊದಲೇ ಇದನ್ನು ದೃಢ ನಿರ್ಧಾರ ಮಾಡಿಕೊಂಡಲ್ಲಿ ಬೇಗ ಏಳುವುದು ಕಷ್ಟವಾಗುವುದಿಲ್ಲ.

ಸ್ವಲ್ಪ ನಡೆಯಿರಿ:

ಸ್ವಲ್ಪ ನಡೆಯಿರಿ:

ನೀವು ಬೆಳಿಗ್ಗೆ ಬೇಗ ಏಳಬೇಕು ಎಂಬುದೇ ನಿಮ್ಮ ನಿರ್ಧಾರವಾಗಿದ್ದರೆ ಅಲಾರಂ ಅನ್ನು ನಿಮ್ಮ ಬೆಡ್ ನ ಪಕ್ಕ ಇಟ್ಟುಕೊಳ್ಳಬೇಡಿ.ಸ್ವಲ್ಪ ದೂರದಲ್ಲಿ ಅಲರಾಂ ಇಟ್ಟುಕೊಂಡಾಗ ಬೆಳಿಗ್ಗೆ ಎದ್ದು ಅದನ್ನು ಆಫ್ ಮಾಡಲು ನಡೆದು ಹೋದಾಗ ನಿದ್ದೆ ನಿಮ್ಮಿಂದ ದೂರ ಹೋಗಿರುತ್ತದೆ.

ಬೆಳಕು ಬೀಳಲಿ:

ಬೆಳಕು ಬೀಳಲಿ:

ಬೆಳಿಗ್ಗೆ ಏಳಲು ಕಷ್ಟ ಎನಿಸಿದಲ್ಲಿ ಬೆಳಗಿನ ಸೂರ್ಯನ ಕಿರಣಗಳು ನೇರವಾಗಿ ನಿಮಗೆ ಬೀಳುವಂತೆ ಇರಲಿ ಆಗ ನಿಮಗೆ ಏಳುವುದು ಸುಲಭವಾಗುತ್ತದೆ.ನೀವು ಕಿಟಕಿ ಮುಚ್ಚಿದ್ದರೂ ಕೂಡ ಇದಕ್ಕೋಸ್ಕರವೇ ೫೦ ರಿಂದ ೨೦೦ ಡಾಲರ್ ನಲ್ಲಿ ಬಾಕ್ಸ್ ದೊರಕುತ್ತದೆ.ನಿಮಗೆ ಹಣ ವ್ಯಯಿಸಲು ಇಷ್ಟವಿಲ್ಲದಿದ್ದಲ್ಲಿ ನಿಮ್ಮ ಬೆಡ್ ಅನ್ನು ಕಿಟಕಿಯ ಬಳಿಯಲ್ಲೇ ಹಾಕಿಕೊಳ್ಳಿ ಮತ್ತು ಬೆಳಗಿನ ಸಮಯದಲ್ಲಿ ಕಿಟಕಿ ತೆರೆಯಿರಿ.

ಬೇಗ ಏಳಲು ಆಪ್ ಇದೆ

ಬೇಗ ಏಳಲು ಆಪ್ ಇದೆ

ನೀವು ಸ್ಮಾರ್ಟ್ ಅಲಾರಂ ಅಥವಾ ಮ್ಯಾಥ್ ಅಲಾರಂ ಬಗ್ಗೆ ಕೇಳಿದ್ದೀರಾ ? ಇದನ್ನು ಫೋನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಬಳಸಿನೋಡಿ.ಇದು ಬೇಗ ಏಳಲು ನಿಜವಾಗಿಯೂ ಸಹಕರಿಸುತ್ತದೆ.ಅಲಾರಂ ಅನ್ನು ನಿಲ್ಲಿಸಲು ನೀವು ಇದರಲ್ಲಿರುವ ಗಣಿತವನ್ನು ಬಿಡಿಸಬೇಕು ಹೀಗೆ ಮಾಡಿದಾಗ ಮಾತ್ರ ಅಲರಾಂ ನಿಲ್ಲುತ್ತದೆ.ಹೀಗೆ ಮಾಡುವುದರಿಂದ ನಿಮ್ಮ ಮೆದುಳು ಗಣಿತದ ಬಗ್ಗೆ ತಲೆ ಓಡಿಸುತ್ತದೆ ಮತ್ತು ನಿಮ್ಮ ನಿದ್ದೆ ಓಡಿಸುತ್ತದೆ.

English summary

How to Become a morning person

You’re late to work, didn’t eat breakfast, and in a cranky mood again because you decided to hit the snoozer an extra few times. Meanwhile, your bubbly coworker is chattering away about how productive their morning before work
Story first published: Saturday, April 19, 2014, 15:28 [IST]
X
Desktop Bottom Promotion