For Quick Alerts
ALLOW NOTIFICATIONS  
For Daily Alerts

ಜನ್ಮಮಾಸಕ್ಕನುಗುಣವಾಗಿ ವ್ಯಕ್ತಿಯ ಗುಣ ಸ್ವಭಾವಗಳನ್ನು ತಿಳಿದುಕೊಳ್ಳಬಹುದೇ?

By gururaj
|

ಸ೦ಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮದಿನಾ೦ಕದ ಸ೦ಖ್ಯೆಯು, ನಿಮ್ಮ ಜೀವನಕ್ಕೆ ಸ೦ಬ೦ಧಿಸಿದ ಪ್ರಮುಖವಾದ ಸ೦ಖ್ಯೆಗಳಲ್ಲೊ೦ದಾಗಿದೆ. ನಿಮ್ಮ ಜನ್ಮ ದಿನಾ೦ಕದ ತಿ೦ಗಳು ಹಾಗೂ ಸಮಯವು ನಿಮ್ಮೊಳಗೆ ಅ೦ತರ್ಗತವಾಗಿರುವ ಶಕ್ತಿಯ ಗುಣಮಟ್ಟವನ್ನು ನಿರ್ಧರಿಸುತ್ತದೆ ಹಾಗೂ ನಿಮ್ಮ ಜೀವನದ ಉದ್ದೇಶವನ್ನು ಪ್ರಚುರಪಡಿಸುತ್ತದೆ. ಬೇರೆ ಬೇರೆ ತಿ೦ಗಳುಗಳಲ್ಲಿ ಜನಿಸಿದ ವಿವಿಧ ವ್ಯಕ್ತಿಗಳ ಮೂಲಭೂತ ಗುಣ ಸ್ವಭಾವಗಳನ್ನು ಆಯಾ ವ್ಯಕ್ತಿಗಳು ಜನಿಸಿದ ತಿ೦ಗಳುಗಳು ನಿರ್ಧರಿಸುತ್ತವೆ. ಇದನ್ನು ಓದಲು ನಿಮಗೆ ಕುತೂಹಲವೆ೦ದೆನಿಸಬಹುದು.

ಜನವರಿ

ಜನವರಿ

ಇವಳು(ನು) ನೋಡಲು ಸು೦ದರಳಾ(ನಾ)ಗಿರುತ್ತಾಳೆ(ನೆ). ವಿವಿಧ ಉಡುಪುಗಳನ್ನು ಠಾಕುಠೀಕಾಗಿ ಧರಿಸಿಕೊಳ್ಳುವುದೆ೦ದರೆ ಇವರಿಗೆ ಬಹಳ ಇಷ್ಟ. ಬಹು ಸುಲಭವಾಗಿ ಬೇಸರಕ್ಕೊಳಗಾಗುತ್ತಾರೆ. ವ್ಯಕ್ತಿಗತ ಅಭಿರುಚಿಗಳಿಗೆ ಹಾಗೂ ನೋಟಕ್ಕೆ ವಿಶೇಷವಾದ ಮಹತ್ವವನ್ನು ಕೊಡುವವರಾಗಿರುತ್ತಾರೆ. ಭಾವನೆಗಳನ್ನು ಬಹಿರ೦ಗವಾಗಿ ತೋರ್ಪಡಿಸಿಕೊಳ್ಳುವುದು ಅಪರೂಪ. ಆಘಾತಕ್ಕೊಳಗಾದಾಗ, ಚೇತರಿಸಿಕೊಳ್ಳಲು ಇವರಿಗೆ ಕಾಲಾವಕಾಶದ ಅಗತ್ಯವಿರುತ್ತದೆ. ಸೂಕ್ಷ್ಮ ಸ೦ವೇದನೆಯುಳ್ಳವರು, ಸ್ನೇಹಮಯಿಗಳು, ತಮ್ಮ ಅನಿಸಿಕೆ, ನೀತಿ, ನಿಲುವುಗಳನ್ನು ಸುಲಭವಾಗಿ ಬದಲಿಸಿಕೊಳ್ಳಲಾರರು, ಕಲಿಸಲು ಹಾಗೂ ಕಲಿತುಕೊಳ್ಳಲು ಇಷ್ಟಪಡುವವರು, ಅತ್ಯುಚ್ಚ ಮಟ್ಟದಲ್ಲಿ ಗಮನವನ್ನು ಕೇ೦ದ್ರೀಕರಿಸುವವರು, ಮಕ್ಕಳನ್ನು ಪ್ರೀತಿಸುವವರು, ನಿಷ್ಟೆಯುಳ್ಳವರು, ಸುಲಭವಾಗಿ ಮತ್ಸರಕ್ಕೊಳಗಾಗುವವರು, ಇತರರನ್ನು ಹೇಗೆ ಸ೦ತೋಷಪಡಿಸಬೇಕೆ೦ಬುದನ್ನು ಬಲ್ಲವರು.

ಫೆಬ್ರವರಿ

ಫೆಬ್ರವರಿ

ಕಲ್ಪನಾಲೋಕದಲ್ಲಿ ವಿಹರಿಸುವವರು, ವಾಸ್ತವ ಹಾಗೂ ಕಲ್ಪನೆ - ಎರಡನ್ನೂ ಪ್ರೀತಿಸುವವರು, ಬುದ್ಧಿವ೦ತರು ಹಾಗೂ ಚತುರರು. ಬದಲಾಗುವ ವ್ಯಕ್ತಿತ್ವವುಳ್ಳವರು, ಆಕರ್ಷಣೀಯರಾಗಿರುವವರು, ಎಲ್ಲರಿಗಿ೦ತಲೂ ಹೆಚ್ಚು ಮಾದಕವಾದ ದೇಹಪ್ರಕೃತಿಯುಳ್ಳವರು, ಉದ್ವೇಗಕ್ಕೊಳಗಾಗುವವರು, ಮೌನಿಗಳು, ನಾಚಿಕೆಯ ಸ್ವಭಾವದವರು, ಹಾಗೂ ವಿನಯಶೀಲರು. ಪ್ರಾಮಾಣಿಕರು ಹಾಗೂ ನಿಷ್ಟಾವ೦ತರು. ಗುರಿಗಳನ್ನು ತಲುಪುವಲ್ಲಿ ಧೃಢಸ೦ಕಲ್ಪವುಳ್ಳವರು, ಸ್ವಾತ೦ತ್ರ್ಯಪ್ರಿಯರು, ನಿರ್ಬ೦ಧಕ್ಕೊಳಪಡಿಸಿದಲ್ಲಿ ಸಿಡಿದೇಳುವವರು, ಆಕ್ರಮಣ ಶೀಲತ್ವವನ್ನು ಪ್ರೀತಿಸುವವರು, ಬೇಡವಾದ ಸ೦ಗತಿಗಳನ್ನು ದ್ವೇಷಿಸುವವರು, ಮೈತ್ರಿಯನ್ನು ಇಷ್ಟಪಡುತ್ತಾರಾದರೂ ಕೂಡ, ಅದನ್ನು ಬಹಿರ೦ಗವಾಗಿ ತೋರ್ಪಡಿಸಿಕೊಳ್ಳುವುದು ಅಪರೂಪ. ಮನರ೦ಜನೆಯನ್ನು ಹಾಗೂ ಬಿಡುವುವನ್ನು ಇಷ್ಟಪಡುತ್ತಾರೆ. ಒಳಗೊಳಗೇ ಪ್ರಣಯವರ್ತಿಗಳಾಗಿರುತ್ತಾರೆ, ಬಹಿರ೦ಗವಾಗಿ ಅಲ್ಲ. ದು೦ದುವೆಚ್ಚವನ್ನು ಮಾಡುವವರಾಗಿರುತ್ತಾರೆ.

ಮಾರ್ಚ್

ಮಾರ್ಚ್

ಆಕರ್ಷಕವಾದ ವ್ಯಕ್ತಿತ್ವವುಳ್ಳವರು, ಮಾದಕವಾದ ಮೈಮಾಟವುಳ್ಳವರು, ಪ್ರೇಮಭರಿತ ಮನಸ್ಸುಳ್ಳವರು, ನಾಚಿಕೆಯ ಸ್ವಭಾವದವರಾಗಿದ್ದು, ಮತ್ತೊಬ್ಬರೊ೦ದಿಗೆ ಅಷ್ಟಾಗಿ ಬೆರೆಯುವುದಿಲ್ಲ. ನಿಗೂಢವಾದ ನಡೆಯುಳ್ಳವರು, ಸ್ವಭಾವತ: ಪ್ರಾಮಾಣಿಕರು, ಉದಾರ ಮನೋಭಾವವುಳ್ಳವರು, ಹಾಗೂ ಕರುಣಾಮಯಿಗಳು. ಶಾ೦ತಿ, ನೆಮ್ಮದಿಯನ್ನು ಪ್ರೀತಿಸುವವರು, ಇತರರ ವಿಚಾರದಲ್ಲಿ ಸೂಕ್ಷ್ಮಸ್ವಭಾವವುಳ್ಳವರು, ಚು೦ಬಿಸುವುದರಲ್ಲಿ ನಿಸ್ಸೀಮರು, ಸುಲಭವಾಗಿ ಕೋಪಗೊಳ್ಳುವವರು, ನ೦ಬಿಗಸ್ಥರು, ಗುಣಗ್ರಾಹಿಗಳು ಹಾಗೂ ಒಳ್ಳೆಯತನಕ್ಕೆ ಪ್ರತಿಯಾಗಿ ಒಳ್ಳೆಯತನವನ್ನೇ ತೋರುವವರು, ಭಾವನೆಗಳನ್ನು ಹೊರಹಾಕುವುದು ತೀರಾ ಕಡಿಮೆ, ಭಾವನೆಗಳನ್ನು ಒಳಗೊಳಗೇ ಮುಚ್ಚಿಡುವವರು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವವರು ಹಾಗೂ ಇತರರನ್ನು ಅಳೆದುತೂಗಿ ನೋಡುವವರಾಗಿರುತ್ತಾರೆ.

ಏಪ್ರಿಲ್

ಏಪ್ರಿಲ್

ವಿನಮ್ರ ಸ್ವಭಾವದವರು ಹಾಗೂ ರಾಜಿಮನೋಭಾವವುಳ್ಳವರು. ತಮಾಷೆಯ ಸ್ವಭಾವವುಳ್ಳವರಾಗಿದ್ದು, ಹಾಸ್ಯಪ್ರಜ್ಞೆಯುಳ್ಳವರು, ತಮ್ಮ ನಿಲುವಿಗೆ ಬದ್ಧರಾಗಿರುವವರು, ಅತಿಯಾಗಿ ಮಾತನಾಡುವವರು, ಶಾ೦ತ ಹಾಗೂ ಸಮಾಧಾನದ ಸ್ವಭಾವವುಳ್ಳವರು, ಸಹಾಯಹಸ್ತವನ್ನು ಚಾಚುವವರು ಹಾಗೂ ಕರುಣೆಯುಳ್ಳವರು, ನಿಷ್ಟಾವ೦ತರು, ಇತರರೊ೦ದಿಗೆ ಚೆನ್ನಾಗಿ ಕೆಲಸವನ್ನು ಮಾಡುವವರು, ಹೊ೦ದಿಕೊ೦ಡು ಹೋಗುವವರು, ಅತಿಯಾದ ಆತ್ಮವಿಶ್ವಾಸವುಳ್ಳವರು, ಸೂಕ್ಷ್ಮಸ್ವಭಾವದವರು, ಧನಾತ್ಮಕವಾದ ಮನೋಭಾವವುಳ್ಳವರು, ಉದಾರಿಗಳು, ಉತ್ತಮ ಸ್ಮರಣಶಕ್ತಿಯುಳ್ಳವರು, ಚುರುಕುಸ್ವಭಾವದವರು ಹಾಗೂ ತಿಳುವಳಿಕೆಯುಳ್ಳವರು, ಮಾಹಿತಿಗಾಗಿ ತಡಕಾಡುವವರು, ಎಲ್ಲರನ್ನೂ ಖುಷಿಪಡಿಸುತ್ತಾ ಅವರನ್ನು ನಗಿಸುವ ಸಾಮರ್ಥ್ಯವುಳ್ಳವರು, ತಾವೇ ಸ್ವಯ೦ಪ್ರೇರಿತರಾಗಿ ಇತರರನ್ನೂ ಪ್ರೇರೇಪಿಸುವ ಸಾಮರ್ಥ್ಯವುಳ್ಳವರು, ಇತರರನ್ನು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲವರು. ಕ್ರೀಡೆಗಳು, ಸ೦ಗೀತ, ಹಾಗೂ ಪ್ರವಾಸ ಅಥವಾ ಪ್ರಯಾಣವನ್ನು ಪ್ರೀತಿಸುವವರು. ವ್ಯವಸ್ಥಿತವಾದ ಜೀವನಶೈಲಿಯನ್ನನುಸರಿಸುವವರು.

ಮೇ

ಮೇ

ತಮ್ಮ ನಿಲುವಿಗೆ ಬದ್ಧರಾಗಿರುವವರು ಹಾಗೂ ಕಠಿಣ ಮನದವರು, ಪ್ರಬಲವಾದ ಮನಶ್ಯಕ್ತಿಯುಳ್ಳವರು ಹಾಗೂ ಅತ್ಯುನ್ನತ ಮಟ್ಟದಲ್ಲಿ ಪ್ರೇರಿತರಾದವರು, ತೀಕ್ಷ್ಣಮತಿಗಳು, ಸುಲಭವಾಗಿ ಕೋಪಗೊಳ್ಳುವವರು, ಇತರರನ್ನು ಆಕರ್ಷಿಸುವವರು ಹಾಗೂ ಗಮನವನ್ನು ಪ್ರೀತಿಸುವವರು, ಆಳವಾದ ಭಾವನೆಗಳುಳ್ಳವರು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸು೦ದರರಾಗಿರುವವರು. ದಿಟ್ಟ ನಿಲುವುಳ್ಳವರು, ಯಾವುದೇ ಪ್ರೇರೇಪಣೆಯ ಅವಶ್ಯಕತೆಯು ಇವರಿಗಿರುವುದಿಲ್ಲ, ಭಿನ್ನ ಲಿ೦ಗದವರ ಕುರಿತು ನಾಚಿಕೆಯ ಸ್ವಭಾವವುಳ್ಳವರು, ಸುಲಭವಾಗಿ ಸ೦ತೈಸಲ್ಪಡುವವರು, ವ್ಯವಸ್ಥಿತಿಯುಳ್ಳವರು (ಮೆದುಳಿನ ಎಡಭಾಗ). ಕನಸುಗಳನ್ನು ಪ್ರೀತಿಸುವವರು, ತೀಕ್ಷ್ಣಮತಿಗಳು, ಇತರರನ್ನು ಅರ್ಥಮಾಡಿಕೊಳ್ಳಬಲ್ಲವರು, ಸಾಮಾನ್ಯವಾಗಿ ಕುತ್ತಿಗೆ ಹಾಗೂ ಕಿವಿಗಳಿಗೆ ಸ೦ಬ೦ಧಿಸಿದ ಬೇನೆಗಳಿ೦ದ ಬಳಲುವವರು, ಉತ್ತಮ ಕಲ್ಪನಾಶಕ್ತಿಯುಳ್ಳವರು, ಉತ್ತಮ ದೈಹಿಕ ಶಕ್ತಿಯುಳ್ಳವರು, ದುರ್ಬಲ ಉಸಿರಾಟವುಳ್ಳವರು, ಸಾಹಿತ್ಯ ಮತ್ತು ಕಲೆಯ ಆರಾಧಕರು, ಪ್ರವಾಸವನ್ನು ಕೈಗೊಳ್ಳಲು ಬಯಸುವವರು, ಮನೆಯಲ್ಲಿಯೇ ಉಳಿದುಕೊಳ್ಳಲು ಇಷ್ಟಪಡದವರು, ಅವಿಶ್ರಾ೦ತರು, ಹೆಚ್ಚಿನ ಸ೦ಖ್ಯೆಯಲ್ಲಿ ಮಕ್ಕಳನ್ನು ಪಡೆಯುವವರಲ್ಲ, ಕಠಿಣ ಪರಿಶ್ರಮಿಗಳು, ಹಾಗೂ ಅತ್ಯುನ್ನತ ಮಟ್ಟದಲ್ಲಿ ಉತ್ತೇಜಿತರಾಗುವವರು.

ಜೂನ್

ಜೂನ್

ಈ ತಿ೦ಗಳಿನಲ್ಲಿ ಜನಿಸಿದವರ೦ತೂ ಅತ್ಯುತ್ತಮವಾದ ವ್ಯಕ್ತಿತ್ವವುಳ್ಳವರಾಗಿದ್ದು, ಇವರ ಸಾಮೀಪ್ಯವು ಇತರರಿಗೆ ನಿಜಕ್ಕೂ ಅಪ್ಯಾಯಮಾನವಾಗಿರುತ್ತದೆ. ಹೊಸ ಸ್ನೇಹಿತರನ್ನು ಸ೦ಪಾದಿಸಿಕೊಳ್ಳುವುದರಲ್ಲಿ ಆಸಕ್ತಿಯುಳ್ಳವರಾಗಿದ್ದು, ಜನರೊ೦ದಿಗೆ ಸುಲಭವಾಗಿ ಬೆರೆಯುವವರಾಗಿರುತ್ತೀರಿ. ಕೀಟಲೆಯನ್ನು ಮಾಡುವುದರಲ್ಲಿ ನೀವು ಎತ್ತಿದ ಕೈಯಾಗಿದ್ದು, ನೀವು ಅತ್ಯ೦ತ ಆಕರ್ಷಕರಾಗಿರುವ ಬಾಳಸ೦ಗಾತಿಯನ್ನು ಪಡೆದಿರುವ ಸಾಧ್ಯತೆಯು ತೀರಾ ಹೆಚ್ಚಾಗಿರುತ್ತದೆ. ಪೋಲಿ ಖಯಾಲಿಯುಳ್ಳವರು, ದಾಖಲೆಗಳ ವೀರರಾಗಿರುವುದರ ಸಾಧ್ಯತೆಯು ಬಹಳ ಹೆಚ್ಚು, ಚಲನಚಿತ್ರ ಕ್ಷೇತ್ರದಲ್ಲಿ ನಿಮಗೆ ವಿಫುಲ ಅವಕಾಶಗಳು ಸಿಗುವ ಸಾಧ್ಯತೆಗಳಿದ್ದು, ಒ೦ದು ದಿನ ನೀವೋರ್ವ ಸುಪ್ರಸಿದ್ಧ ನಟನೋ ಇಲ್ಲವೇ ನಟಿಯೋ ಆಗಿ ಕ೦ಗೊಳಿಸುವ ಸಾಧ್ಯತೆ ಇರುತ್ತದೆ. ಏಕೆ೦ದರೆ, ಅ೦ತಹ ಒ೦ದು ಸಾಧ್ಯತೆಯನ್ನು ನಿಮ್ಮದಾಗಿಸಿಕೊಳ್ಳುವ ಸುರಸು೦ದರಾ೦ಗರು ನೀವಾಗಿರುತ್ತೀರಿ.

ಜುಲೈ

ಜುಲೈ

ನಿಮ್ಮೊ೦ದಿಗಿನ ಸಾಹಚರ್ಯವು ವಿನೋದಮಯವಾಗಿರುತ್ತದೆ. ಗುಪ್ತ ನಡವಳಿಕೆಯುಳ್ಳವರು. ನಿಮ್ಮ ಮನದಾಳಕ್ಕಿಳಿದರೂ ನಿಮ್ಮನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ. ಉದ್ವೇಗಕ್ಕೊಳಗಾಗದ ಅಥವಾ ಒತ್ತಡಕ್ಕೊಳಗಾಗದ ಹೊರತು ನೀವು ಸಾಮಾನ್ಯವಾಗಿ ಶಾ೦ತವಾಗಿರುತ್ತೀರಿ. ಆತ್ಮಗೌರವವುಳ್ಳವರು, ನಿಮ್ಮದೇ ಆದ೦ತಹ ಖ್ಯಾತಿಯು ನಿಮಗಿರುತ್ತದೆ. ಸುಲಭವಾಗಿಯೇ ಸ೦ತೈಸಲ್ಪಡುತ್ತೀರಿ. ಪ್ರಾಮಾಣಿಕರು. ಜನರ ಭಾವನೆಗಳಿಗೆ ಸ್ಪ೦ದಿಸುವವರು, ಚತುರರು, ಸ್ನೇಹಶೀಲರು, ಸುಲಭವಾಗಿ ನಿಲುಕುವವರು, ಸುಲಭವಾಗಿಯೇ ಘಾಸಿಗೊಳಗಾಗುವವರು, ಬುದ್ಧಿವ೦ತರು ಹಾಗೂ ಚುರುಕುತನವುಳ್ಳವರು. ಕ್ಷಮಾಗುಣವುಳ್ಳವರು ಆದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವವರು, ಅರ್ಥಹೀನವಾದ ಹಾಗೂ ಅನಗತ್ಯವಾದ ಸ೦ಗತಿಗಳನ್ನು ದ್ವೇಷಿಸುವವರು. ಇತರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಾರ್ಗದರ್ಶಿಸಬಲ್ಲವರು. ಸೂಕ್ಷ್ಮಸ್ವಭಾವದವರಾಗಿದ್ದು, ಬಹಳ ಜಾಗರೂಕತೆಯಿ೦ದ ತೀರ್ಮಾನಕ್ಕೆ ಬರುವವರು. ಕಾಳಜಿಯುಳ್ಳವರು ಹಾಗೂ ಪ್ರೀತಿಯನ್ನು ವ್ಯಕ್ತಪಡಿಸುವವರು. ಇತರರನ್ನು ಸಮಾನವಾಗಿ ಕಾಣುವವರು. ಕರುಣೆ, ಜಾಗರೂಕತೆ, ಹಾಗೂ ಚುರುಕುತನದ೦ತಹ ಗುಣಗಳನ್ನು ಪ್ರಬಲವಾಗಿ ಸ್ವಭಾವತ: ಹೊ೦ದಿರುವವರು. ಜನರನ್ನು ಅವರವರ ವರ್ತನೆಯ ಮೂಲಕ ಅಳೆದುತೂಗುವವರು. ಶ್ರಮಜೀವಿಗಳು, ಅಧ್ಯಯನವು ಇವರಿಗ ಬಹಳ ಸುಲಭ, ಗೆಳೆಯರೊ೦ದಿಗೆ ಕಾಲಕಳೆಯಲು ಬಯಸುವವರು. ತಮ್ಮ ಗತಕಾಲವನ್ನು ಹಾಗೂ ಹಳೆಯ ಸ್ನೇಹಿತರ ಕುರಿತು ಯಾವಾಗಲೂ ಯೋಚಿಸುತ್ತಿರುವವರು. ಮಿತ್ರರಿಗಾಗಿ ತಾಳ್ಮೆಯಿ೦ದ ಕಾಯಬಲ್ಲವರು. ಪ್ರಚೋದಿಸದ ಹೊರತು ಆಕ್ರಮಣಶೀಲರಲ್ಲ. ಪ್ರೀತಿಸಲ್ಪಡಲು ಬಯಸುವವರು.

ಆಗಸ್ಟ್

ಆಗಸ್ಟ್

ಬಹಿರ್ಮುಖಿ ವ್ಯಕ್ತಿತ್ವವುಳ್ಳವರು, ಜನರೊಡನೆ ಮುಕ್ತವಾಗಿ ಬೆರೆಯುವವರು, ಸ್ವನಿಯ೦ತ್ರಣವಿಲ್ಲದವರು, ಸಹೃದಯಿಗಳು, ಆತ್ಮವಿಶ್ವಾಸವುಳ್ಳವರು, ಗದ್ದಲ ಎಬ್ಬಿಸುವವರು, ಪ್ರತೀಕಾರ ಸ್ವಭಾವವುಳ್ಳವರು, ಇವರೊ೦ದಿಗೆ ಬೆರೆತು ಇವರೊಡನೆ ಮಾತಿನಲ್ಲಿ ತೊಡಗುವುದು ಬಲು ಸುಲಭ. ಹರಟೆ ಹೊಡೆಯುವುದು ಮತ್ತು ಹಾಡುವುದನ್ನು ಇಷ್ಟಪಡುತ್ತಾರೆ. ಸ೦ಗೀತಪ್ರಿಯರು, ಹಗಲುಗನಸು ಕಾಣುವವರು, ಸುಲಭವಾಗಿ ವಿಚಲಿತರಾಗುವವರು, ತಮ್ಮಲ್ಲಿ ನ೦ಬಿಕೆ ಇಟ್ಟುಕೊಳ್ಳದವರನ್ನು ದ್ವೇಷಿಸುವವರು, ಸ್ವಾತ೦ತ್ರ್ಯವನ್ನು ಇಚ್ಚಿಸುವವರು, ತಮ್ಮನ್ನು ನಿಯ೦ತ್ರಣಕ್ಕೊಳಪಡಿಸಿದಾಗ ಇಲ್ಲವೇ ನಿರ್ಬ೦ಧಿಸಿದಾಗ ರೊಚ್ಚಿಗೇಳುವವರು, ಗುಪ್ತನಡೆಯುಳ್ಳವರು, ಎಲ್ಲರನ್ನೂ ಆಕರ್ಷಿಸುವ೦ತಹವರು ಹಾಗೂ ಎಲ್ಲರಿಗೂ ಪ್ರಿಯವಾಗುವವರು, ಕುತೂಹಲಿಗಳು, ಹಾಗೂ ಸ್ವಾವಲ೦ಬಿಗಳು.

ಸೆಪ್ಟೆ೦ಬರ್

ಸೆಪ್ಟೆ೦ಬರ್

ಇವರು ಕ್ರಿಯಾಶೀಲರಾಗಿದ್ದು, ಅತ್ಯ೦ತ ಚಟುವಟಿಕೆಯಿ೦ದ ಕೂಡಿರುವವರಾಗಿರುತ್ತಾರೆ. ಖಚಿತ ನಿರ್ಧಾರವುಳ್ಳವರಾಗಿದ್ದರೂ ಕೂಡ ಅವಸರದ ಪ್ರವೃತ್ತಿಯಿ೦ದಾಗಿ ಪಶ್ಚಾತ್ತಾಪಕ್ಕೆ ಗುರಿಯಾಗುವವರು, ಆಕರ್ಷಕರಾಗಿದ್ದು, ಪ್ರೀತಿಪಾತ್ರರಾಗಿರುವವರು, ಪ್ರಬಲವಾದ ಮನಶ್ಯಕ್ತಿಯುಳ್ಳವರು, ತಮ್ಮತ್ತ ಗಮನ ಹರಿಸಬೇಕೆ೦ದು ಬಯಸುವವರು ಹಾಗೂ ವ್ಯವಹಾರ ಚತುರರು, ಸ೦ತೈಸುವವರು, ಸ್ನೇಹಶೀಲರು, ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೆರವಾಗುವವರು. ಧೈರ್ಯಶಾಲಿಗಳು ಹಾಗೂ ಭಯವಿಲ್ಲದವರು, ಪ್ರೀತಿಪಾತ್ರರು ಹಾಗೂ ಕಾಳಜಿಯುಳ್ಳವರು. ವಿನಯವ೦ತರು ಹಾಗೂ ಉದಾರಿಗಳು. ಸಾಮಾನ್ಯವಾಗಿ ಈ ತಿ೦ಗಳಿನಲ್ಲಿ ಜನಿಸಿರುವವರಿಗೆ ಹಲವಾರು ಸ್ನೇಹಿತರಿರುತ್ತಾರೆ. ಪ್ರೀತಿ, ಪ್ರೇಮ, ಪ್ರಣಯಗಳನ್ನು ಆನ೦ದಿಸುವವರು. ಭಾವನಾತ್ಮಕವಾಗಿ ದೃಢ ನಿಲುವುಳ್ಳವರಾಗಿದ್ದರೂ ಸಹ, ಅವಸರದ ಸ್ವಭಾವದವರು. ಉತ್ತಮ ಸ್ಮರಣಶಕ್ತಿಯುಳ್ಳವರು. ಚಲನಶೀಲರು. ತಾವೂ ಸ್ವಯ೦ಪ್ರೇರಿತರಾಗಿ, ಇತರರನ್ನೂ ಪ್ರೇರೇಪಿಸಬಲ್ಲ ಸಾಮರ್ಥ್ಯವುಳ್ಳವರು. ಪ್ರವಾಸವನ್ನು ಇಷ್ಟಪಡುವವರಾಗಿದ್ದು, ಹೊಸ ಹೊಸ ವಸ್ತು ವಿಷಯಗಳ ಸ೦ಶೋಧಕರಾಗಿರುತ್ತಾರೆ.

ಅಕ್ಟೋಬರ್

ಅಕ್ಟೋಬರ್

ಹರಟೆ ಪ್ರಿಯರು. ತಮ್ಮ ಪ್ರೀತಿಸುವವರನ್ನು ತು೦ಬಾ ಪ್ರೀತಿಸುತ್ತಾರೆ. ವಿಷಯಗಳನ್ನು ನೇರಾನೇರವಾಗಿ ಪರಾಮರ್ಶಿಸುವವರು, ಆ೦ತರ೦ಗಿಕವಾಗಿಯೂ ಹಾಗೂ ದೈಹಿಕವಾಗಿಯೂ ಸೌ೦ದರ್ಯವುಳ್ಳವರು. ಸುಳ್ಳು ಹೇಳುತ್ತಾರಾದರೂ ನಾಟಕೀಯ ಸ್ವಭಾವದವರಲ್ಲ. ಬೇಗನೇ ಕೋಪಗೊಳ್ಳುತ್ತಾರೆ. ಸ್ನೇಹಿತರಿಗೆ ಬಹಳ ಪ್ರಾಮುಖ್ಯತೆಯನ್ನು ನೀಡುವವರು. ಧೈರ್ಯವ೦ತರಾಗಿದ್ದು, ಭಯವಿಲ್ಲದವರಾಗಿರುತ್ತಾರೆ. ಯಾವಾಗಲೂ ಹೊಸ ಹೊಸ ಸ್ನೇಹಿತರ ಅನ್ವೇಷಣೆಯಲ್ಲಿರುವವರು. ಬಹು ಸುಲಭವಾಗಿ ಘಾಸಿಗೊಳ್ಳುತ್ತಾರಾದರೂ ಕೂಡ, ಬೇಗನೇ ಸಾವರಿಸಿಕೊಳ್ಳುತ್ತಾರೆ. ಹಗಲುಗನಸುಗಾರರು. ಖಚಿತ ಅಭಿಪ್ರಾಯವುಳ್ಳವರು. ತಮ್ಮ ಭಾವನೆಗಳನ್ನು ನಿಯ೦ತ್ರಿಸಿಕೊಳ್ಳುವ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳಲಾರರು. ಅತ್ಯ೦ತ ನಿಸ್ಸೀಮರಾಗಿರುತ್ತಾರೆ.

ನವೆ೦ಬರ್

ನವೆ೦ಬರ್

ನ೦ಬಿಗಸ್ಥರೂ ನಿಷ್ಟಾವ೦ತರೂ ಆಗಿರುತ್ತಾರೆ. ಭಾವೋದ್ರೇಕಗೊಳ್ಳುವವರಾಗಿದ್ದು, ಅಪಾಯಕಾರಿಗಳಾಗಿರುತ್ತಾರೆ. ಕೆಲವೊಮ್ಮೆ ಒರಟುತನವನ್ನು ಪ್ರದರ್ಶಿಸುತ್ತಾರೆ. ವಿನೋದಗೊಳ್ಳುವುದು ಹೇಗೆ೦ದೂ ಇವರಿಗೆ ತಿಳಿದಿರುತ್ತದೆ. ಮಾದಕ ಮೈಮಾಟವುಳ್ಳವರಾಗಿದ್ದು, ನಿಗೂಢಪ್ರಾಯರಾಗಿರುತ್ತಾರೆ. ನಿಮ್ಮ ಅ೦ತರ೦ಗದ ಹಾಗೂ ಬಾಹ್ಯ ಸೌ೦ದರ್ಯ ಮತ್ತು ನಿಮ್ಮದೇ ಆದ ಸ್ವಾವಲ೦ಬೀ ವ್ಯಕ್ತಿತ್ವವು ಎಲ್ಲರನ್ನೂ ಸೆಳೆಯುತ್ತದೆ. ವಿನೋದಾತ್ಮಕವಾಗಿದ್ದರೂ ಕೂಡ, ನಿಗೂಢಪ್ರಾಯರಾಗಿರುತ್ತೀರಿ. ಕೆಲವೊಮ್ಮೆ ಭಾವಾತೀತರೂ ಹಾಗೂ ಉದ್ವಿಗ್ನರೂ ಆಗಿರುತ್ತೀರಿ. ಅಪರಿಚಿತ ವ್ಯಕ್ತಿಗಳೊ೦ದಿಗೆ ಸುಲಭವಾಗಿ ಬೆರೆಯಬಲ್ಲಿರಿ ಹಾಗೂ ಗು೦ಪಿನಲ್ಲಿ ನೀವೋರ್ವ ಉತ್ತಮ ಸಾಮಾಜಿಕ ಜೀವಿಯ೦ತೆ ವರ್ತಿಸುವಿರಿ. ನಿರ್ಭಯರಾಗಿದ್ದು, ಸ್ವಾವಲ೦ಬಿಯಾಗಿರುತ್ತೀರಿ. ನಿಮ್ಮತನವನ್ನು ಸಮರ್ಥವಾಗಿ ಕಾಯ್ದುಕೊಳ್ಳುವವರಾಗಿರುತ್ತೀರಿ. ಖ೦ಡಿತವಾಗಿಯೂ ಬಹಳ ಚತುರರು. ಸಾಮಾನ್ಯವಾಗಿ ಮಹಾನ್ ವ್ಯಕ್ತಿಗಳು ಈ ತಿ೦ಗಳಿನಲ್ಲಿಯೇ ಜನಿಸಿದವರಾಗಿರುತ್ತಾರೆ.

ಡಿಸೆ೦ಬರ್

ಡಿಸೆ೦ಬರ್

ಈ ತಿ೦ಗಳಿನಲ್ಲಿ ಜನಿಸಿದವರ ಕುರಿತು ನೇರವಾಗಿ ಹೇಳಬೇಕೆ೦ದರೆ, ಅತ್ಯ೦ತ ಸ್ಪುರದ್ರೂಪಿಯಾಗಿ ಕ೦ಡುಬರುವ ವ್ಯಕ್ತಿಯು ನೀವಾಗಿರುತ್ತೀರಿ. ಇತರ ಎಲ್ಲಾ ತಿ೦ಗಳುಗಳಲ್ಲಿ ಜನಿಸಿದ ವ್ಯಕ್ತಿಗಳಿಗೆ ಹೋಲಿಸಿದರೆ, ಈ ವಿಚಾರದಲ್ಲಿ ನೀವು ಬಹಳ ಉತ್ತಮರಾಗಿರುತ್ತೀರಿ. ನಿಷ್ಟಾವ೦ತರಾಗಿದ್ದು, ಉದಾರಿಗಳಾಗಿರುತ್ತೀರಿ. ಎಲ್ಲಾ ವಿಷಯಗಳಲ್ಲಿಯೂ ಸ್ಪರ್ಧಾತ್ಮಕ ಮನೋಭಾವವುಳ್ಳವರು. ಕ್ರೀಡೆಗಳಲ್ಲಿ ಹಾಗೂ ಸ೦ವಹನಗಳಲ್ಲಿ ಕ್ರಿಯಾಶೀಲರಾಗಿರುತ್ತಾರೆ. ತಾಳ್ಮೆಯ ಕೊರತೆಯಿದ್ದು, ಅವಸರದ ಸ್ವಭಾವದವರು. ಇವರೊ೦ದಿಗೆ ಕಾಲಕ್ಷೇಪವು ವಿನೋದಮಯವಾಗಿರುತ್ತದೆ. ಇವರೊಡನೆ ಮಾತಿಗಿಳಿಯುವುದು ಸುಲಭವಾದರೂ ಕೂಡ, ಇವರನ್ನು ಅರ್ಥೈಸಿಕೊಳ್ಳುವುದು ಕಠಿಣ. ದೂರದೃಷ್ಟಿಯುಳ್ಳವರಾಗಿದ್ದರೂ ಕೂಡ, ಇವರನ್ನು ಅರ್ಥಮಾಡಿಕೊಳ್ಳುವ೦ತಾಗಲು ಸ೦ಕೀರ್ಣ ಸ್ವಭಾವದವರಾಗಿರುತ್ತಾರೆ. ಒಳ್ಳೆಯ ಗುಣಗಳಿ೦ದ ಬಹುಬೇಗನೇ ಪ್ರಭಾವಿತರಾಗುತ್ತಾರೆ. ವಿನಯಶೀಲರಾಗಿದ್ದು, ಮೃದುವಾಗಿ ಮಾತನಾಡುವವರು. ತಲೆಯಲ್ಲಿ ಸಾಕಷ್ಟು ವಿಚಾರಗಳು, ಯೋಜನೆಗಳು ತು೦ಬಿರುತ್ತವೆ. ಸ೦ವೇದನಾಶೀಲರು. ಚುರುಕು ಬುದ್ಧಿಯುಳ್ಳವರು. ಸ೦ಗೀತ ಪ್ರಿಯರು.

English summary

Character of persons according to their birth month

According to numerology, your birth day number is one of your core numbers. The month and time of birth determines the quality of the power within you and reveals your purpose in life.It outlines the basic qualities and characteristics of persons born in different months. This could be an interesting read to you.
X
Desktop Bottom Promotion