For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿರುವ ಕೆಲವೊಂದು ವಿಲಕ್ಷಣ ಆಚರಣೆಗಳು

|

ಶ್ರೀಮಂತ ಹಾಗೂ ವಿಭಿನ್ನ ಸಂಸ್ಕೃತಿ ಹೊಂದಿರುವ ಒಂದು ದೇಶದಲ್ಲಿ ವಿವಿಧತೆಯಲ್ಲಿ ಏಕತೆ' ಎನ್ನುವುದು ಕೇವಲ ನುಡಿಗಟ್ಟಲ್ಲ, ಶ್ರೇಷ್ಠ ನಾಡಿನಲ್ಲಿ ಇದನ್ನು ಕಣ್ಣಾರೆ ನೋಡಬಹುದು. ದೇಶದ ನಿಜವಾದ ಶ್ರೇಷ್ಠತೆಯನ್ನು ಕೆಲವೇ ಪದಗಳಿಂದ ವರ್ಣಿಸಲು ಅಸಾಧ್ಯ. ಹಲವಾರು ರಾಜ್ಯಗಳು, ಭಾಷೆಗಳು, ಸಂಸ್ಕೃತಿ, ಆಹಾರ, ಸಂಪ್ರದಾಯ, ವೇಷಭೂಷಣ, ಇನ್ನು ಏನೇನಿಲ್ಲ? ಭಾರತವು ಅಕ್ಷರಶಃ ಪ್ರತಿಯೊಂದನ್ನು ಹೊಂದಿರುವ ರಾಷ್ಟ್ರ. ಪ್ರತಿಯೊಂದು ಎಂದರೆ ಕೆಲವೊಂದು ಮೂಢನಂಬಿಕೆ ಮತ್ತು ಅಸಾಮಾನ್ಯ ಆಚರಣೆಗಳು ರಾಷ್ಟ್ರದಲ್ಲಿದೆ. ಆಧುನಿಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಮತ್ತೊಂದು ಕಡೆಯಲ್ಲಿ ವಿಚಿತ್ರ ಆಚರಣೆಗಳಲ್ಲಿ ಅಗ್ರಸ್ಥಾನ ಪಡೆದಿದೆ.

ಮುಂಬಯಿಯನ್ನು ಅಮೆರಿಕಾದಲ್ಲಿರುವ ಕೆಲವು ಮೆಟ್ರೋ ನಗರಗಳಿಗೆ ಹೋಲಿಸಿದರೆ, ಬೆಂಗಳೂರು ಭಾರತದ ಸಿಲಿಕಾನ್ ಸಿಟಿಯಾಗಿದೆ. ಆದರೆ ಕೆಲವೊಂದು ವಿಚಿತ್ರ ಆಚರಣೆಗಳು ದೇಶಕ್ಕೆ ಕಪ್ಪುಚುಕ್ಕೆ. ಭಾರತದಲ್ಲಿ ಆಚರಿಸುವ ಕೆಲವೊಂದು ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯಗಳು ವಿಶ್ವಮಟ್ಟದಲ್ಲಿ ವಿಚಿತ್ರವಾಗಿ ಪರಿಗಣಿಸಲಾಗುತ್ತದೆ.

ವಿಚಿತ್ರ ಆಚರಣೆಗಳು ಪ್ರತಿಯೊಂದು ಧರ್ಮದಲ್ಲೂ ಇದೆ. ಆದರೆ ಬುಡಕಟ್ಟು ಜನಾಂಗದಲ್ಲಿ ಇದು ಸಾಮಾನ್ಯ. ರಾಷ್ಟ್ರದಲ್ಲಿರುವ ಕೆಲವೊಂದು ಮೂಢನಂಬಿಕೆಗಳನ್ನು ಹೋಗಲಾಡಿಸಲು ಭಾರತ ಸರ್ಕಾರವು ಕೆಲವೊಂದು ಕ್ರಮ ತೆಗೆದುಕೊಂಡಿದೆ. ಆದಾಗ್ಯೂ, ಕೆಲವೊಂದು ವಿಚಿತ್ರ ಆಚರಣೆಗಳು ಈಗಲೂ ಉಳಿದುಕೊಂಡಿದೆ. ಭಾರತದಲ್ಲಿರುವ ಕೆಲವೊಂದು ವಿಚಿತ್ರ ಆಚರಣೆಗಳ ಬಗ್ಗೆ ಇಲ್ಲಿ ಗಮನಿಸುವ.

ಭಾರತದಲ್ಲಿರುವ ಕೆಲವೊಂದು ಆಶ್ಚರ್ಯಕರವಾದ ಮೂಢನಂಬಿಕೆಗಳು

ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಇದು ಶತಮಾನಗಳಿಂದ ಭಾರತದಲ್ಲಿ ಆಚರಿಸಿಕೊಂಡು ಬರುತ್ತಿರುವಂತಹ ಆಚರಣೆ. ದೇವಸ್ಥಾನದಲ್ಲಿ ಬ್ರಾಹ್ಮಣರು ತಿಂದುಳಿದ ಬಾಲೆಎಳೆಯ ಮೇಲೆ ಇತರ ಜಾತಿ, ಧರ್ಮದವರು ಮಡಸ್ನಾನ ಹಾಕುವುದು. ಹೀಗೆ ಮಾಡುವುದರಿಂದ ಎಲ್ಲಾ ರೋಗಗಳು ಮತ್ತು ಸಮಸ್ಯೆಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ.

ಬಿಶನೊಯಿ ನಂಬಿಕೆ

ಬಿಶನೊಯಿ ನಂಬಿಕೆ

ರಾಜಸ್ಥಾನದಲ್ಲಿರುವ ಪ್ರಕೃತಿ ಪ್ರೇಮಿ ಬುಡಕಟ್ಟು ಜನಾಂಗವೇ ಬಿಶನೊಯಿ. ಮರವನ್ನು ಅಪ್ಪಿ ಹಿಡಿಯುವ ಮನೋಭಾವ ಅಥವಾ ಪ್ರಾಣಿಗಳ ಬಗ್ಗೆ ಇರುವ ಪ್ರೀತಿಯ ಬಗ್ಗೆ ಯಾವುದೇ ಸಂಶಯವಿಲ್ಲ. ಈ ಬುಡಕಟ್ಟು ಜನಾಂಗದ ಮಹಿಳೆಯರು ಜಿಂಕೆ ಮರಿಗಳಿಗೆ ಹಾಲು ಕುಡಿಸಿ ಅದರ ಪ್ರಾಣ ಕಾಪಾಡುತ್ತಾರೆ.

ಭಾರತದ ಅಘೋರಿಗಳು

ಭಾರತದ ಅಘೋರಿಗಳು

ಅತ್ಯಂತ ವಿಚಿತ್ರ ಆಚರಣೆ ಹಾಗೂ ಸಂಪ್ರದಾಯವನ್ನು ಪಾಲಿಸುವ ಭಾರತದಲ್ಲಿರುವ ಒಂದು ಗುಂಪೇ ಅಘೋರಿಗಳು. ಶಿವನನ್ನು ಆರಾಧಿಸುವ ಅಘೋರಿಗಳು ಕೆಲವೊಂದು ವಿಚಿತ್ರ ಆಚರಣೆ ಮಾಡುತ್ತಾರೆ. ಅಘೋರಿಗಳು ಸತ್ತ ಮನುಷ್ಯರ ಮಾಂಸ ತಿನ್ನುವುದು ಮತ್ತು ಅವರ ತಲೆಬುರುಡೆಯಲ್ಲಿ ನೀರು ಕುಡಿಯುತ್ತಾರೆ.

 ಚರ್ಮಕ್ಕೆ ಕೊಕ್ಕೆ ಸಿಕ್ಕಿಸುವುದು

ಚರ್ಮಕ್ಕೆ ಕೊಕ್ಕೆ ಸಿಕ್ಕಿಸುವುದು

ಚರ್ಮಕ್ಕೆ ಕೊಕ್ಕೆ ಸಿಕ್ಕಿಸಿಕೊಳ್ಳುವ ಸಂಪ್ರದಾಯ ದಕ್ಷಿಣ ಭಾರತದ ಕಾಳಿ ಮಂದಿರದಲ್ಲಿದೆ. ಇಲ್ಲಿ ಜನರು ಗರುಡನಂತೆ ಬಟ್ಟೆ ಧರಿಸಿ ತನ್ನ ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ಭೂಮಿಯಿಂದ ಮೇಲಕೆತ್ತಲ್ಪಡುತ್ತಾರೆ. ತುಂಬಾ ದೀರ್ಘ ಸಮಯದಿಂದ ಆಚರಿಸಲ್ಪಡುತ್ತಿರುವ ಅತ್ಯಂತ ವಿಚಿತ್ರ ಆಚರಣೆ ಇದಾಗಿದೆ.

ಬಾಳೆ ಗಿಡಕ್ಕೆ ಮದುವೆ

ಬಾಳೆ ಗಿಡಕ್ಕೆ ಮದುವೆ

ಮಂಗಲಿಕವನ್ನು ದೂರ ಮಾಡಲು ಭಾರತದಲ್ಲಿ ಆಚರಿಸಲ್ಪಡುವಂತಹ ಅತ್ಯಂತ ವಿಲಕ್ಷಣ ಆಚರಣೆ ಇದಾಗಿದೆ. ಗಂಡಿನ ಬದಲಿಗೆ ಬಾಳೆ ಗಿಡಕ್ಕೆ ಮದುವೆ ಮಾಡುವುದೇ ಈ ವಿಚಿತ್ರ ಆಚರಣೆ. ಮಂಗಲಿಕವಿರುವ ಹುಡುಗಿಗೆ ಮದುವೆಯಾದರೆ ಅದರಿಂದ ಮದುವೆ ಬಳಿಕ ಕೆಟ್ಟದಾಗುತ್ತದೆ ಎನ್ನುವುದು ಜ್ಯೋತಿಷಿಗಳ ಅಭಿಪ್ರಾಯ. ಬಾಳೆ ಗಿಡದೊಂದಿಗೆ ಮೊದಲು ಮದುವೆಯಾದರೆ ಆಗ ದುರಾದೃಷ್ಟವು ಬಾಳೆ ಗಿಡಕ್ಕೆ ಬರುತ್ತದೆ ಎಂದು ನಂಬಲಾಗಿದೆ. ಇದರ ಬಳಿಕ ಹುಡುಗಿ ಯಾವುದೇ ಸಮಸ್ಯೆಯಿಲ್ಲದೆ ಹುಡುಗನನ್ನು ಮದುವೆಯಾಗಬಹುದು.

X
Desktop Bottom Promotion