For Quick Alerts
ALLOW NOTIFICATIONS  
For Daily Alerts

ಸಮಾರಂಭಗಳಲ್ಲಿ ಅತ್ಯುತ್ತಮ ಅತಿಥಿಗಳಾಗಿರುವುದು ಹೇಗೆ?

|

ಯಾರದಾದರು ಮನೆಗೆ ಊಟಕ್ಕೆ ಅಥವಾ ಪಾರ್ಟಿಗೆ ಹೋದಾಗ ಕೆಲವೊಂದು ಅಂಶಗಳನ್ನು ನಾವು ಮರೆಯಬಾರದು. ಅಂತಹ ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ. ಒಂದು ವೇಳೆ ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ನೀವು ನಿಮ್ಮ ಗೆಳೆಯರ ಅಥವಾ ಸಹೋದ್ಯೋಗಿಗಳ ಮನೆಗೆ ಹೋದಾಗ ನಾವು ಅಲ್ಲಿನ ಶಿಷ್ಟಾಚಾರಗಳನ್ನು ತಪ್ಪದೆ ಪಾಲಿಸಬೇಕು.

ಇಲ್ಲವಾದಲ್ಲಿ ಅಕ್ಕ ಪಕ್ಕದಲ್ಲಿರುವವರು ತಪ್ಪದೆ ನಿಮ್ಮ ನಡವಳಿಕೆಗಳ ಬಗ್ಗೆ ಅಣಕಿಸುತ್ತ ಆಡಿಕೊಳ್ಳಲು ಆರಂಭಿಸುತ್ತಾರೆ ಮತ್ತು ನಿಮ್ಮನ್ನು ಶಿಷ್ಟಾಚಾರ ಗೊತ್ತಿಲ್ಲದ ಅತಿಥಿ ಎಂದು ಪರಿಗಣಿಸುತ್ತಾರೆ. ಪಾರ್ಟಿಗಳಲ್ಲಿ ಮತ್ತು ಗೆಟ್ ಟು ಗೆದರ್‌ಗಳಲ್ಲಿ ನೀವು ಅತಿಥಿಯಾಗಿ ಹೋದಾಗ ಪಾಲಿಸಬೇಕಾದ ಕೆಲವೊಂದು ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ ಓದಿಕೊಳ್ಳಿ. ನಿಜವಾಗಿಯೂ ಎಡಗೈ ಬಳಸುವವರು ಹೆಚ್ಚು ಪ್ರತಿಭಾವಂತರೇ?

ಗಮನ ಕೊಡಿ

ಗಮನ ಕೊಡಿ

ನಿಮಗೆ ಆತಿಥ್ಯ ನೀಡುವವರತ್ತ ಗಮನ ಹರಿಸಿ. ಆತ/ಆಕೆಯ ಕುಟುಂಬದವರ ಜೊತೆಗೆ ಮಾತನಾಡಲು ಮತ್ತು ಊಟ ಮಾಡಲು ಸರದಿಯ ಸಾಲಿನಲ್ಲಿ ಹೋಗಿ. ನಿಮ್ಮ ಆತಿಥ್ಯ ನೀಡುವವರು ನಿಮ್ಮೊಂದಿಗೆ ಮಾತನಾಡುವಾಗ ನಿಮ್ಮ ಫೋನನ್ನು ಪಕ್ಕದಲ್ಲಿಟ್ಟು, ಅವರ ಮಾತಿನತ್ತ ಗಮನಕೊಡಿ.

ಊಟದ ಶಿಷ್ಟಾಚಾರ

ಊಟದ ಶಿಷ್ಟಾಚಾರ

ಈಟಿಂಗ್ ಮ್ಯಾನರ್ಸ್ ಎಂದು ಸಹ ಕರೆಯುತ್ತಾರೆ. ಯಾವಾಗಲು ನಿಮ್ಮ ಮುಖದ ಬಳಿಗೆ ಆಹಾರವನ್ನು ತೆಗೆದುಕೊಂಡು ಬಂದು ತಿನ್ನಿ, ನಿಮ್ಮ ಮುಖವನ್ನೆ ಆಹಾರದ ಬಳಿಗೆ ಕೊಂಡೊಯ್ಯಬೇಡಿ. ಟೇಬಲ್‍ನಿಂದ ಟೇಬಲ್‍ಗೆ ನಿಮಗೆ ಇಷ್ಟವಾದುದನ್ನು ಪಡೆಯಲು ಹೋಗಬೇಡಿ. ಅಂದರೆ ನಡುವೆ ಹಾಯಬೇಡಿ. ನಿಮಗೆ ಇಷ್ಟವಾಗದೆ ಇರುವುದು ಟೇಬಲ್ ಮೇಲೆ ಇದ್ದಲ್ಲಿ, ಅದನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಹಾಕಿಸಿಕೊಳ್ಳಿ ಹಾಗು ಅದನ್ನು ಮೊದಲು ರುಚಿ ನೋಡಿ.

ಸೂಕ್ತವಾಗಿ ಉಡುಪು ಧರಿಸಿ

ಸೂಕ್ತವಾಗಿ ಉಡುಪು ಧರಿಸಿ

ಒಂದು ವೇಳೆ ನೀವು ನಿಮ್ಮ ಸ್ನೇಹಿತರ ಜೊತೆಯಲ್ಲಿ, ಪಾರ್ಟಿ ಮಾಡಿಕೊಳ್ಳುವಂತಿದ್ದಲ್ಲಿ, ಶಾರ್ಟ್ಸ್ ಮತ್ತು ಕ್ಯಾಷುವಲ್ಸ್‌ಗಳನ್ನು ಧರಿಸಿಕೊಂಡು ಹೋಗಬಹುದು. ಆದರೆ ವೃತ್ತಿಯಲ್ಲಿರುವ ಸಹೋದ್ಯೋಗಿಗಳು, ಇತರ ವ್ಯಕ್ತಿಗಳು, ಅಥವಾ ಯಾರಾದರು ಪ್ರಮುಖ ವ್ಯಕ್ತಿಗಳ ಜೊತೆಗೆ ಬೆರೆತು ಪಾರ್ಟಿ ಮಾಡಿಕೊಳ್ಳುವಂತಿದ್ದಲ್ಲಿ, ಫಾರ್ಮಲ್ ಡ್ರೆಸ್ ಧರಿಸಿ ಹೋಗುವುದು ಉತ್ತಮ. ಹುಡುಗಿಯರು ಒಂದು ಒಳ್ಳೆಯ ಟಾಪ್ ಮತ್ತು ಸ್ಕರ್ಟ್ ಅಥವಾ ಸಮ್ಮರ್ ಡ್ರೆಸ್ ಧರಿಸಿ ಹೋಗುವುದು ಒಳ್ಳೆಯದು. ಗಂಡಸರು ಸೂಟ್ ಅಥವಾ ಪ್ಯಾಂಟ್ ಶರ್ಟ್, ಕೆಲವೊಮ್ಮೆ ಡೆನಿಮ್ ಸಹ ಧರಿಸಿ ಹೋಗಬಹುದು!

ಉಡುಗೊರೆ ಇತ್ಯಾದಿ!

ಉಡುಗೊರೆ ಇತ್ಯಾದಿ!

ಒಂದು ವೇಳೆ ಅದು ಅಧಿಕೃತ ಅಥವಾ ಅರೆ-ಅಧಿಕೃತ ಪಾರ್ಟಿಯಾಗಿದ್ದಲ್ಲಿ, ಕೆಲವೊಂದು ಉಡುಗೊರೆಗಳನ್ನು ಖರೀದಿಸಿಕೊಂಡು ಹೋಗುವುದು ಉತ್ತಮ. ಒಂದು ವೇಳೆ ನೀವು ಗೆಳೆಯರು ಸೇರಿ ಪಾರ್ಟಿ ಮಾಡಿಕೊಳ್ಳುತ್ತಿದ್ದಲ್ಲಿ, ಬೇಗ ಹೋಗಿ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡುವುದು ಒಳ್ಳೆಯದು. ಇಲ್ಲವಾದಲ್ಲಿ ಸ್ವಲ್ಪ ಕೇಕ್ ಅಥವಾ ಪೇಸ್ಟ್ರೀಗಳನ್ನು ಕೊಂಡುಕೊಂಡು ಹೋಗುವುದು ಉತ್ತಮ.

English summary

Be a good guest at parties

If you're invited to a friend or colleague's place for lunch or dinner, it is very important to have all the proper etiquettes to be a good guest. Here are a few things to keep in mind when you are going to parties and get togethers as a guest.
Story first published: Monday, November 24, 2014, 18:51 [IST]
X
Desktop Bottom Promotion