For Quick Alerts
ALLOW NOTIFICATIONS  
For Daily Alerts

ನಿಜವಾಗಿಯೂ ಎಡಗೈ ಬಳಸುವವರು ಹೆಚ್ಚು ಪ್ರತಿಭಾವಂತರೇ?

|

ವಿಶ್ವದ ಜನಸಂಖ್ಯೆಯಲ್ಲಿ ಪ್ರಮುಖ ಕೆಲಸಗಳಿಗೆ ಬಲಗೈ ಬಳಸುವವರ ಸಂಖ್ಯೆಯೇ ದೊಡ್ಡದು. ಒಂದು ಸಮೀಕ್ಷೆಯ ಪ್ರಕಾರ ಸುಮಾರು ಶೇ ಹತ್ತರಷ್ಟು ಜನರು ಮಾತ್ರ ಎಡಗೈಯನ್ನು ಬಳಸುವ ಅಥವಾ ಎಡಚರಾಗಿರುತ್ತಾರೆ. ನಮ್ಮ ಸಂಪ್ರದಾಯಗಳ ಪ್ರಕಾರ ಬಲಗೈ ಒಡ್ಡುವುದು ಶುಭ ಹಾಗೂ ಎಡಗೈ ಒಡ್ಡುವುದು ಅಶುಭ ಎಂಬ ಭಾವನೆ ಬಲವಾಗಿ ಬೇರೂರಿಬಿಟ್ಟಿದೆ.

ಎಡಗೈ ಬಳಕೆ ಯಾವಾಗ ಪ್ರಾರಂಭವಾಯಿತು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಕೆಲವು ಇತಿಹಾಸಕಾರರು ಬಹಳ ಹಿಂದೆ ಯುದ್ಧಕಾಲದಲ್ಲಿ ಯೋಧರು ತಮ್ಮ ಹೃದಯಗಳನ್ನು ರಕ್ಷಿಸಿಕೊಳ್ಳಲು ಎಡಗೈಯಲ್ಲಿ ಗುರಾಣಿ ಹಿಡಿದು ಹೋರಾಡುತ್ತಿದ್ದುದರಿಂದ ಕ್ರಮೇಣ ಎಡಗೈ ಬಳಕೆ ಪ್ರಾರಂಭವಾಯಿತು ಎಂದು ಅಭಿಪ್ರಾಯಪಡುತ್ತಾರೆ.

Are Left Handers Geniuses?

ಎಡಗೈ ಬಳಸುವವರಲ್ಲೂ ಕೆಲವು ವಿಶೇಷತೆಗಳಿವೆ. ಸಾಮಾನ್ಯವಾಗಿ ಬಲಗೈ ಬಂಟರು ಬಲಗೈಯಲ್ಲಿ ಮಾಡುವ ಕೆಲಸಗಳನ್ನು (ಉದಾಹರಣೆಗೆ ಬರವಣಿಗೆ) ಎಡಗೈಯಲ್ಲಿ ಮಾಡಲು ಅಸಾಧ್ಯವೋ ಅಂತೆಯೇ ಎಡಚರಿಗೆ ಎಡಗೈ ಬಳಕೆಯ ಕೆಲಸಗಳು ಬಲಗೈಯಲ್ಲಿ ಅಸಾಧ್ಯ. ಚಿಕ್ಕಂದಿನಿಂದಲೂ ನಮ್ಮ ಮೆದುಳು ದೇಹದ ಪ್ರತಿ ಅಂಗಾಂಶಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಸೂಚನೆಗಳನ್ನು ದಾಖಲಿಸಿಕೊಳ್ಳುತ್ತದೆಯೋ ಅದೇ ಪ್ರಕಾರ ನಮ್ಮ ಪ್ರತಿ ಅಂಗಗಳು ಕಾರ್ಯನಿರ್ವಹಿಸುತ್ತದೆ. ಇದನ್ನೇ ನಾವು ಕಲಿಯುವುದು ಎನ್ನುತ್ತೇವೆ. ಎಡಚರಾಗಲು ಈ ಸೂಚನೆಗಳು ಏಕೆ ಬದಲಾದವು ಎಂಬುದೊಂದು ಚಿದಂಬರ ರಹಸ್ಯ.

ಸಂಶೋಧನೆಗಳ ಪ್ರಕಾರ ಮಗು ಹುಟ್ಟುವ ಮುನ್ನ ಅದರ ದೇಹದಲ್ಲಿ ಟೆಸ್ಟೋಸ್ಟೆರೋನ್ ಹಾರ್ಮೋನಿನ ಪ್ರಮಾಣ ಏರುಪೇರಾದರೆ ಮೆದುಳು ಬಲಬದಿಯ ಬದಲು ಎಡಬದಿಯ ಅಂಗಗಳಿಗೆ ಪ್ರಾಮುಖ್ಯತೆ ನೀಡುತ್ತದೆ ಎಂದು ಒಂದು ಅಂದಾಜು. ಜನನದ ಸಮಯದಲ್ಲಿ ಮಗುವಿನ ದೇಹದ ಹಾಗೂ ತಲೆಯ ಮೇಲೆ ಬೀಳುವ ಒತ್ತಡವೂ ಇನ್ನೊಂದು ಕಾರಣವಾಗಿರಬಹುದು ಎಂದು ಹಲವು ವೈದ್ಯರು ಅಭಿಪ್ರಾಯ ಪಡುತ್ತಾರೆ.

ಇನ್ನೂ ಕೆಲವು ಸಮೀಕ್ಷೆಗಳ ಪ್ರಕಾರ ಗರ್ಭವತಿಯಾಗಿದ್ದಾಗ ತಾಯಿಯ ಮತ್ತು ಶಿಶುವಿನ ಆರೋಗ್ಯವನ್ನು ಅಲ್ಟ್ರಾಸೌಂಡ್ ಅಲೆಗಳ ಮೂಲಕ ಹೆಚ್ಚು ಬಾರಿ ಅಳೆದಿರುವಾಗಲೂ ಹುಟ್ಟಿದ ಮಗು ಎಡಚರಾಗಿರುವುದು ಕಂಡುಬಂದಿದೆ.

ಸಾಮಾನ್ಯವಾಗಿ ದೇಹದ ಎಡ-ಬಲ ಭಾಗವನ್ನು ಬಳಸುವುದು ತೊಂದರೆಯಿಲ್ಲವಾದರೂ ಹೆಚ್ಚಿನ ವಸ್ತುಗಳು ಕೇವಲ ಬಲಗೈ ಉಪಯೋಗಿಸುವವರಿಗಾಗಿ ಎಂದೇ ನಿರ್ಮಾಣವಾಗುತ್ತಿರುವುದು ಮಾತ್ರ ಎಡಚರಿಗೆ ಕೊಂಚ ಕಿರಿಕಿರಿ ತರುವ ಸಂಗತಿ. ಉದಾಹರಣೆಗೆ ಕತ್ತರಿ ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳಿಗೆ ಸರಿಯಾಗಿ ಹೊಂದುವಂತೆ ತಯಾರಿಸಲಾಗಿರುತ್ತದೆ. ಅದೇ ಎಡಚರು ಕತ್ತರಿಯನ್ನು ಉಪಯೋಗಿಸುವಾಗ ಎಡಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳಿಗೆ ಮೊನಚಾದ ಬದಿ ತಗುಲಿ ಕಿರಿಕಿರಿಯಾಗುತ್ತದೆ.

ಆದರೂ ವಿಶ್ವದ ಎಡಚರ ಪೈಕಿ ಹೆಚ್ಚಿನವರು ಅತಿ ಪ್ರತಿಭಾವಂತರೂ, ಅಪ್ರತಿಮ ಕ್ರೀಡಾಪಟುಗಳೂ, ಶ್ರೀಮಂತರೂ ಆಗಿರುವುದು ಎಡಚತನದ ವಿಶೇಷತೆಯಾಗಿದೆ. ವಿಶ್ವದ ಕೆಲವೇ ಕೆಲವರು ಮಾತ್ರ ಎರಡೂ ಕೈಗಳನ್ನು ಸಮರ್ಥವಾಗಿ ಒಂದರ ಬದಲಿಗೆ ಇನ್ನೊಂದನ್ನು ಬಳಸಬಲ್ಲರು ಹಾಗೂ ಏಕಕಾಲದಲ್ಲಿ ಎರಡೂ ಕೈಗಳಿಂದ ವಿಭಿನ್ನ ಕೆಲಸ ನಿರ್ವಹಿಸಬಲ್ಲರು. (ಈ ಸಾಮರ್ಥ್ಯಕ್ಕೆ Ambidexterity ಎಂದು ಕರೆಯಲಾಗುತ್ತದೆ). ಎಡಚರ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಹೆಚ್ಚಿನ ನೆನಪಿನ ಶಕ್ತಿ ಇರುತ್ತದೆ
ಎಡಚರ ಮೆದುಳನ್ನು ಅಭ್ಯಸಿಸಿದ ವೈದ್ಯರಿಗೆ ಅವರ ಮೆದುಳಿನ ಎಡ ಮತ್ತು ಬಲಭಾಗವನ್ನು ಜೋಡಿಸುವ corpus callosum ಎಂಬ ಭಾಗ ಇತರರಿಗಿಂತ ಕೊಂಚ ದೊಡ್ಡದಾಗಿರುವುದು ಕಂಡುಬಂದಿದೆ. ಈ ಭಾಗದಲ್ಲಿ ನೆನಪು ಶೇಖರವಾಗುತ್ತದೆ. ಇವರಲ್ಲಿ ಶಾಶ್ವತ ನೆನಪಿನ ಶಕ್ತಿ ಹೆಚ್ಚಿರುತ್ತದೆ. ಆದರೆ ತಾತ್ಕಾಲಿಕವಾದ ನೆನಪು ಮಾತ್ರ ಅತಿ ಕಡಿಮೆ ಇರುವುದು ವಿಪರ್ಯಾಸ. ಉದಾಹರಣೆಗೆ ಎರಡನೇ ಮಹಾಯುದ್ದದ ವಿವರಗಳು ಒಮ್ಮೆ ಶೇಖರವಾದರೆ ಅದು ಅವರ ನೆನಪಿನಿಂದ ಅಳಿಯುವುದೇ ಇಲ್ಲ. ಆದರೆ ತಾತ್ಕಾಲಿಕವಾಗಿ ನೆನಪಿಡಬೇಕಾದ ಕಾರಿನ ಕೀ ಎಲ್ಲಿ ಬಿಟ್ಟೆ, ಲಿಫ್ಟಿನ ಎಷ್ಟನೆಯ ಬಟನ್ ಒತ್ತಿದೆ ಮೊದಲಾದ ಚಿಕ್ಕಪುಟ್ಟ ವಿಷಯಗಳು ಅವರಿಗೆ ನೆನಪಿರುವುದೇ ಇಲ್ಲ!

ಗಣಿತದಲ್ಲಿ ಪ್ರತಿಭಾವಂತರು
ಸಮೀಕ್ಷೆಗಳ ಪ್ರಕಾರ ಎಡಚರು ಗಣಿತದ ವಿಷಯದಲ್ಲಿ ಹೆಚ್ಚು ಪ್ರತಿಭಾಶಾಲಿಯಾಗಿರುತ್ತಾರೆ. ಬೇರೆಯವರಿಗಿಂತ ಗಣಿತ, ತರ್ಕ, ಲೆಕ್ಕಾಚಾರ, ಭವಿಷ್ಯವನ್ನು ಮುಂಗಾಣುವುದು ಮೊದಲಾದವುಗಳನ್ನು ಇತರರಿಗಿಂತ ಹೆಚ್ಚು ಸಮರ್ಥವಾಗಿ ನಿಭಾಯಿಸಬಲ್ಲರು. ಇವರು ಕಿವಿಯಲ್ಲಿ ಕೇಳಿದ ವಿಷಯಕ್ಕಿಂತ ಕಣ್ಣಿನಿಂದ ನೋಡಿದ ವಿಷಯಗಳನ್ನು ಹೆಚ್ಚು ಸಮರ್ಥವಾಗಿ ಮನನ ಮಾಡಿಕೊಳ್ಳಬಲ್ಲರು.

ವಿಶ್ವದ ಅತಿ ಪ್ರತಿಭಾವಂತರೆಲ್ಲಾ ಎಡಚರು
ಪ್ರತಿಭಾವಂತರು ಹಲವಾರಿದ್ದರೂ ಅತಿ ಪ್ರತಿಭಾವಂತರು ಕೆಲವರು ಮಾತ್ರ ಇದ್ದಾರೆ. ಆಲ್ಬರ್ಟ್ ಐನ್ ಸ್ಟೈನ್, ಐಸಾಕ್ ನ್ಯೂಟನ್, ಮೇರಿ ಕ್ಯೂರಿ, ಅರಿಸ್ಟಾಟಲ್, ಅಲನ್ ಟ್ಯೂರಿಂಗ್ ರಂತಹ ಮಹಾನ್ ಮೇಧಾವಿಗಳು ಎಡಚರು. ಭಾರತದಲ್ಲೂ ನರೇಂದ್ರ ಮೋದಿ, ಸಚಿನ್ ಟೆಂಡುಲ್ಕರ್ (ಇವರು ಬಲಗೈಯಲ್ಲಿ ಬ್ಯಾಟಿಂಗ್ ಬೌಲಿಂಗ್ ಮಾಡಿದರೂ ಬರವಣಿಗೆಗೆ ಎಡಗೈಯನ್ನು ಬಳಸುತ್ತಿದ್ದರು), ರತನ್ ಟಾಟಾ, ಕರಣ್ ಜೋಹರ್, ಅಮಿತಾಭ್ ಬಚ್ಚನ್, ಅಭಿಶೇಕ್ ಬಚ್ಚನ್, ಅಷ್ಟೇ ಏಕೆ ಮಹತ್ಮಾಗಾಂಧಿಯವರೂ ಬರೆಯಲು, ಕೋಲು ಹಿಡಿಯಲು ಎಡಗೈ ಬಳಸುತ್ತಿದ್ದರು.

ವಿಶ್ವದ ಹೆಚ್ಚಿನ ಕುಬೇರರು ಎಡಚರು
ಒಂದು ಸಮೀಕ್ಷೆಯ ಪ್ರಕಾರ ಪದವೀಧರ ಎಡಚರು ಅಷ್ಟೇ ವಿದ್ಯಾರ್ಹತೆ ಮತ್ತು ಅನುಭವ ಪಡೆದಿರುವವರಿಗಿಂತ ಹದಿನೈದು ಶೇಖಡಾ ಹೆಚ್ಚು ಗಳಿಸುತ್ತಾರೆ. ವಿಶೇಷವೆಂದರೆ ಈ ಸಮೀಕ್ಷೆಯಲ್ಲಿ ಮಹಿಳೆಯರ ಸಂಖ್ಯೆ ಸ್ವಲ್ಪ ಹಿಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಇನ್ನೂ ಹಲವು ಕುತೂಹಲಕರ ವಿಷಯಗಳು ಬೆಳಕಿಗೆ ಬರಲಿವೆ.

ಹೆಚ್ಚು ಕ್ರಿಯಾತ್ಮಕರಾಗಿರುತ್ತಾರೆ
ಒಂದು ಸಿದ್ದಾಂತದ ಪ್ರಕಾರ, ಎಡಚರ ಮೆದುಳು ಬೇರೆಯವರಿಗಿಂತ ಭಿನ್ನವಾಗಿ ಯೋಚಿಸುವುದರಿಂದ ಅವರು ಹೆಚ್ಚು ಕ್ರಿಯಾತ್ಮಕರಾಗಿರುತ್ತಾರೆ ಹಾಗೂ ಅವರ ಶ್ರಮದ ಫಲವೂ ಬೇರೆಯವರಿಗಿಂತ ಭಿನ್ನವಾಗಿರುತ್ತವೆ. ಏಕೆಂದರೆ ದೇಹದ ಬಲಭಾಗವನ್ನು ಎಡಮೆದುಳೂ, ಬಲಭಾಗವನ್ನು ಎಡಮೆದುಳೂ ನಿಯಂತ್ರಿಸುವುದರಿಂದ ಎಡಚರು ಸ್ವಾಭಾವಿಕವಾಗಿ ಬಲಮೆದುಳನ್ನು ಬಳಸುತ್ತಾರೆ. ಬಲಮೆದುಳು ಎಡಮೆದುಳಿಗಿಂತ ಹೆಚ್ಚು ಕ್ರಿಯಾತ್ಮಕವಾಗಿರುವುದು ಇದಕ್ಕೆ ಕಾರಣವಾಗಿರಬಹುದು.

English summary

Are Left Handers Geniuses?

A lot of research has been done to understand if left handers are true geniuses. A left hander is a person who uses his left hand for his personal care, cooking and many more activities. However, in some cases, left handers use their right hand to write.
Story first published: Monday, October 20, 2014, 18:20 [IST]
X
Desktop Bottom Promotion