For Quick Alerts
ALLOW NOTIFICATIONS  
For Daily Alerts

ಪರಿಣಾಮಕಾರಿ ಸಂವಹನ ಕಲೆಗೆ ಈ ಏಳು ಸೂತ್ರಗಳು ರಹದಾರಿ

|

ಇಂದಿನ ಆಧುನಿಕ ಯುಗದಲ್ಲಿ ಸಂವಹನ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಯೊಂದಿಗೆ ಸ್ಪರ್ಧೆ ಸಾಮಾನ್ಯವಾಗಿದೆ. ಇಂದಿನ ತಂತ್ರಜ್ಞಾನ ಮತ್ತು ವಿಜ್ಞಾನ ಯುಗದಲ್ಲಿ ಹೆಚ್ಚು ಪಾತ್ರ ವಹಿಸುವುದು ಸಂವಹನವಾಗಿದೆ. ಸಂವಹನವು ನಮ್ಮ ಜೀವನ ಶೈಲಿಗೆ ತೀರಾ ಅತ್ಯಗತ್ಯವೂ ಹೌದು.

ಉತ್ತಮ ಸಂವನ ಕೌಶಲ್ಯವು ಸಮಾಜದಲ್ಲಿ ನಮಗೆ ಒಳ್ಳೆಯ ಬೆಲೆಯನ್ನು ತಂದುಕೊಡುತ್ತದೆ. ನಾವು ನಮ್ಮ ಸುತ್ತಲಿರುವ ಪರಿಸರ ಕೂಡ ಈ ಸಂವಹನವನ್ನು ಆಧರಿಸಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಉಕ್ತಿಯಂತೆ ಉತ್ತಮ ಸಂವಹನವು ಸಮಾಜದಲ್ಲಿ ನಮ್ಮ ಬೆಲೆಯನ್ನು ಎತ್ತಿ ತೋರಿಸುತ್ತದೆ. ಆದರೆ ತಮ್ಮಲ್ಲಿ ಉತ್ತಮ ಸಂವಹನ ಕೌಶಲ್ಯವಿಲ್ಲ ಎಂದು ಕೊರಗುವವರು ತೀರಾ ಕೀಳರಿಮೆಗೆ ಗುರಿಯಾದೇ ಇರುವುದಿಲ್ಲ.

ಈ ಸಂದರ್ಭದಲ್ಲಿ ನಮ್ಮಲ್ಲಿನ ಮಾತಿನ ಕೌಶಲ್ಯವನ್ನು ಸಾಣೆ ಹಿಡಿಯುವುದು ಹೇಗೆಂಬುದು ನಮಗೆ ತಿಳಿದಿರಬೇಕು. ನಿಮ್ಮ ಸಂವಹನ ಸುಧಾರಣೆಯಾದಲ್ಲಿ ಮಾತ್ರವೇ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಗುರಿ ನಿಮಗೆ ಕಾಣುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಸಂವಹನವನ್ನು ಉತ್ತಮಗೊಳಿಸುವ ಕೆಲ ಅಂಶಗಳತ್ತ ಗಮನ ಹರಿಸೋಣ. ಕೆಲವೊಂದು ಮುಖ್ಯ ಅಂಶಗಳನ್ನು ನಮ್ಮಲ್ಲಿ ರೂಢಿಸಿಕೊಂಡಾಗ ಸಂವಹನ ನಮಗೆ ತೀರಾ ಕಷ್ಟ ಎಂದೆನಿಸುವುದಿಲ್ಲ. ಹಾಗಿದ್ದರೆ ನಿಮ್ಮ ಬದುಕಿನ ಭವಿಷ್ಯದ ಭದ್ರ ಕೀಲಿ ಕೈ ಎಂದೆನಿಸಿರುವ ಸಂವಹನವನ್ನು ಸುಧಾರಿಸಿಕೊಳ್ಳುವುದು ಹೇಗೆಂಬುದನ್ನು ಈ ಕೆಳಗಿನ ಸ್ಲೈಡ್‌ಗಳಿಂದ ತಿಳಿದುಕೊಳ್ಳೋಣ.

ಆನ್‍ಲೈನ್‍ನಲ್ಲಿ ನೀವು ಖರೀದಿಸಬಹುದಾದ 20 ವಸ್ತುಗಳು

ಉತ್ತಮ ಆಲಿಸುವವರಾಗಿ

ಉತ್ತಮ ಆಲಿಸುವವರಾಗಿ

ನಿಮ್ಮ ಸಂವಹನ ಮೌಲ್ಯವನ್ನು ಸುಧಾರಿಸಿಕೊಳ್ಳಲು ನೀವು ಉತ್ತಮ ಆಲಿಸುವವರಾಗಿರುವುದು ಅತೀ ಅಗತ್ಯವಾಗಿದೆ. ಇದರಿಂದ ನಿಮ್ಮ ಸುತ್ತಲಿನ ಜನರಿಂದ ಕೆಲವೊಂದನ್ನು ತಿಳಿದುಕೊಂಡಂತೆ ಆಗುತ್ತದೆ. ಆದಷ್ಟು ನಿಮ್ಮ ಕಿವಿಯನ್ನು ತೆರೆದಿಟ್ಟುಕೊಳ್ಳಿ. ನೀವು ನಿಮ್ಮ ಸುತ್ತಲಿನ ಜನರಿಂದ ಹೆಚ್ಚು ಆಲಿಸಿದಂತೆ ನಿಮ್ಮೊಳಗಿನ ಮಾತುಗಾರ ಬೆಳೆಯುತ್ತಾನೆ.

ಕಣ್ಣಿನ ಸಂಪರ್ಕ

ಕಣ್ಣಿನ ಸಂಪರ್ಕ

ನಿಮ್ಮ ಸುತ್ತಲಿನ ಜನರೊಂದಿಗೆ ನೀವು ಸಂವಹಿಸುತ್ತಿರುವಾಗ ಕಣ್ಣಿನ ಸಂಪರ್ಕವನ್ನು ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಇದರಿಂದ ನಿಮ್ಮ ಸಂವಹನಕ್ಕೆ ಅಧಿಕ ಬಲ ಬಂದಂತಾಗುತ್ತದೆ. ನೆನಪಿಡಿ ಉತ್ತಮ ಸಂವಾಹದ ಕೇವಲ ಮಾತುಗಾರಿಕೆಯನ್ನು ಅವಲಂಬಿಸಿರುವುದಿಲ್ಲ. ಇತರ ಅಂಶಗಳೂ ಕೂಡ ಪರಿಣಾಮ ಬೀರುತ್ತದೆ. ಕಣ್ಣಿನ ಸಂಪರ್ಕ ಕೂಡ ಇದರಲ್ಲಿ ಒಂದಾಗಿದೆ.

ನಿಮ್ಮ ಆಂಗಿಕ ಭಾಷೆ

ನಿಮ್ಮ ಆಂಗಿಕ ಭಾಷೆ

ಕಣ್ಣಿನ ಸಂಪರ್ಕವು ನಿಮ್ಮ ಸಂವಹನ ಭಾಷೆಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ, ಆಂಗಿಕ ಭಾಷೆ ನಂತರ ಬರುತ್ತದೆ. ನಿಮ್ಮ ಸಂವಹನದ ಮಟ್ಟವನ್ನು ಆತ್ಮವಿಶ್ವಾಸವನ್ನು ದೃಢಪಡಿಸುತ್ತದೆ. ನಿಮ್ಮ ಆಂಗಿಕ ಭಾಷೆ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಕೈಗಳನ್ನು ಅತ್ತಿತ್ತ ಚಲಿಸುತ್ತಾ ಮುಕ್ತವಾಗಿ ಮಾತನಾಡಿ.

ಭಾಷೆಯ ಕೌಶಲ್ಯವನ್ನು ಸುಧಾರಿಸಿ

ಭಾಷೆಯ ಕೌಶಲ್ಯವನ್ನು ಸುಧಾರಿಸಿ

ನಿಮ್ಮ ಭಾಷೆಯ ಕೌಶಲ್ಯವನ್ನು ಸುಧಾರಿಸುವುದು ನಿಮ್ಮೆಲ್ಲಾ ಸಂವಹನದ ಪ್ರಗತಿಗೆ ಅತಿ ಮುಖ್ಯವಾಗಿದೆ. ಸಂವಹನದಲ್ಲಿ ವ್ಯಾಕರಣ ಪ್ರಮುಖವಾಗಿದೆ. ನಿಮ್ಮ ವ್ಯಾಕರಣ ಸರಿಯಾಗುವವರೆಗೆ ನಿಮ್ಮ ಪ್ರಯತ್ನವನ್ನು ಬಿಡಬಾರದು. ಇದು ನಿಮ್ಮ ಪರಿಣಾಮಕಾರಿ ಸಂವಹನಕ್ಕೆ ಅತೀ ಅಗತ್ಯವಾಗಿದೆ.

ಓದುವುದು

ಓದುವುದು

ಓದುವಿಕೆ ಅತೀ ಮುಖ್ಯವಾಗಿದೆ. ನಿಮ್ಮ ಭಾಷಾ ಕೌಶಲ್ಯವನ್ನು ಸುಧಾರಿಸಲು ಇದು ಪರಿಣಾಮಕಾರಿ. ಸುದ್ದಿಪತ್ರಿಕೆಯನ್ನು, ಪುಸ್ತಕಗಳನ್ನು ಓದುವುದು ನಿಮ್ಮ ವ್ಯಾಕರಣವನ್ನು ಪದಗಳ ಉಚ್ಛರಣೆಯನ್ನು ಸುಧಾರಿಸಲು ಸಹಾಯಕಾರಿಯಾಗಿದೆ.

ಕನ್ನಡಿಯ ಎದುರು ಮಾತನಾಡಿ

ಕನ್ನಡಿಯ ಎದುರು ಮಾತನಾಡಿ

ಈ ಅಂಶ ನಿಮ್ಮ ಸಂವಹನ ಕೌಶಲ್ಯವನ್ನು ಸುಧಾರಿಸುವುದು ಖಂಡಿತ. ಕನ್ನಡಿಯ ಎದುರು ಸ್ವಲ್ಪ ಹೊತ್ತು ನಿಂತು ಪ್ರಯತ್ನಿಸಿ. ನೀವು ಕನ್ನಡಿಯ ಎದುರು ನಿಂತಾಗ ನಿಮ್ಮನ್ನು ನಿಮಗೆ ಕಾಣಬಹುದು. ಇದು ನಿಮ್ಮ ಮುಖದ ಭಾವನೆಗಳನ್ನು ನೋಡಲು ಮತ್ತು ಆಂಗಿಕ ಭಾಷೆಯನ್ನು ಗಮನಿಸಲು ಅತೀ ಅಗತ್ಯವಾಗಿದೆ.

ಜ್ಞಾನ

ಜ್ಞಾನ

ಪರಿಣಾಮಕಾರಿ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯವನ್ನು ಸುಧಾರಿಸಲು ಜ್ಞಾನ ಅತೀ ಅಗತ್ಯವಾಗಿದೆ. ನಿಮ್ಮಲ್ಲಿ ಅತ್ಯುತ್ತಮ ಜ್ಞಾನ ಇದೆ ಎಂದಾದರೆ ಸಂವಹನವನ್ನು ಸುಧಾರಿಸುವಲ್ಲಿ ಯಾವುದೇ ತೊಡಕು ಉಂಟಾಗುವುದಿಲ್ಲ.

English summary

7 Ways To Improve Your Communication Skills

we look at ways to improve your communications skills. It answers the imperative question, "How to improve your communication skills" by substantiating valid points that make for a person with good communication skills. Here are 7 ways to improve communication skills.
Story first published: Thursday, July 24, 2014, 11:37 [IST]
X
Desktop Bottom Promotion