For Quick Alerts
ALLOW NOTIFICATIONS  
For Daily Alerts

ಸಂತೋಷದಿಂದ ಇರುವ ವ್ಯಕ್ತಿಗಳು ಖಂಡಿತವಾಗಿ ಮಾಡದ 7 ಕೆಲಸಗಳು

By Super
|

ಸಂತೋಷ ನಮ್ಮ ಸುತ್ತ- ಮುತ್ತಲಿನ ವಾತಾವರಣದ ಕಾರಣದಿಂದ ನಮಗೆ ದೊರೆಯುತ್ತದೆ. ಸಂತೋಷದಿಂದ ಇರಲು ನಾವೇನು ಮಾಡಬೇಕಾಗಿಲ್ಲ, ಕೇವಲ ಸಂತೋಷದಿಂದಿರಲು ಪ್ರಯತ್ನಿಸಬೇಕು ಅಷ್ಟೇ. ಕೆಲವರು ಮಾತ್ರ ಸಂತೋಷದಿಂದಿರುವುದು ಹೇಗೆ ಎಂದು ಕಲಿಯಲು ಪ್ರಯತ್ನಿಸಬೇಕು. ಸಂತೋಷದಿಂದಿರುವುದು ಹೇಗೆ ಎಂಬುದು ನಿಮಗೆ ಬಿಟ್ಟ ವಿಚಾರ. ಅದಕ್ಕಾಗಿ ಏನು ಮಾಡಬೇಕು ಎಂಬುದು ನಿಮಗೆ ಮಾತ್ರ ತಿಳಿದಿರುತ್ತದೆ.

ಗಂಡಸರು ಮಾಡುವ 10 ಅಸಮಾಧಾನಕರ ಕಾರ್ಯಗಳು!

ಇನ್ನೂ ಕೆಲವರಿಗೆ ಒಂದು ಒಳ್ಳೆಯ ಪುಸ್ತಕ ಮತ್ತು ಚಾಕೊಲೇಟ್ ಸಂತೋಷವನ್ನು ತರುತ್ತವೆ. ಇನ್ನು ಕೆಲವರಿಗೆ ಸಂತೋಷ ಬೇರೆ ಯಾವುದರಲ್ಲಿಯೋ ಸಿಗುತ್ತದೆ. ಇಲ್ಲಿ ನಾವು ಸಂತೋಷದಿಂದ ಇರುವ ಜನರು ಮಾಡದೆ ಇರುವ ಕೆಲವೊಂದು ಕೆಲಸಗಳನ್ನು ನಿಮಗೆ ತಿಳಿಸುತ್ತೇವೆ. ಈ ಅಂಶಗಳನ್ನು ನಿಮ್ಮಲ್ಲಿ ಸಹ ಅಳವಡಿಸಿಕೊಳ್ಳಿ, ಇದರಿಂದ ಬಹುಶಃ ನೀವು ಸಹ ಸಂತೋಷದಿಂದ ಇರುವುದನ್ನು ರೂಢಿಸಿಕೊಳ್ಳಬಹುದು.

ಹುಡುಗರೇ ಮಹಿಳೆಯರಿಗಿಂತ ಬೀರ್ ಬೊಂಬಾಟ್ ಗೊತ್ತೇನ್ರಿ?

1. ಅವರು ಸಮಸ್ಯೆಗಳನ್ನು ತಡೆಹಿಡಿಯುವುದಿಲ್ಲ:

1. ಅವರು ಸಮಸ್ಯೆಗಳನ್ನು ತಡೆಹಿಡಿಯುವುದಿಲ್ಲ:

ಸಮಸ್ಯೆಗಳನ್ನು ತಡೆಹಿಡಿಯುವುದರಿಂದ ಅವುಗಳ ಪರಿಹಾರ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸಮಸ್ಯೆಗಳ ವಿರುದ್ಧ ಹೋರಾಡುವುದು ಸಹ ಕಷ್ಟವಾಗಬಹುದು. ಆದರೆ ನೀವು ಪಟ್ಟು ಬಿಡದೆ ಅದರ ವಿರುದ್ಧ ಹೋರಾಟಕ್ಕೆ ನಿಂತರೆ ಖಂಡಿತವಾಗಿ ಆ ಸಮಸ್ಯೆ ಪರಿಹಾರವಾಗುತ್ತದೆ. ಸಮಸ್ಯೆಗೆ ಹೆದರಿ ಓಡಿ ಹೋಗುವುದರ ಬದಲು. ಆದಷ್ಟು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ. ಇದರಿಂದ ಅದರ ಕಿರಿಕಿರಿಯು ನಿಮಗೆ ತಪ್ಪುತ್ತದೆ. ಸಮಸ್ಯೆ ಉದ್ಭವಿಸಿದಾಗ ಅದು ಬೆಟ್ಟದಂತೆ ಕಾಣುತ್ತದೆ. ಅದೇ ಸಮಸ್ಯೆಯನ್ನು ಜಯಿಸಿದಾಗ ಬೆಟ್ಟದ ಮೇಲಿನ ತಂಗಾಳಿಯನ್ನು ನೀವು ಸವಿದಷ್ಟೇ ಸಂತೋಷ ನಿಮಗೆ ದೊರೆಯುತ್ತದೆ.

2. ಅವರು ಇನ್ನಿತರ ಜನರ ಕೆಲಸಗಳ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ

2. ಅವರು ಇನ್ನಿತರ ಜನರ ಕೆಲಸಗಳ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ

ನೀವು ಇತರರ ಕುರಿತಾಗಿ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸದಲ್ಲಿ ನೀವು ತೊಡಗಿಕೊಂಡಾಗ, ನಿಮ್ಮಲ್ಲಿ ಸ್ವತಂತ್ರವಾದ ಮತ್ತು ತೃಪ್ತಿಯನ್ನು ಹೊಂದಿರುವ ಒಂದು ಭಾವನೆ ಕಂಡು ಬರುತ್ತದೆ. ಯಾವಾಗ ನೀವು ಇತರರೊಂದಿಗೆ ನಿಮ್ಮನ್ನು ನೀವು ಹೋಲಿಸಿಕೊಳ್ಳಲು ಆರಂಭಿಸುತ್ತೀರೊ, ಆಗ ಶುರುವಾಗುತ್ತದೆ ನೋಡಿ ನಿಮ್ಮ ಸಂತೋಷದಲ್ಲಿ ಬಿರುಕುಗಳು ಮೂಡುತ್ತವೆ. ಅದಕ್ಕಾಗಿ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಮಾತ್ರ ನೋಡಿಕೊಂಡು ಹೋಗುವುದು ಉತ್ತಮ. ಯಾವುದೇ ರೀತಿಯ ನಕಾರಾತ್ಮಕ ಭಾವನೆಗಳು ನಿಮ್ಮ ಮನಸ್ಸಿನ ಶಾಂತತೆಯನ್ನು ಕಾಪಾಡಲು ಸಹಕರಿಸುವುದಿಲ್ಲ. ಅದಕ್ಕಾಗಿ ನೀವು ನಿಮ್ಮ ಕೆಲಸ ಮತ್ತು ಕಾರ್ಯಗಳನ್ನು ನೋಡಿಕೊಂಡು ಹೋಗುವುದರಿಂದ ನಿಮ್ಮ ಸಂತೋಷವನ್ನು ಕಾಪಾಡಿಕೊಳ್ಳಬಹುದು ಎಂಬುದು ನನ್ನ ಸಲಹೆ.

3. ಅವರು ಇತರರನ್ನು ತಮ್ಮ ಸಂತೋಷದ ಕೇಂದ್ರ ಸ್ಥಾನಕ್ಕೆ ಬರಗೊಡುವುದಿಲ್ಲ:

3. ಅವರು ಇತರರನ್ನು ತಮ್ಮ ಸಂತೋಷದ ಕೇಂದ್ರ ಸ್ಥಾನಕ್ಕೆ ಬರಗೊಡುವುದಿಲ್ಲ:

ನೀವು ಎಂದಾದರು ನಿಮ್ಮ ಸಂತೋಷಕ್ಕಾಗಿ ಇತರರ ಅನುಮತಿಯನ್ನು ಕೇಳಿದ್ದೀರಾ? ನಿಮ್ಮ ಸಂತೋಷ ನಿಮ್ಮದು, ನಿಮ್ಮ ಸಂತೋಷಕ್ಕಾಗಿ ಇತರರ ಅನುಮತಿಯನ್ನು ಕೇಳದೆ ನಿಮ್ಮ ಸಂತೋಷವನ್ನು ಆನಂದಿಸಿ. ನಿಮ್ಮ ಭಾವನೆಗಳಿಗೆ ನೀವು ಬೆಲೆ ನೀಡಿದರೆ ನಿಮ್ಮ ಸಂತೋಷವನ್ನು ಯಾರು ಕಸಿದುಕೊಳ್ಳುವುದಿಲ್ಲ. ಆದರೂ ಕೆಲವೊಮ್ಮೆ ಕೆಲವು ವಿಚಾರಗಳು ನೀವು ಅಂದುಕೊಂಡಂತೆ ನಡೆಯದೆ ಹೋದರು ಸಹ ನಿಮ್ಮ ಜೀವನದಲ್ಲಿ ಸಂತೋಷವೆಂಬುದು ಖಂಡಿತ ದೊರೆಯುತ್ತದೆ. ಖುಷಿಯಾಗಿರಲು ಸಹ ದೊಣ್ಣೆನಾಯಕನ ಅಪ್ಪಣೆ ಏಕೆ ಕೇಳುತ್ತೀರಿ. ನಿಮ್ಮ ಜೀವನ ನಿಮ್ಮ ಸಂತೋಷ!.

4. ಅವರು ನಕಾರಾತ್ಮಕವಾದಿಗಳ ಜೊತೆಗೆ ಇರುವುದಿಲ್ಲ:

4. ಅವರು ನಕಾರಾತ್ಮಕವಾದಿಗಳ ಜೊತೆಗೆ ಇರುವುದಿಲ್ಲ:

ಯಾವುದೇ ಕಾರಣಕ್ಕು ನಕಾರಾತ್ಮಕ ವಾತಾವರಣವು ನಿಮ್ಮ ಸಂತೋಷವನ್ನು ಹೆಚ್ಚಿಸುವುದಿಲ್ಲ, ಅದಕ್ಕಾಗಿ ಅಂತಹ ವಾತಾವರಣದಲ್ಲಿರುವುದು ಒಳ್ಳೆಯದಲ್ಲ. ಆದರೆ ಎಲ್ಲಾ ಸಮಯದಲ್ಲಿಯೂ ಈ ನೀತಿಯನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಕೆಲಸದ ಸ್ಥಳದಲ್ಲಿ ನೀವು ಈ ನಕಾರಾತ್ಮಕ ಭಾವನೆಯಿಂದ ನುಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ, ಹಾಗೆಂದು ಆ ಸ್ಥಳವನ್ನು ನೀವು ಬಿಡಲು ಸಹ ಆಗುವುದಿಲ್ಲ. ಏಕೆಂದರೆ ನಿಮ್ಮ ಆರ್ಥಿಕ ಭದ್ರತೆಯು ಕೆಲಸದ ಮೇಲೆ ಅವಲಂಬನೆಯಾಗಿರುತ್ತದೆ. ಈ ಕೆಲಸವು ಇಲ್ಲವಾದಲ್ಲಿ, ಹಣದ ಕೊರತೆಯಿಂದ ನಿಮ್ಮ ಸಂತೋಷ ನಾಶವಾಗಬಹುದು. ಹಾಗೆಂದು ಈ ನಕಾರಾತ್ಮಕ ವಾತಾವರಣವನ್ನು ಸರಿಪಡಿಸದೆಯು ಕೂರಲು ಸಾಧ್ಯವಾಗುವುದಿಲ್ಲ. ಹೀಗೆ ಮಾಡಿ, ನಕಾರಾತ್ಮಕ ವಾದವು ನಿಮ್ಮನ್ನು ಹಾಳು ಮಾಡಲು ಅವಕಾಶಕೊಡದಂತಹ ವಾತಾವರಣವನ್ನು ನೀವು ನಿರ್ಮಿಸಿಕೊಳ್ಳಿ. ನಿಮಗೆ ಸಂತೋಷವನ್ನುಂಟು ಮಾಡುವ ಫೋಟೊಗಳು, ವಸ್ತುಗಳು ಮತ್ತು ಸಣ್ಣ-ಪುಟ್ಟ ಅಂಶಗಳು ನಿಮ್ಮ ಕೆಲಸದ ಸ್ಥಳದಲ್ಲಿರುವಂತೆ ನೋಡಿಕೊಳ್ಳಿ. ಅವುಗಳು ನಿಮ್ಮ ಮುಖದಲ್ಲಿ ಒಂದು ಸಣ್ಣ ಮುಗುಳ್ನಗೆಯನ್ನು ಉಂಟುಮಾಡುವಂತಿರಲಿ, ಇದರಿಂದ ನಿಮ್ಮ ಸಂತೋಷವು ತನ್ನ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ. ಮುಂದೆ ಇದು ನಿರಂತರ ಸಂತೋಷವನ್ನು ತಂದುಕೊಡಲು ಸಹ ಸಹಕಾರಿಯಾಗುತ್ತದೆ.

5. ಅವರು ಕ್ಷಮಿಸುತ್ತಾರೆ ಮತ್ತು ಮರೆತು ಹೋಗುತ್ತಾರೆ;

5. ಅವರು ಕ್ಷಮಿಸುತ್ತಾರೆ ಮತ್ತು ಮರೆತು ಹೋಗುತ್ತಾರೆ;

ನಿಮ್ಮ ಸುತ್ತ-ಮುತ್ತಲು ನಡೆಯುವ ಅಸಮಾಧಾನಕಾರಿ ಅಂಶಗಳನ್ನು ಹೊತ್ತು ತಿರುಗುವುದನ್ನು ಬಿಡಿ. ಜೀವನದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಬಾರಿ ನೋವನ್ನು ಅನುಭವಿಸಿರುತ್ತಾರೆ. ನಿಮಗೆ ನೋವುಂಟು ಮಾಡಿರುವವರನ್ನು ಕ್ಷಮಿಸಿ, ಆ ಕ್ಷಣಗಳನ್ನು ಮರೆತು ಬಿಡಿ. ಈ ಅಸಮಾಧಾನ ಮತ್ತು ಸಿಟ್ಟಿನ ಭಾರವು ನಿಮ್ಮನ್ನು ನಲುಗುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕು ನಿಮ್ಮ ಜೀವನದಲ್ಲಿ ಈ ಹಿಂದೆ ನಡೆದ ಘಟನೆಗಳು ನಿಮ್ಮ ಮನಸ್ಸನ್ನು ಘಾಸಿಗೊಳಿಸದಂತೆ ತಡೆಯಿರಿ. ಆಗ ನೋಡಿ, ಕ್ಷಮಿಸುವುದರಿಂದ ನಿಮಗೆ ದೊರೆಯುವ ಅಪೂರ್ವವಾದ ಅನುಭವವನ್ನು!. ಒಮ್ಮೆ ನಿಮ್ಮ ಭೂತಕಾಲವನ್ನು ಗಮನಿಸಿ, ಭವಿಷ್ಯವನ್ನು ಮತ್ತಷ್ಟು ಸುಂದರವಾಗಿ ಕಟ್ಟಿಕೊಳ್ಳುವತ್ತ ಚಿಂತನೆ ನಡೆಸಿ.

6. ಅವರು ಯಾವುದೇ ವಿಚಾರವನ್ನು ಖಾಸಗಿಯಾಗಿ ತೆಗೆದುಕೊಳ್ಳುವುದಿಲ್ಲ;

6. ಅವರು ಯಾವುದೇ ವಿಚಾರವನ್ನು ಖಾಸಗಿಯಾಗಿ ತೆಗೆದುಕೊಳ್ಳುವುದಿಲ್ಲ;

ಕೆಲವು ಜನರು ತಮ್ಮನ್ನು ವಿಮರ್ಶೆ ಮಾಡುವುದನ್ನು ಸಹಿಸುವುದಿಲ್ಲ. ಅವರು ಆ ವಿಚಾರವನ್ನು ತೀರಾ ಖಾಸಗಿಯಾಗಿ ತೆಗೆದುಕೊಂಡು ಬಿಡುತ್ತಾರೆ. ನಿಮ್ಮನ್ನು ಹೊಗಳುವುದರಿಂದ ಅಥವಾ ತೆಗಳುವುದರಿಂದ ನಿಮಗೆ ಯಾವುದೇ ಲಾಭ ನಷ್ಟಗಳು ಸಿಗುವುದಿಲ್ಲ. ಜನರು ಏನು ಹೇಳುತ್ತಾರೋ, ಅದನ್ನು ಪರಿಗಣಿಸಿ. ಆದರೆ ಅದನ್ನು ಯಾವುದೇ ಕಾರಣಕ್ಕು ಖಾಸಗಿಯಾಗಿ ತೆಗೆದುಕೊಳ್ಳಲು ಹೋಗಬೇಡಿ. ಇವುಗಳನ್ನು ಒಂದು ಸಲಹೆ ಎಂದು ಸ್ವೀಕರಿಸಿ, ಅವುಗಳನ್ನು ನಿಮ್ಮ ಏಳಿಗೆಗೆ ಬಳಸಿಕೊಳ್ಳಿ.

7. ಅವರು ಸೇಡು ತೀರಿಸಿಕೊಳ್ಳಲು ಹಾತೊರೆಯುವುದಿಲ್ಲ :

7. ಅವರು ಸೇಡು ತೀರಿಸಿಕೊಳ್ಳಲು ಹಾತೊರೆಯುವುದಿಲ್ಲ :

ಸಂತೋಷದಿಂದ ಕಾಲ ಕಳೆಯುವವರು ಯಾವತ್ತಿಗು ಸೇಡು ತೀರಿಸಿಕೊಳ್ಳಲು ಹಾತೊರೆಯುವುದಿಲ್ಲ. ಏಕೆಂದರೆ ಅವರಿಗೆ ಇದರಿಂದ ಸಂತೋಷ ಸಿಗುವುದಿಲ್ಲ ಎಂದು ಗೊತ್ತು. ನೀವು ಸೇಡು ತೀರಿಸಿಕೊಂಡರೆ ಅದರಿಂದ ನಿಮ್ಮಲ್ಲಿ ನಿಮ್ಮ ಕುರಿತಾಗಿಯೇ ಕೀಳರಿಮೆ ಬೆಳೆಯಬಹುದು. ಅದಕ್ಕಾಗಿ ನಿಮಗೆ ನೋವುಂಟು ಮಾಡಿದವರನ್ನು ಕ್ಷಮಿಸಲು ಮನಸ್ಸು ಮಾಡಿ. ಇಲ್ಲವಾದಲ್ಲಿ ನಿಮ್ಮನ್ನು ನೋಯಿಸಿದ ವ್ಯಕ್ತಿಯಂತೆ ನೀವು ಸಹ ಆತನಿಗೆ ದುಃಖವನ್ನುಂಟು ಮಾಡುವ ವ್ಯಕ್ತಿಯಾಗುತ್ತೀರಿ.

ಈ ಅಂಶಗಳನ್ನು ಪಾಲಿಸಿ ನಗು ನಗುತ ನಲಿಯಿರಿ.

Read more about: life ಜೀವನ
English summary

7 Things Happy People Never Do

Happiness is something you can get in spite of the circumstances. They say you don’t need to do anything to be happy, just be it. However, some people just need to learn how to be happy.
Story first published: Monday, May 26, 2014, 17:02 [IST]
X
Desktop Bottom Promotion