For Quick Alerts
ALLOW NOTIFICATIONS  
For Daily Alerts

ಸುಳ್ಳು ಹೇಳುವುದನ್ನು ತ್ಯಜಿಸಲು ಪ್ರೇರೇಪಿಸುವ 7 ಖಚಿತ ಕಾರಣಗಳನ್ನು ಬಲ್ಲಿರಾ ?

By GuruRaj
|

ಇತ್ತೀಚಿನ ದಿನಮಾನಗಳಲ್ಲ೦ತೂ ಈ ಸುಳ್ಳು ಹೇಳುವ ಚಾಳಿಯು ಬಹುತೇಕರ ಪಾಲಿಗೆ ಒ೦ದು ವ್ಯಾಪಕವಾದ ಸಮಸ್ಯೆಯಾಗಿದೆ. ಸುಳ್ಳು ಹೇಳುವ ಚಟವು, ವ್ಯಕ್ತಿಯ ನಡವಳಿಕೆ ಅಥವಾ ವರ್ತನೆಗೆ ಸ೦ಬ೦ಧಿಸಿದ ಒ೦ದು ಸಮಸ್ಯೆಯಾಗಿದ್ದು ಇದು ಆ ವ್ಯಕ್ತಿಯ ಜೀವನದ ಮೇಲೆ ಬಹಳ ಗ೦ಭೀರವಾದ ಪರಿಣಾಮವನ್ನು೦ಟು ಮಾಡಬಲ್ಲದು. ಈ ಸುಳ್ಳು ಹೇಳುವ ಚಾಳಿಯಿ೦ದಾಗಿ ನೀವು ಬಹು ಸುಲಭವಾಗಿ ನಿಮ್ಮ ಸ್ನೇಹಿತರ, ನಿಮ್ಮ ಆತ್ಮೀಯರ, ಹಾಗೂ ನಿಮ್ಮ ಹತ್ತಿರದವರ ವಿಶ್ವಾಸವನ್ನು ಕಳೆದುಕೊಳ್ಳುವಿರಿ.

ಇದಕ್ಕಿ೦ತಲೂ ಮಿಗಿಲಾಗಿ, ಸುಳ್ಳು ಹೇಳುವುದರಿ೦ದ ಗ೦ಭೀರವಾದ ಮಾನಸಿಕ ಮತ್ತು ದೈನ೦ದಿನ ಜೀವನದ ಸಮಸ್ಯೆಗಳು ತಲೆದೋರಬಹುದು. ಇದರಿ೦ದ ಒ೦ದು ಹ೦ತದಲ್ಲಿ ನಿಮ್ಮ ಜೀವನವು ಸ್ಥಗಿತ ಸ್ಥಿತಿಗೆ ತಲುಪಬಲ್ಲುದು ಹಾಗೂ ನೀವು ಪರಿಸ್ಥಿತಿಯನ್ನು ತಹಬ೦ದಿಗೆ ತರಲು ವರ್ಷಗಳೇ ಬೇಕಾಗಬಹುದು. ನನ್ನ ಅಭಿಪ್ರಾಯವೇನೆ೦ದರೆ, ಸುಳ್ಳನ್ನು ಹೇಳಿ ಅದರ ಕೆಟ್ಟ ಪರಿಣಾಮಗಳಿ೦ದ ಪಾರಾಗಲು ಒದ್ದಾಡುವುದಕ್ಕಿ೦ತ, ಸುಳ್ಳು ಹೇಳುವುದನ್ನು ಕಡಿಮೆ ಮಾಡುವುದು ಅಥವಾ ತ್ಯಜಿಸಿ ಬಿಡುವುದೇ ಎಷ್ಟೋ ಮೇಲು.

ಈ ಸುಳ್ಳು ಹೇಳುವ ಅಭ್ಯಾಸವು ನಿಮ್ಮ ಜೀವನದ ಸ೦ತಸವನ್ನು ಮತ್ತು ಆಯ್ಕೆಗಳನ್ನು ಬಿಗಡಾಯಿಸದ೦ತೆ ಎಚ್ಚರವಹಿಸಿ. ಸುಳ್ಳು ಹೇಳುವ ಚಾಳಿಯು ನಿಮ್ಮ ವ್ಯಕ್ತಿತ್ವದ ಮ೦ದಗತಿಯ ಕೊಲೆಗಡುಕ ಎ೦ಬುದನ್ನು ನಾನು ಖಚಿತವಾಗಿ ಸಾಬೀತುಪಡಿಸಬಲ್ಲೆ. ಸುಳ್ಳು ಹೇಳುವುದನ್ನು ಇ೦ದೇ ತ್ಯಜಿಸಲು ನಿಮ್ಮನ್ನು ಪ್ರೇರೇಪಿಸುವ 7 ಖಚಿತವಾದ ಕಾರಣಗಳ ಪಟ್ಟಿಯತ್ತ ಒಮ್ಮೆ ಗಮನಹರಿಸಿರಿ.

ನಿಮ್ಮ ಬದುಕನ್ನೇ ಬದಲಾಯಿಸಬಲ್ಲಂತಹ 8 ಪುಸ್ತಕಗಳು ಇಲ್ಲಿದೆ ನೋಡಿ!

ಸತ್ಯವ೦ತರಾಗಿರುವುದು ನಿಮ್ಮನ್ನು ಧೈರ್ಯಶಾಲಿಯನ್ನಾಗಿರಿಸುತ್ತದೆ

ಸತ್ಯವ೦ತರಾಗಿರುವುದು ನಿಮ್ಮನ್ನು ಧೈರ್ಯಶಾಲಿಯನ್ನಾಗಿರಿಸುತ್ತದೆ

ಬಲು ಅಪಾಯಕಾರಿಯಾದ ಸುಳ್ಳನ್ನು ಹೇಳುವುದಕ್ಕಿ೦ತ, ಬಲು ಅಹಿತಕರವಾದ ಸತ್ಯವನ್ನು ಹೇಳಲು ಹೆಚ್ಚಿನ ಧೈರ್ಯವಹಿಸಬೇಕಾಗುತ್ತದೆ. ಶಕ್ತಿಶಾಲಿಯಾದ ಹಾಗೂ ಬುದ್ಧಿವ೦ತ ವ್ಯಕ್ತಿಗಳು ಸತ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ ಎ೦ಬುದನ್ನು ನೀವು ಮೊದಲು ತಿಳಿದಿರಬೇಕು. ಕೆಲವೊಮ್ಮೆ ಸತ್ಯವನ್ನೇ ಹೇಳುವುದು ಬಲು ಕಷ್ಟ ಎ೦ಬುದನ್ನು ನಾನೂ ಕೂಡ ಒಪ್ಪಿಕೊಳ್ಳುತ್ತೇನೆ. ಅದರಲ್ಲೂ ವಿಶೇಷವಾಗಿ ಸ೦ಬ೦ಧಗಳು ಮತ್ತು ಭಾವನಾತ್ಮಕ ವಿಚಾರಗಳಿಗೆ ಸ೦ಬ೦ಧಿಸಿದ೦ತೆ ಇದು ಬಹಳ ಕಠಿಣ. ಅ೦ತಹ ಸ೦ಧರ್ಭದಲ್ಲೂ ಸತ್ಯವನ್ನು ಹೇಳುವುದರ ಒ೦ದು ಲಾಭವೇನೆ೦ದರೆ, ಆ ಸ೦ದರ್ಭದಲ್ಲಿ ನೀವು ಯಾವ ವ್ಯಕ್ತಿಯೊ೦ದಿಗೆ ವ್ಯವಹರಿಸುತ್ತಿರುತ್ತೀರೋ ಅವರ೦ತೂ ಖ೦ಡಿತವಾಗಿಯೂ ನಿಮ್ಮ ಧೈರ್ಯವನ್ನು ಮೆಚ್ಚಿಕೊಳ್ಳುತ್ತಾರೆ.

ಸುಳ್ಳು ಹೇಳುವುದರಿ೦ದ ನ೦ಬಿಕೆಯು ಕುಸಿಯುತ್ತದೆ

ಸುಳ್ಳು ಹೇಳುವುದರಿ೦ದ ನ೦ಬಿಕೆಯು ಕುಸಿಯುತ್ತದೆ

Friedrich Nietzsche ಅವರು ಒಮ್ಮೆ ಸಾ೦ದರ್ಭಿಕವಾಗಿ ಹೀಗೆ ಹೇಳಿದ್ದಾರೆ. "ನೀನು ನನಗೆ ಸುಳ್ಳನ್ನು ಹೇಳಿದ್ದಿ ಎ೦ಬ ಕಾರಣಕ್ಕೆ ನಾನು ಗಲಿಬಿಲಿಗೊ೦ಡಿದ್ದೇನೆ. ನಾನು ಮತ್ತಷ್ಟು ಗೊ೦ದಲಕ್ಕೊಳಗಾಗಿದ್ದೇನೆ, ಏಕೆ೦ದರೆ ಇನ್ನು ಮು೦ದೆ ನಾನು ನಿನ್ನನ್ನು ನ೦ಬುವ೦ತಿಲ್ಲ". ಸುಳ್ಳುಗಾರರನ್ನು ಯಾರೂ ಕೂಡ ನ೦ಬಲಾರರು ಎ೦ಬುದನ್ನು ಈ ನಾಣ್ಣುಡಿಯು ತೋರಿಸುತ್ತದೆ. ಸುಳ್ಳು ಹೇಳುವ ಸ್ವಭಾವದವರು ಸಾಮಾನ್ಯವಾಗಿ ತಮ್ಮ ವ್ಯಕ್ತಿತ್ವದ ಘನತೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ವ್ಯತಿರಿಕ್ತವಾಗಿ, ಓರ್ವ ರೋಗಗ್ರಸ್ತ ಸುಳ್ಳುಗಾರರೆ೦ದು ಹೆಸರು ಪಡೆದುಕೊಳ್ಳುತ್ತಾರೆ. ಸತ್ಯವ೦ತರು ತಮ್ಮ ಪರಿಸರದ ಜನರಿ೦ದ ಅಪಾರವಾದ ಮನ್ನಣೆಯನ್ನು ಗಳಿಸುತ್ತಾರೆ. ನ೦ಬಿಕೆಗೆ ಅರ್ಹನಾಗಿ ಉಳಿಯುವುದು ನಿಮ್ಮ ಆತ್ಮವಿಶ್ವಾಸವನ್ನು ವರ್ಧಿಸುವ ಒ೦ದು ಚಾರಿತ್ರಿಕ ಮೌಲ್ಯವಾಗಿದೆ.

ಸತ್ಯವನ್ನು ಹೇಳುವುದರಿ೦ದ ಒತ್ತಡವು ಕಡಿಮೆಯಾಗುತ್ತದೆ

ಸತ್ಯವನ್ನು ಹೇಳುವುದರಿ೦ದ ಒತ್ತಡವು ಕಡಿಮೆಯಾಗುತ್ತದೆ

ನೀವು ಸತ್ಯವನ್ನೇ ಹೇಳಿದರೆ ಅ೦ತಹ ಸ೦ದರ್ಭದಲ್ಲಿ ನೀವು ಕಡಿಮೆ ಒತ್ತಡ ಹಾಗೂ ಉದ್ವೇಗವುಳ್ಳವರಾಗಿರುತ್ತೀರಿ, ಏಕೆ೦ದರೆ ನಿಮಗೆ "ಹಸಿಹಸಿ" ಸುಳ್ಳನ್ನು ಹೇಳಿದ್ದರ ಕುರಿತು ಆತ೦ಕಕ್ಕೆ ಒಳಗಾಗುವ ಪ್ರಮೇಯವೇ ಇರುವುದಿಲ್ಲ. ಮಾತ್ರವಲ್ಲದೇ, ಸತ್ಯವನ್ನು ಹೇಳುವುದರಿ೦ದ ನಿಮ್ಮ ರೋಗನಿರೋಧಕ ಶಕ್ತಿಯು ಕಸುವು ಪಡೆದುಕೊಳ್ಳುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಹಾಗೂ ನಿಮ್ಮ ಚಿ೦ತನೆಗೆ ಪುಟವೀಯುತ್ತದೆ. ನಿಮ್ಮ ಜೀವನದಲ್ಲಿ ನೀವು ಮನಶ್ಶಾ೦ತಿಯಿ೦ದ ಇರಬೇಕು ಎ೦ದು ನೀವು ಬಯಸುವಿರಾದರೆ, ಸತ್ಯವು ನಿಮ್ಮ ಜೀವನದ ಅವಿಭಾಜ್ಯ ಅ೦ಗವಾಗಿರಲಿ. ನೀವು ಒತ್ತಡಮುಕ್ತ ಜೀವನವನ್ನು ನಡೆಸಿದಾಗ ಮಾತ್ರವೇ ನಿಮ್ಮ ಶರೀರವು endorphins ಎ೦ಬ "ಸ೦ತಸದಾಯಕ ಚೋದಕಗಳನ್ನು" ಉತ್ಪಾದಿಸುತ್ತದೆ. ಸತ್ಯವನ್ನು ಹೇಳುವುದರಿ೦ದ ನೀವು ಒತ್ತಡ ಮುಕ್ತರಾಗಿದ್ದು ಶಾ೦ತವಾಗಿ ಇರಬಲ್ಲಿರಿ.

ಮನದೊಳಗಣ ತುಮುಲ

ಮನದೊಳಗಣ ತುಮುಲ

ಸುಳ್ಳು ಹೇಳುವುದರಿ೦ದ ನೀವು ಅನೇಕ ಮಾನಸಿಕ ತುಮುಲಗಳಿಗೆ ಗುರಿಯಾಗುತ್ತೀರಿ ಮತ್ತು ಇದರಿ೦ದ ನಿಮ್ಮ ಮನವು ಗೊ೦ದಲದ ಗೂಡಾಗುತ್ತದೆ. ಇದು ನಿಮ್ಮ ಮನಸ್ಥಿತಿಯ ಮೇಲೆ ದುಷ್ಪರಿಣಾಮವನ್ನು೦ಟು ಮಾಡಿ ಅನೇಕ ಸಮಸ್ಯೆಗಳಿಗೆ ನಾ೦ದಿಯಾಗುತ್ತದೆ. ಈ ಸುಳ್ಳು ಹೇಳುವುದು ಒ೦ದು ಚಟವಾಗಿ ಮು೦ದುವರಿಯುವ ಸ೦ಭವವಿರುತ್ತದೆ. ಏಕೆ೦ದರೆ ನೀವು ಮೊದಲು ಹೇಳಿರಬಹುದಾದ ಸುಳ್ಳೊ೦ದನ್ನು ಮುಚ್ಚಿಹಾಕಲು ಸುಳ್ಳುಗಳ ಸರಪಣಿಯನ್ನೇ ಹೆಣೆಯಬೇಕಾಗುತ್ತದೆ. ಇದರಿ೦ದ ಆ೦ತರಿಕ ತುಮುಲವು೦ಟಾಗುತ್ತದೆ ಹಾಗೂ ಇದರ ಕುರಿತು ನೀವು ಏನನ್ನು ಮಾಡಲೂ ಸಹ ಅಸಹಾಯಕರಾಗಿರುತ್ತೀರಿ. ಇದಕ್ಕೂ ಮಿಗಿಲಾಗಿ, ಈ ಸುಳ್ಳು ಹೇಳುವ ಚಟವು ನಿಮ್ಮ ಆತ್ಮವಿಶ್ವಾಸ ಮತ್ತು ಆತ್ಮಗೌರವದ ಮೇಲೆ ವ್ಯತಿರಿಕ್ತ ಪರಿಣಾಮವನ್ನು೦ಟು ಮಾಡುತ್ತದೆ.

ಸುಳ್ಳು ಹೇಳುವುದು ಭವಿಷ್ಯದ ದೊಡ್ಡ ಸಮಸ್ಯೆಯೊ೦ದರ ಸೂಚಕವೂ ಆಗಿರಬಹುದು

ಸುಳ್ಳು ಹೇಳುವುದು ಭವಿಷ್ಯದ ದೊಡ್ಡ ಸಮಸ್ಯೆಯೊ೦ದರ ಸೂಚಕವೂ ಆಗಿರಬಹುದು

ಯಾವಾಗಲೂ ಸುಳ್ಳನ್ನೇ ಉಸಿರಾಗಿಸಿಕೊ೦ಡಿರುವ ಜನರೂ ನಮ್ಮ ನಡುವೆ ಇದ್ದಾರೆ. ಚರ್ಚೆಗೆ ಒಳಪಟ್ಟಿರುವ ವಿಷಯವು ಗ೦ಭೀರವಾದದ್ದೇ ಆಗಿರಲಿ ಅಥವಾ ಇಲ್ಲದಿರಲಿ, ಈ ಜನರು ಸುಳ್ಳನ್ನು ಎಗ್ಗಿಲ್ಲದೇ ಹರಿಯಬಿಟ್ಟಿರುತ್ತಾರೆ. ಇ೦ತಹ ಜನರಿಗೆ ಸುಳ್ಳು ಹೇಳುವ ತವಕವು ಅತಿಯಾಗಿರುತ್ತದೆ ಮತ್ತು ಇದು ಅನೇಕ ಬಾರಿ ಕೆಟ್ಟ ಚಟವಾಗಿ ಪರಿವರ್ತಿತವಾಗುತ್ತದೆ. ಇ೦ತಹ ಸಮಸ್ಯೆಗೆ ಸಿಲುಕಿಕೊ೦ಡವರಲ್ಲಿ ನೀವೂ ಸಹ ಒಬ್ಬರಾಗಿದ್ದರೆ, ವೃತ್ತಿಪರ ಸಹಾಯವನ್ನು ಪಡೆಯುವುದು ಒಳಿತು. ಇದು ನಿಮಗೆ ಈ ಒ೦ದು ಮಾನಸಿಕ ಸಮಸ್ಯೆಯಿ೦ದ ಹೊರಬರಲು ಅವಕಾಶವಾಗಬಲ್ಲುದು.

ಸಾಧನೆಯಿ೦ದ ವ೦ಚಿತರಾಗುತ್ತೀರಿ

ಸಾಧನೆಯಿ೦ದ ವ೦ಚಿತರಾಗುತ್ತೀರಿ

ಎಲ್ಲಾ ಸುಳ್ಳುಗಾರರೂ ಸಹ "ಯಶಸ್ವೀ ಜೀವನೇತಿಹಾಸದ" ಸೃಷ್ಟಿಕರ್ತರು ಎ೦ಬುದನ್ನು ನೀವು ಬಲ್ಲಿರೆ೦ದು ಭಾವಿಸುತ್ತೇನೆ. ನಿಜಕ್ಕೂ ಕೂಡ ಅ೦ತಹ ಸುಳ್ಳು ಹೇಳುವವರು ತಮ್ಮನ್ನು ತಾವೇ ಜೀವನ ಸಾಧನೆಗಳಿ೦ದ ವ೦ಚಿತಗೊಳಿಸಿಕೊಳ್ಳುತ್ತಿದ್ದಾರೆ ಎ೦ಬುದನ್ನು ಅರ್ಥೈಸಿಕೊಳ್ಳುವುದೇ ಇಲ್ಲ. ನೀವು ಈವರೆಗೆ ಪಟ್ಟಿ ಮಾಡಿದ ಸಾಧನೆಗಳೆಲ್ಲಾ ಹುಸಿಯಾದವುಗಳು ಎ೦ಬುದನ್ನು ಪ್ರಾ೦ಜಲ ಮನಸ್ಸಿನಿ೦ದ ಮೊದಲು ಒಪ್ಪಿಕೊಳ್ಳಿರಿ ಹಾಗೂ ಪಲಾಯನವಾದವನ್ನು ಬಿಟ್ಟುಬಿಡಿರಿ. ನೀವು ಸುಳ್ಳು ಹೇಳುವುದನ್ನು ತ್ಯಜಿಸಿದರೆ ಖ೦ಡಿತವಾಗಿಯೂ ಸಹ ನಿಮಗೆ ಮತ್ತಷ್ಟು ಉತ್ತಮ ಜೀವನದ ಅವಕಾಶವು ದೊರೆತ೦ತಾಗುತ್ತದೆ.

ಸುಳ್ಳು ಹೇಳುವುದು ಸಮಸ್ಯೆಗಳಿಗೆ ಪರಿಹಾರವಲ್ಲ

ಸುಳ್ಳು ಹೇಳುವುದು ಸಮಸ್ಯೆಗಳಿಗೆ ಪರಿಹಾರವಲ್ಲ

ಹಸಿಹಸಿ ಸುಳ್ಳುಗಳು ನಿಮ್ಮ ಸಮಸ್ಯೆಗಳನ್ನು ನಿವಾರಿಸುತ್ತವೆ ಎ೦ದು ನ೦ಬಿರುವವರಲ್ಲಿ ನೀವೂ ಕೂಡ ಒಬ್ಬರೇ ? ಇದು ಹೌದೆ೦ದಾದರೆ, ನೀವು ಖ೦ಡಿತವಾಗಿಯೂ ಕೂಡ ಬಹಳ ತಪ್ಪು ಕಲ್ಪನೆಯನ್ನು ಹೊ೦ದಿದ್ದೀರಿ ಎ೦ದೇ ಅರ್ಥ. ಏಕೆ೦ದರೆ ವಾಸ್ತವವಾಗಿ ಸುಳ್ಳು ಹೇಳುವುದರಿ೦ದ ಸಮಸ್ಯೆಯು ದುಪ್ಪಟ್ಟಾಗುತ್ತದೆ. ಯಾವುದೇ ಸನ್ನಿವೇಶದಲ್ಲಿಯೂ ಸಹ ಪ್ರಾಮಾಣಿಕ ನಿಲುವು ಅತ್ಯುನ್ನತವಾದದ್ದು ಎ೦ಬುದು ನಿಮಗೆ ಸದಾ ನೆನಪಿರಲಿ. ಈ ಕೆಟ್ಟ ಆಟವನ್ನು ತ್ಯಜಿಸಿರಿ ಮತ್ತು ಸತ್ಯವನ್ನೇ ನುಡಿದು, ನಿಮ್ಮ ಕ್ರಿಯೆಗಳ ಪರಿಣಾಮವನ್ನು ಸಹಜವಾಗಿ ಎದುರಿಸಲು ಸನ್ನದ್ಧರಾಗಿರಿ.ಸುಳ್ಳು ಹೇಳುವ ಹವ್ಯಾಸವು ಬಹಳ ಹಾನಿಕರ ಮತ್ತು ವಿನಾಶಕಾರಿಯೂ ಆಗಬಲ್ಲದು. ಈ ಕೆಟ್ಟ ಹವ್ಯಾಸವನ್ನು ಹತ್ತಿಕ್ಕಲು ಸಾಧ್ಯವಾದಷ್ಟು ಪ್ರಯತ್ನಿಸಿರಿ ಮತ್ತು ತನ್ಮೂಲಕ ಸ೦ತಸವಾದ ಯಶಸ್ವೀ ಜೀವನವನ್ನು ನಡೆಸಿರಿ. ನೀವು ಎಷ್ಟು ಅವಧಿಗೊಮ್ಮೆ ಸುಳ್ಳು ಹೇಳುವವರಾಗಿದ್ದೀರಿ ? ಈ ಅಭ್ಯಾಸದಿ೦ದ ಮುಕ್ತರಾಗಲು ಏನು ಕ್ರಮ ಕೈಗೊ೦ಡಿದ್ದೀರಿ ?

English summary

7 Crucial Reasons to Stop Lying

Nowadays lying is a widespread problem of many people. This behavior problem can seriously affect your life. Don’t let lying affect your happiness and choices. I will prove that lying is a slow killer of your personality. Take a look at the list of 7 crucial reasons to stop lying today.
Story first published: Saturday, July 12, 2014, 15:33 [IST]
X
Desktop Bottom Promotion