For Quick Alerts
ALLOW NOTIFICATIONS  
For Daily Alerts

ನೀವು ಉದ್ಯೋಗ ಇಷ್ಟಪಡುವುದಿಲ್ಲವೆನ್ನುವ ಐದು ಚಿಹ್ನೆಗಳು

By hemanth p
|

ಕೆಲವೊಮ್ಮೆ ನಿಮ್ಮ ಉದ್ಯೋಗ ಇಷ್ಟಪಡದಿರುವ ಕೆಲವೊಂದು ಚಿಹ್ನೆಗಳನ್ನು ಸುಲಭವಾಗಿ ಕಡೆಗಣಿಸಬಹುದು. ಯಾಕೆಂದರೆ ನೀವು ದೈನಂದಿನ ಕೆಲಸಕ್ಕೆ ಒಗ್ಗಿಕೊಂಡಿರುತ್ತೀರಿ. ಆದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ನಿಮ್ಮ ಟೇಬಲ್ ಮೇಲಿರುವ ಫೈಲ್ ಗಳನ್ನೆಲ್ಲಾ ತೆರವುಗೊಳಿಸಿ, ಓಡಬೇಕೆಂಬ ಮನಸ್ಸಿನ ಮಾತನ್ನು ಕೇಳಬೇಕು. ನಿಮ್ಮ ಬಾಸ್ ಜತೆ ಮಾತನಾಡಲು ಅಥವಾ ಮತ್ತೊಂದು ಕೆಲಸ ಹುಡುಕಲು ಇದು ಸಕಾಲವೆನ್ನುವ ಸಾಮಾನ್ಯ ಮಾರ್ಗಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಈ ನಂಬಿಕೆಗಳು ಜೀವನಕ್ಕೆ ಅತಿ ಮುಖ್ಯ ಆಧಾರ

1. ಬೆಳಿಗ್ಗೆ ನಿದ್ದೆಯಿಂದ ಏಳದೇ ಇರುವುದು
ನಿಮ್ಮ ಕೆಲಸ ಇಷ್ಟವಿಲ್ಲ ಎಂದು ಹೇಳುವ ಅತ್ಯಂತ ಸಾಮಾನ್ಯ ಚಿಹ್ನೆ ಇದಾಗಿದೆ. ಮೂರು ಸಲ ಅಲರಾಂ ಆದರೂ ನೀವು ಹಾಸಿಗೆ ಬಿಟ್ಟು ಮೇಲೇಳದಿದ್ದರೆ ಕೆಲಸದ ಮತ್ತೊಂದು ದಿನ ಆರಂಭಿಸಲು ನಿಮಗೆ ಇಷ್ಟವಿಲ್ಲದಂರ್ಥ. ರಾತ್ರಿ ಪೂರ್ತಿ ನಿದ್ರೆಯ ಬಳಿಕ ನೀವು ಸಂಪೂರ್ಣವಾಗಿ ಬತ್ತಿ ಹೋಗಿದ್ದರೆ ಇದು ಉದ್ಯೋಗದ ವಿರುದ್ಧದ ಮತ್ತೊಂದು ಲಕ್ಷಣ. ನಾನು ಮೊದಲ ಸಲ ಉದ್ಯೋಗ ಆರಂಭಿಸಿದಾಗ ನಾನೇ ಸ್ವಂತ ಉದ್ಯೋಗ ಮಾಡಬೇಕೆಂದಿದ್ದೆ. ಆದರೆ ಎಲ್ಲವೂ ಸರಿಯಾಗಿದೆ ಎಂದು ನನ್ನ ಮನವೊಲಿಸಿಕೊಂಡೆ. ಆದರೆ ದೀರ್ಘ ಪ್ರಯಾಣ, ಸೋಲುವ ಗಂಟೆಗಳು ಮತ್ತು ಅವಮಾನದ ಕೆಲಸವನ್ನು ದೇಹವು ಪ್ರತಿಭಟಿಸುತ್ತಲೇ ಇದೆ. ಅದರ ಮಾತು ಕೇಳಿ!

5 Telling Signs You Don't like Your Job

2. ಸಹೋದ್ಯೋಗಿಗಳಿಂದ ಬೇರ್ಪಡುವಿಕೆ
ನೀವು ಮೊದಲ ಸಲ ಕೆಲಸ ಆರಂಭಿಸಿದಾಗ ತುಂಬಾ ಉಲ್ಲಾಸ ಹಾಗೂ ಚುರುಕಿನಿಂದ ಇದ್ದೀರಿ ಎನ್ನುವುದನ್ನು ನೆನಪಿಸಿಕೊಳ್ಳಿ. ಆದರೆ ಈಗ ಎಲ್ಲಾ ಸಮಯದಲ್ಲಿ ನಿಮಗೆ ಮನಸ್ಸಿಲ್ಲದೆ ಭಾವನೆಯಾಗುತ್ತಿದ್ದರೆ ಇದಕ್ಕೆ ನೀವು ಮತ್ತು ನಿಮ್ಮ ಸಹೋದ್ಯೋಗಿಗಳು ಕಾರಣವಲ್ಲ. ನನ್ನ ಹಿಂದಿನ ಹುದ್ದೆಯಲ್ಲಿ ಅತೃಪ್ತಿಯಿಂದ ಇದ್ದಾಗ ಉತ್ತಮವಾಗಿ ಮತ್ತು ಹೆಚ್ಚು ಅರ್ಥಗರ್ಭಿತವಾಗಿ ಕೆಲಸ ಮಾಡುವ ಸಹೋದ್ಯೋಗಿಗಳ ವಿರುದ್ಧ ಸಿಡುಕುತ್ತಿದ್ದೆ. ಇದರ ಪರಿಣಾಮವಾಗಿ ಸಹೋದ್ಯೋಗಿಗಳೊಂದಿಗೆ ನಾನು ಸಂಬಂಧಿಸಿದವಲ್ಲವೆನ್ನುವ ಭಾವನೆ ಮೂಡುತ್ತಿತ್ತು.

ಯಶಸ್ವೀ ಪುರುಷರಾಗಲು ಬೆಳೆಸಿಕೊಳ್ಳಬೇಕಾದ 4 ಹವ್ಯಾಸಗಳು

3. ಹೊಸ ಕಾರ್ಯಗಳನ್ನು ಪಡೆಯದಿರುವುದು
ನಿಮ್ಮ ಉದ್ಯೋಗವನ್ನು ಇಷ್ಟಪಡುವುದಿಲ್ಲವೆನ್ನುವುದಕ್ಕೆ ಇದು ಅತ್ಯಂತ ದೊಡ್ಡ ಲಕ್ಷಣ. ಕಚೇರಿಗೆ ಬಂದ ಪ್ರತೀ ಸಲವೂ ನಿಮ್ಮ ಮನಸ್ಸು ವಿಚಲಿತಗೊಳ್ಳುತ್ತಿದ್ದರೆ ನಿಮ್ಮ ಹುದ್ದೆಯತ್ತ ಒಂದು ದೃಷ್ಟಿಹರಿಸಿ. ನೀವು ಇದನ್ನು ಹೇಗೆ ಕೊನೆಗೊಳಿಸಬಹುದು? ನೀವು ನಿಜವಾಗಿಯೂ ಬಯಸಿರುವುದು ಇದೇಯಾ? ಕೆಲಸ ನಿಮ್ಮನ್ನು ಪ್ರೇರೇಪಿಸುತ್ತಿದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲ' ಎನ್ನುವ ಉತ್ತರ ನೀಡಿದ್ದರೆ ನೀವು ಕಚೇರಿಯ ಕುರ್ಚಿಗೆ ಭಾರ. ಬೇರೆ ಕೆಲಸ ಹುಡುಕುವ ಸಮಯ ಬಂದಿದೆ.

4. ಸಮಯಕ್ಕೆ ಸರಿಯಾಗಿ ಕಾರ್ಯಯೋಜನೆ ಪೂರ್ಣಗೊಳಿಸದಿರುವುದು
ನೀವು ಪರಿಪೂರ್ಣ ಸ್ಪರ್ಧಿ, ಸಮರ್ಥ ಮಹಿಳೆ(ನೀವು ಹಾಗೆಂದು ನನಗೆ ತಿಳಿದಿದೆ) ಹೀಗಿರುವಾಗ ಸಮಯಕ್ಕೆ ಸರಿಯಾಗಿ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಬೇಕು. ಆದರೆ ಇದನ್ನು ಮಾಡಲಾಗದಿದ್ದರೆ ನೀವು ಅತಿಯಾಗಿ ಕೆಲಸ ಮಾಡಿದ್ದೀರಿ ಅಥವಾ ನಿಮ್ಮ ಬಾಸ್ ಮಾಡಬೇಕೆಂದು ಹೇಳುವ ಕಾರ್ಯಯೋಜನೆಗಳು ಅರ್ಥವಿಲ್ಲದ್ದು. ನಾನು ಎರಡನೇ ಸಮಸ್ಯೆ ಎದುರಿಸುತ್ತಿದ್ದೇನೆ. ಯಾವುದೇ ಅಲ್ಪ ಅಗತ್ಯವಿರುವ, ಬೇರೆಯೇ ವಿಭಾಗದ ಕಾರ್ಯಯೋಜನೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

5. ನೀವು ಹಿಂಭಡ್ತಿ ಪಡೆಯಲು ಸಿದ್ಧರಾಗಿದ್ದೀರಿ
ನೀವು ಉದ್ಯೋಗ ಇಷ್ಟಪಡುವುದಿಲ್ಲವೆನ್ನುದಕ್ಕೆ ಸ್ಪಷ್ಟವಾದ ಕಾರಣವೆಂದರೆ ದಿನದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಟೇಬಲ್ ಎದುರು ಕುಳಿತುಕೊಂಡರೂ ಪತ್ರಗಳ ವಿಲೇವಾರಿ ಮತ್ತು ಕ್ಯಾಶ್ ರಿಜಿಸ್ಟರ್ ನಂತಹ ಕೆಲಸದ ಕನಸು ಕಾಣುವುದು ಅಥವಾ ಮತ್ತೊಂದು ರೀತಿ ಕ್ಯಾಲಿಫೋರ್ನಿಯಾಗೆ ಹೋಗುವುದು(ನಾನು ಯಾವತ್ತೂ ಆ ನಗರಕ್ಕೆ ಹೋಗಿಲ್ಲ). ನೀವು ಬೇರೆ ಎಲ್ಲಿಗಾದರೂ ಹೋಗಬೇಕೆಂದು ಬಯಸಿರುತ್ತೀರಿ. ಆದರೆ ನಿಯಮಿತವಾಗಿ ಕಚೇರಿಯಲ್ಲೇ ಇರುತ್ತೀರಿ. ಹೀಗಿದ್ದರೆ ನೀವು ಬದಲಾವಣೆ ಮಾಡಬೇಕು. ಮುಂದಿನ ಹೆಜ್ಜೆ ಇಡುವುದು ನಿಮಗೆ ಬಿಟ್ಟ ವಿಚಾರ.

English summary

5 Telling Signs You Don't like Your Job

Sometimes, it can be all too easy to ignore signs you don’t like your job in favor of the grin and bear it routine Here are 7 commons ways to know it’s time to talk with your boss…or start another job hunt.
Story first published: Wednesday, June 4, 2014, 17:08 [IST]
X
Desktop Bottom Promotion