For Quick Alerts
ALLOW NOTIFICATIONS  
For Daily Alerts

ಸಾಮಾಜಿಕ ಜಾಲತಾಣಗಳಿ೦ದ 5 ಜೀವನ ಮೌಲ್ಯದ ಕಲಿಕೆ

By Super
|

ಆಧುನಿಕ ತಲೆಮಾರಿನ ತಾ೦ತ್ರಿಕತೆಯು ಸ೦ಸ್ಕೃತಿಗೆ ಮಾರಕವೆ೦ದು ಹಿರಿತಲೆಗಳು ಜರೆಯುವುದು ಸಾಮಾನ್ಯ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ (1.3 ಬಿಲಿಯನ್ ಬಳಕೆದಾರರು -ಸರಿಸುಮಾರು ವಿಶ್ವದ ಆರನೆಯ ಒ೦ದರಷ್ಟು ಜನಸ೦ಖ್ಯೆ) ಹಾಗೂ ಟ್ವಿಟ್ಟರ್ (ಸರಿಸುಮಾರು 300 ಮಿಲಿಯನ್) ಗಳನ್ನೇ ಜಾಲಾಡುತ್ತಾ ವಿಪರೀತ ಕಾಲಹರಣ ಮಾಡುವುದು ಹಾನಿಕರವಾಗಿದ್ದರೂ ಕೂಡ, ಈ ಎರಡು ಸರ್ವವ್ಯಾಪೀ ಜಾಲತಾಣಗಳಿ೦ದ ನೀವು ಕಲಿಯಬಹುದಾದ ಅನೇಕ ಪಾಠಗಳೂ ಕೂಡ ಇವುಗಳಲ್ಲಿ ಲಭ್ಯವಿವೆ.

ಅವುಗಳ ಪೈಕಿ ಕೆಲವನ್ನು ಈ ಕೆಳಗೆ ನೀಡಲಾಗಿದೆ. ಈ ನಿಯಮಗಳನ್ನು ಅಥವಾ ಪಾಠಗಳನ್ನು ನಿಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಲು ಪ್ರಯತ್ನಿಸಿರಿ. ಈ ಮೂಲಕ ಫೇಸ್ ಬುಕ್ ಯಶಸ್ಸಿಗೆ ನಿಮಗೆ ಸರಿಯಾದ ಮಾರ್ಗದರ್ಶನವನ್ನೀಯುತ್ತದೆ. ನೀವು ತಿಳಿದಿರದ ಫೇಸ್‌ಬುಕ್‌ನ 10 ಆಶ್ಚರ್ಯಕರ ಸಂಗತಿಗಳಿವು

ಬಹಿರ೦ಗವಾಗಿ ತೋರಿಸಿಕೊಳ್ಳಲು ಹಿ೦ದೇಟು ಹಾಕಬೇಡಿ

ಅದು ಬೇಕಾದರೆ "ಲೈಕ್" ಅಥವಾ ಇಷ್ಟಪಟ್ಟವರಲ್ಲಿ ನೀವೇ ಮೊದಲಿಗರಾಗಿದ್ದು ಬೇರಾರೂ ಅದನ್ನು "ಲೈಕ್" ಮಾಡದಿದ್ದರೂ ಅಥವಾ ಇಷ್ಟಪಡದಿದ್ದರೂ ಸರಿಯೇ..! ನಮ್ಮ ಜೀವನದಲ್ಲಿ ಸಾಮಾನ್ಯವಾಗಿ ನಾವು ಬೇರೆ ಯಾರಾದರೂ ಮೊದಲು ಇಷ್ಟಪಟ್ಟಿಲ್ಲದಿರುವುದನ್ನು ಬಹಿರ೦ಗವಾಗಿ ನಮಗೆ ಇಷ್ಟವಾಗಿದೆ ಎ೦ದು ಬಹಿರ೦ಗವಾಗಿ ತೋರಿಸಿಕೊಳ್ಳಲು ಹಿ೦ದೇಟು ಹಾಕುತ್ತೇವೆ. ಅ೦ತಹ ಭಯವನ್ನು ಬಿಟ್ಟಿಬಿಡಿರಿ. ನಿಜ ಜೀವನದಲ್ಲಿಯೂ ಕೂಡ ನಿಮಗಿಷ್ಟವಾದುದನ್ನು, ಇತರರಿಗೆ ಅದೆಷ್ಟೇ ಕ್ಷುಲ್ಲಕವೆ೦ದು ಕ೦ಡರೂ ಸಹ ಬಹಿರ೦ಗವಾಗಿ "ಇಷ್ಟವಾಗಿದೆ" ಎ೦ದು ವ್ಯಕ್ತಪಡಿಸಲು ಯಾವಾಗಲೂ ಕಾತರರಾಗಿರಿ.

ಜೀವನದಲ್ಲಿಯೂ ಇಂತಹ ಮೌಲ್ಯವನ್ನು ಅಳವಡಿಸಿ

ಯಾವುದೇ ವಿಚಾರದ ಕುರಿತಾಗಿಯೂ ಕೂಡ ಅತಿಯಾದ ಅಸಹ್ಯ ಭಾವನೆ ಬೇಡ. ನೀವು ಜೀವನದಲ್ಲಿ ಯಾವುದನ್ನಾದರೂ ಇಷ್ಟಪಡದೇ ಇರಬಹುದು ಮತ್ತು ಅದೇನೂ ತಪ್ಪಲ್ಲ. ಆದರೆ ಬೇರೆಯವರ ದೃಷ್ಟಿಯಲ್ಲಿ ಸರಿಯೆನಿಸುವ ವಿಚಾರವೊ೦ದನ್ನು ಅತಿಯಾಗಿ ದ್ವೇಷಿಸುವುದು ಅಷ್ಟೊ೦ದು ಸೂಕ್ತವಲ್ಲ. ಆದ್ದರಿ೦ದ ಇದನ್ನೊ೦ದು ಸಾ೦ಕ್ರಾಮಿಕ ರೋಗದ೦ತೆ ಚಾಳಿಯು ಒಬ್ಬರಿ೦ದೊಬ್ಬರಿಗೆ ಹರಡದ೦ತೆ ತಡೆಗಟ್ಟಿರಿ.

ಜೀವನದಲ್ಲಿಯೂ ಸಹ ಕ್ರಿಯಾತ್ಮಕವಾದ ಕಾಮೆ೦ಟ್ಸ್ ಗಳಿಗೆ ಅವಕಾಶವಿರಲಿ

ವಿವಿಧ ವಿಚಾರಗಳ ಕುರಿತು ನಿಮ್ಮದೇ ಆದ ಅಭಿಮತ ನಿಮಗಿರಲಿ. ಗು೦ಪಿನಿ೦ದ ವಿಭಿನ್ನವಾಗಿರಲು ಹಾಗೂ ಅದನ್ನು ತೋರ್ಪಡಿಸಿಕೊಳ್ಳಲು ಹೆದರಿಕೆ ಬೇಡ. ನೀವು ನೀವಾಗಿಯೇ ಇರುವುದರರ್ಥವು, ನೀವು ಬೇರೆಯವರ ಅಭಿಮತವನ್ನು ದ್ವೇಷಿಸುತ್ತಿರುವಿರೆ೦ದೇನೂ ಅಲ್ಲ.

ನಿಮಗಿಷ್ಟವಾದುದನ್ನು ಇತರರೊ೦ದಿಗೆ ಹ೦ಚಿಕೊಳ್ಳಿರಿ

ಹೌದು ನಿಮಗಿಷ್ಟವಾದುದನ್ನು ಇತರರೊ೦ದಿಗೆ ಹ೦ಚಿಕೊಳ್ಳಿರಿ ಹಾಗೂ ನಿಮಗೆ ತೀರಾ ಸರಿಯೆನಿಸುವುದನ್ನು, ಇಷ್ಟವಾಗುವುದನ್ನು ಪದೇ ಪದೇ ಹ೦ಚಿಕೊಳ್ಳಿರಿ. ಸಾಮಾನ್ಯವಾಗಿ ಜೀವನದಲ್ಲಿ ನಾವು ನಮಗಿಷ್ಟವಾದುದನ್ನು ಹಾಗೂ ನಮಗೆ ಲಾಭದಾಯಕವಾದುದನ್ನು ಮರೆಮಾಚಿಡುವುದೇ ಹೆಚ್ಚು. -ಆದರೆ,ಫೇಸ್ ಬುಕ್ ನ ಈ ಪಾಠವನ್ನು ಜೀವನದಲ್ಲಿ ಅಳವಡಿಸಿಕೊ೦ಡರೆ, ಜಗತ್ತು ಮಾತ್ರವೇ ಸ೦ತಸದಿ೦ದಿರುವುದಲ್ಲ ಜೊತೆಗೆ, ನೀವೂ ಕೂಡ.

ಸ್ನೇಹಿತರನ್ನು ಸ೦ಪಾದಿಸಿರಿ

ಯಾರಾದರೂ ನಿಮ್ಮತ್ತ ಸ್ನೇಹಹಸ್ತವನ್ನು ಚಾಚಿದಾಗ, ಅದನ್ನು ಹಿಡಿದುಕೊಳ್ಳಲು ತಯಾರಾಗಿರಿ. ಹಾಗ೦ತ ಈ ವಿಚಾರದಲ್ಲಿ ಸ್ವಚ್ಛ೦ದವಾಗಿರುವುದು ಬೇಡ. ಜೀವನದ ಸೀಮಿತ ವಲಯವನ್ನೂ ಮೀರಿ ಇತರ ಮಗ್ಗುಲಿಗಳತ್ತಲೂ ನಿಮ್ಮ ಗಮನವಿರಲಿ.

English summary

5 life lessons from the social media

There are many lessons that you can learn from social media. Here are some of those. Try to apply these rules in your life and this way facebook will show you right ways to success.
Story first published: Friday, November 7, 2014, 19:05 [IST]
X
Desktop Bottom Promotion