For Quick Alerts
ALLOW NOTIFICATIONS  
For Daily Alerts

ಯಶಸ್ವೀ ಪುರುಷರಾಗಲು ಬೆಳೆಸಿಕೊಳ್ಳಬೇಕಾದ 4 ಹವ್ಯಾಸಗಳು

By Arpitha Rao
|

ಜೀವನದಲ್ಲಿ ಯಶಸ್ಸನ್ನುಗಳಿಸಲು ಕಷ್ಟಪಟ್ಟು ದುಡಿಯುವುದರ ಜೊತೆಗೆ ಕುಶಲತೆಯೂ ಅಷ್ಟೇ ಅವಶ್ಯಕ. ನಾವೆಲ್ಲ ಜೀವನದಲ್ಲಿ ಯಶಸ್ಸನ್ನುಗಳಿಸಬೇಕು ಎಂದು ಬಯಸುತ್ತೇವೆ.ಆದರೆ ಕಷ್ಟಪಟ್ಟು ದುಡಿಯುವುದರಲ್ಲೇ ನಮ್ಮ ಬದುಕು ಸಾಕಷ್ಟು ಸವೆಯುತ್ತದೆ.ಕೆಲವು ಸಾಮಾನ್ಯ ಹವ್ಯಾಸಗಳು ಮತ್ತು ಸ್ಮಾರ್ಟ್ ಯೋಜನೆಗಳಿಂದ ಬದುಕಿನಲ್ಲಿ ಯಶಸ್ಸುಗಳಿಸುವುದು ಸಾಧ್ಯವಿದೆ.

ಈ ನಂಬಿಕೆಗಳು ಜೀವನಕ್ಕೆ ಅತಿ ಮುಖ್ಯ ಆಧಾರ

ಬೆಳಗ್ಗೆ ಬೇಗ ಏಳಿ:
ಮುಂಜಾನೆ ದಿನದ ಅತಿ ಹೆಚ್ಚು ಉತ್ಸುಕರಾಗಿರುವ ಕಾಲ.ನಿಮ್ಮ ದೇಹ ಮತ್ತು ಮನಸ್ಸು ಎರಡೂ ಕೂಡ ಮುಂಜಾನೆ ಸಮಯದಲ್ಲಿ ಉಲ್ಲಾಸಯುತವಾಗಿರುತ್ತದೆ.ನಿಮ್ಮ ದಿನಗಳನ್ನು ಆಫೀಸಿನಲ್ಲಿ ಪ್ರಾರಂಭಿಸಬೇಡಿ,ಅದಕ್ಕಿಂತ ಎರಡು ತಾಸು ಮೊದಲೇ ಪ್ರಾರಂಭಿಸಿ.ದಿನದಲ್ಲಿ ಏನೇನು ಮಾಡಬೇಕು,ನಿಮ್ಮ ಗುರಿ ಏನು ಎಂಬುದನ್ನು ಲಿಸ್ಟ್ ಮಾಡಿಕೊಳ್ಳಿ,ಮತ್ತು ಅದನ್ನು ಪಾಲಿಸಿ.

4 habits of a successful man

ವರ್ಕ್ ಔಟ್:
ನಿಮ್ಮ ದೇಹವನ್ನು ಅರೋಗ್ಯಯುತವಾಗಿ ಇರಿಸಿಕೊಂಡಲ್ಲಿ ನೀವು ಉತ್ಸುಕರಾಗಿರಬಹುದು.ಪ್ರತಿದಿನ ವ್ಯಾಯಾಮ ಮಾಡಿ ಇದರಿಂದ ನಿಮ್ಮ ಯಶಸ್ಸಿಗೆ ಬೇಕಾದ ಹಾರ್ಡ್ ವರ್ಕ್ ಮಾಡಲು ನಿಮ್ಮಲ್ಲಿ ಉಲ್ಲಾಸವನ್ನು,ಶಕ್ತಿಯನ್ನು ಪಡೆಯುತ್ತೀರಿ.

ಭಾರತದಲ್ಲಿರುವ ಕೆಲವೊಂದು ಆಶ್ಚರ್ಯಕರವಾದ ಮೂಢನಂಬಿಕೆಗಳು

ನಿಮಗೆ ನೀವೇ ವರ:
ನಿಮ್ಮ ಆತ್ಮ ವಿಶ್ವಾಸ ಹೆಚ್ಚಿದಲ್ಲಿ,ಅರ್ಧ ಕೆಲಸ ಆದಂತೆ.ಜೊತೆಗೆ ನಿಮ್ಮ ಸೌಂದರ್ಯ ನಿಮ್ಮ ಆತ್ಮ ವಿಶ್ವಾಸ ಇನ್ನಷ್ಟು ಹೆಚ್ಚಿಸುತ್ತದೆ.ನಿಮಗೆ ನೀವು ಒಳ್ಳೆಯ ರೀತಿಯಲ್ಲಿ ಡ್ರೆಸ್ ಆಗಿದ್ದೀರಿ ಮತ್ತು ಚೆನ್ನಾಗಿ ಕಾಣಿಸುತ್ತಿದ್ದೀರಿ ಎನಿಸಿದರೆ ನಿಮ್ಮ ಆತ್ಮ ವಿಶ್ವಾಸವನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ.ಹಾಗೆಯೇ ಇತರರು ಕೂಡ ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ಕಾಣುತ್ತಾರೆ.

ಸರಿಯಾಗಿ ತಿನ್ನಿ:
ನೀವು ತಿನ್ನುವ ಆಹಾರ ನಿಮಗೆ ಶಕ್ತಿ ನೀಡಬೇಕೇ ಹೊರತು,ಹಾಸಿಗೆಗೆ ಹೋಗುವಂತೆ ಮಾಡಬಾರದು. ನಿಮ್ಮ ಮಧ್ಯಾಹ್ನದ ಊಟ ನಿಮಗೆ ನಿದ್ದೆ ತರಿಸುತ್ತಿದೆ ಎಂದರೆ ನೀವು ಅದನ್ನು ಬದಲಿಸಿ ಲೈಟ್ ಆಗಿರುವ ಮತ್ತು ಅರೋಗ್ಯಯುತವಾಗಿರುವ ಊಟವನ್ನು ಮಾಡಬೇಕು.

Read more about: ಜೀವನ ಕೆಲಸ life work
English summary

4 habits of a successful man

We all want to be successful in life. But many of us end up working harder in wrong areas of life. But simple habits and smarter thinking can bring your success rate high in your life.
X
Desktop Bottom Promotion