For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?

|

ಜೀವನದಲ್ಲಿ ಆಸೆ, ನೋವು, ನಲಿವು ಮತ್ತು ನೆನಪುಗಳು ಎಲ್ಲವೂ ಇರುತ್ತವೆ. ಜೀವನ ನಾವಂದು ಕೊಂಡಂತೆ ಅಲ್ಲ. ಒಮ್ಮೊಮ್ಮೆ ಇದು ಸರಾಗವಾಗಿ ಸಾಗುತ್ತಿರುವಂತೆ ಕಂಡರು ಅದರ ಅಂತರಾತ್ಮದಲ್ಲಿ ನಮ್ಮಿಂದ ಮತ್ತೇನೋ ಬಯಸುತ್ತಿರುತ್ತದೆ. ನಾವು ಜೀವನೋಪಾಯಕ್ಕಾಗಿ ಏನೆಲ್ಲ ಮಾಡಿದರು ಜೀವನವು ನಮ್ಮಿಂದ ಮತ್ತಷ್ಟು ಅಧಿಕ ಶ್ರಮ, ಸಾಮರ್ಥ್ಯ ಮತ್ತು ಬದ್ಧತೆಯನ್ನು ಬಯಸುತ್ತದೆ.

ಆದರೆ ಕೆಲವೊಮ್ಮೆ ನಾವು ನಮಗೆ ಎದುರಾಗುವ ಸವಾಲುಗಳು ಮತ್ತು ಸಮಸ್ಯೆಗಳಿಂದಾಗಿ ನಿಷ್ಕ್ರಿಯಗೊಂಡು ಬಿಡುತ್ತೇವೆ. ಆಗ ನಮ್ಮ ತಾರ್ಕಿಕ ಜ್ಞಾನವನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಮತ್ತು ಮುಖ್ಯವಾಗಿ " ನಾವೇಕೆ ಸೋಲುತ್ತೇವೆ ಎಂಬುದಕ್ಕೆ ಕಾರಣಗಳನ್ನು ತಿಳಿದುಕೊಳ್ಳಬೇಕು".

ಜೀವನದಲ್ಲಿ ಸೋಲುತ್ತೇವೆ ಎಂಬ ವಿಚಾರವು ಯಾವತ್ತಿಗೂ ಚಿಂತೆ ಮತ್ತು ದುಃಖಕ್ಕೆ ಕಾರಣವಾಗುವ ಅಂಶವಲ್ಲ. ಅದರ ಬದಲಿಗೆ ಇದು ನಮಗೆ ಬೆಳೆಯಲು ಮತ್ತು ಹೊಸ ಹಾದಿಗಳನ್ನು ಪರಿಚಯಿಸಲು ಒದಗಿ ಬಂದಿರುವ ಅವಕಾಶ ಎಂದು ನಾವು ಭಾವಿಸಬೇಕು. ಸೋಲು ಎನ್ನುವುದು ಕೇವಲ ನಮ್ಮೊಬ್ಬರಿಗೆ ಅಲ್ಲ ಸುಮಾರು ಜನರಿಗೆ ಈಗಾಗಲೇ ಅನುಭವಕ್ಕೆ ಬಂದಿರುವ ಮತ್ತು ಅನುಭವಿಸಿರುವ ಘಟ್ಟ ಎಂಬುದನ್ನು ಮರೆಯಬಾರದು.

ಮಳೆಗಾಲವನ್ನು ದ್ವೇಷಿಸಲು ಕಾರಣಗಳೇನು?

ಏನೇ ಆಗಲಿ ಸೋಲು ಎಂಬುದು ಸತ್ಯ. ಆದರೆ ಸೋಲನ್ನು ತಪ್ಪಿಸಿಕೊಳ್ಳಲು ಮಾರ್ಗಗಳಿರಬೇಕಲ್ಲವೆ? ಸೋಲನ್ನು ಸುಖಾ-ಸುಮ್ಮನೆ ಒಪ್ಪಿಕೊಳ್ಳುವ ಬದಲಿಗೆ ಗೆಲ್ಲುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಬೇಕು. ಹಾಗೆ ಗೆಲ್ಲಬೇಕು ಎಂದರೆ ಸೋಲಲು ಇರುವ ಕಾರಣಗಳನ್ನು ಮೊದಲು ನಾವು ತಿಳಿದುಕೊಳ್ಳಬೇಕು. ಇಲ್ಲಿ ನಾವು ನಿಮಗಾಗಿ ಜೀವನದಲ್ಲಿ ನಮ್ಮನ್ನು ಸೋಲನ್ನೊಪ್ಪುವಂತೆ ಮಾಡುವ 12 ಕಾರಣಗಳನ್ನು ನಿಮಗಾಗಿ ವಿವರಿಸಿದ್ದೇವೆ ಓದಿಕೊಳ್ಳಿ.

ಸ್ಪಷ್ಟತೆಯಿಲ್ಲದಿರುವುದು

ಸ್ಪಷ್ಟತೆಯಿಲ್ಲದಿರುವುದು

ಸೋಲಿಗೆ ಪ್ರಮುಖ ಕಾರಣ ನಮಗೆ ಏನು ಬೇಕು ಎಂಬುದರ ಕುರಿತಾಗಿ ನಮಗೆ ಸ್ಪಷ್ಟತೆಯಿಲ್ಲದಿರುವುದೇ ಆಗಿರುತ್ತದೆ. ನಮಗೆ ಏನು ಬೇಕು ಎಂಬುದನ್ನು ನಿರ್ಧರಿಸಿಕೊಂಡು ನಾವು ಯಾವ ರಂಗಕ್ಕೆ ಇಳಿದರು ಅಲ್ಲಿ ಜಯ ಕಟ್ಟಿಟ್ಟ ಬುತ್ತಿ. ಇದೇ ಯಶಸ್ಸಿನ ಪ್ರಥಮ ಸೋಪಾನ ಎಂಬುದನ್ನು ಮರೆಯಬಾರದು.

ನಂಬಿಕೆ

ನಂಬಿಕೆ

ಜೀವನದಲ್ಲಿ ಯಶಸ್ವಿಯಾಗಬೇಕೆನ್ನುವವರು ಮೊದಲು ತಮ್ಮನ್ನು ತಾವು ನಂಬಬೇಕು. ನಂಬಿಕೆಯಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಏನನ್ನಾದರು ಸಾಧಿಸಲು ಹೋಗುವಾಗ ಮೊದಲು ಅದು ನಿಮ್ಮಿಂದ ಸಾಧ್ಯ ಎಂದು ನಂಬಿ. ನಂತರ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳುವ ಹಾದಿಯಲ್ಲಿ ಸಾಗಿ.

ಇತರ ವ್ಯಕ್ತಿಗಳ ಪ್ರಭಾವ

ಇತರ ವ್ಯಕ್ತಿಗಳ ಪ್ರಭಾವ

ಬಹುತೇಕ ಜನರು ತಮ್ಮ ಕುರಿತಾಗಿ ಜನ ಏನು ಆಲೋಚಿಸುತ್ತಾರೆ ಎಂದು ಯೋಚಿಸಲು ಆರಂಭಿಸುತ್ತಾರೆ. ಇದೇ ಅವರನ್ನು ಯಶಸ್ಸಿನ ಹಾದಿಯಿಂದ ವೈಫಲ್ಯದ ಹಾದಿಗೆ ಕೊಂಡೊಯ್ಯುತ್ತದೆ. ಇದೇ ಜನರು ಜೀವನದಲ್ಲಿ ವಿಫಲವಾಗಲು ಇರುವ ಪ್ರಮುಖ ಕಾರಣವಾಗಿದೆ.

ಕಾರ್ಯ ಸಾಧ್ಯವಲ್ಲದ ಗುರಿಗಳು

ಕಾರ್ಯ ಸಾಧ್ಯವಲ್ಲದ ಗುರಿಗಳು

ಕಾರ್ಯ ಸಾಧ್ಯವಲ್ಲದ ಗುರಿಗಳು ಜನರು ಜೀವನದಲ್ಲಿ ಸೋಲನ್ನು ಅನುಭವಿಸಲು ಇರುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಾಸ್ತವಿಕವಲ್ಲದ ಗುರಿಗಳು ನಿಮ್ಮನ್ನು ಆರಂಭದಿಂದಲೆ ಕೆಳ ಮುಖವಾಗಿ ಎಳೆಯಲು ಆರಂಭಿಸುತ್ತವೆ. ಮಹತ್ವಾಕಾಂಕ್ಷೆಯುಳ್ಳ ಗುರಿಯನ್ನು ಹೊಂದುವುದು ತಪ್ಪಲ್ಲ, ಆದರೆ ಅದನ್ನು ಒಮ್ಮೆಲೆ ಕಾರ್ಯ ರೂಪಕ್ಕೆ ತರುವ ಬದಲಿಗೆ ಸಣ್ಣ ಸಣ್ಣ ಗುರಿಗಳನ್ನು ನಿರ್ಧರಿಸಿಕೊಂಡು, ಅದನ್ನು ಸಾಧಿಸುವ ಮೂಲಕ ದೊಡ್ಡ ಗುರಿಯತ್ತ ಹೋಗುವ ಕಾರ್ಯವನ್ನು ನೀವು ಮಾಡಬೇಕು. ಆಗ ಎಂತಹ ಗುರಿಯನ್ನು ಬೇಕಾದರು ಸಾಧಿಸಬಹುದು.

ಪಾತ್ರವನ್ನು ಸರಿಯಾಗಿ ನಿರ್ವಹಿಸಬೇಕೆಂಬ ಆಲೋಚನೆ

ಪಾತ್ರವನ್ನು ಸರಿಯಾಗಿ ನಿರ್ವಹಿಸಬೇಕೆಂಬ ಆಲೋಚನೆ

ಕೌಟುಂಬಿಕ ಒತ್ತಡ ಮತ್ತು ಒತ್ತಡ ರಹಿತತೆ ನಿಮ್ಮನ್ನು ಒಂದು ಪರಿಧಿಯೊಳಗೆ ಕೂಡಿ ಹಾಕಿ ಬಿಡುತ್ತದೆ. ಜನರು ಯಾವಾಗಲು ತಮ್ಮ ಸುತ್ತಲೂ ಇರುವವರನ್ನು ಸಂತೋಷಪಡಿಸುವುದರಲ್ಲಿಯೇ ಕಾಲಹರಣ ಮಾಡಿಬಿಡುತ್ತಾರೆ. ಆಗ ಅವರ ಜೀವನ ಇತರರಿಗಾಗಿ ಸವೆದು ಹಾಳಾಗುತ್ತದೆಯೇ ಹೊರತು, ಯಶಸ್ಸಿನತ್ತ ಆಲೋಚಿಸುವುದರತ್ತ ಸಹ ಅವರ ಚಿತ್ತ ಹರಿಯುವುದಿಲ್ಲ. ಆದ್ದರಿಂದ ನಿಮಗೆ ಏನು ಸರಿಯೆನಿಸುವುದೋ ಅದನ್ನೇ ಮಾಡಿ, ಇತರರನ್ನು ತೃಪ್ತಿಪಡಿಸುವುದರಲ್ಲಿಯೇ ಕಳೆದು ಹೋಗಬೇಡಿ.

ವೈಫಲ್ಯ ಭೀತಿ

ವೈಫಲ್ಯ ಭೀತಿ

ಜನರಿಗೆ ಸೋಲುತ್ತೇವೆ ಎಂಬ ಭಾವನೆಯು ನಮಗೆ ಆರಂಭದಿಂದಲೇ ಕಾಡುತ್ತದೆ. ಇಂತಹ ಮನೋಭಾವದಲ್ಲಿ ಆರಂಭಿಸುವ ಕೆಲಸವು ಸೋಲಿನಲ್ಲೆ ಕೊನೆಗೊಳ್ಳುತ್ತದೆ. ಇದು ನೆನೆಸಿಕೊಂಡರೆ ಪ್ರಹಸನದಂತೆ ಕಾಣುತ್ತದೆಯಾದರು, ಸೋಲಿನ ಭಯ ಒಂದು ಅಡೆ-ತಡೆಯಂತೆ ಎಂದು ಯಾರು ಯೋಚಿಸುವುದಿಲ್ಲ. ಸೋಲಿನ ಭಯವನ್ನು ಹೊಂದುವುದು ಎಂದರೆ ಸೋಲನ್ನು ಸ್ವೀಕರಿಸಿದಂತೆ.

ಯೋಜನೆಯ ಕೊರತೆ

ಯೋಜನೆಯ ಕೊರತೆ

ಯಶಸ್ಸಿನತ್ತ ಸಾಗುವವರ ಒಂದು ದೊಡ್ಡ ಸಾಧನವೇ ಯೋಜನೆ. ಇದರ ಮೇಲೆಯೇ ಸೋಲು ಮತ್ತು ಗೆಲುವು ನಿರ್ಧಾರವಾಗುತ್ತದೆ. ನೀವು ಒಂದು ಸಂಕೀರ್ಣವಾದ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಿಲ್ಲವೆಂದಾದಲ್ಲಿ, ನಿಮ್ಮ ಯಶಸ್ಸು ಅಷ್ಟು ಸುಲಭವಾಗಿ ದಕ್ಕುವುದಿಲ್ಲ ಎಂಬುದನ್ನು ಮರೆಯಬೇಡಿ.

ಶಿಸ್ತು

ಶಿಸ್ತು

ಒಮ್ಮೆ ನೀವು ಒಂದು ಸಂಕೀರ್ಣವಾದ ಯೋಜನೆಯನ್ನು ಸಿದ್ಧಪಡಿಸಿಕೊಂಡರೆ, ಅದರಂತೆ ನೀವು ಕಾರ್ಯ ಮಾಡಲು ಶಿಸ್ತು ಅತ್ಯಾವಶ್ಯಕ. ಇದುವರೆಗು ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿದವರೆಲ್ಲರು ಒಪ್ಪುವ ಒಂದೇ ವಿಚಾರ ಅದು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು. ಶಿಸ್ತು ಎಂಬುದು ಯಶಸ್ಸಿನ ಅಡಿಪಾಯಗಳಲ್ಲಿ ಒಂದು.

ಸ್ವಯಂ ಮೌಲ್ಯಮಾಪನ

ಸ್ವಯಂ ಮೌಲ್ಯಮಾಪನ

ಆಗಾಗ ನಿಮ್ಮನ್ನು ನೀವೇ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ. ಇದರಿಂದ ನೀವು ಈಗ ಇರುವ ಸ್ಥಾನ ಮತ್ತು ಯಶಸ್ಸಿಗೆ ನೀವು ವ್ಯಯಿಸಬೇಕಾದ ಶ್ರಮ, ನಿಮ್ಮ ದೌರ್ಬಲ್ಯ, ಸಾಮರ್ಥ್ಯ ಎಲ್ಲವು ನಿಮಗೇ ಗೊತ್ತಾಗುತ್ತದೆ.

ಜೀವನದಲ್ಲಿ ನಕಾರಾತ್ಮಕತೆ

ಜೀವನದಲ್ಲಿ ನಕಾರಾತ್ಮಕತೆ

ಜೀವನದಲ್ಲಿ ನಕಾರಾತ್ಮಕತೆಯನ್ನು ದೂರವಿಡುವುದು ತೀರಾ ಅತ್ಯಾವಶ್ಯಕ ಎಂಬುದನ್ನು ಮರೆಯಬಾರದು. ನಕಾರಾತ್ಮಕತೆಯು ನಿಮ್ಮಲ್ಲಿರುವ ಗೆಲ್ಲುವ ಚೈತನ್ಯವನ್ನೆ ಹಾಳು ಮಾಡಿಬಿಡುತ್ತದೆ. ಕೋಣೆಯಲ್ಲಿರುವ ಕಸವು ಸಹ ನಿಮ್ಮಲ್ಲಿ ನಕಾರಾತ್ಮಕತೆಯನ್ನು ತುಂಬಿ ಬಿಡುತ್ತದೆ ಎಂದರೆ ನೀವು ನಂಬಲೆ ಬೇಕು. ಆದ್ದರಿಂದ ನಿಮ್ಮಲ್ಲಿ ನಕಾರಾತ್ಮಕತೆಯನ್ನು ತುಂಬುವ ಎಲ್ಲಾ ವಿಚಾರಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸಿ.

ಉತ್ಸಾಹ

ಉತ್ಸಾಹ

ಯಾವುದೇ ಅಡ್ಡಿ-ಆತಂಕಗಳು ಬಂದರೂ ನಿಮ್ಮಲ್ಲಿರುವ ಉತ್ಸಾಹವನ್ನು ಎಂದಿಗು ಕಳೆದುಕೊಳ್ಳಬೇಡಿ. ಈ ಉತ್ಸಾಹವು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವ ಇಂಧನದಂತೆ. ಇದನ್ನು ಕಳೆದುಕೊಳ್ಳುವವರು ವಿಧಿಯಿಲ್ಲದೆ ಜೀವನದಲ್ಲಿ ಸೋಲನ್ನು ಅಪ್ಪಿಕೊಳ್ಳುತ್ತಾರೆ. ಉತ್ಸಾಹದ ಕೊರತೆಯೆ ಜೀವನದಲ್ಲಿ ಸೋಲಿಗೆ ಪ್ರಮುಖ ಕಾರಣ.

ಸೋಮಾರಿತನ

ಸೋಮಾರಿತನ

ಕಟ್ಟ ಕಡೆಯದಾಗಿ ಒಂದು ಮಾತು ಹೇಳಬೇಕು ಎಂದರೆ ಸೋಮಾರಿತನವನ್ನು ಬಿಟ್ಟು ಬಿಡಿ. ಸುಮ್ಮನೆ ಕುಳಿತಿರುವವನನ್ನು ನೊಣ-ಸೊಳ್ಳೆಗಳು ಹುಡುಕಿಕೊಂಡು ಬರಬಹುದೇ ಹೊರತು ಯಶಸ್ಸಲ್ಲ. ಯಶಸ್ಸಿಗಾಗಿ ತುಡಿಯುವವನು ದಾರಿಯಲ್ಲಿ ಒಬ್ಬನೇ ಕೂರುವುದಿಲ್ಲ.

English summary

12 Reasons Why People Fail In Life

Failure in life is definitely not a cause for worry and anguish if we see it as an opportunity to grow and explore, for failure in life is something everybody goes through we look at reasons why we fail in life. Here are 12 reasons why we fail in life. Read on...
X
Desktop Bottom Promotion