For Quick Alerts
ALLOW NOTIFICATIONS  
For Daily Alerts

ಭಾರತೀಯರನ್ನು ಇತರರಿಗಿಂತ ಪ್ರತ್ಯೇಕವಾಗಿಸುವ ಹವ್ಯಾಸಗಳಿವು

By Super
|

ಒಂದು ಜೋಕು ಹೀಗಿದೆ. ಅಮೇರಿಕಾದ ಅಧ್ಯಕ್ಷರು ಜೈಲ್ ಸಿಂಗ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಭಾರತಕ್ಕೆ ಬಂದಿದ್ದಾಗ ಎಲ್ಲೆಲ್ಲೂ ಕಸ ಗಲೀಜು ಹಾಗೂ ಎಲ್ಲೆಲ್ಲೂ ಮೂತ್ರ ಮಾಡುವುದನ್ನು ನೋಡಿ ಲೇವಡಿ ಮಾಡಿದರಂತೆ. ಜೈಲ್ ಸಿಂಗ್ ಕೆಲದಿನಗಳ ನಂತರ ಅಮೇರಿಕಾಕ್ಕೆ ಹೋದಾಗ ಅಲ್ಲಿನ ಅಧ್ಯಕ್ಷರು ತಮ್ಮ ದೇಶದ ಸ್ವಚ್ಛತೆಯನ್ನು ತೋರಿಸಿ ಭಾರತವನ್ನು ತೆಗಳಿದರಂತೆ.

ಹಿಂದಿನ ಅಪಮಾನವನ್ನು ನೆನಪಿನಲ್ಲಿಟ್ಟುಕೊಂಡಿದ್ದ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಸೇತುವೆ ಕೆಳಗೆ ಮೂವರು ನಿಂತು ಮೂತ್ರ ಹೊಯ್ಯುತ್ತಿದ್ದುದನ್ನು ಅಮೇರಿಕಾದ ಅಧ್ಯಕ್ಷರಿಗೆ ತೋರಿಸಿ ಈಗೇನು ಹೇಳುತ್ತೀರಿ ಎಂದರಂತೆ. ಚಕಿತರಾದ ಅವರು ಕಾರು ನಿಲ್ಲಿಸಿ ಹಿಂದೆ ತಂದು ಯಾರು ಮೂತ್ರ ಹೊಯ್ಯುತ್ತಿರುವವರು ಎಂದು ಪರೀಕ್ಷಿಸಿದರೆ ಅವರು ಮೂವರೂ ಭಾರತೀಯರಾಗಿದ್ದರಂತೆ!

ವಾಸ್ತವವಾಗಿ ಈ ಜೋಕು ಭಾರತೀಯರ ನಡವಳಿಕೆಯ ಬಗ್ಗೆ ವಿಶ್ವವೇ ಆಡಿಕೊಳ್ಳುವ ವಾಸ್ತವ. ಇದು ಒಂದಾದರೆ ಇಡಿಯ ಭಾರತದ ಜನತೆಯಲ್ಲಿ ಹಾಸುಹೊಕ್ಕಾಗಿರುವ ಹಲವು ನಡವಳಿಕೆಗಳಿವೆ. ರಸ್ತೆಯಲ್ಲಿ ಕಸ ಎಸೆಯುವುದು, ಪೋಲೀಸ್ ಇಲ್ಲದಿದ್ದರೆ ಕೆಂಪು ದೀಪವನ್ನು ಅಲಕ್ಷಿಸಿ ಮುನ್ನುಗ್ಗುವುದು, ಪ್ರಚಾರವನ್ನು ಗೋಡೆಗಳ ಮೇಲೆ ಬರೆಯುವುದು ಮೊದಲಾದ ಹಲವಾರು ಚಾಳಿಗಳು ವಿಶ್ವದ ದೃಷ್ಟಿಯಲ್ಲಿ ನಮ್ಮನ್ನು ಕೀಳುಮಟ್ಟಕ್ಕಿಳಿಸುತ್ತದೆ. ಇಂತಹ ಹನ್ನೆರಡು ಕೆಟ್ಟ ಚಾಳಿಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಬದಲಾಗದ ದೇಶ; ನೋಡಿ ಸ್ವಾಮಿ ನಾವ್ ಇರೋದೇ ಹೀಗೆ!

ಚೌಕಾಶಿ ಮಾಡುವುದು ಭಾರತೀಯರ ಜನ್ಮಸಿದ್ಧ ಹಕ್ಕು

ಚೌಕಾಶಿ ಮಾಡುವುದು ಭಾರತೀಯರ ಜನ್ಮಸಿದ್ಧ ಹಕ್ಕು

ಅದು ತರಕಾರಿಯೇ ಇರಲಿ, ಚಿನ್ನವೇ ಇರಲಿ, ಖರೀದಿಯ ವಿಷಯಕ್ಕೆ ಬಂದಾಗ ಚೌಕಾಶಿ ಮಾಡದೇ ಕೊಂಡುಕೊಳ್ಳುವುದೆಂದರೆ ಭಾರತೀಯರಿಗೆ ಮೋಸ ಹೋದ ಭಾವನೆ ಬರುತ್ತದೆ. ಹೆಚ್ಚಿನವರು ನಿಗದಿತ ಬೆಲೆ ಇರುವ ಅಂಗಡಿಗಳಲ್ಲಿ ಕೊಳ್ಳುವುದೇ ಇಲ್ಲ ಅಥವಾ ಅದೇ ವಸ್ತು ಬೇರೆ ಅಂಗಡಿಗಳಲ್ಲಿ ಎಷ್ಟು ಬೆಲೆಗೆ ಮಾರಾಟವಾಗುತ್ತಿದೆ ಎಂಬುದನ್ನು ಪರಿಶೀಲಿಸದೇ ಕೊಂಡುಕೊಳ್ಳುವುದಿಲ್ಲ.

ದೇಹಬಾಧೆ ತೀರಿಸಿಕೊಳ್ಳಲು ಶೌಚಾಲಯವೇ ಬೇಕಾಗಿಲ್ಲ

ದೇಹಬಾಧೆ ತೀರಿಸಿಕೊಳ್ಳಲು ಶೌಚಾಲಯವೇ ಬೇಕಾಗಿಲ್ಲ

ಭಾರತೀಯ ಪುರುಷರಿಗೆ ಹೊರಗಿದ್ದಾಗ ಮೂತಕ್ಕೆ ಹೋಗಲು ಶೌಚಾಲಯದ ಅಗತ್ಯವೇ ಇಲ್ಲ. ಎಲ್ಲಿ ಗೋಡೆ ಕಂಡಿತೋ ಅಲ್ಲಿ ತಮ್ಮ ದಾಹ ತೀರಿಸಿಕೊಂಡುಬಿಡುತ್ತಾರೆ. ಹೆಚ್ಚಿನವರು ಎಲ್ಲಿ ಮೂತ್ರ ಮಾಡಬಾರದು ಎಂದು ಬರೆದಿರುತ್ತಾರೋ ಅಲ್ಲಿಯೇ ಮೂತ್ರ ವಿಸರ್ಜಿಸಿ ಅಟ್ಟಹಾಸ ಮೆರೆದಿರುತ್ತಾರೆ. ಅದಕ್ಕೆ ಕೆಲವರು ವಿವಿಧ ದೇವರ ಪಟವಿರುವ ಟೈಲ್ಸ್ ಗಳನ್ನು ಸಂಭವನೀಯ ಸ್ಥಳಗಳಲ್ಲಿ ಸ್ಥಾಪಿಸಿದ ಬಳಿಕ ಈ ಚಾಳಿ ಕಡಿಮೆಯಾಗಿದೆ. ಭಾರತೀಯರು ದೇವರಿಗೆ ಹೆದರುವಷ್ಟು ಯಾರಿಗೂ ಹೆದರುವುದಿಲ್ಲ. ಪ್ರಮುಖವಾಗಿ ಸಾಕಷ್ಟು ಸಾರ್ವಜನಿಕ ಶೌಚಾಲಯಗಳಿಲ್ಲದಿರುವುದು ಈ ತೊಂದರೆಗೆ ಮುಖ್ಯ ಕಾರಣ.

ಎಲ್ಲೆಂದೆಲ್ಲಿ ಕಸ ಎಸೆದು ಚರಂಡಿಗಳ ಹರಿವಿಗೆ ಅಡ್ಡಿಪಡಿಸುವುದು

ಎಲ್ಲೆಂದೆಲ್ಲಿ ಕಸ ಎಸೆದು ಚರಂಡಿಗಳ ಹರಿವಿಗೆ ಅಡ್ಡಿಪಡಿಸುವುದು

ಉಡುಪಿ ಸಹಿತ ಕರ್ನಾಟಕದ ಹಲವು ನಗರಗಳು ಪ್ಲಾಸ್ಟಿಕ್ ಬಳಕೆಯನ್ನೇ ನಿಷೇಧಿಸಿದೆ. ಏಕೆಂದರೆ ಭಾರತೀಯರಿಗೆ ಬಳಸಿದ ಬಳಿಕ ತ್ಯಾಜ್ಯಗಳನ್ನು ಎಲ್ಲಿ ಮತ್ತು ಹೇಗೆ ತ್ಯಜಿಸಬೇಕೆಂದೇ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಒಂದೇ, ಬಳಕೆಯ ಬಳಿಕ ಎಸೆಯುವುದು. ಉದಾಹರಣೆಗೆ ನೀರಿನ ಬಾಟಲಿ. ನೀರು ಕುಡಿದ ಬಳಿಕ ಕೊನೆಯ ಗುಟುಕು ಕುಡಿದ ಸ್ಥಳದಲ್ಲೇ ಎಸೆಯುತ್ತಾರೆ. ಈ ಪ್ಲಾಸ್ಟಿಕ್ ಬಾಟಲಿ ಹಾಗೂ ಚೀಲಗಳು ನೀರಿನೊಂದಿಗೆ ಹರಿದು ಚರಂಡಿ ಸೇರುತ್ತದೆ. ಹೀಗೇ ಸಂಗ್ರಹವಾದ ಪ್ಲಾಸ್ಟಿಕ್ಕುಗಳು ಬಳಿಕ ಒಂದೆಡೆ ಸಂಗ್ರಹವಾಗಿ ನೀರಿನ ಹರಿವಿಗೆ ಅಡ್ಡಿಪಡಿಸುತ್ತವೆ. ಮಳೆಗಾಲದಲ್ಲಿ ಹೆಚ್ಚಿನ ನೀರು ಬಂದಾಗ ಇಲ್ಲಿಂದ ನೀರು ಮುಂದೆ ಹೋಗದೇ ರಸ್ತೆಯೆಲ್ಲಾ ತುಂಬಿ ಮನೆಗಳಿಗೆ ನುಗ್ಗುತ್ತದೆ. ಇನ್ನೂ ಕೆಲವರು ಕಸವನ್ನು ಶೌಚಾಲಯದ ಬೋಗುಣಿಯೊಳಕ್ಕೇ ಹಾಕಿ ಫ್ಲಶ್ ಮಾಡುತ್ತಾರೆ.

ಎಲ್ಲದಕ್ಕೂ ರಾಜಕಾರಣಿಗಳನ್ನು ದೂರುವುದು

ಎಲ್ಲದಕ್ಕೂ ರಾಜಕಾರಣಿಗಳನ್ನು ದೂರುವುದು

ನಮ್ಮ ಅಕ್ಕಪಕ್ಕ ಇರುವ ಸಾವಿರಾರು ಸಮಸ್ಯಗೆಳಿಗೆ ನಮ್ಮ ಕೈಯಲ್ಲಿಯೇ ಪರಿಹಾರವಿದ್ದರೂ ಅದನ್ನು ಸಾಧಿಸದೇ ಜನಪ್ರತಿನಿಧಿಗಳನ್ನು, ರಾಜಕಾರಣಿಗಳನ್ನು ಹಾಗೂ ಸರ್ಕಾರವನ್ನು ಹೊಣೆಗೇಡಿತನಕ್ಕೆ ದೂರುತ್ತಾ ಕೆಲಸವಾಗಲಿಲ್ಲವೆಂದು ಹಣಿಯುತ್ತಾ ಕಾಲ ಕಳೆಯುತ್ತಾರೆ.

ಮದುವೆ ಮೊದಾಲಾದ ಸಮಾರಂಭಗಳಲ್ಲಿ ತಿಂಡಿಪೋತರಾಗುವುದು

ಮದುವೆ ಮೊದಾಲಾದ ಸಮಾರಂಭಗಳಲ್ಲಿ ತಿಂಡಿಪೋತರಾಗುವುದು

ಮದುವೆಗೆ ಹಾಜರಾಗುವುದು ಎಂದರೆ ಊಟಕ್ಕೆ ಹಾಜರಾಗುವುದು ಎಂದೇ ಭಾರತೀಯರು ನಂಬಿದ್ದಾರೆ. ಊರಿನ ಜನರಿಗೊಂದು ಒಳ್ಳೆಯ ಊಟ ಹಾಕಿಸದೇ ಕಳಿಸುವುದೂ ಒಂದು ಮದುವೆಯೇ ಎಂದು ನಮ್ಮ ಹಿರಿಯರು ನಂಬಿದ್ದಾರೆ. ಆದರೆ ತೊಂದರೆ ಇರುವುದು ಊಟ ಹಾಕಿಸುವುದರಲ್ಲಿ ಅಥವಾ ಮಾಡುವುದರಲ್ಲಿ ಅಲ್ಲ. ಊಟದ ಪ್ರಮಾಣದಲ್ಲಿ. ಸಾಧಾರಣವಾಗಿ ನಾವು ಊಟ ಮಾಡುವುದಕ್ಕಿಂತಲೂ ಹೆಚ್ಚಿಗೆ ಹಾಕಿಸಿಕೊಂಡು ಸಾಮರ್ಥ್ಯಕ್ಕೆ ಮೀರಿ ತಿನ್ನುತ್ತಾರೆ ಹಾಗೂ ತಿನ್ನಲು ಸಾಧ್ಯವಾಗದುದನ್ನು ಹಾಗೇ ಬಿಡುತ್ತಾರೆ. ಪ್ರತಿ ಪಂಕ್ತಿಯ ಬಳಿಕ ಊಟ ಹಾಕಿಸಿಕೊಂಡು ಹಾಗೇ ತಟ್ಟೆಯಲ್ಲಿ ಬಿಟ್ಟ ಆಹಾರ ನೋಡಿದವರ ಮನ ಕಲಕುತ್ತದೆ.

ಇಂದಿಗೂ ಪ್ರಚಲಿತವಿರುವ ಗಂಡು ಮಗುವಿನ ವ್ಯಾಮೋಹ

ಇಂದಿಗೂ ಪ್ರಚಲಿತವಿರುವ ಗಂಡು ಮಗುವಿನ ವ್ಯಾಮೋಹ

ಗಂಡಾಗಲೀ ಹೆಣ್ಣಾಗಲೀ ಮಕ್ಕಳನ್ನು ಸಮಾನ ದೃಷ್ಟಿಯಿಂದ ನೋಡಬೇಕು. ಆದರೆ ಭಾರತೀಯರಿಗೆ ಹುಟ್ಟಿದ ಮಗು ಹೆಣ್ಣಾದರೆ ಮಗುವಿನ ನಿರೀಕ್ಷೆ ಮಾಡುತ್ತಿದ್ದ ಜನರಲ್ಲಿ ಮೊತ್ತ ಮೊದಲಿಗೆ ಕೊಂಚ ನಿರಾಶೆಯ ಛಾಯೆ ಮೂಡುತ್ತದೆ. ಏಕೆಂದರೆ ವಂಶದ ಬೆಳವಣಿಗೆಗೆ ಗಂಡು ಮಗುವೇ ಬೇಕೆಂಬ ಹಂಬಲ. ಇದರಿಂದಾಗಿ ಹೆಣ್ಣು ಮಕ್ಕಳು ಕೊಂಚ ಅವಗಣನೆಗೆ ಗುರಿಯಾಗುತ್ತಾರೆ.

ಶಕುನದಲ್ಲಿ ನಂಬಿಕೆ

ಶಕುನದಲ್ಲಿ ನಂಬಿಕೆ

ಶುಭನುಡಿಯೇ ಶಕುನದ ಹಕ್ಕಿ ಶುಭನುಡಿಯೇ, ನಿನ್ನ ಸೊಲ್ಲ ನಂಬಿಯದ್ದೇ ಮೈಯೆಲ್ಲ ನಡುಗುತ್ತಿತ್ತು ನೀನೇ ಶುಭ ನುಡಿಯುವಾಗ ಏನಿದ್ರೇನು ಎಲ್ಲಾ ಶುಭವೇ, ಶುಭನುಡಿಯೇ ಶಕುನಹಕ್ಕಿ ಎಂದು ಬೇಂದ್ರೆಯವರು ತಮ್ಮ ಕವನದಲ್ಲಿ ಹಾಡಿದ್ದಾರೆ. ಭಾರತೀಯರಿಗೆ ಈ ಶಕುನದಲ್ಲಿ ಬಹಳ ನಂಬಿಕೆ. ಹಣವನ್ನು ಬಲಗೈಯಲ್ಲಿಯೇ ಕೊಡುವುದು, ಹತ್ತು ಗ್ರಾಂ ಎಂದು ಚಿನ್ನದ ಬಿಸ್ಕತ್ತಿನ ಮೇಲೆ ಬರೆದಿದ್ದರೂ ಮತ್ತೊಮ್ಮೆ ತೂಕ ಮಾಡಿ ಪರಿಶೀಲಿಸುವುದು, ಹಣದ ಕಂತೆಯನ್ನು ಎರಡೂ ಬದಿಯಿಂದ ಎರಡು ಬಾರಿ ಎಣಿಸುವುದು, ಬಲಗಾಲಿಟ್ಟು ಮನೆಯೊಳಗೆ ಪ್ರವೇಶಿಸುವುದು ಮೊದಲಾದವು ಶುಭಶಕುನದಲ್ಲಿವೆ. ಅದೇ ಬೆಕ್ಕು ಅಡ್ಡ ಬಂದರೆ, ಹೊರ ಹೊರಟಾಗ ಯಾರಾದರೂ ಸೀನಿದರೆ, ಹಣವನ್ನು ತೋರು ಮತ್ತು ಮಧ್ಯದ ಬೆರಳುಗಳ ನಡುವೆ ಇಟ್ಟು ನೀಡಿದರೆ ಮೊದಲಾದವು ಅಪಶಕುನಗಳೆನಿಸಿಕೊಳ್ಳುತ್ತವೆ.

ಪೊಲೀಸರು ನೋಡದೇ ಇದ್ದರೆ ಕೆಂಪು ದೀಪವನ್ನು ದಾಟುವುದು

ಪೊಲೀಸರು ನೋಡದೇ ಇದ್ದರೆ ಕೆಂಪು ದೀಪವನ್ನು ದಾಟುವುದು

ಭಾರತೀಯರು ಕಾನೂನನ್ನು ಗೌರವಿಸುವುದಕ್ಕಿಂತ ಕಾನೂನಿನ ಪಾಲಕರಿಗೆ ಹೆಚ್ಚು ಗೌರವ ನೀಡುತ್ತಾರೆ. ರಾತ್ರಿ ಅಥವಾ ವಾಹನ ಸಂಚಾರ ಕಡಿಮೆ ಇರುವ ಹೊತ್ತಿನಲ್ಲಿ ಟ್ರಾಫಿಕ್ ದೀಪ ಕೆಂಪಾಗಿದ್ದರೂ ಅಕ್ಕಪಕ್ಕ ಯಾವುದೇ ಪೋಲೀಸ್ ಅಥವಾ ಟ್ರಾಫಿಕ್ ಅಧಿಕಾರಿಯಿಲ್ಲದಿದ್ದರೆ ಕೆಂಪುದೀಪವನ್ನು ದಾಟಿ ಮುನ್ನುಗ್ಗುತ್ತಾರೆ. ಅದೇ ಪ್ರಕಾರ, ಆಂಬ್ಯುಲೆನ್ಸ್ ವಾಹನಕ್ಕೆ ಎಲ್ಲರೂ ದಾರಿ ಬಿಡುವ ಕಾರಣ ಅಂಬ್ಯುಲೆನ್ಸ್ ವಾಹನದ ಹಿಂದೇ ಅದೇ ವೇಗದಲ್ಲಿ ಹಿಂಬಾಲಿಸಿ ಬೇಗನೇ ತಮ್ಮ ಗುರಿಯನ್ನು ಮುಟ್ಟುವ ಹವಣಿಕೆಯನ್ನು ತೋರುತ್ತಾರೆ.

ಎಷ್ಟೇ ಸಂಬಳವಿದ್ದರೂ ಕೊಂಚ ಹೆಚ್ಚಿನ ಆದಾಯಕ್ಕಾಗಿ ಹಾತೊರೆಯುತ್ತಾರೆ

ಎಷ್ಟೇ ಸಂಬಳವಿದ್ದರೂ ಕೊಂಚ ಹೆಚ್ಚಿನ ಆದಾಯಕ್ಕಾಗಿ ಹಾತೊರೆಯುತ್ತಾರೆ

ಜೈಲ್ ಸಿಂಗ್ ಒಂದು ಸಲ ಅಮೇರಿಕಾದ ಅಧ್ಯಕ್ಷರ ಸಂಬಳದ ಬಗ್ಗೆ ತಿಳಿದು ಚಕಿತರಾದರಂತೆ. ಬಳಿಕ ರಾಜೀವ್ ಗಾಂಧಿಯವರ ಹತ್ತಿರ ಹೇಳಿದರಂತೆ, ಒಂದು ವೇಳೆ ನಾನು ಅಮೇರಿಕಾದ ಅಧ್ಯಕ್ಷನಾಗಿದ್ದರೆ ಅವರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದೆ. ಚಕಿತರಾದ ರಾಜೀವ್ ಗಾಂಧಿ ಅದು ಹೇಗೆ ಎಂದು ಕೇಳಿದರಂತೆ. ಅದಕ್ಕೆ ಜೈಲ್ ಸಿಂಗ್ ದಿನದಲ್ಲಿ ನಾನು ಅಧ್ಯಕ್ಷನ ಡ್ಯೂಟಿ ಮಾಡಿ ರಾತ್ರಿ ಟ್ಯಾಕ್ಸಿ ಓಡಿಸುವೆ ಎಂದರಂತೆ. ಸಾಧಾರಣವಾಗಿ ಇದು ಪ್ರತಿ ಭಾರತೀಯನ ರಕ್ತದಲ್ಲಿರುವ ಒಂದು ಗುಣ. ಎಷ್ಟೇ ಚಿಕ್ಕ ಅಥವಾ ದೊಡ್ಡ ಆದಾಯವಿದ್ದರೂ ಕೊಂಚ ಹೆಚ್ಚಿನ ಆದಾಯಕ್ಕಾಗಿ ಭಾರತೀಯರು ಹವಣಿಸುತ್ತಿರುತ್ತಾರೆ.

ಇನ್ನೂ ಪ್ರಚಲಿತದಲ್ಲಿರುವ ಚುಡಾಯಿಸುವ ಗೀಳು

ಇನ್ನೂ ಪ್ರಚಲಿತದಲ್ಲಿರುವ ಚುಡಾಯಿಸುವ ಗೀಳು

ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಓಡಾಡುವಾಗ ನೆರೆದಿರುವ ಪಡ್ಡೆ ಯುವಕರು ಚುಡಾಯಿಸುವ ಗೀಳನ್ನು ಇಂದಿಗೂ ಕಾಣಬಹುದು. ಈ ಬಗ್ಗೆ ಸ್ಪಷ್ಟವಾದ ಕಾನೂನಿದ್ದರೂ ಇದರ ಗೊಡವೇ ಬೇಡವೆಂದು ನಿರ್ಲಕ್ಷ್ಯ ತೋರುವ ಹೆಣ್ಣುಮಕ್ಕಳು ಹಾಗೂ ಪಾಲಕರಿಂದಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಜಾತಿ ಎಂಬ ಅಸ್ತ್ರದ ಬಳಕೆ

ಜಾತಿ ಎಂಬ ಅಸ್ತ್ರದ ಬಳಕೆ

ಸರ್ಕಾರವೇ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಎಂದು ವರ್ಗೀಕರಿಸಿ ಜೀವನವನ್ನೇ ಗೋಜಲುಮಯಮಾಡಿಟ್ಟಿರುವಾಗ ಈ ಸೌಲಭ್ಯಗಳನ್ನು ಪಡೆಯಲು ಜಾತಿಯನ್ನು ಕುರಿತು ಭಾರತೀಯರಲ್ಲಿ ಎಂದೂ ಕಲಹವಿರುತ್ತದೆ. ಎಲ್ಲಾ ಧರ್ಮಗಳು ಶಾಂತಿಯನ್ನು ಬೋಧಿಸಿದರೂ ಕೆಲವರು ತಮ್ಮ ಧರ್ಮವೇ ಮಿಗಿಲು ಉಳಿದವು ಕೀಳು ಎಂಬ ಮನೋಭಾವ ಹೊಂದಿದ್ದಾರೆ. ಇದರಿಂದಾಗಿ ಕಣ್ಣಿನಿಂದ ನೋಡಿದ ಆದರೆ ಪರಾಮರ್ಶಿಸದ ಹಲವು ಸರಳ ವಿಷಯಗಳು ಕಲಹಕ್ಕೆ ಕಾರಣವಾಗುತ್ತವೆ.

ವ್ಯವಸ್ಥಿತ ವಿವಾಹದಲ್ಲಿ ಪೂರ್ಣ ನಂಬಿಕೆಯಿಡುವುದು

ವ್ಯವಸ್ಥಿತ ವಿವಾಹದಲ್ಲಿ ಪೂರ್ಣ ನಂಬಿಕೆಯಿಡುವುದು

ಭಾರತೀಯರಲ್ಲಿ ವಿವಾಹವೆಂದರೆ ಇಬ್ಬರು ವ್ಯಕ್ತಿಗಳ ಮಿಲನ ಎಂಬುದುದಕ್ಕಿಂತ ಎರಡು ಕುಟುಂಬಗಳ ಮಿಲನ ಎಂಬ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗಾಗಿ ಒಂದು ವೇಳೆ ಭಿನ್ನ ಬಣಗಳಿಗೆ ಸೇರಿದ ಗಂಡು ಹೆಣ್ಣುಗಳ ನಡುವೆ ಪ್ರೇಮಾಂಕುರವಾದರೆ, ಬಳಿಕ ಪ್ರೇಮವಿಹಾಹವಾಗಬಯಸಿದರೆ ಸಮಾಜ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಗುರುಹಿರಿಯರು ನಿಶ್ಚಯಿಸಿ ವ್ಯವಸ್ಥಿತವಾಗಿ ಮಾಡಿದ ಮದುವೆಗೆ ಹೆಚ್ಚು ಬೆಲೆಯಿದೆ


English summary

12 Dirty Habits Every Indian Has

India is a land filled with a diversity of people. However, there are a handful of people who have disgusting habits which will make you sob to be this nationality. The listed out habits that makes us Indian will no doubt make you feel ashamed! Here are some of the habits that makes us Indian. Take a look!
X
Desktop Bottom Promotion