For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ಮಹಿಳೆಯೂ ತನ್ನ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕಾದ 10 ವಸ್ತುಗಳು

By Arpitha Rao
|

ಯಾವುದಕ್ಕಾದರೂ ಮೊದಲೇ ತಯಾರು ಮಾಡಿಕೊಳ್ಳಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದರೆ ಪರ್ಸ್ ಎಂಬುದು ತುಂಬಾ ಮುಖ್ಯ ಎಂಬುದು ನಿಮಗೆ ತಿಳಿದಿರಲೇ ಬೇಕು.ಇದು ನಿಮಗೆ ಅಗತ್ಯವಾದ ದುಡ್ಡು ಮತ್ತು ಕೀಯನ್ನು ಇಟ್ಟುಕೊಳ್ಳಲು ಅತ್ಯವಶ್ಯಕ.ಕೊನೆ ಕ್ಷಣದಲ್ಲಿ ಮನೆಯನ್ನೆಲ್ಲ ಹುಡುಕಾಡುವ ಬದಲು ಮೊದಲೇ ಎಲ್ಲವನ್ನು ಕೈಗೆ ಸಿಗುವಂತೆ ತಯಾರಿಸಿ ಇಟ್ಟುಕೊಂಡರೆ ಅನುಕೂಲ.

ಆದ್ದರಿಂದ ಮಹಿಳೆಯರು ತಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕಾದ ಹತ್ತು ವಸ್ತುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಸಮಸ್ಯೆ ಬರುವ ಮೊದಲೇ ಅದಕ್ಕೆ ತಯಾರಾಗಿರುವುದು ಉತ್ತಮ.ಈ ಕೆಳಗೆ ನೀಡಿರುವ ಹತ್ತು ವಸ್ತುಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ ಇದರಿಂದ ನೀವು ಸದಾ ಸುರಕ್ಷಿತವಾಗಿರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

ಲಿಪ್‍ಸ್ಟಿಕ್:

ಲಿಪ್‍ಸ್ಟಿಕ್:

ಲಿಪ್‍ಸ್ಟಿಕ್ ಅನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಂಡರೆ ನಿಮಗೆ ಅವಶ್ಯಕವಿದ್ದಾಗ ಲಿಪ್‍ಸ್ಟಿಕ್ ಹಚ್ಚಿಕೊಳ್ಳುವುದರಿಂದ ನೀವು ಸುಂದರವಾಗಿ ಕಾಣಿಸಲು ಸಹಕರಿಸುತ್ತದೆ. ಲಿಪ್‍ಸ್ಟಿಕ್ ಮುಖದ ಕೇಂದ್ರ ಬಿಂದುವಾಗಿ ಕಾಣಿಸುತ್ತದೆ. ಒಂದುವೇಳೆ ನೀವು ಯಾವುದೇ ರೀತಿಯ ಮೇಕಪ್ ಮಾಡಿಕೊಳ್ಳದಿದ್ದರೂ, ಅಥವಾ ಸಮಯ ಸಿಗದಿದ್ದಾಗ, ತಕ್ಷಣಕ್ಕೆ ಬೇಕಾದಾಗ, ಲಿಪ್‍ಸ್ಟಿಕ್ ಹಚ್ಚಿಕೊಳ್ಳುವುದರಿಂದ ನೋಡಲು ಸುಂದರವಾಗಿ, ಗ್ಲಾಮರಸ್ ಆಗಿ ಕಾಣಿಸಲು ಇದು ಸಹಕರಿಸುತ್ತದೆ.

ಹಣ:

ಹಣ:

ಹಣ ತುಂಬಾ ಅವಶ್ಯಕ.ಎಲ್ಲಾ ತಾಯಂದಿರು ತಮ್ಮ ಮಕ್ಕಳು ಹೊರಗೆ ಹೋಗುವಾಗ ಕೈಗೆ ಸ್ವಲ್ಪ ಹಣ ಖರ್ಚಿಗೆಂದು ಕೊಟ್ಟು ಕಳಿಸಿಕೊಡುತ್ತಾರೆ.ಒಂದು ವೇಳೆ ಗೆಳೆಯನ ಜೊತೆಗೆ ಹೋದಾಗ ಮನೆಗೆ ಹಿಂದಿರುಗಲು ಹಣ ಅತಿ ಅವಶ್ಯಕ.ಆದ್ದರಿಂದ ಪರ್ಸ್ ನಲ್ಲಿ ಆಟೋ ಅಥವಾ ಬಸ್ ಗೆ ಆಗುವಷ್ಟು ಹಣವನ್ನು ಇಟ್ಟುಕೊಳ್ಳಿ.

ಪ್ಯಾಡ್ :

ಪ್ಯಾಡ್ :

ಹುಡುಗಿಯರೇ ಇದನ್ನು ಜೊತೆಗಿಟ್ಟುಕೊಳ್ಳಿ. ಪ್ಯಾಡ್‌ನ ಅವಶ್ಯಕತೆ ಕೆಲವೊಮ್ಮೆ ಅಕಾಲಿಕವಾಗಿ ಬಂದುಬಿಡಬಹುದು. ಸ್ತ್ರೀಯರಿಗೆ ಬೇಕಾದ ಈ ಸುರಕ್ಷತೆಯನ್ನು ಜೊತೆಗಿಟ್ಟುಕೊಳ್ಳಲು ಮರೆಯದಿರಿ.

ಬೇಬಿ ವೈಪ್ಸ್ :

ಬೇಬಿ ವೈಪ್ಸ್ :

ನಿಮ್ಮ ಜೊತೆ ಸಣ್ಣ ಮಗು ಇರಬೇಕೆಂದೇನಿಲ್ಲ,ಆದರೆ ಬೇಬಿ ವೈಪ್ಸ್ ಜೊತೆಗಿರಲಿ.ನಿಮಗೆ ಕೆಲವೊಮ್ಮೆ ಒರೆಸಿಕೊಳ್ಳಲು ಇದರ ಅವಶ್ಯಕತೆ ಒದಗಬಹುದು.

ಆಸ್ಪಿರಿನ್ ಅಥವಾ ಟೈಲೆನಾಲ್

ಆಸ್ಪಿರಿನ್ ಅಥವಾ ಟೈಲೆನಾಲ್

ಇಂದಿನ ಬ್ಯುಸಿ ಜೀವನದಲ್ಲಿ ಹೊರಗೆ ಹೊರಟರೆ ಇಡೀ ದಿನ ಬೇಕಾಗುತ್ತದೆ.ಸಾಕಷ್ಟು ಬಾರಿ ತಲೆನೋವು ಬರುವುದು ಸಾಮಾನ್ಯ.ಆದ್ದರಿಂದ ತಲೆನೋವು ಬಂದಾಗ ತೆಗೆದುಕೊಳ್ಳಲು ಆಸ್ಪಿರಿನ್ ಅನ್ನು ಜೊತೆಗೆ ಇಟ್ಟುಕೊಳ್ಳಲು ಮರೆಯಬೇಡಿ.ಜೊತೆಗೆ ನಿಮಗೆ ಅತಿ ಅವಶ್ಯಕ ಎನಿಸುವ ನೋವಿನ ಮಾತ್ರೆಗಳನ್ನು ಇಟ್ಟುಕೊಳ್ಳಿ.

ಪೆನ್ನು :

ಪೆನ್ನು :

ಪೆನ್ನು ಅಥವಾ ಪೆನ್ಸಿಲ್ ಯಾವುದಾದರೂ ಒಂದನ್ನು ಜೊತೆಗಿಟ್ಟುಕೊಳ್ಳುವುದು ಒಂದು ರೀತಿಯ ಸಾಮಾನ್ಯ ತಿಳುವಳಿಕೆ.ಯಾರಾದರು ನಿಮ್ಮ ನಂಬರ್ ಕೇಳಿದಾಗ ಅಥವಾ ಇತರ ಏನಾದರೂ ಅವಶ್ಯಕೆತೆಗೆ ಪೆನ್ ಉಪಯೋಗಿಸುವಾಗ ಪರ್ಸ್ ನಲ್ಲಿ ಹುಡುಕಿ ಕೊನೆಗೆ ಸಿಗದೇ ನಿರಾಶರಾಗುವುದನ್ನು ತಪ್ಪಿಸಲು ಒಂದು ಪೆನ್ ಇಟ್ಟುಕೊಳ್ಳುವುದು ಉತ್ತಮ.

ತುರ್ತು ಸಂಪರ್ಕ ಮಾಹಿತಿ:

ತುರ್ತು ಸಂಪರ್ಕ ಮಾಹಿತಿ:

ಇದು ಕೂಡ ಅತಿ ಅವಶ್ಯಕ.ನಿಮ್ಮನ್ನು ಅನವಶ್ಯಕವಾಗಿ ಉಗ್ರವಾದಿ ಎಂದು ತಿಳಿದುಬಿಟ್ಟರೆ ! ಅಥವಾ ಇತರ ಯಾವುದೋ ಕಾರಣಕ್ಕೆ ನಿಮ್ಮ ಗುರುತನ್ನು ತೋರಿಸಿ ಎಂದು ಕೇಳಿದರೆ? ಅಂತಹ ಸಂದರ್ಭದಲ್ಲಿ ನಿಮ್ಮೊಂದಿಗೆ ನಿಮ್ಮ ಸಂಪರ್ಕ ಮಾಹಿತಿ ಇಟ್ಟುಕೊಂಡರೆ ಅದು ಸಹಾಯಕ್ಕೆ ಬರುತ್ತದೆ.ಅಥವಾ ನೀವು ಅಪಘಾತಕ್ಕೆ ಒಳಗಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿದ್ದ ಪಕ್ಷದಲ್ಲಿ ನಿಮ್ಮವರಿಗೆ ವಿಷಯ ತಿಳಿಸಲು ಕೂಡ ಇದು ಅತಿ ಅವಶ್ಯಕ.

ಪೆಪ್ಪರ್ ಸ್ಪ್ರೇ:

ಪೆಪ್ಪರ್ ಸ್ಪ್ರೇ:

ನಾವು ಈಗ ಇರುವ ಪರಿಸ್ಥಿತಿಯಲ್ಲಿ ಮಹಿಳೆಯರು ಮನೆಯಿಂದ ಹೊರಹೊರಟರೆ ಸಮಸ್ಯೆಗಳು ಯಾವಾಗ ಬರುತ್ತವೆ ಎನ್ನಲು ಸಾಧ್ಯವಿಲ್ಲ. ಆದ್ದರಿಂದ ಸುರಕ್ಷತೆಗಾಗಿ ಪೆಪ್ಪರ್ ಸ್ಪ್ರೇ ಜೊತೆಗೆ ಇಟ್ಟುಕೊಳ್ಳಿ.ಇದೊಂದು ಅಧುನಿಕ ಅಯುಧವಿದ್ದಂತೆ.ಕೆಟ್ಟ ಗಂಡಸರು ಎರಗಲು ಬಂದಾಗ ಇದು ಸಹಾಯಕ್ಕೆ ಬರುತ್ತದೆ.

ಹ್ಯಾಂಡ್ ಸ್ಯಾನಿಟೈಸರ್:

ಹ್ಯಾಂಡ್ ಸ್ಯಾನಿಟೈಸರ್:

ನೀವು ತರಕಾರಿ ತರಲು ಅಥವಾ ಇನ್ನಿತರ ಸಂದರ್ಭದಲ್ಲಿ ಹೊರಗೆ ಹೋದಾಗ ಕೈಯನ್ನು ಆಗಾಗ ಒರೆಸಿಕೊಳ್ಳುವ ಸಂದರ್ಭ ಬರುತ್ತದೆ.ನೀವು ಹಣವನ್ನು ಎಣಿಸುತ್ತೀರಿ ಮತ್ತು ಬೇರೆ ಯಾರದ್ದೋ ಕೈ ಕುಲುಕುತ್ತೀರಿ ಆಗೆಲ್ಲ ಹ್ಯಾಂಡ್ ಸ್ಯಾನಿಟೈಸರ್ ಜೊತೆಗಿದ್ದರೆ ಸ್ವಚ್ಚವಾಗಿಟ್ಟುಕೊಳ್ಳಬಹುದು.ಇದರಿಂದ ಸೂಕ್ಷ್ಮಜೀವಿಗಳು ನಿಮ್ಮನ್ನು ಆಕ್ರಮಿಸುವುದನ್ನು ತಪ್ಪಿಸಿಕೊಳ್ಳಬಹುದು.

ಸೇಫ್ಟಿ ಫಿನ್ :

ಸೇಫ್ಟಿ ಫಿನ್ :

ನಿಮ್ಮ ಬಟ್ಟೆ ಎಲ್ಲೋ ಹೊಲಿಗೆ ಬಿಟ್ಟುಬಿಟ್ಟಿದೆ ಅಥವಾ ಯಾವುದೋ ಗುಂಡಿ ಕಿತ್ತುಕೊಂಡಿದೆ.ತಕ್ಷಣಕ್ಕೆ ಬೇರೆ ಬಟ್ಟೆ ಖರೀದಿಸುವ ಸ್ಥಿತಿಯಲ್ಲೂ ಇಲ್ಲ.ಇನ್ನು ಸ್ವಲ್ಪ ಸಮಯ ಆಫಿಸ್ ನಲ್ಲೇ ಕಳೆಯಬೇಕಿದೆ ಇಂತಹ ಸಂದರ್ಭದಲ್ಲಿ ಒಂದು ಪಿನ್ ಇದ್ದರೆ ಸ್ವಲ್ಪ ಸಮಯ ಸಹಾಯಕ್ಕೆ ಬರುತ್ತದೆ.

English summary

10 Things Every Woman Should Have in Her Purse

If being prepared for anything is your mantra, then you know that your purse is the vehicle by which you live your life – far more than just a place to stash your cash and keys.
Story first published: Wednesday, April 16, 2014, 15:01 [IST]
X
Desktop Bottom Promotion