For Quick Alerts
ALLOW NOTIFICATIONS  
For Daily Alerts

ಈ ಪ್ರಪಂಚಕ್ಕೆ ಕೇವಲ ಸ್ತ್ರೀಯರು ಮಾತ್ರ ಕಲಿಸ ಬಹುದಾದ 10 ಗುಣಗಳು

By Deepak M
|

ಮನುಷ್ಯರನ್ನು ಉದ್ಧರಿಸಲು ಆ ದೇವರು ಭೂಮಿಗೆ ಕಳುಹಿಸಿದ ಕರುಣಾ ದೇವತೆಯೇ ಸ್ತ್ರೀ. " ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಹಾಗಾಗಿ ಆತನು ಸ್ತ್ರೀಯನ್ನು ಸೃಷ್ಟಿಸಿದ " ಎಂದು ಒಂದು ನುಡಿ ಮುತ್ತು ಸಹ ಈಕೆಯನ್ನು ಕೊಂಡಾಡುತ್ತದೆ. ಆದರೂ ಸಹ ಆಕೆಯನ್ನು ಪ್ರಪಂಚ ಇನ್ನೂ ಪೂರ್ತಿಯಾಗಿ ಗುರುತಿಸಿಲ್ಲ.

ಹಾಗೆಂದು ಆಕೆಯ ಬೆಳವಣಿಗೆಯನ್ನು ನಿಲ್ಲಿಸಲು ಸಹ ಯಾರಿಂದಲೂ ಸಾಧ್ಯವಾಗಿಲ್ಲ. ಏಕೆಂದರೆ ಸೃಷ್ಟಿಯಲ್ಲಿ ಆಕೆಗೆ ಆಕೆಯೇ ಸರಿಸಾಟಿ. ಆಕೆ ಮಾತ್ರ ಪ್ರಪಂಚಕ್ಕೆ ಕೆಲವೊಂದು ಅದ್ಭುತ ವಿಚಾರಗಳನ್ನು ಕಲಿಸಬಲ್ಲಳು.

10 Qualities Only Women Can Teach The World

ತ್ಯಾಗ ಮಾಡುವುದು
ಸ್ತ್ರೀಯರು ಯಾವಾಗಲು ವಿಭಿನ್ನವಾದ ನೆಲೆಗಟ್ಟಿನಲ್ಲಿ ಆಲೋಚಿಸುತ್ತಾರೆ ಮತ್ತು ಆ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಾರೆ. ಅವರು ಪ್ರಾಪಂಚಿಕ ವಸ್ತುಗಳಿಗೆ ಅಷ್ಟಾಗಿ ಬೆಲೆಯನ್ನು ನೀಡುವುದಿಲ್ಲ, ಏಕೆಂದರೆ ಅವರ ಹೃದಯದಲ್ಲಿ ತ್ಯಾಗವು ಮನೆ ಮಾಡಿರುತ್ತದೆ. ತಾವು ತೆಗೆದುಕೊಳ್ಳುವುದಕ್ಕಿಂತ ಕೊಡಲು ಹೆಚ್ಚಿನ ಸಂತೋಷವನ್ನು ಅವರು ಅನುಭವಿಸುತ್ತಾರೆ.

ನಿರ್ವಹಣಾ ಕೌಶಲ್ಯಗಳು
ಕಚೇರಿ, ಮನೆ, ಮಕ್ಕಳು, ಗಂಡ, ಪೋಷಕರು, ಸಂಬಂಧಿಕರು, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಸ್ತ್ರೀಯರು ನಿಭಾಯಿಸಿದಷ್ಟು ಸರಳವಾಗಿ ಮತ್ಯಾರು ನಿಭಾಯಿಸಲಾರರು. ಆಕೆಯು ಅತ್ಯಂತ ಕಠಿಣ ಹೊಣೆಗಾರಿಕೆಗಳನ್ನು ಸಹ ಅತ್ಯಂತ ಸುಲಭವಾಗಿ ನಿರ್ವಹಣೆ ಮಾಡಬಲ್ಲರು.

ಪುರುಷರನ್ನು ಆಕರ್ಷವಾಗಿಸುವ ಸಾಂಪ್ರದಾಯಿಕ ಅಂಶಗಳು

ಮನವೊಲಿಸುವ ಕೌಶಲಗಳು
ಇತರರ ಮೇಲೆ ಪ್ರಭಾವ ಬೀರುವ, ಇತರರನ್ನು ನಿಯಂತ್ರಿಸುವ ಮತ್ತು ಅವರ ಮನವೊಲಿಸುವ ಕೌಶಲ್ಯಗಳು ಸ್ತ್ರೀಗೆ ಜನ್ಮಜಾತವಾಗಿ ಬಂದಿರುತ್ತದೆ. ಈ ಎಲ್ಲಾ ಕೌಶಲ್ಯಗಳನ್ನು ಆಕೆಯು ಅತ್ಯಂತ ನಾಜೂಕಾಗಿ ಬಳಸಿಕೊಂಡು ಕೆಲಸಗಳನ್ನು ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾಳೆ.

ಶ್ರಮ ಜೀವಿ
ಇಂದಿನ ಸ್ತ್ರೀಯರಲ್ಲಿ ಕಠಿಣ ಶ್ರಮವನ್ನು ಪಡುವ ಗುಣ ಮತ್ತು ಹೋರಾಡುವ ಮನೋಭಾವವು ಮುಖ್ಯವಾಗಿ ಕಂಡು ಬರುತ್ತದೆ. ಇಂದು ಆಕೆ ಸ್ವಾವಲಂಬಿಯಾಗಿ ಬಾಳುತ್ತಿದ್ದಾಳೆ ಎಂದರೆ ಅದು ಆಕೆಯಲ್ಲಿರುವ ಕಠಿಣ ಶ್ರಮವನ್ನುಪಡುವ ಗುಣವೇ ಆಗಿದೆ. ಈ ಶ್ರಮವನ್ನು ಪಡುವ ಗುಣವನ್ನು ನಾವೆಲ್ಲರು ಆಕೆಯಿಂದಲೆ ಕಲಿಯಬೇಕು.

ವ್ಯವಹಾರ ಚತುರತೆ
ಚೌಕಾಸಿ ಮಾಡಿ ಕೊಳ್ಳುವ ಗುಣ, ಅದು ಅಡುಗೆ ಸಾಮಾನು ಆಗಿರಲಿ, ತರಕಾರಿಯಾಗಿರಲಿ, ಆಟೋರಿಕ್ಷಾ, ಬಟ್ಟೆ ಇತ್ಯಾದಿ ಇತ್ಯಾದಿ ಅದು ಸ್ತ್ರೀಯರಿಗಷ್ಟೇ ಸಾಧ್ಯ. ನಾವು ಅಂಗಡಿಯವನು ಹೇಳಿದ್ದಷ್ಟು ಕೊಟ್ಟು ಹೊರಗೆ ಬರುತ್ತೇವೆ. ಆದರೆ ಹೆಂಗಸರು ಹೇಳಿದ್ದಷ್ಟನ್ನು ಮಾತ್ರ ಕೊಡುತ್ತಾರೆ. ವ್ಯವಹಾರ ಕುಶಲತೆ ಸ್ತ್ರೀಯರ ಹುಟ್ಟು ಗುಣ, ಅವರಿಂದ ಅದನ್ನು ಕಲಿತುಕೊಳ್ಳಿ.

ನಿಷ್ಠೆ
ಈ ಪ್ರಪಂಚದಲ್ಲಿ ಒಬ್ಬರನ್ನು ನೀವು ಪೂರ್ತಿಯಾಗಿ ನಂಬಬಹುದು ಎಂದರೆ ಅದು ಹೆಂಗಸು ಮಾತ್ರವೇ. ಆಕೆ ಮಾತ್ರವೇ ಜೀವನ ಪರ್ಯಂತ ಸಾಗುವ ಸಂಬಂಧವನ್ನು ಹೊಂದಲು ಸರಿಯಾದ ವ್ಯಕ್ತಿ. ನಿಷ್ಠೆಗೆ ಮತ್ತೊಂದು ಹೆಸರು ಸ್ತ್ರೀ ಎಂದೇ ಹೇಳಬಹುದು.

ಸೌಂದರ್ಯ ಪ್ರಜ್ಞೆ
ಫ್ಯಾಶನ್ ಆಗಿರಲಿ, ಒಳಾಂಗಣವಾಗಿರಲಿ, ಬಟ್ಟೆ ಧರಿಸುವುದಿರಲಿ ಅಥವಾ ಮತ್ತು ಯಾವುದೇ ವಿಚಾರವಿರಲಿ. ಸ್ತ್ರೀಯರಿಗೆ ಇರುವ ಸೌಂದರ್ಯ ಪ್ರಜ್ಞೆ ಪ್ರಶಂಸನಾರ್ಹ. ತಮ್ಮಲ್ಲಿರುವ ಸೌಂದರ್ಯ ಮತ್ತು ಸೌಂದರ್ಯ ಪ್ರಜ್ಞೆಯಿಂದಲೇ ಅವರು ಜಗತ್ತಿಗೆ ಮೋಡಿ ಮಾಡುತ್ತಾರೆ.

ತಾಳ್ಮೆ
ಸ್ತ್ರೀಯರಲ್ಲಿ ಇರುವ ತಾಳ್ಮೆ ಮತ್ತು ಶಾಂತತೆಯು ನಿಜಕ್ಕೂ ಗಮನಾರ್ಹವಾದ ವಿಚಾರವಾಗಿದೆ. ಇವರು ಅತ್ಯಂತ ಶೋಚನೀಯ ಮತ್ತು ಗೊಂದಲದ ಸಂದರ್ಭದಲ್ಲಿ ಸಹ ಇವರು ಗಲಿಬಿಲಿಗೊಳ್ಳದೆ ಸ್ಥಿತ ಪ್ರಙ್ಞೆಯಿಂದ ನಡೆದುಕೊಳ್ಳುತ್ತಾರೆ. ಇದೇ ಕಾರಣದಿಂದಾಗಿ ಮೂರನೆ ಮಹಾಯುದ್ಧವಿನ್ನೂ ನಡೆದಿಲ್ಲ ಎಂದು ಹೇಳಬಹುದು.

ಸುಳ್ಳು ಹೇಳುವುದನ್ನು ತ್ಯಜಿಸಲು ಪ್ರೇರೇಪಿಸುವ 7 ಖಚಿತ ಕಾರಣಗಳನ್ನು ಬಲ್ಲಿರಾ ?

ಭಾವನಾತ್ಮಕ ಶಕ್ತಿ
ಸ್ತ್ರೀಯರು ಗಂಡಸರಷ್ಟು ದೈಹಿಕವಾಗಿ ಸಾಮರ್ಥ್ಯವಂತರಲ್ಲದಿರಬಹುದು. ಆದರೆ ಭಾವನೆಗಳ ವಿಚಾರಕ್ಕೆ ಬಂದರೆ ಅವರಷ್ಟು ಗಟ್ಟಿತನ ಗಂಡಸರಿಗೂ ಇರುವುದಿಲ್ಲ. ಭಾವನೆಗಳ ಅಲ್ಲೋಲ ಕಲ್ಲೋಲ ಉಂಟಾದಾಗ ಆಕೆ ಓಡಿ ಹೋಗಿ ಯಾವುದೋ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುವುದಿಲ್ಲ. ಅದಕ್ಕೆ ಬದಲಾಗಿ ಆಕೆ ಅದಕ್ಕೆ ಎದುರಾಗಿ ನಿಲ್ಲುತ್ತಾಳೆ. ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತಹ ಭಾವನೆಗಳನ್ನು ತಡೆದು ನಿಲ್ಲಿಸಿ, ಅದನ್ನು ಹತೋಟಿಗೆ ತರುವ ಸಾಮರ್ಥ್ಯ ಆಕೆಗೆ ಇರುತ್ತದೆ.

ಅನೇಕ ಕೆಲಸ ಮಾಡುವ ಸಾಮರ್ಥ್ಯ
ಹೊರಗೆ ಕೆಲಸ ಮಾಡುವ ಗೃಹಿಣಿಯು ನಿಜಕ್ಕು ಅದ್ಭುತ ಕೆಲಸಗಾರ್ತಿ. ಈಕೆ ಮನೆಯನ್ನು ಮತ್ತು ತನ್ನ ಕೆಲಸವನ್ನು ಸಲೀಸಾಗಿ ನಿರ್ವಹಿಸುತ್ತಾಳೆ. ಯಾವ ಕೆಲಸವನ್ನು ಸಹ ಆಕೆ ಅರ್ಧಕ್ಕೆ ಬಿಡುವುದಿಲ್ಲ. ಹಾಡು ಕೇಳುತ್ತಲೆ ಮನೆ ಕೆಲಸ ಮಾಡುವ ಮತ್ತು ಮಕ್ಕಳ ಕೆಲಸವನ್ನು ಮಾಡಿ ಮುಗಿಸುವ ಶಕ್ತಿ ಆಕೆಗೆ ಇರುತ್ತದೆ.

English summary

10 Qualities Only Women Can Teach The World

The sweet and innocent angel sent by the god to take care of all human being is kind-hearted women. Though, less often recognised, but her superiority disclosed that there is no way to stop her and halt her growth. She is the best and there are some things that this wonderful women can teach to the world.
X
Desktop Bottom Promotion