For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ರಸ್ತೆ ಬದಿಯ ಫುಡ್‌ನ ವೈಶಿಷ್ಟ್ಯ ಗೊತ್ತಿದೆಯೇ?

|

ನಿಮಗೆ ರಸ್ತೆ ಬದಿಯ ಆಹಾರಗಳು ಇಷ್ಟವೆಂದಲ್ಲಿ ನೀವು ಬೆಂಗಳೂರಿಗೆ ಭೇಟಿ ಕೊಡಲೇಬೇಕು. ಭಾರತದ ಒಂದು ಪ್ರಖ್ಯಾತ ರಸ್ತೆ ಬದಿಯ ತಿಂಡಿ ತಿನಿಸನ್ನು ಮಾರುವ ಸ್ಥಳ ಇದಾಗಿದ್ದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವ ತಿನಿಸನ್ನು ಇಲ್ಲಿ ಮಾರಲಾಗುತ್ತದೆ.

ಕಾಲೇಜು ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಎಂದೆನ್ನದೆ ಈ ತಿಂಡಿಗಳನ್ನು ತಿಂದು ತಮ್ಮ ಮನದ ಬಯಕೆಯನ್ನು ತೀರಿಸಿಕೊಳ್ಳುತ್ತಾರೆ. ಇಂದಿನ ಲೇಖನದಲ್ಲಿ ನಾವೂ ಕೂಡ ಹತ್ತು ಹಲವು ವೈವಿಧ್ಯಮಯ ತಿಂಡಿಗಳನ್ನು ನೀಡಿದ್ದು ನೀವೂ ಇದನ್ನು ಬೆಂಗಳೂರಿನ ರಸ್ತೆ ಬದಿಯ ಗಾಡಿಗಳಲ್ಲಿ ಮಾರುವ ಫುಡ್‌ ಅನ್ನು ಟ್ರೈ ಮಾಡಿ.

ಈ 21 ಭಾರತೀಯ ಆಹಾರಗಳ ವೈಶಿಷ್ಟ್ಯ ಗೊತ್ತಿದೆಯೇ?

ಗೋಬಿ ಮಂಚೂರಿಯನ್:

ಗೋಬಿ ಮಂಚೂರಿಯನ್:

ಬಾಯಿಯಲ್ಲಿ ನೀರೂರಿಸುವ ಗೋಬಿ ಮಂಚೂರಿಯನ್ ಅನ್ನು ಹೋಟೆಲ್‪ನಲ್ಲಿ ತಿನ್ನಿವುದಕ್ಕಿಂತ ರಸ್ತೆ ಬದಿಯಲ್ಲಿ ತಿನ್ನುವ ಸಂಖ್ಯೆಯೇ ಜಾಸ್ತಿ. ಗೋಬಿ ಬೆಂಗಳೂರಿನ ರಸ್ತೆ ಬದಿಯಲ್ಲಿ ಪ್ರಖ್ಯಾತವಾಗಿರುವ ತಿಂಡಿ ತಿನಿಸಾಗಿದೆ. ಇದು ಆರೋಗ್ಯಭರಿತ ಮಾತ್ರವಲ್ಲದೆ ನಾಲಗೆಗೆ ಸೂಪರ್ ರುಚಿಯನ್ನು ನೀಡುತ್ತದೆ.

 ಪಾನಿ ಪುರಿ:

ಪಾನಿ ಪುರಿ:

ಗೋಲ್‌ಗಪ್ಪಾ ಎಂದು ಕರೆಯಲಾದ ಈ ರಸ್ತೆ ಬದಿಯ ಆಹಾರ ನಿಮ್ಮ ನಾಲಗೆಗೆ ಖಂಡಿತ ಮುದವನ್ನು ನೀಡುತ್ತದೆ.

ಇಡ್ಲಿ:

ಇಡ್ಲಿ:

ನೀವು ಮನೆಯಲ್ಲಿ ಬ್ರೇಕ್‌ಫಾಸ್ಟ್ ತಪ್ಪಿಸಿದ್ದರೆ ನಿಮಗೆ ಮೃದುವಾದ ಇಡ್ಲಿ ಹಾಗೂ ಕಡಲೆ ಚಟ್ನಿಯನ್ನು ರಸ್ತೆ ಬದಿಯಲ್ಲಿ ಸವಿಯಬಹುದು.

ಮಸಾಲಾ ಪುರಿ:

ಮಸಾಲಾ ಪುರಿ:

ಮಸಾಲಾ ಪುರಿ ಕೂಡ ಒಂದು ಉತ್ತಮ ರಸ್ತೆ ಬದಿಯ ಆಹಾರವಾಗಿದ್ದು ದೊಡ್ಡವರು ಮಕ್ಕಳೆನ್ನದೆ ಪ್ರತಿಯೊಬ್ಬರೂ ಸವಿಯುತ್ತಾರೆ.

ಬೇಲ್ ಪುರಿ:

ಬೇಲ್ ಪುರಿ:

ಮಸಾಲಾ ಪುರಿಯಂತೆ ಬೇಲ್ ಪುರಿ ಕೂಡ ಚಾಟ್ ಐಟಂ ಆಗಿದ್ದು ಸಂಜೆಯ ಸೊಗಸನ್ನು ಹೆಚ್ಚಿಸುತ್ತದೆ.

ಸಮೋಸಾ:

ಸಮೋಸಾ:

ತಂಪು ಮಳೆಗೆ ಬಿಸಿ ಬಿಸಿ ಸಮೋಸಾ ಹಾಗೂ ಟೀ ಕಾಂಬಿನೇಶನ್ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮಾಡುತ್ತದೆ. ಈ ಭಾರತೀಯ ಜನಪ್ರಿಯ ಸ್ನ್ಯಾಕ್ಸ್ ಐಟಂ ನಿಮ್ಮ ತನುಮನದ ಬಯಕೆಯನ್ನು ಈಡೇರಿಸುತ್ತದೆ.

ಜೋಳ:

ಜೋಳ:

ಕೆಂಡದಲ್ಲಿ ಬಿಸಿ ಮಾಡಿ ಉಪ್ಪು ಮೆಣಸಿನ ಹುಡಿ ಸವರಿದ ಮೆಕ್ಕೆ ಜೋಳದ ಘಮಲು ಬೆಂಗಳೂರಿನ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಾಣಬಹುದು. ಬಾಯಲ್ಲಿ ನೀರೂರುವಂತೆ ಮಾಡುವ ಈ ತಿಂಡಿ ನಿಜಕ್ಕೂ ವರ್ಣಿಸಲು ಅಸಾಧ್ಯವಾದುದು.

ಕಡಲೆಕಾಳು:

ಕಡಲೆಕಾಳು:

ಕಡಲೆಕಾಳು ಕೂಡ ಬೆಂಗಳೂರಿನ ಜನರು ಇಷ್ಟಪಡುವ ರಸ್ತೆಬದಿಯ ಆಹಾರವಾಗಿದೆ. ರಸ್ತೆ ಬದಿಯಲ್ಲಿ ಬೇಯಿಸಲಾಗುತ್ತಿರುವ ಕಡಲೆಕಾಳು ಮಕ್ಕಳು, ದೊಡ್ಡವರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ.

ಶುಗರ್ ಕ್ಯಾಂಡಿ:

ಶುಗರ್ ಕ್ಯಾಂಡಿ:

ರಸ್ತೆಬದಿಯ ಆಹಾರದಲ್ಲಿ ಶುಗರ್ ಕ್ಯಾಂಡಿ ಕೂಡ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಬೇರೆ ಬೇರೆ ಆಕಾರ ಮತ್ತು ಬಣ್ಣದಲ್ಲಿ ಲಭ್ಯವಾಗುವ ಇದು ನಿಮ್ಮ ನಾಲಗೆಯ ರುಚಿಯನ್ನು ತಣಿಸುತ್ತದೆ.

ಮೊಮೋಸ್:

ಮೊಮೋಸ್:

ಬೆಂಗಳೂರಿನ ಜನರು ಇಷ್ಟಪಡುವ ಒಂದು ಟೇಸ್ಟೀ ಫುಡ್ ಇದಾಗಿದೆ. ಸ್ಟೀಮ್ ಹಾಗೂ ಫ್ರೈ ಎರಡೂ ರೀತಿಯಲ್ಲಿ ದೊರೆಯುವ ಮೊಮೋಸ್ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಇದು ಕೂಡ ನಿಮ್ಮ ನಾಲಗೆಯ ರುಚಿಯನ್ನು ತಣಿಸುವಂತೆ ಮಾಡುತ್ತದೆ.

English summary

10 Famous Bangalore Street Food Students Can Afford

If you love street food, then you should visit Bangalore. It is one of the famous cities in India after Mumbai to have the best street food which will make your mouth water just at the sight of it.
X
Desktop Bottom Promotion