For Quick Alerts
ALLOW NOTIFICATIONS  
For Daily Alerts

ಬಾನಂಗಳದಲ್ಲಿ ಮಿಂಚುತ್ತಿರುವ ಕರಾವಳಿ ನಕ್ಷತ್ರಗಳು

By Super
|

ಮುಂಬೈಯಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಮಂಗಳೂರು ಮತ್ತು ಕರಾವಳಿಯ ಜನರೇ ಹೆಚ್ಚು. ಅದರಲ್ಲೂ ತುಳು ಮಾತೃಭಾಷೆಯಾಗಿರುವ ಜನರೇ ಹೆಚ್ಚಾಗಿದ್ದಾರೆ. ಮಂಬೈಯಲ್ಲಿಯೇ ಹಲವು ಸಂಘಟನೆಗಳನ್ನು ರಚಿಸಿ ಕನ್ನಡವನ್ನು ಜೀವಂತವಾಗಿಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದೆ. (ಪ್ರಮುಖವಾದ ಪತ್ರಿಕೆ:ಕರ್ನಾಟಕ ಮಲ್ಲ). ಪ್ರಮುಖವಾಗಿ ಹೋಟೆಲ್ ಉದ್ಯಮದಲ್ಲಿ ಕನ್ನಡಿಗರು ಯಶಸ್ಸು ಸಾಧಿಸಿದ್ದರೆ ಉಳಿದ ರಂಗಗಳಲ್ಲಿಯೂ ಪ್ರತಿಭೆಯನ್ನು ಮೆರೆದಿದ್ದಾರೆ.

ಹಾಲಿವುಡ್ ನಂತರದ ಸ್ಥಾನವನ್ನು ಪಡೆದಿರುವ ಹಿಂದಿ ಚಿತ್ರರಂಗ ಬಾಲಿವುಡ್ ನಲ್ಲಿಯೂ ಹಲವು ಕನ್ನಡಿಗರು ತಮ್ಮ ಪ್ರತಿಭೆಯಿಂದ ಖ್ಯಾತರಾಗಿದ್ದಾರೆ. ಇದರಲ್ಲಿ ಹಿರಿಯರೆಂದರೆ ಫೈಟರ್ ಶೆಟ್ಟಿ. 1978ರ ಶಾಲಿಮಾರ್ ಚಿತ್ರದಲ್ಲಿ ಸಾಹಸ ಸನ್ನಿವೇಶಗಳನ್ನು ಸಂಯೋಜಿಸುವ ಮೂಲಕ ಹಾಗೂ ಖಳನಾಯಕನಾಗಿ ಪರದೆಯ ಮೇಲೆ ಬಂದ ಮೇಲೆಯೇ ಇವರ ಹುಟ್ಟೂರು ಮಂಗಳೂರಿನ ಹೆಸರೂ ಹೊರಬಂದಿತ್ತು.

ಇವರಂತೆಯೇ ಇನ್ನೂ ಹಲವು ಖ್ಯಾತ ನಟ ನಟಿಯರು ಮಂಗಳೂರು ಮೂಲದವರಾಗಿದ್ದು ಇಂದು ಬಾಲಿವುಡ್ ನ ಆಗಸದಲ್ಲಿ ಪ್ರಖರ ತಾರೆಗಳಾಗಿ ಮಿಂಚುತ್ತಿದ್ದಾರೆ. ಇದರಲ್ಲಿ ಪ್ರಮುಖವಾದ ಹೆಸರೆಂದರೆ ಐಶ್ವರ್ಯಾ ರೈ ಬಚ್ಚನ್. ಇವರಲ್ಲಿ ಪ್ರಮುಖರಾದ ನಟರನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ರಾಜಕೀಯದಲ್ಲೂ ತಮ್ಮ ಕರಾಮತ್ತು ತೋರಿದ ಸಿನಿತಾರೆಯರು!

ಶಾರುಖ್ ಖಾನ್

ಶಾರುಖ್ ಖಾನ್

2ನೇ ನವೆಂಬರ್ 1965 ರಂದು ಹುಟ್ಟಿದ ಶಾರುಖ್ ತಮ್ಮ ಐದನೆಯ ವಯಸ್ಸಿನವರೆಗೂ ಮಂಗಳೂರಿನಲ್ಲಿ ಬಾಲ್ಯವನ್ನು ಕಳೆದಿದ್ದಾರೆ. ಇಂದು ಅಮಿತಾಭ್ ಬಚ್ಚನ್ ಬಳಿಕ ಅತ್ಯಂತ ಖ್ಯಾತಿ ಪಡೆದ ನಟನಾಗಿರುವ ಇರ್ವರು ಬಾಲಿವುಡ್ ನ ಬಾದಶಾ, ಕಿಂಗ್ ಖಾನ್ ಮತ್ತು ಕಿಂಗ್ ಆಫ್ ರೋಮಾನ್ಸ್ ಎಂಬ ಅಂಕಿತನಾಮಗಳನ್ನೂ ಪಡೆದಿದ್ದಾರೆ. ಇವರ ತಾಯಿ ಮೂಲತಃ ಆಂಧ್ರಪ್ರದೇಶದವರಾಗಿದ್ದರೂ ಕರ್ನಾಟಕದಲ್ಲಿ ಸಾಕಷ್ಟು ಕಾಲ ಕಳೆದಿದ್ದರಿಂದ ಮತ್ತು ಕೇರಳ ತಮಿಳುನಾಡಿನಲ್ಲಿಯೂ ಕೆಲವು ಕಾಲ ವಾಸ್ತವ್ಯ ಹೂಡಿದ್ದರಿಂದ ದಕ್ಷಿಣದ ನಾಲ್ಕೂ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದಾರೆ. ಶಾರುಖ್ ಖಾನ್ ರವರ ಅಜ್ಜ ಕರ್ನಾಟಕ ರಾಜ್ಯದ ಮುಖ್ಯ ಅಭಿಯಂತರರಾಗಿದ್ದು ಮಂಗಳೂರು ಬಂದರಿನಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು. ಅಲ್ಲದೇ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರಥಮ ಪದವೀಧರರೂ ಹೌದು. ಮಂಗಳೂರು ಬಂದರನ್ನು ನಿರ್ಮಿಸುವಲ್ಲಿ ಮತ್ತು ವಿನ್ಯಾಸಗೊಳಿಸುವಲ್ಲಿ ಇವರ ಪ್ರಮುಖ ಪಾತ್ರವಿದೆ.

ಆಶ್ರಿತಾ ಶೆಟ್ಟಿ

ಆಶ್ರಿತಾ ಶೆಟ್ಟಿ

16ನೇ ಜುಲೈ 1992ರಂದು ಮಂಗಳೂರಿನಲ್ಲಿ ಹುಟ್ಟಿದ ಆಶ್ರಿತಾ ಶೆಟ್ಟಿ ಬೆಳೆದದ್ದೆಲ್ಲಾ ಮುಂಬೈಯಲ್ಲಿ. ಇವರ ಮನೆ ಮಾತು ತುಳು. ಡಿಸೆಂಬರ್ 6, 2012 ರಲ್ಲಿ ತೆರೆಕಂಡ, ಸುಧೀರ್ ಕಾಮತ್ ರವರ ' ತೆಲಿಕೆದ ಬೊಳ್ಳಿ' ತುಳು ಚಲನಚಿತ್ರದಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಿಟ್ಟೆ ಸಂತೋಷ್ ಹೆಗಡೆ

ನಿಟ್ಟೆ ಸಂತೋಷ್ ಹೆಗಡೆ

ಜೂನ್16, 1940ರಲ್ಲಿ ಕಾರ್ಕಳದ ಬಳಿಯ ಪುಟ್ಟ ಊರಾದ ನಿಟ್ಟೆಯಲ್ಲಿ ಹುಟ್ಟಿದ ನಿಟ್ಟೆ ಸಂತೋಷ್ ಹೆಗಡೆಯವರು ಕರ್ನಾಟಕ ಸರ್ಕಾರದ ಲೋಕಾಯುಕ್ತ ಅಧಿಕಾರಿಯಾಗಿ ಎಲ್ಲರಿಗೂ ಪರಿಚಿತರು. ಆದರೆ ಇದಕ್ಕೂ ಮೊದಲು ಅವರು ಭಾರತದ ಸರ್ವೋಚ್ಛ ನ್ಯಾಯಾಲಯ (ಸುಪ್ರೀಂ ಕೋರ್ಟ್) ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಕೆಳನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜೆನೀಲಿಯಾ ಡಿಸೋಜಾ

ಜೆನೀಲಿಯಾ ಡಿಸೋಜಾ

ಸತ್ಯ ಇನ್ ಲವ್ ಎಂಬ ಕನ್ನಡ ಚಿತ್ರದಲ್ಲಿಯೂ ನಟಿಸಿರುವ ಬಹುಭಾಷಾ ನಟಿ ಜೆನೀಲಿಯಾ ಡಿಸೋಜಾ ಮೂಲತಃ ಮಂಗಳೂರಿನ ಕ್ರೈಸ್ತರಾಗಿದ್ದಾರೆ. ಖ್ಯಾತ ಸಿನೆಮಾ ನಟ ರಿತೇಶ್ ದೇಶಮುಖ್ ರವರನ್ನು ವರಿಸಿರುವ ಇವರು ವಿವಾಹದ ಬಳಿಕವಊ ಕ್ರೈಸ್ತರಾಗಿಯೇ ಉಳಿದಿದ್ದಾರೆ. ಹಲವು ತೆಲುಗು, ತಮಿಳು ಹಿಂದಿ ಸಿನೆಮಾಗಳಲ್ಲಿ ನಟಿಸಿರುವ ಇವರಿಗೆ ತೆಲುಗು ಚಿತ್ರ ಬೊಮ್ಮರಿಲ್ಲು ತೆಲುಗಿನಲ್ಲಿ ಫಿಲಂಫೇರ್ ಸಹಿತ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಆಗಸ್ಟ್ 5, 1987ರಂದು ಮುಂಬೈಯಲ್ಲಿಯೇ ಹುಟ್ಟಿ ಬೆಳೆದರೂ ಇವರಿಗೆ ಮಾತೃಭೂಮಿಯ ಮೇಲೆ ಅಪಾರ ಅಭಿಮಾನವಿದೆ.

ಫ್ರೀಡಾ ಪಿಂಟೋ

ಫ್ರೀಡಾ ಪಿಂಟೋ

ಆಸ್ಕರ್ ಪ್ರಶಸ್ತಿ ವಿಜೇತ ಸ್ಲಂ ಡಾಗ್ ಮಿಲಿಯನೇರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಫ್ರೀಡಾ ಪಿಂಟೋ ಅಕ್ಟೋಬರ್ 18, 1984ರಂದು ಮುಂಬೈಯಲ್ಲಿಯೇ ಹುಟ್ಟಿ ಬೆಳೆದರೂ ಮಾತೃಭೂಮಿ ಮಂಗಳೂರಿನ ಬಗ್ಗೆ ಅಕ್ಕರೆಯನ್ನು ಬೆಳೆಸಿಕೊಂಡಿದ್ದಾರೆ. ಇವರ ತಂದೆ ತಾಯಿಯರಿಬ್ಬರೂ ಮಂಗಳೂರಿನಿಂದ ಬಂದವರಾಗಿದ್ದಾರೆ.

 ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್

ನವೆಂಬರ್ 1, 1973ರಲ್ಲಿ ಹುಟ್ಟಿದ ಐಶ್ವರ್ಯಾ ರೈ (ವಿವಾಹದ ಬಳಿಕ ಐಶ್ವರ್ಯಾ ಬಚ್ಚನ್) ಸಹಾ ಮುಂಬೈಯಲ್ಲಿಯೇ ಹುಟ್ಟಿ ಬೆಳೆದಿದ್ದರೂ ಆಕೆಯ ತಂದೆತಾಯಿ ಮಂಗಳೂರಿನವರಾಗಿದ್ದಾರೆ. ತಂದೆ ಕೃಷ್ಣರಾಜ ರೈ ಓರ್‍ವ ಮರೈನ್ ಇಂಜಿನಿಯರ್ ಆಗಿದ್ದರೆ ತಾಯಿ ವೃಂದಾ ರೈ ಓರ್ವ ಲೇಖಕಿಯಾಗಿದ್ದಾರೆ. ವಿಶ್ವಸುಂದರಿಯ ಪಟ್ಟದ ಜೊತೆಗೇ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ರವರ ಸೊಸೆಯಾಗುವ ಭಾಗ್ಯವನ್ನು ಪಡೆದ ಇವರಿಗೆ ಅಲ್ಪ ಸ್ವಲ್ಪ ತುಳು ಮಾತನಾಡಲು ಬರುತ್ತದೆ.

ಲಕ್ಷ್ಮೀ ರೈ

ಲಕ್ಷ್ಮೀ ರೈ

5ನೇ ಮೇ 1981ರಲ್ಲಿ ಹುಟ್ಟಿದ ಲಕ್ಷ್ಮೀ ರೈ ಓರ್ವ ಪ್ರತಿಭಾವಂತ ನಟಿಯಾಗಿದ್ದಾರೆ. ಬಂಟ ಸಮುದಾಯಕ್ಕೆ ಸೇರಿದ ಇವರ ತಂದೆ ತಾಯಿಯರು ಮಂಗಳೂರಿನಿಂದ ಬಂದು ಬೆಳಗಾವಿಯಲ್ಲಿ ಸ್ಥಿತರಾಗಿದ್ದಾರೆ.

ರೋಹಿತ್ ಶೆಟ್ಟಿ

ರೋಹಿತ್ ಶೆಟ್ಟಿ

ಖ್ಯಾತ ಖಳನಾಯಕ ಫೈಟರ್ ಶೆಟ್ಟಿ (ನಿಜ ನಾಮಧೇಯ ಎಂ.ಬಿ ಶೆಟ್ಟಿ ಅಥವಾ ಮುದ್ದು ಬಲವಂತ ಶೆಟ್ಟಿ)ಯವರ ಪುತ್ರರಾದ ರೋಹಿತ್ ಶೆಟ್ಟಿ ಬಾಲ್ಯದಿಂದಲೇ ಬಾಲಿವುಡ್ ಜೊತೆಗೇ ಬೆಳೆದವರು. ಸುಮಾರು ಹದಿಮೂರನೆಯ ವಯಸ್ಸಿಯಲ್ಲಿಯೇ ಚಿತ್ರದಲ್ಲಿ ನಟಿಸಲು ಪ್ರಾರಂಭಿಸಿದ ಇವರು ನಿರ್ದೇಶಕರಾಗುವ ಕನಸನ್ನೇ ಕಂಡು ಇಂದು ಓರ್ವ ಖ್ಯಾತ ನಿರ್ದೇಶಕರಾಗಿದ್ದಾರೆ. ಕುಕು ಕೊಹ್ಲಿಯವರ ಫೂಲ್ ಔರ್ ಅಂಗಾರೆ(1991), ಏಕ್ ಔರ್ ಕೊಹಿನೂರ್, ಸುಹಾಗ್ (1994), ಹಖೀಕತ್ (1995) ಮತ್ತು ಜುಲ್ಮಿ (1999) ಮೊದಲಾದ ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಗೋಲ್ ಮಾಲ್ ಸರಣಿ ಚಿತ್ರದಲ್ಲಿ ಇವರ ನಿರ್ದೇಶನದ ಅನುಭವ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ಖತರೋಂ ಕೆ ಖಿಲಾಡಿ ಟೀವಿ ಸರಣಿಯಲ್ಲಿ ಈಗ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುನಿಲ್ ಶೆಟ್ಟಿ

ಸುನಿಲ್ ಶೆಟ್ಟಿ

11 ಆಗಸ್ಟ್ 1961ರಂದು ಹುಟ್ಟಿದ ಸುನಿಲ್ ಶೆಟ್ಟಿ ಬಾಲಿವುಡ್ ನ ಓರ್ವ ಯಶಸ್ವೀ ನಟರಾಗಿದ್ದಾರೆ. ಮೂಲತಃ ಮಂಗಳೂರು ಬಳಿಕ ಮುಲ್ಕಿಯವರಾದ ಇವರು 1992ರ ಬಲವಾನ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದು ಇದುವರೆಗೆ ಹಲವು ಜನಪ್ರಿಯ ಮತ್ತು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

8 ನೇ ಜೂನ್ 1975ರಂದು ಮಂಗಳೂರಿನಲ್ಲಿ ಹುಟ್ಟಿದ ಶಿಲ್ಪಾ ಶೆಟ್ಟಿ ನಾಲ್ಕು ಬಾರಿ ಫಿಲಂಫೇರ್ ಪ್ರಶಸ್ತಿಗಾಗಿ ಶಿಫಾರಸ್ಸು ಪಡೆದ ಪ್ರತಿಭಾವಂತೆ. ಶಾರುಖ್ ಖಾನ್ ರೊಂದಿಗೆ ನಟಿಸಿದ ಬಾಜಿಗರ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಇದುವರೆಗೆ ಹಲವು ಯಶಸ್ವೀ ಚಿತ್ರಗಳನ್ನು ನೀಡಿದ್ದಾರೆ.

ಶಮಿತಾ ಶೆಟ್ಟಿ

ಶಮಿತಾ ಶೆಟ್ಟಿ

2ನೇ ಫೆಬ್ರುವರಿ 1979ರಂದು ಹುಟ್ಟಿದ ಶಮಿತಾ ಶೆಟ್ಟಿಯವರು ಶಿಲ್ಪಾ ಶೆಟ್ಟಿಯವರ ಸಹೋದರಿಯಾಗಿದ್ದು ಅಕ್ಕನ ಹಾದಿಯನ್ನು ಅನುಸರಿಸಿ ನಟಿಯಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸ್ನೇಹಾ ಉಳ್ಳಾಲ್

ಸ್ನೇಹಾ ಉಳ್ಳಾಲ್

18ನೇ ಡಿಸೆಂಬರ್ 1987ರಂದು ಒಮಾನಿನ ಮಸ್ಕತ್ ನಗರದಲ್ಲಿ ಹುಟ್ಟಿದ ಸ್ನೇಹಾ ಉಳ್ಳಾಲ್ ಮೂಲತಃ ಮಂಗಳೂರಿನವರಾಗಿದ್ದಾರೆ. ಖ್ಯಾತ ನಟಿ ಐಶ್ವರ್ಯಾ ರೈಯವರ ಮುಖಚರ್ಯೆಯನ್ನು ಹೋಲುವ ಇವರನ್ನು ಖ್ಯಾತ ನಟ ಸಲ್ಮಾನ್ ಖಾನ್ ರವರು ಲಕ್ಕಿ ಚಿತ್ರದ ಮೂಲಕ ಬಾಲಿವುಡ್ ಗೆ ಪರಿಚಯಿಸಿದ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

courtesy

ಅಮೃತಾ ರಾವ್

ಅಮೃತಾ ರಾವ್

17ನೇ ಜೂನ್ 1981ರಂದು ಹುಟ್ಟಿದ ಅಮೃತಾ ರಾವ್ ಮಂಗಳೂರು ಬಳಿಯ ಚಿತ್ರಾಪುರದವರು. ಚಿತ್ರಾಪುರದ ಖ್ಯಾತ ಸಾರಸ್ವತ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಇವರು ರೂಪದರ್ಶಿ ಹಾಗೂ ನಟಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಕೊಂಕಣಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

1986ರಲ್ಲಿ ಮಂಗಳೂರಿನಲ್ಲಿ ಹುಟ್ಟಿದ ದೀಪಿಕಾ ಪಡುಕೋಣೆ ಭಾರತದ ಖ್ಯಾತ ರೂಪದರ್ಶಿ ಹಾಗೂ ನಟಿಯಾಗಿದ್ದಾರೆ. ಇವರ ತಂದೆ ಪ್ರಕಾಶ್ ಪಡುಕೋಣೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಹಾಗೂ ವಿಶ್ವ ಚಾಂಪಿಯನ್ ಮಂಗಳೂರು ಬಳಿಯ ಪಡುಕೋಣೆ ಎಂಬ ಗ್ರಾಮಕ್ಕೆ ಸೇರಿದವರಾಗಿದ್ದಾರೆ.

ದಯಾ ನಾಯಕ್

ದಯಾ ನಾಯಕ್

ಮೂಲತಃ ಕಾರ್ಕಳದವರಾದ ದಯಾ ನಾಯಕ್ ಮುಂಬೈ ಪೋಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಕಾರ್ಯವೈಖರಿಯಿಂದಾಗಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.

ರವಿ ಶಾಸ್ತ್ರಿ

ರವಿ ಶಾಸ್ತ್ರಿ

27ನೇ ಮೇ1962 ರಂದು ಮುಂಬೈಯಲ್ಲಿ ಹುಟ್ಟಿದ ರವಿಶಾಸ್ತ್ರಿ ಮೂಲತಃ ಮಂಗಳೂರಿನವರು. ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ನಿವೃತ್ತರಾಗಿ ಈಗ ಭಾರತೀಯ ಕ್ರಿಕೆಟ್ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯ್ ಮಲ್ಯ

ವಿಜಯ್ ಮಲ್ಯ

18 ಡಿಸೆಂಬರ್ 1955 ರಂದು ಹುಟ್ಟಿದ ವಿಜಯ್ ಮಲ್ಯ ಉದ್ಯಮಿ ಹಾಗೂ ರಾಜ್ಯ ಸಭಾ ಎಂಪಿ ಯಾಗಿದ್ದು ಮೂಲತಃ ಬಂಟ್ವಾಳದವರಾಗಿದ್ದಾರೆ. ಭಾರತದ ಖ್ಯಾತ ಯುಬಿಗ್ರೂಪ್ ಸಂಸ್ಥ್ತೆ ಇವರ ಒಡೆತನಕ್ಕೆ ಸೇರಿದೆ.

ಗುರುಕಿರಣ್

ಗುರುಕಿರಣ್

ಗುರುಕಿರಣ್ ಎಂದೇ ಕನ್ನಡಿಗರಿಗೆ ಚಿರಪರಿಚಿತರಾದ ಗುರುಕಿರಣ್ ಶೆಟ್ಟಿಯವರು ಖ್ಯಾತ ಸಂಗೀತ ನಿರ್ದೇಶಕರಾಗಿದ್ದು ಮೂಲತಃ ಮಂಗಳೂರಿನವರಾಗಿದ್ದಾರೆ. ಕನ್ನಡ ಚಿತ್ರ 'ಎ' ಹಾಡುಗಳ ಸಂಗೀತ ಮತ್ತು ರಾಗಸಂಯೋಜನೆಯ ಮೂಲಕ ಬೆಳಕಿಗೆ ಬಂದ ಇವರು ಹಲವು ಚಿತ್ರಗಳಿಗೆ ಸಂಗೀತ ನೀಡುತ್ತಾ ಬಂದಿದ್ದಾರೆ.

ರಾಧಿಕಾ

ರಾಧಿಕಾ

೨೦೦೦ದ ದಶಕದ ಪ್ರಾರಂಭದಲ್ಲಿ ಹಲವು ಕನ್ನಡ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ರಾಧಿಕಾ ಮಂಗಳೂರಿನವರಾಗಿದ್ದಾರೆ.

 ಪ್ರಕಾಶ್ ರೈ

ಪ್ರಕಾಶ್ ರೈ

ಬಿಸಿಲುಕುದುರೆ ಮತ್ತು ಗುಡ್ಡದ ಭೂತ ಎಂಬ ಖ್ಯಾತ ದೂರದರ್ಶನ ಧಾರಾವಾಹಿಗಳ ಮೂಲಕ ಬೆಳಕಿಗೆ ಬಂದ ಪ್ರಕಾರ್ ರೈ ಅಥವಾ ಪ್ರಕಾಶ್ ರಾಜ್ ಮೂಲತಃ ಮಂಗಳೂರಿನವರಾಗಿದ್ದಾರೆ. ತುಳು ಮಾತೃಭಾಷೆಯಾಗಿರುವ ಇವರಿಗೆ 1994ರಲ್ಲಿ ಕೆ. ಬಾಲಚಂದರ್ ರವರ ತಮಿಳು ಚಿತ್ರ ಡ್ಯೂಯೆಟ್ ಮೂಲಕ ದೇಶವ್ಯಾಪಿಖ್ಯಾತಿ ದಕ್ಕಿತ್ತು. ಆ ಬಳಿಕ ಹಲವು ಬಾಲಿವುಡ್ ಚಿತ್ರಗಳಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

English summary

Top Famous Film Actors From Mangalore

List of famous movie actors & actresses who were born in Mangalore, listed alphabetically with photos when available. Some of these celebrities weren't necessarily born in Mangalore, as in some cases Mangalore may only be their hometown and not necessarily their birthplace.
X
Desktop Bottom Promotion