For Quick Alerts
ALLOW NOTIFICATIONS  
For Daily Alerts

ಶಕುನ ಹಕ್ಕಿಯ ಹಿಂದೆ ಬಿದ್ದಿರುವ ಬಾಲಿವುಡ್ ಸೂಪರ್ ಸ್ಟಾರ್‌ಗಳು

By Super
|

ವಿಜ್ಞಾನದ ಆವಿಷ್ಕಾರಗಳ ಮೂಲಕ ಎಷ್ಟೋ ಮುಂದುವರೆದಿರುವ ಇಂದಿನ ದಿನಗಳಲ್ಲಿಯೂ ಪೂರ್ವಾಗ್ರಹ ನಂಬಿಕೆಗಳು ಜನರಲ್ಲಿ ಬೇರೂರಿರುವುದನ್ನು ಪ್ರತಿದಿನದ ಚಟುವಟಿಕೆಗಳಲ್ಲಿ ಕಾಣುತ್ತೇವೆ. ಪೂರ್ವಾಗ್ರಹ ಎಂದರೆ ನಾವು ಕೇಳಿ ಆಚರಿಸಿಕೊಂಡು ಬರುತ್ತಿರುವ ಆದರೆ ಪ್ರಮಾಣಿಸದೇ ಈ ನಂಬಿಕೆಗಳ ಮೇಲೆ ಅಪಾರ ಭರವಸೆ ಇಟ್ಟಿರುವ ವಿಷಯಗಳು. ಉದಾಹರಣೆಗೆ ರಸ್ತೆಯಲ್ಲಿ ನಡೆಯುತ್ತಿರುವಾಗ ಬೆಕ್ಕು ಅಡ್ಡ ಹೋದರೆ ನಡೆಯುತ್ತಿರುವವರಲ್ಲಿ ಕೆಲವರಾದರೂ 'ಅಪಶಕುನವಾಯ್ತು, ಇಂದಿನ ಕೆಲಸ ಆದ ಹಾಗೇ' ಎಂದು ನಿರಾಸೆಯ, ನಿರಾಶಾವಾದದ ಮಾತುಗಳನ್ನಾಡುವುದನ್ನು ಗಮನಿಸಬಹುದು. ಬಾನಂಗಳದಲ್ಲಿ ಮಿಂಚುತ್ತಿರುವ ಕರಾವಳಿ ನಕ್ಷತ್ರಗಳು

ಕೆಲವರು ಇದಕ್ಕೆ ಪರಿಹಾರವಾಗಿ ಕೆಲಹೆಜ್ಜೆ ಹಿಂದಿಟ್ಟ ನಂತರ ಮುಂದಡಿಯಿಡುವುದನ್ನೂ ನೋಡಬಹುದು. ಮಂಗಳವಾರ ಹಣ ಮನೆಯಿಂದ ಹೊರಹೋದರೆ ಮತ್ತೆ ಬರುವುದಿಲ್ಲ ಎಂಬ ನಂಬಿಕೆಯಿಂದಲೇ ಇಡಿಯ ಮಾರುಕಟ್ಟೆಯಲ್ಲಿ ಯಾರಿಗೂ ವ್ಯಾಪಾರವಿಲ್ಲ. ಮಂಗಳವಾರ ಯಾರೂ ತಲೆಕ್ಷೌರ ಮಾಡಿಸುವುದಿಲ್ಲ, ಬಟ್ಟೆಯೊಗೆಯುವುದಿಲ್ಲ. ತಲೆದಿಂಬಿನ ಮೇಲೆ ಕುಳಿತುಕೊಳ್ಳುವುದು ಅಪಶಕುನ, ಕುಳಿತಿದ್ದಾಗ ಕಾಲು ಅಲ್ಲಾಡಿಸಿದರೆ ಅಪಶಕುನ ಮೊದಲಾದ ನಂಬಿಕೆಗಳು ಇಂದಿಗೂ ಪ್ರಚಲಿತವಾಗಿದೆ.

ಜನಸಾಮಾನ್ಯರಿಂದ ಹಿಡಿದು ಇಸ್ರೋದ ನಿರ್ದೇಶಕರವರೆಗೂ ಈ ಶಕುನಗಳನ್ನು ನಂಬುವವರಿದ್ದಾರೆ. 2014ರ ಫೆಬ್ರವರಿಯಲ್ಲಿ ಭಾರತದ ಉಪಗ್ರಹವೊಂದು ಉಡಾವಣೆಯಾಗುವ ಸಮಯದಲ್ಲಿ ನಿರ್ದೇಶಕರೇ ಉಡಾವಣೆ ಸುಗಮವಾಗಲಿ ಎಂದು ಪೂಜೆ ಮಾಡಿಸಿದ್ದನ್ನು ಇಡಿಯ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಂತೆಯೇ ಚಿತ್ರನಟರನ್ನು ಪೂಜಿಸುವ ಭಾರತೀಯರಿರುವಾಗ ಈ ಶಕುನಗಳಿಗೆ ಚಿತ್ರನಟರೂ ಏಕೆ ನಂಬಬಾರದು? ಹೌದು, ಬಹುತೇಕ ಖ್ಯಾತ ನಟರೂ ಒಂದಲ್ಲ ಒಂದು ಶಕುನವನ್ನು ನಂಬಿದವರೇ ಆಗಿದ್ದಾರೆ. ಮುಪ್ಪನ್ನೂ ಮರೆಸಿ ಹದಿಹರೆಯದವರಂತೆ ಕಾಣುವ ಸಿನಿತಾರೆಯರು

ಭಾರತದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲೂ ಇದನ್ನು ಗಮನಿಸಬಹುದು. ಜರ್ದಾರಿಯವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದಷ್ಟೂ ದಿನ ಕುರ್ಚಿಯನ್ನು ಉಳಿಸಿಕೊಳ್ಳಲು ದಿನಕ್ಕೊಂದು ಕುರಿಯನ್ನು ಬಲಿ ಕೊಡಲಾಗುತ್ತಿತ್ತಂತೆ. ನಮ್ಮ ನಟರೂ ಹಲವು ನಂಬಿಕೆಗಳನ್ನು ಆಚರಿಸುತ್ತಾ ಬಂದಿದ್ದಾರೆ. ವಿಶಿಷ್ಟವಾದ ಸಂಖ್ಯಾಸರಣಿಯನ್ನು ಪಾಲಿಸುವುದು, ಒಂದು ಬಗೆಯ ಕಲ್ಲಿನ ಆಭರಣಗಳನ್ನು ಧರಿಸುವುದು, ತಮ್ಮ ಚಿತ್ರಗಳನ್ನು ನಿರ್ದಿಷ್ಟ ದಿನಾಂಕದಂದೇ ಬಿಡುಗಡೆ ಮಾಡುವುದು ಮೊದಲಾದವು. ಇಂತಹ ಹಲವು ಕುತೂಹಲಕರ ಮಾಹಿತಿಯನ್ನು ಈಗ ನೋಡೋಣ

ಶಾರುಖ್ ಖಾನ್

ಶಾರುಖ್ ಖಾನ್

ಬಾಲಿವುಡ್‍ನ ಬಾದಶಾ ಎಂದೇ ಕರೆಯಲ್ಪಡುವ ನಂ 1 ನಟ ಒಂದು ಸಂಖ್ಯಾ ಸರಣಿಗೆ ಮರುಳಾಗಿದ್ದಾರೆ. ಅದೇ 555 ಸಂಖ್ಯೆ. ಇದು ತಮಗೆ ಅದೃಷ್ಟ ತಂದ ಸಂಖ್ಯೆ ಎಂದು ಬಲವಾಗಿ ನಂಬಿರುವ ಅವರು ತಮ್ಮ ಎಲ್ಲಾ ಕಾರುಗಳಿಗೆ ಎಷ್ಟೇ ದುಬಾರಿಯಾದರೂ 555 ಸಂಖ್ಯೆಯ ನೋಂದಣಿಯನ್ನೇ ಮಾಡಿಸುತ್ತಾರೆ. ಇದನ್ನು ಅವರ ಚಿತ್ರಗಳಲ್ಲಿಯೂ ಗಮನಿಸಬಹುದು.ಇತ್ತೀಚಿನ ಚೆನ್ನೈ ಎಕ್ಸ್ ಪ್ರೆಸ್ ನೋಡಿದ್ದೀರಾ? ಅದರ ಪೋಸ್ಟರ್ ಗಮನಿಸಿದರೆ ಅವರು ಚಲಾಯಿಸುತ್ತಿರುವ ಬೈಕಿನ ನಂಬರ್ ಪ್ಲೇಟ್ ಗಮನಿಸಿ. 555 ಕಂಡು ಬಂತೇ?

ಅಮಿರ್ ಖಾನ್

ಅಮಿರ್ ಖಾನ್

ಎತ್ತಣ ಮಾಮರ, ಎತ್ತಣ ಕೋಗಿಲೆ? ಚಿತ್ರ ಬಿಡುಗಡೆಗೂ, ಕ್ರಿಸ್ಮಸ್ಸಿಗೂ ಏನು ಸಂಬಂಧ? ಆದರೆ ಕ್ರಿಸ್ಮಸ್ ದಿನವನ್ನು ಅಮಿರ್ ಖಾನ್ ತಮ್ಮ ಯಶಸ್ಸಿನ ದಿನವೆಂದು ಬಲವಾಗಿ ನಂಬಿದ್ದಾರೆ. ಅವರ ಅತ್ಯಂತ ಯಶಸ್ವಿ ಚಿತ್ರಗಳಾದ ಘಜನಿ, 3 ಈಡಿಯಟ್ಸ್, ತಾರೆ ಜಮೀನ್ ಪರ್ ಮತ್ತು ಧೂಂ 3 ಚಿತ್ರಗಳು ಡಿಸೆಂಬರ್ 25ರಂದೇ ಬಿಡುಗಡೆಗೊಂಡಿವೆ.

ರಣಬೀರ್ ಕಪೂರ್

ರಣಬೀರ್ ಕಪೂರ್

ಎಪ್ಪತ್ತರ ದಶಕದ ಖ್ಯಾತ ತಾರೆಗಳಾದ ರಿಶಿಕಪೂರ್ ಮತ್ತು ನೀತು ಸಿಂಗ್ ರವರ ಪುತ್ರ ರಣಬೀರ್ ಕಪೂರ್ ಎಂಟರ ಸಂಖ್ಯೆಗೆ ಅತಿಹೆಚ್ಚು ಮಹತ್ವ ನೀಡುತ್ತಾರೆ. ಇದನ್ನು ಅವರ ಕಾರುಗಳ ನೋಂದಣೆ ಸಂಖ್ಯೆಯಲ್ಲಿ ಗಮನಿಸಬಹುದು. ಏಕೆಂದು ತಲೆಕೆಡಿಸಿಕೊಂಡವರು ಅವರ ತಾಯಿಯ ಜನ್ಮದಿನ ಜುಲೈ ಎಂಟು ಆಗಿರುವುದು ಒಂದು ಸಂಭಾವ್ಯ ಸಾಧ್ಯತೆಯಾಗಿ ಕಾಣಬಹುದು. ಅವರ ಎಲ್ಲಾ ಕಾರುಗಳ ನೋಂದಣಿ ಸಂಖ್ಯೆ 8 ಅಥವಾ 8000 ವೇ ಆಗಿರುತ್ತದೆ. ಅಲ್ಲದೇ ಎರಡು ಎಂಟು ಅಂಕೆಗಳನ್ನು ಅಡ್ಡಲಾಗಿ ಮಲಗಿಸಿರುವಂತಿರುವ ಲಾಂಛನ ಹೊಂದಿರುವ ಆಡಿ ಕಾರುಗಳೇ ಅವರಿಗೆ ಅತ್ಯಂತ ಪ್ರಿಯವಾಗಿವೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

ಮಂಗಳೂರು ಮೂಲದವರಾದ ಶಿಲ್ಪಾ ಶೆಟ್ಟಿಯವರು ತಮ್ಮ ಪ್ರಾಯೋಜಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಆಡುವಾಗ ತಮ್ಮ ಮಣಿಕಟ್ಟಿನಲ್ಲಿ ಎರಡು ಕೈಗಡಿಯಾರಗಳನ್ನು ಧರಿಸಿರುವುದನ್ನು ಗಮನಿಸಬಹುದು.ಅಲ್ಲದೇ ಈ ತಂಡದ ವಿರುದ್ದ ತಂಡ ಬ್ಯಾಟಿಂಗ್ ಆಡುತ್ತಿರುವಾಗ ಕುಳಿತ ಸಮಯದಲ್ಲಿ ಒಂದು ಕಾಲಿನ ಮೇಲೆ ಇನ್ನೊಂದನ್ನು ಇಟ್ಟು ಕುಳಿತಿರುವುದನ್ನೂ ಗಮನಿಸಬಹುದು. ಅದೇ ತಮ್ಮ ತಂಡ ಆಡುವಾಗ ನೇರವಾಗಿ ಕುಳಿತಿರುತ್ತಾರೆ. ಇದೇಕೆ ಹೀಗೆ ಎಂದು ಇದುವರೆಗೆ ಅವರನ್ನು ಕೇಳುವ ಧೈರ್ಯ ಯಾರಿಗೂ ಬಂದಿಲ್ಲ.

ಹೃತಿಕ್ ರೋಷನ್

ಹೃತಿಕ್ ರೋಷನ್

ಹೃತಿಕ್ ರೋಷನ್ ರವರ ಬಲಗೈಯ ಹೆಬ್ಬೆರಳು ತುದಿಯಲ್ಲಿ ಸೀಳಿ ಎರಡಾದಂತಿದೆ. ಇದು ಶಸ್ತ್ರಕ್ರಿಯೆಯ ಮೂಲಕ ಸರಿಪಡಿಸಬಹುದಾದ ನ್ಯೂನ್ಯತೆಯಾಗಿದ್ದರೂ ಅವರು ಈ ಬೆರಳು ತಮಗೆ ಅದೃಷ್ಟ ತಂದ ಬೆರಳು ಎಂದು ಭಾವಿಸಿದ್ದಾರೆ. ಇದೇ ಕಾರಣದಿಂದ ಇದನ್ನು ತೆಗೆಸಲು ಅವರು ಸುತಾರಾಂ ಒಪ್ಪುವುದಿಲ್ಲ.

ವಿದ್ಯಾ ಬಾಲನ್

ವಿದ್ಯಾ ಬಾಲನ್

ತಮ್ಮ ಮೇಕಪ್ ವಿಷಯ ಬಂದರೆ ಪ್ರತಿ ತಾರೆಯೂ ತಮ್ಮದೇ ವಿಶೇಷ ಬ್ರಾಂಡ್ ನ ಪ್ರಸಾದನಗಳನ್ನು ತಮ್ಮ ಆಪ್ತರಿಂದಲೇ ಹಚ್ಚಿಸಿಕೊಳ್ಳುತ್ತಾರೆ. ನಟಿ ವಿದ್ಯಾ ಬಾಲನ್ ತಮ್ಮ ಕಣ್ಣುಗಳಿಗೆ ಹಚ್ಚಿಕೊಳ್ಳುವ ಕಾಡಿಗೆ ಪಾಕಿಸ್ತಾನದಲ್ಲಿ ತಯಾರಾದ ಹಾಶ್ಮಿ ಎಂಬ ಸಂಸ್ಥೆಯದ್ದಾಗಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಕಾಡಿಗೆಯನ್ನು ಅವರು ಉಪಯೋಗಿಸುವುದೇ ಇಲ್ಲ. ಈ ಕಣ್ಪಪ್ಪು ತಮಗೆ ಅದೃಷ್ಟಶಾಲಿ ಎಂದು ಅವರು ನಂಬಿದ್ದಾರೆ.

ರಾಕೇಶ್ ರೋಷನ್

ರಾಕೇಶ್ ರೋಷನ್

ಎಪ್ಪತ್ತರ ದಶಕದ ಖ್ಯಾತ ನಾಯಕನಟ ಮತ್ತು ಇಂದಿನ ನಿರ್ಮಾಪಕ ರಾಕೇಶ್ ರೋಶನ್ ಆಂಗ್ಲ ಅಕ್ಷರ ಕೆ (k) ಗೆ ಮರುಳಾಗಿದ್ದಾರೆ. ಅವರ ಪ್ರಥಮ ಚಿತ್ರ ಕಾಮ್ ಚೋರ್ ನ ಹೆಸರು ಕೆ ನಿಂದ ಪ್ರಾರಂಭವಾಗಿದ್ದು ಇದೇ ಪ್ರಕ್ರಿಯೆಯನ್ನು ಅವರು ತಮ್ಮ ಎಲ್ಲಾ ಚಿತ್ರಗಳಿಗೆ ಅಳವಡಿಸುತ್ತಾ ಬಂದಿದ್ದಾರೆ. ಅವರ ನಿರ್ದೇಶನದ ಪ್ರಥಮ ಚಿತ್ರ ಖುದ್ ಗರ್ಜ್ ಬಳಿಕ ಇದೇ ಪ್ರಕ್ರಿಯೆ ಕೋಯ್ಲಾ, ಕರಣ್ ಅರ್ಜುನ್ ಮತ್ತು ಕ್ರಿಶ್ 3 ನಂತಹ ಚಿತ್ರಗಳಲ್ಲೂ ಗಮನಿಸಬಹುದು.

ಕತ್ರಿನಾ ಕೈಫ್

ಕತ್ರಿನಾ ಕೈಫ್

ಸರಿಯಾಗಿ ಹಿಂದಿ ಮಾತನಾಡಲೂ ಬರದ ಲಂಡನ್ನಿನ ಬೆಡಗಿ ಹಿಂದಿ ಚಿತ್ರರಂಗದಲ್ಲಿ ಇಷ್ಟು ಗಟ್ಟಿಯಾಗಿ ನೆಲೆಯೂರಲು ಅವರ ಸೌಂದರ್ಯವೊಂದೇ ಕಾರಣವಲ್ಲ. ಬದಲಾಗಿ ತಮ್ಮ ಚಿತ್ರ ಯಶಸ್ವಿಯಾಗಲಿ ಎಂದು ಎಂದು ಅವರು ಪ್ರತಿ ಚಿತ್ರದ ಬಿಡುಗಡೆಗೂ ಮೊದಲು ರಾಜಸ್ಥಾನದ ಅಜ್ಮೀರಿನ ಸೂಫಿ ಸಂತ ಖಾಜ ಮೊಯಿನುದ್ದೀನ್ ಚಿಸ್ತಿಯವರ ದರ್ಗಾಕ್ಕೆ ಭೇಟಿ ಪ್ರಾರ್ಥಿಸುವುದೇ ಆಗಿದೆ ಎಂದು ಅವರು ನಂಬಿದ್ದಾರೆ.

ಪ್ರೀತಿ ಜಿಂಟಾ

ಪ್ರೀತಿ ಜಿಂಟಾ

ಇತ್ತೀಚೆಗೆ ಚಿತ್ರಗಳಿಗಿಂತ ಹೆಚ್ಚಾಗಿ ಕ್ರಿಕೆಟ್ಟನ್ನೇ ನೆಚ್ಚಿಕೊಂಡಿರುವ ಪ್ರೀತಿ ಜಿಂಟಾ ತಮ್ಮ ತಂಡ ಆಟವಾಡಲು ಹೋಗುವ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಪ್ರಸಾದವನ್ನು ತಮ್ಮ ತಂಡದ ಎಲ್ಲಾ ಆಟಗಾರರಿಗೆ ಹಂಚುತ್ತಾರೆ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ನಟಿಸಿದ ಯಾವುದೇ ಚಿತ್ರ ಬಿಡುಗಡೆಯಾದರೂ ಆ ದಿನ ಅಕ್ಷಯ್ ಕುಮಾರ್ ನಗರದಲ್ಲಿ ಬಿಡಿ ದೇಶದಲ್ಲಿಯೇ ಇರುವುದಿಲ್ಲ. ಏಕೆಂದರೆ ಅವರು ನಂಬಿರುವ ಪೂರ್ವಾಗ್ರಹದ ಪ್ರಕಾರ ಒಂದು ವೇಳೆ ಅವರು ಆ ದಿನ ಭಾರತದಲ್ಲಿದ್ದರೆ ಆ ಚಿತ್ರ ನಡೆಯುವುದಿಲ್ಲ. ಅದಕ್ಕೇ ಚಿತ್ರದ ಬಿಡುಗಡೆಗೂ ಒಂದೆರಡು ದಿನ ಹಿಂದೆಯೇ ಅವರು ಭಾರತದಿಂದ ಕೆಲದಿನಗಳ ಮಟ್ಟಿಗೆ ವಿದೇಶಗಳಿಗೆ ಕಡ್ಡಾಯವಾಗಿ ತೆರಳುತ್ತಾರೆ.

ಸೈಫ್ ಮತ್ತು ಕರೀನಾ

ಸೈಫ್ ಮತ್ತು ಕರೀನಾ

ತಾರಾ ದಂಪತಿಗಳಾದ ಇಬ್ಬರೂ ತಮ್ಮ ಕಾರುಗಳಿಗೆ ವಿಶಿಷ್ಟ ಅಂಕೆಗಳನ್ನೇ ಅಳವಡಿಸಿದ್ದಾರೆ. ಕರೀನಾ ತಮ್ಮೆಲ್ಲಾ ಕಾರುಗಳ ನೋಂದಣಿ ಸಂಖ್ಯೆ 3 ರ ಆಯ್ಕೆಯಲ್ಲಿಟ್ಟಿದ್ದರೆ ಸೈಫ್ 7 ಅಂಕೆಯನ್ನು ಆಯ್ದುಕೊಂಡಿದ್ದಾರೆ. ಏಕೆಂದು ತಲೆಬಿಸಿಮಾಡಿಕೊಳ್ಳುವವರಿಗೆ ಕೆಲವು ಉಚಿತ ಸಲಹೆಗಳು. ಸೈಫ್ ರ ಜನ್ಮದಿನ 16 ಆಗಿದ್ದು ಒಂದು ಮತ್ತು ಆರು ಕೂಡಿದರೆ ಏಳು ಆಗುವುದು ಒಂದು ಕಾರಣ.

ಏಕ್ತಾ ಕಪೂರ್

ಏಕ್ತಾ ಕಪೂರ್

ಜಿತೇಂದ್ರ ರವರ ಪುತ್ರಿಯಾಗಿದ್ದೂ ದೊಡ್ಡಪರದೆಯನ್ನು ಬಿಟ್ಟು ಟೀವಿ ಧಾರಾವಾಹಿಗಳ ಮೂಲಕ ಭಾರತದ ಮನೆಮನೆಯ ಮಹಿಳೆಯರ ಸಮಯವನ್ನು ತಮ್ಮೆಡೆಗೆ ಸೆಳೆದುಕೊಂಡ ಏಕ್ತಾ ತಮ್ಮ k ಅಕ್ಷರದ ಗೀಳಿಗಾಗಿ ಕೇಕ್ತಾ ಕಪೂರ್ ಎಂಬ ಅನ್ವರ್ಥನಾಮವನ್ನೂ ಪಡೆದಿದ್ದಾರೆ. ತಮ್ಮ ಎಲ್ಲಾ ಧಾರಾವಾಹಿಗಳ ಹೆಸರು k ಅಕ್ಷರದಿಂದಲೇ ಪ್ರಾರಂಭಿಸುವ ಅವರಿಗೆ ಇದನ್ನು ಬಿಟ್ಟು ಇನ್ನೂ ಹಲವಾರು ಪೂರ್ವಾಗ್ರಹ ನಂಬಿಕೆಗಳಿವೆ. ತಮ್ಮ ಹೊಸ ಧಾರಾವಾಹಿಯನ್ನು ಎಂದೂ ಅವರು ಮಂಗಳವಾರದಂದೇ ಪ್ರಾರಂಭಿಸುವುದು ಇವುಗಳಲ್ಲೊಂದು. ಚಿತ್ರವೊಂದರ ಪ್ರಚಾರಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದ ನಗರ ಕೊಲ್ಕಾತಾ. (ಕೊಲ್ಕಾತಾವೇ ಏಕೆ ಈಗ ಗೊತ್ತಾಯಿತಲ್ಲ!) ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು 'I'm superstitious, but not stupid' (ಮೂಢನಂಬಿಕೆಯನ್ನು ನಾನು ನಂಬುತ್ತೇನೆ, ಆದರೆ ಮೂಢಳಲ್ಲ) ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಶರ್ಟ್ ಬಿಚ್ಚುವ, ಚಿತ್ರ ವಿಚಿತ್ರ ನಟನಾ ಶೈಲಿಯ, ಭಿನ್ನ ರೀತಿಯ ಚಿತ್ರಕಥೆ ಮತ್ತು ಸಾಹಸ ದೃಶ್ಯಗಳಿಂದ ಜನಮನವನ್ನು ಗೆದ್ದಿರುವ ಸಲ್ಮಾನ್ ಖಾನ್ ಯಾವುದೇ ಚಿತ್ರದಲ್ಲಿ ಯಾವುದೇ ಪೋಷಾಕು ಧರಿಸಿರಲಿ, ಅವರ ಬಲಗೈಯ ಮಣಿಕಟ್ಟನ್ನು ಕೊಂಚ ಗಮನಿಸಿ. ಪ್ರಖರ ನೀಲಿ ಬಣ್ಣದ ಕಲ್ಲೊಂದನ್ನು ಹೊಂದಿರುವ ಕೈಕಡಗ (bracelet) ಕಾಣಿಸಿತೇ? ಇದೇ ಅವರ ಅದೃಷ್ಟದ ಸಂಕೇತ. ಅವರ ತಂದೆ ಸಲೀಂ ಖಾನ್ ಸಹಾ ಇಂತಹದ್ದೇ ಒಂದು ಕೈ ಕಡಗವನ್ನು ಧರಿಸುತ್ತಿದ್ದರು. ಇದನ್ನೇ ಯಥಾವತ್ತಾಗಿ ಅನುಸರಿಸಿದ ಸಲ್ಮಾನ್ ಎಂದಿಗೂ ಈ ಕಡಗವನ್ನು ಬಿಟ್ಟಿರುವುದೇ ಇಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ತೆಗೆದಿಡಬೇಕಾದರೂ ಬಳಿಕ ತಕ್ಷಣವೇ ಇದನ್ನು ಮತ್ತೆ ಧರಿಸುವುದನ್ನು ಅವರ ಸಿಬ್ಬಂದಿ ಗಮನಿಸಿದ್ದಾರೆ.

ಬಿಪಾಷಾ ಬಸು

ಬಿಪಾಷಾ ಬಸು

ದುಷ್ಟಶಕ್ತಿಗಳನ್ನು ಹೊಡೆದೋಡಿಸಲು ಲಿಂಬೆ ಮತ್ತು ಹಸಿಮೆಣಸಿನ ಹಾರವನ್ನು ಕಾರುಗಳಿಗೆ, ಮನೆ ಬಾಗಿಲಿಗೆ, ಹೊಸ ಕಟ್ಟಡಗಳಿಗೆ ಕಟ್ಟುವುದನ್ನು ದೇಶದ ಪ್ರತಿ ಊರಿನಲ್ಲೂ ಕಾಣುತ್ತೇವೆ. ಖ್ಯಾತ ನಟಿ ಬಿಪಾಷಾ ಬಸುರವರೂ ಇದಕ್ಕೆ ಹೊರತಾಗಿಲ್ಲ. ಪ್ರತಿ ಶನಿವಾರ ಅವರು ತಮ್ಮ ಕಾರಿಗೆ ಲಿಂಬೆ ಮತ್ತು ಮೆಣಸಿನ ಒಂದು ಹಾರವನ್ನು ಖರೀದಿಸಿ ತಗಲಿ ಹಾಕುತ್ತಾರೆ. ಇದು ತಮ್ಮ ತಾಯಿ ತಮಗೆ ಕಲಿಸಿದ್ದು ಇದರಿಂದ ತಮಗೆ ಯಾವುದೇ ಆಪತ್ತು ಬರದು ಎಂದು ಅವರು ಬಲವಾಗಿ ನಂಬಿದ್ದಾರೆ.

ಅಭಿಷೇಕ್ ಬಚ್ಚನ್

ಅಭಿಷೇಕ್ ಬಚ್ಚನ್

ಅಮಿತಾಭ್ ಬಚ್ಚನ್‌ರ ಪುತ್ರ ಅಭಿಷೇಕ್ ಚಿತ್ರನಟರಾಗಿದ್ದರೂ ಕ್ರಿಕೆಟಿನ ಕಟ್ಟಾ ಅಭಿಮಾನಿಯಾಗಿದ್ದಾರೆ. ಸುಖದ ಸುಪ್ಪತ್ತಿಗೆಯಲ್ಲಿಯೇ ಹುಟ್ಟಿ ಬೆಳೆದ ಅಭಿಷೇಕ್ ಭಾರತದ ತಂಡ ಆಡುತ್ತಿರುವಾಗ ಟೀವ್ ನೋಡಲು ಕುಳಿತುಕೊಳ್ಳುವುದು ಎಂದಿಗೂ ಯಾವುದೋ ಮುರುಕು ಖುರ್ಚಿಯನ್ನು. ಏಕೆಂದು ಕೇಳಿದರೆ ಈ ಮುರುಕು ಕುರ್ಚಿಯಲ್ಲಿ ಕುಳಿತು ನೋಡಿದರೆ ಮಾತ್ರ ಭಾರತ ಗೆಲ್ಲುತ್ತದೆ. ಅಂದರೆ ಮೊನ್ನೆ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅವರ ಮುರುಕು ಕುರ್ಚಿಯನ್ನು ಯಾರೋ ಅಲ್ಲಿಂದ ಮಾಯ ಮಾಡಿದ್ದಿರಬಹುದು!

English summary

The spiritual side of Bollywood stars

Think about the small-small things that bother us even today. For instance, stopping on the spot seeing a cat crossing our way and waiting for someone else to pass first; not washing/cutting hair on Tuesdays and Thursdays; Let us know some of our favourite stars who are superstitious in this slide show….
X
Desktop Bottom Promotion